Sunday, April 10, 2011

ವಿ ದ ಪೀಪಲ್ ಆಫ್ ಇಂಡಿಯಾ, ಮಾಡಬೇಕಾಗಿರುವುದೇನು?


ಜನ ಲೋಕಪಾಲ್ ಮಸೂದೆಗಾಗಿ ಒತ್ತಾಯಿಸಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಆಂದೋಲನಕ್ಕೆ ಮೊದಲ ಹಂತದ ಜಯ ಲಭಿಸಿದೆ. ಅಣ್ಣಾ ಹಜಾರೆ ದೇಶದ ಹೊಸ ಹೀರೋ ಆಗಿ ಆವಿರ್ಭವಿಸಿದ್ದಾರೆ. ದೇಶಾದ್ಯಂತ ಅಣ್ಣಾ ಹೋರಾಟಕ್ಕೆ ಧ್ವನಿಗೂಡಿಸಿದವರೆಲ್ಲ ಸಂಭ್ರಮಾಚರಿಸಿದ್ದಾರೆ. ಇದು ಹೊಸ ಆಶಾವಾದಕ್ಕೆ ಕಾರಣವಾಗಿದೆ. ಏಕಾಏಕಿ ಉದ್ಭವಿಸಿದ ಒಂದು ಜನಾಂದೋಲನ ಪ್ರಜಾಪ್ರಭುತ್ವದ ಸಾಧ್ಯತೆಗಳನ್ನು ವಿವರಿಸಿದೆ. ನಿಜ, ಜಡಗಟ್ಟಿದ್ದ ವ್ಯವಸ್ಥೆಯ ವಿರುದ್ಧ ಈ ಬೆಳವಣಿಗೆ ಒಂದು ಸಂಚಲನವನ್ನಂತೂ ಸೃಷ್ಟಿಸಿದೆ.

ಜನ ಲೋಕಪಾಲ್ ಮಸೂದೆ ಜಾರಿಗೆ ಬರಬಹುದು, ಅಲ್ಲಿಗೆ ಅಣ್ಣಾ ಹಜಾರೆಯವರ, ನಮ್ಮೆಲ್ಲರ ಹೋರಾಟವೂ ಯಶಸ್ವಿಯಾಗಬಹುದು. ಅಷ್ಟಕ್ಕೇ ಭ್ರಷ್ಟಾಚಾರ ಸಂಪೂರ್ಣ ನಾಶವಾಗಿಬಿಡುವುದೇ? ದಿನ ಬೆಳಗಾಗುವುದರೊಳಗೆ ಭ್ರಷ್ಟರೆಲ್ಲ ಜೈಲು ಸೇರಿಬಿಡುತ್ತಾರೆಯೇ? ನಮ್ಮಲ್ಲಿ ವರದಕ್ಷಿಣೆಯನ್ನು ತಡೆಗಟ್ಟುವುದಕ್ಕೆ ಪರಿಣಾಮಕಾರಿಯಾದ ಕಾನೂನುಗಳಿಗೆ, ಅಸ್ಪೃಶ್ಯತೆಯನ್ನು ಕಿತ್ತು ಹಾಕಲು ಗಂಭೀರವಾದ ಕಾಯ್ದೆಗಳಿವೆ. ಸಾಮಾಜಿಕ ಅನಿಷ್ಟಗಳ ವಿರುದ್ಧ ನಮ್ಮ ಕಾನೂನುಗಳು ಸಕ್ಷಮವಾಗೇ ಇದೆ. ಆದರೆ ವರದಕ್ಷಿಣೆ ನಿಂತಿದೆಯೇ? ಅಸ್ಪೃಶ್ಯತೆ ತೊಲಗಿದೆಯೇ?

ಯಾವ ಜನ ಲೋಕಪಾಲ್ ವ್ಯವಸ್ಥೆಗಾಗಿ ನಾವು ಒಕ್ಕೊರಲಿನಿಂದ ಕೂಗಿಡುತ್ತಿದ್ದೇವೆಯೋ, ಅದರ ಭಾಗಶಃ ಆಶಯಗಳನ್ನು ಈಡೇರಿಸುವ ಲೋಕಾಯುಕ್ತ ಸಂಸ್ಥೆ ಕರ್ನಾಟಕದಲ್ಲಿದೆ, ಕ್ರಿಯಾಶೀಲವಾಗಿದೆ. ಅದು ತನ್ನ ವ್ಯಾಪ್ತಿಯಲ್ಲಿ ಸಾಕಷ್ಟು ಕೆಲಸಗಳನ್ನೂ ಮಾಡಿದೆ. ಹಾಗಿದ್ದಾಗ್ಯೂ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂ.೧ ಪಟ್ಟ ಪಡೆದುಕೊಂಡಿದ್ದು ಹೇಗೆ?

ನಿಜ, ನಾವು ಸಿನಿಕರಾಗೋದು ಬೇಡ. ನಿರಾಶಾವಾದಿಗಳಂತೂ ಖಂಡಿತಾ ಆಗಬೇಕಿಲ್ಲ. ಆದರೆ ವಾಸ್ತವನ್ನು ಮರೆಯುವುದು ಮೂರ್ಖತನ. ಭ್ರಮೆಗಳಲ್ಲಿ ತೇಲಾಡುವುದು ನಮಗೆ ಅಂಟಿದ ಜಾಡ್ಯ. ಸಮೂಹ ಸನ್ನಿಗಳಿಗೆ ಒಳಗಾಗುವುದು ನಮ್ಮ ದೌರ್ಬಲ್ಯ. ಇವುಗಳನ್ನು ಮೀರಿ ಯೋಚಿಸಿದರೆ, ನಾವು ಮಾಡಬೇಕಾಗಿರುವ ಸಾಕಷ್ಟು ಕೆಲಸಗಳೂ ಕಣ್ಣಿಗೆ ಕಾಣಿಸಬಹುದು.

ಜೆಪಿ ಚಳವಳಿ ಹಾಗು ರೈತ ಸಂಘಟನೆ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಸಂದರ್ಭದ ದಿನಗಳನ್ನು ನೆನಪಿಸಿಕೊಳ್ಳೋಣ. ಅಂದು ಚಳವಳಿಯಲ್ಲಿ ತೊಡಗಿದ್ದವರು ವೈಯಕ್ತಿಕ ಚಾರಿತ್ರ್ಯವನ್ನು ಶುದ್ಧವಾಗಿಟ್ಟುಕೊಂಡಿದ್ದರು. ಬಹುತೇಕರು ಆಡಂಬರದ ಮದುವೆಗಳನ್ನು ಧಿಕ್ಕರಿಸಿದರು, ಸರಳವಾಗಿ ಮದುವೆಯಾದರು. ಯಾರೂ ಯಾರಿಗೂ ಯಾವ ಕಾರಣಕ್ಕೂ ಒಂದು ರೂಪಾಯಿ ಲಂಚ ಕೊಟ್ಟವರಲ್ಲ. ಅದ್ದೂರಿ ಮದುವೆಗಳು ತಮ್ಮ ಸಂಬಂಧಿಕರದ್ದೇ ನಡೆದರೂ ಅಲ್ಲಿಗೆ ಹೋದವರಲ್ಲ. ಇದೆಲ್ಲವೂ ಚಳವಳಿಗಾರರಲ್ಲಿ ಒಂದು ನೈತಿಕ ಶಕ್ತಿಯನ್ನು ತಂದುಕೊಟ್ಟಿತ್ತು. ಹೀಗಾಗಿಯೇ ರೈತ ಚಳವಳಿಗಾರರು ಭ್ರಷ್ಟ ಅಧಿಕಾರಿಗಳನ್ನು ತಮ್ಮದೇ ಆದ ಶೈಲಿಯಲ್ಲಿ ಎದುರಿಸುತ್ತಿದ್ದರು. ಪ್ರೊ.ಎಂ.ಡಿ.ಎನ್. ಅವರಂತೂ ಭ್ರಷ್ಟರ ಕೆನ್ನೆಗೆ ಬಾರಿಸುತ್ತಿದ್ದ ಘಟನೆಗಳನ್ನೂ ಈ ಹಿನ್ನೆಲೆಯಲ್ಲೇ ನಾವು ಅರ್ಥೈಸಿಕೊಳ್ಳಬೇಕು.

ಚಳವಳಿಯ ನಿಜವಾದ ಶಕ್ತಿಯೇ ಚಳವಳಿಗಾರರ ನೈತಿಕತೆ. ಅದು ಉಳಿಯದ ಹೊರತು ಚಳವಳಿಯೂ ಉಳಿಯದು. ಹಾಗಿದ್ದಲ್ಲಿ ವಿ ದ ಕಾಮನ್ ಪೀಪಲ್ ಆಫ್ ಇಂಡಿಯಾ ಏನು ಮಾಡಬಹುದು? ಅಣ್ಣಾ ಹಜಾರೆಯವರ ಚಳವಳಿಯನ್ನು ಜೀವಂತವಾಗಿ ಉಳಿಸಿಕೊಳ್ಳಲೇಬೇಕೆಂದಿದ್ದರೆ ಚಳವಳಿಗಾರರು ಇಟ್ಟುಕೊಳ್ಳಲೇಬೇಕಾದ ಕನಿಷ್ಠ ಸಾಮಾಜಿಕ ಪ್ರಜ್ಞೆಯಾದರೂ ಏನು? ಕೆಲವನ್ನು ನಾವು ಇಲ್ಲಿ ಪಟ್ಟಿ ಮಾಡುತ್ತಿದ್ದೇವೆ, ನಮಗೆ ಚೆನ್ನಾಗಿ ಗೊತ್ತು, ನಮ್ಮ ಓದುಗರು ಇದನ್ನು ವಿಸ್ತರಿಸುತ್ತಾರೆ.

೧. ಭ್ರಷ್ಟಾಚಾರದ ವಿರುದ್ಧ ಜನ ಲೋಕಪಾಲ್ ಬರಬೇಕೆಂದು ಆಗ್ರಹಿಸುವ ನಾವು ನಮ್ಮ ಎದೆಯ ಒಳಗಿನ ಲೋಕಪಾಲರನ್ನು ಮೊದಲು ಜಾಗೃತಗೊಳಿಸಬೇಕು. ಪ್ರತ್ಯಕ್ಷ ಹಾಗು ಪರೋಕ್ಷ ರೂಪದಲ್ಲಿ ಲಂಚವನ್ನು ಪಡೆಯುವುದಾಗಲೀ, ಕೊಡುವುದಾಗಲೀ ಮಾಡುವುದಿಲ್ಲವೆಂದು ಮೊದಲು ಪ್ರತಿಜ್ಞೆ ಮಾಡಬೇಕು. ಸಂದರ್ಭ ಎದುರಾದಾಗ ಒಬ್ಬನೇ/ಒಬ್ಬಳೇ ಆದರೂ ಸಹ ಭ್ರಷ್ಟಾಚಾರದ ವಿರುದ್ಧ ಪ್ರತಿಭಟಿಸುವ ಧೈರ್ಯವನ್ನು ನಾವು ತೋರಬೇಕು. ಸಣ್ಣ ಪುಟ್ಟ ರಿಸ್ಕ್‌ಗಳನ್ನು ತೆಗೆದುಕೊಳ್ಳುವುದನ್ನು ನಾವು ಅಭ್ಯಾಸ ಮಾಡಿಕೊಳ್ಳಬೇಕು.

೨. ನಾವು ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿದ್ದೇವೆ. ಇದು ಸದ್ಯದ ಸ್ಥಿತಿಯಲ್ಲಿ ಇರುವ ಶ್ರೇಷ್ಠ ವಿಧಾನ. ನಾವು ಪ್ರಜಾಪ್ರಭುತ್ವದ ಬಲವರ್ಧನೆಯ ಸಾಧ್ಯತೆಗಳನ್ನು ವಿಸ್ತರಿಸುವ ಕೆಲಸವನ್ನಷ್ಟೇ ಮಾಡಬೇಕಿದೆ. ಹಾಗಿರುವಾಗ ನಾವು ನಮ್ಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಸಂದರ್ಭಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ನಮ್ಮ ರಾಜಕಾರಣಿಗಳನ್ನು ಮೂದಲಿಸುವ, ನಿಂದಿಸುವ ಮಧ್ಯಮ, ಮೇಲ್‌ಮಧ್ಯಮ, ಶ್ರೀಮಂತ ಜನವರ್ಗ ಮತದಾನದ ಸಂದರ್ಭದಲ್ಲಿ ಮನೆ ಬಿಟ್ಟು ಹೊರಬರುವುದಿಲ್ಲ. ಮತದಾನ ಮಾಡದೇ ಇರುವುದಕ್ಕೆ ಅದೇ ಚರ್ವಿತ ಚರ್ವಣ ಕಾರಣಗಳನ್ನು ಕೊಡುತ್ತೇವೆ. ಇದು ಬದಲಾಗಬೇಕು. ಪ್ರಜಾಪ್ರಭುತ್ವದ ಬಹುಮುಖ್ಯ ಸಾಧನವಾದ ಚುನಾವಣೆಗಳನ್ನು ನಾವು ಬಳಸಿಕೊಳ್ಳಬೇಕು. ಹಣಕ್ಕಾಗಿ, ಆಮಿಷಗಳಿಗಾಗಿ ಬಲಿಯಾಗದೆ ಮತ ಚಲಾಯಿಸಬೇಕು, ಭ್ರಷ್ಟಾಚಾರವಿಲ್ಲದಂತೆ ಚುನಾವಣೆ ನಡೆಯುವ ಪರಿಸ್ಥಿತಿಯನ್ನು ಸೃಷ್ಟಿಸಬೇಕು. ಹಾಗಾದಾಗ ಪ್ರಾಮಾಣಿಕರೂ ರಾಜಕಾರಣದಲ್ಲಿ ಹೆಚ್ಚುಹೆಚ್ಚು ಪಾಲ್ಗೊಳ್ಳಲು ಸಾಧ್ಯವಾಗುತ್ತದೆ.

೩. ಭ್ರಷ್ಟಾಚಾರ ಈಗ ಮೊದಲಿನ ಸ್ವರೂಪದಲ್ಲಿ ಇಲ್ಲ. ಬಹುತೇಕ ಸಂದರ್ಭಗಳಲ್ಲಿ ಕೊಡುವವರು ಪಡೆದುಕೊಳ್ಳುವವರಷ್ಟೇ ನೀಚರಾಗಿದ್ದಾರೆ. ಕೊಡುವವರಿಗೆ ಕೊಡುವುದಕ್ಕೆ ಕಾರಣವೂ ಇರುತ್ತದೆ. ನಿಯಮ ಬಾಹಿರವಾಗಿ ಕೆಲಸ ಆಗಬೇಕೆಂದು ಬಯಸುವವನು ಲಂಚ ಕೊಡುತ್ತಾನೆ. ಆತ ಲಂಚ ಪಡೆಯಲು ಹಿಂಜರಿಯುವವನನ್ನೂ ಭ್ರಷ್ಟನನ್ನಾಗಿಸುತ್ತಾನೆ. ಹೀಗಾಗಿ ಲಂಚ ಪಡೆಯುವುದು ಎಷ್ಟು ಅನೈತಿಕವೋ, ಕೊಡುವುದೂ ಅನೈತಿಕ ಎಂಬುದನ್ನು ನಾವು ಸ್ಪಷ್ಟಪಡಿಸಿಕೊಳ್ಳಬೇಕು.

೪. ಭ್ರಷ್ಟಾಚಾರಕ್ಕೆ ಪ್ರೇರಣೆ ನೀಡುವ ನಮ್ಮ ಕೊಳ್ಳುಬಾಕತನವನ್ನು ಈಗಲಾದರೂ ಕಡಿಮೆ ಮಾಡಿಕೊಳ್ಳುವತ್ತ ಗಮನ ಹರಿಸಬೇಕು. ದೊಡ್ಡ ದೊಡ್ಡ ಶಾಪಿಂಗ್ ಮಾಲ್‌ಗಳ ಆಕರ್ಷಣೆಗಳಿಂದ ಬಚಾವಾಗಬೇಕು. ಅದ್ದೂರಿ ಮದುವೆ-ಮುಂಜಿ ಇತ್ಯಾದಿ ಕಾರ್ಯಕ್ರಮಗಳನ್ನು ನಿಲ್ಲಿಸಬೇಕು, ಅಂಥವುಗಳಿಗೆ ಹೋಗುವುದಿಲ್ಲವೆಂದು ಪ್ರತಿಜ್ಞೆ ಮಾಡಬೇಕು.

೫. ಭ್ರಷ್ಟಾಚಾರವನ್ನು ಇಂದು ಜಾತೀಯತೆ ಪೋಷಿಸುತ್ತಿದೆ. ಎರಡರ ಮಿಶ್ರಣ ಭೀಕರವಾದ ಸಾಮಾಜಿಕ ಅವನತಿಗೆ ಕಾರಣವಾಗುತ್ತಿದೆ. ಮುಖ್ಯಮಂತ್ರಿ, ಮಂತ್ರಿ ನಮ್ಮ ಜಾತಿಯವರೆಂಬ ಕಾರಣಕ್ಕೆ ಪೋಷಿಸುವ, ಸಮರ್ಥಿಸುವ, ಬೆಂಬಲಿಸುವ ಧೋರಣೆಯನ್ನು ನಾವು ಮೊದಲು ಕೈಬಿಡಬೇಕು. ಎಲ್ರೂ ತಿಂದಿಲ್ವೇನ್ರೀ, ನಮ್ಮವನಲ್ವಾ, ಇವನೂ ತಿನ್ನಲಿ ಬಿಡಿ ಎಂದು ಸಾಮಾನ್ಯ ಜನರೂ ವಿಕೃತ ಜಾತೀಯತೆ ಪ್ರದರ್ಶಿಸುತ್ತಿರುವುದನ್ನು ನಾವು ಗಮನಿಸಿದ್ದೇವೆ. ಇದು ಹೋಗಬೇಕು. ನಾವು ಕಟ್ಟಿಕೊಂಡಿರುವ ಅನೈತಿಕ ಜಾತಿಕೂಟಗಳನ್ನು ವಿಸರ್ಜಿಸಬೇಕು, ಅವುಗಳನ್ನು ಜಾತ್ಯತೀತ ವೇದಿಕೆಗಳನ್ನಾಗಿ ಪುನರ್ ರೂಪಿಸಬೇಕು. ಭ್ರಷ್ಟರೆಂದು ಗೊತ್ತಿದ್ದೂ ತಮ್ಮ ಜಾತಿಯವನನ್ನು ಮಂತ್ರಿ, ಮುಖ್ಯಮಂತ್ರಿ ಮಾಡಲು ಯತ್ನಿಸುವ, ಅವರ ಸ್ಥಾನಮಾನಗಳನ್ನು ಉಳಿಸಲು ಕುತಂತ್ರಗಳನ್ನು ನಡೆಸುವ ಎಲ್ಲ ಧರ್ಮಗಳ ಧಾರ್ಮಿಕ ಮುಖಂಡರನ್ನು, ಮಠಾಧೀಶರನ್ನು, ಬೊಗಳೆ ಸ್ವಾಮೀಜಿಗಳನ್ನು ಧಿಕ್ಕರಿಸಬೇಕು.

೬. ನಾವು, ನಮ್ಮ ಮಕ್ಕಳು ವರದಕ್ಷಿಣೆ ಪಡೆಯುವುದಿಲ್ಲ, ಮತ್ತು ಕೊಡುವುದಿಲ್ಲ ಎಂದು ತೀರ್ಮಾನಕ್ಕೆ ಬರಬೇಕು. ವರದಕ್ಷಿಣೆ ಪಡೆಯುವುದು ಅತ್ಯಂತ ಹೀನ ಆಚರಣೆ ಎಂದು ಪಡೆಯುವವರಿಗೇ ಅನ್ನಿಸುವಂತೆ ಮಾಡುವ ಪ್ರಜ್ಞೆಯನ್ನು ನಾವು ಮೂಡಿಸಬೇಕು. ಇದು ರಾತ್ರೋರಾತ್ರಿ ಆಗುವ ಕೆಲಸವೇನಲ್ಲ, ಆದರೆ ಅದು ಎಂದಾದರೂ ಆಗಲೇಬೇಕು.

೭. ದೇಶಭಕ್ತಿ ಎಂದರೆ ಭಾರತ ತಂಡ ಕ್ರಿಕೆಟ್‌ನಲ್ಲಿ ಗೆದ್ದಾಗ ಆಚರಿಸುವಂಥದ್ದಲ್ಲ. ದೇಶವನ್ನು ಪರಿಪೂರ್ಣವಾದ ಅರ್ಥದಲ್ಲಿ ಪುನರ್‌ನಿರ್ಮಿಸುವ ಹೊಣೆಗಾರಿಕೆ ಎಲ್ಲರಿಗೂ ಇರುತ್ತದೆ. ನಮ್ಮ ಸಹ ದೇಶವಾಸಿಯೊಬ್ಬ ಸಮಸ್ಯೆಗೆ ಸಿಲುಕಿದಾಗ ಆತನಿಗೆ ಸಹಕರಿಸುವುದು ನಿಜವಾದ ದೇಶಸೇವೆ. ವೃದ್ಧ ಹೋರಾಟಗಾರ ಅಣ್ಣಾ ಹಜಾರೆ ಉಪವಾಸಕ್ಕೆ ಕುಳಿತಾಗ ನಮಗೆ ಆದ ತಳಮಳವೇ ತಿನ್ನಲು ಏನೇನೂ ಇಲ್ಲದೇ ಬದುಕುತ್ತಿರುವ, ಅನಿವಾರ್ಯ ಉಪವಾಸಕ್ಕೆ ಒಳಗಾಗಿರುವನ್ನು ನೆನೆದಾಗಲೂ ಆಗಬೇಕು. ದೇಶದ ಬಹುಪಾಲು ಜನರು ಉಪವಾಸವಿರುವುದನ್ನು ನಾವು ನೋಡಿಯೂ ನೋಡದಂತಿದ್ದರೆ ನಮ್ಮದು ಯಾವ ದೇಶಭಕ್ತಿ? ದೇಶದ ಬಹುಪಾಲು ದಲಿತರು ಇನ್ನೂ ಅಸ್ಪೃಶ್ಯತೆಯ ನರಕದಲ್ಲಿ, ಪ್ರತ್ಯೇಕ ಕಾಲನಿಗಳಲ್ಲಿ, ಮುಟ್ಟಿಸಿಕೊಳ್ಳದಂತೆ, ಯಾರೂ ಕಣ್ಣಿಗೂ ಬೀಳಲಾಗದಂತೆ ಬದುಕುತ್ತಿದ್ದರೆ, ಅದನ್ನು ನೋಡಿ ನಮ್ಮಲ್ಲಿ ಯಾವ ಭಾವನೆಯೂ ಹುಟ್ಟದಿದ್ದರೆ ನಮ್ಮದು ಎಂಥ ದೇಶಭಕ್ತಿ? ಅಂಥ ದೇಶಭಕ್ತಿಗೆ ಯಾವ ಅರ್ಥವೂ ಇಲ್ಲ. ಪರಿಶುದ್ಧ ಸಮಾಜವನ್ನು ಕಟ್ಟಬಯಸುವ ನಾವು ಎಲ್ಲ ರೀತಿಯ ಸಾಮಾಜಿಕ ಸಮಸ್ಯೆಗಳಿಗೂ ಸ್ಪಂದಿಸಬೇಕು. ಭ್ರಷ್ಟಾಚಾರವನ್ನು, ಕಪ್ಪುಹಣವನ್ನು ವಿರೋಧಿಸುವುದೆಂದರೆ ಸಂಪತ್ತಿನ ಹಂಚಿಕೆಯನ್ನು ಬೆಂಬಲಿಸುವುದು. ದುಡಿಮೆ ಮತ್ತು ದುಡಿಮೆಯ ವ್ಯಾಖ್ಯೆಗಳನ್ನು ಬದಲಿಸುವುದು. ದೈಹಿಕ ಶ್ರಮದ ದುಡಿಮೆಗೂ ಸರಿಯಾದ ಪ್ರತಿಫಲ ದೊರೆಯುವಂತೆ ನೋಡಿಕೊಳ್ಳುವುದು. ಆ ಕಡೆ ನಮ್ಮ ಗಮನಹರಿಸಬೇಕಾಗುತ್ತದೆ.

೮. ಕಡೆಯದಾಗಿ ನಮ್ಮ ಮೀಡಿಯಾಗಳು. ಬಹುತೇಕ ಮೀಡಿಯಾಗಳು ಕಪಟಿಯಾಗಿವೆ. ಜನರ ದೌರ್ಬಲ್ಯಗಳನ್ನು ಬಂಡವಾಳ ಮಾಡಿಕೊಂಡಿವೆ. ಅವುಗಳು ನಮ್ಮ ಭಾವನೆಗಳನ್ನು, ನೋವನ್ನು, ತವಕ-ತಲ್ಲಣಗಳನ್ನು ತಮ್ಮ ಮಾರಾಟದ ಸರಕನ್ನಾಗಿ ಮಾಡಿಕೊಂಡಿವೆ. ಮೀಡಿಯಾಗಳು ಹಾಗು ಎಲ್ಲ ಖಾಸಗಿ ಸಂಸ್ಥೆಗಳನ್ನೂ ಸಹ ಜನ ಲೋಕಪಾಲ್‌ನಂಥ ಸಂಸ್ಥೆಯ ಅಧೀನಕ್ಕೆ ತರುವ ಕೆಲಸವೂ ಆಗಬೇಕಿದೆ.

ನಾವು ಕನಿಷ್ಠ ಮಟ್ಟದ ನೈತಿಕ ಸಂಹಿತೆಗಳನ್ನು ಅಳವಡಿಸಿಕೊಳ್ಳದೇ ಹೋದಲ್ಲಿ, ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಜೈ ಅನ್ನುವ ನಮ್ಮ ಕೈಗಳಲ್ಲಿ ಯಾವ ಶಕ್ತಿಯೂ ಇರುವುದಿಲ್ಲ. ಹಾಗೆ ಮಾಡುವುದು ಆತ್ಮಘಾತಕತನ. ಯಾರೂ ಸಹ ತಮ್ಮನ್ನು ತಾವು ಭ್ರಷ್ಟಾಚಾರಿಗಳೆಂದು ಕರೆದುಕೊಳ್ಳುವುದಿಲ್ಲ. ಆದ್ದರಿಂದಲೇ ಎಲ್ಲರೂ ಭ್ರಷ್ಟಾಚಾರಕ್ಕೆ ಧಿಕ್ಕಾರ ಎಂದು ಕೂಗುತ್ತಿದ್ದಾರೆ. ಕನಿಷ್ಠ ಹೀಗೆ ಕೂಗಿದ ಮಾತ್ರಕ್ಕಾದರೂ ಭ್ರಷ್ಟಾಚಾರಿಗಳು ಬದಲಾದರೆ ಅದು ಒಂದು ಪವಾಡವಾಗುತ್ತದೆ. ಇಂಥ ಪವಾಡಗಳಿಗೆ ಕಾಯುವುದು ಮೂರ್ಖತನ.

ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ.

ಕೊನೆಯ ಮಾತು: ಬ್ರಹ್ಮಾಂಡ ಶರ್ಮನೂ ಸೇರಿದಂತೆ ಎಲ್ಲ ಟಿವಿ ಜ್ಯೋತಿಷಿಗಳ ವಿರುದ್ಧದ ನಮ್ಮ ಪ್ರತಿಭಟನೆಯನ್ನು ದಾಖಲಿಸಬೇಕಿದೆ. ಅನೇಕ ಉಪಯುಕ್ತ ಸಲಹೆಗಳು ಬಂದಿವೆ. ಈ ವಾರ ಆ ಕೆಲಸವನ್ನು ಗಂಭೀರವಾಗಿ ಕೈಗೆತ್ತಿಕೊಳ್ಳೋಣವೆಂದುಕೊಂಡಿದ್ದೇವೆ. ನಮ್ಮ ಓದುಗರ ಪೈಕಿ ಕನಿಷ್ಠ ಶೇ.೫೦ ರಷ್ಟು ಮಂದಿಯಾದರೂ ಈ ಪುಟ್ಟ ಅಭಿಯಾನವನ್ನು ಬೆಂಬಲಿಸಿದರೆ ಏನಾದರೂ ಬದಲಾವಣೆ ತರಬಹುದೇನೋ? ಜೊತೆಗಿರುತ್ತೀರಿ ತಾನೆ?

25 comments:

  1. Well,to support we all ready, but the real problem is we all are facing to convince others in this regard:-(...its well known fact that dowry act has been prohibited long before,why the people are still practising it?? if this act is aboloshed completely we are half a way through anti corruption!! Being an engineering student i must not say this, but it is actually happening around me. despite my free suggestion nobody cares to bother about it, every girl who is educated and who is independent still keeps mum to have a better well settled half, the tragedy starts here,if a guy is settled in abroad with lumsum salary no parents would bother to pay heavy dowry and no girl would miss the chance to marry him!! if at all if the guy is in a central govenament, he will be next to winning horse!! despite having technical skills, modernised thoughts,broad minded,our generation has got to fight against it, its in evry single home!!not being noticed!! that's it!! all these days i was in an illusion that the dowry act is completely gone,but after getting into final year seeing some of my friends getting engaged and married i had a bitter truth to digest that this act is still in pracise even in 2011!!i am failing to convince my friends:-(

    ReplyDelete
  2. ಸಂದರ್ಭ ಎದುರಾದಾಗ ಒಬ್ಬನೇ/ಒಬ್ಬಳೇ ಆದರೂ ಸಹ ಭ್ರಷ್ಟಾಚಾರದ ವಿರುದ್ಧ ಪ್ರತಿಭಟಿಸುವ ಧೈರ್ಯವನ್ನು ನಾವು ತೋರಬೇಕು. ಸಣ್ಣ ಪುಟ್ಟ ರಿಸ್ಕ್‌ಗಳನ್ನು ತೆಗೆದುಕೊಳ್ಳುವುದನ್ನು ನಾವು ಅಭ್ಯಾಸ ಮಾಡಿಕೊಳ್ಳಬೇಕು. Why dont you follow this? You are writing articles against corruption. But why are you hiding yourself? You dont have guts to face the consequences? Everything seems to be easy to write, but difficult to follow it. The one who follows it is a real hero. What do u say for it ?

    ReplyDelete
  3. ಅವಿನಾಶ ಕನ್ನಮ್ಮನವರ್April 10, 2011 at 8:46 PM

    ತಮ್ಮ ಹಿ೦ದಿನ ಮತ್ತು ಈಗಿನ ಎರಡು ಲೆಖನಗಳು ನಮ್ಮ ಮನಸನ್ನು ತಾಕಿವೆ, ಇಷ್ಟು ದಿನ ಭ್ರಷ್ಟ ವ್ಯವಸ್ಥೆಯಲ್ಲಿ ನಾನು ಪಾಲುದಾರನಗಿದ್ದೆ, ಇನ್ನು ಮು೦ದೆ ಅದು ಎಷ್ಟು ಕಷ್ಟವಾದರು ಸರಿ ನಾನು ಒ೦ದು ರೂಪಾಯಿಕೂಡ ಲ೦ಚವನ್ನು ಕೊಡುವುದಿಲ್ಲ, ವರದಕ್ಷಿಣೆ ತೆಗೆದುಕೊಳ್ಳುವುದಿಲ್ಲವೆ೦ದು ಪ್ರತಿಜ್ಗ್ನೆ ಬಹಳಾ ಹಿ೦ದೆಯೆ ಮಾಡಿರುವೆ,,
    ಜನಪರವಾದ ನಿಮ್ಮ ಎಲ್ಲಾ ಹೋರಾಟಗಳಿಗೆ ನಮ್ಮ ಗೆಳೆಯರ ಬಳಗದ ಬೆ೦ಬಲ ಇದ್ದೇ ಇದೆ!

    ReplyDelete
  4. ಅಣ್ಣಾ ಹಜಾರೆ ಚಳುವಳಿ ಆರಂಭಿಸಿದಾಗಿನಿಂದ ಪ್ರತಿ ಬೆಳವಣಿಗೆಯನ್ನೂ ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿದ್ದೇನೆ. ಕೊನೆಗೆ ಸರ್ಕಾರ ಮಣಿದಾಗ ‘ಜೈ ಹೋ…’ ಎಂದು ಕೂಗಲಾಗಲೀ, “ ಹಮ್ ಹೋಂಗೆ ಕಾಮ್ ಯಾಬ್…’ ಎಂದು ಹಾಡಲಾಗಲೀ ನನ್ನಿಂದ ಸಾಧ್ಯವಾಗಲಿಲ್ಲ. ಕಾರಣವನ್ನು ನಿಮ್ಮ ಲೇಖನದ ಎರಡನೇ ಪ್ಯಾರದಲ್ಲಿ ಮನಮುಟ್ಟುವಂತೆ ನೀವೇ ವಿವರಿಸಿದ್ದೀರಿ. ಅಣ್ಣಾ ಹಜಾರೆ ಹೋರಾಟ ಭ್ರಷ್ಟ ವ್ಯವಸ್ಥೆ ಕೊಡಲಿಯೇಟು ನೀಡಿದೆ ಎಂದು ಕೆಲವರು ಭಾವಿಸಿದಂತಿದೆ. ಇದು ಖಂಡಿತಾ ತಪ್ಪು. ಜನ ಲೋಕಪಾಲ ಮಸೂದೆ ಜಾರಿಯಾದರೂ ಭ್ರಷ್ಟಾಚಾರ ಕೊನೆಗೊಳ್ಳುವುದಿಲ್ಲ. ಹೆಚ್ಚೆಂದರೆ ಅದು ಬೇರೆ ರೂಪ ಪಡೆಯಬಹುದು. ಅಮೆರಿಕದ ಚುನಾವಣಾ ವ್ಯವಸ್ಥೆಯಲ್ಲಾದ ಬದಲಾವಣೆಯಂತೆ!
    ಭ್ರಷ್ಟಾಚಾರ ಮತ್ತು ವೈಯುಕ್ತಿಕ ಪ್ರಮಾಣಿಕತೆಯ ಬಗ್ಗೆ ಬರೆದಿದ್ದೀರಿ, ಇಂತಹ ಪ್ರಮಾಣಿಕರಾಗಿ ನಾವೆಲ್ಲರೂ ಬದುಕಬೇಕೆಂದರೆ, ಭ್ರಷ್ಟಾಚಾರ ತೊಲಗಬೇಕೆಂದರೆ ಮೊದಲು ನಮ್ಮ ದೇಶದಲ್ಲಿನ ಸಂಪನ್ಮೂಲ ಹಂಚಿಕೆ ನ್ಯಾಯಸಮ್ಮತವಾಗಿ ನಡೆಯಬೇಕು. (ಇಲ್ಲಿ ಸಂಪನ್ಮೂಲಕ್ಕೆ ವಿಶಾಲ ಅರ್ಥವಿದೆ). ಬೇರಿನಿಂದ ಬಂದ ಕಾಯಿಲೆಗೆ ಕಾಂಡಕ್ಕೆ ಔಷಧ ಹೊಡೆದು ಗುಣಪಡಿಸಲಾಗದು. ಹೆಚ್ಚೆಂದರೆ ಆಗಾಗ ಔಷಧ ಸುರಿದು ನಿಯಂತ್ರಣದಲ್ಲಿಡಬಹುದು.
    ನಮ್ಮ ಸಂವಿಧಾನದ ಆಶಯ ಕೂಡ ಸಮಾನತೆಯೇ ಆಗಿದೆ. ಆದರೆ ಇಂದು ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ‘ಭಾರಿ’ ಬೆಂಬಲ ನೀಡಿರುವ ಮಾಧ್ಯಮಗಳು ಇದೆಲ್ಲವನ್ನೂ ಮರೆತಿವೆ. ಲಂಚ ಹಾಗೂ ಒತ್ತಡದ ಮೂಲಕವೇ ಸರ್ಕಾರ ತನ್ನಪರವಾಗಿರುವಂತೆ ನೋಡಿಕೊಳ್ಳುತ್ತಿದ್ದ ಟಾಟಾ, ಇನ್ಫೋಸಿಸ್ ಕಂಪನಿಗಳನ್ನು ದೇಶದ ಅಭಿವೃದ್ಧಿಯ ಸಂಕೇತಗಳನ್ನಾಗಿ ಬಿಂಬಿಸುತ್ತಿವೆ. ಯಡಿಯೂರಪ್ಪ ಅಣ್ಣಾ ಹಜಾರೆಯನ್ನು ಬೆಂಬಲಿಸಿದ್ದು ಹಾಸ್ಯಾಸ್ಪದವಾದರೆ ಟೈಮ್ಸ್ ಆಫ್ ಇಂಡಿಯಾ ಇನ್ಫೋಸಿಸ್ ನಾರಾಯಣ ಮೂರ್ತಿಯ ಸಂದರ್ಶನ ಪ್ರಕಟಿಸಿದ್ದೂ ಹಾಸ್ಯಾಸ್ಪದವೇ, ಇದನ್ನು ಹೇಳುವ ಶಕ್ತಿ ಯಾರಿಗಿದೆ.
    ವಿಷಯಾಂತರ ಬೇಡ, ಸಂಪನ್ಮೂಲಕ್ಕಾಗಿ ಪೈಪೋಟಿ ಇರುವವರೆಗೆ ಈ ಭ್ರಷ್ಟಾಚಾರ ಹೊಸ ಹೊಸ ರೂಪದಲ್ಲಿ ಇದ್ದೇ ಇರುತ್ತದೆ. ಇದನ್ನು ನೀವು ಮುಂದುವರೆದ ದೇಶಗಳಲ್ಲಿಯೂ ನೋಡಬಹುದು. ಹೀಗಾಗಿ ಸಮ ಸಮಾಜದ ನಿರ್ಮಾಣಕ್ಕೆ ಅಣ್ಣಾ ಹೋರಾಟ ಮಾಡಿದ್ದರೆ ಮುಂದಿನ ಪೀಳಿಗೆಗಾದರೂ ಒಳಿತಾಗುತ್ತಿತ್ತೇನೋ, ಅಣ್ಣಾ ಇದು ಅಂತ್ಯವಲ್ಲ ಹೋರಾಟದ ಆರಂಭ ಎಂದಿದ್ದಾರೆ. ಮುಂದೆಯಾದರೂ ಅವರ ಹಾಗೂ ನಮ್ಮ ಹೋರಾಟ ಸಮಗ್ರ ನವ ಭಾರತದ ನಿರ್ಮಾಣದತ್ತ ಸಾಗಲಿ ಎಂದು ಆಶಿಸೋಣ.

    ReplyDelete
  5. ಇದನ್ನು ಓದಿದಾಗ-ನಮ್ಮೂರಿನ ರಸ್ತೆಗೆ ಕಳಪೆ ಟಾರ್ ಹಾಕಿದಾಗ-ಅದರದ್ದೆಲ್ಲ ಫೋಟೋ ತೆಗೆದಿಟ್ಟುಕೊಂಡು-ಮನೆಯಲ್ಲೇ ಕೂತು ಮಾಹಿತಿ ಹಕ್ಕಿನ ಮೂಲಕ ಎಸ್ಟಿಮೆಶನ್ ತರಿಸಿ-ಸರಿಮಾಡಿಕೊಡದಿದ್ದರೆ ಫೋಟೋ ಸಮೇತ ಅಧಿಕೃತ ದೂರು ಕೊಡುತ್ತೇನೆಂದು ಬರೆದು ಕಳಿಸಿದಾಗ-ಎಂಜೀನಿಯರ್ ಹಾಗೂ ಕಂಟ್ರಾಕ್ಟರ್ ನಮ್ಮ ಮನೆ ಬಾಗಿಲಿಗೆ ಬಂದು-ಸರಿಮಾಡಿಕೊಡುತ್ತೇನೆ ಎಂದು ಹೇಳಿ-ಅನಂತರ ಒಂದು ಲೇಯರ್ ಟಾರ್ ಹಾಕಿ ಸರಿಮಾದಿದ್ದು ಜ್ಞಾಪಕಕ್ಕೆ ಬಂತು. ಎಲ್ಲಾ ಮನೆಯಲ್ಲಿ ಕೂತೇ ಮಾಡಿದ್ದು!!!
    ನಿಮ್ಮ ಬೀದಿಯಲ್ಲಿ ಒಂದಿಷ್ಟು ಬೀದಿದೀಪಗಳು ಉರಿಯುತ್ತಿಲ್ಲದಿದ್ದರೆ ಒಂದೆರೆಡು ಬಾರಿ ದೂರು ಕೊಟ್ಟು ಆದರೂ ಸರಿಯಾಗದಿದ್ದರೆ ಸರಿಯಿರುವ ಹಾಗೂ ಹಾಳಾದ ಬೀದಿದೀಪಗಳ ಮಾಹಿತಿ ಕೇಳಿ ಸಾಕು!!!

    ReplyDelete
  6. women is root cause of corruption in public life-
    husband's father's wife(Dowry),wife & neighbor's wife.

    ReplyDelete
  7. This is my perception and i am sure it is true: More than 50% people who raised voice against corruption with Anna Hazare are all corrupt in their daily life. The honest people don't have voice to raise. They are un-sung heroes. The corrupt people who need publicity in public and "political will" raised their voice. Exceptional is Baba Ramdev who needs political power and publicity but didnt show off with anna hazare and none of the media hyped him. Baba ramdev want to build new political party. Hope he is not satisfied with the existing parties. Such people cannot rule the nation. He never thought of improving the existing political parties and we are fools who are supporting Baba ramdev. I am sure that one fine day he will be stressed as the case happened with Swami Nityanand. When Anna Hazare ignored baba ramdev to include into the Jan-Lokpal Bill, he turned against him and opposed him. This is just an political drama which will will bring short term happiness. When the days pass nothing will be changed, the same corruption and corrupted people thrive well. Unless and untill we find the permanent solution of changing the people's mentality, we cannot change the society
    -MR.SIDDANAGOUDA S BIRADAR

    ReplyDelete
  8. ಸುಬ್ರಹ್ಮಣ್ಯ ಮಾಚಿಕೊಪ್ಪ ಅವರ ಊರಿನಲ್ಲಿ ನಡೆದಂತಹದೇ ಘಟನೆಯೊಂದು ನನ್ನೂರಿನಲ್ಲಿಯೂ ನಡೆದಿದೆ. ಕುಕ್ಕೆಸುಬ್ರಹ್ಮಣ್ಯ ಸಮೀಪದ ಬಾಳುಗೋಡು ಎಂಬ ಊರಿನಲ್ಲಿ ಚರಂಡಿ ತೋಡಿಸಲೆಂದು ಮಂಜೂರಾದ ಲಕ್ಷಾಂತರ ದುಡ್ಡನ್ನು ಕೆಲವು ಮರಿಪುಡಾರಿಗಳು ಎಂಜಿನಿಯರ್ ಜೊತೆ ಸೇರಿ ಗುಳುಂ ಮಾಡಿದ್ದರು. ಊರಿನ ಕೆಲವು ಯುವಕರು ’ನಾಗರಿಕ ಸೇವಾ ಸಮಿತಿ’ ಮಾಡಿಕೊಂಡು ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸಿಕೊಂಡು ಅವರೆಲ್ಲಾರ ಮಾನ ಹರಾಜು ಹಾಕಿದ್ದರು. ಸ್ಥಳಿಯ ಪತ್ರಿಕೆಯಲ್ಲೂ ಬರೆಸಿದ್ದರು.
    ಅವಮಾನಕೊಳಗಾದವರು ಸಮಿತಿಯವರ ಪ್ರಾಮಾಣಿಕತೆಯನ್ನು ಖರೀದಿಸುವ ಪ್ರಯತ್ನವನ್ನೂ ಮಾಡಿದ್ದರು. ಆದರೆ ಆ ಹುಡುಗರು ಜಗ್ಗಿರಲಿಲ್ಲ.
    ಮಾಹಿತಿ ಹಕ್ಕು ಕಾಯ್ದೆ ನಿಜವಾಗಿಯೂ ಗ್ರಾಮೀಣ ಜನರಲ್ಲಿ ಜಾಗೃತಿಯನ್ನು ಮೂಡಿಸಿದೆ. ಅದಕ್ಕೆ ಇನ್ನಷ್ಟು ವ್ಯಾಪಕ ಪ್ರಚಾರ ನೀಡಬೇಕಾಗಿದೆ.

    ReplyDelete
  9. can Lok paal bill or any bill is capable of bringing corruption free society? it should come from within our self. should get start from a family. Even in a small family we can see corruption. it starts there and grows bigger. common man should be clean. Nothing going to happen from bills. you know what is the present paradox? most of the most corrupted people have joined the movement and shouting "ANNa ki Jai ! " total protest is began wandering . common man himself is not free from corruption , then how can he handle jan lok paal bill effectively? promptly? honestly? It is strange. common man himself is corrupted. one day who passes this bill he only becomes another leader. may be leader of another party, other political party! Every one is not Anna Hajaare, Santosh hegde or such people.
    ಈಗ ನಡಿತಿರೋದು ಒಂದು ಥರ ಸಮೂಹ ಸನ್ನಿಯ ಥರ ಕಾಣುತ್ತಿದೆ. ಎಲ್ಲರೂ ತಮ್ಮ ತಮ್ಮ ಮಟ್ಟದಲ್ಲಿ ಇದೆ ರೀತಿಯ ಆದರ್ಶ ಇಟ್ಟುಕೊಂಡರೆ , ನಮ್ಮ ದೇಶಕ್ಕೆ ಇಂಥಹ ಸ್ತಿತಿ ಬರುತ್ತಿರಲಿಲ್ಲ.

    ReplyDelete
  10. @ Biradar don't try to divert from the original discussion!! here the point is what would be the individual's role to make our society corrupt free!! what's your problem with sampadakeeya, hiding himself is known thing, why you relating hiding and corruption??? he might be hididng but giving food for our thoughts that's sufficient,what will do after knowing who is the writer of sampadakeeya?? after knowing the sampadakeeya writer you gonna make our society the better one??what's the point in asking??? why are you unnecessarily attacking the writer???

    ReplyDelete
  11. I am participate in this movement

    ReplyDelete
  12. @ Ashu: Read these lines carefully: " ಸಂದರ್ಭ ಎದುರಾದಾಗ ಒಬ್ಬನೇ/ಒಬ್ಬಳೇ ಆದರೂ ಸಹ ಭ್ರಷ್ಟಾಚಾರದ ವಿರುದ್ಧ ಪ್ರತಿಭಟಿಸುವ ಧೈರ್ಯವನ್ನು ನಾವು ತೋರಬೇಕು. ಸಣ್ಣ ಪುಟ್ಟ ರಿಸ್ಕ್‌ಗಳನ್ನು ತೆಗೆದುಕೊಳ್ಳುವುದನ್ನು ನಾವು ಅಭ್ಯಾಸ ಮಾಡಿಕೊಳ್ಳಬೇಕು."

    I am not diverting the original discussion. Yes, when you preach someone to be honest, non-corrupt and to fight against corruption, even when u r single, I am asking why Sampadakeeya is not following the same? It writes articles against corruption. But hiding itself. why ? Dont have guts to face the consequences?

    Everything seems to be easy to write, but difficult to follow it.
    Hope you understood it well now !!!

    ReplyDelete
  13. @ Ashu, ಸಂಪಾದಕೀಯದಲ್ಲಿ ಗಂಭೀರವಾದ ಲೇಖನಗಳು ಪ್ರಕಟಗೊಂಡಾಗಲೆಲ್ಲ ಬಿರಾದರ್ ಅವರು ಚರ್ಚೆಯ ದಿಕ್ಕು ತಪ್ಪಿಸಲು ಇದೇ ಪ್ರಶ್ನೆಯನ್ನು ಎತ್ತುತ್ತ ಬಂದಿದ್ದಾರೆ. ಿದೂ ಸಹ ಫ್ಯಾಸಿಸ್ಟ್ ಮನಸ್ಥಿತಿ ಎನ್ನಬೇಕಾಗುತ್ತದೆ. ನನ್ನ ಮಟ್ಟಿಗೆ ಸಂಪಾದಕೀಯದವರು ಯಾರು ಎನ್ನುವ ಪ್ರಶ್ನೆಯೇ ಅಪ್ರಸ್ತುತ ಅನ್ನಿಸುತ್ತದೆ. ಇಲ್ಲಿ ಸಾಕಷ್ಟು ಸಮಕಾಲೀನ ವಿಷಯಗಳ ಕುರಿತು ಗಂಭೀರ ಚರ್ಚೆ ನಡೆದಿದೆ. ಕೆಲವು ಬಾರಿ ಸಂಪಾದಕೀಯವೇ activist ತರಹ ಕೆಲಸ ಮಾಡಿದೆ.(ರಿಯಾಲಿಟಿ ಶೋ ವಿಷಯದಲ್ಲಿ) ತಾನು ಪ್ರತಿಪಾದಿಸುವ ಧೋರಣೆಗಳನ್ನು ವಿರೋಧಿಸುವವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ಉತ್ತರದಾಯಿತ್ವವನ್ನೂ ತೋರಿದೆ.
    when u preach someone to be honest... ಅನ್ನುತ್ತಾರೆ ಬಿರಾದರ್ ಅವರು. ಆದರೆ ಎಲ್ಲೂ ಈ ಲೇಖನ ಬೋಧನೆ ಅನ್ನಿಸುವುದಿಲ್ಲ. ತಮ್ಮನ್ನು ಸೇರಿಸಿಕೊಂಡೇ ಎಲ್ಲರೂ ಏನು ಮಾಡಬಹುದು ಎಂಬ ವಿನಯ ಇಲ್ಲಿದೆ. ಬಿರಾದರ್ ಅವರು ಗ್ರಹಿಕೆಯಲ್ಲೇ ಎಡವಿದ್ದಾರೆ ಅನ್ನಿಸುತ್ತದೆ.
    ನನಗೂ ಸಹ ಸಂಪಾದಕೀಯದವರು ಯಾರು ಎಂಬ ಕುತೂಹಲವಿದೆ, ಆದರೆ ಬಿರಾದರ್ ಅವರ ತರಹದ ಕೆಟ್ಟ ಕುತೂಹಲವಿಲ್ಲ. ಬಿರಾದರ್ ಅವರು ತಮ್ಮ ನಕಾರಾತ್ಮಕ ಧೋರಣೆ ಬದಲಾಯಿಸಿಕೊಳ್ಳುವುದು ಒಳ್ಳೆಯದು, ಅಥವಾ ಈ ಬ್ಲಾಗ್ ಯಾರದ್ದು ಎಂದು ಗೊತ್ತಾಗುವವರೆಗೆ ಓದುವುದನ್ನೇ ಬಿಡುವುದು ಒಳ್ಳೆಯದು.

    ReplyDelete
  14. @ Apporva: Dear Madam, it's your misconception. i have never tried to alter the route of discussion in this blog.

    ಫ್ಯಾಸಿಸ್ಟ್ ಮನಸ್ಥಿತಿ ಎನ್ನಬೇಕಾಗುತ್ತದೆ.: I don't care, whatever you call me as Pessimist or something else. Be sure that you are not the same before you call it to others. I know what i am.

    ಇಲ್ಲಿ ಸಾಕಷ್ಟು ಸಮಕಾಲೀನ ವಿಷಯಗಳ ಕುರಿತು ಗಂಭೀರ ಚರ್ಚೆ ನಡೆದಿದೆ.: I have made clear to sampadakeeya that i appreciated few posts, they are excellent.But not all.

    ಬಿರಾದರ್ ಅವರು ಗ್ರಹಿಕೆಯಲ್ಲೇ ಎಡವಿದ್ದಾರೆ ಅನ್ನಿಸುತ್ತದೆ: May be, Hope you have well understood it, but be sure that it's not viceversa

    ನನಗೂ ಸಹ ಸಂಪಾದಕೀಯದವರು ಯಾರು ಎಂಬ ಕುತೂಹಲವಿದೆ, ಆದರೆ ಬಿರಾದರ್ ಅವರ ತರಹದ ಕೆಟ್ಟ ಕುತೂಹಲವಿಲ್ಲ.: Yes, i am eager with good Enthusiasm, not the bad one.

    ಬಿರಾದರ್ ಅವರು ತಮ್ಮ ನಕಾರಾತ್ಮಕ ಧೋರಣೆ ಬದಲಾಯಿಸಿಕೊಳ್ಳುವುದು ಒಳ್ಳೆಯದು: Thanks and Same to you

    ಅಥವಾ ಈ ಬ್ಲಾಗ್ ಯಾರದ್ದು ಎಂದು ಗೊತ್ತಾಗುವವರೆಗೆ ಓದುವುದನ್ನೇ ಬಿಡುವುದು ಒಳ್ಳೆಯದು.: Atleast i got an small clue that Sampadakeeya is run by an woman.

    ReplyDelete
  15. Naavu vaachakaru ee blognalli banda vastunista vishayada bagge charchisona, abhipraaya prakatisona. Lekhaka yaraadarenante? Nanagantoo adu aprastuta.Bhristachaarakke maddu areyuvudu cancer kayilege chikitse maadidaste kasta saadhya. Aadaroo naavu prayatnavantoo maadalebeku. Anna Hazare antavaru ooru oorugalali, keri kerigalalli swayamsevakaraagi dudiyabeku. Samajada hitakkagi maatra.Idakke bekaada roopu reshe tayaragabeku.

    ReplyDelete
  16. @apoorva lets jsut discuss the original point, leave all others apart...!! see now you are the sampadakeeya writer ha ha ha!!! ROFL!! enjoy the pseudo status!!!!

    @Biradar i do agree with the point that sampadakeeya is encouraging others to be honest and he himself is also honest, but the problem here is you just want to know who he is, which is not required....the actual journalism involves the matter of discussion and letting people know about the happening around us... before vk no common man had any idea abouth the editor of any of the news papers atleast not in karnataka except hai bangalore, as he himself writes, owns and publishes he was known to every common man...now my point is not in favour of any of the editors, when long before we have had a tradition of reading the paper for the current affairs, we never bothered about the editor, and knowing the writer is futile!!! what you said samapdakeeya does not have guts to face the consequences?? you are prejudised to target the writer nothing else...if sampadakeeya had not created the new sense of discussion about the happening around us, we would have never known about the corrupt columnists, writers,and journalists!! Read the post "don't let the media to fool you" from sampadakeeya, one of the best posts ever!!! Try being optimistic and look at the positive side. Had sampadakeeya wished he could have revealed his name and would have got a huge fan following and starship!! he did not wish to to so apreciate the thought behind it, he just want the people to be aware of the happenings and he never wishes to print his personal identity more than the matter of discussion!! when so called star journalists misusing facebook for personal attack,their personal cases, court issue,everything else than the original matter of discusiion but sampadakeeya is trying to create the awareness!!! understand this point as early as possible or else don't read blog!!! simply do not target writer, otherwise me and apoorva would opt to ignore your comments!!!!

    ReplyDelete
  17. @ Ashu: I have no where said that ur frd Apporva is the writer of Sampadakeeya blog. Dont judge anything half baked.

    Mind that you are reader like me and you don't have any right to comment to me directly. Only sampadakeeya has right to comment to me since i am commenting to its article.

    You dont have any right to direct me not to read the articles at this blog. BLOGGER is an public property, it's not your personal.

    I dont care if you and your frd Apporva ignore my comments. I didnt expected it. You peeped unnecessarily into my comments. Mind that it is not your business

    Whatever the sampadakeeya author replies for my comments, i accept it and reply for it. We have already discussed lot in Facebook on the same comment

    ReplyDelete
  18. @ Biradar, ನಿಮ್ಮ ಮೇಲಿನ ಕಮೆಂಟನ್ನು (I have no where said that..) ನೀವೇ ಮತ್ತೊಮ್ಮೆ ಓದಿಕೊಳ್ಳಿ. ಪ್ರಶ್ನೆಗಳಿಗೆ ಉತ್ತರಿಸುವ ಬದಲು ನೀವು ಪಲಾಯನ ಮಾಡುತ್ತಿದ್ದೀರಿ. ನೀವು ಯಾರನ್ನಾದರೂ ಪ್ರಶ್ನಿಸಬಹುದು, ನಿಮ್ಮನ್ನು ಯಾರೂ ಪ್ರಶ್ನಿಸಬಾರದು ಎನ್ನುವಂತಿದೆ ನಿಮ್ಮ ನಿಲುವು. ಬ್ಲಾಗ್ ಪಬ್ಲಿಕ್ ಪ್ರಾಪರ್ಟಿ ಎಂದು ನೀವು ಭಾವಿಸುವುದಾದರೆ, ನಿಮ್ಮ ನಮ್ಮ ಕಾಮೆಂಟ್ ಗಳೂ ಸಹ ಪಬ್ಲಿಕ್ ಪ್ರಾಪರ್ಟಿ ಎಂದು ನೀವು ಅರ್ಥ ಮಾಡಿಕೊಳ್ಳದೇ ಇರುವುದು ಆಶ್ಚರ್ಯ. ಚರ್ಚೆಗೇ ಸಿದ್ಧವಿಲ್ಲದವರ ಜತೆ ಮಾತನಾಡುವುದರಲ್ಲಿ ಯಾವ ಪ್ರಯೋಜನವೂ ಇಲ್ಲ.
    ಹಿಂದೆ ಕಮೆಂಟ್ ಮಾಡಿದ ಸಂದರ್ಭದಲ್ಲಿ ಫ್ಯಾಸಿಸ್ಟ್ ಧೋರಣೆ ಎಂಬ ಶಬ್ದ ಬಳಸಿದ್ದರ ಬಗ್ಗೆ ನನಗೇ ಕಸಿವಿಸಿಯಾಗಿತ್ತು. ಆದರೆ mind that it is not your business ಎಂಬ ನಿಮ್ಮ ಮಾತು ಕೇಳಿದ ಮೇಲೆ ಈ ಕಸಿವಿಸಿಯೂ ದೂರವಾಯಿತು.

    ReplyDelete
  19. Mr Biradar,
    No matter even if you find it wrong, I wish to direct my comment to you personally. It is not fair to say that the readers of the blog have no business to direct their comments to you, when you yourself did that in the past. Blog is an alternative forum to discuss issues which seldom attract attention of the main stream media. If you can, reply to those comments that criticise or appreciate your views. Otherwise remain mum. But nobody has right to dictate terms.
    You jumped into a conclusion that the blog is moderated by a woman. But you show the guts to ask another fellow reader not to jump into any conclusion! I think it is Apoorva, called you Facist. It is true. But you mistook it for a pessimist. Pessimists are far better than Facists.
    Every individual has right to disagree with others. Your comments show that you are more interested in knowing individual behind this blog, rather than the issues discussed here. Considering the quality of posts here and the popularity the blog is enjoying, any individual would have eagerly disclosed his/her name. But this blogger seems to be above all this. He writes better than most of the columnists in newspapers. As a reader of the blog I enjoy reading it and ask others to read it. I don't want to know who is the blogger. If at he/she himself/herself discloses it, I would wish him personally for his great writing.

    - Biriyani Kariyanna

    ReplyDelete
  20. In my opinion Its better not to disclose the Blogger identity of Sampadakeeya.I want to tell a example here, I think everybody knows the reality show BIGG BOSS, in that the so called BIGG BOSS is a unknown Person, No body knows who is controlling the show. All the celebrities in the show RESPECTS his order or rules just bcz of the voice. If any one knows who is speaking in the show, its general mentality of human being is that we start to think of the background of person and wont respect.

    So Here if Sampadakeeya Blogger Disclose his identity, we the people instead of concentrating on the issues (Which are beautifully criticized by Blogger)we are trying to dig out useless information on the blogger and Start to target the Blogger personal issues.

    when we are getting good and Nice Posts from this blog Its immaterial for the readers to know about the Bloggers Identity.(Yes I agree with Ashu :before vk no common man had any idea abouth the editor of any of the news papers atleast not in karnataka except hai bangalore)

    Finally Its not good to target the blog readers.
    ಚರ್ಚೆ ಆರೋಗ್ಯಕರವಾಗಿರಲಿ.
    Mohan

    ReplyDelete
  21. Pessimist and ಫ್ಯಾಸಿಸ್ಟ್ are different I think.
    ಫ್ಯಾಸಿಸ್ಟ್ means grand sons of Hitler? Or jews ?

    ReplyDelete
  22. @Sahana media - i disagree being a man.. men too have lust and lucaratives to be corupt Raceu Jooju, kudita, many... every1 loves money power not only woman

    Please do not loose focus on the agenda by discussing un wanted things.. Lets focus on getting much more attention and awarness in ppl about - JAN LOKPAL BILL

    ReplyDelete
  23. @Apporva: i dont have time and also dont want to reply for you cheap comments. This shows your mentality and way of thinking. Time decides who is pessimist.

    First Learn how to comment to others.

    May god bless you. gud bye.

    ReplyDelete
  24. If i introspect 100% myself, i am corruptive at some occasion,I don't know about you all as you are talking but i do believe many of you would be non corruptive and also i strongly believe some are not. i want to target those some who are corruptive and you writing the things so elegantly but you are not actual one rather your virtual mind is talking the things.
    I would like to ask you all 2 simple question , if you have(i don't use guts)empathy on society 1.let me introspect yourself first and accept how best you are non corruptive at different Occasional of your life.
    2. are you emotional while writing only.
    Because, consistency in keeping such an emotional thing will definitely helps in deleting corruption.

    I believe if you don't express the truth you have sympathy on corruption

    Well some of you shared ignited comments on one another, but thats ok... its still healthy argument. I would well come such comments as i don'nt know i am really or virtually know with this script. the comments/arguments definitely checks my reality.

    Thank you
    kavijaya

    ReplyDelete
  25. @biradar, ನನಗೂ ಕೂಡ ಸಮಯ ಇಲ್ಲ, ನಿಮ್ಮ ಅರೆಬೆಂದ, ಅರೋಗೆಂಟ್ ಕಮೆಂಟ್ ಗಳಿಗೆ ಉತ್ತರಿಸಲು. ಇದು ನಿಮ್ಮ ಅಭಿರುಚಿಯನ್ನು ತೋರಿಸುತ್ತದೆ. ಮತ್ತೊಮ್ಮೆ ಹೇಳುತ್ತೇನೆ ನಾನು ನಿಮ್ಮನ್ನು ಪೆಸಿಮಿಸ್ಟ್ ಅನ್ನಲಿಲ್ಲ, ಫ್ಯಾಸಿಸ್ಟ್ ಅಂದಿದ್ದು.
    ಬರೆದಿದ್ದನ್ನು ಮೊದಲು ಅರ್ಥ ಮಾಡಿಕೊಳ್ಳಲು ಕಲಿಯಿರಿ.
    ದೇವರು ನಿಮಗೆ ಒಳ್ಳೆಯದನ್ನು ಮಾಡಲಿ, ಧನ್ಯವಾದಗಳು.

    ReplyDelete