ಇಂಗ್ಲಿಷ್‌ನ ಜೆ ಅನ್ನೋ ಅಕ್ಷರನೇ ಸರಿ ಇಲ್ಲ. ಜಪಾನ್ ಕೂಡ ಜೆ ಅಕ್ಷರದಿಂದ ಶುರುವಾಗುತ್ತೆ. ಅದಕ್ಕೆ ಹಾಗೆಲ್ಲ ಭೂಕಂಪ, ಸುನಾಮಿ ಆಗಿದ್ದು. ಅಲ್ಲೆಲ್ಲ ಹೋಗೋದ್ಯಾಕೆ? ಇಲ್ಲೇ ನಮ್ಮ ಬೆಂಗಳೂರನ್ನೇ ತಗೋಳಿ, ಎಲ್ಲ ದೊಡ್ಡ, ದೊಡ್ಡ ರೌಡಿಗಳು, ಎಲ್ಲ ಜೆ ಅಕ್ಷರದಿಂದನೇ ಇದಾರೆ. ಉದಾಹರಣೆಗೆ ಜಯರಾಜ್. ನಂಬರ್ ೫ ಮತ್ತು ೭ ಒಟ್ಟಿಗೆ ಇರಬಾರದು. ಅವೆರಡಕ್ಕೂ ಆಗಲ್ಲ. ಅವೆರಡು ಒಟ್ಟಿಗೆ ಇದ್ರೆ ಅನಾಹುತ ಸೃಷ್ಟಿ ಮಾಡಿಬಿಡುತ್ತವೆ.
ಇದನ್ನೆಲ್ಲ ಹೇಳ್ತಾ ಇರುವುದು, ಮೀಡಿಯಾಗಳ ಜ್ಯೋತಿಷ್ಯ ಪ್ರೇಮದಿಂದಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಯವರ್ಧನ್ ಅನ್ನೋ ಸಂಖ್ಯಾಶಾಸ್ತ್ರ ಪ್ರವೀಣ. ಇವನಿಗೆ ವೇದಿಕೆ ಕಲ್ಪಿಸಿ ಕೊಡುತ್ತಿರುವುದು ಒನ್ಸ್ ಎಗೇನ್ ಸುವರ್ಣ ನ್ಯೂಸ್.
ಜೆ ಅಕ್ಷರದಿಂದ ಬೇರೆ ಯಾವ ದೇಶಗಳ ಹೆಸರು ಇಲ್ಲವೇ? ಹಾಗಿದ್ದರೆ ಜರ್ಮನಿಯಲ್ಲೇಕೆ ಭೂಕಂಪ ಆಗೋಲ್ಲ? ಜೆ ಅಕ್ಷರ ಬಿಟ್ಟು ಬೇರೆ ಅಕ್ಷರದಿಂದ ಶುರುವಾಗೋ ಯಾವ ರೌಡಿಗಳು ಈ ಮನುಷ್ಯನ ಕಣ್ಣಿಗೆ ಕಾಣುತ್ತಿಲ್ಲವೇ? ಜ್ಯೋತಿ ಬಾಫುಲೆ, ಜವಹರಲಾಲ್ ನೆಹರೂ, ಜಗಜೀವನ್ ರಾಮ್, ಜ್ಯೋತಿ ಬಸು, ಜಿಡ್ಡು ಕೃಷ್ಣಮೂರ್ತಿ, ಜಾರ್ಜ್ ಫರ್ನಾಂಡಿಸ್ ಇವರುಗಳೆಲ್ಲ ಯಾರು? ಇವರೂ ಸಹ ಸಮಾಜದ್ರೋಹಿಗಳ ಹಾಗೆ ಈತನಿಗೆ ಕಾಣಿಸಬಹುದೆ? ಈತನ ಪ್ರಕಾರ ಅ ಅಕ್ಷರ ಕೂಡ ಕೆಟ್ಟದಂತೆ. ಅದಕ್ಕೂ ಏನೋ ಒಂದು ತಲೆ ಬುಡ ಇಲ್ಲದ ವಿವರಣೆ ಕೊಡುತ್ತಾನೆ. ಏನೋ ಹಾಳು ಬಡಿದುಕೊಂಡು ಹೋಗಲಿ. ಇದು ಅವನ ತಪ್ಪೋ, ಅವನು ನಂಬಿಕೊಂಡಿರುವ ಸಂಖ್ಯಾಶಾಸ್ತ್ರದ ತಪ್ಪೋ ಗೊತ್ತಿಲ್ಲ ಅಂತ ಸುಮ್ಮನೆ ಇರಬಹುದು. ದುರಂತ ಅಂದರೆ, ಸುವರ್ಣದವರು ಇಂಥವನ ಪಕ್ಕ, ರಾಮಕೃಷ್ಣರಾವ್ ಅವರಂಥ ಹಿರಿಯ ವಿಜ್ಞಾನಿಯನ್ನು ಕೂರಿಸಿ ಕಾರ್ಯಕ್ರಮ ನಡೆಸುತ್ತಾರೆ. ಆ ವಿಜ್ಞಾನಿ ಏನೇ ಲಾಜಿಕ್ ಮಾತಾಡಿದ್ರು, ಅದು ಹುಚ್ಚನ ಮುಂದೆ ಮಾತಾಡಿದ ಹಾಗೆ.
ಅಂದ ಹಾಗೆ ಮೇ ೨೧ ಕ್ಕೆ ಪ್ರಳಯ ಆಗುತ್ತೋ ಇಲ್ವೋ ಅನ್ನೋ ಬಗ್ಗೆ ಕಾರ್ಯಕ್ರಮ ಅದು. ಈ ಮನುಷ್ಯನ ಪ್ರಕಾರ ೨೦೧೯, ತಪ್ಪಿದರೆ ೨೦೨೯ಕ್ಕೆ ಪ್ರಳಯ ಆಗೇ ಆಗುತ್ತಂತೆ. ಕಾರಣ, ನಂಬರ್ ೯!
ಏನಾಗಿದೆ ನಮ್ಮ ಮೀಡಿಯಾಗಳಿಗೆ? ಕೊಂಚವಾದರೂ ಸಂಕೋಚ, ಮುಜುಗರವೂ ಆಗುವುದಿಲ್ಲವೇ? ಇಷ್ಟು ಕಾಲ ನಾವು ಮೀಡಿಯಾಗಳಿಗೆ ಸಾಮಾಜಿಕ ಕಾಳಜಿ ಇಲ್ಲವೇ ಎಂದು ಪ್ರಶ್ನಿಸುತ್ತಿದ್ದೆವು? ಮೀಡಿಯಾಗಳಿಗೆ ಕನಿಷ್ಠ ಕಾಮನ್‌ಸೆನ್ಸ್ ಕೂಡ ಇಲ್ಲವೇ ಎಂದು ಈಗ ಪ್ರಶ್ನಿಸಬೇಕಿದೆ. ಹೀಗೆ ಬೌದ್ಧಿಕ ದಾರಿದ್ರ್ಯದಿಂದ ನರಳುತ್ತಿರುವ ಜನರು ಮೀಡಿಯಾಗಳಿಗೇಕೆ ಬರುತ್ತಾರೆ? ಇಂಥದ್ದೇ ಬುರುಡೆ ಜ್ಯೋತಿಷಿಗಳ ಮನೆಗಳಲ್ಲಿ ಅವರ ಸಹಾಯಕರ ಕೆಲಸವನ್ನೇಕೆ ಮಾಡಬಾರದು?
ಮಾತು ಕಟುವೆನ್ನಿಸಿದರೆ ಕ್ಷಮೆ ಇರಲಿ.
Idara artha enendare namma kelasa innoo tumba ide. Ee mediagalige jana ugiyuvanthe madabeku. Tavu J yalli Jawaharlal Nehru vannu maretiddiri!
ReplyDeleteಏನಾಗಿದೆ ನಮ್ಮ ಮೀಡಿಯಾಗಳಿಗೆ? ಕೊಂಚವಾದರೂ ಸಂಕೋಚ, ಮುಜುಗರವೂ ಆಗುವುದಿಲ್ಲವೇ? ಇಷ್ಟು ಕಾಲ ನಾವು ಮೀಡಿಯಾಗಳಿಗೆ ಸಾಮಾಜಿಕ ಕಾಳಜಿ ಇಲ್ಲವೇ ಎಂದು ಪ್ರಶ್ನಿಸುತ್ತಿದ್ದೆವು? ಮೀಡಿಯಾಗಳಿಗೆ ಕನಿಷ್ಠ ಕಾಮನ್‌ಸೆನ್ಸ್ ಕೂಡ ಇಲ್ಲವೇ ಎಂದು ಈಗ ಪ್ರಶ್ನಿಸಬೇಕಿದೆ. ಹೀಗೆ ಬೌದ್ಧಿಕ ದಾರಿದ್ರ್ಯದಿಂದ ನರಳುತ್ತಿರುವ ಜನರು ಮೀಡಿಯಾಗಳಿಗೇಕೆ ಬರುತ್ತಾರೆ? ಇಂಥದ್ದೇ ಬುರುಡೆ ಜ್ಯೋತಿಷಿಗಳ ಮನೆಗಳಲ್ಲಿ ಅವರ ಸಹಾಯಕರ ಕೆಲಸವನ್ನೇಕೆ ಮಾಡಬಾರದು?
ReplyDeleteಮಾತು ಕಟುವೆನ್ನಿಸಿದರೆ ಕ್ಷಮೆ ಇರಲಿ.ಕ್ಷಮೆ yake...? mettu tagolli....
@ಸಂಪಾದಕೀಯ, ಪಾಪ ನಿಮಗೆ ರೆಸ್ಟ್ ಸಿಗುವ ಹಾಗೆ ಕಾಣುತ್ತಿಲ್ಲ. ಇಂಥ ಕೆಲಸಗಳೇ ಹೀಗೆ. ವಿಶ್ರಾಂತಿಗೂ ಅವಕಾಶ ಕೊಡಲ್ಲ. carry on, ನಿಮ್ ಜೊತೆಯಲ್ಲಿ ನಾವೆಲ್ಲರೂ ಇದ್ದೀವಿ.
ReplyDeleteVehicle number plate aaithu eega j aksharana? 24
ReplyDelete*7 news channel alva adakke bari suddine kodthidre hege? Agaga intha karyakramagalnna prasara madthare. kevala namma manranjanegagi, mediagalige buddhi annodu iddidre heegella madthiralilla
ಆರ್ಯವರ್ಧನ್ ಮಹಾತ್ಮನಾ..? ಮತ್ಯಾಕೆ ಹೆಡ್ಡಿಂಗಲ್ಲಿ...?
ReplyDeleteAVANANNU TV9 AVRU CHAKRAVYOOHA KAARYAKRAMAKKE KAREDRE CHENNAGIRUTTE...
ReplyDeleteNumerology! I think It is a kind of pathological obsession with numbers, and letters. There is no logic behind it. just a blind belief. moreover an irrational belief developed due to an obsession. A person deeply haunted by numbers tries to attribute qualities to those numbers! This is silly and brain less. Then he spreads his ideas to the community. it goes on like this, J is bad, Z provokes accidents, A is bad , vehicle numbers should be in ascending order, this number is bad, that number should not come with this number..etc etc. It is a total insanity.
ReplyDeleteಸಾರ್ವಜನಿಕ ಲಜ್ಜೆಯನ್ನು ಕಳೆದುಕೊಂಡಿರುವ ರಾಜಕಾರಣಿಗಳು, ಜೋತಿಷಿಗಳು ಮತ್ತು ಮಾಧ್ಯಮದವರ ಬಗ್ಗೆ ಜನಾಭಿಪ್ರಾಯ ರೂಪಿಸಬಲ್ಲ ಕ್ರಿಯಾಶೀಲ ಚಳುವಳಿಗಳು ಕರ್ನಾಟಕದಲ್ಲಿ ಇಲ್ಲದಿರುವ ಬಗ್ಗೆ ವಿಷಾದವಾಗುತ್ತಿದೆ.. ಇನ್ನೊಮ್ಮೆ ಬಂಡಾಯ-ದಲಿತ-ಅಹಿಂದ ದಂತಹ ಚಳುವಳಿಗಳು ಹುಟ್ಟಿಕೊಳ್ಳುವುದು ಸಾಧ್ಯವೆ? ಯಾರು ನಮ್ಮ ಹೊಸ ನಾಯಕರು..?
ReplyDeleteMahatma alla, duratma.
ReplyDeleteHell with these channels. :(
Ee burude Sankhya shastrigalannu nambuva namma TV channel veekshakara bagge bahala anukampavagutte.Yakadaroo ivara buddhige manku badiyito, tamma medulannu ee mandi intaha shata moorkhara vichrakke otte iduttaralla endu besara paduttene. Ee TV channelgalu nijavagiyu shoshane maduutiddave amayakarannu . Idu khandaneeya hagoo pratibhatanarha.
ReplyDeleteಯಾವನ್ರಿ ಅವನು ಆಯುರ್ವರ್ಧನ್ ? ಇದೇನು ಟಿವಿ ಕಾಯರ್ಯಕ್ರಮಕ್ಕಾಗೆ ಆತ ಇಟ್ಟುಕೊಂಡ ಹೆಸರಿರಬಹುದು. ಅಂದಹಾಗೆ ಈ ನ್ಯೂಸ್ ಛಾನಲ್ ಮುಖ್ಯಸ್ಥರುಗಳಿಗೆ ಏನಾಗಿದೆ ಅಂತ? ವೈಚಾರಿಕತೆ ಬಿಟ್ಟು ಮೌಢ್ಯವನ್ನೇ ಬಿತ್ತುವುದೇ ಕಾಯಕ ಮಾಡಿಕೊಂಡಿದ್ದಾರೆ.ಸುವರ್ಣ ದ ಹಮೀದ್ ಪಾಳ್ಯ ಇರಬಹುದು, ಸಮಯದ ಭಟ್ಟರಿರಬಹುದು ಮತ್ತು ಇತರೆ ಛಾನಲ್ ಗಳ ಮುಖ್ಯಸ್ಥರಿರಬಹುದು ತಮ್ಮ ವಾಹಿನಿಯಲ್ಲಿ ಎಂತಹ ಕಾರ್ಯಕ್ರಮ ಪ್ರಸಾರವಾಗುತ್ತಿದೆ ಎಂಬ ಅರಿವು ಇಟ್ಟುಕೊಂಡರೆ ಇಂತಹದ್ದು ಘಟಿಸಲಾರದು.ಟಿಆರ್ಪಿ ಬರುತ್ತೆ ಅನ್ನುವುದಾದರೆ ಪ್ರೈಮ್ ಟೈಂ ಅಂತ ಮಾಡಿಕೊಂಡು ಏನುಬೇಕಾದರೂ ಮಾಡಬಹುದೇ. ಒಂದಿಷ್ಟು ಸಾಮಾಜಿಕ ಕಳಕಳಿ ಇಟ್ಟುಕೊಂಡು ಮೌಡ್ಯ ಬಿತ್ತುವುದನ್ನು ನಿಲ್ಲಿಸಲಿ. ಅಂದಹಾಗೆ ಆತ "ಜೆ" ಅಕ್ಷರ ಕೆಟ್ಟದು ಅಂದನಾ? ತಮಿಳುನಾಡಿನ ಜಯಲಲಿತಾ, ಆಂಧ್ರದ ಜಗನ್ ಮೋಹನ್ ಇವರಿಗೆಲ್ಲಾ ಕೆಟ್ಟದಾಗಿದೆಯೇ ? ಇಂತಹ ತಲೆಕೆಟ್ಟ ಪ್ರಾರಬ್ದಗಳನ್ನು ಕರೆತಂದು ಕಾರ್ಯಕ್ರಮ ಮಾಡುವುದನ್ನು ನಿಲ್ಲಿಸಲಿ.
ReplyDeleteGermany "ಜಿ" ಯಿಂದ ಆರಂಭ ಆಗುತ್ತೆ, "ಜೆ" ಯಿಂದ ಅಲ್ಲ :-)
ReplyDeleteಟಿ ವಿ ಗೆ ಮೂರ್ಖರ ಪೆಟ್ಟಿಗೆ ಎನ್ನೋ ಹೆಸರೇ ಉಂಟಲ್ಲಾ....ಆದುದರಿಂದ ಅದನ್ನು ಜ್ಯೋತಿಷಿಗಳೇ ಮೊನೋಪೋಲಿ ಮಾಡಿಕೊಂಡುಬಿಟ್ಟಿದ್ದಾರೆ!
ReplyDelete@ Harisha - yes. you are right Germany is from G , not from J. but in this cace, if you take phonetic point of view ,as we all know that G is pronounced as "Ji".not Ga, or gi. We donot say ಗರ್ಮನಿ ಅಥವಾ ಗೆರ್ಮನಿ
ReplyDeleteAaryavardhan takes J (ಜೆ) as Ja.(ಜ) ಉದಾಹರಣೆ ಗೆ ಜಪಾನ್, ಜಯರಾಜ್, ಹೀಗೆ. ಆದ್ದರಿಂದ "Germany " ಯ "g " ಉಚ್ಚಾರ ಮಾಡುವಾಗ ಮತ್ತು ಕನ್ನಡದಲ್ಲಿ ಬರೆಯುವಾಗ "ಜ " ವೇ ಆಗುತ್ತದೆ ಅಲ್ಲವೇ? Numerology itself is a fickle kind of subject. letters are its pillars. these letters are pillar for languages also. some letters are also pronounced different in different language
eg: V is pronounced as vi in english. but the same V is pronounced as Fi in german language
and in german language to fulfil the sound vi you have to take W. Numerologists like aaryavardhan take phonetics, in some cases, and letter in some cases!. so there is no mistake of sampadakiya in mentioning the word Germany.
What could be his original name? definitely it is not Aaryavardhan. Do some R and D about him. What is his background, real name?
ReplyDeletebetter you have watched yesterdays maja wit sruja in suvarna .
ReplyDeleteAs per some resource.. after Ranganath quit Suvarna news... its TRP also decreased and now they are 3rd position...after SAMAYA...
ReplyDeleteso this could be the tactic to increase the TRP ..
most interesting is.... Suvarna TV is re-telecasting it's old episode of Narendra Sharma... oh god... what is his popularity.... one channel is not leaving him... other is not repeating his old stories...
What would be Narendra's next option...?
Mostly Udaya TV... as we no Udaya TV may not telecast such a waste program as they have enough TRP!!
George Fernandez, Germany....
ReplyDeleteJ = ಜಗನ್ಮಾತೆ? - ಜಗನ್ಮಾತೆಯ ಮಗ ಬೃಹತ್ ಭ್ರಹ್ಮಾ೦ಡ ಶರ್ಮ೦ಗೆ ಬೇಜಾರಾಯಿತ೦ತೆ? :-)
ReplyDeleteNaavugalu evvakkella uttaravaagi.. Comedy show maadbeku ankontini.. prathibhantenu aagutte..manarajnae nu aagutte.. tiluvalike nu barrutee.. Jaspal Bhatti.. Hiranyyanavar tarada showgalu :)
ReplyDeleteIvarige jana chennagi hakkondu odibeku! Awagale buddhi barodu !!! Namma janara mugdhateyanna maudhykee tirugista iddaralla mai urkondu barutte !!!1
ReplyDeleteಮೀಡಿಯಾಗಳಿಗೆ ಕನಿಷ್ಠ ಕಾಮನ್‌ಸೆನ್ಸ್ ಕೂಡ ಇಲ್ಲ. ಇಂತಹ ಕಾರ್ಯಕ್ರಮ ಮಾಡುವುದನ್ನು ಮಾದಲು ನಿಲ್ಲಿಸಲಿ....
ReplyDelete