Monday, March 7, 2011

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಗಳ ಹೆಸರು ಬರೆಯುವುದು ನೈತಿಕವೇ?


ನಾಳೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಮುನ್ನಾದಿನವಾದ ಇಂದು ಪ್ರಜಾವಾಣಿ ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗಿರುವ ವರದಿಯೊಂದನ್ನು ಗಮನಿಸಿ.

ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕನೋರ್ವ ಸಂಶೋಧನಾ ವಿದ್ಯಾರ್ಥಿನಿಯೊಬ್ಬಳಿಗೆ ನೀಡಿದ ಲೈಂಗಿಕ ಕಿರುಕುಳ ನೀಡಿದ ಪರಿಣಾಮ ಆಕೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕುರಿತು ವರದಿಯೊಂದು ಪ್ರಕಟವಾಗಿದೆ.

ಇದೇ ಪ್ರಕರಣ ಸಂಬಂಧಿಸಿದಂತೆ ನಿನ್ನೆಯ ದಿ ಹಿಂದೂ ಹಾಗು ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಲ್ಲೂ ಪ್ರತ್ಯೇಕ ವರದಿಗಳು ಪ್ರಕಟಗೊಂಡಿದ್ದವು. ಆ ವರದಿಗಳನ್ನೂ ಒಮ್ಮೆ ಗಮನಿಸಿ.

ಒಂದು ವ್ಯತ್ಯಾಸ ಸ್ಪಷ್ಟವಾಗಿ ಕಾಣಿಸುತ್ತದೆ. ಲೈಂಗಿಕ ಕಿರುಕುಳ ಅನುಭವಿಸಿ, ಆತ್ಮಹತ್ಯೆಗೆ ಯತ್ನಿಸಿರುವ ಮಹಿಳೆಯ ಹೆಸರನ್ನು ಪ್ರಜಾವಾಣಿ ಸ್ಪಷ್ಟವಾಗಿ ಬರೆದಿದೆ. ಇದು ಅನೈತಿಕ ಹಾಗು ಬೇಜವಾಬ್ದಾರಿಯ ಪತ್ರಿಕಾ ನೀತಿ.

ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯ ಹೆಸರನ್ನು ಬರೆಯಬಾರದು ಎಂಬ ಕಾನೂನು ಎಲ್ಲೂ ಇಲ್ಲ ಎಂಬುದೇನೋ ನಿಜ. ಆದರೆ ಪತ್ರಕರ್ತರು ಮೊದಲಿನಿಂದಲೂ ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಕ್ಕಳ ಹೆಸರನ್ನು ಬರೆಯುವ ಪರಿಪಾಠ ಇಟ್ಟುಕೊಂಡಿಲ್ಲ. ಅದಕ್ಕೆ ಕಾರಣಗಳನ್ನು ಹೊಸದಾಗಿ ಹೇಳಬೇಕಾಗೂ ಇಲ್ಲ. ಹೀಗೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಕ್ಕಳು ನಂತರವೂ ಇದೇ ಸಮಾಜದ ನಡುವೆ ಬದುಕಬೇಕು. ಎಲ್ಲರ ಇರಿಯುವ ಕಣ್ಣುಗಳನ್ನು ಎದುರಿಸಬೇಕು. ಮಡಿವಂತ ಸಮಾಜದ ಕುಹಕ, ನಿಂದನೆಗಳನ್ನು ಎದುರಿಸಬೇಕು. ಅವರು ಬದುಕಬೇಕೆಂದರೆ, ಇಂಥ ಎಲ್ಲ ವ್ಯವಸ್ಥೆಯ ನಡುವೆಯೇ ಬದುಕಬೇಕು, ಅದು ಸಾಧ್ಯವಾಗದಿದ್ದರೆ ಅವರು ಆತ್ಮಹತ್ಯೆಯ ಹಾದಿ ಹಿಡಿಯುತ್ತಾರೆ.

ಈ ಮಹಿಳೆಯರ ಪ್ರಾಣ ಮತ್ತು ಮಾನ ಎರಡೂ ಮುಖ್ಯವಾದ್ದರಿಂದ ಪತ್ರಿಕೆಗಳು ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಕ್ಕಳ ಹೆಸರನ್ನು ಬರೆಯುವುದಿಲ್ಲ. ಬರೆದರೂ ಬೇರೆ ಹೆಸರನ್ನು ಬರೆದು ಹೆಸರು ಬದಲಾಯಿಸಲಾಗಿದೆ ಎಂದು ಬ್ರಾಕೆಟ್‌ನಲ್ಲಿ ಬರೆಯುವ ಪರಿಪಾಠವನ್ನು ಪಾಲಿಸಿಕೊಂಡುಬರಲಾಗುತ್ತಿದೆ. ಇದಕ್ಕೆ ಪ್ರಜಾವಾಣಿಯೂ ಹೊರತೇನಲ್ಲ. ಇಂಥ ಪ್ರಕರಣಗಳ ಕುರಿತು ವರದಿ ಮಾಡುವಾಗ ಪ್ರಜಾವಾಣಿ ಕೂಡ  ಇಂಥ ನೈತಿಕ ಸಂಹಿತೆಯನ್ನು ಇಟ್ಟುಕೊಂಡೇ ವರದಿ ಮಾಡುತ್ತಿತ್ತು.

ಆದರೆ ಮೈಸೂರು ವಿವಿ ಸಂಶೋಧನಾ ವಿದ್ಯಾರ್ಥಿನಿಯ ವಿಷಯದಲ್ಲಿ ಹಾಗೆ ಆಗಿಲ್ಲ. ಆಕೆಯ ಹೆಸರನ್ನು ನಿಚ್ಚಳವಾಗಿ ಬರೆಯಲಾಗಿದೆ. ಮಾತ್ರವಲ್ಲ, ಆಕೆಯ ಪೂರ್ಣ ವಿಳಾಸವನ್ನೂ, ಆಕೆಯ ಪತಿಯ ಹೆಸರು ಮತ್ತು ಆತ ಎಲ್ಲಿ ಕೆಲಸ ಮಾಡುತ್ತಾರೆ ಎಂಬುದನ್ನೂ ಬರೆಯಲಾಗಿದೆ.

ನಿನ್ನೆ ದಿ ಹಿಂದೂ ಪತ್ರಿಕೆ ಹಾಗು ಪ್ರಜಾವಾಣಿಯ ಸೋದರ ಪತ್ರಿಕೆ ಡೆಕ್ಕನ್ ಹೆರಾಲ್ಡ್‌ನಲ್ಲಿ ಪ್ರಕಟಗೊಂಡಿರುವ ವರದಿಗಳಲ್ಲಿ ಎಲ್ಲೂ ಸಹ ನೊಂದ ಮಹಿಳೆಯ ಹೆಸರನ್ನಾಗಲಿ, ವಿಳಾಸವನ್ನಾಗಿ ದಾಖಲಿಸಿಲ್ಲ. ಹಾಗಿರುವಾಗ ಪ್ರಜಾವಾಣಿ ಯಾಕೆ ದಿಕ್ಕು ತಪ್ಪಿದೆ?

ಪ್ರಜಾವಾಣಿಯಂಥ ಸೆನ್ಸಿಬಲ್ ಪತ್ರಿಕೆ ಹೀಗೆ ಮಾಡೋದು ಎಷ್ಟು ಸರಿ? ಇದು ನಮ್ಮ ಪ್ರಶ್ನೆ.


ನಂತರ ಸೇರಿಸಿದ್ದು:
ಈ ಪೋಸ್ಟ್ ಪ್ರಕಟಗೊಂಡ ಕೆಲಕ್ಷಣಗಳಲ್ಲೇ ಫೇಸ್‌ಬುಕ್‌ನಲ್ಲಿ ಹರ್ಷವರ್ಧನ ಶೀಲವಂತ್,  ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲೂ ಇದೇ ರೀತಿ ಲೈಂಗಿಕ ಕಿರುಕುಳಕ್ಕೆ ಒಳಗಾದ ಹೆಣ್ಣುಮಗಳ ಹೆಸರು ಬರೆದಿರುವುದನ್ನು ಗಮನಕ್ಕೆ ತಂದಿದ್ದಾರೆ. ಕೆಲವು ಆವೃತ್ತಿಗಳಲ್ಲಿ ಆಕೆಯ ಭಾವಚಿತ್ರ ಕೂಡ ಪ್ರಕಟವಾಗಿದೆ. ಬೆಂಗಳೂರು ಆವೃತ್ತಿಯಲ್ಲಿ ಫೋಟೋ ಪ್ರಕಟವಾಗಿಲ್ಲ, ಆದರೆ ಮಹಿಳೆಯ ಹೆಸರು ಸಮೇತ ಬರೆಯಲಾಗಿದೆ. ಇದೇ ಟಿಓಐ ತನ್ನ ಒಳಪುಟಗಳಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ನಾನಾ ಲೇಖನಗಳನ್ನು ಪ್ರಕಟಿಸಿದೆ. ಕನ್ನಡಪ್ರಭದಲ್ಲೂ ಈ ಕುರಿತು ಪ್ರಕಟವಾಗಿರುವ ಸುದ್ದಿಯಲ್ಲೂ ಮಹಿಳೆಯ ಹೆಸರನ್ನು ಪ್ರಕಟಿಸಲಾಗಿದೆ. ಇನ್ನೂ ಹಲವು ಪತ್ರಿಕೆಗಳಲ್ಲಿ ಇದೇ ರೀತಿ ಪ್ರಕಟವಾಗಿರಬಹುದು. ಆದರೆ ಪತ್ರಿಕೆಗಳಿಗೆ ಮಹಿಳೆ ಕೂಡ ಮಾರಾಟದ ಸರಕಾಗಿ ಹೋದರೆ ಹೇಗೆ ಎಂಬ ಪ್ರಶ್ನೆಗೆ ಮೀಡಿಯಾ ಮಂದಿ ತುರ್ತಾಗಿ ಗಮನಹರಿಸಬೇಕಾಗಿದೆ.

16 comments:

 1. ಬಹುಶಃ ಇಂದಿನ ಟೈಮ್ಸ್ ಆಫ್ ಇಂಡಿಯಾ ದಿನಪತ್ರಿಕೆಯನ್ನು ಗಮನಿಸಿದ್ದರೆ ಅದರಲ್ಲಿ ಆ ನೊಂದ ಹೆಣ್ಣಿನ ಫೋಟೋವನ್ನು ಕೂಡ ಹಾಕಿದ್ದಾರೆ. ಇದಕ್ಕೆ ಏನನ್ನುವಿರಿ?

  ReplyDelete
 2. I totally agree with you. This is sheer irresponsible and insensitive act on the part of PV. They should be held responsible for the consequences.

  ReplyDelete
 3. Its 2 much by Prajavani & 3 much. This again is a sort of sexploitation!

  ReplyDelete
 4. kannadaprabha kooda hesaru baredideyalla Swamy. Prajaavaani mele yake kopa.

  ReplyDelete
 5. ಸ್ವಾಮ್ ಗಳೇ , ಟಿವಿ ನಲ್ಲಿ ಆ ಹೆಣ್ಣು ಮಗಳ ಇಂಟರ್ವ್ಯೂ ನೆ ಬಂದಿರ ಬೇಕಾದ್ರೆ ನೀವು ಹೇಳೋ ತರ್ಕ ಎಲ್ಲಿಗೂ ನಿಳುಕ್ಕದ್ದು .

  ReplyDelete
 6. Prajavani is the leader and torch bearer.That's why PV. KP & others do it routinely.
  Also read Prajavani story on Anganwadi workers :
  chuNAVANEGE SPARDISUVA ADHIKAARA MOTAKU.
  SEE THE WRONG ANALYSIS LIKE ABOUT WHO ALREADY WON THE ELECTION...How can they loose job or post as the circular is new one and applies to future elections..
  highly immature Kannada journalism !

  ReplyDelete
 7. ಆದ್ರೆ ನಿನ್ನೆ ರಾತ್ರಿಯೇ ಜನಶ್ರೀ ಸೇರಿದಂತೆ ಕೆಲವು ವಾರ್ತಾ ವಾಹಿನಿಗಳಲ್ಲಿ ಮಹಿಳೆಯ ಸಂಪೂರ್ಣ ಸಂದರ್ಶನ(!) ಬಿತ್ತರವಾಗಿರುವ ಹಿನ್ನೆಲೆಯಲ್ಲಿ ಪ್ರಜಾವಾಣಿಯ ಈ ನಡೆ ಆಕ್ಷೇಪಾರ್ಹವೇನೂ ಅಲ್ಲ. ಮುಖ್ಯವಾಗಿ ಮಹಿಳೆಯೇ ಗೋಪ್ಯತೆಯನ್ನು ಬಯಸದೆ ಟಿವಿ ಕ್ಯಾಮೆರಾಗಳ ಮುಂದೆ ಬಂದಾಗ ಪತ್ರಿಕೆಗಳು ಶಿಷ್ಟಾಚಾರದ ಬೆನ್ನು ಬೀಳಬೇಕಿಲ್ಲ. ನಿನ್ನೆಯ ದಿ ಹಿಂದೂ ಹಾಗು ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಲ್ಲಿ ಆಕೆಯ ಗೋಪ್ಯತೆ ಕಾಪಾಡಿರುವುದು ಸಹಜ ನಡಾವಳಿ. ಅಂದರೆ ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಹೆಸರು ಇತ್ಯಾದಿ ಹಾಕಿರುವುದು ಆಕೆ ಬಯಸುವ ಉದ್ದೇಶಕ್ಕೆ ಪೂರಕವಾಗಿಯೇ ಇರುವಾಗ ಪ್ರಜಾವಾಣಿ ಮಾತ್ರ ಗೋಪ್ಯತೆ ಪಾಲಿಸಬೇಕೆಂದರೆ ಹೇಗೆ? ಆಕಸ್ಮಾತ್ ಆ ಮಹಿಳೆ ಗೋಪ್ಯತೆ ಬಯಸಿದ್ದರೆ ಟಿವಿಗಳು ಆಕೆಯ ಮುಖವನ್ನು ಬ್ಲರ್ ಮಾಡಿ ತೋರಿಸಬಹುದಾದ ಸಾಧ್ಯತೆಗಳಿದ್ದವು. ಇಲ್ಲಿ ಹಾಗೇನೂ ಆಗದೆ ಆಕೆ ಪೂರ್ವ ಸಿದ್ಧತೆಯೊಂದಿಗೆ ಕ್ಯಾಮೆರಾ ಮುಂದೆ ನಿಂತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಗೋಪ್ಯತೆಯ ಅವಕಾಶದ ಅರಿವು ಆಕೆಗಿರಲಿಲ್ಲವೆ ಎಂದು ಸಂಶಯವಾಗುತ್ತದೆ. ಕೊನೇ ಪಕ್ಷ ಟಿವಿಗಳಾದರೂ ಸ್ವಯಂ ಶಿಷ್ಟಾಚಾರ ಪಾಲಿಸಿ ಆಕೆಯ ಮುಖವನ್ನು ಬ್ಲರ್ ಮಾಡಿದ್ದರೆ ಪ್ರಜಾವಾಣಿ ಸೇರಿದಂತೆ ಕನ್ನಡ ಪ್ರಭ, ಟೈಮ್ಸ್ ಆಕೆಯ ಹೆಸರು ಬದಲಾಯಿಸುವ ವಿವೇಚನೆ ತೋರುತ್ತಿದ್ದವೇನೋ. ಬಹುಷಃ ಮುಂದಿನ ದಿನಗಳಲ್ಲಿ ಅತ್ಯಾಚಾರಕ್ಕೊಳಗಾದವರ ಸಂದರ್ಶನಗಳೂ ಟಿವಿಗಳಲ್ಲಿ ಅವರ ಮುಖಗಳನ್ನು ಬ್ಲರ್ ಮಾಡದೆ ಪ್ರಸಾರಗೊಂಡರೆ ಅಚ್ಚರಿಯೇನಿಲ್ಲ.

  ReplyDelete
 8. Dear Sir, Times of India is almost two steps ahead! It has published even her photograph as well..professional standards have gone terribly down and on the top of which the civilised society keeps mum! and I am showing my ire in social networking site like this..
  -Harshavardhan Sheelavant

  ReplyDelete
 9. i totally agree with u..
  -Mandya Gowda

  ReplyDelete
 10. according to me ಕೇವಲ ಹೆಸರು ಬರೆಯುವುದು ತಪ್ಪಲ್ಲ,ಆದರೆ ಹೆಸರಿನ ಜೊತೆ ಅವರ ಭಾವ ಚಿತ್ರ ಹಾಕಿದರೆ ತಪ್ಪು
  -Raghu Hhp

  ReplyDelete
 11. media people want oly name n money. they dont bother abt a girl's life
  -Chandu Ram

  ReplyDelete
 12. News paper is mirror of society. Hence I am not fully agree with your argument. If such incidents are happening in regular basis, we should know who is Victim of such brutal act. Fault is with society and not with media, at least on this issue. Why afraid when one is Victim to be called a victim. Problem is with society/people, who should change the way they look victims. Victims need justice not mercy. Don't you think so?
  -Panduranga Acharya

  ReplyDelete
 13. anyone cant change the society at once, it needs two more generation to change....... till then the so called responsible people (media) should be in a limit...... all the people ll nt think as u dude.....
  -Chandu Ram

  ReplyDelete
 14. @ A. Ravi, it is not question of "HER" but media !

  ReplyDelete
 15. ಸರ್ ನಿನ್ನೆ ರಾತ್ರಿ ಸುವರ್ಣ ಚಾನೆಲ್ ನಲ್ಲಿ ಆಕೆಯ ಗ೦ಡನ ಮತ್ತು ಕುಲಪತಿಗಳ ಸ೦ದರ್ಶನ ಇತ್ತು. ೯ ಗ೦ಟೆಯ ಸುದ್ಧಿ ಪ್ರಸಾರದಲ್ಲಿ. ಗೌರೀಶ್ ಮತ್ತು ಒಬ್ಬಾಕೆ ಹೆಣ್ಣುಮಗಳು (ಆಕೆಗೆ ಅನುಭವ ತು೦ಬಾ ಕಡಿಮೆ ಇತ್ತು. ಆದರೆ ಆಕೆ ತಲೆ ಹರಟೆ ಅನ್ನಿಸಲಿಲ್ಲ) ಗೌರವಯುತವಾಗಿಯೇ ಸ೦ದರ್ಶನ ನಡೆಇಸಿದರು. ಮಹಿಳೆ ಮತ್ತು ಆಕೆಯ ಗ೦ಡ ಇಬ್ಬರಿಗೂ ಗೌಪ್ಯತೆ ಕಾಪಾಡಿಕೊಳ್ಳುವ ಇರಾದೆ ಇದ್ದ೦ತೆ ಕಾಣಲಿಲ್ಲ. ಆದರೊ ಮತ್ತೆ ಮತ್ತೆ ಆಕೆ ಅಳುತ್ತಾ ಆಸ್ಪತ್ರೆ ಪ್ರವೇಶಿಸುವ ದೃಶ್ಯ ಟಿ.ವಿ ಯಲ್ಲಿ ತೋರಿಸಬಾರದು ಅನ್ನಿಸಿತು. ಮಾದ್ಯಮದವರ ಬೆಕ್ಕಿನ ಕೊರಳಿಗೆ ಗ೦ಟೆ ಕಟ್ಟುವವರು ಯಾರು?

  ReplyDelete
 16. am really happy....., Day by day YOUR WRITING skill and also sampadakeeya Blog improving, but all your writeing centralising only KP, VK and Prajavani, this is not correct, you critisised TV Channels also

  ReplyDelete