Tuesday, April 12, 2011

ಕಪಟ ಜ್ಯೋತಿಷಿಗಳ ವಿರುದ್ಧ ಅಭಿಯಾನ: ಪ್ರತಿಕ್ರಿಯೆಗಳು

ಜನರನ್ನು ಮೌಢ್ಯದ ಪ್ರಪಾತಕ್ಕೆ ತಳ್ಳುತ್ತಿರುವ, ಪ್ರಳಯದ ಭೀತಿಯನ್ನು ಸೃಷ್ಟಿಸುತ್ತಿರುವ ಕಪಟ ಜ್ಯೋತಿಷಿಗಳನ್ನು ಟಿವಿಗಳಿಂದ ಓಡಿಸುವುದು ಹೇಗೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದಿದ್ದನ್ನು ನೀವು ಗಮನಿಸಿದ್ದೀರಿ. ಈ ಎಲ್ಲವನ್ನು ದೃಷ್ಟಿಯಲ್ಲಿಟ್ಟುಕೊಂಡೇ ಈ ತಲೆಹರಟೆ ಜ್ಯೋತಿಷಿಗಳ ಕಾರ್ಯಕ್ರಮಗಳನ್ನು ನಿಲ್ಲಿಸುವಂತೆ ಟಿವಿ ಚಾನಲ್ ಗಳ ಮೇಲೆ ಒತ್ತಡ ಹೇರಲು ನಡೆಸಬೇಕಾದ  ಅಭಿಯಾನದ ಸ್ಪಷ್ಟ ರೂಪುರೇಷೆಗಳನ್ನು ತೀರ್ಮಾನಿಸಬಹುದಾಗಿದೆ. ಒಂದು ಪಟ್ಟಿಯನ್ನು ತಯಾರಿಸುವ ಮುನ್ನ  ಈ ಎಲ್ಲ ಪ್ರತಿಕ್ರಿಯೆಗಳನ್ನು ಮತ್ತೊಮ್ಮೆ ಗಮನಿಸಿ ಎಂದು ವಿನಂತಿಸುತ್ತೇವೆ. ಪ್ರತಿಕ್ರಿಯಿಸಿದ ಎಲ್ಲರಿಗೂ ಥ್ಯಾಂಕ್ಸ್.


Anonymous said...

Dear Sampaadakeeya
Could you please find and post the phone numbers of That channels Chief Editors and this Nuisance Narendraswamy,So that Let the Public bang them privately! Then we can think of Next step.
Mohan

adithikrishna said...

jagan maathe yaav flight nal barthare antha ee mundedakke hellirbekalla, yen hucchnan maga re evnu, iddan kello nam janakke yaak artha aagthilla evnu mank boodi erchthidaane antha, hogli bidi bere henn makkalanna baithanalla ee mundedru mane hengasru yest udda koodlu bittidaaranthe??????????? uttra kodakke heli avanige.........

idella samanya janara mele nadithiro dowrjanya....

ella seri channels ge ottada haakdre kanditha channel navru idanna nillstaare.......

atleast ee comments nodi yaadru channel navaru intha programme na nillisli...

Anonymous said...

ಅಂಬರೀಷ್............Finally he only clear the dispute (He is man behind for clear so many problems in earlier time also). Now this the time take that KAMANGI JYOTHISIge DIKKARA.........& DIKKARA for the dirty minds behind that progromme.....

JAI REBEL STAR..We all wishes to ambi for long and happy life...

Thanks
Surayakanth

G!R!SH said...

Sir,
NAVU MODALU E TV CHANNEL GALALLI BARUVA ELLA JOTISHYA SABHANDHI KARYAKRAMAGALANNA NILLISABEKU.
SUPER MOON DIVASA HAAGE AGUTTE HEEGE AGUTTE ANTHA HELIDA ELLA JOTISHIGALIGU ENADARU SHIKSHE KODABEKU.
MAY 6 ALLA EGLE AVANA( NARENDRA SHARMA)MELE CASE FILE AGBEKU.
TANNA TAPPU ABHIPRAYAGALINDA JANARANNA HAADI TAPPISUTTIDDANE ANTA SAARVAJANIKA HITAASAKTI CASE HAKBEKU.
ISHTELLA NADITIDRU AVARELLI AGNI SHRIDHAR AVARANNA E AANDOLANADA NAAYAKATVA VAHISIKOLLODAKKE MANAVI MADABEKU.

ಅವಿನಶ ಕನ್ನಮ್ಮನವರ್ said...

ಶರ್ಮಾ ಎಲ್ಲಲ್ಲಿ ಜನರ ಸ೦ದಶ೯ನ (ಹಿ೦ದಿನ ವಾರ ಜಯನಗರ ೪ ನೇ ಬ್ಲಾಕ್ ನಲ್ಲಿತ್ತು) ಮಾಡುತ್ತಾನೋ ಅಲ್ಲಲ್ಲೀ ನಾವೆಲ್ಲರೂ ಪ್ರತಿಭಟಿಸಬೇಕು, ಅದೂ ಯಾರನ್ನಾದರು scientist/science writer ಜೊತೆಗೆ ಕರೆದು ಕೊ೦ಡು ಹೋಗಿ ಪ್ರತಿಭಟಿಸೋಣ,
ನೀವು ಆಯೋಜಿಸಿ, ನಾವು ಬ೦ದೇಬರುತ್ತೇವೆ..

Anonymous said...

Agni shridhar ge nayakatva vahisi e aandolanavanna raajyadyanta churukugolisona
nimma vaicharika pragnege salam.

Girish

ಪ್ರಶಾಂತ said...

ಬಹಳ ಒಳ್ಳೆಯ ಲೇಖನ. ಈಗ ಸ್ವಲ್ಪ ದಿನಗಳ ಹಿಂದೆ TV9 ಕಾರ್ಯಕ್ರಮದಲ್ಲಿ, ವಿವೇಕ - ನರೇಂದ್ರ, ಸಂಪೂರ್ಣ ಜಗತ್ತು ಡಿಸೆಂಬರ್ ೨೦೧೧ ಕ್ಕೆ ಮುಳುಗಡೆಯಾಗಿ ಈಡಿ ಜಗತ್ತಿನಲ್ಲಿ ದಕ್ಷಿಣ ಭಾರತ (ತನ್ನ ಕಾಲಡಿಯ ನೆಲ) ಮಾತ್ರ ಉಳಿದುಕೊಳ್ಳುತ್ತೆ ಎಂಬುದಾಗಿ ಭವಿಷ್ಯ ನುಡಿದಿದ್ದಾನೆ. ನರೆಂದ್ರರಿಗೆ ಧಿಕ್ಕಾರ!

Anonymous said...

ವಾಹಿನಿಗಳ ಮುಖ್ಯಸ್ಥರ ಇಮೇಲ್‌ ಐಡಿಗಳನ್ನು ಹಾಗೂ ಮೊಬೈಲ್‌ ನಂಬರ್‌ಗಳನ್ನು ಇಲ್ಲಿ ನೀಡಿದರೆ ಒಳ್ಳೆಯದು. ಎಲ್ಲರೂ ಒಂದೊಂದು ಮೇಲ್‌ , ಎಸ್‌ಎಮ್‌ಎಸ್‌‌ ಒಗೆದರೆ ಆಗಲಾದರೂ ಅವರಿಗೆ ತಾವು ಮಾಡುತ್ತಿರುವ ಅನಾಹುತದ ಬಗ್ಗೆ ಅರಿವಾದೀತು. ಕೇವಲ ಟಿಆರ್‌ಪಿಯ ವರದಿಯನ್ನೇ ಎದುರು ನೋಡುತ್ತಾ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಮರೆತಂತಿದೆ ಅವರೆಲ್ಲಾ. ಆದಷ್ಟು ಬೇಗ ಅವರ ಇಮೇಲ್‌ ಐಡಿ ಹಗೂ ಮೊಬೈಲ್‌ ನಂಬರ್‌ಗಳನ್ನು ನೀಡಿ. ಸಾಧ್ಯವಾದರೆ ಆ ಅನಿಷ್ಠ ನರೇಂದ್ರ ಶರ್ಮನ ಮೊಬೈಲ್‌ ನಂಬರ್‌ ಅನ್ನೂ ನೀಡಿ.

Abhiman said...

"I used to believe ASTROLOGY as a science...!!.but i wont think like an IDIOT NARENDRA SWAMY thinks...!!.even i wont watch any shows like that because i GROWN UP in such FAMILY environment...!!. even i am creating awareness...!!.and atleast Every parent should create awareness to their family or atleast to their childrens...!!.
Instead of FOLLOWING IDIOT Narendra swamy...!!. and Few IDIOTS of TV9, SUVARNA, KASTURI,Z-KANNADA, any many...."

Anonymous said...

ಬ್ರಹ್ಮಾಂಡದ ನರೇಂದ್ರ ಶರ್ಮ ಬಾಯಿಹರುಕುತನದಿಂದ ಬೆತ್ತಲಾಘುತಿದ್ದಾನೆ. ಬೇರೆ ಚಾನೆಲ್ಲುಗಳ ಇಂತಹ ಕಾರ್ಯಕ್ರಮಗಳಲ್ಲೂ ಜ್ಯೋತಿಷ್ಯದ ಹೆಸರಲ್ಲಿ ಮುಗ್ದರನ್ನು ಹಾದಿ ತಪ್ಪಿಸುವ, ಭಯಭೀತರನ್ನಾಗಿಸುವ ಹುನ್ನಾರಗಳು ನಡೆಯುತ್ತಿವೆ. ಇಂತಹ noncense ಕಾರ್ಯಕ್ರಮಗಳ ನಿರ್ಭಂಧಿಸುವ ಕೆಲಸ ಆಗಭೇಕಿದೆ. ಸಂಪಾದಕೀಯದ ಫಾಲೋಫ್ ಚೆನ್ನಾಗಿದೆ.

Chetu said...

ಈ ಮನುಷ್ಯನನ್ನು ನೋಡಿದರೆ, ಇವನ ಮಾತುಗಳನ್ನ ಕೇಳಿದರೆ ಎಂಥವರಿಗೂ ಅಸಹ್ಯ ಬರುತ್ತದೆ. ಆದರೆ ದುರಂತವೆಂದರೆ ಮಾಮೂಲಿ ಜನ ಬಿಡಿ ಪ್ರಜ್ಞಾವಂತರಂತೆ ಕಾಣುವ ಎಷ್ಟೋ ಜನರು ಇವನನ್ನು ಭಕ್ತಿಯಿಂದ ಕಾಣುವುದು! ಇವನು ಮತ್ತು ಇಂಥವರ ಬಗ್ಗೆ ದನಿ ಎತ್ತಿರುವ 'ಸಂಪಾದಕೀಯ'ದ ಪ್ರಯತ್ನ ನಿಜಕ್ಕೂ ಶ್ಲಾಗನಿಯ.
ಇವನನ್ನು ಹಾಗೇ ಬಿಟ್ಟರೆ ಅಂಕುಶವಿಲ್ಲದೆ ಬೆಳೆಯುತ್ತಾನೆ. ಮಾಳವಿಕರಂಥವರು ತಮ್ಮ ಚಾನೆಲ್ನಲ್ಲಿ ಇಂಥಹ ಸೋಗಲಾಡಿಗಳಿಗೆ ಜಾಗ ಕೊಟ್ಟಿರುವುದು ಖಂಡನೀಯ. ಸಮಸ್ಯೆಯೆಂದರೆ ಇವನ ವಿರುದ್ದ ಸಾಮಾನ್ಯ ಜನಗಳಲ್ಲಿ ಅರಿವು ಮೂಡಿಸಲು ಇರುವ ಮಾಧ್ಯಮದ ಕೊರತೆ, ಏಕೆಂದರೆ ಎಲ್ಲ ಚಾನೆಲ್ಗಳು ಇದರಲ್ಲಿ ಸಮಾನ ಅಪರಾದಿಗಳು.
ನಾವು ಮಾಡಬಹುದಾದ ಕೆಲ ಪ್ರಯತ್ನಗಳೆಂದರೆ ದಿನಪತ್ರಿಕೆಗಳಿಗೆ ಪತ್ರದ ಮೂಲಕ ಚರ್ಚೆಗಳನ್ನ ಹುಟ್ಟು ಹಾಕಬಹುದು. ಮಾನವೀಯ ಮೌಲ್ಯಗಳಿರುವ ಪ್ರಸಿದ್ದರಿಂದ ಸಹಾಯ ಪಡೆಯಬಹುದು. ಈ ಮೂಲಕ ಆಸೆಬುರುಕ ಚಾನೆಲ್ಗಳ ಮೇಲೆ ಒತ್ತಡ ಹೇರಬಹುದು. ನನ್ನ ಮನವಿಯೆಂದರೆ ಆದಷ್ಟು ಜನ ಇದರಲ್ಲಿ ಭಾಗವಹಿಸಿ ಮತ್ತು ಈ ಪಿಡುಗಿನ, ಪೀಡೆಗಳ ವಿರುದ್ದ ದನಿಯೆತ್ತಿರಿ. ಇಂಥವು ಮಾರಕವಗಬಲ್ಲದು.

-ಚೇತನ್

Anonymous said...

ಸರ್ ನಿಮ್ಮ ಕಳಕಳಿ ನಮಗೆ ಅರ್ಥವಾಗುತ್ತದೆ. ಆದರೆ ಈ ಟಿವಿ ಮಾಧ್ಯಮಗಳು ಎಂದು ಅರ್ಥ ಮಾಡಿಕೊಳ್ಳುತ್ತವು ಅದು ಅ ಅಧಿ ಶಕ್ತಿ ಜಗನ್ಮಾತೆಗೆ ಮಾತ್ರ ಗೊತ್ತು. ನಮ್ಮ ಜನಗಳು ಈ ಪುಣ್ಯಾತ್ಮ ಹೇಳುವುದೆಲ್ಲ ನಿಜ ಎಂದು ನಂಬುತ್ತಾರಲ್ಲ ಅದಕ್ಕೆ ಅವನ ಪ್ರವರ ನಿತ್ಯ ತೋರಿಸುತ್ತಿದ್ದಾನೆ. ನಮ್ಮ ಜನಗಳು ಸ್ವಲ್ಪ ಜಾಗರುಕರಾಗಿ ಅವನ ಬಗ್ಗೆ ಅಸಡ್ಡೆ ಮಾಡಿದರೆ ಅವನ ದರ್ಶನಕ್ಕೆ ಒಂದು ಮುಕ್ತಾಯ ಹೇಳಬಹುದು. ಅದರ ಪ್ರಯತ್ನ ಎಂಬಂತೆ ನಿಮ್ಮ ಈ ಲೇಕನ ನಮ್ಮ ಕನ್ನಡಿಗರ ಕಣ್ಣು ತೆರೆಸುವುಲ್ಲಿ ಅಡಿಗಲ್ಲು ಇಟ್ಟಂತೆ. ದನ್ಯವಾದಗಳು.

Anonymous said...

Tv chnls should organize a live show of debate. this should be between narendra babu and any sensible citizen of karnataka. then audience will judge the "erudition" of this narendra babu sharma!. we need not expect a scientist should come and argue with narendra babu. because it is not worth for scientists to invest their precious time with this fellow.

Anonymous said...

Kandithavagivu intha kapatarannu bidbaradu...Private TV chanel galu tamma samajika baddatheyannu kaapadbeku...Prakasha

Anonymous said...

ಟಿ.ವಿ. ಚಾನೆಲ್ ಗಳ ಟಿ.ಆರ್.ಪಿ, ಜಾಹಿರಾತು ಹಪಾಹಪಿಯೇ ಬೀದಿಯಲ್ಲಿ ಬಿದ್ದಿರಬೇಕಾದ ಜ್ಯೋತಿಷಿಗಳು ಟಿ.ವಿ. ಪರದೆಯಲ್ಲಿ ಮೆರೆದಾಡಲು ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೇವಲ ನರೇಂದ್ರ ಶರ್ಮ ಮಾತ್ರವಲ್ಲ ವೈಜ್ಞಾನಿಕ(?) ಜ್ಯೋತಿಷ್ಯದ ಹೆಸರಲ್ಲಿ ಎಲ್ಲಾ ಚಾನೆಲ್ ಗಳಲ್ಲೂ ಒಬ್ಬೊಬ್ಬ ಮೂಢ ಅವತರಿಸಿದ್ದಾನೆ. ಸ್ಟುಡಿಯೋ ಒಳಗೆ ಕುಳಿತ ಜ್ಯೋತಿಷಿ ಬೋಂಗು ಬಿಡುತ್ತಿದ್ದರೆ ನ್ಯೂಸ್ ರೂಮಿನಲ್ಲಿ ಕುಳಿತ ಹುಡುಗರು ನಗುತ್ತಿರುತ್ತಾರೆ. ನೀವು ಹೇಳಿದಂತೆ ಖಂಡಿತವಾಗಿ ಚಾನೆಲ್ ಗಳ ಮೌಢ್ಯ ಬಿತ್ತನೆ ಕಾರ್ಯಕ್ಕೆ ಬ್ರೇಕ್ ಹಾಕುವ ಅಗತ್ಯವಿದೆ. ಇದಕ್ಕಾಗಿ ಒತ್ತಡವೊಂದೇ ತಂತ್ರ. ಮುಖ್ಯವಾಗಿ ಚಾನೆಲ್ ಗಳ ಜ್ಯೋತಿಷ್ಯ ಕಾರ್ಯಕ್ರಮಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಬೇಕು. ಚರ್ಚೆಗಳು ನಡೆಯಬೇಕು. ಆ ಮೂಲಕ ಚಾನೆಲ್ ಗಳ ಕಾರ್ಯಕ್ರಮ ಮುಖ್ಯಸ್ಥರ ಮೇಲೆ ಒತ್ತಡ ಹೇರಬೇಕು. ಅವರನ್ನೂ ಚರ್ಚೆಗೆ ಎಳೆದು ತರಬೇಕು. ಸೂಪರ್ ಮೂನ್, ಸುನಾಮಿ ಸೇರಿದಂತೆ ಯಾವ ವಿಷಯದಲ್ಲಿ ಜ್ಯೋತಿಷಿಗಳು ಕರಾಕುವಕ್ಕಾಗಿ ಮಾತನಾಡಿದ್ದಾರೆ. ಆ ವಿಷಯದಲ್ಲಿ ಅವರಿಗಿರುವ ಜ್ಞಾನವೇನು ಎಂಬ ಬಗ್ಗೆಯೂ ಅದೇ ಟಿ.ವಿ. ಚಾನೆಲ್ ಗಳಲ್ಲಿ, ಪ್ಯಾನಲ್ ಡಿಸ್ಕಷನ್ ಗಳಾಗಬೇಕು. ಇದಿಷ್ಟು ನನಗನ್ನಿಸಿದ್ದು. ಇನ್ನು ಸಂಪಾದಕೀಯದ ಯಾವುದೇ ನಿಲುವಿಗೂ ನನ್ನ ಬೆಂಬಲವಿದೆ.
ಇಂತಿ.
ಓರ್ವ ಓದುಗ

Anonymous said...

ನಮ್ಮ ಯಾವುದೇ ಧಾರ್ಮಿಕ ಗ್ರಂಥಗಳು ಕೂಡ ದೇವರನ್ನು ಈಪರಿ ದೂಷಣೆಗೆ ಒಳಪಡಿಸಿರಲಿಕ್ಕಿಲ್ಲ!
"ಜಗನ್ಮಾತೆ ಭೂಮಿಗೆ ಇಳಿಯುವುದರಿಂದ ಪ್ರಳಯ! ಜೀವ ಸಂಕುಲದ ನಾಶ!"
ಜಗನ್ಮಾತೆ ಇರುವುದು ಭಕ್ತರ ರಕ್ಷಣೆಗೋ ಅಥವಾ ಅವರ ಜೀವ ತೆಗೆಯಲೋ?
ನರೇಂದ್ರ ಶರ್ಮ ಅವರ ದೃಷ್ಟಿಯಲ್ಲಿ ಜಗನ್ಮತೆಯೇನು ರಾಕ್ಷಸಿಯೇ? ಪೆಡಂಭೂತವೆ? ಅಥವಾ ಪಿಡುಗೇ?
ದೇವರು ಇರುವುದೇ (ಇರುವುದೇ ಆದಲ್ಲಿ) ಜೀವ ಸಂಕುಲದ ರಕ್ಷಣೆಗೆ ಎಂದು 'ನಂಬುವ' ಸಂಸ್ಕೃತಿ, ಸಂಪ್ರದಾಯ ನಮ್ಮದು. ಈ ಶರ್ಮ ಆ ದೇವರಿಂದಲೇ ಜಗತ್ತಿನ ವಿನಾಶ ಎನ್ನುತ್ತಾರೆ. ಇದು ಯಾವ ರೀತಿಯ Logic ಶರ್ಮಾ ರವರೆ?
ಅಥವಾ ನೀವು ದೇವರನ್ನೇ (ಜಗನ್ಮಾತೆ ಯನ್ನೇ) ಮೀರಿಸುವ 'ದೇವರಾಗಲು' ಹೊರಟಿದ್ದೀರಾ?

Anonymous said...

nammaa tv channel galige budhi barola, e swamijigala , bolage mathanadodhana neelisola.

Anonymous said...

ನೀವು ಹೇಳೋದೇನೋ ಸರಿ. ಆದರೆ, ಟಿಆರ್ ಪಿಗಾಗಿ ಟಿವಿಗಳು ಇಂಥ ಕಾರ್ಯಕ್ರಮಗಳನ್ನೇ ಜಾಸ್ತಿ ನೆಚ್ಚಿಕೊಂಡಿವೆ. ಇಂಥ ಬೊಗಳೆ ಕಾರ್ಯಕ್ರಮಗಳನ್ನು ಜಾಸ್ತಿ ನೋಡೋದೇ ಹೆಂಗಸರು. ಹಾಗಾಗಿ, ಟಿವಿ ಮೇಲೆ ನಿಷೇಧಕ್ಕಿಂಥ ಇಂಥ ಹೊಲಸು ಕಾರ್ಯಕ್ರಮಗಳು ಮನೆಗೆ ಹೊಲಸು ಅಂಥ ಜನರೇ ಎಚ್ಚರಿಕೆವಹಿಸಬೇಕು
&ಅಭಿ

B.N. said...

Astrologers thrive because of the gullible class in our society irrespective of their educational/ illiteracy background. To add fuel to the fire we have some rotten channels who have nothing but such nonsense to telecast. Unless our people get proper perspective withregard to these Bogale/ Bogus astrologers these humbug class of professionals thrive &command respect from the masses.For that matter even if Swami NItyananda openly performs sexual acts there are followers who find devine message in such Sexual massages.Its time some criminal procedure code is applied to such cheats .These acts are worse than 420.

ಸುಬ್ರಮಣ್ಯ ಮಾಚಿಕೊಪ್ಪ said...

ಫಲಜ್ಯೋತಿಷ್ಯ ಒಂದು ಲೊಳಲೊಟ್ಟೆ!!!!
ಋಷಿ ಮುನಿಗಳು ಹೇಳಿದ್ದು ಎಂದು ತಿಳಿದುಕೊಂಡು ಹೆಚ್ಚಿನ ಜನ ನಂಬುತ್ತಾರೆ!! ಆದರೆ ಈ ಫಲಜ್ಯೋತಿಷ್ಯ ಪಶ್ಚಿಮದಿಂದ ಆಮದಾದ ಕಳಪೆ ಸರಕು!!! ಇದರ ಬಗ್ಗೆ ಪುರುಸೊತ್ತಾದಾಗ ಒಂದು ಬ್ಲಾಗ್ ಬರೆಯೋಣವೆಂದು ಅಂದುಕೊಂಡಿದ್ದೇನೆ.

ಇಂಗಿತ said...

ಏನೇ ಆದರೂ ಸಾಮಾನ್ಯ ಜನರು ಇದನ್ನು ನೋಡುವುದು ನಿಲ್ಲಿಸಬೇಕು.

ರೋಹಿಣಿ said...

ನನ್ನ post ಸ್ವಲ್ಪ ಉದ್ದವಾಗಿರತ್ತೆ, ದಯವಿಟ್ಟು adjust ಮಾಡ್ಕೊಳ್ಳಿ.
ಇಲ್ಲಿ ನಾನು 2 situation ನ ಹೇಳೊಕೆ ಇಷ್ಟಪಡ್ತೀನಿ. 1> ಇಬ್ಬರು ಗೃಹಿಣಿಯರಿಗೆ, ಈ ಕಾರ್ಯಕ್ರಮ ನೊಡೊದು ನಿಲ್ಸಿ ಅ೦ತ ಕನ್ನಡದಲ್ಲೆ ಸ್ವಛ್ಛವಾಗಿ ಹೇಳಿದಾಗ, ಅವರು ಇದರಲ್ಲಿ ಇರೊ ಲೋಪ ದೋಷವನ್ನು ಅರ್ಥಮಾಡಿಕೊ೦ಡು, ನೊಡೊದನ್ನ ನಿಲ್ಸಿದಾರೆ. 2> ಒಬ್ಬ ಭಾರಿ ಓದಿದ ಮಹಾಶಯರೊಬ್ಬರು (ನನ್ನ ಪರಿಚಯಸ್ಥರು), HAL ನಲ್ಲಿ ಒ೦ದು ಗೌರವಾನ್ವಿತ ಹುದ್ದೆಯಲ್ಲಿರೊರು, ಇದರ ಬಗ್ಗೆ ಹೇಳಿದಾಗ, ಈ ಕಾರ್ಯಕ್ರಮದಲ್ಲಿ ಹೇಳೋದೆಲ್ಲ ಸರಿ ಇದೆ, ಸುನಾಮಿ ಆಗಿದ್ದು ಹಾವು ತಿನ್ನೊದ್ರಿ೦ದಾನೆ ಅ೦ತ ಮಹಾ ವಿತ೦ಡ ವಾದ ನನ್ನ ಮು೦ದೆ ಇಟ್ಟರು. ಇದನ್ನು ಕೇಳಿದ ನನಗು ಮತ್ತು ನನ್ನ ಅಕ್ಕನಿಗೂ ಸಿಕ್ಕಿದ್ದರಲ್ಲಿ ಹೊಡೊಕೊಳ್ಳೊಹಾಗೆ ಆಯ್ತು. ಮೇಲೆ ಹೇಳಿದ ಇಬ್ಬರು ಗೃಹಿಣಿಯರು, ನನ್ನ ಅಜ್ಜಿ ಮತ್ತು ಅತ್ತೆ. ಇವರು ಭಾರಿ ಭಾರಿ ಓದಿದೊರೆನಲ್ಲ, ಆದರೂ, ಅವರಿಗೆ, ಈ ಕಾರ್ಯಕ್ರಮದಲ್ಲಿರುವ ದುರುದ್ದೇಶ ಅರ್ಥವಾಗಿ, ಅವರು ನೊಡೊದನ್ನ ನಿಲ್ಸಿದಾರೆ. ಆದರೆ ಪ್ರಜ್ನಾವ೦ತರು ಅನ್ನಿಸಿಕೊ೦ಡವರಿಗೆ, ತಲೇಲಿ ಬುದ್ದಿ ಇದ್ಯೊ, ಲದ್ದಿ ಇದ್ಯೊ ಸ್ವತಃ ಆ ಜಗನ್ಮಾತೆಗೂ ತಿಳಿತಿಲ್ಲ!!!
ಜ್ಯೊತಿಷ್ಯ ಶಾಸ್ತ್ರ ಅನ್ನೊದು, ಒ೦ದು Science. ಇದನ್ನು ಭಾರತದ ಹಲವಾರು ಸ೦ಸ್ಕೃತ ವಿಶ್ವವಿದ್ಯಾಲಯಗಳಲ್ಲಿ ಕಲಿಸಿಕೊಟ್ಟು ಅದಕ್ಕೆ ಒ೦ದು ಡಿಗ್ರಿ certificate ಕೊಡಲಾಗುತ್ತದೆ. ನಮ್ಮ ಈ ಚಾನೆಲ್ ಜ್ಯೊತಿಷಿಗಳು ಯಾವ ವಿಶ್ವವಿದ್ಯಾಲಯದಲ್ಲಿ ಡಿಗ್ರಿ ಪಡೆದುಕೊ೦ಡಿದ್ದರೆ, ಅ೦ತ ತಿಳಿಸಿದರೆ, ಉತ್ತಮ. ಆಗ ಇವರುಗಳಿಗೆ, ಸತ್ಯವಾಗಲು ಜ್ಯೊತಿಶಾಸ್ತ್ರ ಗೊತ್ತೊ, ಇಲ್ಲ TRP ಗೊಸ್ಕರ ಸುಳ್ಳಿನ ಕ೦ತೆಯನ್ನು ಕಟ್ಟುತ್ತಿದ್ದಾರೊ ಅ೦ತ ಗೊತ್ತಾಗತ್ತೆ.

ಎಸ್.ಬಿ said...

ಹಿರಿಯರಿಗೆ ಧನ್ಯವಾದಗಳು......

ತಾವು ಒಂದು ಮಹತ್ತರ ಕಾರ್ಯದಲ್ಲಿ ತೊಡಗಿದ್ದೀರಿ... ತುಂಬಾ ಸಂತೋಷ...

ಇಂತಹ ಕಮಂಗಿಗಳ ವಿರುದ್ಧ ಒಂದು ದೊಡ್ಡ ಆಂದೋಲನವೇ ಆಗಬೇಕಿದೆ.

ಇನ್ನೊಂದು ವಿಷಯ ತಮ್ಮ ಗಮನಕ್ಕೂ ಬಂದಿರಬಹುದು.ಇಂತಹ ಅಡ್ಡಕಸಬಿಗಳು ಟಿ.ವಿ.ಯಲ್ಲಿ ಬಂದದ್ದಕ್ಕಾಗಿ ಮಾತ್ರ ನಮಗೆ ಇಂತಹವರ "ಪರಿಚಯ" ಸಿಗುತ್ತಿದೆ.

ಆದರೆ ಇಂತವರು ಇಂದು ಗಲ್ಲಿ ಗಲ್ಲಿಗಳಲ್ಲಿ ಮನೆ ಮಾಡಿಕೊಂಡಿದ್ದಾರೆ.

ಮನೆ ಮನೆಗೆ ಹೋಗಿ ಪೂಜೆಯ ನೆಪದಲ್ಲಿ,ಹೋಮ,ಹವನದ ನೆಪದಲ್ಲಿ, ಜನರಿಗೆ ಮಂಕುಬೂದಿ ಎರಚುವವರು ಕಡಿಮೆಯಿಲ್ಲ.(ಕಣ್ಣಾರೆ ಕಂದಿದ್ದೇನೆ,ನನ್ನ ಮಿತ್ರರಲ್ಲೂ ಇದ್ದಾರೆ.ಅವರೇ ಹೇಳಿದ್ದು ಇದು ಅನಿವಾರ್ಯ,ಸರಿಯಾಗಿ ಪೂಜೆ ಮಾಡಿದರೆ,ಹೇಳಿದರೆ ಯಾರಿಗೂ ಬೇಡ ಎಲ್ಲವೂ ಅರ್ಜೆಂಟ ಆಗ್ಬೇಕು ಅದಕ್ಕೇ ನಾವು ಹೀಗೆ....ಯಾರು ಸರಿ..??? ಜನ ಮರುಳೋ ಜಾತ್ರೆ ಮರುಳೋ.......???!!!!)

ನಾನು ಇನ್ನೂ ಕೆಲವು ಅಪರೂಪದ ವಿದ್ವಾಂಸರನ್ನೂ,ಜ್ಯೋತಿಷಿಗಳನ್ನೂ ನೋಡಿದ್ದೇನೆ.ಆದರೆ ಅವರ್ಯಾರಿಗೂ ಪ್ರಚಾರದ ಆಸೆಯಿಲ್ಲ.ಅಗತ್ಯವೂ ಇಲ್ಲ."ವಿದ್ಯಾ ದದಾತಿ ವಿನಯಮ್" ಅನ್ನುವ ಉಕ್ತಿಗೆ ಅವರು ಅರ್ಹರು.ಅಂತಹ ಅನೇಕರಿಂದ ನಾನೂ ಸಾಕಷ್ಟು ಕಲಿತಿದ್ದೇನೆ.

ತಮ್ಮಲ್ಲಿ ಒಂದು ವಿನಂತಿ....ಸೃಷ್ಠಿಯಲ್ಲಿ ಕೆಟ್ಟವರೂ ಒಳ್ಳೆಯವರೂ ಇದ್ದಾರೆ.ಹಾಗೆಯೇ ಜ್ಯೋತಿಷಿಗಳೆಲ್ಲ ಕೆಟ್ಟವರಲ್ಲ,ಇಂತಹ ತಲೆಹಿಡುಕರನ್ನು ದಯವಿಟ್ಟು ಜ್ಯೋತಿಷಿಗಳೆಂದು ಸಂಭೋದಿಸಬೇಡಿ.ಅದು ಶಾಸ್ತ್ರಕ್ಕೆ ಮಾಡಿದ ಅವಮಾನ...ಎಂದು ನನ್ನ ಭಾವನೆ...

ನನ್ನಲ್ಲಿ ಒಂದು ಅನುಮಾನ....ಇಂತಹವರನ್ನು ಚಾನೆಲ್ ಇಂದ ಓಡಿಸಬಹುದು...ಕೊನೆಗೆ.....????

ಮತ್ತೆ ನಮ್ಮ ಬೆಂಗಳೂರಿನಲ್ಲಿರುವ ಹಲವು ಪೂಜಾರಿಗಳ ಕಥೆ.....???

ಪ್ರೀತಿಯಿಂದ......... ಎಸ್.ಬಿ

Anonymous said...

@ಸುಬ್ರಮಣ್ಯ
ಪ್ರತಿಯೊಂದಕ್ಕೂ ಪಶ್ಚಿಮವನ್ನು ದೂಷಿಸುವುದು ಸರಿಯಲ್ಲ. ಮಧ್ಯಯುಗದಲ್ಲಿ ಜಾತಿವಾದ ಹಾಗೂ ಮೂಢನಂಬಿಕೆಗಳಲ್ಲಿ ಹೂತುಹೋಗಿದ್ದ ನಮಗೆ ವೈಚಾರಿಕತೆಯ ಗಾಳಿ ಬೀಸಿದ್ದೇ ಪಶ್ಚಿಮದಲ್ಲಿ ಪ್ರಾರಂಭವಾದ ವೈಜ್ಞಾನಿಕ ಕ್ರಾಂತಿಯಿಂದಲ್ಲವೇ? ಯಾವುದನ್ನು ತೆಗೆದುಕೊಳ್ಳಬೇಕು ಅಥವಾ ಬಿಡಬೇಕು ಎಂಬುದು ನಮ್ಮ ಕೈಯಲ್ಲಿದೆ.
@ಸಂಪಾದಕೀಯ
ಒಳ್ಳೆಯ ಕೆಲಸವನ್ನು ಮಾಡುತ್ತಿದ್ದೀರಿ. ಇಂತಹ ಕಾರ್ಯಕ್ರಮವನ್ನು ನಿಲ್ಲಿಸಲು ಎರಡು ಮಾರ್ಗಗಳಿವೆ. ಒಂದು- ಈ ಚಾನಲ್ ಹಾಗೂ ನರೇಂದ್ರ ಶರ್ಮ ವಿರುದ್ಧ ಸ್ತ್ರೀಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕಾಗಿ ಹಾಗೂ ಜನರಲ್ಲಿ ಅನಗತ್ಯ ಭೀತಿ ಮೂಡಿಸಿದ್ದಾಕ್ಕಾಗಿ ನ್ಯಾಯಾಲದಲ್ಲಿ ಮೊಕದ್ದಮೆ ಹೂಡುವುದು.
ಎರಡು- ಬೀದಿಗಿಳಿದು ಚಾನಲ್ ವಿರುದ್ಧ ಪ್ರತಿಭಟನೆ ಮಾಡುವುದು.

Anonymous said...

sign campaign or online petition olledu anisutte .............or shall v take a help of rationalist Narendra Nayk ..........? he will sure help in this regard...... or is there any advocate takes an suo motto action based on the reports published in newspapers on `Moudyada deepa.............'

Anonymous said...

ಎಚ್. ನರಸಿಂಹಯ್ಯ ಅಂತಹವರು ಈಗ ಇದ್ದಿರಬೇಕಿತ್ತು.

ಸಿಮೆಂಟು ಮರಳಿನ ಮಧ್ಯೆ said...

ಏನ್ ಹುಚ್ಚ ಅದಾನ್ರೀ ಇವನು..?
ಮೆಂಟಲ್ ಇದಾನ...
ಅಶೋಕ್ ಪೈ ಹತ್ರ ತೋರ್ಸ್ ಬೇಕ್ರಿ....

Anonymous said...

We can send our feelings about narendra swamy & his bruhat brhamanda to the following email id.

feedbackzeekannada@zeenetwork.com

parthasarathi said...

ಝೀ ಟೀ ವಿ ಯವರಿಗೆ ಸಾಮಾಜಿಕ ಕಳಕಳಿ ಇದ್ದರೆ ಈ ಬೇಕುಪ್ಪ ನನ್ನ ಆಚೆಗೆ ಹಾಕಲಿ.ಒಂದೊಂದು ಎಪಿಸೋಡ್ ಗೆ ಸಾವಿರಾರು ಕೊಟ್ಟು ಸಾಮಾಜಿಕ ಸ್ವಾಸ್ಥ್ಯ ವನ್ನ ಹಾಳು ಮಾಡ್ತ ಇದಾರೆ.ಒಂದು ವೇಳೆ ಅವರು ಆ ಕೆಲಸ ಮಾಡಲಿಲ್ಲ ಅಂದ್ರೆ ನಾವು ಆ ಕೆಲಸ ಮಾಡೋಣ.ಜನ ಬೀದಿಗಿಳಿದರೆ ರಾಷ್ಟ್ರದ ನಾಯಕರೆ ಸೀಟು ಬಿಟ್ಟು ಕೆಳಗಿಳಿಯುತ್ತಿರುವಾಗ ಇವನ್ಯಾವ ಸೊಪ್ಪು,ಇವನದ್ಯಾವ ಸಿಂಹಾ ಸನ.

PARAANJAPE K.N. said...

ದೃಶ್ಯಮಾಧ್ಯಮದಲ್ಲಿ ಢೋ೦ಗಿ ಜ್ಯೋತಿಷಿಗಳ ಹಾವಳಿ ಹೆಚ್ಚಿದೆ. ಈ ಬ್ರಹ್ಮಾ೦ಡ ವ್ಯಕ್ತಿಯನ್ನು ಕಳೆದ ವಾರ ನಾನು ಖುದ್ದು ಕ೦ಡಿದ್ದೆ.( ಅಚಾನಕ್ ಆಗಿ ) ಈ ಬಗ್ಗೆ ನನ್ನ ಬ್ಲಾಗ್ ನಲ್ಲಿ ಒ೦ದು ಲೇಖನ ಹಾಕಿದ್ದೇನೆ. ನೀವೊಮ್ಮೆ ಓದಿ.
http://nirpars.blogspot.com/2011/03/blog-post_22.html

ಅರಕಲಗೂಡುಜಯಕುಮಾರ್ said...

@ಸಂಪಾದಕೀಯ, ಮಾರ್ಟಿನ್ ಲೂಥರ್ ಹೇಳಿರುವಂತೆ "ಸಮಾಜದ ಅಶಾಂತಿಗೆ ದುರ್ಜನರ ದುಷ್ಟತನಕ್ಕಿಂತ, ಸಜ್ಜನರ ಮೌನವೇ ಅತ್ಯಂತ ಅಪಾಯಕಾರಿ" ಯಾಗಿದೆ ಆದುದ್ದರಿಂದ ಛಾನಲ್ ಗಳಲ್ಲಿ ಜ್ಯೋತಿಷಿಗಳ ಮೂಲಕ ಬಿತ್ತಲಾಗುತ್ತಿರುವ ಮೌಡ್ಯ ಅಶಾಂತಿಗೆ ಕಾರಣವಾಗಿದೆ. ಹೊಣೆ ಮರೆತು ಮಾತನಾಡುವ ಜ್ಯೋತಿಷಿಗಳು ಮತ್ತು ಛಾನಲ್ ನಲ್ಲಿ ಪ್ರಸಾರಕ್ಕೆ ಅವಕಾಶ ಮಾಡುವವರ ವಿರುದ್ದವೂ ಪ್ರಕರಣಗಳು ದಾಖಲಾಗಬೇಕಿದೆ. ಮಹಿಳೆಯರನ್ನು ತುಚ್ಚವಾಗಿ ನಿಂದಿಸುವ ಮೂಲಕ ಅವಮಾನಿಸುವ ನರೇಂದ್ರಸ್ವಾಮಿ ಮತ್ತು ಇತರೆ ಟಿವಿ ಜ್ಯೋತಿಷಿಗಳು ಹಾಗೂ ನಿರ್ವಾಹಕರುಗಳ ವಿರುದ್ದ ರಾಜ್ಯದ ಪ್ರತೀ ಊರುಗಳ ಪೋಲಸ್ ಠಾಣೆಗಳಲ್ಲಿ ಸಮಾನ ಮನಸ್ಕ ಸಾರ್ವಜನಿಕರು ವೈಯುಕ್ತಿಕ ದೂರು ದಾಖಲು ಮಾಡಿದ್ದಲ್ಲಿ ಸಮಾಜದ ಸ್ವಾಸ್ಥ್ಯ ಉಳಿಯಬಹುದು.ಬೀದಿಗಿಳಿದು ಪ್ರತಿಭಟನೆ ಮಾಡಿದರೆ ವಿನಾಕಾರಣ ಅವರ ಕಾರ್ಯಕ್ರಮಕ್ಕೆ ಛಾನಲ್ ಗೆ ಪ್ರಚಾರ ಸಿಗುತ್ತದಲ್ಲವೇ ?

Anonymous said...

ಮೊನ್ನೆ ಹೀಗೆ ಬ್ರಹ್ಮಾಂಡದ ದಂಡಪಿಂಡನ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ಕೇಳಿದರು: ನೀವು ಯಾವಾಗ್ಲೂ ನ್ಯೇಟಿ ಹಾಕೋ ಹೆಂಗಸರನ್ನ ಬಯ್ಯುತ್ತಿರುತ್ತೀರಲ್ಲಾ? ನಿಮಗ್ಯಾಕೆ ನಮ್ಮ ನ್ಐಟಿ ಮೇಲೆ ಕಣ್ಣು?
ಅದಕ್ಕೆ ದಂಡ ಪಿಂಡ ತನ್ನ ಸಮಸ್ತ ಬ್ರಹ್ಮಾಂಡವನ್ನೂ ಕುಲುಕಿಸುತ್ತಾ, ಬುಸ ಬುಸನೆ ನಕ್ಕು ಹೇಳ್ತು: ನಿಮ್ಮ ಮೇಲೆ ನಂಗೇನೂ ಕೋಪ ಇಲ್ಲ...ಆದರೆ ನ್ಐಟಿ ನೋಡಕ್ಕೆ ಚೆನ್ನಾಗಿರಲ್ಲ...ಅಷ್ಟೇ...!
ಇವನಿಗೆ ಯಾವುದರಲ್ಲಿ ಹೊಡೆಯಬೇಕು?
-ಉಲ್ಲಾಸ

Anonymous said...

i agree with the the other readers that we can put pressure on the channels to stop telecasting such programs by sms and letters .... sampadakeeya is doing a good job and i think it should continue the same

umesh desai said...

sir we have to protest against tv channels. whether zee tv owner knows about such a senseless programme aired in his channel. if not we should spread his awareness, and if he is doing for TRP a campaign should be arranged so that advt. agencies should stop airing ads on this channel.
one simple thing we can do --we should throw stones in mr. sharmas public gatherings.

umeshdesai

Anonymous said...

jyotishigalu yava chanal galalli heliddaro,adara sathyasathyateya javabdari aaya chanalgaladdagirabeku.

Anonymous said...

nange sharmandu jyothi programgintha adu ondu comedy program thara basavagthade....dinesh

manju said...

Bareyorella Journalists, Barovella Newspaper and Channels.. Haage Burude bidoru, Tale Buda Ilde Mathanadoru ella Kalakkoo Irtaare.. Namma Janara Bauddika Matta Anthaddu..

Anonymous said...

ikralaa..odeeralaa..

Ravishankar Haranath said...

ಅವಿನಶ ಕನ್ನಮ್ಮನವರ್ ಅವರ ಅಭಿಪ್ರಾಯ ನನಗೂ ಸರಿಯೆನಿಸುತ್ತದೆ. ನಮ್ಮಲ್ಲೂ ನಾಗೇಶ್ ಹೆಗಡೆಯವರಂತಹ ಹಲವುಮಂದಿ ವೈಜ್ಞಾನಿಕ ವಿಚಾರವಂತರಿದ್ದಾರೆ. ಅವರ ಸಮ್ಮುಖದಲ್ಲೇ ನರೇಂದ್ರಶರ್ಮರಂತವರಿಗೆ ಪಾಠಕಲಿಸಬೇಕು.

ಇನ್ನೊಂದು ಭಿನ್ನಹ. ನಾವು ಪ್ರತಿಕ್ರಿಯಿಸುವಾಗ "Anonymous" ಆಗಬೇಕಿಲ್ಲ. ನಿಜವಾಗಿಯೂ ಸಾಮಾಜಿಕ ಕಾಳಜಿ ಇದ್ದರೆ ಗೌಪ್ಯತೆ ಏಕೆ?! ದಯವಿಟ್ಟು ಒಮ್ಮೆ ಯೋಚಿಸಬೇಕು.

Anonymous said...

MOST OF CHANNELS, NEWS PAPERS OWNED BY NON KANNADIGAS AND IMPORTANTLY MOST OF THEM CANT READ KANNADA AND KNOWS WHAT WAS TELECASTED & PRINTED. Tha kannadiga slaves who works in these TV/papers are the real culprit or owners ?
You ppl knew the damage done by Vijay karnataka

Anonymous said...

ಸಂಪಾದಕೀಯದವರೆ, ಈ ವಾರದ ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ ರವಿ ಬೆಳಗೆರೆ ಸಂಪಾದಕೀಯ ಬ್ಲಾಗ್ ಪ್ರಸ್ತಾಪಿಸಿ ಅವರ ಸಂಪಾದಕೀಯ ಬರೆದಿದ್ದಾರೆ. ನೀವು ಗಮನಿಸಲಿಲ್ಲವೇ?

Narayan said...

ಯಾವೊನೋ ಓಟ್ಲ ಜ್ಯೋತಿಷಿ ಕತ್ತೊರಗೂ ತಿಂದು ಎನೇನೋ ಡರ್ರಂಬುರ್ರುಂ ಬುರುಡೆ ಬಿಡ್ತಾನಲ್ರೀ... ಆತನ ಪಕ್ಕ ಕೂತ್ಕೊಳ್ಳೋ ನಿರೂಪಕಿ ಕೈಲ್ಲಿ ಮೆಡಿಕಲ್‌ ಟೇಪ್‌ ಕೊಡ್ರೀ... ಆತನ ಮೂತಿ ಮುಚ್ಚಕ್ಕೆ...

SHREE (ಶ್ರೀ) said...

ಒಲವೆ ಜೀವನ ಲೆಕ್ಕಾಚಾರ ಪಿಚ್ಚರಲ್ಲಿ ಇರುವುದು ಇದೇ ಸ್ವಾಮೀಜಿಯ ಕಥೆಯಂತೆ. ಈ ಕಥೆಯನ್ನಾದರೂ ಯಾರಾದರೂ ಸರಿಯಾಗಿ ತಿಳಿದುಕೊಂಡು ವಿವರಿಸಿ. ಅದು ಎಲ್ಲರಿಗೂ ತಿಳಿಯುವಂತೆ ಮಾಡಿ, ಅದರಿಂದ ಏನಾದರೂ ಉಪಯೋಗವಾಗಬಹುದು. ಈ ಕೆಲಸಕ್ಕೆ ನಮ್ಮಿಂದಾದ ಸಹಾಯ ನಾವು ಮಾಡೋಣ. ಪ್ರತಿಭಟನೆಗಳ ಜತೆಗೆ ಇದನ್ನೂ ಮಾಡಬೇಕು.

arpota said...

Sharmagantoo nacike, mana, maryade illa. innu Zee tv avarigoo illa anisutte. janara dari tappisuttiruv kuritu, prakarna dakhalisebeku.

-arpita, ganagvathi

ರೋಹಿಣಿ said...

@SHREE: howda!! nija na!!? haagadre, sariyada saakshi iddare, dayavittu tilisi.. adanna hidkondu, ivanige, huduki hodyana!!

srikanth said...

PLEASE INNU MUNDE INTHA KAPATHA JYOTHISI GALA KAI YINDA MUGDA JANARANNU RAKSHISI HAGU INTHA CHANEL GALANNU BAN MADI

ಕವಿಸ್ವರ,ಶಿಕಾರಿಪುರ said...

ಆರೋಗ್ಯವಂತ ಸಮಾಜದಲ್ಲಿ ಅನಗತ್ಯವಾಗಿ ನಾಗರೀಕ ಸಮುದಾಯವನ್ನು ಬೆಚ್ಚಿಬೀಳಿಸುವ ಕೃತ್ಯ ಎಸಗುವವರಿಗೆ ಭಯೋತ್ಪಾದಕರೆಂದು ಸಾಮಾನ್ಯವಾಗಿ ಕರೆಯಲಾಗುವುದು.. ಈ ನರೇಂದ್ರಶರ್ಮನಂತವನನ್ನೂ ಸಹ ಇಂತಹ ಭಯ-ಉತ್ಪಾದಕರ ಸಾಲಿಗೆ ಸೇರಿಸುವುದು ಸೂಕ್ತ, ಮೊದಲೇ ಸ್ವಾವಲಂಬಿ ಮನಸ್ಥಿತಿಯಿರದ ಹಲವು ಮುಗ್ಧ ಮನಸ್ಸುಗಳನ್ನು ಭಯದಲ್ಲಿರಿಸಿ ತನ್ನ ಕುತರ್ಕ ಸಮಜಾಯಿಷಿಗಳಿಂದ ವಂಚಿಸುವ ನರೇಂದ್ರಶರ್ಮನಂತ ಭಯೋತ್ಪಾದಕರಿಗೆ ಸಾರ್ವಜನಿಕ ವಂಚನೆಯ ಆರೋಪದಡಿ ಫಿರ್ಯಾದು ದಾಖಲಿಸಲು ಕಾನೂನು ನಿಯಮಗಳಲ್ಲಿ ಆಸ್ಪದವಿದೆ..
ಅದರಂತೆ ಈತನ ವಿರುದ್ಧ ತಮ್ಮ ಹತ್ತಿರದ ಪೊಲೀಸು ಠಾಣೆಗಳಲ್ಲಿ ವೈಚಾರಿಕ ವಿರೋಧಿ ಮತ್ತು ಸಾರ್ವಜನಿಕ ವಂಚನೆಯಡಿ ಕಂಪ್ಲೇಂಟು ದಾಖಲಿಸುವಂತೆ ನನ್ನ ವಿದ್ಯಾರ್ಥಿಗಳಿಗೆ ತಿಳಿಸಲು ಅನುವಾಗಿದ್ದೇನೆ.. ಸಂಪಾದಕೀಯದಂತೆ ಈತನ ವಿರುದ್ಧ ಆಂದೋಲನೋಪಾದಿಯಲ್ಲಿ ಜನಜಾಗೃತಿ ಮೂಡಿಸಲು ನಮ್ಮ ಕವಿಸ್ವರ ಸಮೂಹವೂ ಹಿಂದೆಯೇ ನಿರ್ಧರಿಸಿತ್ತು.. ನಾವೆಲ್ಲ ಸೇರಿ ಈತನ ವಿರುದ್ದ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಲು ಪ್ರಯತ್ನಿಸಬೇಕು ಮತ್ತು ಅದರನ್ವಯ ಈತನ ಮೂಢನಂಬಿಕೆ ಪಸರಿಸುವ ಕಾರ್ಯಕ್ರಮ ಪ್ರಸಾರದ ತಡೆಗೆ ಪ್ರಯತ್ನ ಮಾಡಬೇಕು..
ಸಮಯ ಮುಂತಾದ ವಾಹಿನಿಗಳಲ್ಲೂ ವಕ್ಕರಿಸುತ್ತಿರುವ ಈ ವಿಚಾರ-ವಿರೋಧಿಯ ಕಾರ್ಯಕ್ರಮಗಳಲ್ಲಿ ವಿಜ್ಞಾನಚಿಂತಕರನ್ನೂ ಮುಖಾಮುಖಿಯಾಗಿಸುವಂತೆ ಸಂಬಂಧಿತ ವಾಹಿನಿಗಳಿಗೆ ನಮ್ಮೆಲ್ಲರ ಲಿಖಿತ ಮನವಿಯನ್ನು ವರ್ಗಾಯಿಸಬೇಕು..

Anonymous said...

ನರೇಂದ್ರಶರ್ಮನ ಅವಾಂತರಗಳು ಒಂದೊಂದಲ್ಲ.
ಮೊನ್ನೆ ಜಿ-ಟಿವಿಯಲ್ಲಿ ಪ್ರಸಾರವಾದ ಸಾರ್ವಜನಿಕ ಸಮಾರಂಭದಲ್ಲಿ ಶರ್ಮನ ಹೊಸ ಸಿದ್ದಾಂತ ಕೇಳಿದವರಿಗೆ ದಂಗು ಬಡಿದದ್ದು ಸುಳ್ಳಲ್ಲ. ಅದ್ವೈತ, ವಿಶಷ್ಟಾದ್ವೈತ ಸಿದ್ಧಾಂತ ಗೊತ್ತಿತ್ತು. ಈ ಶರ್ಮನ ಸಿದ್ಧಾಂತ ಬಲುವಿಚಿತ್ರ. ಇವನ ಪ್ರಕಾರ ಆತ್ಮ ಎಂಬುದು ಕೊಳತುನಾರುವ ಲಂಗೋಟಿ, ಈ ಲಂಗೋಟಿಯನ್ನು ಯಾರು ಮುಟ್ಟಲಾಗದು, ನಾಶಗೊಳಿಸಲಾರದು ಮತ್ತು ನೋಡಲು ಸಹ್ಯವೆನಿಸದಂತೆ. ಹಾಗೆ ಆತ್ಮವನ್ನು ಕೂಡ ಯಾರು ನೋಡಲಾಗದು, ಮುಟ್ಟಲಾಗದು ಮತ್ತು ನಾಶಗೊಳಿಸಲಾಗದು ಅಂತ ಶರ್ಮ ಕೆಟ್ಟದಾಗಿ ವಿಶ್ಲೇಷಣೆ ನೀಡುತ್ತಾನೆ. ಹಿಂದೂ ಸನಾತನ ಧರ್ಮದ ಮಹಾ ತುಂಡೆಂದು ಹೇಳಿಕೊಳ್ಳುವ ಈತ, ಆತ್ಮವನ್ನು ಲಂಗೋಟಿಗೆ ಹೋಲಿಸಿ ಆತ್ಮ ಪರಿಕಲ್ಪನೆಗೆ ಮಹಾ ಅಪಚಾರ ವೆಸಗಿದರೂ, ಈ ಲಂಗೋಟಿ ಸಿದ್ಧಾಂತವನ್ನು ಕಣ್ಣು ಕೆಕ್ಕರಿಸಿಕೊಂಡು ನೋಡುತ್ತಾ, ಎಂಜಾಯ್ ಮಾಡುತ್ತಿದ್ದ ನಾಗರೀಕರನ್ನು ಕಂಡರೆ ಎಂತವರಿಗೂ ಅಸಹ್ಯವಾಗದಿರಲಿಲ್ಲ. ಇಂತಹ ಮತಿಗೇಡಿ ಹಾಗೂ ಲಜ್ಜಗೆಟ್ಟ ಜೋತಿಷಿಗಳ ಕಾರ್ಯಕ್ರಮಕ್ಕೆ ಲಕ್ಷಾಂತರ ರೂ ವ್ಯಯಿಸುವ, ಬಿತ್ತರಿಸುವ ವಿದ್ಯುನ್ಮಾನ ಮಾಧ್ಯಮಗಳಿಗೆ ಕಿಂಚಿತ್ತಾದರೂ ಸಾಮಾಜಿಕ ಹೊಣೆಗಾರಿಕೆ ಇಲ್ಲವೇ? ಇನ್ನಾದರೂ ಇಂತ ಸಮಾಜ ವಿರೋಧಿ, ಜೀವ ವಿರೋಧಿ ಕಾರ್ಯಗಳಿಗೆ ದುಡ್ಡು ಸುರಿಯುವ ಕೆಲಸವನ್ನು ಮಾಧ್ಯಮಗಳು ಮಾಡದಿರಲಿ. ಆಗ ಶರ್ಮನಂತಹ ಅಂತ ಕೆಟ್ಟ ಹುಳಗಳು ಮಿಂಚುವುದಿರಲಿ, ಯಾರ ಕಣ್ಣಿಗೂ ಗೋಚರಿಸುವುದಿಲ್ಲ. ಆ ದಿನ ಬೇಗ ಬರಲಿ...

-ಸುದೀಶ್, ಬೆಂಗಳೂರು

Ashraf manzarabad said...

ಕೋಡಂಗಿ ಜ್ಯೋತಿಷಿಗಳ ವಿರುದ್ಧ ಒಂದು ಆಂದೋಲನವೇ ನಡೆಯಬೇಕೆನಿಸುವುದಿಲ್ಲವೇ? ಈ ಜ್ಯೋತಿಷಿಗಳ ಆಟಾಟೋಪಗಳ ನಿಯಂತ್ರಣಕ್ಕೆ ಏನು ಮಾಡಬಹುದು? ನಾವು ಪ್ರಜ್ಞಾವಂತ ನಾಗರಿಕರಾಗಿ ಏನು ಮಾಡಲು ಸಾಧ್ಯ? ಎಲ್ಲರೂ ಸೇರಿ ನಮ್ಮ ಟಿವಿ ಚಾನಲ್‌ಗಳ ಮೇಲೆ ಒತ್ತಡ ಹೇರಿದರೆ ಇಂಥ ಕಾರ್ಯಕ್ರಮಗಳನ್ನು ನಿಲ್ಲಿಸಬಹುದಲ್ಲವೇ ? ಎಂಬ ತಮ್ಮ ಪ್ರಶ್ನೆಗೆ ಹಲವರು ಹಲವಾರು ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಮ್ಮ ಮಲೆನಾಡಿನಲ್ಲಿ ಒಂದು ಮಾತಿದೆ.. ಕಾಡು ಹಂದಿಯಾದರೆ ಗುಂಡು ಹೊಡೆಯಬಹುದು. ಊರು ಹಂದಿಯಾದರೆ ಏನು ಮಾಡೋದು ಅಂತ ?

ಇಲ್ಲಿನ ಸನ್ನಿವೇಶಕ್ಕೆ ಈ ಮಾತು ಅನ್ವಯಿಸುವಂತಿದೆ. ಓದುಗರು ನೀಡಿರುವ ಸಲಹೆಗಳಲ್ಲಿ ಕೆಲವರು ಈ ಕೋಡಂಗಿ ಜ್ಯೋತಿಷಿಗಳ ವಿರುದ್ಧ ಜನತೆ ಸ್ಥಳೀಯ ಪೋಲಿಸ್ ಠಾಣೆಗಳಲ್ಲಿ ದೂರು ನೀಡಬೇಕೆಂಬ ಸಲಹೆ ನೀಡಿದ್ದಾರೆ. ಅದು ಒಂದು ಉತ್ತಮ ಮತ್ತು ಪರಿಣಾಮಕಾರಿ ಸಲಹೆಯ ರೀತಿ ಇದೆ. ಒಟ್ಟಿನಲ್ಲಿ ಈ ಪಿಡುಗಿನ ವಿರುದ್ಧ ಧ್ವನಿ ಎತ್ತಿರುವ ಸಂಪಾದಕೀಯದ ಕಾಳಜಿ ಅಭಿನಂದನಾರ್ಹ .

Anonymous said...

ನಾಗರೀಕ ಸಮುದಾಯ ಮೂಢನಂಬಿಕೆ ಪಸರಿಸುವ ಕಾರ್ಯಕ್ರಮ ಪ್ರಸಾರದ ತಡೆಗೆ ಪ್ರಯತ್ನ ಮಾಡಬೇಕು

Ashraf manzarabad said...

ಈ ಕೋಡಂಗಿ ಜ್ಯೋತಿಷಿಗಳು ನಮ್ಮ ದೇಶದಲ್ಲಿ ಎಲ್ಲಾ ಕಡೆ ಎಲ್ಲಾ ಧರ್ಮಗಳಲ್ಲೂ ತುಂಬಿ ಬಿಟ್ಟಿದ್ದಾರೆ . ಇಲ್ಲಿ ನರೇಂದ್ರ ಶರ್ಮನಿಗೆ ಮತ್ತಿತರ ಕೆಲವರಿಗೆ ಟಿವಿ ಮಾಧ್ಯಮ ಪ್ರಚಾರ ಕೊಟ್ಟು ಜನರಿಗೆ ಮಂಕು ಬೂದಿ ಎರಚಿದೆ. ನನಗೆ ಗೊತ್ತಿರುವ ಹಾಗೆ ನಮ್ಮ ಸಾಬರ ಜಾತಿಯಲ್ಲೂ ಇವನಂತಹವರು ಬಹಳ ಜನ ಇದ್ದಾರೆ. ಅಲ್ಲಾಹನ , ಬಾಬಾನ ಹೆಸರಿನಲ್ಲಿ ಮಂಕುಬೂದಿ ಎರಚುತ್ತಾ ಬಡವರ ಹಣ ಹೊಡಿಯುತ್ತಾ ಇದ್ದಾರೆ. ಅವರಿಗೆ ಟಿವಿ ಮಾಧ್ಯಮದಲ್ಲಿ ಮಿಂಚಲು ಜಾಗ ಸಿಕ್ಕಿಲ್ಲ ಅಷ್ಟೇ. ಸಿಕ್ಕಿದ್ದರೆ ಅವರೂ ಇವನಂತೆ ಇನ್ನೇನೋ ಬೋಂಗು ಬಿಟ್ಟು ಜನರನ್ನು ಭಯ ಬೀಳಿಸಿ ದುಡ್ಡು , ಹೆಸರು ಎರಡೂ ಮಾಡಿಕೊಳ್ತಾ ಇದ್ರು.

Anonymous said...

nana abhiprayadalli nrendr kanditha jothishada hucha

Anonymous said...

http://www.zeekannadatv.com/feedback.aspx

http://www.zeekannadatv.com/contactus.aspx

yellaru dayavittu nimma nimma kastagalannu tilisi...

ramyaprapancha said...

ಈ ಲೇಖನ ಪ್ರಸಿದ್ದ ಪತ್ರಿಕೆಗಳಲ್ಲಿ ಪ್ರಕಟವಾದರೆ ಇನ್ನೂ ಹೆಚ್ಚು ಜನರನ್ನು ತಲುಪಬಹುದು. ಇದರಿಂದ ಕೆಲವರಾದರು ಇಂತಹ ಕಾರ್ಯಕ್ರಮ ನೋಡುವುದನ್ನು ನಿಲ್ಲಿಸಬಹುದೇನೋ!!

Kumar said...

ಮೇಲಿರುವ ಎಲ್ಲ ಪ್ರತಿಕ್ರಿಯೆಗಳನ್ನು ಓದಿ, ನನ್ನ ಮನೆಯಲ್ಲಿ ಟೀ ವಿ ಇಲ್ಲದ್ದನ್ನು ನೆನೆಸಿಕೊಂಡು ತುಂಬ ಖುಷಿಯಾಯಿತು, ನನ್ನ ಪೂರ್ವ ಜನ್ಮದ ಪುಣ್ಯದಿಂದಾಗಿ ಈ ಮೈಸೂರು ಬ್ಯಾಂಕಿನ ಬಳಿ ಗಿಳಿ ಜ್ಯೋತಿಷ್ಯ ನೋಡಲಾಗಲಿಲ್ಲವೆಂದು ಇನ್ನು ಜಾಸ್ತಿನೆ ಖುಷಿ ಆಯಿತು.


G!R!SH said...

E riti ellarannu daari tappisutiruva narendra sharma na mele case haakbeku.
avarelli agni shridhar?
avaru e aandolanada nayakatva vahisikollabeku.
karnatakada pratiyobba samachittada naagarikarU idara virudda sidideluva kaala bandide.
neenu yaava riti horatavannu sanghatisuttira? heli navu nimmondige idde irtivi.

Girish and Friends

Anonymous said...

Oh ! this is from where this narendra swamy sharma is getting inspiration?! and talking about PRALAYA ! He is definitely trying to become another Benny henn.. He is on his way already, started doing public programmes, like jana darshana..etc. some thing should be done against him . seriously.

Anonymous said...

put him in some lunatic asylum, thats where he belongs to.some of his antics look so vulgar that i feel like slapping on his face. agni shreedhar should take charge against this pralayanthaka who is creating rumbles in innocent people's lives so much so that, people are refusing to get insured for the simple reason the world is going to be finished anyhow in 2011!!

ರವಿ ಭರತ್ said...

Aa ******* maganige budhi illa, namma janaru kuda ade rithi varthisuthidhare, janaru hechetu kolabeku, aatha Hudoo Pogige janaru thale adisabharadhu, avaga athane mulege sarikoluthane,

Nenapirali : Mosa Hogoru heli varegu erutharo, ali varegu Mosa Madooruv Iruthare

karthik said...

ivnige oddu buddi heladidre innu enenu shrusti madtano, mr.body bramhanda...ivniginta dodda pralaya ellu sigalla...

Anonymous said...

ದೇಹ ನಶ್ವರ, ಆತ್ಮ ಶಾಶ್ವತ, ಚಿರಂತನ. ದೇಹವು ಕೊಳಕು ವಸ್ತ್ರ ವಾದರೂ ಆತ್ಮ ಎಂದಿಗೂ ಶುದ್ಧ ವಾದುದು. ದೇಹ ವು ಬರಿಯ ವಸ್ತ್ರ ವಿದ್ದಂತೆ, ಮನುಷ್ಣ ನ ಸಾವಿನ ನಂತರ ಆತ್ಮ ವು ಆ ವಸ್ತ್ರ ದಿಂದ ಕಳಚಿ ಕೊಳ್ಳುತ್ತದೆ. ಇದೆಲ್ಲ ನಾವು ನಮ್ಮ ಧರ್ಮ ಗ್ರಂಥಗಳು ಮತ್ತು ಆಧ್ಯಾತ್ಮ ದ ಚಿಂತಕರಿಂದ ಇದುವರೆಗೂ ತಿಳಿದಿದ್ದಂತಹ ವಿಚಾರಗಳು. ಈಗ ಇದ್ಯಾವನಯ್ಯಾ ಇವನು ಹೊಸದಾಗಿ ಆತ್ಮ ವನ್ನೇ ಕೊಳಕು ಬಟ್ಟೆ ಅನ್ನೋವನು? ಇವನನ್ನ ಏನು ಮಾಡಬೇಕು? ! ಜನರಿಗೆ ತಪ್ಪು ತಪ್ಪಾಗಿ ಮಾರ್ಗದರ್ಶನ ನೀಡುವುದರ ಮೂಲಕ ಇವನು ಅವರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾನೆ. ನಮ್ಮ ಆಧ್ಯಾತ್ಮ , ಧರ್ಮ ಸಿದ್ದಾಂತ ಗಳ ಬಗ್ಗೆ ತಿಳಿದಿರುವ ಮೇಧಾವಿ ಗಳೆಲ್ಲ ಎಲ್ಲಿದ್ದಾರೆ? ಅವರ್ಯಾರಿಗೂ ಇವನು ಮಾಡುತ್ತಿರುವ ಕೆಲಸ ಗಳ ಅರಿವಿಲ್ಲವೇ? ಇವನಿಗೆ ಕಡಿವಾಣ ಹಾಕಲು ಸಾಧ್ಯವಿಲ್ಲವೇ ಅವರಿಗೆ? ಯಾಕೆ ನಮ್ಮ ವಿಧ್ವಾಂಸರು, ಸ್ವಾಮೀಜಿಗಳು, ಪಂಡಿತರು ,ಎಲ್ಲರೂ ಸುಮ್ಮನಿದ್ದಾರೆ? ಅವರಿಗೆ ಜವಾಬ್ದಾರಿ ಇಲ್ಲವೇ? ನಿಜವಾಗಿ ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಬೇಕಾದವರೇ ಅವರು.

ಅವಿನಾಶ ಕನ್ನಮ್ಮನವರ್ said...

"ಈ ಚರ್ಚೆ ವ್ಯರ್ಥವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ನಮ್ಮ ಮೇಲಿದೆ",
ಇದೇ ನಮಗೆ ಬೇಕಾಗಿದ್ದು,, ಇದೊ೦ದು ಕ್ರಾ೦ತಿಯಾಗಿಬಿಡಲಿ..

B.N. said...

Irepeat ... so long as these rotten TV channels go after this humbug of an astrolger there shall be people watching the programme , blindly doing whatever instruction this bogale swami gives. The best way to shut his mouth is people taking law into their own hands & defacing him with cowdung or bullshit!

ಅರಕಲಗೂಡುಜಯಕುಮಾರ್ said...

@ಸಂಪಾದಕೀಯ,ಈ ಹಿಂದೆ ನಾನೇ ಸೂಚಿಸಿದ ಸಲಹೆಯಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನರೇಂದ್ರ ಶರ್ಮ ಹಾಗೂ ಇತರೆ ಕಿರುತೆರೆ ಜ್ಯೋತಿಷಿಗಳು ಬಿತ್ತುತ್ತಿರುವ ಮೌಢ್ಯ, ಮಹಿಳೆಯರ ಕುರಿತ ಅಗೌರವದ ಮಾತುಗಳ ವಿರುದ್ದ ದೂರು ನೀಡಲು ನಿರ್ಧರಿಸಿದ್ದೇನೆ.. ಹಾಗೆಯೇ ಛಾನಲ್ ನಿರ್ವಾಹಕರ ವಿರುದ್ದವೂ ಇದು ಸಾಧ್ಯವೇ ಅಂದರೆ ಸದರಿ ವಿಷಯದ ಬಗ್ಗೆ ದೂರು ದಾಖಲಿಸಲು ವ್ಯಾಪ್ತಿ ಏನಾದರೂ ನಿಗದಿಯಾಗಿದೆಯೇ? ಒಂದು ಸಂಕ್ಷಿಪ್ತ ದಾಖಲಿಸಬಹುದಾದಂತಹ ದೂರಿನ ಮಾಡೆಲ್ ನೀಡಿದರೆ ಉಪಕಾರವಾದೀತೇನೊ

Rajesha said...

ಆತ್ಮವೆಂದರೆ ಕೊಳೆತು ನಾರುವ ಲಂಗೋಟಿಯೇ - ಓಹೋ ಬಹುಷಃ ಅದು ನರೇಂದ್ರ ಸ್ವಾಮಿಯ ಆತ್ಮವೆ ಇರಬೇಕು.

ms manjunatha said...

ಕೊಳೆತು ನಾರುವ ಲಂಗೋಟಿ! ನಂಗೆ ನಗು ತಡೆಯಕ್ಕಾಗುತ್ತಿಲ್ಲ.

Nagu said...

ವಿನಾಶ ಕಾಲವೇ ವೀಪರೀತ ಬುದ್ಧಿ! ಈತನಿಗೆ ಅದ್ಯಾವಾಗ ಬುದ್ಧಿ ಬರೋತ್ತೋ

ಅವನ ಲಂಗೋಟಾದ್ವೈತಕ್ಕೆ ಧಿಕ್ಕಾರ.

ಸಂಪಾದಕೀಯದ ಪ್ರಯತ್ನಗಳು ಅಭಿನಂದಾನರ್ಹ

ನಾಗೇಂದ್ರ

satish said...

A Narendra babu hoba manga mundedu... ava mathu kelloru... Mangagaleee bidi...

Anonymous said...

ಅವನು ಹೇಗಿದ್ದಾನೋ, ಅದರಂತೆ ಅವನ ಆತ್ಮವಿದೆ ಎಂಬುದು ಅವನ ಅರ್ಥ. ಆದರೆ, ಈ ಪ್ರಗತಿಪರರು, ಬುದ್ಧಿಜೀವಿಗಳೆಂದು ಕೊಂಡವರು ಪ್ರತಿಯೊಂದಕ್ಕೂ ಪ್ರತಿಭಟನೆ ಮಾಡುವವರು ಈಗ ಯಾಕೆ ಸುಮ್ಮನಿದ್ದಾರೋ, ಈ ಮನುಷ್ಯ ಒಂದು ಅನಿಷ್ಟವಾದರೆ, ಟಿ ವಿ ೯ ನ ನಾರಾಯಣ ಸ್ವಾಮಿ ಮತ್ತೊಂದು ಅನಿಷ್ಟ. ಇವರನ್ನು ವಿರೋಧಿಸೋದು ತೀರಾ ಅಗತ್ಯ. ನಾರಾಯಣ ಸ್ವಾಮಿಯಂತೂ ೧೦ ರಿಂದ ೨೦ ಸಾವಿರ ರೂ. ಕೊಟ್ರೆ ಯಾವ ಮನೆಯಲ್ಲಾದ್ರೂ ಗೂಬೆ ಕೂರಿಸ್ತಾನೆ, ಅದಕ್ಕೇ ಪೂಜೆ ಮಾಡಿಸ್ತಾನೆ, ಆ ಕಂಪನಿಯವರಿಗೂ ಕಮೀಶನ್ ಹೋಗುತ್ತೇ ಇರ್ಬೇಕು ತಣ್ಣಗಿದ್ದಾರೆ. ಇಬ್ಬರನ್ನೂ ಜನ ಎದುರಾದಲೆಲ್ಲಾ ವಿರೋಧಿಸ್ಬೇಕು ಜತೆಗೆ ಎಕ್ಕಡದಲ್ಲಿ ಹೊಡೀಬೇಕು, ಇಡೀ ಕುಟುಂಬಕ್ಕೇ ಸಾಮಾಜಿಕ ಬಹಿಷ್ಕಾರ ಹಾಕ್ಬೇಕು...

Anonymous said...

ayyo odake hesige aguthe. innu keloke agutha heli? edakke bega sollution sigalebeku
-chitra

Anonymous said...

ನಮ್ಮ ನರೇಂದ್ರಸ್ವಾಮಿ ಅನ್ನಬೇಡಿ.

Anonymous said...

Your beating at bush...forget langoti jostisi
Shoot a powerful letter to TV channel owners..
Don;t forget the damage done by Vijay Karnataka, a Times Group publication
This is very dangerous trend in Karnataka. We fight for kannada. Same time these non kannadiga media outlets ruining our society..Any body serious about this..
Shoot a letter to owners and cc to I&B and Home ministry of GoI..it is very serious matter

Anonymous said...

ಬೆನ್ನಿಹಿನ್ನ್ ಬಗ್ಗೆ ಪೂರ್ವಾಗ್ರಹ ಪೀಡಿತ ಅಭಿಪ್ರಾಯವಿದ್ದರೆ, ಅವರ ಬಗ್ಗೆ ನೀವೊಂದಿಷ್ಟು ತಿಳಿದುಕೊಳ್ಳುವುದು ಉಚಿತ ಅನಿಸುತ್ತಿದೆ.

sunil said...

ಸರ್, ಸ೦ಪಾದಕೀಯ ವೇದಿಕೆ ತು೦ಬ ಚೆನ್ನಾಗಿದೆ ಆದರೆ, ಹೀಗೆ ಒಬ್ಬ ವ್ಯಕ್ತಿ ಅಥವಾ ಒ೦ದು ಮಾದ್ಯಮದವರ ತಪ್ಪುಗಳ ಜೊತೆಗೆ, ಸಮಾಜದಲ್ಲಿ ನಡೆಯುತಿರುವ ಕೆಲವೊ೦ದು ವಿಷಯಗಳ ಬಗ್ಗೆ ಕೂಡ ವಿಶ್ಲೆಷಣೆ ಅಗತ್ಯವಿದೆ.

2 comments:

  1. namaskara sir.....

    World cup cricketegu munche SUVARNA chennelenavru mooru mandi kalla jyotishigallu karedu matadisidru.... avra sambashane heegide:

    1) EE BAARI CUPANNU ENGLAND PADEYUTTE
    2) NAMMA INDIA FINELEGE HOGUTTE ADRE CUP GELLALLA
    3) YARU ENE HELIDRUUU INDIA EE BARI CUP GELLALU CHANCE ELLL

    heege sagittu eee moovaru bogale dasara helikegalu....

    adre namma indiayane cup gedda mele aa moovaru kallaru ellidare antha MANYA SUVARNA CHENNELNVARU TILISABEKU...

    -ANDA

    ReplyDelete
  2. ರಾಹುಕಾಲ, ಗುಳಿಕಕಾಲ, ನಕ್ಷತ್ರ ಎಲ್ಲವೂ ಮಾನವನ ಕಾಲ್ಪನಿಕ ಸೃಷ್ಠಿ. ಜ್ಯೋತಿಷ್ಯಕ್ಕೂ ಇದಕ್ಕೂ ಏನೇನೂ ಸಂಬಂಧವಿಲ್ಲ. ಬ್ರಹ್ಮ ಬರೆದಿರುವುದನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳುವವರು ಜ್ಯೋತಿಷಿಗಳೆ. ಅದನ್ನು ಬದಲಾಯಿಸಲು ಪರಿಹಾರ ಸೂಚಿಸುವವರೂ ಅವರೇ. ’ಉದರ ನಿಮಿತ್ತಂ ಬಹುಕೃತ ವೇಷಂ’ ಈ ವೇಷಕ್ಕೆ ಬಲಿಯಾಗುವವರೇ ಮುಗ್ದ ಜೀವಿಗಳು. ಮುಗ್ದತೆ ಅಳಿಯುವವರೆಗೂ ಜ್ಯೋತಿಷಿಗಳು ಇದ್ದೇ ಇರುತ್ತಾರೆ. ಆ ಮುಗ್ದತೆ ಕೊನೆಗೊಳ್ಳುವುದೆಂತು?

    ReplyDelete