Saturday, June 18, 2011

ಮಲ ಹೊರುವ ಪ್ರಕರಣ: ಸಚಿವ ಸುರೇಶ್ ಕುಮಾರ್ ಉತ್ತರಿಸಿದ್ದಾರೆ...


ನಮ್ಮ ನಿರೀಕ್ಷೆ ಹುಸಿಯಾಗಲಿಲ್ಲ. ಸಂವೇದನಾಶೀಲರಾದ ಸುರೇಶ್ ಕುಮಾರ್ ಅವರು ನಮ್ಮ ಬಹಿರಂಗ ಪತ್ರಕ್ಕೆ ಉತ್ತರಿಸಿದ್ದಾರೆ. ನಿನ್ನೆ ಪತ್ರವನ್ನು ಅವರಿಗೆ ಮೇಲ್ ಮಾಡಿದ ಕೆಲವೇ ಗಂಟೆಗಳಲ್ಲಿ ಸ್ಪಂದಿಸಿದ್ದಾರೆ. ಇದು ಅವರ ಸೌಜನ್ಯ ಮತ್ತು ಕಳಕಳಿಗೆ ಸಾಕ್ಷಿ. ನಗರಾಭಿವೃದ್ಧಿ ಸಚಿವರು ಕೆ.ಜಿ.ಎಫ್‌ಗೇ ತೆರಳಿ ಖುದ್ದು ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ. ಆದಷ್ಟು ಬೇಗ ಕೆಜಿಎಫ್‌ನ ಆ ಅಸಹಾಯಕ ಜನರಿಗೆ ನ್ಯಾಯ ದೊರಕಲಿ ಎಂದು ಆಶಿಸೋಣ.

ಸುರೇಶ್ ಕುಮಾರ್ ಅವರು ಬರೆದ ಪತ್ರ ಹೀಗಿದೆ.

ಪ್ರಿಯ ಸಂಪಾದಕರೆ


ನಿಮ್ಮ ಪತ್ರ ಓದಿದ್ದೇನೆ. ಮಲ ಹೊರುವ ಅನಿಷ್ಟ ಪದ್ದತಿಯನ್ನು ನಿಷೇಧಿಸಿರುವ ಬಗ್ಗೆ ನಾನು ಹೇಳಿರುವುದು  ನಿಜ. ಸರ್ಕಾರವೂ ಈ ಅಮಾನವೀಯ ಪದ್ದತಿಯ ನಿಷೇಧದ ಬಗ್ಗೆ ಗಂಭೀರ ಕ್ರಮಗಳನ್ನೇ ಕೈಗೊಂಡಿದೆ. ಆದರೂ ನಿಮ್ಮ ಇ- ಮೇಲ್ ನಲ್ಲಿ ವಿವರಿಸಿರುವ ಅಂಶಗಳು ನನ್ನನ್ನು ನಿಜಕ್ಕೂ ಚಿಂತೆಗೀಡು ಮಾಡಿದೆ. ನಾನು ಇಷ್ಟರಲ್ಲಿಯೇ ಕೆಜಿಎಫ್‌ನ ಈ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಸ್ಥಿತಿಯನ್ನು ಅರಿಯುವ, ತಕ್ಷಣ ಪರಿಹಾರ ದೊರಕಿಸುವ ಪ್ರಯತ್ನ ಮಾಡುತ್ತೇನೆ. 


ನಿಮ್ಮ/ಅಧ್ಯಯನ ಕೈಗೊಂಡಿರುವ ಪರಿಣಿತರ ಸಂಪರ್ಕ ಸಂಖ್ಯೆ ನೀಡಿದಲ್ಲಿ ನಿಜಕ್ಕೂ ಉತ್ತಮವಾದೀತು. 


ಅದರಗಳೊಂದಿಗೆ


ಎಸ್ ಸುರೇಶ್ ಕುಮಾರ್

ದಯಾನಂದ್
ಕೆ.ಜಿ.ಎಫ್ ಮಾತ್ರವಲ್ಲ, ರಾಜ್ಯದ ವಿವಿಧ ಭಾಗಗಳಲ್ಲಿ ಇನ್ನೂ ಚಾಲ್ತಿಯಲ್ಲಿರುವ ಮಲಹೊರುವ ಪದ್ಧತಿ ಸಂಪೂರ್ಣ ತೊಲಗಬೇಕಿದೆ. ಸುರೇಶ್ ಕುಮಾರ್‌ರಂಥ ಸಚಿವರು ಈ ಬಗ್ಗೆ ಎಷ್ಟೇ ಕಾಳಜಿ ವಹಿಸಿದರೂ, ನಮ್ಮ ಅಧಿಕಾರಿಗಳು ಸುಳ್ಳು ಮಾಹಿತಿ ಕೊಡುತ್ತ ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ದಯಾನಂದ್ ಮತ್ತು ಅವರ ತಂಡದವರ ಅಧ್ಯಯನದ ವಿವರಗಳು ಅನುಕೂಲಕ್ಕೆ ಬರಬಹುದು. ದಯಾನಂದ್ ಈಗಾಗಲೇ ಕೆ.ಜಿ.ಎಫ್‌ಗೆ ಸಂಬಂಧಿಸಿದ ಅಧ್ಯಯನ ವರದಿಯೊಂದನ್ನು ಸಿದ್ಧಪಡಿಸಿದ್ದಾರೆ. ಬೇರೆ ಬೇರೆ ಜಿಲ್ಲೆಗಳ ಮಾಹಿತಿಗಳನ್ನು ಸಚಿವರಿಗೆ ಒದಗಿಸುವ ಮೂಲಕ ಮಲ ಹೊರುವ ಪದ್ಧತಿ ಸಂಪೂರ್ಣ ಕಿತ್ತೊಗೆಯುವ, ಆ ಕಾಯಕ ನಡೆಸುತ್ತಿರುವವರಿಗೆ ಸೂಕ್ತ ಜೀವನೋಪಾಯ ಕಲ್ಪಿಸುವ ಕಾರ್ಯಕ್ಕಾಗಿ ಸಾಮಾಜಿಕ ಸಂಘಟನೆಗಳು ಮುಂದಾಗಬೇಕಿದೆ. ಸದ್ಯಕ್ಕಂತೂ ಸಚಿವರಿಗೆ ಸೂಕ್ತ ಮಾಹಿತಿ, ದಾಖಲೆಗಳನ್ನು ಒದಗಿಸುವ ಕಾರ್ಯ ಮಾಡಲಿದ್ದೇವೆ.

ಅಂದ ಹಾಗೆ ಬರುವ ಮಂಗಳವಾರವೇ (21-6-2011) ಸಚಿವರು ಕೆ.ಜಿ.ಎಫ್ ಗೆ ಭೇಟಿ ನೀಡಿ ವಸ್ತುಸ್ಥಿತಿಯನ್ನು ಪರಿಶೀಲಿಸಲಿದ್ದಾರೆ.

ಈ ಗಂಭೀರ ವಿದ್ಯಮಾನದ ಕುರಿತು ಬೆಳಕು ಚೆಲ್ಲಿದ ದಯಾನಂದ್ ಅವರಿಗೆ ಹಾಗು ಈ ಬಗ್ಗೆ ನಮ್ಮ ಪತ್ರಕ್ಕೆ ಶೀಘ್ರವಾಗಿ ಸ್ಪಂದಿಸಿದ ಸಚಿವ ಸುರೇಶ್ ಕುಮಾರ್ ರವರಿಗೆ ಸಂಪಾದಕೀಯ ತಂಡ ಹೃತ್ಪೂರ್ವಕವಾಗಿ ಕೃತಜ್ಞತೆ ಸಲ್ಲಿಸುತ್ತದೆ.

10 comments:

  1. 'ಒಂದು ಕಾಲದಲ್ಲಿ ಚಿನ್ನ ತೆಗೆಯುತ್ತಿದ್ದ ಪ್ರಸಾದನ ಮಾತುಗಳು ' ಲೇಖನದ ಮೂಲಕ ಕೆಜಿಎಫ್‌ನ ಮಲಹೊರುವ ಪ್ರಸಾದ್ ಮಾತುಗಳನ್ನು ನಾಡಿನ ಜನತೆಯ ಮುಂದಿಟ್ಟ ಶ್ರೀ.ಟಿ.ಕೆ. ದಯಾನಂದ ಅವರಿಗೆ ಹೃತ್ಪೂರ್ವಕ ವಂದನೆಗಳು.

    ಶ್ರೀ.ದಯಾನಂದ ಅವರ ಲೇಖನವನ್ನು ನಾಡಿನ ಹಾಗು ವಿದೇಶದ ಜನತೆಯ ಗಮನಸೆಳೆದ ಇಂಟರ್‌ನೆಟ್ ಜಗತ್ತಿನಿಂದಾಗಿ ಸೃಷ್ಟಿಯಾಗಿರುವ ಜಗತ್ತಿನ ಬಣ್ಣಗಳನ್ನು ಬಿಡಿಸಿಡಬಲ್ಲ ಪ್ಯಾರೆಲಲ್ ಮೀಡಿಯಾ 'ಸಂಪಾದಕೀಯ'ಕ್ಕೆ ಅಭಿನಂದನೆಗಳು.

    -ಪ.ರಾಮಚಂದ್ರ,
    ರಾಸ್ ಲಫಾನ್, ಕತಾರ್.

    ReplyDelete
  2. ಸಾಮಾಜಿಕ ಅನಿಷ್ಟವೊ೦ದರ ಕುರಿತು ಇಷ್ಟು ಶೀಘ್ರವಾಗಿ ಸ್ಪ೦ದಿಸಿದ ಸುರೇಶ್ ಕುಮಾರ್ ಅವರ ಕ್ರಮ ಅವರ ಬಗೆಗಿನ ಗೌರವವನ್ನು ಇಮ್ಮಡಿಗೊಳಿಸಿದೆ.

    ReplyDelete
  3. suresh kumar ravare,
    nimage tappu mahithi needida adhikarigala viruddha modalu kra kaigolli.

    ReplyDelete
  4. ಅಂತು ಸಂಪಾದಕೀಯದಿಂದ ಮತ್ತು ದಯಾನಂದ ಅವರಂದ ಒಳ್ಳೆಯ ಕೆಲಸವಾಗುತ್ತಿದೆ. ಅಕ್ಷರಕ್ಕಿರುವ ಶಕ್ತಿಯಿದು- ಹನುಮಂತ ಹಾಲಿಗೆರಿ

    ReplyDelete
  5. Let's hope that Suresh Kumar takes the matter seriously and does something remarkable.

    ReplyDelete
  6. How far Mr Suresh Kumar is serious in his approach is doubtful. During a video conference with Gulbarga Corporation officers, he was told that the officers spent 18 pc funds (meant for welfare of dalits) to purchase nine vehicles to help dalits transport bodies of the dead to the grave yard. For the minister, who is not as sensitive as he projects himself, did not find the expenditure strange. Don't you feel it is hilarious that a corporation spends majority of funds meant for welfare of dalits to purchase vans to carry their dead bodies to graveyard. Is providing 'shava vahana' a welfare measure? The minister did not ask do dalits of Gulbarga need five vehicles for that purpose. Don't foget, at that time, Gulbarga city had only five city buses. And, the corporation purchased nine vehicles to carry the dead!!!

    ReplyDelete
  7. When I was Prajavani chief in Gulbarga, I asked Yadgiri stringer to write about this problem. We published the item on the same day when the then Chief Minister Dharam Singh visited Yadgiri. I am happy about Mrs Suresh Kumar who is so sensible. Sampadakeeya.com is becoming so prominent. It is safeguarding the ideals of the fourth estate. I am proud of Dayanand.

    ReplyDelete
  8. ಮೊದಲು ಸಂಪಾದಕೀಯಕ್ಕೆ ಕ್ರುತಜ್ನತೆಗಳು. ದಯಾನಂದ್ ರದ್ದು ನಿಜಕ್ಕೂ ದೊಡ್ಡ ಕೆಲಸ. ಕೆಂಡಸಂಪಿಗೆಯಲ್ಲಿ ಅವರ ಬರಹ ಮಾಲಿಕೆಗಳನ್ನು ಓದುತ್ತಿದ್ದೇನೆ. ಮೊದಲು ನಮ್ಮ ಸುತ್ತಮುತ್ತಲೂ ಇರುವ ಇಂಥ ಕೊಳಕುಗಳ ಬಗ್ಗೆ ನಾವೂ ಏನಾದರೂ ಮಾಡಲೇಬೇಕಿದೆ. ಸಾಮಾಜಿಕ ಕಾರ್ಯಕರ್ತರಾಗುವುದೆಂದರೆ, ನಮ್ಮೊಳಗೆ ನಾವು ಮಾನವರಾಗುವ ಕ್ರಿಯೆ ಎಂಬುದನ್ನು ಮತ್ತೆ ಮತ್ತೆ ಸಾರಿಹೇಳುತ್ತಿರುವಂತಿದೆ ದಯಾನಂದ್ ಕೆಲಸ.

    ಇಲ್ಲಿ ಸಚಿವ ಸುರೇಶ್ ಕುಮಾರ್ ಬಗ್ಗೆ ಈಗಲೇ ಏನೂ ಹೇಳೋಲ್ಲ. ಅವರ ಕರ್ತವ್ಯವನ್ನು ಅವರಿಗೆ ಇತರರು ವೈಯಕ್ತಿಕ ಪತ್ರ ಬರೆದು ತಿಳಿಸಬೇಕಾದ ಪರಿಸ್ಥಿತಿಯಿದೆ ಎನ್ನುವುದಷ್ಟೇ ಇಲ್ಲಿ ವಾಸ್ತವ! ಆದರೂ ತಕ್ಷಣ ಸ್ಪಂದಿಸಿದರೆಂಬುದಕ್ಕೆ ಖುಷಿ ಪಡಲೇಬೇಕಿದೆ! ಸಂಪಾದಕೀಯವೂ ಅವರ ಬೆನ್ನು ಹತ್ತಬೇಕಿದೆ. ಅವರಿಗೆ ಮುಂದೆ ಹೇಳಬೇಕಿರುವ ಕ್ರುತಜ್ನತೆಗಳನ್ನು ಸದ್ಯಕ್ಕೆ ಕಾಯ್ದಿರಿಸಿದ್ದೇನೆ. -ದಿನೇಶ್ ಕುಕ್ಕುಜಡ್ಕ

    ReplyDelete
  9. ಚಿನ್ನದ ನಾಡಿನಲ್ಲಿ ಸಾವಿರಕ್ಕೂ ಅಧಿಕ ಮಲ ಹೊರುವವರು!: ಹೆಚ್ಚುತ್ತಿರುವ ಸರಣಿ ಸಾವು

    http://vbnewsonline.com/MainNews/57833/

    ReplyDelete
  10. really nice to know this. ಬ್ಲಾಗಿಂಗ್ ಈ ಥರ ಒಳ್ಳೆ ಚಾಲನೆಗಳನ್ನ ಕೊಡೋದು ಖುಷಿ. ಇದೂ ಕೂಡ ಆಗ್ಬೇಕು ಅಂತ ತುಂಬಾ ಆಸೆ ಇತ್ತು. ಕಪಟ ಜ್ಯೋತಿಷಿ ಇಶ್ಯೂ ಇತ್ಯಾದಿ ಮತ್ತೆಲ್ಲ ಇಶ್ಯೂಗಳನ್ನ ಚರ್ಚೆ ಮಾಡೋಕೆ ಒಳ್ಲೆ ವೇದಿಕೆಯಾಯ್ತು. ಬಹುಶಃ ಭಾಷೆಯಲ್ಲಿನ ಸಭ್ಯತೆ ಈ ಬ್ಲಾಗಿನ ಶಕ್ತಿ. ಯಾವತ್ತೂ ಇದರ ಎಚ್ಚರ ತಪ್ಪದೆ ಇರಲಿ ಅಂತ ರಿಕ್ವೆಸ್ಟ್ ಮಾಡ್ತೀನಿ. ಅಂದಹಾಗೆ, ವಿವೇಕಾನಂದರ ಬಗ್ಗೆ ಬರ್ತಿದ್ದ ಪೋಸ್ಟ್ ಗಳು ನಿಂತೇ ಹೋದುವಲ್ಲ?
    ಮತ್ತೆ ಸ್ವಾಮೀಜಿ ಇಲ್ಲಿಗೆ ಬರಲಾರರೆ?
    ನಲ್ಮೆ,
    ಚೇತನಾ ತೀರ್ಥಹಳ್ಳಿ

    ReplyDelete