Thursday, April 7, 2011

ಕ್ಯಾಂಟೀನ್ ನೀರು ಕುಡಿದು ಪತ್ರಕರ್ತರು ಅಸ್ವಸ್ಥರಾದರು...


ಒಂದು ವಿಷಾದದ ಸಂಗತಿಯನ್ನು ನಿಮಗೆ ಹೇಳಲೇಬೇಕು. ಇದು ನಡೆದಿರುವುದು ಸುಮಾರು ೧೫ ದಿನಗಳ ಹಿಂದೆ. ಪ್ರಮುಖ ಪತ್ರಿಕಾಸಂಸ್ಥೆಯೊಂದರ ಕ್ಯಾಂಟೀನ್‌ನಲ್ಲಿ ಸಂಭವಿಸಿದ ಅವಘಡವಿದು.

ಕುಡಿವ ನೀರಿಗೆ ಕೊಚ್ಚೆ ನೀರು ಮಿಶ್ರಣಗೊಂಡಿತು. ಬಹುಶಃ ಕುಡಿಯುವ ನೀರಿನ ಪೈಪು ಒಡೆದು, ಒಳಚರಂಡಿಯ ನೀರು ಪೈಪಿನೊಳಗೆ ನುಗ್ಗಿರಬಹುದು. ಅದೇ ನೀರು ಕ್ಯಾಂಟೀನ್‌ಗೂ ಸರಬರಾಜಾಯಿತು. ಇದನ್ನು ಅರಿಯದ ಪತ್ರಕರ್ತರು ಎಂದಿನಂತೆ ನೀರು, ಮಜ್ಜಿಗೆ ಕುಡಿದರು. ಕೆಲವೇ ಕ್ಷಣಗಳಲ್ಲಿ ಅನೇಕರು ಆಸ್ಪತ್ರೆ ಸೇರಿದರು. ಕಚೇರಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರು ಕುಡಿವ ನೀರಿನಿಂದ ಈ ಸಮಸ್ಯೆ ಆಗಿಲ್ಲ ಎಂದು ತೋರಿಸಲು ತಾವೆ ಒಂದು ಲೋಟ ಮಜ್ಜಿಗೆ ಕುಡಿದರು. ಅವರೂ ಚಿಕಿತ್ಸೆ ಮೊರೆ ಹೋಗಬೇಕಾಯ್ತು.

ಹಿರಿಯ ಪತ್ರಕರ್ತರನೇಕರು ಆಸ್ಪತ್ರೆಗೆ ದಾಖಲಾಗಿ ಎರಡು ಮೂರು ದಿನಗಳ ಕಾಲ ಚಿಕಿತ್ಸೆ ಪಡೆಯಬೇಕಾಯಿತು. ಮತ್ತೆ ಕೆಲವರು ಹೊರರೋಗಿಗಳಾಗಿ ಚಿಕಿತ್ಸೆ ಪಡೆದರು. ವಯಸ್ಸಾದಂತೆ ರೋಗ ನಿರೋಧಕ ಶಕ್ತಿಯೂ ಕಡಿಮೆಯಾಗುತ್ತ ಹೋಗುತ್ತದೆ. ಹೀಗಾಗಿ ಈ ಕೊಳಕು ನೀರು ಕುಡಿದು ಸಮಸ್ಯೆ ಅನುಭವಿಸಿದವರ ಪೈಕಿ ಬಹುತೇಕರು ಹಿರಿಯ ಪತ್ರಕರ್ತರು.

ಇವತ್ತಿನ ಕಾಲಮಾನದಲ್ಲಿ ಕುಡಿಯುವ ನೀರು ಶುದ್ಧವಾಗಿಲ್ಲದೇ ಹೋದರೆ ಬರುವ ಖಾಯಿಲೆಗಳು ಒಂದೊಂದಲ್ಲ. ಹೀಗಾಗಿ ಮನೆಗಳಲ್ಲಿ ಸಹ ಎಂಥದ್ದೇ ನೀರಾದರೂ ಶುದ್ಧೀಕರಿಸಿ ಕುಡಿಯಲಾಗುತ್ತದೆ. ಇದಕ್ಕಾಗಿಯೇ ಪ್ಯೂರ್ ಇಟ್, ಅಕ್ವಾಗಾರ್ಡ್ ತರಹದ ವ್ಯವಸ್ಥೆಗಳನ್ನು ಎಲ್ಲರೂ ಇಟ್ಟುಕೊಂಡಿರುತ್ತಾರೆ. ಆದರೆ ಪ್ರಮುಖ ಪತ್ರಿಕಾ ಸಂಸ್ಥೆಯ ಕ್ಯಾಂಟೀನ್‌ನಲ್ಲಿ ಇಂಥ ವ್ಯವಸ್ಥೆ ಇರಲಿಲ್ಲವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಯಾವುದೇ ಕ್ಯಾಂಟೀನ್‌ನಲ್ಲಿ ಹೀಗೆ ಶುದ್ಧೀಕರಿಸದ ನೀರನ್ನು ನೀಡುವುದೇ ಅಪರಾಧ. ಆದರೆ ಇಲ್ಲಿ ಅವಘಡ ಸಂಭವಿಸಿಹೋಗಿದೆ. ಇಂಥದ್ದು ಮತ್ತೆ ಮತ್ತೆ ನಡೆಯಬಾರದು.

ಶಾಲೆಗಳಲ್ಲಿ, ಅಂಗನವಾಡಿಗಳಲ್ಲಿ ಹೀಗೆ ಕಲುಷಿತ ನೀರು, ಆಹಾರ ಸೇವಿಸಿ ಮಕ್ಕಳು ಅಸ್ವಸ್ಥರಾಗುವ ಸುದ್ದಿಯನ್ನು ಇದೇ ಪತ್ರಕರ್ತರು ದೊಡ್ಡ ಅಕ್ಷರಗಳಲ್ಲಿ ಪತ್ರಿಕೆಗಳಲ್ಲಿ ಬರೆಯುತ್ತಾರೆ, ಬರೆಯಬೇಕಾಗುತ್ತದೆ. ಆದರೆ ಪತ್ರಕರ್ತರೇ ಇಂಥ ಸಂದರ್ಭಕ್ಕೆ ಸಿಲುಕಿದರೆ ಅದು ನಮ್ಮ ಪತ್ರಿಕೆಗಳಲ್ಲಿ ಸಿಂಗಲ್ ಕಾಲಂ ಸುದ್ದಿಯೂ ಆಗುವುದಿಲ್ಲ.

ಸದ್ಯಕ್ಕೆ ಯಾರ ಜೀವಕ್ಕೂ ಅಪಾಯವಾಗಿಲ್ಲ. ಇಂಥ ಘಟನೆ ಮರುಕಳಿಸದಿರಲಿ, ಎಲ್ಲರೂ ಬೇಗ ಪೂರ್ಣ ಗುಣಮುಖರಾಗಲಿ ಎಂದು ಆಶಿಸೋಣ.

15 comments:

  1. ನಾಡಿನ ಜನತೆಯ ಕುಂದು ಕೊರತೆಗಳನ್ನು ಮಾಧ್ಯಮಗಳ ಮುಖಾಂತರ ಎತ್ತಿತೋರಿಸುವ ಪತ್ರಕರ್ತರು ತಮ್ಮ ಸಂಕಟಗಳನ್ನು ಜನತೆಗೆ ತಿಳಿಸುವುದಾದರೂ ಹೇಗೆ?

    -ಪ.ರಾಮಚಂದ್ರ,
    ರಾಸ್ ಲಫ್ಫಾನ್, ಕತಾರ್.

    ReplyDelete
  2. Is this worth writing? Tomorrow you will write about the taste of food in canteens. It looks you have no material to write. You are wasting everybodys time.

    ReplyDelete
  3. ಎಲ್ಲ ಪತ್ರಕರ್ತರೂ ಬೇಗ ಗುಣಮುಖರಾಗಲಿ...

    ReplyDelete
  4. This is ridiculous .. ಒಂದು ಪತ್ರಿಕೆಯೇ ತನ್ನ ಪತ್ರಕರ್ತರ ಮೂಲಭೂತ ಸೌಕರ್ಯದ, ನೈರ್ಮಲ್ಯದ ಬಗ್ಗೆ ಕಾಳಜಿವಹಿಸದಿರುವಾಗ, ಸಮಾಜದ ಹುಳುಕುಗಳ ಬಗ್ಗೆ ಪ್ರಕಟಿಸುವ ನೈತಿಕ ಹಕ್ಕು ಪತ್ರಿಕೆಗೆ ಇದೆಯೇ ?

    ReplyDelete
  5. ಅದು ಯಾವ ಪತ್ರಿಕೆ ಅಂತ ಯಾಕೆ ಹಾಕಿಲ್ಲ. ಅದ್ರ ಮರ್ಮವೇನು ಅಂತ ತಿಳಿಸ್ತೀರಾ?

    ReplyDelete
  6. ಪಂಚತಾರಾ ಹೋಟೆಲ್ಲಿನಲ್ಲಿ ಇಂಥ ವಿದ್ಯಮಾನ ಜರಗಿದರೂ ಅಚ್ಚರಿ ಪಡಬೇಕಿಲ್ಲ!

    ReplyDelete
  7. patrakartara sachiva samputavanne rachiso sampadakeeyakke asvasthara hesaru mattu patrike hesaru gotthagadiruvudu nijakku vishadaneeya

    ReplyDelete
  8. i like this type news in Sampadakeeya Blog. Sampadakeeya Blog Means "Journalist Mukavani".

    ReplyDelete
  9. howdu patrakartaru tavu buddi helalu maatra iddeve antha tilkomndavaru iddaare... hagagi.. inthaha samasyegalu...untagabahudu...illi eegina patrakartaradde tappu antha helalu saadhyavillaa.. adau hindininda beledukonda banda reethi antaanoo helbodu...alvaa.... (dayvittu kshamisi idu ellarigoo anvayavaguvudilla "KELAVARIGE" matraa)

    ReplyDelete
  10. ಈ ಹಿಂದೆ ವಿ.ಕ ಹೋಟೆಲ್ಗಳ ಅವ್ಯವಸ್ಥೆಯ ಬಗ್ಗೆ ವರದಿ ಮಾಡಿತ್ತು ಆದರೆ ಪತ್ರಿಕಾ ಕ್ಯಾಂಟಿನ್ನಲ್ಲಿಇರುವ ಅವ್ಯವಸ್ಥೆಗಳ ಬಗ್ಗೆ ಯಾಕೆ ಯಾವುದೇ ಪತ್ರಿಕೆಯಲ್ಲಿ ವರದಿಯಾಗುವುದಿಲ್ಲ?...............

    ReplyDelete
  11. ಒಂದು ಸಾದಾರಣ ಜೆಡಿ ಮಣ್ಣಿನ ಕ್ಯಾಂಡಲ್ ಇರುವ ವಾಟರ್ ಫಿಲ್ಟರ್ ಎಲ್ಲಾ ಬ್ಯಾಕ್ಟೀರಿಯಗಳನ್ನು ಸೋಸಿ ಶುದ್ದ ನೀರನ್ನು ಕೆಳಕ್ಕೆ ಬಿಡುತ್ತೆ. ಇದು ಸತ್ಯ.

    ReplyDelete
  12. Idu nanna Manvi

    Nimma Blog Bangalore ge matra simitravagidde. Dayavittu karnatakada yalla District gala Journalisam Bagge nimma baravanige irali. Plz

    ReplyDelete
  13. ಎಸ್ ಬಿ....April 8, 2011 at 2:33 PM

    ಪಾಪ "ಕುಂಬಾರನ ಮನೆ ಮಡಕೆ ತೂತು"......!!!! ಬೇರೆಯವರ ಸುದ್ದಿ,ಊರಿನ ಸುದ್ದಿ,ದೇಶ,ವಿದೇಶದ ಸುದ್ದಿಗಳನ್ನು (ಸುದ್ದಿ ಸತ್ಯವಾಗಿದ್ದರೂ ಸಹ...!!) ಎಷ್ಟು ರಸಭರಿತವಾಗಿ ಬರೆಯುತ್ತಿದ್ದರು....ಪಾಪ......!!! ಈಗೇನು ಮಾಡುವುದು.....!!!

    ReplyDelete
  14. alla swamy, patrike adre enu, yava ptrike anta heloke yake nigame hinjarike.

    ReplyDelete