Thursday, March 31, 2011

ತಸ್ಲೀಮಾ ನಸ್ರೀನ್, ಜೆಪಿ, ಚೇತನಾ ತೀರ್ಥಹಳ್ಳಿ ಮತ್ತು ಒಂದು ವಿವಾದ


ತಸ್ಲೀಮಾ ನಸ್ರೀನ್

 ಕನ್ನಡಪ್ರಭದಲ್ಲಿ ತಸ್ಲೀಮಾ ನಸ್ರೀನ್ ಅವರ ಅನುವಾದಿತ ಲೇಖನವೊಂದು ಪ್ರಕಟಗೊಂಡಿದ್ದು, ಆನಂತರ ರಾಜ್ಯದ ವಿವಿಧ ಭಾಗಗಳಲ್ಲಿ ಗಲಭೆ ನಡೆದಿದ್ದು, ಗಲಭೆಯಲ್ಲಿ ಇಬ್ಬರು ಬಲಿಯಾಗಿದ್ದು, ಮೂಲ ಲೇಖನವನ್ನು ತಿರುಚಲಾಗಿದೆ ಎಂದು ಸ್ವತಃ ತಸ್ಲೀಮಾ ನಸ್ರೀನ್ ಸ್ಪಷ್ಟನೆ ನೀಡಿದ್ದು ನಿಮಗೆ ನೆನಪಿರಬಹುದು. ಕನ್ನಡಪ್ರಭ ಸಾಪ್ತಾಹಿಕದಲ್ಲಿ ಸಿಂಧು ಎಂಬ ಹೆಸರಿನಲ್ಲಿ ಪ್ರಕಟಗೊಂಡ ಈ ಲೇಖನವನ್ನು ಬರೆದಿದ್ದು ಚೇತನಾ ತೀರ್ಥಹಳ್ಳಿಯವರು ಎಂಬ ವದಂತಿಯನ್ನು ಹಬ್ಬಿಸಲಾಗಿತ್ತು. ಇದರಿಂದಾಗಿ ಚೇತನಾ ಸಾಕಷ್ಟು ನೊಂದಿದ್ದರು. ಈಗ ಲೇಖನ ಬರೆದದ್ದು ಯಾರು ಎಂಬುದು ಬಹಿರಂಗವಾಗಿದೆ. ಆ ದಿನಗಳಲ್ಲಿ ತಾವು ಅನುಭವಿಸಿದ ನೋವನ್ನು ಚೇತನಾ ಇದೀಗ ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರೆ. ಅವರ ಅನುಮತಿ ಪಡೆದು ಈ ಬರಹವನ್ನು ಸಂಪಾದಕೀಯದಲ್ಲಿ ಪ್ರಕಟಿಸಬೇಕು ಎನ್ನುವಷ್ಟರಲ್ಲಿ ಅವರೇ ಈ ಲೇಖನವನ್ನು ಪ್ರಕಟಣೆಗಾಗಿ ಮೇಲ್ ಮಾಡಿದ್ದಾರೆ.  ಚೇತನಾ ಅವರ ಈ ಲೇಖನ ಅವರ ವಿರುದ್ಧ ಪಿತೂರಿ ನಡೆಸಿದವರ ಕಣ್ತೆರೆಸಲಿ ಎಂಬುದು ನಮ್ಮ ಆಶಯ. ಚೇತನಾ ಅವರಿಗೆ ನಮ್ಮ ನೈತಿಕ ಬೆಂಬಲವಿರುತ್ತದೆ  -ಸಂವೈಯಕ್ತಿಕ ವಿಶ್ವಾಸಕ್ಕಿಂತ ಅಗ್ಗದ ಸಾಕ್ಷಿಯೇ ದೊಡ್ಡದಾಗುತ್ತದಾ?


ವರ್ಷದ ಹಿಂದಿನ ಮಾತು. ತಸ್ಲಿಮಾ ಮಾತುಗಳನ್ನ ಮಹಾಶಯರೊಬ್ಬರು ಹುಡುಗಿ ಹೆಸರಲ್ಲಿ ಅನುವಾದಿಸಿ ಕ.ಪ್ರ.ದಲ್ಲಿ ಪ್ರಕಟಿಸಿದ್ದರು. ಪರಿಣಾಮ- ಬೆಂಕಿ ಬಿದ್ದಿತ್ತು. ಎರಡು ಜೀವ ಹೋಗಿತ್ತು. ನಾನು ಆಗ ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಕಪ್ಪು ಚುಕ್ಕೆ ಅದು. ಜೊತೆಗೆ ವೈಯಕ್ತಿಕ ನಷ್ಟವೂ. ನನ್ನ ಕೆಲವು ಗೆಳೆಯರು, ಮನಸು- ಹೃದಯಗಳೊಂದೂ ಇಲ್ಲದೆ ಬುದ್ಧಿಯಲ್ಲಷ್ಟೆ ಜೀವಿದುವವರು- ಇಂಥವರೆಲ್ಲ ಅದು ನಾನು ಎಂದು ತೀರ್ಮಾನಿಸಿಬಿಟ್ಟಿದ್ದರು. ಕೆಲವರ ಚುಚ್ಚು ಮಾತು, ಮೆಸೇಜುಗಳು, ಕಮೆಂಟುಗಳು ಮತ್ತಷ್ಟು ಜನರ ಹಾದಿ ತಪ್ಪಿಸಿ ನನ್ನೆದುರು ನಿಲ್ಲಿಸಿದ್ದವು. ಈ ಮಧ್ಯೆ ಒಂದೆರಡು ಬೆದರಿಕೆ ಕರೆಗಳೂ ಬಂದು, ನಾನು ಸಂಪಾದಕರ ಬಳಿ ಓಡಿ ರಕ್ಷಣೆ ಕೊಡಿಸುವಂತೆಯೂ ಕೇಳಬೇಕಾಗಿ ಬಂತು.
ಅದೆಲ್ಲ ಈಗ ನಡೆದ ಹಾಗಿದೆ. ಅಂದಿನ ಕ.ಪ್ರ.ಸಂಪಾದಕರು ಮಹಾವಲಸೆಯಿಂದ ಚೇತರಿಸಿಕೊಂಡು ಪತ್ರಿಕೆ ಕಟ್ಟುತ್ತಿದ್ದ ಅವಧಿಯದು. ಮ್ಯಾಗಜಿನ್‌ನ ಸಂಪೂರ್ಣ ಜವಾಬ್ದಾರಿ ಪುರವಣಿ ಸಂಪಾದಕರ ಮೇಲೆಯೆ ಇತ್ತು. ಅಂದಿನ ಸಂಪಾದಕರು ನಂಬಿ ಕೆಟ್ಟರು. ನಂಬಿದ್ದೇ ನನ್ನ ತಪ್ಪು, ಅದು ನನ್ನ ಬೇಜವಾಬ್ದಾರಿತನ ಅಂತ ಆಮೇಲೆ ಬಹಳ ಬಾರಿ ಬಹಳ ಕಡೆ ಅವಲತ್ತುಕೊಂಡಿದ್ದು ಕೇಳಿದ್ದೇನೆ. ಪುರವಣಿ ಸಂಪಾದಕರು ತಮ್ಮ ಗೆಳೆಯ ಕಳಿಸಿಕೊಟ್ಟ ಲೇಖನವನ್ನು ವಿವೇಚನೆ ಇಲ್ಲದೆ ಪ್ರಕಟಿಸಿಬಿಟ್ಟರು. ಆ ಗೆಳೆಯನಾದರೂ ಮತ್ತೊಂದು ಪತ್ರಿಕೆಯ ಕೆಲಸಗಾರನಾಗಿದ್ದ, ಜವಾಬ್ದಾರಿ ಹುದ್ದೆಯಲ್ಲಿದ್ದ, ಹೊರ ಜಗತ್ತಿಗೆ ಬುದ್ಧಿವಂತನಂತೆ ಪೋಸ್ ಕೊಡುವವನಾಗಿದ್ದ. ಆ ಅವಿವೇಕದ ಲೇಖನವನ್ನು ಒಂದು ಹುಡುಗಿಯ ಹೆಸರಲ್ಲಿ ಪ್ರಕಟಿಸಲಾಯ್ತು. ಕೆಲವರು ಅದು ಪುರವಣಿ ಸಂಪಾದಕರೇ ಎಂದೂ, ಕೆಲವರು ಅವರ ಗೆಳತಿ ಇರಬಹುದೆಂದೂ ಊಹಿಸಿಕೊಂಡರು. ಪುರುಸೊತ್ತಿನಲ್ಲಿದ್ದು, ನನ್ನ ಮೇಲೆ ಏನಾದರೊಂದು ಆಕ್ಷೇಪ ಇಟ್ಟುಕೊಂಡಿದ್ದ ಕೆಲವರ ಬಾಯಿಗೆ ನಾನು ಬಿದ್ದೆ.  ಮತ್ತವೇ ಕೋಮುವಾದಿ, ಬಲಪಂಥೀಯ, ಕೇಸರಿ ಮದ್ಯದಂತಹ ಕಿತ್ತೋದ ಡೈಲಾಗುಗಳು, ಕುಹಕಗಳು.
ಚೇತನಾ ತೀರ್ಥಹಳ್ಳಿ
ಅಷ್ಟೆಲ್ಲ ಬೇಸರಪಟ್ಟುಕೊಳ್ಳುವ ಅಗತ್ಯವಿದ್ದಿಲ್ಲ, ಆದರೂ ನೋವಾಗಿಬಿಟ್ಟಿತು. ಆ ಒಂದು ತಿಂಗಳ ನನ್ನ ಒಳಗುದಿ ಹೇಳಿಕೊಳ್ಳಲು ಆಗದಂಥದ್ದು.  ಪತ್ರಕರ್ತ ಮಿತ್ರರು ಕೆಲವರು ಈ ಗಾಸಿಪ್ ಅನ್ನು ಮತ್ತಷ್ಟು ವ್ಯಾಪಕಗೊಳಿಸುವಲ್ಲಿ ಸಕ್ರಿಯರಾಗಿದ್ದ ಬಹಳ ಬೇಸರ ಮಾಡಿತ್ತು. ಕೆಲವರಂತೂ ಕಾಲ್ ಮಾಡಿ  ಆರೋಪವನ್ನು ನನ್ನ ಮೇಲೆ ಹೇರಿದರು. ಅಷ್ಟು ಶ್ರಮ ತೆಗೆದುಕೊಂಡರು.
ಈಗ, ಈಗ ಏನು? ಐದಾರು ತಿಂಗಳ ಹಿಂದಿನಿಂದಲೇ ಜೆಪಿ ಯ ಹೆಸರು ಬಹಿರಂಗಗೊಂಡು ಹರಿದಾಡುತ್ತಿದೆ. ಈಗಲಂತೂ ಅದು ಅಧಿಕೃತವಾಗಿ ಘೋಷಣೆಯಾಗಿದೆ. ಹೊರಗಿನವರ ಮಾತು ಬಿಡಿ, ಪತ್ರಿಕೋದ್ಯಮದ ಒಳಗಿನವರ ಬಗ್ಗೆ ರೇಜಿಗೆಯಾಗುತ್ತಿದೆ. ಅವತ್ತು ಕರೆ ಮಾಡಿ, mail ಮಾಡಿ ದೂಷಿಸುವ ಕಷ್ಟ ತೆಗೆದುಕೊಂಡ ಯಾರಿಗೂ ಇವತ್ತು sorry ಕೇಳಲು ನೆನಪಾಗುತ್ತಿಲ್ಲ. ಗಾಸಿಪ್ ಮಾಡುವವರ ಹಣೆಬರಹವೆ ಇಷ್ಟಲ್ಲ? ಟೊಳ್ಳು ಜನ. ಮರೆವು ಜಾಸ್ತಿ.
ಸಾಲದ್ದಕ್ಕೆ ಈಗ ಪ್ರಣತಿಯ ಭೂತ ಮೆಟ್ಟಿಕೊಂಡಿದೆ. ಅನವಶ್ಯಕವಾಗಿ ನಾನು ನಾನಲ್ಲ ಅನ್ನುವ ಸಮಜಾಯಿಷಿ ಕೊಟ್ಟುಕೊಳ್ಳಬೇಕಾಗಿದೆ. ಅದು ಕೂಡ ಸುಮ್ಮನೆ ಗಾಸಿಪ್ ಎಂದು ಗೊತ್ತಿದ್ದೇ ಸಾಂಕ್ರಾಮಿಕ ಹರಡುವಿಕೆಯ ವೈರಸ್ ಗಳಾಗುತ್ತಿದ್ದಾರೆ ಸಹಪತ್ರಕರ್ತರು. ಅದನ್ನು ಇಲ್ಲಿಗೇ ನಿಲ್ಲಿಸಿಬಿಟ್ಟರೆ ಒಳ್ಳೆಯದು. ಇಲ್ಲವಾದರೆ, ನನಗೆ ಕೆಟ್ಟದ್ದು.
ಇನ್ನೂ ಹೇಳಬೇಕನಿಸಿದ್ದು-ಬ್ಲಾಗ್ ಜಗತ್ತಿನ ತುಂಬ ಪತ್ರಿಕೋದ್ಯಮದ ವಾಚ್‌ಡಾಗ್‌ಗಳು ತುಂಬಿಕೊಳ್ಳುತ್ತಿದ್ದಾರೆ. ಕೆಲವರು ಹಿಂದೆಮುಂದೆ ನೋಡದೆ ಸ್ವಾರಸ್ಯಕರ ಗಾಸಿಪ್, ಅರೆಬರೆ ಮಾಹಿತಿ, ತಪ್ಪು ಅರ್ಥ ಕೊಡುವ ಸುದ್ದಿಗಳನ್ನೆಲ್ಲ ಪ್ರಕಟಿಸುತ್ತಿದ್ದಾರೆ. ಕೆಲವರು ಚೆನ್ನಾದ ವಿಶ್ಲೆಷಣೆ ನಡೆಸ್ತಿದ್ದರೂ ನಡುನಡುವೆ ಬಕೆಟ್ ಇಟ್ಟುಕೊಂಡು ಮುನ್ನಡೆಯುತ್ತಿದ್ದಾರೆ. (ಬಕೆಟ್ ಈಗ ಸಖತ್ ಚಾಲ್ತಿಯಲ್ಲಿರುವ ಪದ. ಅದಕ್ಕೆ ಪರ್ಯಾಯ ಸಿಗ್ತಿಲ್ಲ). ಯಾರಿಗೂ ಇದರ ಪರಿಣಾಮದ ಅರಿವು ಇದ್ದ ಹಾಗಿಲ್ಲ. ಪತ್ರಿಕೆ, ವೆಬ್ ಗಳಲ್ಲಿ ಬರುತ್ತಿರುವ ಸುದ್ದಿಗಳಿಂದಾಗಿ ಜರ್ನಲಿಸಮ್ ವಿದ್ಯಾರ್ಥಿಗಳು, ಅದರಲ್ಲೂ ಹೆಣ್ಣುಮಕ್ಕಳು ಇತ್ತ ತಲೆ ಹಾಕಲು ಹೆದರುವಂಥ ಮಾಹೋಲ್ ನಿರ್ಮಾಣವಾಗ್ತಿದೆ. ಇಷ್ಟು ದಿನ ಜನ ರಾಜಕಾರಣ ಅಂದರೆ ಮೂಗು ಮುರೀತಿದ್ದರು, ಇನ್ನು ಖಚಡಾ ಕೆಲಸಕ್ಕೆಲ್ಲ ಇದೇನು ಜರ್ನಲಿಸಮ್ಮಾ ಅಂತ ಕೇಳುವ ಕಾಲವೂ ಬರಬಹುದು. ಹಾಗಂತ ನಾವು ಬೇರೆ ಬೇರೆ ಪತ್ರಿಕೆಯಲ್ಲಿದ್ದೂ ಗೆಳೆತನ ಇಟ್ಟುಕೊಂಡಿರುವ ಹೆಣ್ಣುಮಕ್ಕಳು ಆನ್‌ಲೈನ್ ಚಾಟ್‌ನಲ್ಲಿ ಹತಾಶರಾಗ್ತಿದೇವೆ.
ಎಲ್ಲಿಂದ ಎಲ್ಲಿಗೆ ಏನು ಲಿಂಕೋ? ತಮ್ಮಂದಿರಲ್ಲಿ ಒಬ್ಬ, ನನ್ನ ಕ್ಲಾರಿಫಿಕೇಶನ್ ಗಳ ನಂತರವೂ ನನ್ನ ಬಗ್ಗೆ ಅನುಮಾನ ಇರಿಸಿಕೊಂಡಿದ್ದ. ಈಗ ತಾನೆ ಯಾವುದೋ ಬ್ಲಾಗ್ ನೋಡಿ ‘ಸಿಂಧು ನೀವಲ್ಲ ಅಂತ ಖಾತ್ರಿ ಆಯ್ತು’ ಅಂತ ಸರ್ಟಿಫಿಕೇಟ್ ಕೊಟ್ಟ. ಹಾಗಾದರೆ ನಂಬಿಕೆ, ಅಧಿಕೃತತೆಯ ಮಾನದಂಡ ಏನು? ವೈಯಕ್ತಿಕ ವಿಶ್ವಾಸಕ್ಕಿಂತ ಕಂಡು ಕೇಳಿಲ್ಲದ ಮುಖಗಳ ಮಾತೇ ಪ್ರಮಾಣವಾಗುತ್ತದಲ್ಲ, ಯಾಕೆ? ಅವತ್ತು ಗಾಸಿಪ್ ನಂಬಿ ನೋವು ಕೊಟ್ಟವರು ನಂಬಿದ್ದೂ ಇಂಥವೇ ಸಾಕ್ಷಿಗಳನ್ನು. ವ್ಯಕ್ತಿಯನ್ನು ಸ್ವಂತ ಅನ್ನಿಸಿಕೆ, ಅಳತೆಯಿಂದ ತೂಗಿ ನೋಡಲು ಸಾಧ್ಯವೇ ಇಲ್ಲವಾ? ಯಾರನ್ನ ಕೇಳುವುದು?
ಇಷ್ಟಕ್ಕೂ ಇಲ್ಲಿ ಆ ಹುಡುಗ, ಅಗ್ಗದ ಸಾಕ್ಷಿಗಳನ್ನು ನಂಬುವ ಮನಸ್ಥಿತಿಗಳ ಪ್ರತಿನಿಧಿ ಮಾತ್ರ...

20 comments:

 1. ಮತ್ತೊಂದು ಪತ್ರಿಕೆಯ ಕೆಲಸಗಾರನಾಗಿದ್ದ, ಜವಾಬ್ದಾರಿ ಹುದ್ದೆಯಲ್ಲಿದ್ದ, ಹೊರ ಜಗತ್ತಿಗೆ ಬುದ್ಧಿವಂತನಂತೆ ಪೋಸ್ ಕೊಡುವವನಾಗಿದ್ದ...
  200% real & truth

  ReplyDelete
 2. chetana or you people should name that fellow clerly. no one will dare to do such thing again..

  ReplyDelete
 3. @ Umesh Desai,
  ಚೇತನಾ ಅವರೇ ತಮ್ಮ ಲೇಖನದಲ್ಲಿ ಆ ಪತ್ರಕರ್ತರ ಹೆಸರನ್ನು ಉಲ್ಲೇಖಿಸಿದ್ದಾರೆ. ಅವರ ಹೆಸರು ಜಯಪ್ರಕಾಶ್ ನಾರಾಯಣ್. ಜೆಪಿ ಎಂದು ಚಿಕ್ಕದಾಗಿ ಕರೆಯಲಾಗುತ್ತದೆ. ಅವರು ವಿಜಯಕರ್ನಾಟಕದ ಮುಖ್ಯ ಉಪಸಂಪಾದಕರು.

  ReplyDelete
 4. ತಾವು ಬರೆಯುತ್ತಿರುವುದು ಸತ್ಯವೆಂದಾದರೆ, ತಮ್ಮ ಆತ್ಮಕ್ಕೆ ಸಮ್ಮತವೆಂದಾದರೆ "ಸಿಂಧು" ಎಂಬ ಹೆಣ್ಣಿನ ಹೆಸರನ್ನಿಟ್ಟುಕೊಂಡು ಲೇಖನ ಬರೆಯುವುದಾದರೂ ಏಕೆ?

  ReplyDelete
 5. Thanks! I too had believed rumours, sorry Chetana.

  ReplyDelete
 6. Chetana, you have done good. you have named Jayaprakash Name. He thinks himself as a grate person of Earth or World Journalism. VK Should send out him. or Journalism should Reject him

  ReplyDelete
 7. The issue should be viewed with gender perspective. JP and Rao, magazine chief of KP, cleverly chose the name, 'Sindhu'. In one stroke they tried to defame both women - Taslima and fictitious name 'Sindhu'. A few journalists find pleasure in writing in fictitious female names.
  Regarding selection of the article for publishing, it is an error of judgement. I feel, had Rao or JP expected the reactions of this magnitude they too would have not attempted to write/publish it. It is a lesson for all journalists.

  ReplyDelete
 8. aa lekhana modale sanchaya sahitya patrikeyalli jayaprakash narayan hesaralle prakatavagittu.

  ReplyDelete
 9. ಒಬ್ಬರಮೇಲೊಬ್ಬರು ಕೆಸರೆರೆಚುವುದೇ ಪತ್ರಿಕೋದ್ಯಮವಾಗಿದೆಯೇನೋ ಎನ್ನುವಷ್ಟು ಪತ್ರಿಕೋದ್ಯಮ ಕೆಟ್ಟು ಹೋಗಿದೆ ಎಂದು ಅನಿಸುತ್ತಿದೆ. ಇಂತಹ ಲೇಖನಗಳನ್ನು ಪ್ರಕಟಿಸುವಾಗ ಹೆಣ್ಣು ಮಕ್ಕಳ ಹೆಸರನ್ನು ಉಪಯೋಗಿಸುವಷ್ಟು ಹೇಡಿತನವೇಕೆ?

  ReplyDelete
 10. ಚೇತನಾರ ಕೋಪ ಸಮಂಜಸವೇ ಆದರೂ ಇಲ್ಲಿ ಬರೆದತನನ್ನು(ಜೆಪಿ) ಎಳೆದು ತರುವುದು ಎಷ್ಟು ಸರಿ? ಆತ ಬೇನಾಮಿ ಹೆಸರಿನಲ್ಲಿ ಲೇಖನ ಬರೆದಿರಬಹುದು. ಆದರೆ ಆ ಸಮಯದಲ್ಲಿ ಒಂದು ಯಕಶ್ಚಿತ್ ಲೇಕನ ಇಷ್ಟು ಪರಿಣಾಮ ಬೀರಬಹುದೆಂದು ಎಣಿಸಿರಲಿಕ್ಕಿಲ್ಲ ಮತ್ತು ಚೇತನಾಗೆ ತೊಂದರೆ ಮಾಡುವ ಉದ್ದೇಶದಿಂದ ಮಾಡಿರುವುದು ಅನುಮಾನ. ಹಾಗು ಇಲ್ಲಿ ಮುಕ್ಯವೆಂದರೆ, ಒಂದು ಮುಗಿದ ವಿಷಯವನ್ನು ಮತ್ತೆ ಎಳೆದು ತಂದು ಸಿಗುವ ಪ್ರಯೋಜನವಾದರೂ ಏನು? ಅದನ್ನು ಬರೆದ ಜೆಪಿ ಈಗಾಗಲೇ ಅದಕ್ಕಾಗಿ ಬಹಳಷ್ಟು ಹಪಹಪಿಸಿರಬೇಕು. ಮತ್ತೆ ಕೆದಕುವುದರಿಂದ ಇವರಿಗೆ ಸಿಗುವುದು ಏನು ಇಲ್ಲ (ವಿಕೃತ ತೃಪ್ತಿ?) ಆದರೆ ಆ ಮನುಷ್ಯನಿಗೆ ತೊಂದರೆ/ಮುಜುಗುರ ಆಗಬಹುದಲ್ಲವೇ ?

  ಇದನ್ನ್ನು ಸಂಪಾದಕೀಯ ಪ್ರಕಟಿಸುತ್ತದೆ ಎಂದು ಭಾವಿಸುತ್ತೇನೆ.

  -ಚೇತನ್

  ReplyDelete
 11. ಪತ್ರಿಕೋದ್ಯಮದಲ್ಲಿ ಹತ್ತಾರು ವರ್ಷ ಅನುಭವ ಇದ್ದ ಒಬ್ಬ ಪತ್ರಕರ್ತ, ಕೋಮು ಸೂಕ್ಷ್ಮ ಸಂಗತಿಯನ್ನು ಬೇಜವಾಬ್ದಾರಿಯಿಂದ ತಿರುಚಿ, ವೈಭವೀಕರಿಸಿ ಬರೆದು ಇಬ್ಬರು ಅಮಾಯಕರ ಸಾವಿಗೆ ಮತ್ತು ಹತ್ತಾರು ಕುಟುಂಬ ಬೀದಿ ಪಾಲಾಗುವಂತೆ ಮಾಡಿರುವ ಸಂಗತಿ ಆಘಾತಕಾರಿ ಮತ್ತು ನಾಚಿಕೆಗೇಡು. ಇಲ್ಲಿ ಒಂದೆರಡಲ್ಲ ಟ್ರಿಬಲ್ ಫಾಲ್ಟ್ ಆಗೈತೆ.
  ೧. ವಿಜಯ ಕರ್ನಾಟಕ ಎಂಬ ನಂ.೧ ಪತ್ರಿಕೆಯಲ್ಲಿ ಜವಾಬ್ದಾರಿಯುತ ಹುದ್ದೆಯಲ್ಲಿದ್ದೂ ಪ್ರತಿಸ್ಪರ್ಧಿ ಕನ್ನಡಪ್ರಭ ಪತ್ರಿಕೆಗೆ ಲೇಖನ ಬರೆದಿದ್ದು!
  ೨. ತಸ್ಲೀಮಾ ನಸ್ರೀನ್ ಲೇಖನವನ್ನು ಅವರ ಅನುಮತಿ ಇಲ್ಲದೆ ಅನುವಾದಿಸಿದ್ದು ಮತ್ತು ಅದರಲ್ಲಿ ಅವಾಸ್ತವ ಸಂಗತಿ ಸೇರಿಸಿ ರಾಜ್ಯದಲ್ಲಿ ಗಲಭೆ ಸೃಷ್ಟಿಸಿದ್ದು.
  ೩. ಚೇತನಾ ತೀರ್ಥಹಳ್ಳಿ ಎಂಬ ಲೇಖಕಿಯೇ ಅನುವಾದ ಮಾಡಿದ್ದು ಎಂದು ಸುಳ್ಳು ಸುದ್ದಿ ಹಬ್ಬಿಸಿ ತಾನು ಪಾರಾಗಲು ಯತ್ನಿಸಿದ್ದು!
  ಇಂಥದೊಂದು ಘನಘೋರ ಅಪರಾಧ ಮಾಡಿರುವ ಆಸಾಮಿಯನ್ನು ವಿಜಯ ಕರ್ನಾಟಕ ಆಡಳಿತ ಮಂಡಳಿ ಇನ್ನೂ ಉಳಿಸಿಕೊಂಡಿರುವುದು ಮತ್ತೊಂದು ಶಾಕ್! ಇಂಥ ಕೋಮುವಾದಿ, ಅವಕಾಶವಾದಿ ಪತ್ರಕರ್ತರನ್ನು ಸಮಸ್ತ ಪತ್ರಿಕೋದ್ಯಮದಿಂದಲೇ ಬಹಿಷ್ಕರಿಸಿದಾಗ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ.
  -ವಿಜಯಕಾಂತ್ ರೋಣ

  ReplyDelete
 12. Priya Sampadakare,Eee lekhana odi talamalavaytu. Ondu ptrika lekhanadinda untada komu dalluriya beegeyannu kanduu suukshmathe illade hodare heege? sadari lekhana baradiddu Chetana irabahudu embudu eshtu dodda anaahuthakari aropavo haage jepi baredirabahudu emba aroopavuu amaanaveeya allave. Saakshi purave iddare court ge kodi, janara bhaavanege alla. Chetana nanna gelathi, avaru anubhavisida dugudakke nanna anutapa ide. Aadare ade duguda mattobba prajnavantha anubavisuvanthe aagadirali.

  ReplyDelete
 13. THIS IS TIME TO STUDY THE DAMAGE DONE BY VIJAY KARNATAKA TO THE MANKIND FOR THE LAST 6 -7 YEARS.
  NOT, JUST ITS FOUR EDITORS, THE TIMES GROUP MORE RESPONSIBLE FOR ONSLAUGHT DEMOCRACY IN KARNATAKA, COMMUNAL HARMONY, JOURNALISTIC DEGRADATION, LARGE SCALE CORRUPTION BY MOST THE RESIDENT EDITORS & ADVERTISEMENT MANAGERS, PUBLICATION OF PAID NEWS BY REPORTERS & ADVT MANAGERS AND LOT MORE. ONE CANT IMAGINE THE DAMAGE DONE BY THIS ONE SINGLE NEWSPAPER.
  I THINK JUSTICE M.F.SALDHANA AND OTHER SHOULD CONTINUE THEIR TIRADE.
  PLEASE THINK OF IT. CAN SAMPADAKEEYA DO ANYTHING GOOD ABOUT THIS?

  ReplyDelete
 14. priya Anand,
  JP adagale vicharaNaanotice paDedu aagide. dayavittu nimma geleyaralli vicharisi.illave swataha JP yannekeLabahudu. ishTelladara naduveyu avaru tamma tappannu bahirangavagi oppikollade iruvudu achchari mattu vishada.
  Chetana haage `summane' aropa maduvudaagiddare ishtu dina kaayabekiralilla.6 tingaLa hindeye ee bagge khachita mahiti iddaroo aake ishTu dina summaniddudu hechcu!
  aadaroo purushara eeoggattu santosha mattu besara eradannu koduttide.

  ReplyDelete
 15. illi innondu sukshmavide. Chetana Aagale vishaya gottiddu summane iddaddu yake? kannadaprabhadinda avareega vijaya karnataka balagada patrikege jigida mele dhairya bante? ellaru JP avaranne yake bayyabeku? adannu prakatisidavara bejavabdaritanada bagge yaru mataduttilla. Adu prakatavaadaga Chetana kuda ade section nalli kelasa maduttiddaru.

  ReplyDelete
 16. @ illi innondu sukshmavide...
  that time in KP, suffocating atmosphere under erstwhile editor constrained her to talk on blog sphere or else where...
  Now, KP is free world and VK no one knew kannada.

  ReplyDelete
 17. ಆ ಲೇಖನದಲ್ಲಿ ತಪ್ಪಿರಲಿಲ್ಲ.
  ಇನ್ನೇಕೆ ಪಾಪಪ್ರಜ್ಞೆ???

  ReplyDelete
 18. @Subbu, ಕನ್ನಡಪ್ರಭದಲ್ಲಿ ತಸ್ಲೀಮಾ ನಸ್ರೀನ್ ಅವರ ಅನುವಾದಿತ ಲೇಖನವೊಂದು ಪ್ರಕಟಗೊಂಡಿದ್ದು, ಆನಂತರ ರಾಜ್ಯದ ವಿವಿಧ ಭಾಗಗಳಲ್ಲಿ ಗಲಭೆ ನಡೆದಿದ್ದು, ಗಲಭೆಯಲ್ಲಿ ಇಬ್ಬರು ಬಲಿಯಾಗಿದ್ದು...ಗಲಭೆಯಲ್ಲಿ ಇಬ್ಬರು ಬಲಿಯಾಗಿದ್ದು..

  ReplyDelete
 19. kannada patrikodyamada kelavu patrakarta patrakarteyarige glamour haagu celebrity imagena khaayile bandiruvantide. pigmies..

  ReplyDelete