Saturday, May 21, 2011

ಹಾನಗಲ್ ಎಂಬ ಊರಿನ ಆ ಹೊಳಪುಗಣ್ಣಿನ ಹುಡುಗ ಸೈಕಲ್ ಏರಿ ನಿಂತಾಗ....


ಇವನೇ ನಮ್ಮ ಪ್ರಭಾಕರ. ಪೂರ್ತಿ ಹೆಸರು ಪ್ರಭಾಕರ ಹರಿಜನ. ಹಾನಗಲ್‌ನ ಕಲ್ಲಹಕ್ಕಲದ ಹರಿಜನ ಕೇರಿಯ ಹನುಮಂತಪ್ಪ ಹರಿಜನ ಅವರ ಮೊದಲನೇ ಪುತ್ರ ಈತ. ಹನುಮಂತಪ್ಪ ಈಗ ಇಲ್ಲ, ತೀರಿದ್ದಾರೆ. ತಾಯಿ ಶಾಂತವ್ವ ಮುನಿಸಿಪಾಲಿಟಿ ಗಟಾರ ಬಳಿದು ಈತನನ್ನೂ, ಇನ್ನೆರಡು ಮಕ್ಕಳನ್ನೂ ಮತ್ತು ತನ್ನ ತಾಯಿಯನ್ನೂ ಸಾಕುತ್ತಾಳೆ. ಪ್ರಭಾಕರನ ಕುರಿತಾದ ಒಂದು ಕಿರುಚಿತ್ರ ನೋಡಿ ನಾವೆಲ್ಲರೂ ಆಘಾತಗೊಂಡಿದ್ದೆವು. ನೀವೆಲ್ಲರೂ ಕಾಳಜಿ ತೋರಿದಿರಿ. ಅವನನ್ನು ನೋಡಬೇಕೆಂದು ಹಾನಗಲ್‌ಗೆ ಹೋಗಿ, ಆತನ ಕುಟುಂಬದೊಂದಿಗೆ ಇದ್ದು ಬಂದಿದ್ದೇವೆ.

ಯಾರು ಈ ಹುಡುಗ? ಇವರ ಕುಟುಂಬದ ಕಥೆ ಏನು? ತನ್ನ ತಾಯಿಯ ಸಾಲ ತೀರಿಸಲೆಂದು ಹೊಟೆಲ್ ಒಂದರಲ್ಲಿ ಕ್ಲೀನರ್ ಕೆಲಸ ಮಾಡುತ್ತಿರುವ ಈತನನ್ನು ಮತ್ತೆ ಓದಿಗೆ ಹಚ್ಚುವುದು ಹೇಗೆ? ಈತನ ಜಾತಿ ಸರ್ಟಿಫಿಕೇಟ್‌ನ ಕಥೆ ಏನು? ಈ ಬಡ ಕುಟುಂಬಕ್ಕೆ ಸಹಾಯ ಮಾಡಲು ನಾವು ಸಣ್ಣದಾಗಿ ಯೋಜಿಸಿರುವುದಾದರೂ ಏನು? ಈ ಎಲ್ಲವನ್ನೂ ನಿಮ್ಮ ಜತೆ ಹೇಳಿಕೊಳ್ಳಬೇಕು. ಹಾಗೆಯೇ ಈತನಿಗೆ ನಿಮ್ಮ ಸಹಾಯವೂ ಬೇಕು.

ಅಂದಹಾಗೆ ಈತನ ಬಳಿ ಈಗಿರುವುದು ಅವನದೇ ಆದ ಹೊಚ್ಚ ಹೊಸ ಸೈಕಲ್. ಅದು ಆ ಹೊಳಪುಗಣ್ಣಿನ ಹುಡುಗನಿಗೆ ನಮ್ಮೆಲ್ಲರ ಪ್ರೀತಿಯ ಕೊಡುಗೆ. ಆ ಕಿರುಚಿತ್ರವನ್ನು ನೋಡಿದಾಗಿನಿಂದ ಸೈಕಲ್ ಎಂಬ ವಸ್ತುವೇ ವ್ಯವಸ್ಥೆಯ ಕ್ರೌರ್ಯದ, ನಮ್ಮ ಅಸಹಾಯಕತೆಯ ಸಂಕೇತದಂತೆ ಕಾಡುತ್ತಿತ್ತು. ಪ್ರಭಾಕರನ ಮೊಗದಲ್ಲಿ ಈಗ ಸಣ್ಣ ಗೆಲುವು, ನಮಗೆ ಪುಟ್ಟ ಖುಷಿ.

ಅವನ ಕುರಿತು, ಅವನ ತಾಯಿಯ ಕುರಿತು, ತಮ್ಮ-ತಂಗಿಯರ ಕುರಿತು ತುಂಬಾ ತುಂಬಾ ಹೇಳುವುದಿದೆ. ರಿಸರ್ವೇಷನ್ ಇಲ್ಲದೆ ರೈಲು ಹಿಡಿಯಬಾರದು. ಹಿಡಿದರೂ ನಿಲ್ಲಲೂ ಜಾಗವಿಲ್ಲದ ಜನರಲ್ ಬೋಗಿಯಲ್ಲಿ ಪ್ರಯಾಣ ಮಾಡಬಾರದು. ಇದನ್ನು ಉಲ್ಲಂಘಿಸಿದರ ಪರಿಣಾಮ ಕೊಂಚ ಆಯಾಸ. ಸ್ವಲ್ಪ ಟೈಮ್ ಕೊಡಿ, ಪ್ಲೀಸ್.

12 comments:

  1. ಒಳ್ಳೆ ಕೆಲಸ...ನಿಮಗೂ ಆ ಹುಡುಗನಿಗೂ jai ho

    ReplyDelete
  2. Good.

    We are eager to hear the story.

    Ganesh.
    http://punchline.wordpress.com

    ReplyDelete
  3. Hangal Haveri dist? mundina kathe heli...avanigenadaru jaati certificate na avashyakathe iddare adannu naanu maadisi kodaballe...

    ReplyDelete
  4. ತುಂಬಾ ಒಳ್ಳೆಯ ಕೆಲಸ....ಸರ್... -ಅಕುವ

    ReplyDelete
  5. master kishan bagge innillada kalagi tooruva manidi kannige e saykal huduga kanisalillavae ? antha durantha

    ReplyDelete
  6. ನಿಮ್ಮ ಈ ಘನ ಕಾರ್ಯದಿಂದ ಬ್ಲಾಗ್‌ಗೆ ಸಾರ್ಥಕತೆ ಕಂಡಿದೆ ಎಂದು ನಮಗನಿಸಿದೆ, ಸಮಾಧಾನವೂ ತಂದಿದೆ. ಈ ಪ್ರಯತ್ನ ಹೀಗೆ ಮುಂದುವರಿಯಲಿ ಎಂಬುದು ನಮ್ಮ ಆಶಯ.
    ನಿಮ್ಮೊಂದಿಗೆ ಸದಾ ನಾವಿರುತ್ತೇವೆ... ಬರೀ ಮಾತುಗಳಿಂದಲ್ಲ?
    - ಪುರು

    ReplyDelete
  7. ನಿಮ್ಮ ಈ ಘನ ಕಾರ್ಯದಿಂದ ಬ್ಲಾಗ್‌ಗೆ ಸಾರ್ಥಕತೆ ಕಂಡಿದೆ ಎಂದು ನಮಗನಿಸಿದೆ, ಸಮಾಧಾನವೂ ತಂದಿದೆ. ಈ ಪ್ರಯತ್ನ ಹೀಗೆ ಮುಂದುವರಿಯಲಿ ಎಂಬುದು ನಮ್ಮ ಆಶಯ.
    ನಿಮ್ಮೊಂದಿಗೆ ಸದಾ ನಾವಿರುತ್ತೇವೆ... ಬರೀ ಮಾತುಗಳಿಂದಲ್ಲ?
    - ಪುರು

    ReplyDelete
  8. ಅವಿನಾಶ ಕನ್ನಮ್ಮನವರ್May 21, 2011 at 8:11 PM

    hats up to your great work,, this hanagal is near to my native,, a great work you are doing, we will be with you in this ling journey for sure,,

    i think banglore based people dont know what is bad train journey is like, if u wann go to haveri by bus it cost Rs.340, by train 50Rs, reservation is around 120 for passenger trains,, only single passenger train is there to connect north karnataka from banglore, so it comes loaded, our all MP's are "nara illadavaru" they will never raise ter voice and get some more passenger trains,,

    ReplyDelete