Wednesday, September 7, 2011

ಗಣಿಧೂಳು ಕುಡಿದ ಪತ್ರಕರ್ತರಿಗೂ ಸಿಬಿಐ ಕುಣಿಕೆ?

ಜನಾರ್ದನ ರೆಡ್ಡಿಯಿಂದ ಗಣಿ ಕಪ್ಪ ಪಡೆದ ಆರೋಪ ಪತ್ರಕರ್ತರ ಮೇಲೇ ಅಮರಿಕೊಂಡ ನಂತರ ಆ ವಿಷಯ ಅಷ್ಟಾಗಿ ಚರ್ಚೆಯೇ ಆಗದೆ ಉಳಿದಿತ್ತು. ಇವತ್ತು ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿರುವ ಅದಿರು ಕಳ್ಳರ ಮೇಲೆ ಐಪಿಸಿ ಸೆಕ್ಷನ್ ೩೭೯ ಎಂಬ ಶೀರ್ಷಿಕೆಯ ವರದಿ ಗಣಿ ಧೂಳು ಕುಡಿದ ಪತ್ರಕರ್ತರಿಗೆ ಥ್ರೋಟ್ ಇನ್ಫೆಕ್ಷನ್ ತರಿಸಿರುವ ಸಾಧ್ಯತೆ ಇದೆ.

ಈ ವರದಿಯ ಒಂದು ಪ್ಯಾರ ಹೀಗಿದೆ ನೋಡಿ:

ಕದ್ದ ಅದಿರು ಮಾರಾಟ ಮಾಡಿ, ಸಂಪಾದನೆ ಮಾಡಿದ ಹಣವನ್ನು ಗಾಲಿ ಬ್ರದರ‍್ಸ್ ಕೆಲ ಶಾಸಕರು, ಅಧಿಕಾರಿಗಳು ಸೇರಿದಂತೆ ಮಾಧ್ಯಮದ ಅನೇಕರಿಗೆ ನಾನಾ ಕಾರಣಗಳಿಂದ ಗಣಿ ಕಪ್ಪ ನೀಡಿದ ಆರೋಪಗಳಿವೆ. ಇವರ ಮೇಲೆ ಸಿಬಿಐ ಅಧಿಕಾರಿಗಳು ಐಪಿಸಿ ಸೆಕ್ಷನ್ ೫೧೧ರ ಅಡಿ ದೂರು ದಾಖಲಿಸಿಕೊಂಡರೂ ಅಚ್ಚರಿಯೇನಲ್ಲ. ಸೆಕ್ಷನ್ ೫೧೧ ಇದು ಶಿಕ್ಷೆ ವಿಧಿಸಬಹುದಾದ ಅಪರಾಧ ಎನ್ನುತ್ತದೆ ಕಾನೂನು. ಈ ಸೆಕ್ಷನ್ ಅಪರಾಧಕ್ಕೆ ಜೈಲು ಶಿಕ್ಷ ದಂಡ ವಸೂಲಿ ಅಥವಾ ಎರಡನ್ನೂ ವಿಧಿಸಬಹುದು.

ಗಣಿ ಧೂಳನ್ನು ಪತ್ರಕರ್ತರೂ ಕುಡಿದಿದ್ದಾರೆ ಎಂಬ ಮಾಹಿತಿಯೇನೋ ಲೋಕಾಯುಕ್ತ ನ್ಯಾಯಮೂರ್ತಿಗಳಾಗಿದ್ದ ಸಂತೋಷ್ ಹೆಗಡೆಯವರು ನೀಡಿದ ವರದಿಯಲ್ಲಿ ಅಡಕಗೊಂಡ ಯು.ವಿ.ಸಿಂಗ್ ವರದಿಯಲ್ಲಿ ದಾಖಲಾಗಿತ್ತು. ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳು ಇದನ್ನು ಪ್ರಕಟಿಸುವ ಧೈರ್ಯ ತೋರಿದ್ದವು. ಯಾವ ಮೀಡಿಯಾದಲ್ಲೂ ಈ ಬಗ್ಗೆ ವಿಸ್ತ್ರತ ಚರ್ಚೆ ನಡೆಯಲೇ ಇಲ್ಲ. ಪರ್ಯಾಯ ಮಾಧ್ಯಮವಾಗಿರುವ ಇಂಟರ್‌ನೆಟ್‌ನಲ್ಲಿ ಮಾತ್ರ ಅಲ್ಲೊಂದಿಷ್ಟು, ಇಲ್ಲೊಂದಿಷ್ಟು ಲೇಖನಗಳು ಪ್ರಕಟಗೊಂಡವು.

ಗಾಲಿ ಜನಾರ್ದನ ರೆಡ್ಡಿಗೆ ಸಂಬಂಧಿಸಿದ ಹೆಲಿಕಾಪ್ಟರ್, ಐಶಾರಾಮಿ ಕಾರುಗಳು, ಚಿನ್ನ, ಬ್ಯಾಂಕ್ ಲಾಕರ್ ಇತ್ಯಾದಿಗಳನ್ನೆಲ್ಲ ಸಿಬಿಐನವರು ಸೀಜ್ ಮಾಡಿದ್ದಾರೆ. ರೆಡ್ಡಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಕಬ್ಬಿಣದ ಅದಿರನ್ನು ಲೂಟಿ ಮಾಡಿರುವುದರಿಂದ, ಮುಂದೆ ತನಿಖೆ ಪೂರ್ಣಗೊಂಡ ನಂತರ ನಷ್ಟವನ್ನು ಕಟ್ಟಿಸಿಕೊಳ್ಳಲು ಇದೆಲ್ಲವೂ ನೆರವಾಗಬಹುದು. ಇದಿಷ್ಟೇ ಅಲ್ಲದೆ ರೆಡ್ಡಿಗಳು ತನ್ನ ಅಕ್ರಮಕ್ಕೆ ಸಹಕರಿಸಿದವರಿಗೆ ತಿನ್ನಿಸಿದ್ದನ್ನೂ ಸಿಬಿಐನವರು ಕಕ್ಕಿಸಬಹುದು.

ಹೀಗಾಗಿ ರೆಡ್ಡಿಯಿಂದ ಹಣ ತಿಂದವರೆಲ್ಲ ಈಗ ಸೆಕ್ಷನ್ ೫೧೧ರ ಭೀತಿಗೆ ಸಿಲುಕುವಂತಾಗಿದೆ. ಈಗಾಗಲೇ ತಿರುಪತಿ ತಿಮ್ಮಪ್ಪನಿಗೆ ರೆಡ್ಡಿಗಳು ಕೊಟ್ಟ ವಜ್ರಖಚಿತ ಕಿರೀಟವನ್ನು ಹಿಂದಕ್ಕೆ ನೀಡಿ ಎಂದು ಭಕ್ತರು ಆಗ್ರಹಿಸುತ್ತಿದ್ದಾರೆ. ತೀರಾ ಇತ್ತೀಚಿಗೆ ವರಮಹಾಲಕ್ಷ್ಮಿ ಹಬ್ಬದಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿಗೆ ಕೊಟ್ಟ ಚಿನ್ನದ ಖಡ್ಗವನ್ನೂ ಸಿಬಿಐನವರು ಕಿತ್ತುಕೊಂಡು ಬರಬಹುದು. ಕೆಲವರ ಮದುವೆಗಳಲ್ಲಿ ರೆಡ್ಡಿಗಳು ತಮ್ಮ ದೊಡ್ಡಸ್ತಿಕೆ ತೋರಿಸಿಕೊಳ್ಳಲು ಮತ್ತು ತಮ್ಮ ವ್ಯಾವಹಾರಿಕ ಕಾರಣಗಳಿಗಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ವಜ್ರದ ನೆಕ್‌ಲೆಸ್‌ಗಳನ್ನೂ ಉಡುಗೊರೆಯಾಗಿ ನೀಡಿದ್ದಾರೆ. ಇವೆಲ್ಲವನ್ನೂ ಮುಂಬರುವ ದಿನಗಳಲ್ಲಿ ಸಿಬಿಐ ವಶಪಡಿಸಿಕೊಳ್ಳಬಹುದಾ?

ಗಣಿ ಲೂಟಿ ಮಾಡಿದವರ ಜತೆಗೆ ಗಣಿ ಧೂಳು ತಿಂದವರೂ ಜೈಲು ಸೇರಬೇಕೆನ್ನುವುದು ಸಹಜನ್ಯಾಯ. ಅದು ನಡೆಯುತ್ತದೆಯೇ? ಪ್ರಜಾವಾಣಿ ಮತ್ತು ವಿಜಯ ಕರ್ನಾಟಕಗಳ ಹಾಗೆ ಇತರ ಮಾಧ್ಯಮಗಳೂ ಮಾಧ್ಯಮ ಭ್ರಷ್ಟಾಚಾರದ ಬಗ್ಗೆ ಇನ್ನಾದರೂ ಬಾಯಿಬಿಡುತ್ತವೆಯೇ?

ಯು.ವಿ.ಸಿಂಗ್ ವರದಿಯಲ್ಲಿ ಉಲ್ಲೇಖವಾಗಿರುವ ವಿ.ಭಟ್, ಆರ್‌ಬಿ, ಸಂಜಯ್ ಸರ್ ಮೊದಲಾದ ಗಣಿಧೂಳು ಕುಡಿದು ಅರಗಿಸಿಕೊಂಡ ಪುಣ್ಯಾತ್ಮರವರೆಗೆ ಸಿಬಿಐ ತಲುಪುವುದೇ?

ಕಾದು ನೋಡೋಣ.

7 comments:

  1. ಗಣಿ ಕಪ್ಪ ಪಡೆದ ಪತ್ರಕರ್ತರು ವಿಷಯದ ಜೊತೆಗೆ ಗಣಿದಣಿಗಳ ಅವ್ಯವಹಾರಗಳ ವರದಿ ಮಾಡಲು ಹೋಗಿ ಹಲ್ಲೆಗೊಳಗಾದ ಪತ್ರಕರ್ತರನ್ನೂ ಸಹ ನಾವು ನೆನಪಿಸಿಕೊಳ್ಳಬೇಕಲ್ಲವೇ?
    ನೋಡಿ: http://www.varadigara.com/search/label/%E0%B2%AE%E0%B2%BE%E0%B2%A7%E0%B3%8D%E0%B2%AF%E0%B2%AE

    ReplyDelete
  2. yenoo aguvudilla
    nodutta eri

    ReplyDelete
  3. ಗಣಿ ಕಪ್ಪದ ಹಂಚಿಕೆನಲ್ಲಿ ನಿಮ್ಮನ್ನ ಕಡೆಗಣಿಸಿ ಗಾಲಿ ತುಂಬಾನೇ ತಪ್ಪು ಮಾಡ್ಬಿಟ್ಟ ನೋಡಿ ನಾಡಿನ ನಂಬರ್ ಓನ್ ಪತ್ರಿಕೆಯ ಟಾಪ್ ಮೋಸ್ಟ್ ಪತ್ರಕರ್ತರು ತೆಪ್ಪಗೆ ಕುಳಿತಿರಬೇಕಾದ್ರೆ ನೀವ್ ಮಾತ್ರ ಬಿಟ್ಟು ಬಿಡದೆ ಈ ರೀತಿ ಕಾಡ್ತಾ ಇದ್ದೀರಾ! ಇಷ್ಟೊಂದು ಹೊಟ್ಟೆ ಕಿಚ್ಚು ಇರಬಾರದು ಸಂಪಾದಕರೆ, ತಿಂದಿದ್ದನ್ನ ಕಕ್ಕಿಸೋದ್ರಿಂದ ಸಾಕಾಗೋದಿಲ್ಲ ಜೊತೆಗೆ ಸರಿ ಗೂಸ ಕೊಡ್ಬೇಕು ನೀವಂತೀರಿ, ಲಕ್ಷ್ಮಿ ಪೂಜೆಗೆ ಕೊಟ್ಟ ಸೀರೆ, ರವಿಕೆ ನೆಕ್ಲೇಸು, ಗಧೆನೆಲ್ಲಾ ಕಿತ್ಕೊಂಡು ಕುಂಡಿ ಮೇಲೆ ಗೂಸ ಕೊಟ್ಟು ಕಳಿಸಬೇಕು, ಇದೆಲ್ಲ ಇರಲಿ ಪಾಪ ನಮ್ ತಿರುಪತಿ ತಿಮ್ಮಪ್ಪನ ಸ್ಥಿತಿ ನೋಡ್ತಾ ಇದ್ರೆ ಅಯ್ಯೋ ಅನಿಸುತ್ತೆ ಸಂಪಾದಕರೆ ಇವರು ಹಾಕಿದ ಕೀರಿಟ ಹಾಕೊಂಡ್ ಡಿಸೈನ್ ಡಿಸೈನ್ ಪೋಸ್ನಲ್ಲಿ ಡಿಸೈನಾಗಿ ಫೋಟೋ ತೆಗಿಸ್ಕೊಂದು ಖುಶ್ ಖುಸ್ಸಾಗಿದ್ದ ಪಾಪ ಈಗೆಲ್ಲಿ ಎದೆ ಹೊಡ್ಕೊಂಡು ಆಸ್ಪತ್ರೆ ಸೇರವ್ನೋ ಗೊತ್ತಿಲ್ಲ

    ReplyDelete
  4. ನಿಜಕ್ಕೊ ಉತ್ತಮವಾಗಿದೆ

    ReplyDelete
  5. ಗಣಿ ಮಣ್ಣು ತಿಂದ ಮೇಲೆ ಧೂಳು ಕುಡಿಯಲೇಬೇಕು. ಭಟ್ಟರಿಗೆ ಯಾವಾಗ ಗ್ರಹಚಾರ ಉಲ್ಟಾ ಆಗುತ್ತೋ ಕಾದು ನೋಡಬೇಕಿದೆ.

    ReplyDelete
  6. ನೀವು ವಿನಾ ಕಾರಣ ವಿ.ಭಟ್ ಅವರನ್ನು ಟಾರ್ಗೆಟ್
    ಮಾಡಿದಿರಿ ಅವರು ನಮ್ಮ ಹಿರೋ
    ನಿಮಗೆ ಅಧಿಕ ಪ್ರಸಂಗ ಬೇಡ

    ReplyDelete
  7. yes its real rg8 thing, if CBI do so

    ReplyDelete