Monday, January 30, 2012

ಆರ್ ಎಸ್ ಎಸ್ ಕಣ್ಣಲ್ಲಿ ಭಾಷಾನೀತಿ, ಒಕ್ಕೂಟ ಮತ್ತು ಸಮಾಜ!!


ಕನ್ನಡವನ್ನೇ ಧ್ಯಾನಿಸುವ ನೂರಾರು ಟೆಕಿಗಳು ಕಟ್ಟಿಕೊಂಡ ಸಂಘಟನೆ ಬನವಾಸಿ ಬಳಗ. ಇದು ಈಗ ದೊಡ್ಡಮಟ್ಟದಲ್ಲಿ ಬೆಳೆದಿದೆ. ಕನ್ನಡ ಭಾಷೆ, ಸಂಸ್ಕೃತಿ ಕುರಿತಾಗಿ ಬಳಗ ಕೈಗೊಂಡಿರುವ ಜಾಗೃತಿ ಕಾರ್ಯಗಳು ಶ್ಲಾಘನೀಯ. ಬನವಾಸಿ ಬಳಗದ ಬ್ಲಾಗ್ ಏನ್ ಗುರು ಕೂಡ ಕನ್ನಡದ ಜನಪ್ರಿಯ ಬ್ಲಾಗ್. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೇಗೆ ಒಕ್ಕೂಟ ವ್ಯವಸ್ಥೆಯ ವಿರೋಧಿಯಾಗಿದೆ, ಹೇಗೆ ಇತರ ಧರ್ಮೀಯರ ಕುರಿತು ಅಸಹನೆ ಹೊಂದಿದೆ, ದೇಶೀಯ ಭಾಷೆಗಳ ಅಸ್ತಿತ್ವಕ್ಕೆ ಮುಳುವಾಗಿದೆ, ಸಾಮಾಜಿಕ ನ್ಯಾಯದ ವಿರೋಧವಾಗಿದೆ ಎಂಬ ಬಹುಮುಖ್ಯ ಅಂಶಗಳನ್ನು ಬ್ಲಾಗ್ ಆಧಾರ ಸಮೇತ ಮಂಡಿಸಿದೆ. ಪ್ರಾದೇಶಿಕ ಅಸ್ಮಿತೆಗಳನ್ನು ನಾಶಪಡಿಸುವ ಹುಸಿ ರಾಷ್ಟ್ರೀಯವಾದ ಎಷ್ಟು ಅಪಾಯಕಾರಿ ಎಂಬುದನ್ನು ಈ ಲೇಖನ ಸಮರ್ಪಕವಾಗಿ ವಿವರಿಸುತ್ತದೆ. ಸಂಪಾದಕೀಯದ ಓದುಗರಿಗೆ ಈ ಲೇಖನದ ಪೂರ್ಣ ಪಾಠ ಇಲ್ಲಿದೆ.
-ಸಂಪಾದಕೀಯ.

ಗೋಲ್ವಾಲ್ಕರ್
ರಾಷ್ಟ್ರೀಯ ಸ್ವಯಂಸೇವಕ ಸಂಘದವರ ಒಂದು ದೊಡ್ಡ ಶಿಬಿರ ಹುಬ್ಬಳ್ಳಿಯಲ್ಲಿ ನಡೀತಿದೆ. ಈ ಶಿಬಿರದಲ್ಲಿ ಸಾವಿರಾರು ಆರೆಸ್ಸೆಸ್ಸಿಗರು ಪಾಲ್ಗೊಂಡಿದ್ದಾರೆ. ಸಮವಸ್ತ್ರ ಧರಿಸಿ, ಶಿಸ್ತಿನ ಸಿಪಾಯಿಗಳಾಗಿ ನಿನ್ನೆ ಇವರು ನಡೆಸಿದ ಪಥಸಂಚಲನವಂತೂ ನೋಡಿದವರ ಮೆಚ್ಚುಗೆಗೆ ಕಾರಣವಾಗುವಂತಿತ್ತು. ಮೂರು ದಿನಗಳ ಈ ಶಿಬಿರದಲ್ಲಿ ಅನೇಕ ನಾಯಕರು ಪಾಲ್ಗೊಂಡಿದ್ದಾರೆ. ರಾಜ್ಯ ರಾಜಕಾರಣ, ಭಾರತೀಯ ಜನತಾ ಪಕ್ಷದ ಆಂತರಿಕ ಶಿಸ್ತು, ಭ್ರಷ್ಟಾಚಾರಗಳ ಬಗ್ಗೆಯೆಲ್ಲಾ ಅಲ್ಲಿ ಮಾತುಕತೆಗಳಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿದವು. ಕನ್ನಡ - ಕನ್ನಡಿಗ- ಕರ್ನಾಟಕಗಳ ಬಗ್ಗೆಯಾಗಲೀ, ಭಾರತದ ಸಂವಿಧಾನದ ಬಗ್ಗೆಯಾಗಲೀ, ಒಕ್ಕೂಟ ವ್ಯವಸ್ಥೆಯ ಬಗ್ಗೆಯಾಗಲೀ, ಜಾತ್ಯಾತೀತತೆಯ ಬಗ್ಗೆಯಾಗಲೀ ಆರೆಸ್ಸೆಸ್ಸಿಗೆ ಇರುವ ನಿಲುವುಗಳನ್ನು ಅರಿತಾಗ ಈ ಸಂಭ್ರಮ ಆತಂಕವಾಗಿ ಬದಲಾಗುವುದರಲ್ಲಿ ಅಚ್ಚರಿಯಿಲ್ಲ!

ಸಂಘದ ಹೊರಮುಖ!

ಆರೆಸ್ಸೆಸ್ ಎನ್ನುವುದು ದೇಶದ ಅತ್ಯಂತ ಶಿಸ್ತುಬದ್ಧ ಸಾಮಾಜಿಕ ಸಂಘಟನೆ ಎಂದೇ ಗುರುತಾಗಿದೆ. ಇಲ್ಲಿನ ಕಾರ್ಯಕರ್ತರು ಸ್ವಾರ್ಥ ಮರೆತು ನೆರೆ ಬರ ಮೊದಲಾದ ಸಂದರ್ಭಗಳಲ್ಲಿ ಜನತೆಯ ರಕ್ಷಣೆಗೆ, ಸಹಾಯಕ್ಕೆ ಧಾವಿಸಿ ಬಂದದ್ದಿದೆ. ವ್ಯವಸ್ಥಿತವಾಗಿ ಕಟ್ಟಲ್ಪಟ್ಟಿರುವ ಈ ಸಂಸ್ಥೆಯ ಒಳರಚನೆ ಹಾಗೂ ಹರವುಗಳು ಹೆಸರುವಾಸಿಯಾಗಿದೆ. ದೇಶಪ್ರೇಮದ ಬಗ್ಗೆ ಜಾಗೃತಿ ಮೂಡಿಸಬೇಕೆನ್ನುವ, ಭಾರತೀಯರನ್ನು ಭಾರತಕ್ಕಾಗಿ ಮಿಡಿಯುವಂತೆ ಮಾಡಬಲ್ಲ ಸಂಸ್ಥೆ ಇದೆಂಬ ಹೆಸರೂ ಸಂಘಕ್ಕಿದೆ. ಮನೆ ಮಠ ಸ್ವಂತ ಬದುಕು ಬಿಟ್ಟು ಸಂಘ ಬಯಸುತ್ತಿರುವ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ತ್ಯಾಗಿಗಳ ದೊಡ್ಡಪಡೆಯೇ ಇದರಲ್ಲಿದೆ. ಸಂಘದ ಅನೇಕ ಕಾರ್ಯಕರ್ತರು ಅಕ್ಷರಶಃ ಸಂತರಂತೆ ತಮ್ಮದೆಲ್ಲವನ್ನೂ ಬಿಟ್ಟು ಸಮಾಜಕ್ಕಾಗಿ ದುಡಿಯುತ್ತಿರುವುದೂ ಕೂಡಾ ಸತ್ಯ. ಆದರೆ ವೈಯುಕ್ತಿಕ ಹಿರಿಮೆಗಳು, ಅನೇಕರ ನಿಸ್ವಾರ್ಥತೆ, ತ್ಯಾಗ, ಗಟ್ಟಿತನಗಳು ಬಳಕೆಯಾಗುತ್ತಿರುವ ಉದ್ದೇಶ ಮಾತ್ರಾ ದುರದೃಷ್ಟಕರವಾದುದ್ದಾಗಿದೆ.

ಸಂಘದ ಬೋಧನೆಯನ್ನು ಪ್ರಶ್ನಾತೀತವಾಗಿ ಒಪ್ಪುವ ಕಾರ್ಯಕರ್ತರ ಸೈನ್ಯವನ್ನೇ ಹೊಂದಿರುವ ಸಂಘವು, ಮೂಲತಃ ತಾನು ನಂಬಿರುವ ಸಿದ್ಧಾಂತಗಳಲ್ಲೇ ಪ್ರಜಾಪ್ರಭುತ್ವ ವಿರೋಧಿ, ವೈವಿಧ್ಯತಾ ವಿರೋಧಿ ನಿಲುವುಗಳನ್ನು ಹೊಂದಿರುವ ಪುರಾವೆಗಳನ್ನು, ಸಂಸ್ಥೆಯ ಪೂಜನೀಯ ಆದರ್ಶವಾದ ಮಾಧವ ಸದಾಶಿವ ಗೋಳವಾಲ್ಕರ್ ಗುರೂಜಿಯವರ ಚಿಂತನಗಂಗಾ (ಶ್ರೀ ಗುರೂಜಿ ಸಮಗ್ರ, ಸಂಪುಟ ೧೧, ಪ್ರಕಾಶಕರು: ಸಾಹಿತ್ಯ ಸಂಗಮ ಪ್ರಕಾಶನ) ಪುಸ್ತಕದಲ್ಲಿ  ಕಾಣಬಹುದಾಗಿದೆ. ಚಿಂತನಗಂಗಾ ಸಂಘವನ್ನು ಅರಿಯುವವರಿಗೆ, ಸಂಘದ ಸಿದ್ಧಾಂತಗಳಿಗೆ ಕನ್ನಡಿ ಎನ್ನುವ ಮಾತುಗಳು ಪುಸ್ತಕದ ಮೊದಲಲ್ಲೇ ಬರೆಯಲಾಗಿರುವುದರಿಂದ ಇದನ್ನು ಸಂಘದ ಅಧಿಕೃತವಾದ ನಿಲುವು ಎಂದೇ ಪರಿಗಣಿಸಬೇಕಾಗುತ್ತದೆ. ಈ ನಿಲುವಿನ ಸರಿತಪ್ಪುಗಳನ್ನು ವಿಶ್ಲೇಷಿಸದೆ, ರಾಷ್ಟ್ರೀಯ ಸ್ವಂಯಂಸೇವಕ ಸಂಘವು ನಾಡಿನಲ್ಲಿ ಬಲಶಾಲಿಯಾಗಲು ಕನ್ನಡಿಗರು ಕೈಗೂಡಿಸಿದ್ದೇ ಆದರೆ ನಾಳಿನ ದಿನ ಮರುಕ ಪಡಬೇಕಾದೀತು!

ಭಾಷೆಗಳ ಬಗ್ಗೆ!

ವೈವಿಧ್ಯತೆಯನ್ನು ಹಳಿಯಲಾಗದ, ಆದರೆ ಒಪ್ಪಲಾಗದ ಮನಸ್ಥಿತಿಯನ್ನು, ಇಂತಹ ವೈವಿಧ್ಯತೆ ಇರುವುದರಿಂದಾಗಿಯೇ ಚಡಪಡಿಕೆ ಹೊಂದಿರುವುದನ್ನೂ ಈ ಕೆಳಗಿನ ಮಾತುಗಳು ಧ್ವನಿಸುತ್ತಿವೆ.
ನಮ್ಮ ರಾಷ್ಟ್ರೀಯ ಪರಂಪರೆಯ ವೈವಿಧ್ಯವು ಭಾಷೆಗಳ ಕ್ಷೇತ್ರಗಳಲ್ಲೂ ವ್ಯಕ್ತಗೊಂಡಿದೆ.. ಎಲ್ಲಾ ಭಾಷೆಗಳೂ ಮೂಲತಃ ಒಂದೇ. ವಾಸ್ತವವಾಗಿ ಎಲ್ಲಾ ಭಾಷೆಗಳೂ ರಾಷ್ಟ್ರೀಯ ಸಂಸ್ಕೃತಿಯ ದಿವ್ಯ ಪರಿಮಳವನ್ನು ಹರಡುವ ನವವಿಕಸಿತ ಕುಸುಮಗಳಂತೆ. ಇವೆಲ್ಲಕ್ಕೂ ಮೂಲ ಪ್ರೇರಣೆ ಎಂದರೆ ಭಾಷೆಗಳ ಆ ಸಾಮ್ರಾಜ್ಞಿ ದೇವವಾಣಿ ಸಂಸ್ಕೃತ. ಅದರ ಸಂಪನ್ನತೆ ಮತ್ತು ಪರಂಪರಾಗತ ಪಾವನ ಸಂಬಂಧಗಳಿಂದಾಗಿ ಅದೊಂದೇ ನಮ್ಮ ರಾಷ್ಟ್ರೀಯ ಏಕತೆಗೆ ಬಲನೀಡುತ್ತಿರುವ ಒಂದು ಮುಖ್ಯ ಅಂಶ. ಆದರೆ ದುರದೃಷ್ಟವಶಾತ್ ಅದು ಇಂದು ಸಾಮಾನ್ಯ ಬಳಕೆಯಲ್ಲಿಲ್ಲ. ಅದನ್ನು ಬಳಕೆಗೆ ತರುವ ನೈತಿಕ ಅಭಿಮಾನವಾಗಲೀ, ಕೆಚ್ಚೆದೆಯಾಗಲೀ ನಮ್ಮ ಇಂದಿನ ಆಡಳಿತಗಾರರಿಗಿಲ್ಲ.
 (ಕರ್ನಾಟಕದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯಗಳು ಏಕೆ ತಲೆ ಎತ್ತುತ್ತಿವೆ ಗೊತ್ತಾಯ್ತಲ್ಲಾ?)

ಇಂಗ್ಲೀಶ್ ನಮ್ಮ ಮೇಲೆ ಹೇರಲ್ಪಟ್ಟ ಕೃತಕ ಹೊರೆ. ಇದನ್ನು ಕಿತ್ತೆಸೆಯಬೇಕು. ಇಂಗ್ಲೀಶ್ ಮುಂದುವರಿಕೆ ಮಾನಸಿಕ ದಾಸ್ಯದ ಲಕ್ಷಣ. ಸಂಪರ್ಕ ಭಾಷೆಯ ಸಮಸ್ಯೆಗೆ ಪರಿಹಾರವೇನು? ಸಂಸ್ಕೃತವು ಆ ಸ್ಥಾನವನ್ನು ಪಡೆಯುವವರೆಗೆ ಅನುಕೂಲದ ದೃಷ್ಟಿಯಿಂದ ಹಿಂದಿಗೆ ಆದ್ಯತೆ ನೀಡಬೇಕು. ಯಾಕೆಂದರೆ ದೇಶದ ಬಹುಭಾಗದ ಜನರು ಬಳಸುವುದು ಹಿಂದಿಯನ್ನೇ. ಕಲಿಯುವುದಕ್ಕೆ ಮತ್ತು ಆಡುವುದಕ್ಕೆ ಅತ್ಯಂತ ಸುಲಭವಾದ ಭಾಷೆಯೂ ಅದೇ. ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡಲು ಕುಂಭ ಅಥವಾ ಬೇರಾವುದಾದರೂ ಮೇಳಕ್ಕೆ ಕಾಶಿಗಾಗಲೀ, ಪ್ರಯಾಗಕ್ಕಾಗಲೀ ಹೋದರೆ, ದೂರದ ಉತ್ತರ ದಕ್ಷಿಣ ಪೂರ್ವ ಪಶ್ಚಿಮಗಳಿಂದ ಅಲ್ಲಿ ಕಿಕ್ಕಿರಿದು ನೆರೆಯುವ ಅಗಾಧ ಜನಸ್ತೋಮ ಹಿಂದಿಯನ್ನೇ, ಅದೆಷ್ಟೇ ಅಪಕ್ವವಾಗಿರಲೀ, ಬಳಸುವುದನ್ನು ಕಾಣುತ್ತೇವೆ.

ರಾಷ್ಟ್ರೀಯ ಏಕತೆ ಮತ್ತು ಆತ್ಮಗೌರವದ ದೃಷ್ಟಿಯಿಂದ ನಾವು ಹಿಂದಿಯನ್ನು ಒಪ್ಪಬೇಕು. ವಾಸ್ತವವಾಗಿ ಬ್ರಿಟೀಷರ ಆಳ್ವಿಕೆಯಲ್ಲೂ ಬಂಗಾಳಿ, ಮರಾಠಿ ಮತ್ತು ಗುಜರಾತಿಗಳು ಅದ್ಭುತ ಪ್ರಗತಿಯನ್ನು ಸಾಧಿಸಿವೆ. ಒಂದೇ ಭಾಷೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಇವೆಲ್ಲಾ ಭಾಷೆಗಳನ್ನೂ ನಾಶಮಾಡುವುದನ್ನು ಯಾವನೂ ಸಹಿಸಲಾರ. ಆದ್ದರಿಂದ ಹಿಂದಿಯು ಇತರ ಭಾಷೆಗಳ ಮೇಲೆ ಆಕ್ರಮಣ ಅಥವಾ ಯಜಮಾನಿಕೆ ನಡೆಸುವುದೆಂಬ ಶಂಕೆ, ಭೀತಿಗಳು ಕೇವಲ ಕಟ್ಟುಕತೆ, ಸ್ವಾರ್ಥಿ ರಾಜಕಾರಣಿಗಳ ಸೃಷ್ಟಿ.

ಒಟ್ಟು ಸಾರವೆಂದರೆ ಹಿಂದೀಯನ್ನು ನೀವೆಲ್ಲಾ ಒಪ್ಪಿ. ಬ್ರಿಟೀಷರು ಆಳುವಾಗಲೇ ಭಾರತೀಯ ಭಾಷೆಗಳು ಉದ್ಧಾರವಾಗಿದ್ದವು, ಹಿಂದೀಲಿ ಆಳಿದರೆ ಏನಾಗುತ್ತದೆ? ಎನ್ನುವ ನಿಲುವು ಕಾಣುತ್ತದೆ. ಇಂದು ಹಿಂದೀ ಬರದಿದ್ದರೆ ಕೆಲಸ ಕೊಡಲ್ಲಾ ಎಂದು ನಮ್ಮಲ್ಲಿ ಹುಟ್ಟಿಕೊಂಡಿರುವ ಪರಿಸ್ಥಿತಿ ಆಕ್ರಮಣವಲ್ಲವೇ? ಹಿಂದೀ ಯಜಮಾನಿಕೆಯಲ್ಲವೇ?

ಒಕ್ಕೂಟದ ಬಗ್ಗೆ!

ಸ್ವಯಂನಿರ್ಣಯಾಧಿಕಾರದ ಘೋಷಣೆಯ ಈ ತಪ್ಪು ಅನ್ವಯವನ್ನು ಕಾಶ್ಮೀರಕ್ಕೆ ಮತ್ತು ಈಗ ಗೋವಾಕ್ಕೆ ವಿಸ್ತರಿಸಲಾಗಿದೆ. ಕಾಶ್ಮೀರಿಗಳೇ ತಮ್ಮ ಭವಿಷ್ಯವನ್ನು ತೀರ್ಮಾನಿಸಬೇಕು ಎಂದರೆ ದೇಶದ ಏಕತ್ವವನ್ನೂ ಭಾರತದ ಜನರ ಏಕತ್ವವನ್ನೂ ತಿರಸ್ಕರಿಸಿದಂತೆ.
ಆನಂತರ ಬಂತು ನಮ್ಮ ಸಂವಿಧಾನ. ಇದು ನಮ್ಮ ದೇಶವನ್ನು ಸ್ವಲ್ಪ ಹೆಚ್ಚು ಕಡಿಮೆ ಪ್ರತ್ಯೇಕವೇ ಆದ ಘಟಕಗಳಾಗಿ ಒಡೆದು ಪ್ರತಿಯೊಂದಕ್ಕೂ ಒಂದು ರಾಜ್ಯವನ್ನು ಕೊಟ್ಟು ಎಲ್ಲವನ್ನೂ ಒಂದು ಒಕ್ಕೂಟವಾಗಿ ಸಂಯುಕ್ತಗೊಳಿಸಿತು. ಪ್ರತಿಭಾಷೆಯ ಗುಂಪು ಒಂದು ಜನಾಂಗವಾಗಿ ತನ್ನದೇ ಪ್ರತ್ಯೇಕ ಭಾಷೆ ಮತ್ತು ಸಂಸ್ಕೃತಿಗಳನ್ನು ಹೊಂದಿಸಮೃದ್ಧವಾಗಿ ಸ್ವಯಮಾಧಿಕಾರವನ್ನು ಪಡೆದ ರಾಜ್ಯಗಳ ಒಕ್ಕೂಟದ ಗೀಳು ನಮ್ಮ ನಾಯಕರ ಮನಸ್ಸನ್ನೂ ವಿಚಾರಶಕ್ತಿಯನ್ನೂ ಆಕ್ರಮಿಸಿಬಿಟ್ಟಿತ್ತು.
ಇವು ನಿರಾಸೆಗೊಳಿಸುವ ಯೋಚನೆಗಳೇ. ಆದರೆ ನಾವು ನಿರಾಸೆಯಿಂದ ಕೈಕಾಲು ಸೋಲಬೇಕಾಗಿಲ್ಲ: ಏಕೆಂದರೆ ಇದಕ್ಕೆ ಒಂದು ಮದ್ದುಂಟು.
ಇದಕ್ಕಾಗಿ ನಮ್ಮ ದೇಶದ ಸಂವಿಧಾನದ ಒಕ್ಕೂಟ ಸ್ವರೂಪದ ಎಲ್ಲಾ ಮಾತನ್ನೂ ಆಳವಾಗಿ ಹೂಳಬೇಕು. ಭಾರತ ರಾಜ್ಯದೊಳಗೇ ಸ್ವಯಮಾಧಿಕಾರವುಳ್ಳ ಅಥವಾ ಭಾಗಶಃ ಸ್ವಯಮಾಧಿಕಾರವುಳ್ಳ ರಾಜ್ಯಗಳ ಅಸ್ತಿತ್ವವನ್ನೇ ಅಳಿಸಿಹಾಕಬೇಕು.

ಸಾಮಾಜಿಕ ಸಮಸ್ಯೆಯ ಸರಳೀಕರಣ!

ಮೀಸಲಾತಿ ವ್ಯವಸ್ಥೆಯ ಬಗ್ಗೆ ಗುರೂಜಿಯವವರ ಅನಿಸಿಕೆ:
ನಮ್ಮ ಜನರಲ್ಲಿ ವಿವಿಧ ವಿಭಾಗಗಳವರಿಗೆ ಹರಿಜನರು, ನಿಮ್ನ ಜಾತಿಯವರು, ನಿಮ್ನ ಬುಡಕಟ್ಟಿನವರು ಹೀಗೆಲ್ಲಾ ಹೆಸರುಗಳನ್ನು ಕೊಡಾಲಾಗುತ್ತಿದೆ. ಹಣದಾಸೆ ತೋರಿಸಿ ಅವರನ್ನು ಗುಲಾಮರನ್ನಾಗಿ ಮಾಡಿಕೊಳ್ಳುವುದಕ್ಕೆ ಇಷ್ಟೆಲ್ಲಾ ನಡೆಯುತ್ತಿರುವುದು.
ಇದನ್ನು ಓದಿದಾಗ ಆರೆಸ್ಸೆಸ್ ಮೀಸಲಾತಿ ಬಗ್ಗೆ ಎಂತಹ ನಿಲುವನ್ನು ಹೊಂದಿದೆ ಎಂಬುದು ಅರಿವಾಗುತ್ತದೆ. ಸಮಾಜದಲ್ಲಿ ಸಾವಿರಾರು ವರ್ಷಗಳಿಂದ ನಡೆದು ಬಂದಿದೆಯೆನ್ನಲಾದ, ಇಂದಿಗೂ ಬಹುಸಂಖ್ಯಾತರನ್ನು ತಾರತಮ್ಯಕ್ಕೀಡುಮಾಡುತ್ತಿರುವ ಸಮಾಜಿಕ ಅಸಮಾನತೆಯೇ ಇರಲಿಲ್ಲ ಎನ್ನುವಂತಹ ಅನಿಸಿಕೆಯನ್ನು ಗುರೂಜಿ ಮಾತುಗಳು ಧ್ವನಿಸುತ್ತಿರುವುದು ಸಂಘ ಇಡೀ ಸಮಾಜದ ಸಮಸ್ಯೆಗಳನ್ನು ಸರಳೀಕರಿಸುತ್ತಿರುವುದನ್ನು ತೋರುತ್ತದೆ. ಜಾತೀಯತೆ ತೊಲಗಬೇಕು ಅನ್ನುವ ನಿಲುವು ಸಂಘಕ್ಕಿದೆ ಎನ್ನಲಾಗುತ್ತದೆ, ಆದರೆ ಜಾತಿಯ ಕಾರಣದಿಂದಲೇ ತುಳಿತಕ್ಕೊಳಗಾದವರನ್ನು ಮೇಲೆತ್ತುವುದಕ್ಕೆ ಸಂಘವು ದೇವಸ್ಥಾನಕ್ಕೆ ಪ್ರವೇಶ, ಬಾವಿನೀರು ಬಳಸಲು ಅನುಮತಿಯಂತಹ ಮೇಲ್ಮೇಲಿನ ಪರಿಹಾರಗಳಿಗಿಂತಲೂ ಮಿಗಿಲಾದ ಪರಿಹಾರವನ್ನು ನೀಡಲಾರದಾಗಿದೆ.

ಸಂಘದ ಧರ್ಮದೃಷ್ಟಿ!

ಈ ನಾಡಿನಲ್ಲಿರುವ ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಸೇರಿದವರ ಮನೋಭಾವವೇನು? ಅವರು ಈ ನಾಡಿನಲ್ಲಿ ಹುಟ್ಟಿದರು, ಸಂದೇಹವೇ ಇಲ್ಲ. ಆದರೆ ಈ ನೆಲದ ಉಪ್ಪಿಗೆ ನಿಷ್ಠೆಯಿಂದ ಇದ್ದಾರೆಯೇ ಅವರು!? ಅವರನ್ನು ಬೆಳೆಸಿದ ಈ ನಾಡಿಗೆ ಕೃತಜ್ಞರಾಗಿದ್ದಾರೆಯೇ? ಈ ನಾಡು ಮತ್ತು ಇಲ್ಲಿನ ಪರಂಪರೆಯ ಮಕ್ಕಳು ತಾವು ಮತ್ತು ಇದಕ್ಕೆ ಸೇವೆ ಸಲ್ಲಿಸುವುದೇ ತಮ್ಮ ಮಹಾಭಾಗ್ಯ ಎಂದು ಅವರು ಭಾವಿಸಿದ್ದಾರೆಯೇ? ಖಂಡಿತಾ ಇಲ್ಲ! ಮತಾಂತರದೊಂದಿಗೇ ರಾಷ್ಟ್ರದಲ್ಲಿ ಅವರ ಪ್ರೇಮ ಮತ್ತು ನಿಷ್ಠೆಗಳು ಹೊರಟೇ ಹೋಗಿವೆ.

ಇದು ಇಲ್ಲಿಗೇ ಮುಗಿಯಲಿಲ್ಲ. ಈ ನಾಡಿನ ಶತ್ರುಗಳೊಂದಿಗೆ ಅವರು ಮಾನಸಿಕವಾಗಿ ಏಕತೆಯನ್ನು ಬೆಳೆಸಿಕೊಂಡಿದ್ದಾರೆ.
ಕೆಲವು ಸಮಾಜ ಬಂಧುಗಳು ನಮ್ಮ ಜೊತೆ ಬಿಟ್ಟು ಕಳೆದ ಕೆಲವು ಶತಮಾನಗಳಲ್ಲಿ ಎಲ್ಲೆಲ್ಲೋ ಅಲೆಯುತ್ತಿದ್ದವರು ಈಗ ಮರಳಿ ನಮ್ಮ ಬಳಿಗೆ ಬಂದಲ್ಲಿ ಅವರಿಗೆ ನಮ್ಮ ಪ್ರೀತಿ ಗೌರವಗಳನ್ನು ತೋರಿಸದೆ, ಸಂತೋಷ ಪಡದೆ ಹೇಗಿದ್ದೇವು? ಇಲ್ಲಿ ಬಲಾತ್ಕಾರವೇನೂ ಇಲ್ಲ. ವಿಷಯವನ್ನು ಸರಿಯಾಗಿ ತಿಳಿದುಕೊಂಡು ಅವರು ಹಿಂದಕ್ಕೆ ಬರಲಿ. ಉಡುಪು, ಸಂಪ್ರದಾಯ, ವಿವಾಹ ಪದ್ಧತಿ, ಅಂತ್ಯಸಂಸ್ಕಾರ ಇಂತಹವುಗಳಲ್ಲೆಲ್ಲ ಅವರು ತಮ್ಮ ಪೂರ್ವಿಕರ ಹಿಂದುಜೀವನ ವಿಧಾನವನ್ನು ಸ್ವೀಕರಿಸಲಿ ಎಂಬುದಷ್ಟೇ ನಮ್ಮ ಕರೆ, ಪ್ರಾರ್ಥನೆ.

ಒಂದೇ ಸಂಸ್ಕೃತಿ ಮತ್ತು ಪರಂಪರೆ, ಒಂದೇ ಚರಿತ್ರೆ ಮತ್ತು ಸಂಪ್ರದಾಯಗಳು, ಒಂದೇ ಆದರ್ಶಗಳು ಮತ್ತು ಆಕಾಂಕ್ಷೆಗಳು, ಇವುಗಳಿಂದ ಜನಿಸಿದ ಒಂದೇ ರಾಷ್ಟ್ರವಾಹಿನಿಯ ತೀಕ್ಷ್ಣ ಪ್ರಜ್ಞೆ ಇದೇ ನಮ್ಮ ರಾಷ್ಟ್ರಸೌಧದ ಅಡಿಬಂಡೆ!

ಈ ನಾಡಿನ ಒಳಗಿನ ಅಪಾಯಗಳೆಂದು ಇವರು ಬಗೆದಿರುವುದು ಮೂರನ್ನು. ಮೊದಲನೆಯದು ಮುಸ್ಲಿಮರು, ಎರಡನೆಯದು ಕ್ರೈಸ್ತರು ಮತ್ತು ಮೂರನೆಯದು ಕಮ್ಯುನಿಸ್ಟರು! ಹೀಗೆಂಬ ಮೂರು ಬೇರೆಬೇರೆ ಅಧ್ಯಾಯಗಳೇ ಈ ಪುಸ್ತಕದಲ್ಲಿದೆ. ಇದೇ ಇಂದಿಗೂ ಸಂಘದ ನಿಲುವಾಗಿದೆಯೇ?

ಆರೆಸ್ಸೆಸ್ ಮತ್ತು ಕರ್ನಾಟಕ 

ಇಂತಹ ನಿಲುವುಗಳ ಸಂಘವು ಕರ್ನಾಟಕದಲ್ಲಿ ತನ್ನ ಬೇರುಗಳನ್ನು ಗಟ್ಟಿ ಮಾಡಿಕೊಂಡಷ್ಟೂ ಕನ್ನಡ ಕನ್ನಡಿಗ ಕರ್ನಾಟಕಗಳ ಅಸ್ತಿತ್ವಕ್ಕೇ ಎರವಾದೀತು. ಏಕೆಂದರೆ ನಾಡಿನ ಆಡಳಿತದಲ್ಲಿ ಭಾಷೆಯಾಗಿ ಕನ್ನಡಕ್ಕಿಂತಾ ಹಿಂದೀಗೆ ಪ್ರಾಮುಖ್ಯತೆ. ನಾಡಾಗಿ ಒಗ್ಗೂಡಿದ ಕರ್ನಾಟಕಕ್ಕಿಂತಾ ಕನ್ನಡನಾಡನ್ನು ಪುಟ್ಟ ಪುಟ್ಟ ರಾಜ್ಯಗಳಾಗಿ ಒಡೆಯುವುದಕ್ಕೇ ಪ್ರಾಮುಖ್ಯತೆ ಮತ್ತು ಕನ್ನಡಿಗನಿಗಿಂತಾ ಕನ್ನಡಿಗರ ನಿಷ್ಠೆಯನ್ನೆಲ್ಲಾ ಧರ್ಮದ ಹೆಸರಲ್ಲಿ ಪುಟಕ್ಕಿಟ್ಟು ನೋಡುವುದಕ್ಕೆ ಪ್ರಾಮುಖ್ಯತೆ. ಕನ್ನಡಿಗ ಮುಸಲ್ಮಾನ, ಕನ್ನಡಿಗ ಕ್ರೈಸ್ತನಿಗಿಂತಾ ನಮಗೆ ಸಂಬಂಧವೇ ಇರದ ಹೊರನಾಡಿನ ಹಿಂದುವಿಗೆ ಪ್ರಾಮುಖ್ಯತೆ!

ಸಂಘ ರಾಜಕೀಯಕ್ಕಿಳಿಯಲಿ!

ಇದೇ ಸಂಘದವರಿಗೆ ಬಿಜೆಪಿಯೆನ್ನುವ ಇನ್ನೊಂದು ಮುಖವಿದೆ. ಬಿಜೆಪಿಯೂ ಆರೆಸ್ಸೆಸ್ಸೂ ಒಂದೇ ಎನ್ನುವುದಕ್ಕೆ ಗಣವೇಶ ಧರಿಸಿದ ನಾನಾ ರಾಜ್ಯಗಳ ಮುಖ್ಯಮಂತ್ರಿಗಳ ಫೋಟೋಗಳಿರುವುದೇ ಸಾಕು! ಈ ಮುಖವಾಡ ಧರಿಸಿದ ಪಕ್ಷದ ಸಿದ್ಧಾಂತ ಒಕ್ಕೂಟ ವ್ಯವಸ್ಥೆಯ ಬಗ್ಗೆ ಮಾತಾಡುತ್ತದೆ, ಕನ್ನಡ ಭಾಷೆಯ ಕನ್ನಡ ಸಂಸ್ಕೃತಿಯ ಉಳಿವಿನ ಬಗ್ಗೆ ಮಾತಾಡುತ್ತದೆ. ಮೀಸಲಾತಿಯ ಪರವಾಗಿ ಮಾತಾಡುತ್ತದೆ, ಚುನಾವಣೆ ಹತ್ತಿರ ಬಂದಾಗ, ಮುಸ್ಲಿಂರ ಮತಕ್ಕಾಗಿ ಗೆದ್ದ ಮೇಲೆ ಮುಸ್ಲಿಂವೊಬ್ಬರನ್ನು ಮಂತ್ರಿ ಮಾಡುತ್ತೇನೆ ಎನ್ನುತ್ತಾ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗುತ್ತದೆ... ಸಂಘವೇನೂ ಕಮ್ಮಿಯಿಲ್ಲ, ಬಿಜೆಪಿ ನಾಯಕರುಗಳಿಗೆ ಶಿಸ್ತಿನ ಪಾಠ ಹೇಳುತ್ತೆ, ಕೇಶವಶಿಲ್ಪಕ್ಕೆ ಕರೆಸಿ ಬುದ್ಧಿ ಹೇಳುತ್ತೆ. ತೆಪ್ಪಗಿರಲು ಆಜ್ಞೆ ಮಾಡುತ್ತದೆ...ವಿಪರ್ಯಾಸವೆಂದರೆ ಹೀಗೆ ಕೈಗೊಂಬೆಯಂತೆ ಆಡಾಡಿಸುತ್ತಲೇ ಸೋನಿಯಾ ಗಾಂಧಿಯ ಕೈಗೊಂಬೆ ಕಾಂಗ್ರೆಸ್ ಎನ್ನುವ ಆರೋಪವನ್ನೂ ಮಾಡುತ್ತದೆ. ಸಂಘ ಹೀಗೆ ಬಿಜೆಪಿಯ ಮೂಲಕ ತನ್ನ ಸಿದ್ಧಾಂತಗಳಿಗೆ ವಿರುದ್ಧವಾದುದನ್ನು ಹೇಳಿಸಿ, ಸೀಟು ಗೆಲ್ಲಿಸಿ, ಸರ್ಕಾರ ಮಾಡಿಸಿ, ಆಮೇಲೆ ತಮ್ಮ ಸಿದ್ಧಾಂತದ ಜಾರಿ ಮಾಡುವ ಮೋಸಗಾರಿಕೆಗಿಂತಾ ನೇರವಾಗಿ ತಾನೇ, ತನ್ನ ಸಿದ್ಧಾಂತಗಳನ್ನು ಚುನಾವಣಾ ಪ್ರಣಾಳಿಕೆ ಮಾಡಿಕೊಂಡು ರಾಜಕಾರಣಕ್ಕೆ ಇಳಿಯುವುದು ಪ್ರಾಮಾಣಿಕತೆಯೆನ್ನಿಸುತ್ತದೆ!

ಕೃಪೆ: ಏನ್ ಗುರು? ಕಾಫಿ ಆಯ್ತಾ? (ಬನವಾಸಿ ಬಳಗದ ಬ್ಲಾಗ್)

42 comments:

  1. ಮೊನ್ನೆ ಕೊನೆಗೊಂಡ ಸಮಾವೇಶದಲ್ಲಿ ಮೋಹನ್ ಭಾಗವತ್ ಅವರು ಯಡಿಯೂರಪ್ಪನವರಿಗೆ "ಯಾರಿಗೆ ಯಾವಾಗ ಅಧಿಕಾರ ಕೊಡಬೇಕು ನಮಗೆ ಗೊತ್ತಿದೆ. ನೀವು ಸುಮ್ಮನಿರಿ" ಎಂಬರ್ಥದ ಮಾತುಗಳನ್ನು ಹೇಳಿದರಂತೆ. ಹೀಗೆ, ಇವತ್ತಿನ ವಿಜಯ ಕರ್ನಾಟಕ ವರದಿ ಮಾಡಿದೆ. ಕರ್ನಾಟಕದ ಜನರು ಆರಿಸಿರುವ ಯಡಿಯೂರಪ್ಪನವರನ್ನು, ಕರ್ನಾಟಕದ ಜನರಿಂದ ಆರಿಸಲ್ಪಡದ ಮೋಹನ್ ಭಾಗವತ್ ಅವರು ಕಂಟ್ರೋಲ್ ಮಾಡೋದು, ಡೆಮಾಕ್ರಸಿಯಲ್ಲಿ ನಂಬಿಕೆಯಿರೋರು ಒಪ್ಪಿಕೊಳ್ಳಲು ಹೇಗೆ ಸಾಧ್ಯ? ಆರ್.ಎಸ್.ಎಸ್ ನವರು ತೆರೆಮರೆಯಲ್ಲಿ ನಿಂತು ಸರ್ಕಾರವನ್ನು ಆಡಿಸೋದು ಅಂದ್ರೆ ಇದೇ ತಾನೇ? ನಿಜಕ್ಕೂ, ಆರ್.ಎಸ್.ಎಸ್ ನವರು ಎಲೆಕ್ಶನ್ನಿಗೆ ನಿಲ್ಲೋದು ಪ್ರಾಮಾಣಿಕವಾದ ಹಾದಿಯಾಗಿದೆ.

    ReplyDelete
  2. ಕನ್ನಡದ ಉಳಿವು-ಬೆಳುವಿನ ಬಗ್ಗೆ ಕಾಳಜಿ ಹೊಂದಿರುವ ಆನಂದ್ ಮತ್ತು ಅವರ ಬನವಾಸಿ ಬಳಗದ ಅನೇಕ ಲೇಖನಗಳನ್ನ ಓಧಿ ಹಿಂದಿಯ ಬಗ್ಗೆ ಚಿಕ್ಕಂದಿನಿಂದ ಕೇಳಿ ತಿಳಿದಿದ್ದ ಸುಳ್ಳಿನ ಪೊರೆ ಕಳಚಿತು. ಹಿಂದಿ ಕರ್ನಾಟಕದಲ್ಲಿ ಬೆಳೆದಷ್ಟು ಕನ್ನಡಕ್ಕೆ ಅಪಾಯ ಖಂಡಿತ. ತಮಿಳು, ತೆಲುಗು ಇತ್ಯಾದಿ ಭಾಷಿಕರು ಹೆಚ್ಚಿದ್ದರು ಹಿಂದಿಯವರಷ್ಟು ದುರಹಂಕಾರಿಗಳು ಮತ್ತೊಬ್ಬರಿಲ್ಲ. ಇಂತಹ ಮನೋಭಾವದ RSS ನಿಜಕ್ಕೂ ಅಪಾಯಕಾರಿ. ಹಿಂದೂ ಧರ್ಮ ರಕ್ಷಕರು, ಸರಳರು, ಅಭಿವೃದ್ದಿಯ ಹರಿಕಾರರು ಎಂದೆಲ್ಲ ತಪ್ಪು ತಿಳಿದು RSS ನ್ನು ಇನ್ನಷ್ಟು ಬಲಪಡಿಸಿದರೆ ನಮ್ಮ ಮುಂದಿನ ಪೀಳಿಗೆಗಳು ನಮ್ಮನ್ನು ಶಪಿಸುವುದರಲ್ಲಿ ಅನುಮಾನವಿಲ್ಲ.

    ReplyDelete
  3. RSS ನ ಸಿದ್ದಾಂತ/ನಿಲುವುಗಳು ಪ್ರಜಾಪ್ರಬುತ್ವ ವಿರೋದಿಯಾಗಿ ಇರುವುದನ್ನ ತುಂಬ ಚೆನ್ನಾಗಿ ವಿವರಿಸಿದ್ದಾರೆ. ಪ್ರಜಾಪ್ರಬುತ್ವದಲ್ಲಿ ನಂಬಿಕೆಯಿಲ್ಲದ ಸಂಘವು ನಾಡಿನಲ್ಲಿ ಬಲಶಾಲಿಯಾಗಲು ಕನ್ನಡಿಗರು ಕೈಗೂಡಿಸಿದ್ದೇ ಆದರೆ ನಾಳಿನ ದಿನ ಮರುಕ ಪಡಬೇಕಾದೀತು! ಎಂಬುದು ನಿಜವಾದ ಮಾತು.

    ReplyDelete
  4. ಈ ಲೇಖನದಲ್ಲಿ ಆರ್.ಎಸ್.ಎಸ್ ಬಲಪಂಥೀಯ ವಾದ ಪ್ರಾದೇಶಿಕ ನಿಲುವುಗಳಿಗೆ ಹೇಗೆ ಮಾರಕ್ಕ ಅನ್ನೋದನ್ನ ಬಹಳ ಚೆನ್ನಾಗಿ ಬರೆದಿದ್ದೀರ..
    ಇವರ ಸಂಘಟನೆಯ ಆಡಳಿತ ಭಾಷೆಯಾಗಿ ಸಂಸ್ಕೃತ ಅಥವಾ ಹಿಂದಿಯನ್ನು ಬೇಕಾದರೆ ಇಟ್ಟುಕೊಳ್ಳಲಿ..ಅದರ ಬಗ್ಗೆ ನಮಗೇನು ಆಕ್ಷೇಪವಿಲ್ಲ. ಆದರೆ ಇಡೀ ದೇಶದ ಭಾಷೆಯಾಗಿ ಹಿಂದಿ ಅಥವಾ ಸಂಸ್ಕೃತ ಬೇಕು ಅನ್ನುವ ವಾದ ಬಾಲಿಶವಾಗಿದೆ. ಭಾರತ ವಿವಿಧತೆಯಲ್ಲಿ ಏಕತೆಗೆ ಹೆಸರುವಾಸಿಯಾಗಿರುವ ದೇಶ. ಇಲ್ಲಿ ಬೇರೆ ಬೇರೆ ಭಾಷೆಗಳು, ಧರ್ಮಗಳು, ಆಚರಣೆಗಳು ಇವೆ. ಎಲ್ಲವನ್ನು ಸಮಾನವಾಗಿ ನೋಡುವ ಹಿರಿಮೆ ಮೆರೆಯಬೇಕು ಹೊರತು ಒಂದು ಮಾತ್ರ ಕೀಳು, ಮತ್ತೊಂದು ಮೇಲು ಅನ್ನುವ racist ಮನಸ್ಥಿತಿ ದೇಶದ ಭದ್ರತೆಗೆ, ಏಕತೆಗೆ ಮಾರಕ.
    ಎಲ್ಲ ರಾಜ್ಯಗಳಲ್ಲಿನ ಆಯಾ ರಾಜ್ಯ ಭಾಷೆಗಳಿಗೆ, ಎಲ್ಲ ಧರ್ಮಗಳಿಗೆ ಸಮಾನ ಸ್ಥಾನಮಾನ ಸಿಗಲಿ ಅನ್ನುವ ಮಾನವತಾವಾದ ನಮ್ಮದು.
    ನಮಗೆ ಕನ್ನಡ ಮೇಲು, ಇತರೆ ಭಾಷೆಗಳು ಕೀಳು ಅನ್ನುವ ಕೀಳು ಮನಸ್ಥಿತಿ ಇಲ್ಲ. ಕರ್ನಾಟಕದಲ್ಲಿ ಕನ್ನಡವೇ ಮೇಲು. ತಮಿಳುನಾಡಿನಲ್ಲಿ ತಮಿಳೇ ಮೇಲು, ಅಸ್ಸಾಮಿನಲ್ಲಿ ಅಸ್ಸಮೀಸ್ ಮೇಲು. ನಿಜವಾದ ದೇಶಪ್ರೇಮ ಅಂದ್ರೆ ಇದು...ಒಂದು ಜನಾಂಗದವರೇ ಮೇಲು, ಒಂದು ಭಾಷೆ ಮೇಲು, ಉಳಿದೆಲ್ಲಾ ಜನ ಸಮುದಾಯಗಳು, ಭಾಷೆಗಳು ಕೀಳು ಅನ್ನುವ ಕೀಳು ಮನಸ್ಥಿತಿ ನಿಜಕ್ಕೂ ಮಾರಕ..

    ಇದುವರೆಗೂ ಏನ್ಗುರು ಬ್ಲಾಗಿನಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಚೌಕಟ್ಟಿನಲ್ಲಿ ಲೇಖನಗಳು ಮೂಡಿವೆ. ಕನ್ನಡ, ಕನ್ನಡಿಗ, ಕರ್ನಾಟಕಕ್ಕೆ ಪೆಟ್ಟು ಬೀಳುತ್ತವೆಯೆಂದು ಅನ್ನಿಸಿದ ರಾಜಕೀಯ ಪಕ್ಷಗಳು, ಸಂಘಟನೆಗಳು, ಜನರು ಎಲ್ಲರನ್ನೂ ಕನ್ನಡದ ಕಣ್ಣಿಂದ ನೋಡಿ ಅವರು ನಿಲುವುಗಳಲ್ಲಿನ ತಪ್ಪುಗಳನ್ನು ಎತ್ತಿ ತೋರಿಸುವ ಕೆಲಸ ಏನ್ಗುರು ಬ್ಲಾಗು ಅವಿರತವಾಗಿ ಮಾಡುತ್ತಿದೆ.

    ಕನ್ನಡ ಭಾಷೆಗೆ ಮಾರಕವಾಗುವಂತಹ ಯಾವುದೇ ಸಿದ್ಧಾಂತಗಳು ನಮಗೆ ಇಷ್ಟವಾಗುವುದಿಲ್ಲ. ಅದನ್ನು ಪ್ರಶ್ನೆ ಮಾಡಿವ ಹಕ್ಕು ಪ್ರಜಾಪ್ರಭುತ್ವದಲ್ಲಿದೆ.

    ಮತ್ತೊಮ್ಮೆ ಏನ್ಗುರು ಸಂಪಾದಕರಿಗೆ ಇಂತಹ ಲೇಖನ ಪ್ರಕಟಿಸಿದಕ್ಕಾಗಿ ನನ್ನಿ..

    ReplyDelete
  5. ಹಿಂದೆ ಬ್ರಿಟಿಷರಿಂದ ಬಿಡುಗಡೆ ಸಿಕ್ಕಾದ ಇಷ್ಟೊಂದು ಭಾಷೆ, ಸಂಸ್ಕೃತಿ, ಆಚರಣೆ, ಜೀವನಶೈಲಿಯ ವೈವಿಧ್ಯತೆ ಇರುವ ದೇಶಕ್ಕೆ ಹೊಂದುವ ವ್ಯವಸ್ಥೆ ಯಾವುದಿರಬೇಕು ಅನ್ನುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದ ನಂತರವೇ ಭಾರತಕ್ಕೆ ಒಕ್ಕೂಟ ಮಾದರಿಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಯಿತು. ಆ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಸ್ಥಾಪಕ ಸದಸ್ಯರಲ್ಲೊಬ್ಬರಾದ ದೀನ್ ದಯಾಳ್ ಉಪಾಧ್ಯಾಯ್ ಅವರು ಈ ರೀತಿಯ ವ್ಯವಸ್ಥೆಯನ್ನು ಪ್ರತಿಭಟಿಸಿ, ಭಾರತಕ್ಕೆ ಏಕಕೇಂದ್ರ ಪ್ರಭುತ್ವ ಬೇಕೆ ಹೊರತು ಒಕ್ಕೂಟ ವ್ಯವಸ್ಥೆಯಲ್ಲ ಎಂದು ವಾದಿಸಿದ್ದರು. ಏಪ್ರಿಲ್ ೨೨-೨೫, ೧೯೬೫ ರಂದು ಮುಂಬೈನಲ್ಲಿ ಅವರು ನೀಡಿದ 4 ಅಂಶಗಳ ಭಾಷಣದಲ್ಲಿ ಹೇಳಿದ್ದು ಹೀಗಿತ್ತು:
    According to the first para of the Constitution, "India that is Bharat will be a federation of States", i.e. Bihar Mata, Banga Mata, Punjab Mata, Kannada Mata, Tamil Mata, all put together make Bharat Mata. This is ridiculous. We have thought of the provinces as limbs of Bharat Mata and not as individual mother. Therefore our constitution should be unitary instead of federal.

    ಇಂತಹ ವೈವಿಧ್ಯತೆ, ಒಕ್ಕೂಟ ಪರಿಕಲ್ಪನೆಯ ವಿರೋಧಕ್ಕೆ ಹೆಚ್ಚಿನ ಜನಮನ್ನಣೆ ಸಿಗದಿರುವುದರಿಂದ ಇತ್ತಿಚಿನ ದಿನಗಳಲ್ಲಿ ಒಕ್ಕೂಟ ವಿರೋಧಿ ನಿಲುವು ಕೊಂಚ ತಗ್ಗಿದೆಯಾದರೂ ಭಾಷಾವಾರು ಪ್ರಾಂತ್ಯಗಳ ಬಗೆಗಿನ ಇವರ ಮುನಿಸು ಎಂದಿಗೂ ಮುಗಿಯಲ್ಲ. ಅದಕ್ಕೆ ಹೊಸ ತಂತ್ರವೆಂದರೆ ಭಾಷಾವಾರು ರಾಜ್ಯಗಳನ್ನು ಕತ್ತರಿಸಿ ತುಂಡು ಮಾಡಿ ಚಿಕ್ಕ ಚಿಕ್ಕ ರಾಜ್ಯಗಳನ್ನಾಗಿಸಿಬಿಟ್ಟರೆ ಅಲ್ಲಿಗೆ ದೆಹಲಿಯಲ್ಲಿ ಆ ಭಾಷಿಕರ ಧ್ವನಿ ಉಡುಗಿಸಿ, ಅವರೆಲ್ಲರನ್ನು ಅಂಕೆಯಲ್ಲಿಟ್ಟುಕೊಳ್ಳಬಹುದು ಅನ್ನುವಂತಿದೆ ಅವರ ನಿಲುವು. ಅದಕ್ಕೆ ಪೂರಕವೆಂಬಂತೆ ತೆಲಂಗಾಣದಲ್ಲಿ ಪ್ರತ್ಯೇಕತೆಯನ್ನು ಬೆಂಬಲಿಸಿದ್ದನ್ನು, ಈಗ ಬರೀ ಉತ್ತರ ಕರ್ನಾಟಕದ ೧೩ ಜಿಲ್ಲೆಗಳ ಮಟ್ಟಿಗಷ್ಟೇ ಆರ್.ಎಸ್.ಎಸ್ ಸಭೆ ನಡೆಸಿ ನಿಧಾನಕ್ಕೆ ಅಲ್ಲಿ ಪ್ರತ್ಯೇಕತೆಯ ಕೂಗೆಬ್ಬಿಸಲು ಎಲ್ಲ ತಯಾರಿ ನಡೆದಂತೆ ಕಾಣುತ್ತಿದೆ. ಮೊನ್ನೆಯ ೩೭೧ನೇ ವಿಧಿಗಾಗಿ ನಡೆದ ಹೋರಾಟ, ಆ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಕಾಂಗ್ರೆಸ್ ಅನ್ನು ದೂರಿ, ಇದನ್ನು ಕೊಡದಿದ್ದರೆ ಮುಂದಾಗುವ ದುರಂತಕ್ಕೆ ಅವರೇ ಹೊಣೆ ಅನ್ನುವಂತ ಮಾತನಾಡಿದ್ದು ಏನು ತೋರಿಸುತ್ತೆ? ತೆರೆಮರೆಯಲ್ಲಿ ಕರ್ನಾಟಕವನ್ನು ಮೂರು ಭಾಗವಾಗಿಸುವ ಪ್ರಯತ್ನ ಶುರುವಾಗಿದೆ ಎಂದೇ ಹಲವರ ಗುಮಾನಿ. ಕನ್ನಡ ಮಾತನಾಡುವ ಉತ್ತರ, ದಕ್ಷಿಣ, ಕರಾವಳಿ ಭಾಗದ ಕನ್ನಡಿಗರು ಗಡಿ, ನೆಲ, ನೀರು ಎಂದು ಕಿತ್ತಾಡುತ್ತ, ದೆಹಲಿಗೆ ಐದೋ, ಎಂಟೋ ಎಮ್.ಪಿಗಳನ್ನು ಒಯ್ಯುವಾಗ ಎಂದಿಗಾದರೂ ದೆಹಲಿಯಲ್ಲಿ ಕನ್ನಡದ ಕೂಗು ಕಂಡೀತೆ? ಸರಿಯಾದ ಒಕ್ಕೂಟವಾಗಿ ಭಾರತ ಎಂದಿಗಾದರೂ ರೂಪುಗೊಂಡಿತೇ? ಹಾಗೆ ರೂಪುಗೊಳ್ಳದೇ ಕನ್ನಡಿಗರ ಕಲಿಕೆ, ದುಡಿಮೆ, ಬದುಕು ರೂಪಿಸಿಕೊಳ್ಳುವ ಹೆಚ್ಚಿನ ಸ್ವಾಯತ್ತತೆ ಕರ್ನಾಟಕಕ್ಕೆ ಸಿಕ್ಕಿತೇ? ಇಂತಹ closed, cult ಸಿದ್ದಾಂತದ ತೊಂದರೆಗಳನ್ನು ಪ್ರಶ್ನಿಸುವವರನ್ನು ದೇಶದ್ರೋಹಿ, ಹಿಂದೂ ವಿರೋಧಿ ಅನ್ನುವ ಅಪವಾದ ಹೇರುವವರು ನಮ್ಮಲ್ಲಿ ಈಗಾಗಲೇ ಇದ್ದಾರೆ ಅನ್ನುವುದು ಮಾನ್ಯ ಶ್ರೀ ದಿನೇಶ್ ಅಮೀನಮಟ್ಟು ಅವರ ಅತ್ಯಂತ ತಾರ್ಕಿಕ, ಚಿಂತನೆಯ ಬರಹಕ್ಕೆ ಸಿಕ್ಕ ಪ್ರತಿಕ್ರಿಯೆಯಲ್ಲೇ ಗಮನಿಸಿದ್ದೇವೆ. ಕನ್ನಡ ನಾಡಿನಲ್ಲಿರುವ ಬಹುಪಾಲು ಶಾಂತಿ ಪ್ರಿಯ ಹಿಂದೂಯೇತರ ಧರ್ಮದ ಬಗ್ಗೆ ಕಿಡಿ ಕಾರುವ, ಅಸಹನೆ ತೋರುವ ಮನಸ್ಥಿತಿ ಹೀಗೆಯೇ ಮುಂದುವರೆದರೆ ಕರ್ನಾಟಕ ಗುಜರಾತಿನಂತೆ ಇನ್ನೊಂದು ಹಿಂದುತ್ವದ ಲ್ಯಾಬೋರಟರಿ ಆದರೆ ಅಚ್ಚರಿಯಿಲ್ಲ. ಕನ್ನಡಿಗರು ಎಚ್ಚೆತ್ತುಕೊಳ್ಳಬೇಕಷ್ಟೆ.

    ReplyDelete
  6. ಒಬ್ಬ ಕನ್ನಡಿಗನಿಗೆ ಹೇಗೆ ’ಹಿಂದಿ’ ಆತ್ಮಗೌರವದ ಪ್ರಶ್ನೆ ಆಗುತ್ತೆ?.... ಕನ್ನಡಿಗನ ಆತ್ಮ ಗೌರವ ಇರುವುದು ಕನ್ನಡದಲ್ಲಿ ಹಾಗೆ ತೆಲುಗನಿಗೆ ತೆಲುಗಿನಲ್ಲಿ...ತಮಿಳನಿಗೆ ತಮಿಳಿನಲ್ಲಿ. ಹಾಗಾಗಿ ’ಆತ್ಮಗೌರವಕ್ಕೆ ಹಿಂದಿ ಒಪ್ಪಬೇಕು’ ಎನ್ನುವುದು ತಲೆಬುಡವಿಲ್ಲದ ಪೊಳ್ಳುವಾದ

    ReplyDelete
  7. ದೇಶದ ಒಗ್ಗಟ್ಟನ್ನು ಒಂದು ಬಾಶೆ ಮತ್ತು ಒಂದು ಜಾತಿ ಮೂಲಕ ಸಾದಿಸಬಹುದು ಎಂದು ನಂಬಿರುವ ಆರ್.ಎಸ್.ಎಸ್. ತತ್ವ ಸಿದ್ದಾಂತಗಳು ವೈವಿದ್ಯತೆಯನ್ನು ಮೈಗೂಡಿಸಿಕೊಂಡಿರುವ ಒಕ್ಕೂಟ ವ್ಯವಸ್ಥೆಯನ್ನು ಹೊಂದಿರುವ ಜಾತ್ಯಾತೀತ ದೇಶವಾದ ಬಾರತಕ್ಕೆ ಹೇಗೆ ಮಾರಕ ಎಂಬುದನ್ನು ಲೇಖನದಲ್ಲಿ ಸವಿಸ್ತಾರವಾಗಿ ವಿವರಿಸಲಾಗಿದೆ. ಕರ್ನಾಟಕವನ್ನು ಒಡೆಯುವ, ಕನ್ನಡದ ಮೇಲೆ ಇನ್ನೊಂದು ಬಾಶೆಯನ್ನು ಹೇರುವ, ರಾಷ್ಟ್ರೀಯತೆ ಹೆಸರಿನಲ್ಲಿ ಕನ್ನಡಿಗ ಎಂಬುದನ್ನು ಮರೆಮಾಚುವ ಯಾವುದೇ ನಡೆಯನ್ನು ಒಪ್ಪಲು ಸಾದ್ಯವಿಲ್ಲ.

    ReplyDelete
  8. There is no logic in this article. Waste of time.

    ReplyDelete
    Replies
    1. if you have the thinking capacity.... you'll understand.

      Delete
    2. There is no logic in the RSS's principles.eye opening article."ಒಂದೇ ಸಂಸ್ಕೃತಿ ಮತ್ತು ಪರಂಪರೆ, ಒಂದೇ ಚರಿತ್ರೆ ಮತ್ತು ಸಂಪ್ರದಾಯಗಳು, ಒಂದೇ ಆದರ್ಶಗಳು ಮತ್ತು ಆಕಾಂಕ್ಷೆಗಳು, ಇವುಗಳಿಂದ ಜನಿಸಿದ ಒಂದೇ ರಾಷ್ಟ್ರವಾಹಿನಿಯ ತೀಕ್ಷ್ಣ ಪ್ರಜ್ಞೆ ಇದೇ ನಮ್ಮ ರಾಷ್ಟ್ರಸೌಧದ ಅಡಿಬಂಡೆ!."
      foolish statement

      Delete
  9. bari kannada antidre karnatakadalle belibahudashte.. rashtra vyapiyagi hege beleyalu sadya? allige navondu gudu kattikondu hora prapanchada bhagavagade beleyuvudu antaytu.. kannadada jote hindi kalitare tappenu?

    ReplyDelete
    Replies
    1. "kannadada jote hindi kalitare tappenu?"
      opteeni.
      Adre kannadadavara mele hindi yaaka hErbeku?

      Delete
    2. namage kannaDane 'raashTra'...kannaDadalle belitivi ..kannaDadalle baaltivi

      Delete
    3. matte illi english alphabet nalli yaake type maadiddeeri ?

      Delete
  10. @Anonymous...Bari Hindi kalitavaru deshada yellade baluve nadesuttiddare...Kannadada Jote Hindi kalitare tappilla..Aadare prantiya bhashegala mele balavantavaagi hindi athava bere yaavude bhashe heeruvududakke namma virodha. RSS tamma sanghataneyalli Hindi athava Samskruta vannu upayogisali...Aadare Hindi rastra bhashe yendu namme mele heera baaradu aste..

    ReplyDelete
  11. ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಸ್ವಯಂ ಸೇವಾ ಸಂಘಟನೆ ಎಂಬ (ಸುಮಾರು ೬೦ ಲಕ್ಷ ಸದಸ್ಯ ಬಲ) ಬಿರುದು ಹೊಂದಿರುವ ಆರ್.ಎಸ್. ಎಸ್. ದೇಶದ ಪ್ರಧಾನ ಸಮಸ್ಯೆಗಳ ಬಗ್ಗೆ ಎಂದೂ ತಲೆ ಕೆಡಿಸಿಕೊಂಡಂತೆ ಕಾಣುವುದಿಲ್ಲ. ದೇಶದ ಖನಿಜ ಸಂಪತ್ತನ್ನು ಅಕ್ರಮವಾಗಿ ಹಾಗೂ ಸಕ್ರಮವಾಗಿ ವಿದೇಶಗಳಿಗೆ ಕೊಳ್ಳೆ ಹೊಡೆದು ವಿದೇಶಗಳಿಗೆ ಮಾರಿ ಸಾವಿರಾರು ಕೋಟಿ ರೂಪಾಯಿಗಳನ್ನು ಕೂಡಿ ಹಾಕಿರುವ ರೆಡ್ಡಿ ಸಹೋದರರು ಇದೇ ಆರ್. ಎಸ್. ಎಸ್. ನ ರಾಜಕೀಯ ಅಂಗವಾದ ಬಿ.ಜೆ.ಪಿ. ಪಕ್ಷದವರೇ ಅಲ್ಲವೇ? ಇವರ ವಿರುದ್ಧ ಇಷ್ಟು ದೊಡ್ಡ ಸಂಘಟನೆಯಾದ ಆರ್.ಎಸ್. ಎಸ್. ಎಂದಾದರೂ ಧ್ವನಿ ಎತ್ತಿದ್ದು ಯಾರಾದರೂ ಕಂಡಿದ್ದಾರೆಯೇ? ಕಾಂಗ್ರೆಸ್ಸ್ನಲ್ಲೂ ಗಣಿ ಲೂಟಿಕೋರರು ಇದ್ದಾರೆ ಎಂದುಕೊಂಡರೂ ಅವರಿಗೆ ದೇಶ ಪ್ರೇಮದ ಸಂಸ್ಕಾರ ಇಲ್ಲ, ಬಿ.ಜೆ.ಪಿ. ಯಂತೆ ದೇಶ ಪ್ರೇಮದ ಪಾಠ ಅವರಿಗೆ ದೊರಕಿಲ್ಲ ಎಂದುಕೊಳ್ಳಬಹುದು, ಆದರೆ ದೇಶಪ್ರೇಮದ ಪಾಠ ಕಲಿತ ಬಿ.ಜೆ.ಪಿ.ಯವರು ಇಂಥ ಲೂಟಿಗೆ ಹೇಗೆ ಸಮ್ಮತಿ ಕೊಟ್ಟರು? ಇಂಥ ಮಹಾ ಗಣಿ ಲೂಟಿಯನ್ನು ತಡೆಗಟ್ಟಲು ಹೋರಾಡಿದ್ದು ಎಸ್. ಆರ್. ಹಿರೇಮಟ ಅವರಲ್ಲವೆ. ಯಾವ ದೇಶಭಕ್ತ ಸಂಘಟನೆಯವರೂ ಅವರಿಗೆ ಸಾಥ್ ನೀಡಿಲ್ಲ. ಅವರು ಏಕಾಂಗಿಯಾಗಿ ಸುಪ್ರೀಂ ಕೋರ್ಟಿನಲ್ಲಿ ಕೇಸ್ ದಾಖಲಿಸಿ ಗಣಿಗಾರಿಕೆಯ ಲೂಟಿಯನ್ನು ತಡೆಯುವಲ್ಲಿ ಮುಂದಾಗಿದ್ದಾರೆ. - ಆನಂದ ಪ್ರಸಾದ್

    ReplyDelete
  12. ಇಲ್ಲಿ ತಿಳಿಯಬೇಕಾಗಿರುವ ಬಹು ಸರಳವಾದ ಪ್ರಶ್ನೆ ಒಂದೇ.. ಬಹು ಭಾಷಾ, ಬಹು ಜನಾಂಗೀಯ, ಬಹು ಧರ್ಮೀಯ ಭಾರತದಲ್ಲಿ " ಜಾತ್ಯಾತೀತತೆ(Secular democracy), ಒಕ್ಕೂಟ ವ್ಯವಸ್ಥೆ(Federalism), ಭಾಷಾ ನೀತಿ(Language policy), ಸಾಮಾಜಿಕ ನ್ಯಾಯ (Social Justice)"ಗಳ ಬಗ್ಗೆ ಆರ್.ಎಸ್.ಎಸ್ ನ ಸೈದ್ಧಾಂತಿಕ ನಿಲುವೇನು? ಚಿಂತನಗಂಗಾದಲ್ಲಿ ಇದೇ ನಾಲ್ಕು ವಿಷಯಗಳ ಬಗ್ಗೆ ಕಂಡು ಬಂದ ಗೋಲವಲ್ಕರ್ ಅವರ ನಿಲುವನ್ನು ಈ ಅಂಕಣ ಎತ್ತಿ ತೋರಿಸಿದೆ ಮತ್ತು ಅಲ್ಲಿ ಗೋಲವಲ್ಕರ್ ಅವರ ನಿಲುವು ನನಗಂತೂ ವೈವಿಧ್ಯತೆ (ಜಾತಿ, ಧರ್ಮ, ಭಾಷೆ, ಜನಾಂಗ ಎಲ್ಲ ರೀತಿಯ) ವಿರೋಧಿಯಾಗಿ ಕಾಣಿಸುತ್ತೆ. ಈಗ ಒಂದೋ ಅವರು ಹೇಳಿದ್ದೇ ಸರಿ ಅಥವಾ ಅದು ತಪ್ಪು ಅನ್ನುವ ಆಯ್ಕೆಯೆರಡೇ ಅಲ್ಲವೇ ನಾವು ನೋಡಬೇಕಾಗಿರುವುದು.

    ReplyDelete
  13. Idondu ataarkika lekhana. RSS navaru hindi yanuu kannadigara mele heruttiddaare embudu ondu kattukathe. Badalaagi kendra sarkaarave allave hindiyannu heruttiruvudu. Bhasheya hesaralli RSS navaru deshavannu odeyttidaare endadare nivu nimma prachodita lekhanadinda maaduttiruvuduu ade allave. English namma mele heriruva krutaka hore embudu satyave allave. Igiruva paristitiyalli samskrutavannu english mattakke RSS navaru bayasidaruu saha taralaaguvude? Illda bhayvannu huttisuttiruva nimma maatugalu haasyaspadavallve. Kevala RSS nnu jariyuva uddeshavashte I lekhanadall kanisuttide. Bhasheya baggina nijavada kalaji lekhanadalli iddntilla. Bhasheya abhimaanadinda huttiruva Banavasi Balagavu bedada vicharagalige tale kedisikolluttiruvudu hagu idara mulaka sanghataneyannu innelligo karedukondu hoguttiruvudu viparyaasave sari. Innu intaha lekhanagalu bandare sampaadakeeya tane summane iddite. Innillada kalajiyinda prakatisuttade.

    ReplyDelete
    Replies
    1. ಹರಿಯವರೇ, RSS ನ ಚಿಂತನಗಂಗಾದಲ್ಲಿ ಹಿಂದಿ ರಾಶ್ಟ್ರಬಾಶೆಯಾಗಬೇಕೆನ್ನುವ ಹಾಗೆ ನಿಲುವುಗಳನ್ನ ಬರೆಯಲಾಗಿದೆ. ತಾವು ಇನ್ನು ಓದಿಲ್ಲ ಅಂದ್ರೆ ಈಗಲೇ ಓದಿ, ಹಿಂದಿ ರಾಶ್ಟ್ರಬಾಶೆಯಾಗದೇಯೇ ಕನ್ನಡಿಗರ ಮೇಲೆ ಇಶ್ಟರ ಮಟ್ಟಿಗೆ ಹಿಂದಿ ಹೇರಿಕೆ ನಡೆಯುತ್ತಿದೆ. ಇನ್ನು ರಾಶ್ಟ್ರಬಾಶೆ ಆದ್ರೆ ಕನ್ನಡಿಗರು ಸುಮ್ನೆ ನೇಣು ಹಾಕಿಕೊಳ್ಳಬೇಕಶ್ಟೆ. ಇನ್ನು ಒಕ್ಕೂಟ ವ್ಯವಸ್ತೆಯ ಬಗ್ಗೆ ಚಿಂತನಗಂಗಾದಲ್ಲಿ ಬರೆಯಲಾಗಿರುವ ನಿಲುವು ಕೂಡ ಪ್ರಜಾಪ್ರಬುತ್ವ ವಿರೋದಿ ನಿಲುವೇ, ಇವರ ನಿಲುವಿನ ಪ್ರಕಾರ ಕನ್ನಡಿಗರು ತಮ್ಮನ್ನ ತಾವು ಆಳಿಕೊಳ್ಳಲು ಆಗದವರು.

      Delete
    2. ಹರಿಯವರೇ, ಈ ಲೇಖನದಲ್ಲಿ RSS ನವರನ್ನು ಜರಿಯುವ ಉದ್ದೇಶವಿದ್ದಿದ್ದರೆ ಮೊದಲಿಗೆ ಅವರು ಮಾಡಿರುವ ಒಳ್ಳೆಯ ಕೆಲಸಗಳ ಬಗ್ಗೆ ಯಾಕೆ ಬರೆಯಲಾಗುತ್ತಿತ್ತು? ಇಲ್ಲಿ ಲೇಖನದಲ್ಲಿ ಯಾವುದೇ ವಿಷಯವನ್ನು ಕಲ್ಪಿಸಿಕೊಂಡು ಬರೆಯಲಾಗಿಲ್ಲ, ಬದಲಿಗೆ ಸಂಘದ ಪ್ರಮುಖರಾಗಿದ್ದ ಗೋಳ್ವಾಲ್ಕರ್ ಅವರ ಲೇಖನದಿಂದ ಆಯ್ದ ವಿಷಯಗಳ ಬಗ್ಗೆ ವಿಮರ್ಶೆ ಬರೆಯಲಾಗಿದೆ. ಏನ್ ಗುರುವಿನಲ್ಲಿ ಬರೆಯಲಾಗಿರುವ ಲೇಖನಗಳು ಕನ್ನಡ, ಕನ್ನಡಿಗ ಹಾಗೂ ಕರ್ನಾಟಕದ ಏಳಿಗೆಗೆ ಮಾರಕವಾಗು ಅಂಶಗಳನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತಾ ಬಂದಿದೆ. ಸಂಘದ ಒಕ್ಕೂಟ ವ್ಯವಸ್ಥೆ ವಿರೋಧಿ ಧೋರಣೆ, ಹಿಂದಿ ಹಾಗೂ ಸಂಸ್ಕೃತವನ್ನು ಹೊರತು ಪಡಿಸಿ ಇತರ ಭಾಷೆಗಳನ್ನು ನೋಡುವ ಪರಿ ಹೀಗೆ ಪ್ರತಿಯೊಂದು ನಮ್ಮನ್ನು ಕೆಳಗೆ ತಳ್ಳುವ ಪ್ರಯತ್ನವಾಗಿ ಕಾಣುತ್ತಿದೆ. ಮನುಷ್ಯ ಮನುಷ್ಯನನ್ನು ಧರ್ಮದ ಆಧಾರದ ಮೇಲೆ ಕೀಳಾಗಿ ಕಾಣುವ ಚಿಂತನೆ ಅಸಹ್ಯ ಹುಟ್ಟಿಸುತ್ತದೆ.

      Delete
  14. ಕನ್ನಡಾನಾ.. ಈ ಟೋಪಿಕ್ನ ಮಿಕ್ಸ್ ಮಾಡಂಗೀಂಡ್ರೆ.. ನಂದು ಒಂದೆರಡು ಅಡಿಶನ್ ..

    ಕನ್ನಡದ ಮೇಲೆ
    ಬಂತರ ಸಂಘ ತುಳು ಹೇರುತ್ತೆ..
    ಕ್ರಿಸ್ಚಿಯನ್ ಮೀಸನರಿಗಳು ಇಂಗ್ಲೀಶ್ ಹೇರುತ್ತೆ
    ತಿರುಪತಿ ಭಕ್ತರು - ತೆಲುಗು ಹೇರತಾರೆ
    ಮೀನುಗರು ಕೊಂಕಣಿ ಹೇರತಾರೆ...
    ವಕ್‌ಫ್ ಅವರು ಉರ್ದು ಹೇರತಾರೆ...

    ಇನ್ನೂ ಐಟೀ ಯವರು C , Java , SQL ಹೇರತಾರೇನೋಪಾ..... ಸಮ್ ಪನ್ ಉ.... ನೋ ಒಫ್ಫೆನ್ಸು...

    ( ಭಾಷೆ - ಜಾತಿ, ಡರ್ಮ, ರಾಜಕೀಯ , ಪ್ರದೇಶಿಕತೆ, ಮೀರಿ ಬೆಳೆಯ ಬೇಕು.. ಅಂತದೇನಾದ್ರೂ ಯೋಚಿಸೋಣ...)

    ReplyDelete
  15. ಭಾಷೆ - ಜಾತಿ, ಡರ್ಮ, ರಾಜಕೀಯ , ಪ್ರದೇಶಿಕತೆ ಮೀರಿ ಬೆಳೆಯ ಬೇಕು

    ಕಿರಣ್ ಅವರೇ - ಬರೀ ಇದನ್ನ ಮಾತ್ರ ಮೀರಿದ್ರೆ ಸಾಕಾ?
    ರಾಷ್ಟ್ರೀಯತೆ ಮೀರೋದು ಬೇಡ್ವಾ?
    ಅಂತರರಾಷ್ಟೀಯತೆ ಸಂಕೇತವಾಗಿ ವಿಶ್ವಮಾನವರಗೋದು ಬೇಡ್ವಾ?

    ಸಾರ್- ಮನುಷ್ಯನಿಗೆ ಒಂದು ಇಡೆಂಟಿಟಿ ಇರಬೇಕಲ್ವಾ? ನಮಗೆ ಕನ್ನಡಿಗರು ಅನ್ನೋದು ಒಂದೇ ಒಂದು ಇಡೆಂಟಿಟಿ ಇರೋದು ಸಮಾಜದಲ್ಲಿ.ಬೇರೆ ಬೇರೆಯವರಿಗೆ ಬೇರೆ ಬೇರೆ ಇಡೆಂಟಿಟಿಗಳು/ಮುಖವಾಡಗಳು ಇರ್ತವೆ ಅಷ್ಟೇ

    ReplyDelete
    Replies
    1. That shows your narrow mentality. LOL. now Amarnath tell me problem is from your side, you think kannada is more important than our nation india and national integrity. Bhaarateeyaru anno identity ilva samaajadalli ?

      Delete
    2. ನಾನು ಒಪ್ಪುತ್ತೇನೆ ನಿಚ್ಛ್ಳ್ಳವಾಗಿ
      .. ಆದರೆ ಅವರ ಐಡೆಂಟಿಟೀನ ..ನಮ್ಮ ಐಡೆಂಟಿಟೀ ಜೊತೆ ಗುರುತಿಸುವ ಅಥವಾ ತರ್ಕಿಸುವ ಅವಷ್ಯಕತೆ ಇದೆಯಾ.. ? ಇದು ನನ್ನ ಜಿಜ್ಞಾಸೆ

      Delete
  16. Hari avare - lekhanadalli clear aagide alvaa. chintanaganga pustakadalli ee maatu ideyalla "ರಾಷ್ಟ್ರೀಯ ಏಕತೆ ಮತ್ತು ಆತ್ಮಗೌರವದ ದೃಷ್ಟಿಯಿಂದ ನಾವು ಹಿಂದಿಯನ್ನು ಒಪ್ಪಬೇಕು"?

    namma desha vividha raajyagaLa oppukoota.idanna RSS yaake oppuvudilla? ello Delhinalli kootkondu iDee desha hinge madbeku, hange madbeku anta heLOdu okkuta dharma alla saar.

    ReplyDelete
  17. ಈ ಲೇಕನದ ಸರಿಯಿಲ್ಲ ಎನ್ನುವವರು, RSS ನ ಹಿಂದಿ ರಾಶ್ಟ್ರಬಾಶೆಯಾಗಬೇಕು, ಬಾರತ ಒಕ್ಕೂಟವಾಗಬಾರದು, ಹಿಂದುಗಳನ್ನು ಬಿಟ್ಟು ಬೇರೆ ದರ್ಮ ಪಾಲಿಸುವವರಿಗೆ ದೇಶಾಬಿಮಾನ ಇರುವುದಿಲ್ಲ, ಕೆಳವರ್ಗದ ಜನರಿಗೆ ಮೀಸಲಾತಿ ಇರಬಾರದು ಎನ್ನುವ ಸಿದ್ದಾಂತಗಳು ಹೇಗೆ ಕನ್ನಡ ಕನ್ನಡಿಗ ಮತ್ತು ಕರ್ನಾಟಕಕ್ಕೆ ಉಪಯೋಗವಾಗಬಲ್ಲದು ಎನ್ನುವುದನ್ನ ವಿವರಿಸಿ.

    ReplyDelete
  18. ಹರಿ ಅವರೇ,
    ಕೇಂದ್ರ ಸರಕಾರವು ಹಿಂದಿ ಹೇರುತ್ತಿದೆ ಅಂತ ನೀವು ಹೇಳಿದ್ದು ಸರಿ.
    ಆದರೆ, ಗೋಳ್ವಾಲ್ಕರ್ ಅವರ 'bunch of thoughts' ಹೊತ್ತಗೆಯಲ್ಲಿ ಹಿಂದಿಯನ್ನೇ ಸಂಪರ್ಕ ಭಾಷೆಯನ್ನಾಗಿ ಮಾಡಬೇಕು ಎಂಬ ಅನಿಸಿಕೆ ಇದೆಯಲ್ಲಾ. ನೀವು ಯಾಕೆ ಶ್ರೀಯುತ ಗೋಳ್ವಾಲ್ಕರ್ ಅವರ ಹೊತ್ತಗೆಯನ್ನು ಕಟ್ಟುಕಥೆ ಅಂತ ಕರೀತಿದೀರಿ?

    ReplyDelete
  19. ವಿವಿಧತೆಯಲ್ಲಿ ಏಕತೆಯನ್ನು ಕಾಣಬೇಕು ಎಂದು ಹೇಳುವ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಸಂಘದ ನಿಲುವು. ಒಂದು ದೇಶ, ಒಂದು ಭಾಷೆ, ಒಂದು ಧರ್ಮ ಹೀಗೆ ಎಲ್ಲಾ ಒಂದೇ ಇರಬೇಕು ಎಂದು ಹೇಳುತ್ತಾ, ನಮ್ಮ ದೇಶದ ವೈವಿಧ್ಯತೆಯನ್ನು ಕೆಡವಿ ಹಾಕಲು ಹೊರಟಿದೆ. ಎನ್ ಗುರು ಅಂಕಣದಲ್ಲೂ ಸಹ ಇದೇ ವಿಷ್ಯಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಮೊದಲು ದೇಶ ಆಮೇಲೆ ರಾಜ್ಯ ಅನ್ನೋ ಮಾತೇ ಅರ್ಥವಿಲ್ಲದ್ದು. ಇದಕ್ಕೆ ಆಲೂರು ವೆಂಕಟ ರಾಯರು ಸರಿಯಾದ ಉತ್ತರವನ್ನೇ ನೀಡಿದ್ದಾರೆ. """ಕೆಲವರಿಗೆ ಕರ್ನಾಟಕವನ್ನು ಪ್ರೀತಿಸುವುದು ಸಂಕುಚಿತ ದೃಷ್ಟಿಯೆನಿಸಿದೆ. ಅವರಿಗೆ ಭಾರತ ಮಾತ್ರ ಮುಖ್ಯ: ರಾಷ್ಟ್ರಪ್ರೇಮವೊಂದೆ ದೇಶಪ್ರೇಮ, ಅಂತಹವರಿಗೆ ಕರ್ನಾಟಕ ಪ್ರೇಮ ಎಂಬ ಮಾತು ಅರ್ಥ ಹೀನ. ಕನ್ನಡ ನಾಡು- ನುಡಿಯನ್ನು ಮೆರೆಸುವುದು ಅವರಿಗೆ ರಾಷ್ಟ್ರದ್ರೋಹವಾಗಿ ಕಂಡಿದೆ. ಆದರೆ ವಾಸ್ತವವಾಗಿ ಭಾರತೀಯ ಸಂಸ್ಕೃತಿಯೆಂಬುದು ಪ್ರತ್ಯೇಕವಾಗಿ ಇಲ್ಲ. ಕರ್ನಾಟಕ, ತಮಿಳು, ತೆಲುಗು, ಮಹಾರಾಷ್ಟ್ರ ಇವೇ ಮೊದಲಾದ ಸದೃಶವೂ, ಭಿನ್ನವೂ ಆದ ಸಂಸ್ಕೃತಿಗಳ ಸಮೂಹರೂಪವೇ ಭಾರತೀಯ ಸಂಸ್ಕೃತಿ. ಈ ಬಿಡಿ ಸಂಸ್ಕೃತಿಗಳನ್ನು ಬೇರ್ಪಡಿಸಿ ಭಾರತೀಯ ಸಂಸ್ಕೃತಿ ಇಲ್ಲ.ಭಾರತದ ಒಂದೊಂದು ಪ್ರಾಂತಕ್ಕೂ ಇರುವ ವಿಶಿಷ್ಟ ಜೀವನ ವಿಧಾನವನ್ನು ಗುರುತಿಸುವುದು, ಆ ಸಂಸ್ಕೃತಿಯನ್ನು ಪ್ರೀತಿಸುವುದು, ಭಾರತೀಯ ಸಂಸ್ಕೃತಿಯನ್ನು ಪ್ರೀತಿಸಿದಂತೆ ಮತ್ತು ಕಾಪಾಡಿದಂತೆ. """

    ReplyDelete
  20. ಆರ್.ಎಸ್.ಎಸ್ ಸಕ್ಕತ್ ದೇಶಭಕ್ತರ ಸಮೂಹ ಅಂತ ಒಪ್ಪಬೇಕಾದರೆ, ಈ ನಿಯಮಗಳನ್ನು ಅವರು ಪಾಲಿಸಬೇಕಿದೆ ಅಲ್ವಾ?

    ೧. ಕನ್ನಡ, ತೆಲುಗು, ತಮಿಳು, ಹಿಂದಿ ಎಲ್ಲವೂ ಸಮಾನವಾದ ಭಾಷೆಗಳೇ. ಹಿಂದಿ ಅಥ್ವಾ ಸಂಸ್ಕೃತಕ್ಕೆ ಯಾಕೆ ವಿಶೇಶ ಒತ್ತು?
    ೨. ಆರ್.ಎಸ್.ಎಸ್ ಸ್ವಯಂಸೇವಕರು ನಿಜವಾದ ದೇಶಭಕ್ತರೇ ಆದರೆ ದೇಶದಲ್ಲಿ ನೆಲೆಸಿರುವ ಎಲ್ಲ ಧರ್ಮದ ಜನರನ್ನು ಒಂದಾಗಿಯೇ ನೋಡಬೇಕು ಅಲ್ವಾ?
    ೩. ಆರ್.ಎಸ್.ಎಸ್ ಗೆ ಕನ್ನಡ, ಕನ್ನಡಿಗ, ಕರ್ನಾಟಕದ ಮೇಲೆ ಅಷ್ಟೋಂದು ಪ್ರೀತಿ ಇದ್ದರೆ, ಯಾಕೆ ಕರ್ನಾಟಕದ, ಕನ್ನಡಿಗರ ಸಮಸ್ಯೆಗೆ ಸ್ಪಂದಿಸಬಾರದು? ನಮ್ಮ ನದಿ, ಗಡೀ ವಿಚಾರಗಳ ಬಗ್ಗೆ ಅವರೇಕೆ ಕನ್ನಡಿಗರ ಜೊತೆ ಕೈಜೋಡಿಸಿ ಸಮಸ್ಯೆ ಬಗೆಹರಿಸಬಾರದು?
    ೪. ದೇಶದ ಒಗ್ಗಟ್ಟು, ಏಕತೆಯ ಬಗ್ಗೆ ಸುಮ್ಮನೆ ಬೊಬ್ಬೆ ಹೊಡೆದಂಗಲ್ಲ. ಕಾವೇರಿ ನದಿ ನೀರಿನ ವಿವಾದ, ಕಿಷ್ಣ ನದಿ ನೀರಿನ ವಿವಾದ, ಬೆಳಗಾವಿ, ಕಾಸರಗೋಡು ಗಡಿ ವಿವಾದಗಳ್ನ ಬಗೆಹರಿಸಬಾರದು

    ಕನ್ನಡಿಗರು ಇಲ್ಲಿ ಬೇರೆ ಬೇರೆ ಕಾರಣಗಳಿಗೆ ಕಷ್ಟ ಪಡುತ್ತಿದ್ದಾರೆ. ಇವರು ಸುಮ್ಮನೆ ಪುಕಸಟ್ಟೆ ಬುದ್ದಿವಾದಗಳ್ನ ಹೇಳಿ ಎಲ್ಲರೂ ಅಣ್ಣ ತಮ್ಮಂದಿರು, ಹೊಂದಿಕೊಂಡು ಹೋಗಿ ಅದು ಇದು ಅಂತ ಕಥೆ ಹೊಡೀತಾರೆ. ನಿಜವಾಗಿಯೂ ಅಣ್ಣ ತಮ್ಮಂದಿರ ತರ ಇರಬೇಕಾದರೆ, ಸರಿಯಾಗಿ ಅವರನ್ನು ನೋಡಿಕೊಳ್ಳಬೇಕು, ನಡೆಸಿಕೊಳ್ಳಬೇಕು.

    ಒಟ್ಟಾರೆಯಾಗಿ ಆರ್.ಎಸ್.ಎಸ್ ಇಂದ ಕನ್ನಡಿಗರಿಗೆ ಕಿಂಚಿತ್ತೂ ಪ್ರಯೋಜನವಿಲ್ಲ. ಹಾಗಿದ್ದ ಮೇಲೆ ಸ್ವಾಭಿಮಾನಿ ಕನ್ನಡಿಗರು(ಏನಾದರೂ ಸ್ವಾಭಿಮಾನ ಇದ್ದರೆ) ಇನ್ನೂ ಇದನ್ನ ವಹಿಸಿಕೊಂಡು ಮಾತನಾಡೋದು ತಮಾಷೆಯೇ ಸರಿ

    ReplyDelete
    Replies
    1. ಅಯ್ಯೋ ಪುಣ್ಯಾತ್ಮಾ!! ಆರೆಸ್ಸೆಸ್ ಮ್ಯಾಪ್ ನಲ್ಲಿ ಕಾಸರಗೋಡು ಅದಾಗಲೇ ಕರ್ನಾಟಕಕ್ಕೆ ಸೇರಿ ದಶಕಗಳೇ ಕಳೆದಿವೆ. ಮಾತಾಡೋಕ್ಕಿಂತ ಮುಂಚೆ ಸ್ವಲ್ಪ ವಿಷಯ ತಿಳ್ಕೊಳ್ಳಿ.

      Delete
  21. ನಿಜವಾಗಲೂ ಕನ್ನಡದ ಬಗ್ಗೆ ಕಾಳಜಿ ಇದ್ದರೆ ಆರ್ ಎಸ್ ಎಸ್ ನವರು ಯಾಕೆ ತಮ್ಮ ಮಿಂದಾಣದಲ್ಲಿ ಕನ್ನಡ ಹಾಕಿಲ್ಲ.

    http://rssonnet.org/

    ಇಲ್ಲಿ ನೋಡಿ ಈ ತಾಣ ಬರೀ ಹಿಂದಿ ಮತ್ತು ಇಂಗ್ಲಿಶಿನಲ್ಲಿದೆ. ಮತ್ಯಾವ ಬಾರತೀಯ ಬಾಶೆಯಲ್ಲಿ ಹಾಕಿಲ್ಲ. ಈ ತಾಣದಲ್ಲಿ ಕನ್ನಡದ ಇಲ್ಲವೆ ಕರ್ನಾಟಕದ ಸಮಸ್ಯೆಗಳ ಬಗ್ಗೆ ಯಾವ ಬರಹವಾಗಲಿ ಚರ್ಚೆಯಾಗಲಿ ಇಲ್ಲ.

    ReplyDelete
    Replies
    1. ಭರತ್ ಅವರೇ - ದಯವಿಟ್ಟು ಇಂತಹ ಮುಜುಗರ ಪಡುವ ವಿಷಯಗಳನ್ನ ಕೇಳಬೇಡಿ..ಅದನ್ನ ಉತ್ತರ ಕೊಡುವ ಸಾಮರ್ಥ್ಯ ಯಾರಿಗೂ ಇಲ್ಲ :)
      ನಿಜವಾಗಿಯೂ ದೇಶ ಪ್ರೀತಿಸುವ ಸಂಘಟನೆ ಆದರೆ, ಎಲ್ಲ ಭಾಷೆಗಳಲ್ಲಿಯು ಅವರ ಮಿಂಬೆಲೆ ಇರಬೇಕಿತ್ತಲ್ಲವಾ?

      Delete
    2. @Amarnath Shivashankar ಮತ್ತು @Bharath, ದಯವಿಟ್ಟು ಸರಿಯಾಗಿ ವಿಷಯ ತಿಳಿದುಕೊಳ್ಳಿ.ಏನೇನೋ ಮಾತಾಡಿ Weight Loss ಮಾಡ್ಕೋಬೇಡಿ. ಆರೆಸ್ಸೆಸ್ ಮ್ಯಾಪ್ ನಲ್ಲಿ ಕಾಸರಗೋಡು ಅದಾಗಲೇ ಕರ್ನಾಟಕಕ್ಕೆ ಸೇರಿ ದಶಕಗಳೇ ಕಳೆದಿವೆ. ಆರೆಸ್ಸೆಸ್ ಗೆ ಇಡೀ ದೇಶದ ಎಲ್ಲಾ ಭಾಷೆಗಳಲ್ಲೂ ಮಿಂದಾಣ ಇದೆ.(ಕನ್ನಡದ್ದು http://samvada.org/) ಒಂದು ವಿಚಾರವನ್ನು ರಾಷ್ಟ್ರಮಟ್ಟದಲ್ಲಿ ಯೋಚಿಸಿದಾಗ ಮಾತ್ರ ಅರ್ಥವಾಗುತ್ತವೆ. ಮಗನಂತೆ ಯೋಚಿಸದೇ, ಒಂದೇ ಮನೆಯಲ್ಲಿರುವ ವಿವಿಧ ವ್ಯಕ್ತಿತ್ವಗಳನ್ನುಳ್ಳ ಮಕ್ಕಳನ್ನು ನೋಡಿಕೊಳ್ಳುವ ತಂದೆಯಂತೆ ಯೋಚಿಸಿ, ನಿಮಗೆ ಆರೆಸ್ಸೆಸ್ ಅರ್ಥವಾದರೂ ಆಗಬಹುದು. ಇದನ್ನು Double Standard ಎನ್ನಬಹುದೇ?

      ನಿಮ್ಮನಿಮ್ಮಲ್ಲೇ ಇರುವ ಗೊಂದಲಗಳನ್ನು ಮೊದಲು ಬಗೆಹರಿಸಿಕೊಳ್ಳಿ. ಒಬ್ಬರು ನಮ್ಮ ಮೇಲೆ ಹಿಂದಿ ಹೇರುತ್ತಿದ್ದಾರೆ ಎಂದರೆ, ಇನ್ನೊಬ್ಬರು ಕನ್ನಡಿಗರು ಕೊಡವರ, ಕೊಂಕಣಿಯವರ ಮೇಲೆ ಕನ್ನಡ ಹೇರುತ್ತಿದ್ದಾರೆ ಎನ್ನುತ್ತಾರೆ. ಒಂದು ಕಡೆ ವಿಶ್ವಮಾನವತ್ವದ ಬಗ್ಗೆ ಮಾತನಾಡುವ ನೀವು ಇನ್ನೊಂದು ಕಡೆ ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಬಗ್ಗೆ ಕೊಂಕು ತೆಗೆಯುತ್ತೀರಿ. ಪಕ್ಕದ ರಾಜ್ಯದವರ ಪ್ರತಿಮೆಯ ಬಗ್ಗೆ ಬೇಸರ ಪಟ್ಟುಕೊಳ್ಳುವ ನಿಮಗೆ ಕಿಟ್ಟೆಲ್,ವಿಕ್ಟೋರಿಯಾ ಅವರ ಪ್ರತಿಮೆ ಬಗ್ಗೆ, ಕಬ್ಬನ್, Lady Curzon, ಮಿಂಟೋ ಹೆಸರುಗಳ ಬಗ್ಗೆ ಯಾವುದೇ ಆಕ್ಷೇಪ ಇಲ್ಲ.

      ಕನ್ನಡದ ಬಹುಪಾಲು ಪದಗಳು ಸಂಸ್ಕೃತದಿಂದಲೇ ಬಂದದ್ದು ಎಂದು ಗೊತ್ತಿದ್ದರೂ,ಅದನ್ನೇ ತೆಗಳುವ ನಿಮ್ಮಲ್ಲಿ ಕಿಂಚಿತ್ತಾದರೂ ಅದರ ಬಗ್ಗೆ ಕೃತಗ್ಞತೆ ಭಾವ ಇರಬಾರದೇ?

      Delete
  22. This is what Bunch of Thoughts book says:

    For a Unitary State
    5. We are one country, one society, and one nation, with a community of life-values and secular aspirations and interests; and hence it is natural that the affairs of the nation are governed through a single state of the unitary type. The present federal system generates and feeds separatist feelings. In a way, it negates the truth of a single nationhood and is, therefore, divisive in nature. It must be remedied and the Constitution amended and cleaned so as to establish Unitary Form of Government.

    This message is so clear and evident that the RSS top brass was extremely unhappy about the federal structure.So, they were against Kannadigas ruling Kannadigas with Kannada as the administrative language?

    I do not understand as what separatist feelings is being spoken about in the article. Of course, every linguistic community is different in their identity and the way of life..Practically, we are all distinct.
    This ideology somehow looks like clustering linguistically different communities under one umbrella which is a major threat to the federal structure.

    Why would a kannadiga with self respect be like a slave to someone who would order sitting thousands of miles away?

    If some RSS swayamsevaks can answer my question with a bit of logical and rational thinking, I would appreciate it:

    --How is a Kannadiga and a Punjabi related to each other. what commonalities do they have between them?
    --How would a Tamilian and an Gujarati related to each other? what commonalities do they have between them?
    This list goes on and on:
    They wear different kind of costumes, they celebrate different festivals in different styles, they speak different languages..

    Bottomline is, there is so much of diversity amongst each and every state and for the sake of political management, all these states are clubbed as a single large country.That is the reason India is called an Union of states..

    The very structure of India is similar to the Europian Union..

    More the diversity is respected and acknowledged, better the relationships between each other..

    ReplyDelete
  23. The writer of this article is either confused or trying to confuse people. When you are writing about the language why are you bringing the religious points.
    -A

    ReplyDelete
  24. The objective of RSS is the Nation, Nationality, Hinduism and Hindutva. It is not a Linguistic organization like KaRaVe. Donot blame RSS for this. RSS is not cultivating any hatredness towards any Indian language, per se.

    The truth is that the Kannadigas have slave mentality and the sad things is that they feel proud of it. Kannadigas in Bangalore and this part feel proud in understanding and talking in Tamil; Kannadigas in Bellary and Raichur feel proud in understanding & talking in Telugu; Kannadigas in Gulbarga, Bidar feel proud in talking in Hindi. Coastal Kannadigas want to talk in Konkani, Tulu etc languages;and in Dharwar and nearby areas they prefer Marathi. Alas, what a sad state it is for Kannada. Look at these Tamilians, or Teluguites or Marathi people they need not be taught about the respect for their language, it comes to them automatically.

    It is the duty of the Kannadigas to inculcate the "true Kannadiganess" and try to force RSS to implement Kannada whereever it is due. Remember one thing that Nation, Language and Religion are three different things.

    The writer of this article is trying to combine religion and the language issues here and try to corrupt peoples mind towards RSS. He seems to have imbibed the Congress culture to slowly divide the (Hindu) people, now in terms of language.

    -A
    (Open for Debate)

    ReplyDelete
    Replies
    1. Dear Anonymous,
      Are you a Kannadiga? from which region? I am asking this personal questions because your research on Kannadigas read thus-
      "The truth is that the Kannadigas have slave mentality and the sad things is that they feel proud of it."
      Now may I know about your own Slave mentality?

      Delete
  25. sariyaagi heliddeeri ramesh doddapura avare. thanks.

    ReplyDelete
  26. @Amarnath Shivashankar, @pakkada mane huduga, @arun javagal, @mahesh.m.r....
    R.S.S navara mindaana karnaatakada bagge ide, kannadadalloo ide. http://samvada.org/ neevu mujugara paduva ondu prashne keluttiddene. karnaataka raajyada, illa karnaatakada bagge iruva yaava website tulu, konkani, kodava, byaari bhaasheyalli ide ? tulu konkani bhaashigaru karnaatakadavaralwa ? mindaanagalu avara bhaasheyalloo irabeku taaane ? nijavaagiyoo avarige karnaatakada ella bhaashikara meloo abhimaana idre ella bhaasheyalloo mindaana irabeku taane ? raashtramattadalli yochisuvudu bittu kevala raajya mattadalli yochisuvavaru maatra nimmantaha uttara kodabahudu.

    ReplyDelete
  27. ಮಾನ್ಯ RSS ಗೆಳೆಯರೆ, ನೇರವಾಗಿ ವಿಷಯಕ್ಕೆ ಬರೋಣ. ನಿಮ್ಮ RSS ಸ್ಥಾಪಿಸಲು ಹೊರಟಿರುವ "ಹಿಂದೂ ರಾಷ್ಟ್ರ"ದ ನಿಜವಾದ ರೂಪರೇಷೆಗಳ ಬಗ್ಗೆ ವಿವರಿಸಿದರೆ ಚರ್ಚೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಅನುಕೂಲವಾಗುತ್ತದೆ. ದಯವಿಟ್ಟು ಯಾರಾದರೂ ಅಂಥಾ ವಿವರಣೆ ಒದಗಿಸಿದರೆ ಒಳ್ಳೆಯದು.
    ಮತ್ತೊಂದು ಬಹಳ ಮುಖ್ಯವಾದ ಪ್ರಶ್ನೆಯೊಂದಿದೆ. RSS ನ ಧ್ಯೇಯ ಗುರಿಗಳನ್ನು ವಿವರಿಸುವ ಮತ್ತು ಆ ಗುರಿಯನ್ನು ಸಾಧಿಸಲು ಅವರು ಹಿಡಿದಿರುವ ಹಾದಿಯನ್ನು ವಿವರಿಸುವಂಥಾ 'ಪ್ರಣಾಳಿಕೆ ಮತ್ತು ಸಂವಿಧಾನ' ಮುಂತಾದ ಅಧಿಕೃತ ದಸ್ತಾವೇಜುಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಿ ನಾನು ವಿಫಲನಾಗಿದ್ದೇನೆ. ಕೆಲವು RSS ಮಿತ್ರರು ನನಗೆ ಅಂಥಾ ಅಧಿಕೃತ ದಸ್ನತಾವೇಜುಗಳನ್ನು ತಲುಪಿಸುವುದಾಗಿ ಹೇಳಿ ನನ್ನ ಮೊಬೈಲ್ ನಂಬರ್ ಪಡೆದುಕೊಂಡವರು ವರ್ಷವಾದರೂ ಪತ್ತೆಯಿಲ್ಲ. ನಿಜಕ್ಕೂ RSS ಸಂಘಟನೆಗೆ ಅಂಥಾ ಅಧಿಕೃತ ದಸ್ತಾವೇಜು ಅಂತಾ ಇದೆಯೆ? ಹಾಗಿಲ್ಲವಾದರೆ ಘೋಷಿತ ಉದ್ದೇಶಗಳಿಗಿಂತ ಭಿನ್ನವಾದ ಅಘೋಷಿತ ಅಜೆಂಡಾ ಇದೆಯೆಂಬ ತೀರ್ಮಾನಕ್ಕೆ ನಾವು ಬರಬಹುದೆ?

    ReplyDelete
  28. This article is purely based on opinion.
    People here who are talking about kannada langauge must think of a nation as karnataka where all the people speak, eat, drink, sleep kannada.
    They should not impose kannada on people who are speaking other langauges like tuLu, konkani, marathi, telgu, tamil and malayalam.
    They should make war against tamilnadu for Kaveri water and war aginst AndraPradesh and Maharashtra for Krishna water.
    They can impose English on all kannada people because it is required for survival. Since it is required for survival it is not called as imposing.
    Then only kannada is the caste and kannada is the religion - all the peopl in this forum will be happy and they can write more more blogs.

    ReplyDelete