Wednesday, September 28, 2011

ಸಮಯ ಟಿವಿಯವರಿಗೆ ಲಕ್ಷ್ಮಿಯರೆಲ್ಲ ಪತಿಗಳ ಪಾಲಿನ ವಿನಾಶಿಗಳು, ಅಕಟಕಟಾ!


ಚಾನಲ್‌ಗಳಿಗೂ, ಜ್ಯೋತಿಷಿಗಳಿಗೂ ಯಾವ ಜನ್ಮಜನ್ಮಾಂತರದ ಸಂಬಂಧವೋ ಗೊತ್ತಿಲ್ಲ. ಮೊನ್ನೆಮೊನ್ನೆ ತಾನೇ ಟಿವಿ೯ನವರು ದರ್ಶನ್ ಮತ್ತು ಆತನ ಹೆಂಡತಿಯ ಜ್ಯೋತಿಷ್ಯವನ್ನು ಹಿಡಿದುಕೊಂಡು ಯಾರೋ ತಲೆಮಾಸಿದ ಜ್ಯೋತಿಷಿಗಳನ್ನು ಕೂರಿಸಿಕೊಂಡು ಚರ್ಚೆ ನಡೆಸುತ್ತಿದ್ದರು. ಅವನ್ಯಾರೋ ಮುಠ್ಠಾಳ ಕಂಠಭರ್ತಿ ಕುಡಿದು ಹೆಂಡತಿಯನ್ನು ಹೊಡೆದರೆ ಅದಕ್ಕೆ ಜ್ಯೋತಿಷ್ಯ ಏನು ಮಾಡುತ್ತೋ ಭಗವಂತನೇ ಬಲ್ಲ.

ನಿನ್ನೆ ಸಮಯ ಟಿವಿಯಲ್ಲಿ ಮತ್ತೊಂದು ಪ್ರಹಸನ. ಸಾಯಿಬಾಬಾ ಸತ್ತ ಕೆಲ ದಿನಗಳಲ್ಲೇ ಬಾಬಾರ ಆತ್ಮವನ್ನು ಸಮಯ ಟಿವಿಯ ಸ್ಟುಡಿಯೋಗೆ ಕರೆಸಿ ಮಾತನಾಡಿಸಿ ಐತಿಹಾಸಿಕ ದಾಖಲೆ ಸೃಷ್ಟಿಸಿದ್ದನ್ನು ನೀವು ಬಲ್ಲಿರಿ. ಈಗ ವಿಚಿತ್ರವಾದ ಇನ್ನೊಂದು ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದ್ದಾರೆ. ಅದರ ಕಥೆಯೂ ಮಜಬೂತಾಗಿದೆ.

ಲಕ್ಷ್ಮಿಪತಿಯರಿಗೆ ಕಂಟಕ ಎನ್ನುವುದು ಕಾರ್ಯಕ್ರಮದ ಥೀಮು. ಕಾರ್ಯಕ್ರಮ ನಡೆಸಿದವರ ಪ್ರಕಾರ ಯಾರ ಹೆಸರು ಲಕ್ಷ್ಮಿ ಅಂತ ಇದೆಯೋ ಅವರ ಪತಿಯರಿಗೆಲ್ಲ ಕಂಟಕವಂತೆ. ಇದಕ್ಕೆ ಅವರು ಉದಾಹರಣೆಯಾಗಿ ಕೊಟ್ಟಿದ್ದು ಜನಾರ್ದನ ರೆಡ್ಡಿ, ವೀರಪ್ಪನ್, ಗ್ಯಾರಹಳ್ಳಿ ತಮ್ಮಯ್ಯ. ಸ್ಟುಡಿಯೋದಲ್ಲಿದ್ದ ಜ್ಯೋತಿಷಿಗಳಿಬ್ಬರು ಲಕ್ಷ್ಮಿ ಅನ್ನೋ ಹೆಸರೇ ಸರಿಯಲ್ಲ ಅನ್ನೋ ಹಂಗೆ ಮಾತಾಡಿದರು. ಒಬ್ಬನಂತೂ ಸರಸ್ವತಿ ಅಂತನೂ ಹೆಸರು ಇಟ್ಟುಕೊಳ್ಳಬಾರದು ಎಂದು ಆದೇಶ ಕೊಟ್ಟರು.

ಜನಾರ್ದನ ರೆಡ್ಡಿಯ ಪತ್ನಿಯ ಹೆಸರು ಅರುಣಾ ಲಕ್ಷ್ಮಿ. ಹೀಗಾಗಿ ರೆಡ್ಡಿಗೆ ಕಂಟಕವಂತೆ. ನಾಡಿನ ಭೂಮಿಯನ್ನು ಅಗೆದು ದೋಚಿ, ಮಾಡಬಾರದ್ದನ್ನೆಲ್ಲ ಮಾಡಿ ರೆಡ್ಡಿ ಜೈಲುಪಾಲಾದರೆ ಅದಕ್ಕೆ ಅರುಣಾ ಲಕ್ಷ್ಮಿ ಏನು ಮಾಡಿಯಾಳು? ಯಾರಾದರೂ ಕಾಮನ್‌ಸೆನ್ಸ್ ಇರುವವರು ಹೇಳುವ ಮಾತೇ ಇದು?

ಇನ್ನು ವೀರಪ್ಪನ್‌ಗೂ ಮುತ್ತುಲಕ್ಷ್ಮಿಯ ಹೆಸರಿಗೂ ಏನು ಸಂಬಂಧ? ಮುತ್ತುಲಕ್ಷ್ಮಿಯನ್ನು ಮದುವೆಯಾಗುವುದಕ್ಕೂ ಮುನ್ನವೇ ವೀರಪ್ಪನ್ ಕಾಡುಗಳ್ಳನಾಗಿದ್ದ, ಪೊಲೀಸು, ಅರಣ್ಯ ಅಧಿಕಾರಿಗಳನ್ನು ಕೊಂದಿದ್ದ. ಅವನ ಪಾಪಕ್ಕೆ ಅವನು ಪೊಲೀಸರ ಗುಂಡಿಗೆ ಸಿಕ್ಕು ಸತ್ತ. ಇದರಲ್ಲಿ ಮುತ್ತುಲಕ್ಷ್ಮಿಯ ಪಾತ್ರವೇನು ಬಂತು? ಮುತ್ತುಲಕ್ಷ್ಮಿಯಲ್ಲದೆ ಬೇರೆ ಇನ್ಯಾರೋ ಆಶಾ, ರೇಖಾ, ವಾಣಿಯನ್ನು ಆತ ಮದುವೆಯಾಗಿದ್ದರೆ ಪೊಲೀಸರು ಮಾಫಿ ಮಾಡುತ್ತಿದ್ದರಾ?

ಮೂರನೇ ಉದಾಹರಣೆ ಗ್ಯಾರಹಳ್ಳಿ ತಮ್ಮಯ್ಯನದು. ಆತನ ಹೆಂಡತಿಯ ಹೆಸರು ವರಮಹಾಲಕ್ಷ್ಮಿ. ಗ್ಯಾರಹಳ್ಳಿ ತಮ್ಮಯ್ಯ ಹಿಂದೆ ಮತ್ತೊಬ್ಬ ರೌಡಿ ಹಾ.ರಾ.ನಾಗರಾಜನನ್ನು ಕೊಂದುಹಾಕಿದ್ದ. ನಾಗರಾಜನ ಮಕ್ಕಳು ದ್ವೇಷ ಇಟ್ಟುಕೊಂಡು ತಮ್ಮಯ್ಯನನ್ನು ಮುಗಿಸಿದರು. ಇವರಿಬ್ಬರ ದ್ವೇಷಕ್ಕೆ ವರಮಹಾಲಕ್ಷ್ಮಿಯ ಹೆಸರು ಏಕೆ ಹೊಣೆ ಹೊರಬೇಕು? ನಾಗರಾಜನೂ ಸತ್ತನಲ್ಲ, ಆತನ ಹೆಂಡತಿಯ ಹೆಸರು ಲಕ್ಷ್ಮಿ ಅಲ್ಲವಲ್ಲ? ಅವನೇಕೆ ಸತ್ತ?

ಜೈಲಿನಲ್ಲಿ ಮುದ್ದೆ ಮುರಿದುಕೊಂಡು ಬಿದ್ದಿರುವವರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಲೇ ಇದೆ. ಕಟ್ಟಾ ಮತ್ತವರ ಮಗ ಗ್ರಾಂಗಟ್ಟಲೆ ಅನ್ನ ತಿನ್ನುತ್ತಿದ್ದಾರೆ. ರಾಜಾ, ಕನ್ನಿಮೋಳಿ, ಅಮರಸಿಂಗ್, ಸುಧೀಂದ್ರ ಕುಲಕರ್ಣಿ, ಸತ್ಯಂ ರಾಜು ಇತ್ಯಾದಿಗಳು ಜೈಲು ಸೇರಿವೆ. ಅಕ್ಟೋಬರ್ ಮೂರರ ನಂತರ ಇನ್ನೂ ಸಾಕಷ್ಟು ಮಂದಿ ವಿವಿಐಪಿಗಳು ಜೈಲು ಪಾಲಾಗುವ ಸಾಧ್ಯತೆಗಳಿವೆ. ಇವರೆಲ್ಲರ ಪತ್ನಿಯರ ಹೆಸರೂ ಲಕ್ಷ್ಮಿ ಎಂತಲೇ ಇವೆಯೇ?

ಅದೆಲ್ಲ ಹಾಗಿರಲಿ, ಅನಿಷ್ಟಕ್ಕೆಲ್ಲ ಹೆಣ್ಣುಮಕ್ಕಳನ್ನೇ ದೂರುವುದು ಯಾಕೆ? ಈಗಲೂ ಹೆಣ್ಣುಮಕ್ಕಳ ಕಾಲ್ಗುಣ, ಕೈಗುಣ ಇತ್ಯಾದಿ ಕಪೋಲಕಲ್ಪಿತ ನಂಬಿಕೆಗಳನ್ನೆಲ್ಲ ಹೇರಿ ಅವರನ್ನು ಶೋಷಿಸಲಾಗುತ್ತಿದೆ. ಈಗ ಅವರ ಹೆಸರೂ ಅವರ ಪಾಲಿನ ಶತ್ರುವಾದರೆ ಹೇಗೆ?

ಲಕ್ಷ್ಮಿ ಎನ್ನುವುದು ಅತ್ಯಂತ ಪಾಪ್ಯುಲರ್ ಆದ ಹೆಸರು. ಈ ಹೆಸರಿರುವ ಲಕ್ಷಾಂತರ ಹೆಣ್ಣುಮಕ್ಕಳು ನಾಡಿನಲ್ಲಿದ್ದಾರೆ. ಇವರೆಲ್ಲರಿಗೂ ಸಮಯ ಟಿವಿ ಕೊಡುವ ಸಂದೇಶವಾದರೂ ಏನು? ನಿಮ್ಮ ಹೆಸರು ಬದಲಾಯಿಸಿಕೊಳ್ಳಿ ಅಂತಾನಾ? ಈ ಹೆಣ್ಣುಮಕ್ಕಳ ಗಂಡಂದಿರಿಗೆ ಕೊಡುವ ಸಂದೇಶ ಏನು? ಡೈವೋರ್ಸ್ ಮಾಡಿಬಿಡಿ ಎಂದೇ?

ಕೇವಲ ಅಗ್ಗದ ಜನಪ್ರಿಯತೆಗಾಗಿ ಸಮಯ ಟಿವಿಯವರು ಇಂಥದ್ದನ್ನೆಲ್ಲ ಮಾಡುತ್ತಿದ್ದಾರೆ ಎನ್ನುವುದಾದರೆ ಪ್ರಜ್ಞಾವಂತ ವೀಕ್ಷಕರಿಗೆ ಅದು ಕನಿಷ್ಠ ಕನಿಕರವನ್ನೂ ಮೂಡಿಸುವುದಿಲ್ಲ, ಬದಲಾಗಿ ಅಸಹ್ಯ ಮೂಡಿಸುತ್ತದೆ.

ಸಮಯದ ಮುಖ್ಯಸ್ಥರಾದ ಜಿ.ಎನ್.ಮೋಹನ್ ಮತ್ತು ಅವರ ತಂಡ ಇತ್ತೀಚಿಗೆ ಹೊಸಹೊಸ ಪ್ರಯೋಗಗಳನ್ನು ನಡೆಸಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಇದರ ನಡುವೆ ಇಂಥ ಕಾರ್ಯಕ್ರಮಗಳು ಬಂದರೆ ಹೇಗೆ? ಇದನ್ನು ಅವರು ಅರ್ಥ ಮಾಡಿಕೊಳ್ಳುವುದು ಒಳ್ಳೆಯದು. ಇಲ್ಲದಿದ್ದರೆ ಇಷ್ಟು ವರ್ಷದ ತಮ್ಮ ಸಾಂಸ್ಕೃತಿಕ ಹಿನ್ನೆಲೆಗೆ ತಾವೇ ಮಸಿ ಬಳಿದುಕೊಳ್ಳುವಂತಾಗುತ್ತದೆ. ಹಾಗಾಗದಿರಲಿ ಎಂಬುದು ನಮ್ಮ ಪ್ರಾಮಾಣಿಕ ಆಶಯ.

22 comments:

  1. ಜ್ಯೋತಿಷಿಗಳ ವಟಗುಟ್ಟುವಿಕೆ ಬಗ್ಗೆ ನೀವು ಆಗಾಗ್ಯೆ ಬರೆಯುವ ಲೇಖನಗಳು ನಿಜಕ್ಕೂ ಚಂದ.ಈ ಫಲಜ್ಯೋತಿಷ್ಯ ಹೇಳುವವರ ಮುಂದೆ ಕೂತು ತಲೆ ಹಿಂದೆ ಮುಂದೆ ಅಲ್ಲಾಡಿಸುತ್ತಿದ್ದರಂತೂ ಅವರ ಹೇಳಿಕೆಗಳಿಗೆ ಲಾಗಾಮೇ ಇರುವುದಿಲ್ಲ!!!

    ಬೊಜ್ಜು ಕರಗಿಸಲು ತಾಯತವೊಂದನ್ನು ಸಲಹೆ ಮಾಡುವ ನನ್ನ (ಬ್ಲಾಗ್ ಬರಹದ) ಬಗ್ಗೆ ನಿಮ್ಮ ಅಭಿಪ್ರಾಯವೇನಿರಬಹುದು ಎಂಬ ಕುತೂಹಲ ನನಗೆ!!! http://machikoppa.blogspot.com/2011/05/blog-post.html

    ReplyDelete
  2. ಎಲ್ಲ ಸರಿ, ಹಿಂದೂಯೇತರ ಧರ್ಮ ಭೋದನೆ ಮಾಡುವ ಚಾನೆಲ್ ಗಳು ನೂರಾರು ಇವೆ. ಅಲ್ಲಿ ಸಹ ಮೌಡ್ಯದ ಬಗ್ಗೆ ಪ್ರಸಾರ ಮಾಡ್ತಾಯಿರ್ತಾರೆ. ತಾವು ಅಂತಹ ಚಾನೆಲ್ ಗಳ ಬಗ್ಗೆ ಮತ್ತು ಅಲ್ಲಿ ಪ್ರಸಾರ ವಾಗುವ ಕಾರ್ಯಕ್ರಮ ಗಳ ಬಗ್ಗೆ ವಿಚಾರ ಮಾಡಿ ಅಲ್ಲಿರುವ ಮೌಡ್ಯಗಳ ಬಗ್ಗೆ ತಾವು ಇದೇ ರೀತಿ ಟೀಕೆ ಮಾಡಿ ಬರೆಯುತ್ತೀರಾ? ಪ್ರಪಂಚದಲ್ಲಿ ಎಲ್ಲ ತರಹದ ಜನರಿದ್ದಾರೆ, ಅವರಲ್ಲಿ ಆಸ್ತಿಕರು ಉಂಟು ಮತ್ತು ನಾಸ್ತಿಕರು ಉಂಟು, ಅವರವರ ವಿಚಾರ ನಂಬಿಕೆ ಆಚರಣೆ ಅವರಿಗೆ ಬಿಟ್ಟಿದ್ದು. ಅದನ್ನು ಟೀಕೆ ಮಾಡುವುದು ವ್ಯಂಗ್ಯ ಮಾಡುವುದು ಯಾವ ಪ್ರಗತಿಪರದ ಅಡಿಯಲ್ಲಿ ಬರುತ್ತೆ? ಕೆಲವರಿಗೆ ಟೀಕೆ ಮಾಡೋದು ಒಂದು ಖಯಾಲಿ, ನಿಮ್ಮ ತರಹ ಪತ್ರಕರ್ತ ಇಂತಹ ವಿಚಾರ ಗಳಿಗೆ ಗೌರವ ಕೊಡಬೇಕು, ಹಾಗೆ ನೋಡಿದರೆ ಬೇರೆ ದೇಶಗಳಲ್ಲಿ ಧರ್ಮದ ವಿರುದ್ದ ಟೀಕೆ ಮಾಡುವುದು ಅಪರಾದ. ಭಾರತ ಜಾತ್ಯತೀತ ರಾಷ್ಟ್ರ ಅಂದ ಮಾತ್ರಕ್ಕೆ ಹಿಂದೂ ಧರ್ಮದ ಆಚಾರ ವಿಚಾರ ಗಳನ್ನು ಟೀಕೆ ಮಾಡಿದರೆ ಜಾತ್ಯತೀತರಾಗುತ್ತರೆಯೇ? ಯಾರಿಗೆ ಏನು ಬೇಕೋ ಅದನ್ನು ಫಾಲೋ ಮಾಡುತ್ತಾರೆ, ವಿನಾಕಾರಣ ಟೀಕಿಸಿ ಬರೆಯೋದು ಯಾಕೆ. ನಿಮಗೆ ಟೀಕೆ ಮಾಡಲೇಬೇಕೆಂದರೆ ಎಲ್ಲ ಧರ್ಮದ ವಿಚಾರಗಳಲ್ಲಿ ತಲೆ ಹಾಕಿ, ಆಗ ನಿಮ್ಮ ಜಾತ್ಯಾತೀತ ನಿಲುವನ್ನು ಒಪ್ಪಿಕೊಳ್ಳೋಣ.

    ವಂದನೆಗಳು
    ಮಾರಣ್ಣ ವಡ್ಡರ್

    ReplyDelete
  3. ಕನ್ನಡದ ಸಾರಸ್ವತ ಲೋಕದ ಗಣ್ಯರು ಇಂದು ಸಾಮಾಜಿಕ ಅನಿಷ್ಟಗಳಲ್ಲಿ ಒಂದಾದ ಟಿ ವಿ ಮಾಧ್ಯಮ ಹಬ್ಬಿಸುತ್ತಿರುವ ಮೂಢ ನಂಬಿಕೆಗಳನ್ನು ವಿರೋಧಿಸದೆ ಇರುವುದು ವಿಷಾದನೀಯ. ಇಂಥ ಅನಿಷ್ಟಗಳ ಪ್ರಸಾರದ ವಿರುದ್ಧ ಕನ್ನಡ ಸಾರಸ್ವತ ಲೋಕದಿಂದ ಸಾತ್ವಿಕ ಸಿಟ್ಟು ಹಾಗೂ ಆಕ್ರೋಶ ವ್ಯಕ್ತವಾಗಬೇಕಾಗಿತ್ತು. ಆದರೆ ಅಂಥ ಜೀವಂತಿಕೆಯನ್ನು ಕನ್ನಡ ಸಾರಸ್ವತ ಲೋಕ ಏಕೆ ಕಳೆದುಕೊಂಡಿದೆಯೋ ಅರ್ಥವಾಗುತ್ತಿಲ್ಲ. -ಆನಂದ ಪ್ರಸಾದ್

    ReplyDelete
  4. Indina dinagalalli madhyamadavaru TRP goskara en bekadru madtare...
    -Rajesh Krishnan Kumta

    ReplyDelete
  5. Drushya Vaahini'yalli prasaara aaguva Yellaa kaaryakrama'galannu Oppalu Janaru Moorkha'ralla...ittiche'ge janaru tumbaa prajnaavantaraagiddaare...
    Samaaja'da Hennu Makkala Swaasthya Kedisuva Intaha kaaryakrama Dayavittu yaavude drushya maadhyama'dalli prasaara maadbedi...
    Laxmi Namma Maathe....
    Naavu Poojisuva Devathe...
    Ee Hesaru itta Hennu magalige Kashta barutte annodu yeshtu sari?..
    -Santosh Manglur

    ReplyDelete
  6. Yea its true:)its just to attract the viewers and to increase trp:( its some what:)what we call in rural kannada bitti prachar:(:)
    -Shakilahmad Nadaf

    ReplyDelete
  7. This was my FB status today...ನಿನ್ನೆ ರಾತ್ರಿ "ಸಮಯ" ಚಾನೆಲ್ ನಲ್ಲಿ ಜ್ಯೋತಿಷಿಗಳೆಂದು ಕರೆಯಲ್ಪಟ್ಟ ಇಬ್ಬರ ಕಾರ್ಯಕ್ರಮ ನೋಡಿದೆ.."ಲಕ್ಷ್ಮೀ" ಅಂತ ಹೆಸರಿಟ್ಟುಕೊಂಡರೆ ಏನೆಲ್ಲ ತೊಂದರೆ ಅನುಭವಿಸಬೇಕಾಗುತ್ತದೆ ಅಂತ ಆ ಇಬ್ಬರೂ ಭೂಪರು ವಿವರಿಸುತ್ತಿದ್ದರು. ಆ ಇಬ್ಬರು ಜ್ಯೋತಿಷಿಗಳ ಪೈಕಿ ಒಬ್ಬರ ಭಾಷೆಯಂತೂ ಯಾವ ಟಪೋರಿ ಭಾಷೆಗಿಂತ ಕಡಿಮೆಯಿರಲಿಲ್ಲ..ಮಹಿಳೆಯೊಬ್ಬಳು ತನ್ನ ಕುಟುಂಬದ ಸಮಸ್ಯೆ ವಿವರಿಸಿದಾಗ "ನಿಮ್ಮ ಹೆಸರಿನಿಂದಲೇ ನಿಮ್ಮ ಗಂಡನಿಗೆ ಸಮಸ್ಯೆ ಶುರುವಾಗಿದೆ ಕಣಮ್ಮ.." ಅಂತ ಕೈಯಲ್ಲೊಂದು ಪುಸ್ತಕ ಇಟ್ಟುಕೊಂಡು ವಿವರಿಸುತ್ತಿದ್ದ..ಇದನ್ನು ಕೇಳಿ ಆ ಮಹಿಳೆಗೆ ಹೇಗೆ ಅನ್ನಿಸಿರಬಹುದು..?
    ಇಷ್ಟಕ್ಕೂ ಸಮಸ್ಯೆಯೊಂದು ಬರೀ ಹೆಸರಿಟ್ಟುಕೊಂಡಿದ್ದಕ್ಕೆ ಶುರು ಆಗುತ್ತೆ ಅನ್ನುವ ಫಾರ್ಮುಲಾ ಹಿಂದೆ ಯಾವ ಥೀಯರಿ ಅಡಗಿದೆ ಅನ್ನೋದು ನನ್ನಂಥವನಿಗೆ ಗೊತ್ತಾಗಲಿಲ್ಲ...
    .'ಸಮಯ'ದವರು ಇಂಥ ಕಾರ್ಯಕ್ರಮಗಳನ್ನು ತೋರಿಸಿ ವೀಕ್ಷಕರನ್ನು ಶಿಲಾಯುಗಕ್ಕೆ ಕರೆದುಕೊಂಡು ಹೋಗುತ್ತಿರುವರೇ ಅಂತ ಅನಿಸಿತು..
    -Raghavendra Joshi

    ReplyDelete
  8. Oh...sadya society alle agtha ero vishya na thelkona antha papa jana news channel hakudre,,evaruu hesru bagge commentry kodtha edare:):)...ayyo papa bede hesre hello hage samaya news samaya kalyodakke yavdo ond topic hodetha edare...hodele bede...nam democratic country alle yelargu r8t 2 talk edde...alva;)??
    -Ashwini Awesum Ashu

    ReplyDelete
  9. chanel comptioninda enella agtide kashta
    -Ravi Gunaga

    ReplyDelete
  10. papa avaradru an madabeku janarigi 24 gattenu an torasabeku nive heli:)
    -Sachin S Marishetti

    ReplyDelete
  11. ಇಂತಹ ಕಾರ್ಯಕ್ರಮಗಳ ಪರಿಣಾಮ ಸಮಾಜದಲ್ಲಿ ಬಹಳ ಕೆಟ್ಟದಾಗಿರುತ್ತದೆ. ಮದುವೆಯಾಗಬೇಕಿರುವ ಲಕ್ಷ್ಮಿ ಹೆಸರಿನ ಹೆಣ್ಣು ಮಕ್ಕಳು ಎಂತ ಆತಂಕಕ್ಕೀಡಾಗಬಹುದು? ಅವರು ಒಂದೊಮ್ಮೆ ಹೆಸರು ಬದಲಾಯಿಸಿಕೊಂಡರೂ ಅದು ತಿಳಿಸ ಮೇಲೆ ಆಕೆ ಎದುರಿಸಬೇಕಾದ ಸಂಕಷ್ಟಗಳೇನು? ಆಗುವ ಅನಿಷ್ಟಕ್ಕೆಲ್ಲಾ 'ಲಕ್ಷ್ಮಿ'ಯನ್ನೇ ದೂರುವಮತಾಗುವುದಿಲ್ಲವೇ?? ಹೋಗಲಿ. ಹೀಗೆ ಮಾಡಿದಾಗ ಇದಕ್ಕೆ ವಿರುದ್ಧವಾದ ುದಾಹರಣೆಗಳನ್ನೂ ನೀಡಬೇಕಿರುತ್ತದೆ. ಲಕ್ಷ್ಮಿ ಹೆಸರಿನವರಿರುವ ಎಷ್ಟೋ ಮನೆಗಳಲ್ಲಿ ಒಳ್ಳೆಯದೂ ಆಗಿದೆ.. ಹಾಯ್ ತೇಜಸ್ವಿ ನೊಡಿ ಎಷ್ಟು ಖುಷಿಯಾಗಿತ್ತೋ ಅಷ್ಟೇ ಬೇಸರ ನೀಡುವ ಕಾರ್ಯಕ್ರಮ ಇದು..
    -Harshakumar Kugwe

    ReplyDelete
  12. ‎21st century still living in Stone age!!!!!!
    -Nissar Mohideen

    ReplyDelete
  13. TV channels wants TRP.. they do anything for that!! Better watch movie RANN for such karmakanda's of TV channels!!!!!
    -Lakshmeesh Hegde

    ReplyDelete
  14. ಎಲ್ಲಾ ಸರಿ.. ಕೇರಳ ಮೂಲದ ಪದ್ಮಾಲಕ್ಷ್ಮಿ ಎಂಬ ಕೇರಳದ ಅಯ್ಯಂಗಾರಿ ಮಾಡೆಲ್ ಒಬ್ಬಳು ಬರೇಬೆತ್ತಲೆ ಫೋಸು ಕೊಟ್ಟುಕೊಂಡು ವರ್ಷಕ್ಕೊಬ್ಬ ಬಾಯ್ ಫ್ರೆಂಡ್ ನ ಚೇಂಜ್ ಮಾಡ್ತಾ ಆರಾಮಾಗೇ ಇದ್ದಾಳಲ್ಲಾ. ಇಲ್ಲೂ ಲಕ್ಷ್ಮಿ ಇದೆ.. ಇವಳಿಗೇಕೆ ಆ ಕಾಟ ಇಲ್ಲ? ಹಿಂದೆ ಒಬ್ಬರು ಜ್ಯೋತಿ ಲಕ್ಷ್ಮಿ ಅಂತ ಕ್ಯಾಬರೆ ಡಾನ್ಸರ್ ಇದ್ದರು.. ಅವರೂ ಸಹ ಈಗ ನೆಮ್ಮದಿಯಾಗೇ ಖುಷ್ ಖುಷಿಯಿಂದ ಇದ್ದಾರೆ, ಇವರಿಗೇಕೆ ಏನೂ ಕಾಟ ಆಗಿಲ್ಲ? ಲಕ್ಷ್ಮಿ ರೈ ಅಂತ ಒಬ್ರು ಚಿತ್ರನಟಿ ಇದಾರೆ, ಟೂಪೀಸ್ ಹಾಕ್ಕೊಂಡು ಆರಾಮಾಗಿ ಸಂಪಾದನೆ ಮಾಡ್ತಾ ಇದಾರೆ. ಇವರಿಗೂ ಯಾವ ಕಾಟವೂ ಇಲ್ಲ. ಸಮಯಟಿವಿಯವರು ಇವರನ್ನ ಮಾತ್ರ ಯಾಕೆ ಕೈ ಬಿಟ್ಟರೋ ಗೊತ್ತಾಗ್ತಾ ಇಲ್ಲ.
    ಅದಕ್ಕೂ ಮೊದಲು ಮಗು ಹುಟ್ಟಿದಾಗ ಇಂಥದೇ ಹೆಸರಿಡಬೇಕು, ಇಂಥದೇ ಅಕ್ಷರದ ಹೆಸರು ಇಡಬೇಕು, ಲಕ್ಷ್ಮಿ ಅಂತ ಹೆಸರಿಟ್ಟರೆ ಮನೆಗೆ ಲಕ್ಷ್ಮಿನೇ ಬಂದಂಗೆ ಆಗುತ್ತೆ ಅಂತ ತುತ್ತೂರಿ ಹೊಡೆದು ಚಿಲ್ರೆ ಕಾಸು ಸಂಪಾದಿಸೋ ಪುರೋಹಿತರನ್ನ ಇವಾಗ ಯಾವ ಲೈಟು ಕಂಬಕ್ಕೆ ಕಟ್ಟಾಕಿ ಹೊಡೀಬೇಕು? ಹೆಸರು ಕೊಟ್ಟೋನೇ ಅವನು ಅಂದ ಮೇಲೆ ಇವಾಗ ಅವನನ್ನೇ ಹುಡುಕಾಡಿಕೊಂಡು ಹಿಡಿದು ದನಕ್ಕೆ ಬಡಿದಂಗೆ ಬಡೀಬೇಕು. ಒಬ್ಬ ಹೆಸರಿಡು ಅಂತಾನೆ, ಇನ್ನೊಬ್ಬ ಚೇಂಜ್ ಮಾಡು ಅಂತಾನೆ. ಇವಾಗ ಯಾರ ಎದೇಗೆ ಎದ್ದು ಬಂದು ಒದೀಬೇಕು ನಾವು?
    -Daya Anand

    ReplyDelete
  15. ಹುಟ್ಟಿದ ನಕ್ಷತ್ರ ಅಂತೆ,ಅವುಗಳೇ ಹೆಸರಿನ ಮೊದಲಕ್ಷರ ಸುಚಿಸುತ್ತವಂತೆ,ಅವುಗಳಿಂದ ಒಳ್ಳೆದಾಗ್ತವಂತೆ ಒದರುವ ಈ ಬಿಕನಾಸಿ ಜ್ಯೋತಿಷಿಗಳು,ಲ ಅಕ್ಷರ ಬಂದ ಹೆಣ್ಣಿಗೆ ಲಕ್ಷ್ಮಿ ಅಂತ ಹೆಸರಿದುವದು ತಪ್ಪು ಅಂತಾರೇನು,ಹೊಲ್ಸೆಲಾಗಿ ಈ ಜೋತಿಸಿಗಳನ್ನು,ಈ ಜಾತಕ ಮಣ್ಣು ಮಸಿಯನ್ನು ಹೊಳೆಗೆ ಎಸಿಬೇಕು.ದುಡ್ಕೊಂಡು ತಿನ್ನಕ್ಕೆ ಏನ್ ದಾಡಿ.
    -Raghavendra Thekkar

    ReplyDelete
  16. ಮೂರ್ಖರ ಪೆಟ್ಟಿಗೆಯ ಪರ್ಮಾವಧಿ... ನೀವ್ಯಾಕೆ ಒಂದು ಪುಸ್ತಕ ಬರಿ ಬಾರ್ದೂ.. ಹೈಟ್ಸ್ ಆಫ್ ಮೂರ್ಖರ ಪೆಟ್ಟಿಗೆ ಅಂತ.. :)

    ಇಲ್ಲ ಇನ್ನೋದ್ನು ಪ್ಯಾರ್ಲೇಲ್.. ಕಾಮೀಡಿ ಶೋ ಮಾಡಬಾರ್ದೂ...

    ReplyDelete
  17. ಈ ಅಡ್ಡಕಸುಬಿ ನಾಲಾಯಕ್ ಟಿವಿಜ್ಯೋತಿಷಿಗಳ/ನ್ಯೂಮರಾಜಲಿಸ್ಟುಗಳ ವಿನಾಶ ಆಗಲಿಕ್ಕಾದರೂ ಅವರವರ ಹೆಂಡತಿಯರನ್ನು ಓಲೈಸಿ ಲಕ್ಷ್ಮಿ ಎಂದು ಹೆಸರುಬದಲಿಸಿಕೊಳ್ಳುವಂತೆ ಕೇಳಿಕೊಳ್ಳಬೇಕಾದ ಕಾಲ ಬಂದೀತು!

    ReplyDelete
  18. ಎಲ್ಲಾ ಸರಿ ಸಂಪಾದಕರೇ...ಇಬ್ಬರ ಹೆಂಡಿರ ಗಂಡ ಯಾರಾದರೂ ಜೈಲು ಪಾಲಾದ್ರೆ, ಿಬ್ಬರ ಹೆಸರು ಬೇರೆ-ಬೇರೆಯಿದ್ರೆ..ಏನಂತಾವೇ ಈ ಮುಂಡೇವು...? ಲಕ್ಷ್ಮಿಯಿಂದ ಆರಂಭವಾಘಿರೋ ಈ ಪ್ರಮಾದ...ಎಲ್ಲಾ ಹೆಸರುಗಳಿಗೂ ಕಳಂಕತಂದು ಬಿಡೋ ಅಪಾಯವಿದೆ. ಇಂತಹ ಕಾರ್ಯಕ್ರಮಗಳು ಟಿಆರ್ಪಿಗೋಸ್ಕರ ಇಷ್ಟೊಂದು ಮುಖ್ಯವೇ..? ಶೇಮ್...! ಶೇಮ್...! ಶೇಮ್...!

    ReplyDelete
  19. ಇಂದು ಗಾಂಧಿ ಜಯಂತಿ. ತುಮಕೂರಿನ ಟಿವಿ ಮಿಡಿಯದವರಿಗೆ ಮೀನುಗಾರಿಕೆ ಇಲಾಖೆಯವರು ಕರಿದ ಮೀನು ಮಾರಾಟ ಮಾಡುತ್ತಿದ್ದಾರೆ ಎಂಬ ಸುದ್ದಿ ಸಿಕ್ಕಿತು. ಮೀನು ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ನುಗ್ಗಿಯೇ ಬಿಟ್ಟರು.ಅದು ಮಹಾತ್ಮ ಗಾಂಧಿ ಸ್ಟೇಡಿಯಂ ಪಕ್ಕದಲ್ಲೇ ಕರಿದ ಮೀನು ಮಾರಾಟ ಮಾಡಬೇಕೆ. ಟಿವಿ ಪತ್ರಕರ್ತರು, ಕ್ಯಾಮರ ಮ್ಯಾನ್ ಗಳನ್ನೂ ನೋಡಿದ ಅಲ್ಲಿನ ಸಿಬ್ಬಂದಿ ಬೆಚ್ಚಿದರು. ಮೀನು ಮಾಂಸ ಆಹಾರ ವ್ಯಾಪ್ತಿಗೆ ಬರುತ್ತೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಂದಿಲ್ಲ ಅವರು. ಸುದ್ದಿ ಬ್ರೇಕ್ ಮಾಡಿಯೇ ಬಿಟ್ಟರು. ಇದನ್ನು ನೋಡಿದ ಪೊಲೀಸರು ಓಡೋಡಿ ಬಂದರು. ಮಾಂಸ ಮಾರಾಟವೋ ಮೀನು ಮಾರಾಟವೋ ಅವರಿಗೂ ಬೇಕಿರಲಿಲ್ಲ. ಸ್ಥಳಕ್ಕೆ ಮಪ್ತಿಯಲ್ಲಿ ಬಂದ ಪೊಲೀಸರು ಕರಿದ ಮತ್ತು ಹಸಿ ಮೀನು ಮಾರುವುದನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡು ಹೊಸ ಬಡಾವಣೆ ಟಾನೆಗೆ ಕರೆದು ಕೊಂದು ಹೋದರು. ಇತ್ತ ಅಲ್ಲಿಯೇ ಇದ್ದ ಟಿವಿ ರಿಪೋರ್ಟರ್ ಗಳು, ಕ್ಯಾಮರ ಮ್ಯಾನ್ ಗಳಿಗೆ ಮಾರಾಟ ಕೇಂದ್ರದ ಸಿಬ್ಬಂದಿ ಕರಿದ ಎರಡೆರಡು ಮೀನುಗಳನ್ನು ತಿನ್ನಲು ಕೊಟ್ಟರು. ಪಾಪ ದಾಳಿ ಮಾಡಿದ್ದ ಉದ್ದೇಶವನ್ನು ಟಿವಿ ಮಂದಿ ಮರೆತರು. ಕೆಲಸ ಮಾಡಿ ಸುಸ್ತಾದವರಂತೆ ಹಾಕಿದ್ದ ಕುರ್ಚಿಗಲ್ಲಿ ಕುಳಿತು ಯಾವುದೇ ನಾಚಿಕೆ ಇಲ್ಲದೆ ಸಿಬ್ಬಂದಿ ನೀಡಿದ ಮೀನು ತಿನ್ನುತ್ತ ಕೂರಬೇಕೆ? ನೀತಿ ಹೇಳ ಹೋದವರು ಮುತಿಗೆ ಬಳಿದುಕೊಂಡರು. ಗಾಂಧಿ ಜಯಂತಿ ದಿನ ಹಿಂಸೆ ವಿರೋಧಿಸಲು ಹೋದ ಮಂದಿ ಅದನ್ನೇ ಮಾಡಿದರು. ಜಗತ್ತಿಗೆ ನೀತಿ ಹೇಳುವ ಮಂದಿಗೆ ಇದು ತಿಳಿಯಲಿಲ್ಲವೆ? ಅಷ್ಟೆ ಅಲ್ಲ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಮನೆಗೆ ಪಾರ್ಸಲ್ ಕಟ್ಟಿಸಿಕೊಂಡು ಹೋದರು. ಇದೆಲ್ಲವನ್ನು ಕಣ್ಣಾರೆ ಕಂಡ ಪ್ರಜ್ಞಾವಂತರು ಊರಿಗೊಂದು ನ್ಯಾಯ, ಇವರಿಗೊಂದು ನ್ಯಾಯವೇ? ಎಂದು ಮಾತಾಡಿಕೊಳ್ಳುತ್ತಿದ್ದರು. ಕೊನೆಗೆ ಒಬ್ಬ ರಿಪೋರ್ಟರ್ ಗೆ ಟಿವಿ ಕಚೇರಿಯಿಂದ ಪೋನ್ ಕಾಲ್ ಬಂತಂತೆ ಮೀನು ವೆಜ್ಜೋ ನಾನ್-ವೆಜ್ಜೋ ಸ್ವಲ್ಪ ಯೋಚಿಸಿ ಅಂತ. ಹೀಗಾಗಿ ಆತ ಸುದ್ದಿ ಕಲಿಸಲಿಲ್ಲವಂತೆ. ಹೇಗಿದೆ ತುಮಕೂರು ರಿಪೋರ್ಟರ್ ಗಳು ಕ್ಯಾಮರ ಮ್ಯಾನ್ ಗಳ ಕಥೆ. ಇದೆಲ್ಲವೂ ಪತ್ರಕರ್ತರ ವಲಯದಲ್ಲಿ ಸುದ್ದಿಯೋ ಸುದ್ದಿ. ಟಿವಿ ಸಂಸ್ಥೆಯ ಮುಖ್ಯಸ್ಥರು ಸಹ ಇದ್ಯಾವುದನ್ನು ಗಮನಿಸದೆ ಬ್ರೇಕ್ ಮಾಡಿದ್ದು ನಗೆಪಾಟಲಿಗೆ ಈಡುಮಾಡಿತ್ತು.

    ReplyDelete
  20. ಇವ್ರು ಸುದಾರಿಸೋದಿಲ್ಲ ಬಿಡಿ, ನಾಯಿ ಬಾಲ ಯಾವತ್ತಿದ್ರೂ ಸೊಟ್ಟಗೆ!

    ReplyDelete
  21. ಸಮಯ ಟಿವಿ ಗೆ ಕೇಡುಗಾಲ ಶುರುವಾಗಿದೆ....ಅದಕ್ಕೆ ಇಂಥ ಕಾರ್ಯಕ್ರಮ ಮಾಡುತ್ತಿದ್ದಾರೆ

    ReplyDelete