Saturday, February 26, 2011

ತುಂಗಭದ್ರಾ ನದಿಯಲ್ಲಿ ಮುಳುಗಿದ್ದ ಚಿದಾನಂದ ಮೂರ್ತಿಯವರನ್ನು ಕಾಪಾಡಿದ್ದು ಯಾರು?


ಡಾ. ಎಂ.ಚಿದಾನಂದಮೂರ್ತಿಯವರಿಗೆ ಈ ಹಿಂದೆ ಸಂಪಾದಕೀಯವು ಬರೆದ ಪತ್ರದಲ್ಲಿ ವ್ಯಂಗ್ಯವೇ ಢಾಳಾಗಿ ಎದ್ದು ಕಾಣುತ್ತಿತ್ತು ಎನ್ನುವುದು ಹಲವರ ಆಕ್ಷೇಪ. ಅದು ಹಾಗಲ್ಲ, ಅವರ ಕುರಿತು ಅಪಾರ ಗೌರವ ಇಟ್ಟುಕೊಂಡೇ ಅವರ ನಿಲುವನ್ನು ಟೀಕಿಸಿದ್ದೆವು; ಇಂಗ್ಲಿಷ್‌ನಲ್ಲಿ ವಿತ್ ಆಲ್ ರೆಸ್ಟೆಕ್ಟ್ ಅನ್ನುತ್ತಾರಲ್ಲ ಹಾಗೆ.

ಚಿದಾನಂದಮೂರ್ತಿಯವರು ಇತಿಹಾಸ ಸಂಶೋಧಕರು, ಅದಕ್ಕೂ ಮಿಗಿಲಾಗಿ ಕನ್ನಡ ಶಕ್ತಿ ಕೇಂದ್ರದ ಮೂಲಕ ಕನ್ನಡ ಚಳವಳಿಯನ್ನು ಕಟ್ಟಿದವರು. ಆದರೆ ಬರಬರುತ್ತ ಅವರ ಆಸಕ್ತಿ ಮತ್ತು ಕಾಳಜಿಗಳು ಕವಲೊಡೆಯುತ್ತ ಬಂದವು. ಹಾರ್ಡ್‌ಕೋರ್ ಆರ್‌ಎಸ್‌ಎಸ್‌ಗಳಂತೆ ಮಾತನಾಡಲು ಶುರು ಮಾಡಿದರು. ಮುಸ್ಲಿಮರು, ಕ್ರಿಶ್ಚಿಯನ್ನರ ವಿರುದ್ಧ ವಿಷ ಕಾರತೊಡಗಿದರು.

ಸ್ವಭಾವತಃ ಪ್ರಾಮಾಣಿಕರು, ಮುಗ್ಧರು, ಭಾವುಕರೂ ಆದ ಚಿದಾನಂದಮೂರ್ತಿಯವರು ಪಾರದರ್ಶಕವಾಗಿ ಬದುಕಿದವರು. ಎಸ್.ಎಲ್ ಭೈರಪ್ಪನವರಂತೆ ಚಿಮೂ ಸ್ಟ್ರಾಟರ್ಜಿಸ್ಟ್ ಅಲ್ಲ. ಆದರೆ ಮುಸ್ಲಿಮರ ಬಗ್ಗೆ, ಕ್ರಿಶ್ಚಿಯನ್ನರ ಬಗ್ಗೆ ಅವರು ಈ ವಯಸ್ಸಿನಲ್ಲಿ ಆಡುತ್ತಿರುವ ಮಾತುಗಳನ್ನು ನೋಡಿದರೆ, ಅವರ ಮಾನಸಿಕ ಸ್ಥಿತಿಯ ಬಗ್ಗೆಯೇ ಅನುಮಾನ ಹುಟ್ಟಿಸುತ್ತಿದೆ.

ಕನ್ನಡ ಜಾಗೃತಿಯ ಕೆಲಸ ತನ್ನಿಂದ ಸಂಪೂರ್ಣವಾಗಿ ಆಗಿಲ್ಲ ಎಂದು ನೊಂದ ಚಿದಾನಂದಮೂರ್ತಿಯವರು ಹಿಂದೆ ಹಂಪಿಯ ಪಂಪಾ ಕ್ಷೇತ್ರದ ತುಂಗಭದ್ರಾ ನದಿಯಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. (ಚಿಮೂ ಅವರು ಇದನ್ನು ಆತ್ಮಹತ್ಯೆ ಪ್ರಯತ್ನ ಎನ್ನುವುದಿಲ್ಲ; ಜಲಪ್ರವೇಶ ಎನ್ನುತ್ತಾರೆ!) ಹೀಗೆ ತುಂಗಭದ್ರಾ ನದಿಯಲ್ಲಿ ಲೀನವಾಗಿ ಹೋಗುವ ತೀರ್ಮಾನ ಮಾಡಿದಾಗ ಅವರು ಡಾ.ಎಲ್.ಎಸ್.ಶೇಷಗಿರಿರಾವ್ ಅವರಿಗೆ ಸುಮಾರು ೧೫ ಪುಟಗಳ ಪತ್ರವೊಂದನ್ನು ಬರೆದಿದ್ದರು. ಸತ್ತಮೇಲೂ ಕನ್ನಡ ಚಳವಳಿಗಾರರಿಗೆ ನಾನು ಪಾಂಚಜನ್ಯವಾಗಿ ಸ್ಫೂರ್ತಿ ನೀಡುತ್ತೇನೆ. ಕನ್ನಡದ ಶತ್ರುಗಳನ್ನು ಪ್ರೇತಾತ್ಮವಾಗಿ ಕಾಡುತ್ತೇನೆ ಎಂದು ಅವರು ಆ ಪತ್ರದಲ್ಲಿ ಬರೆದಿದ್ದರು.

ಚಿದಾನಂದಮೂರ್ತಿಯವರು ಎಷ್ಟು ಮುಗ್ಧರು ಎಂಬುದಕ್ಕೆ ಇದು ಸಾಕ್ಷಿ.

ಆದರೆ ಈ ಮುಗ್ಧತೆಯು ಅವರನ್ನು ಎಷ್ಟು ಅಪಾಯಕಾರಿಯಾದ ನಿಲುವುಗಳನ್ನು ತೆಗೆದುಕೊಳ್ಳಲು ಪ್ರೇರೇಪಿಸಿದೆ ಎಂಬುದನ್ನು ಗಮನಿಸಿದರೆ ಆತಂಕವಾಗುತ್ತದೆ.

ಇವತ್ತಿನ ಪ್ರಜಾವಾಣಿ ನೋಡಿ. ಚಿಮೂ ಅವರ ಪತ್ರಿಕಾಗೋಷ್ಠಿಯ ವಿವರಗಳು ಪ್ರಕಟವಾಗಿವೆ. ಕ್ರೈಸ್ತರೇ ನೈಜ ಕೋಮುವಾದಿಗಳು ಎಂಬುದು ವರದಿಯ ಶೀರ್ಷಿಕೆ. ಏನು ಹಾಗೆಂದರೆ? ಕ್ರೈಸ್ತರಲ್ಲಿ ಕೆಲವರು ಅಂತಲೋ, ಕ್ರೈಸ್ತರಲ್ಲಿ ಬಹಳಷ್ಟು ಮಂದಿ ಎಂದೋ ಅವರು ಬಳಸಿಲ್ಲ. ಇಡೀ ಕ್ರೈಸ್ತ ಸಮುದಾಯವನ್ನು ಕೋಮುವಾದಿ ಎಂದು ಬಣ್ಣಿಸಿದ್ದಾರೆ. ಇದನ್ನು ಹೇಗೆ ಗ್ರಹಿಸುವುದು? ಜಗತ್ತಿನ ಕ್ರೈಸ್ತರೆಲ್ಲ ಕೋಮುವಾದಿಗಳಾಗಿದ್ದರೆ ಹೇಗಿರುತ್ತಿತ್ತು?

ಇನ್ನು ೩೦೦ ವರ್ಷಗಳಲ್ಲಿ ಹಿಂದೂ ಧರ್ಮ ನಾಶವಾಗಲಿದೆ ಎಂದು ಚಿದಾನಂದಮೂರ್ತಿಯವರು ಹೇಳಿಕೆ ನೀಡಿದ್ದಾರೆ. ಸತ್ತ ಮೇಲೆ ಕನ್ನಡದ ಶತ್ರುಗಳನ್ನು ಪ್ರೇತಾತ್ಮವಾಗಿ ಕಾಡುತ್ತೇನೆ ಎಂಬ ಅವರ ಹಿಂದಿನ ಹೇಳಿಕೆಯಷ್ಟೆ ಇದು ಬಾಲಿಷ. ಒಬ್ಬ ಸಂಶೋಧಕ ತಲುಪಿರುವ ಮಾನಸಿಕ ಸ್ಥಿತಿ ಇದು.

ಕ್ರೈಸ್ತರ ಮೇಲೆ, ಮುಸಲ್ಮಾನರ ಮೇಲೆ ಚಿದಾನಂದ ಮೂರ್ತಿಯವರು ಯಾಕಿಷ್ಟು ನಂಜು ಕಾರುತ್ತಿದ್ದಾರೆ? ತುಂಗಭದ್ರಾ ನದಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿ, ಮುಳುಗಿದರಲ್ಲ ಚಿದಾನಂದ ಮೂರ್ತಿಯವರು; ಆಗ ಅವರನ್ನು ಕಾಪಾಡಿದ್ದು ಯಾರು?
ಒಬ್ಬ ಅಂಬಿಗ, ಆತ ಮುಸ್ಲಿಮ್.

ಚಿದಾನಂದ ಮೂರ್ತಿಯವರ ವಿತಂಡವಾದ, ವಿಷ ಕಾರುವ ಹೇಳಿಕೆಗಳು.. ಇತ್ಯಾದಿಗಳ ಬಗ್ಗೆ ಚರ್ಚೆ ಸಾಕು ಅನ್ನಿಸುತ್ತೆ ಅಲ್ಲವೇ?

19 comments:

  1. ಚಿದಾನಂದ ಮೂರ್ತಿಯವರ ಬಾಲಿಷ ಹೇಳಿಕೆಗಳ ಸಂಶೋದನೆ ಮಾಡುತ್ತಾ ಸಂಪಾದಕೀಯ ಕಾಲಹರಣ ಮಾಡುತ್ತಿದೆ ಅನಿಸುತ್ತಿದೆ.

    ಚರ್ಚೆ ಸಾಕು ಮಾಡಿ.

    ReplyDelete
  2. ಸಾಕಷ್ಟು ಸಂಶೋಧನೆಗಳನ್ನು ಮಾಡಿರುವ ಚಿದಾನಂದ ಮೂರ್ತಿಯವರು ಏನೇನು ಹೇಳಿಕೆ ಕೊಟ್ಟಿದ್ದಾರೆ ಅನ್ನೋದು ಅವರಿಗೆ ಚೆನ್ನಾಗಿ ಗೊತ್ತಿರುತ್ತೆ. ಹಿರಿಯ ಸಂಶೋದಕರಾದ ಅವರು ಪೂರ್ವಾಪರಗಳನ್ನು ತಿಳಿಯದೆ ಸುಮ್ಮನೆ ಹೇಳಿಕೆ ಕೊಟ್ಟಿರುವುದಿಲ್ಲ. ಎಂತಹ controversial ಹೇಳಿಕೆ ಕೊಟ್ಟಾಗಲೂ ಗೌಪ್ಯನಾಮದಿಂದ ಕೊಟ್ಟಿಲ್ಲ ಹಾಗೂ ಬ್ಯಾಂಗಲೂರ್ ಮಿರರ್ ಮತ್ತು ತಟ್ಸ್‌ಕನ್ನಡದಲ್ಲಿ ಪ್ರಕಟವಾದ ನಂತರ news break ಮಾಡಿಲ್ಲ ಬಿಡಿ.

    ReplyDelete
  3. @ anonymous,
    Bhale nimma vaada mechchabeku. goupyanamadinda helike kottilla endu heluva neevu yaake anonymous aagi comment haakidiro. ashadabhutitana andre ide alva? chimu samarthisikollalu enu sigade heegella cheeradabeka? pitty on u.

    ReplyDelete
  4. ಚಿದೂ ಪಂಡಿತನಿರಬಹುದು... ಅದರೆ ಬೇರೆ ಧರ್ಮಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಅಪಪ್ರಚಾರ ಮಾಡುವುದು ಅವರು ಬಿಟ್ಟಿ ಪ್ರಚಾರಕ್ಕಾಗಿ ಕಂಡು ಕೊಂಡ ಸುಲಭದ ದಾರಿ ಎನಿಸುತ್ತದೆ. ಅಷ್ಟಕ್ಕೂ ಅವರಿಗೆ ಬೇರೆ ಕೆಲಸವೇನಿದೆ.ಅದನ್ನೇ ಪತ್ರಿಕೆಗಳು ದೊಡ್ಡ ದೊಡ್ಡ ಸುದ್ದಿಗಳಂತೆ ಪ್ರಚಾರ ಮಾಡುವುದು ಹಾಸ್ಯಾಸ್ಪದವಾಗಿದೆ. ಪತ್ರಿಕೆಗಳು ಈ ಮೂಲಕ ಕೋಮು ಗಲಭೆಗಳಿಗೆ ಅವಕಾಶ ಕಲ್ಪಿಸುತ್ತವೆ.

    ReplyDelete
  5. I read article on prajavani and your editorial on the same. While writing u have chosen only to critic chimoo, but failed to address the whole issue. Instead writing that chimoo saved from a muslim u should have asked chimoo to produce evidence to prove conversions by christian missionaries, if u still believe there is no forced/lured conversions. to place on the record I am not against freedom to choose religion, but it should be from within and not from lucrative promises.
    -Panduranga Acharya

    ReplyDelete
  6. ಚಿ.ಮೂ ಹೇಳಿರುವುದು ಕ್ರೈಸ್ತ ಪಾದ್ರಿಗಳು ಕೋಮುವಾದಿಗಳು ಎಂದು. ಕ್ರೈಸ್ತರೆಲ್ಲ ಕೋಮುವಾದಿಗಳು ಎಂದೆಲ್ಲ (goo.gl/lQqGc). ಪ್ರಜಾವಾಣಿ ವರದಿ ಬಹುಶ ತಪ್ಪು ಗ್ರಹಿಸಿರಬಹುದು, ಬೇರೊಂದು ಪತ್ರಿಕೆಯಲ್ಲಿ ಆ ರೀತಿ ಪ್ರಕಟವಾಗಿಲ್ಲ. ಅವರು ಎತ್ತಿರುವ ನಿಜವಾದ ಪ್ರಶ್ನೆಗಳ ಚರ್ಚೆ ಮಾಡುವುದು ಒಳ್ಳೆಯದು.

    ReplyDelete
  7. ತುಂಗಭದ್ರಾ ನದಿಯಲ್ಲಿ ಆತ್ಮಹತ್ಯೆಗ ಅವರನ್ನು ಕಾಪಾಡಿದ್ದು ಯಾರು?
    ಒಬ್ಬ ಅಂಬಿಗ, ಆತ ಮುಸ್ಲಿಮ್. this is wrong statement, he was survived by one of the Pilgrim who visited to that place, he was Hindu, chi. mu. statement let it be, but why are you talking so favour of muslim and christian this is my question

    ReplyDelete
  8. ಸತ್ಯ ಕೆಲವೊಮ್ಮೆ ಕಹಿಯಾಗಿರುತ್ತೆ. ಮುಸ್ಲಿಂ/ಕ್ರಿಶ್ಚಿಯನ್ ವಿರೋದಿ ಲೇಪವಿದೆ ಎಂಬ ಒಂದೇ ಕಾರಣಕ್ಕೆ ಸತ್ಯವನ್ನೂ ಆ ಸತ್ಯವನ್ನು ಹೇಳುವವರನ್ನೂ ಟೀಕಿಸುವುದು ಎಷ್ಟು ಸರಿ?? ನಿಮ್ಮ ಪ್ರಕಾರ ನನ್ನ ಒಂದು ಬ್ಲಾಗ್ ಲೇಖನ (ಜನಮತಸಾಂದ್ರತೆ ಬಗ್ಗೆ) ಆರ್ ಎಸ್ ಎಸ್ ಹಾಗೂ ಚಿ.ಮೂ ವಾಸನೆಯಿದೆ!!!-http://machikoppa.blogspot.com/2010/08/demography.html

    ReplyDelete
  9. whatever he said for this time abt christinan priests are absolutely correct......
    i studied in a convent school...i seen that many lower cast people converted into christians in our area....
    they became good position after tht.....
    ths is the bitter & real...truth......of churches......thy will so good in brain wash,........
    ths may continue becoz hindus r nt united..nd split into many in the name of caste
    ...i heard frm ma andra friend s tht...in thr many people converting just bcoz of money..........
    So ths is a serious issue.......every hindu should think...and act !!!!!!!

    ReplyDelete
  10. ಸಾಕಷ್ಟು ಸಂಶೋಧನೆಗಳನ್ನು ಮಾಡಿರುವ ಚಿದಾನಂದ ಮೂರ್ತಿಯವರು ಏನೇನು ಹೇಳಿಕೆ ಕೊಟ್ಟಿದ್ದಾರೆ ಅನ್ನೋದು ಅವರಿಗೆ ಚೆನ್ನಾಗಿ ಗೊತ್ತಿರುತ್ತೆ. ಹಿರಿಯ ಸಂಶೋದಕರಾದ ಅವರು ಪೂರ್ವಾಪರಗಳನ್ನು ತಿಳಿಯದೆ ಸುಮ್ಮನೆ ಹೇಳಿಕೆ ಕೊಟ್ಟಿರುವುದಿಲ್ಲ. ಎಂತಹ controversial ಹೇಳಿಕೆ ಕೊಟ್ಟಾಗಲೂ ಗೌಪ್ಯನಾಮದಿಂದ ಕೊಟ್ಟಿಲ್ಲ ಚಿ.ಮೂ ಹೇಳಿರುವುದು ಕ್ರೈಸ್ತ ಪಾದ್ರಿಗಳು ಕೋಮುವಾದಿಗಳು ಎಂದು. ಕ್ರೈಸ್ತರೆಲ್ಲ ಕೋಮುವಾದಿಗಳು ಎಂದೆಲ್ಲ (goo.gl/lQqGc). ಪ್ರಜಾವಾಣಿ ವರದಿ ಬಹುಶ ತಪ್ಪು ಗ್ರಹಿಸಿರಬಹುದು, ಬೇರೊಂದು ಪತ್ರಿಕೆಯಲ್ಲಿ ಆ ರೀತಿ ಪ್ರಕಟವಾಗಿಲ್ಲ. ಅವರು ಎತ್ತಿರುವ ನಿಜವಾದ ಪ್ರಶ್ನೆಗಳ ಚರ್ಚೆ ಮಾಡುವುದು ಒಳ್ಳೆಯದು.

    vi ke malkhed

    ReplyDelete
  11. kannige 'pore'bandavarige mundiruva vastu spastavaagi kanisadu. Namma `devaru' athava namma `deva doota' matra satya. avarannu nambidavarige `maatra' swarga. illadiddare `naraka' ennuvaranna komuvadigalendu kareyade `udaaravaadigalendu' kareyabahude? badalaagi `iruvudonde satya. rushigalu adannu bere bereyaagi varsiddare' `Ekam sadvipra bahudha vadanti' ennuvarannu udaaravadigalendu kareyorave?. nija helabekendare i ella suddijivigalige i `udaarateya' roga talide. idakke sukta cikitse agalebeku. jote jotege ivara poregattida kannige chikiste agalebeku.

    ReplyDelete
  12. ನಿಮ್ಮ ಕಣ್ಣುಗಳಿಗೆ ಮತಾ೦ತರ ಯಾಕೆ ಒ೦ದು ಪಿಡುಗಾಗಿ ಕಾಣುವ ಬದಲು,ಅಲ್ಪಸ೦ಖ್ಯಾತ ಧರ್ಮ ಪ್ರಚಾರವಾಗಿ ಮಾತ್ರ ಕಾಣುತ್ತದೆ? ಚಿ.ಮೂ ಅವರ ಕುರಿತು, ಈ ರೀತಿ ಹೇಳಿಕೆ ಕೊಡುವ ಮೊದಲು, ನೀವು ಕ್ರಿಶ್ಚಿಯನ್ನರು ನಡೆಸುವ ಶಾಲೆಗಳಿಗ ಭೇಟಿ ನೀಡಿದ್ದಿರ? ಅಲ್ಲಿ ನಡೆಯುವ ವ್ಯವಸ್ಥಿತ ಮತಾ೦ತರದ ಬಗ್ಗೆ ನೀವು ಯಾಕೆ ಬರೆಯೊದಿಲ್ಲ? ಹೆಣ್ಣು ಮಕ್ಕಳು, ಹಣೆಗೆ ಕು೦ಕುಮ ಇಡಬಾರದು, ಕೈಗೆ ಬಳೆ ಹಾಕಬಾರದು, ಮಾತು ಮಾತಿಗು ಒ ಜೀಸಸ್ ಅನ್ನಬೇಕು... ಇದೆಲ್ಲ ನಿಮ್ಮ ಕಣ್ಣಿಗೆ ಯಾವತ್ತು ಕಾಣುತ್ತದೊ, ಸ್ವತಃ ಆ ಜೀಸಸ್ ಗೂ ಗೊತ್ತೊ, ಇಲ್ಲವೊ

    ReplyDelete
  13. Mr. Sampadakeeya - Instead of criticizing Chimu personally, why don't you logically reply to Chimu to the issues he has raised? If not in Prajavani, atleast in your blog space, can you reply? Bhyrappa and Chimu always substantiate their views with a lot of data and ample proofs. Those who can not answer them satisfactorily, will only resort to such personal level attacks and give them all phrases like RSS-followers, safron etc etc.

    It is an open truth that, many people, especially poor are getting converted to Christianity because they get money. Please ask anybody who studied in convent schools 20 years back in Karnataka and they will tell how the convents used to propagate Christianity (remember the words "you are the sinner..."). As recent as just 2 months back, two people, afluently dressed, soft spoken in English came to our house and gave some pamphlets that were full of Christian propaganda. Why should we not protest?

    British ruled India because we allowed them to rule. Many other invaders destroyed India because we allowed them to do so. As long as we have pseudo-secularists in our society, history may repeat itself!!

    ReplyDelete
  14. ಯಾಕೋ ಚಿಮೂ ಅವರು ಹೇಳೋದು ತಪ್ಪು ಅನ್ನಿಸುತ್ತೆ
    ಆದರೆ ಅದು ಬಾಲಿಶ ಹೇಳಿಕೆ ಅಲ್ಲ ಸರಿಯೇ ಆದರೆ ತಾರ್ಕಿಕವಾಗಿ ನಿಮ್ಮ ಹತ್ತಿರ ಅದರ ರಿಪೋರ್ಟ್ ಇರಬೇಕು ಜನ ಸಂಖ್ಯಾ ಸೇನ್ಸುಸ್ ನೋಡಬೇಕು ಅದು ಬಿಟ್ಟು
    ಎಲ್ಲರ ಪಾದ್ರಿಗಳು ಮತಾಂತವಾದಿಗಳು ಅನ್ನೋದು ಸಮಂಜಸ ಅಲ್ಲ ಹಾಗಂದ್ರೆ ನಾವು ಎಲ್ಲ ಸ್ವಾಮೀಜಿಗಳು ನಿತ್ಯಾನಂದರು ಅನ್ನಬೇಕಬಹುದು

    ನೀವು ಯಾರು ಅಂತವರೂ ಇದ್ದರೋ ಅವರನ್ನು ಸಾಕ್ಷಿ ಸಮೇತ ಬಹಿರಂಗ ಪಡಿಸಿ ನಂತರ ಇದರಬಗ್ಗೆ ಚರ್ಚೆ ಆದರೆ ಒಳಿತು ಅಲ್ಲವೇ???

    ReplyDelete
  15. ಸ್ಕೂಲ್ ಗಳಲ್ಲಿ ಬಡವ ಶ್ರೀಮಂತ ಎಂಬ ಬೇದ ಬಾವ ಇರಬಾರದು ಎಂಬ ಕಾರಣಕ್ಕಾಗಿ ಮಕ್ಕಳಿಗೆ ಹೂವು ಹಾಕಬಾರದು, ಕೈಬಳೆ , ಕಾಲ್ಗೆಚ್ಚೆ ಹಾಕಬಾರದು ಎಂದು ಹೇಳಿರುತ್ತಾರೆ. ಶಾಲಾ ಕ್ಯಾಂಪಸ್ ನಲ್ಲಿ ಶುಚಿತ್ವ ಮತ್ತು silence ಕಾಪಾಡಲು ಇಂತಹ ನಿಯಮಗಳಿವೆ. ಅದು ಬಿಟ್ಟು ಅಲ್ಲಿ ಧರ್ಮ ದಂದೆಗಳಿಲ್ಲ ....
    ಕುಂಕುಮ ಹಾಕಬಾರದು ಎಂದು ಯಾವ ಸಂಸ್ಥೆಗಳೂ ಹೇಳಿಲ್ಲ.
    ಯಾವ ಸ್ಕೂಲ್ ಗಳಲ್ಲೂ ಕ್ರೈಸ್ತ ಧರ್ಮದ ಭೋದನೆಯನ್ನು ಹಿಂದುಗಳೂಗೆ ಅಥವಾ ಮುಸ್ಲಿಂಮರಿಗೆ ನೀಡಿಲ್ಲ... ಅದರ ಅವಶ್ಯಕತೆನೂ ಅವರಿಗಿಲ್ಲ... ನಿಮ್ಗೆ ಅಷ್ಟೊಂದು ಅನುಮಾನಗಳಿದ್ದರೆ ದಯವಿಟ್ಟು ನಿಮ್ಮ ಮಕ್ಕಳನ್ನು ಕ್ರೈಸ್ತ ಸಂಸ್ಥೆಗಳಿಗೆ ಸೇರಿದ ಸ್ಕೂಲ್ ಗಳಿಗೆ ಸೇರಿಸಬೇಡಿ... ನೀವು ಆನಾರೋಗ್ಯದಿಂದಿದ್ದರೆ ದಯವಿಟ್ಟು ಕ್ರೈಸ್ತರ ಆಸ್ಪತ್ರೆಗಳಿಗೆ ಹೋಗಬೇಡಿ... ಪತ್ರಿಕೋದ್ಯಮದ ಉಗಮ ಕ್ರೈಸ್ತರಿಂದಲೇ ಆದದ್ದು.., ನಿಮಗೆ ಅದಿಷ್ಟವಿಲ್ಲದಿದ್ದರೆ ದಯವಿಟ್ಟು ಪತ್ರಿಕೋದ್ಯಮವನ್ನೇ ನಿಲ್ಲಿಸಲಿ. ಕ್ರೈಸ್ತರಿಗೆ ನಿಜವಗಾಲೂ ಹಿಂದುಗಳಲ್ಲಿ ಕೋಪ, ಆಸೂಯೆ ಅಥವಾ ನಿರಾಶಕ್ತಿ ಇರುತ್ತಿದ್ದರೆ ರೊನಾಲ್ಡ್ ಕೊಲಾಸೊ ಅಂಥವರು ಹಿಂದೂ ದೇವಾಲಯಗಳನ್ನು ಉಚಿತವಾಗಿ ಕಟ್ಟಿಕೊಡುವ ಅವಶ್ಯಕತೆ ಏನಿತ್ತು? ಹಿಂದೂ, ಮುಸ್ಲಿಂ ಅಥವಾ ಇತರೆ ಧರ್ಮದವರು ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಸುವ ಅವಶ್ಯಕತೆ ಏನಿತ್ತು?

    ReplyDelete
  16. ಮತಾಂತರ ಮಾಡೋರು ರೋಮನ್ ಕಥೋಲಿಕರಲ್ಲ ಬದಲಾಗಿ ನ್ಯೂಲೈಫ್ ಮತ್ತು ಪ್ರೊಟೆಸ್ಟೆಂಟ್ ಪಂಗಡದವ್ರು. ಅಪಾರ್ಥಮಾಡಿಕೊಳ್ಳಬೇಡಿ.ಯಾರೋ ಮತಾಂತರ ಮಾಡಿ ಇನ್ಯಾರೋ ಅನ್ಯಾಯಗಳಿಗೆ ಬಲಿಯಾಗೋದು ಎಷ್ಟು ಸರಿ ಸ್ವಾಮಿ? ಜಾತಿ ಬೇದವಿಲ್ಲದೆ ಎಲ್ಲರೂ ಸ್ನೇಹದಿಂದಿರೋಣ.

    ReplyDelete
  17. @ಸ್ಕೂಲ್ ಗಳಲ್ಲಿ ಬಡವ ಶ್ರೀಮಂತ it means writer how much hatreness was filled in heart..he is telling dont go to christian hospital,school and they will voilate the this lands law..
    this seams physically they are in india and mentally thikning destory of indai..thse peoale may also equals to terrosrists

    vithalrao.k

    ReplyDelete
  18. ಮತಾಂತರ, ಮತಾಂತರ ಅಂತ ಯಾಕೆ ಬೊಬ್ಬೆ ಹಾಕುತ್ತೀರಿ? ಮತಾಂತರ ಅಷ್ಟು ಸುಲಭದ ಮಾತಲ್ಲ. ಬಲವಂತದ ಮತಾಂತರ ಎಲ್ಲೂ ನಡೆದಿಲ್ಲ, ನಡೆಯುತ್ತಿಲ್ಲ. ಆತ್ಮ ಸಾಕ್ಷಿಗೆ ವಿರುದ್ಡವಾಗಿ ಯಾರೂ ಮತಾಂತರಗೊಳ್ಳುವುದಿಲ್ಲ. ಒಂದು ಪಕ್ಷ ಹಾಗೆ ಆಗಿದ್ದರೆ, ಅದು ಉಳಿಯುವುದೂ ಇಲ್ಲ ಬಿಡಿ. ಭಾರತದ ಹಿಂದುಯೇತರರೆಲ್ಲ ರಾಷ್ಟ್ರದ ಒಗ್ಗಟ್ಟು, ಐಕ್ಯತೆ, ಮತ್ತು ಈ ಮಣ್ಣಿನ ಋಣಕ್ಕೆ ಸಮರ್ಪಿಸಿಕೊಂಡವರೇ ಆಗಿದ್ದಾರೆ.ಕ್ರೈಸ್ತ ಸಂಸ್ಠೆಯ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗಮಾಡಿ ತಮ್ಮ ಭವಿಷ್ಯವನ್ನು ಹಾಳುಮಾಡಿಕೊಂಡವೆಂಬ ಮಾತುಗಳು ಎಲ್ಲೂ ಯಾರಿಂದಲೂ ಕೇಳಿಬಂದಿಲ್ಲ. ಇಂತಹ ಸಂಸ್ಠೆಗಳಲ್ಲಿ ವ್ಯಾಸಂಗ ಮುಗಿಸಿದ ಲಕ್ಷಾಂತರ ವಿದ್ಯಾರ್ಟಿಗಳು ಈ ದೇಶದ ಉನ್ನತ ಪ್ರಜೆಗಳಾಗಿದ್ದಾರೆ. ಅವರೆಲ್ಲರಲ್ಲೂ ಸಂಸ್ಟೆಗಳ ಬಗ್ಗೆ ಗೌರವವಿದೆಯೇ ಹೊರತು, ದ್ವೇಷ ಅಸೂಯೆಗಳಿಲ್ಲ.

    ReplyDelete