Thursday, February 3, 2011

ಭಯೋತ್ಪಾದನಾ ಕೃತ್ಯ ನಡೆಸಿದ ಮುಸ್ಲಿಮರು ಮಾತ್ರ ಭಯೋತ್ಪಾದಕರು!


ಒಂದು ಸುದ್ದಿಯನ್ನು ಬೇರೆಬೇರೆ ಪತ್ರಿಕೆಗಳು ಹೇಗೆ ನೋಡುತ್ತವೆ ಎಂಬುದೇ ಮಾಧ್ಯಮ ವೃತ್ತಿ ಆರಿಸಿಕೊಂಡ ವಿದ್ಯಾರ್ಥಿಗಳಿಗೆ ಅಧ್ಯಯನದ ಸರಕಾಗಬಹುದು. ಈಗ ನೋಡಿ, ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಪ್ರವೀಣ್ ಮುತಾಲಿಕನ ಬಂಧನದ ಸುದ್ದಿಯನ್ನು ಹೇಗೆ ನಮ್ಮ ಕನ್ನಡದ ಪತ್ರಿಕೆಗಳು ಪ್ರಕಟಿಸಿದವು ಎಂಬುದೇ ಸಾಕಷ್ಟು ಕುತೂಹಲಕರವಾಗಿದೆ.

ಮಾಲೆಗಾಂವ್ ಸ್ಫೋಟ ಪ್ರಕರಣವನ್ನು ನಡೆಸಿದವರು ಭಯೋತ್ಪಾದಕರು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಬಂಧನವಾದರೂ ನಮ್ಮ ಪತ್ರಿಕೆಗಳಿಗೆ ಆತ ಕೇವಲ ವ್ಯಕ್ತಿ ಮಾತ್ರ. ಹಿಂದೆಲ್ಲ ಇಂಥ ಪ್ರಕರಣಗಳಿಗೆ ಸಂಬಂಧಿಸಿದಂತೆ ವರದಿಗಳು ಬಂದಾಗ ಬಂಧನಕ್ಕೊಳಗಾದ ವ್ಯಕ್ತಿಗೆ ಶಂಕಿತ ಭಯೋತ್ಪಾದಕ ಎಂಬ ವಿಶೇಷಣ ಹಚ್ಚಿ ಬರೆಯಲಾಗುತ್ತಿತ್ತು. ಹೀಗೆ ಬಂಧನಕ್ಕೊಳಗಾದವರೆಲ್ಲ ಮುಸ್ಲಿಮರೆ ಆಗಿದ್ದರು. ಪ್ರವೀಣ್ ಮುತಾಲಿಕ್ ವಿಷಯದಲ್ಲಿ ಮಾತ್ರ ಅದು ಕಾಣೆಯಾಗಿದೆ, ಯಾಕೆ? ಆತನಿಗೆ ಯಾರೂ ಶಂಕಿತ ಭಯೋತ್ಪಾದಕ ಎಂದು ಬರೆಯಲಿಲ್ಲವೇಕೆ?

ಭಯೋತ್ಪಾದನಾ ಚಟುವಟಿಕೆ ನಡೆಸಿದ ಮುಸ್ಲಿಮರನ್ನು ಮುಸ್ಲಿಂ ಭಯೋತ್ಪಾದಕ ಎಂದು ಕರೆಯುವುದಾದರೆ, ಕರ್ನಾಟಕದ ಮಟ್ಟಿಗೆ ಬಂಧನಕ್ಕೊಳಗಾದ ಮೊದಲ ಶಂಕಿತ ಹಿಂದೂ ಭಯೋತ್ಪಾದಕ ಪ್ರವೀಣ್ ಮುತಾಲಿಕ್. ಆದರೆ ಈ ಕುರಿತು ಇನ್ನಷ್ಟು ಬೆಳಕು ಚೆಲ್ಲುವ ಅವಕಾಶಗಳಿದ್ದರೂ ಯಾಕೆ ಆ ಕೆಲಸವನ್ನು ಪತ್ರಿಕೆಗಳು ಮಾಡಲಿಲ್ಲ?

ಫೆ.೨ರ ಎಲ್ಲ ಪತ್ರಿಕೆಗಳನ್ನು ಒಮ್ಮೆ ತಿರುವಿ ನೋಡಿ. ವಿಜಯ ಕರ್ನಾಟಕದಲ್ಲಿ ಮೊದಲ ಪುಟದಲ್ಲೇ ವರದಿ ಪ್ರಕಟವಾಗಿದೆ. ಬಹುಶಃ ವಿಜಯ ಕರ್ನಾಟಕ ಬದಲಾಗಿರುವುದಕ್ಕೆ ಇದು ಸಾಕ್ಷಿಯಿರಬಹುದು. ಕನ್ನಡಪ್ರಭದ ೮ನೇ ಪುಟದಲ್ಲಿ ಐದು ಸಾಲಿನ ವರದಿ ಬಂದಿದ್ದರೆ, ಉದಯವಾಣಿ, ಸಂಯುಕ್ತ ಕರ್ನಾಟಕಗಳಲ್ಲಿ ಸುದ್ದಿಯೇ ಇಲ್ಲ. ಪ್ರಜಾವಾಣಿ ಬೆಳಗಾವಿ ಮತ್ತು ಮುಂಬೈ ಡೇಟ್‌ಲೈನ್‌ಗಳಲ್ಲಿ ಎರಡು ಸಿಂಗಲ್ ಕಾಲಂ ಸುದ್ದಿಗಳು ಪ್ರಕಟಗೊಂಡಿವೆ. ಪಾಪ, ಅವರಿಗೆ ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಿರಲಿಲ್ಲ.

ಇನ್ನುಳಿದಂತೆ ಮುತಾಲಿಕ್ ಬಂಧನವನ್ನು ಅಗ್ರ ಸುದ್ದಿ ಮಾಡಿರುವುದು ವಾರ್ತಾಭಾರತಿ ಪತ್ರಿಕೆ ಮಾತ್ರ.

ಈ ಕುರಿತು ವಾರ್ತಾಭಾರತಿ ಅಭಿಮಾನಿಗಳ ಬಳಗ ಎಂಬ ಬ್ಲಾಗ್‌ನಲ್ಲಿ ಇನ್ನಷ್ಟು ವಿಶ್ಲೇಷಣೆಗಳಿವೆ. ಹಿಂದಿನ ಕೆಲವು ಘಟನೆಗಳ ಸಂದರ್ಭದಲ್ಲಿ ನಮ್ಮ ಪತ್ರಿಕೆಗಳು ಹೇಗೆ ವರ್ತಿಸಿದ್ದವು ಎಂಬುದರ ಕುರಿತೂ  ಈ ಬ್ಲಾಗ್‌ನಲ್ಲಿ ಬೆಳಕು ಚೆಲ್ಲಲಾಗಿದೆ. ಒಮ್ಮೆ ಆ ಬ್ಲಾಗ್ ನೋಡಿ ಬನ್ನಿ. ಈ ಬ್ಲಾಗ್ ಕೊಂಡಿಯನ್ನು ಕಳುಹಿಸಿದ ಗೆಳೆಯರಿಗೆ ಧನ್ಯವಾದ.

ಪ್ರೊ. ಬರಗೂರು ರಾಮಚಂದ್ರಪ್ಪ ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ, ಹಿಂದೆಲ್ಲ ಎಲ್ಲ ಮುಸ್ಲಿಮರು ಭಯೋತ್ಪಾದಕರಲ್ಲ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಲೇ ಎಲ್ಲ ಭಯೋತ್ಪಾದಕರು ಮುಸ್ಲಿಮರು ಎಂದು ವಾದ ಮಾಡುತ್ತಿದ್ದರು. ಸ್ವಾಮಿ ಆಸೀಮಾನಂದರ ತಪ್ಪೊಪ್ಪಿಗೆಯ ನಂತರ ಎಲ್ಲ ಭಯೋತ್ಪಾದಕರು ಮುಸ್ಲಿಮರಲ್ಲ ಎಂಬುದು ಸಾಬೀತಾಗಿದೆ ಎಂದು ಹೇಳಿದ್ದರು.

ಭಯೋತ್ಪಾದನಾ ಕೃತ್ಯ ನಡೆಸಿದ ಮುಸ್ಲಿಮರು ಮಾತ್ರ ಭಯೋತ್ಪಾದಕರು, ಇದೇ ಕೃತ್ಯ ಮಾಡಿದ ಹಿಂದೂಗಳಲ್ಲ ಎಂಬುದು ನಮ್ಮ ಪತ್ರಿಕೆಗಳ ನಿಲುವಾಗಿರಬಹುದು.

ನಮ್ಮ ಮೀಡಿಯಾಗಳು ಇಂಥ ಬೇಜವಾಬ್ದಾರಿ ನಿಲುವನ್ನು ಬದಲಿಸಿಕೊಳ್ಳಲು ಇದು ಸಕಾಲ.

7 comments:

  1. ಗೊತ್ತಿಲ್ಲದೆ ಕೇಳ್ತ ಇದ್ದೀನಿ,

    ೧.ಕೇರಳದ ಅಬ್ದುಲ್ ನಾಸಿರ್ ಮದನಿಯನ್ನ ಬಂಧಿಸುವಾಗ ನಡೆದ ನಾಟಕ ಮತ್ತು ಅವನ ಬಂಧನದ ಬಗ್ಗೆಯೂ ವಾರ್ತಭಾರತಿಯವರು ಹೀಗೆ ಪ್ರಾಮುಖ್ಯತೆ ಕೊಟ್ಟಿದ್ದರಾ?
    ೨. ಅಧ್ಯಾಪಕನ ಕೈ ಕತ್ತರಿಸಿದ ವಿಷಯಕ್ಕೆ ಇವರ ವರದಿ ಹೇಗಿತ್ತು?

    ತಿಳಿದುಕೊಳ್ಳುವ ಕೂತುಹಲವಷ್ಟೆ.

    ReplyDelete
  2. ಭಯೋತ್ಪಾದನೆ ಯಾರು ಮಾಡಿದರೂ ಭಯೋತ್ಪಾದನೆಯೇ.ಮುಸಲ್ಮಾನರಿಂದ ಭಯೋತ್ಪಾದನೆ ಎಷ್ಟೂ ದಶಕಗಳಿಂದ ಸಾಗಿದೆ. ಅದರ ಪರಿಣಾಮವೇ ಬಾಂಗ್ಲ್ಲದೇಶ ಮತ್ತು ಪಾಕಿಸ್ತಾನ. ಇಂದಿನ ಕಾಶ್ಮೀರದಲ್ಲೂ ಭಯೋತ್ಪಾದನೆಯ ಪರಿಣಾಮದಿಮ್ದಲೇ ಅಲ್ಲಿಂದ ಹಿಂದೂಗಳು ಸಂಪ್ಪೋರ್ಣ ವಾಗಿ ಭಾರತದ ಇತರೆಡೆಗೆ ವಲಸೆ ಬಂದಿದ್ದಾರೆ.
    ಮಳೆಗಾವ್ ಮತ್ತು ಇತರ ಕೆಲವೇ ಕಡೆ ಆಗಿದೆ ಎನ್ನಲಾದ ಭಯೋತ್ಪಾದನ ಪ್ರಕರಣಗಳು ಇಸ್ಲಾಂ ಭಯೋತ್ಪಾದನೆಯ ಪ್ರತಿಕ್ರಿಯಾಗಿರುತ್ತದೆ.

    ReplyDelete
  3. ನಿಮ್ಮ ಪ್ರಶ್ನೆಗೆ ಉತ್ತರ ಕೆಳಗಿನ ತಾಣಗಳಲ್ಲಿ ಸಿಗುತ್ತದೆ.
    ಬೇರೇನೂ ಹೇಳಬೇಕಾಗಿಲ್ಲ.
    http://vbnewsonline.com/Benguluru/34359/
    http://vbnewsonline.com/Karavali/39787/
    http://vbnewsonline.com/Benguluru/39290/
    http://vbnewsonline.com/Benguluru/36528/

    usman - Dubai

    ReplyDelete
  4. ರಾಕೇಶ್ ಶೆಟ್ಟಿಯವರ ಕುತೂಹಲವನ್ನು ತಣಿಸುವುದು ಅತ್ಯಗತ್ಯ ಎಂದು ಮನಗಂಡದ್ದರಿಂದ ಈ ಪ್ರತಿಕ್ರಿಯೆಯನ್ನು ಬರೆಯುತ್ತಿದ್ದೇನೆ. ನಾನು ಆರಂಭದಿಂದಲೂ ವಾರ್ತಾಭಾರತಿಯ ಓದುಗಳು. ಕೇರಳದ ಅಬ್ದುಲ್ ನಾಸರ್ ಮದನಿಯ ಬಂಧನವನ್ನು ‘ವಾರ್ತಾಭಾರತಿ’ ಲೀಡ್ ಸುದ್ದಿಯಾಗಿ ಪ್ರಕಟಿಸಿತ್ತು ಮಾತ್ರವಲ್ಲ, ಆತನ ಬಂಧನ, ಪೊಲೀಸರ ‘ಸಾಧನೆ’ ಇತ್ಯಾದಿಗಳಿಗಾಗಿ ಮುಖಪುಟದ ಅರ್ಧ ಭಾಗವನ್ನು ಮೀಸಲಿಟ್ಟಿತ್ತು.( 18 ಆಗಸ್ಟ್ 2010ರ ಸಂಚಿಕೆಯನ್ನು ನೋಡಬಹುದು) ಆತನನ್ನು ಬಂಧಿಸುವ ಫೋಟೋ ಕೂಡ ಮುದ್ರಣಗೊಂಡಿತ್ತು. ಇಷ್ಟೇ ಇಲ್ಲ, ಇದಾದ ಹಲವು ತಿಂಗಳ ಬಳಿಕ, ಮದನಿಯ ವಿರುದ್ಧದ ಸಾಕ್ಷಿ ‘ಪೊಲೀಸರ ಸೃಷ್ಟಿ’ ಎನ್ನುವ ವಿಶೇಷ ವರದಿ ತೆಹಲ್ಕಾದಲ್ಲಿ ಪ್ರಕಟವಾಯಿತು. ಆ ಸಾಕ್ಷಿಯೇ ಇದನ್ನು ತೆಹಲ್ಕಾದಲ್ಲಿ ವಿವರಿಸಿದ್ದ. ಈ ವರದಿಯ ವಿವರವನ್ನು ಪ್ರಕಟಿಸಿದ ಕನ್ನಡದ ಒಂದೇ ಒಂದು ಪತ್ರಿಕೆ ವಾರ್ತಾಭಾರತಿ. ಜೊತೆಗೆ, ತೆಹಲ್ಕಾ ವರದಿಗಾರ್ತಿಯ ವಿರುದ್ಧವೇ ಕರ್ನಾಟಕ ಪೊಲೀಸರು ಕೇಸು ದಾಖಲಿಸಿದಾಗ ಅದನ್ನು ಖಂಡಿಸಿ ಸುದ್ದಿಯನ್ನು ಪ್ರಕಟಿಸಿದ್ದೂ ವಾರ್ತಾಭಾರತಿಯೇ.ಇನ್ನು ಉಪನ್ಯಾಸಕನ ಕೈಕತ್ತರಿಸಿದ ವರದಿಯನ್ನು ಮಾತ್ರ ವಾರ್ತಾಭಾರತಿ ಪ್ರಕಟಿಸಿರುವುದಲ್ಲ, ತದನಂತರ ಆರೋಪಿಗಳ ಬಂಧನ, ನ್ಯಾಯಾಂಗ ಬಂಧನ ಎಲ್ಲವನ್ನೂ ಆದ್ಯತೆಕೊಟ್ಟು ವಾರ್ತಾಭಾರತಿ ಪ್ರಕಟಿಸಿತ್ತು. ಕೈ ಕತ್ತರಿಸಿದ ಪ್ರಕರಣ ಖಂಡಿಸಿ ಸುರೇಶ್ ಭಟ್ ಬಾಕ್ರಬೈಲ್ ಬರೆದ ಲೇಖನವನ್ನೂ ಪತ್ರಿಕೆ ತನ್ನ ‘ವಿಚಾರ ಭಾರತಿ’ ಪುಟದಲ್ಲಿ ಪ್ರಕಟಿಸಿದೆ. ರಾಕೇಶ್ ಶೆಟ್ಟಿಯವರ ಕುತೂಹಲ ಈ ಪ್ರತಿಕ್ರಿಯೆಯಿಂದ ತಣಿದಿರಬಹುದು ಎಂದು ಭಾವಿಸಿದ್ದೇನೆ.ಇದೇ ಸಂದರ್ಭದಲ್ಲಿ ನಂದಗೋಪಾಲ್ ಅವರ ಅನಿಸಿಕೆಗೂ ನನ್ನದೊಂದು ಪ್ರತಿಕ್ರಿಯೆ. ‘‘ಭಯೋತ್ಪಾದನೆ ಯಾರು ಮಾಡಿದರೂ ಭಯೋತ್ಪಾದನೆಯೇ....’’ ಎಂದು ಬರೆದಿದ್ದಾರೆ. ಇದು ನನ್ನ ಅಭಿಪ್ರಾಯವೂ ಹೌದು. ಮುಸ್ಲಿಂ ಹೆಸರಿನ ಉಗ್ರರ ಬಂಧನವಾದಾಕ್ಷಣ ಅದಕ್ಕೆ ರೆಕ್ಕೆ ಪುಕ್ಕ ಸೇರಿಸಿ ಬರೆದ ಪತ್ರಿಕೆಗಳು, ಯಾಕೆ ಹಿಂದೂ ಹೆಸರಿನ ಭಯೋತ್ಪಾದಕರ ಬಂಧನವಾದಾಗ ವೌನವಾದರು? ಇದಕ್ಕೆ ಕನ್ನಡದ ಉಳಿದೆಲ್ಲ ಪತ್ರಿಕೆಗಳು ಉತ್ತರಿಸಬೇಕಾಗಿದೆ.
    ಅರ್ಚನಾ ಪರಮೇಶ್ವರಯ್ಯ, ಬೆಂಗಳೂರು

    ReplyDelete
  5. ರಾಕೇಶ್ ಶೆಟ್ಟಿಯವರ ಕುತೂಹಲವನ್ನು ತಣಿಸುವುದು ಅತ್ಯಗತ್ಯ ಎಂದು ಮನಗಂಡದ್ದರಿಂದ ಈ ಪ್ರತಿಕ್ರಿಯೆಯನ್ನು ಬರೆಯುತ್ತಿದ್ದೇನೆ. ನಾನು ಆರಂಭದಿಂದಲೂ ವಾರ್ತಾಭಾರತಿಯ ಓದುಗಳು. ಕೇರಳದ ಅಬ್ದುಲ್ ನಾಸರ್ ಮದನಿಯ ಬಂಧನವನ್ನು ‘ವಾರ್ತಾಭಾರತಿ’ ಲೀಡ್ ಸುದ್ದಿಯಾಗಿ ಪ್ರಕಟಿಸಿತ್ತು ಮಾತ್ರವಲ್ಲ, ಆತನ ಬಂಧನ, ಪೊಲೀಸರ ‘ಸಾಧನೆ’ ಇತ್ಯಾದಿಗಳಿಗಾಗಿ ಮುಖಪುಟದ ಅರ್ಧ ಭಾಗವನ್ನು ಮೀಸಲಿಟ್ಟಿತ್ತು.( 18 ಆಗಸ್ಟ್ 2010ರ ಸಂಚಿಕೆಯನ್ನು ನೋಡಬಹುದು) ಆತನನ್ನು ಬಂಧಿಸುವ ಫೋಟೋ ಕೂಡ ಮುದ್ರಣಗೊಂಡಿತ್ತು. ಇಷ್ಟೇ ಇಲ್ಲ, ಇದಾದ ಹಲವು ತಿಂಗಳ ಬಳಿಕ, ಮದನಿಯ ವಿರುದ್ಧದ ಸಾಕ್ಷಿ ‘ಪೊಲೀಸರ ಸೃಷ್ಟಿ’ ಎನ್ನುವ ವಿಶೇಷ ವರದಿ ತೆಹಲ್ಕಾದಲ್ಲಿ ಪ್ರಕಟವಾಯಿತು. ಆ ಸಾಕ್ಷಿಯೇ ಇದನ್ನು ತೆಹಲ್ಕಾದಲ್ಲಿ ವಿವರಿಸಿದ್ದ. ಈ ವರದಿಯ ವಿವರವನ್ನು ಪ್ರಕಟಿಸಿದ ಕನ್ನಡದ ಒಂದೇ ಒಂದು ಪತ್ರಿಕೆ ವಾರ್ತಾಭಾರತಿ. ಜೊತೆಗೆ, ತೆಹಲ್ಕಾ ವರದಿಗಾರ್ತಿಯ ವಿರುದ್ಧವೇ ಕರ್ನಾಟಕ ಪೊಲೀಸರು ಕೇಸು ದಾಖಲಿಸಿದಾಗ ಅದನ್ನು ಖಂಡಿಸಿ ಸುದ್ದಿಯನ್ನು ಪ್ರಕಟಿಸಿದ್ದೂ ವಾರ್ತಾಭಾರತಿಯೇ.ಇನ್ನು ಉಪನ್ಯಾಸಕನ ಕೈಕತ್ತರಿಸಿದ ವರದಿಯನ್ನು ಮಾತ್ರ ವಾರ್ತಾಭಾರತಿ ಪ್ರಕಟಿಸಿರುವುದಲ್ಲ, ತದನಂತರ ಆರೋಪಿಗಳ ಬಂಧನ, ನ್ಯಾಯಾಂಗ ಬಂಧನ ಎಲ್ಲವನ್ನೂ ಆದ್ಯತೆಕೊಟ್ಟು ವಾರ್ತಾಭಾರತಿ ಪ್ರಕಟಿಸಿತ್ತು. ಕೈ ಕತ್ತರಿಸಿದ ಪ್ರಕರಣ ಖಂಡಿಸಿ ಸುರೇಶ್ ಭಟ್ ಬಾಕ್ರಬೈಲ್ ಬರೆದ ಲೇಖನವನ್ನೂ ಪತ್ರಿಕೆ ತನ್ನ ‘ವಿಚಾರ ಭಾರತಿ’ ಪುಟದಲ್ಲಿ ಪ್ರಕಟಿಸಿದೆ. ರಾಕೇಶ್ ಶೆಟ್ಟಿಯವರ ಕುತೂಹಲ ಈ ಪ್ರತಿಕ್ರಿಯೆಯಿಂದ ತಣಿದಿರಬಹುದು ಎಂದು ಭಾವಿಸಿದ್ದೇನೆ.ಇದೇ ಸಂದರ್ಭದಲ್ಲಿ ನಂದಗೋಪಾಲ್ ಅವರ ಅನಿಸಿಕೆಗೂ ನನ್ನದೊಂದು ಪ್ರತಿಕ್ರಿಯೆ. ‘‘ಭಯೋತ್ಪಾದನೆ ಯಾರು ಮಾಡಿದರೂ ಭಯೋತ್ಪಾದನೆಯೇ....’’ ಎಂದು ಬರೆದಿದ್ದಾರೆ. ಇದು ನನ್ನ ಅಭಿಪ್ರಾಯವೂ ಹೌದು. ಮುಸ್ಲಿಂ ಹೆಸರಿನ ಉಗ್ರರ ಬಂಧನವಾದಾಕ್ಷಣ ಅದಕ್ಕೆ ರೆಕ್ಕೆ ಪುಕ್ಕ ಸೇರಿಸಿ ಬರೆದ ಪತ್ರಿಕೆಗಳು, ಯಾಕೆ ಹಿಂದೂ ಹೆಸರಿನ ಭಯೋತ್ಪಾದಕರ ಬಂಧನವಾದಾಗ ವೌನವಾದರು? ಇದಕ್ಕೆ ಕನ್ನಡದ ಉಳಿದೆಲ್ಲ ಪತ್ರಿಕೆಗಳು ಉತ್ತರಿಸಬೇಕಾಗಿದೆ.
    ಅರ್ಚನಾ ಪರಮೇಶ್ವರಯ್ಯ, ಬೆಂಗಳೂರು

    ReplyDelete
  6. "ಇನ್ನು ಉಪನ್ಯಾಸಕನ ಕೈಕತ್ತರಿಸಿದ ವರದಿಯನ್ನು ಮಾತ್ರ ವಾರ್ತಾಭಾರತಿ ಪ್ರಕಟಿಸಿರುವುದಲ್ಲ", its enough to know about vb

    ReplyDelete
  7. ಹಿಂದೂ ಭಯೋತ್ಪಾದನೆ... ಮುಸ್ಲಿಂ ಭಯೋತ್ಪಾದನೆಗೆ ಒಂದು ಪ್ರತಿಕ್ರಿಯೇ ಅಷ್ಟೇ! ಮುಂದೊಂದು ದಿನ ಈ ರೀತಿ ಆಗೇ ಆಗುತ್ತೆ ಅಂತ ಊಹಿಸಿದ್ದೆ. ನಿಜ ಆಯ್ತು! ಮುಸ್ಲಿಂ ಭಯೋತ್ಪಾದನೆ ನಿಂತುಹೋದರೆ ಹಿಂದೂ ಭಯೋತ್ಪಾದನೆ ತಂತಾನೇ ನಿಂತುಹೋಗುತ್ತದೆ. Atleast ನಮ್ಮ ಸರ್ಕಾರಗಳು ಮುಸ್ಲಿಂ ಭಯೋತ್ಪಾದನೆಯನ್ನು ಕಟುವಾದ ಶಬ್ಧಗಳಲ್ಲಿ ಟೀಕಿಸಿ, ಭಯೋತ್ಪಾದಕರ ವಿರುದ್ಧ strong action ತಗೊಂಡಿದಿದ್ದರೆ.... ಇವತ್ತು ಈ ಪರಿಸ್ಥಿತಿ ಬರುತ್ತಿರಲಿಲ್ಲ. ಎಲ್ಲಿ ಮುಸ್ಲಿಂ ಭಯೋತ್ಪಾದಕರ ವಿರುದ್ಧ ಮಾತನಾಡಿದರೆ... ಅಲ್ಪ ಸಂಖ್ಯಾತರು ನೊಂದುಕೊಂಡು ಅವರ ಮತಗಳು ಕೈ ತಪ್ಪಿ ಹೋಗುತ್ತದೆ ಎಂದು ಹೆದರಿ ಸುಮ್ಮನಿದ್ದುದರ ಫಲ.... ಇಂದು ಹಿಂದೂ ಭಯೋತ್ಪಾದನೆ ರೂಪದಲ್ಲಿ ಕಾಣುತ್ತಿದ್ದೇವೆ. ಅದೂ ಸರಿ ಅಂತ ನಾನೂ ವಾದಿಸುವುದು ನನ್ನ ಉದ್ದೇಶವಲ್ಲ. ಸರ್ಕಾರ ಸುಮ್ಮನಿದ್ದಾಗ ಜನ ಕಾನೂನನ್ನು ಕೈಗೆತ್ತಿಕೊಳ್ಳುವುದು ಸಹಜ. ಅದಕ್ಕೆ ಬಲಿಯಾಗುತ್ತಿರುವುದು ಅಮಾಯಕರು ಅನ್ನುವುದು ಮಾತ್ರ ಅನ್ನುವುದು ನಿಜ.

    ReplyDelete