Saturday, April 30, 2011

ಪ್ಯಾಟೆ ಹುಡ್ಗೀರ್-೨: ವಿಕೃತ ಮನಸ್ಸುಗಳ ಲೈಂಗಿಕ ಚೇಷ್ಟೆಗಳು...

ಸುವರ್ಣ ಚಾನಲ್‌ನ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು-೨ ಮತ್ತೆ ಮತ್ತೆ ಸುದ್ದಿಯಾಗುತ್ತಲೇ ಇದೆ. ಹಿಂದೆ ನಾವೆಲ್ಲರೂ ಇದೇ ರಿಯಾಲಿಟಿ ಶೋನಲ್ಲಿ ಮುಗ್ಧ ಬಾಲಕನನ್ನು ಬೆತ್ತಲೆ ಮಾಡಿ ಹಿಂಸಿಸಿದ ಪ್ರಕರಣದ ಕುರಿತು ಪ್ರತಿಭಟನೆಯ ಧ್ವನಿ ಎತ್ತಿದ್ದೆವು. ಈಗ ಶೋನಲ್ಲಿ ಭಾಗವಹಿಸಿದ್ದ ಯುವತಿಯೊಬ್ಬಳು ಮೀಡಿಯಾಗಳ ಮುಂದೆ ನಿಂತು ತನಗೆ ಅನ್ಯಾಯವಾಗಿದೆ ಎಂದು ಹೇಳುತ್ತಿದ್ದಾಳೆ.

ಅಕ್ಷತಾ
ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಆಸೆಯಿಂದ ಬಂದೆ. ನಿರ್ದೇಶಕ ರಾಘವೇಂದ್ರ, ನಿರೂಪಕ ಅಕುಲ್ ಹಾಗು ತಂಡ ನನಗೆ ಮಾನಸಿಕ, ದೈಹಿಕ ಹಿಂಸೆ ನೀಡಿದ್ದಾರೆ. ಮರ್ಯಾದಸ್ಥ ಮನೆತನದ ಹೆಣ್ಣುಮಕ್ಕಳು ಯಾರೂ ಈ ರಿಯಾಲಿಟಿ ಶೋನಲ್ಲಿ ಭಾಗವಹಿಸಬಾರದು. ಎಲ್ಲ ಟಾಸ್ಕ್‌ಗಳಲ್ಲೂ ಗೆದ್ದಿದ್ದ ನನ್ನನ್ನು ಅನ್ಯಾಯದಿಂದ ಎಲಿಮಿನೇಟ್ ಮಾಡಲಾಯಿತು. ತಂಡದೊಂದಿಗೆ ಸಹಕರಿಸದೇ ಹೋಗಿದ್ದಕ್ಕೆ ಇದು ಶಿಕ್ಷೆ....

ಇತ್ಯಾದಿಯಾಗಿ ಮಾತನಾಡುತ್ತಿರುವಾಕೆ ಕಾರ್ಯಕ್ರಮದಿಂದ ಎಲಿಮಿನೇಟ್ ಆಗಿರುವ ಅಕ್ಷತಾ. ಈಗಾಗಲೇ ಈಕೆ ಪತ್ರಿಕಾಗೋಷ್ಠಿ ನಡೆಸಿ ಆರೋಪಗಳ ಮೇಲೇ ಆರೋಪ ಮಾಡಿದ್ದಾಳೆ. ಈಕೆಯ ಹಾಗೆಯೇ ಎಲಿಮಿನೇಟ್ ಆದ ಪೂರ್ಣಿಮ ಎಂಬ ಯುವತಿಗೂ ಸಹ ಇದೇ ರೀತಿ ಅನ್ಯಾಯ  ಮಾಡಲಾಗಿದೆಯಂತೆ.

ಕನ್ನಡ ಚಾನಲ್‌ಗಳಲ್ಲಿ ಪ್ರಸಾರವಾದ, ಪ್ರಸಾರವಾಗುತ್ತಿರುವ ಅತ್ಯಂತ ದರಿದ್ರ ರಿಯಾಲಿಟಿ ಶೋ ಇದು. ಟಾಸ್ಕ್ ನಲ್ಲಿ ಸೋತವರಿಗೆ ಮೆಣಸಿನಕಾಯಿ ತಿನ್ನಿಸುವ, ಹಸುವಿನ ಗುದದ್ವಾರಕ್ಕೆ ಕಿಸ್ ಮಾಡಿಸುವ, ಇಡೀ ದಿನ ಹಸು ಸೆಗಣಿ ಹಾಕುವುದನ್ನೇ ಕಾದು ಅದನ್ನು ನೆಲಕ್ಕೆ ಬೀಳದಂತೆ ಬೊಗಸೆಯಲ್ಲಿ ಹಿಡಿಸುವ, ಗಂಜಲ ಕುಡಿಸುವ, ಹಸಿ ಮೀನು ತಿನ್ನಿಸುವ ವಿಕೃತ ಮನಸ್ಸಿನ ಶಿಕ್ಷೆಗಳನ್ನು ನೀಡುವ ಈ ರಿಯಾಲಿಟಿ ಶೋಗಳನ್ನು ವಿಕೃತ ಮನಸ್ಸಿನವರಷ್ಟೆ ರೂಪಿಸಲು ಸಾಧ್ಯ.

ಇಂಥ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ ಯುವತಿಯರೂ ಸಹ ಹಣಕ್ಕಾಗಿ ಸ್ವಾಭಿಮಾನವನ್ನೇ ಬಿಟ್ಟು ನಿಂತ ಮುಖೇಡಿಗಳು. ಯಾರದೋ ಇಶಾರೆಯ ಮೇಲೆ ತಮ್ಮ ವ್ಯಕ್ತಿತ್ವವನ್ನೇ ಮರೆತು ಇಂಥ ಅಸಹ್ಯಗಳನ್ನೆಲ್ಲ ಮಾಡುವ ಈ ಯುವತಿಯರು ಸಾರ್ವಜನಿಕ ಅನುಕಂಪಕ್ಕೂ ಲಾಯಕ್ಕಾದವರಲ್ಲ.

ಅಕುಲ್ ಬಾಲಾಜಿ
ಅಕ್ಷತಾ ಹೇಳುತ್ತಿರುವುದೆಲ್ಲಾ ನಿಜವಾದರೆ, ಆಕೆ ಮಹಿಳಾ ಆಯೋಗಕ್ಕೆ ದೂರು ನೀಡುವುದಕ್ಕೂ ಮುನ್ನ ಪೊಲೀಸ್ ಠಾಣೆಯಲ್ಲಿ ತನ್ನ ದೂರು ಕೊಡುವುದು ಒಳ್ಳೆಯದು. ಒಂದು ವೇಳೆ ಆಕೆಯ ಮೇಲೆ ದೈಹಿಕ, ಮಾನಸಿಕ ಹಲ್ಲೆ ನಡೆದಿರುವುದು ಖಾತ್ರಿಯಾದರೆ ಶೋನ ನಿರ್ಮಾಪಕ, ನಿರ್ದೇಶಕ, ನಿರೂಪಕರೆಲ್ಲರೂ ಜೈಲು ಸೇರುತ್ತಾರೆ. ಅದೊಂದನ್ನು ಮಾಡಿದರೆ ಈ ರಿಯಾಲಿಟಿ ಶೋನ ಚಿತ್ರಹಿಂಸೆ ಕನ್ನಡಪ್ರೇಕ್ಷಕರಿಗೆ ತಪ್ಪಿದಂತಾಗುತ್ತದೆ. ಈ ಶೋನಲ್ಲಿ ಭಾಗವಹಿಸಿದ್ದಕ್ಕೆ ಆಕೆ ತಕ್ಕ ಪ್ರಾಯಶ್ವಿತ್ತವನ್ನೂ ಮಾಡಿಕೊಂಡಂತಾಗುತ್ತದೆ.

ಪ್ಯಾಟಿ ಹುಡ್ಗೀರ್ ಸೇರಿದಂತೆ ಸುವರ್ಣದಲ್ಲಿ ಪ್ರಸಾರವಾಗುವ ಇದೇ ಬಗೆಯ ರಿಯಾಲಿಟಿ ಶೋಗಳಿಗೆ ಯುವತಿಯರೇ ಆಸ್ತಿ, ಬಂಡವಾಳ. ಈ ಯುವತಿಯರನ್ನು ನಡೆಸಿಕೊಳ್ಳುವ ರೀತಿಯಲ್ಲೇ ತಮ್ಮ ವಿಕೃತ ಲೈಂಗಿಕ ಚೇಷ್ಟೆಗಳನ್ನು ಈಡೇರಿಸಿಕೊಳ್ಳುವ ಕಾರ್ಯಕ್ರಮದ ತಂಡ, ಅದನ್ನೇ ಕನ್ನಡ ಪ್ರೇಕ್ಷಕರಿಗೆ ಉಣಬಡಿಸುತ್ತಿರುವುದು ಹೇಸಿಗೆ ಹುಟ್ಟಿಸುವ ವಿಷಯ. ಯುವತಿಯರನ್ನು ನೀರಲ್ಲಿ, ಕೊಚ್ಚೆಯಲ್ಲಿ ಹೊರಳಾಡಿಸುವುದರ ಉದ್ದೇಶ ಏನೆಂಬುದನ್ನು ಯಾರು ಬೇಕಾದರೂ ಸುಲಭವಾಗಿ ಊಹಿಸಿಕೊಳ್ಳಬಹುದು. ಪ್ರಸಾರವಾಗುವ ಕಾರ್ಯಕ್ರಮದಲ್ಲೇ ಇಂಥ ಹಿಂಸೆ ಇರುವಾಗ ತೆರೆಮರೆಯಲ್ಲಿ ಏನೇನು ನಡೆಯುತ್ತದೆ ಎಂಬುದನ್ನು ಊಹಿಸಿಕೊಳ್ಳುವುದು ಸುಲಭ. ಅಕ್ಷತಾ ಇದೇ ವಿಷಯಗಳನ್ನು ಈಗ ಪ್ರಸ್ತಾಪಿಸುತ್ತಿದ್ದಾಳೆ.

ಕನ್ನಡ ಚಾನಲ್‌ಗಳು ಟಿಆರ್‌ಪಿಗಾಗಿ, ಅಗ್ಗದ ಜನಪ್ರಿಯತೆಗಾಗಿ ಇಂಥ ವ್ಯಭಿಚಾರಗಳನ್ನು ನಡೆಸುತ್ತಲೇ ಇದ್ದರೆ, ಅವುಗಳನ್ನು ನಮ್ಮ ಪ್ರೇಕ್ಷಕರು ಕಣ್ಣುಬಾಯಿ ಬಿಟ್ಟುಕೊಂಡು ನೋಡುತ್ತಲೇ ಹೋದರೆ, ಯಾರೂ ಏನನ್ನೂ ಮಾಡಲಾಗದು. ಜನರು ಇಂಥ ಕಾರ್ಯಕ್ರಮಗಳನ್ನು ತಿರಸ್ಕರಿಸಿದ ಹೊರತು ವಿಕೃತ ಮನಸ್ಸಿನವರ ವಿಕೃತ ಶೋಗಳಿಗೇನು ಕೊರತೆಯಿರುವುದಿಲ್ಲ.

ಈ ಲೇಖನಗಳನ್ನೂ ಒಮ್ಮೆ ಓದಿ:


ಪ್ಯಾಟೆ ಹುಡ್ಗೀರು: ನೋಟೀಸು ಕೊಟ್ಟರೆ ಸಾಕೆ? ಈ ಅಸಹ್ಯ ನಿಲ್ಲಬೇಡವೇ?


ರಿಯಾಲಿಟಿ ಶೋ ಹೆಸರಿನಲ್ಲಿ ಬಾಲಕನ ಮೇಲೆ ದೌರ್ಜನ್ಯ

20 comments:

  1. ಇಂತಹ ಅಡ್ಡಕಸುಬಿ ಶೋ ಗಳನ್ನು ಪ್ರಸಾರ ಮಾಡುವವರಿಗೆ ತಲೆ ಕೆಟ್ಟಿದೆಯೇ???ಈ ಹೆಣ್ಣು ಮಗಳು ಇವರ ಮೇಲೆ ಕೇಸ್ ಹಾಕಿ ಎಲ್ಲರನ್ನೂ ಒಳಗೆ ಕಳಿಸಬೇಕು....ಇವರನ್ನ ಹೀಗೆ ಬಿಟ್ಟರೆ 'ಪ್ಯಾಟೆ ಹುಡ್ಗೀರ ಬೆಡ್ ರೂಂ ಲೈಫು' ಅಂತ ಇನ್ನೊಂದು ಶೋ ತೆಗಿತಾರೆ......

    ReplyDelete
  2. ಸುವರ್ಣ ಛಾನಲ್ ವಿರುದ್ಧ ಕೂಡಾ ಝೀ ಟಿವಿ ವಿರುದ್ಧ ಸಮರ ಸಾರಿದ ಹಾಗೇ ಒಂದು ಯೋಜಿತ ಸಮರ ಸಾರಬೇಕಿದೆ. ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಕಾರ್ಯಕ್ರಮದಲ್ಲಿ ಪರದೆಯ ಮೇಲೆಯೇ ಅಕುಲನ ಅವಾಂತರಗಳು ಆ ಮಟ್ಟದಲ್ಲಿರಬೇಕಾದರೆ ಇನ್ನು ತೆರೆಯ ಹಿಂದಿನ ಕಥೆ ಊಹಿಸುವುದೂ ಕಷ್ಟ. ಈ ಹುಡುಗಿಯರು ಎಲಿಮಿನೆಟ್ ಆಗಿ ಬಂದ ನಂತರ ಹೀಗೇ ಆರೋಪ ಮಾಡುತ್ತಾರೆ....ಆದರೆ ತಮಗೆ ಅನ್ಯಾಯ, ಹಿಂಸೆ ಆದ ತಕ್ಷಣ ಸಿಡಿದೇಳುವ ಧೈರ್ಯ ಈ ಪ್ಯಾಟೆ ಹುಡುಗೀರಿಗೆ ಇಲ್ಲವೇ!!?? ಇವರು ಕೂಡಾ ಪ್ರತಿ ಎಪಿಸೋಡಿಗೆ ಇಷ್ಟು ಎಂದು ದೊರಕುವ ಹಣಕ್ಕಾಗಿ ಹಾತೊರೆಯುತ್ತಾರೆ...ಈಗ ಅನುಭವಿಸುತ್ತಿದ್ದಾರೆ.....ಆದರೂ ಈ ಘೋರ ನಿಲ್ಲಬೇಕು....ಬಂಡಾಯದ ಕಹಳೆ ಮೊಳಗಬೇಕು

    ReplyDelete
  3. I agreed about ಪ್ರಜೆ comment. and 5 Stars :)

    ReplyDelete
  4. yes...... please stop this non-sense reality show immediately........

    ReplyDelete
  5. Ee Suvarna channelge intaha karyakrama prasaramaduvudonde bandavaalavagide; bhandavaala annuvude sarihogutte.Istakkoo idaralli bhagavahisuva padde hudugiyarige enennona?Tanage anyaayavagide endu rachche hoyyuttiruva ee Akshatarantavaru yekaadaru aa karyakramadalli bhagavahisuvudu?Hanakkagiye? Illa naale yavudadaroo serialnallo illa cinemadallo chance sigalende allave?

    ReplyDelete
  6. ನನಗೆ ಗೊತ್ತಿರುವಂತೆ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೊದಲು ಅದರ ಬಗ್ಗೆ ಸಂಪೂರ್ಣ ವಿವರಗಳನ್ನು ನೀಡಿ ಕಾಂಟ್ರಾಕ್ಟ್ ಮೇಲೆ ಸಹಿ ಮಾಡಿಸಲಾಗುತ್ತದೆ. ಇಷ್ಟವಿಲ್ಲದವರು ಬರಲೇ ಬಾರದು, ಬಂದ ನಂತರ ಇಂತಹ ನಾಟಕ ಮಾಡುವುದರಲ್ಲಿ ಅರ್ಥವಿಲ್ಲ

    ReplyDelete
  7. nodugarige mattu participate maaduvavarige buddi bedave??

    ReplyDelete
  8. ನೋಡುವವರಿಗೆ, ಕಾರ್ಯಕ್ರಮ ನಿರ್ಮಾಣ ಮಾಡುವವರಿಗೆ, ಭಾಗವಹಿಸುವವರಿಗೆ ಮೂವರಿಗೂ ಬುಧ್ಧಿ ಇಲ್ಲ. ನಾನಂತೂ ಇಂಥವನ್ನು ನೋಡುವುದೇ ಇಲ್ಲ. ಮನೆಯಲ್ಲೂ ನೋಡುವುದಿಲ್ಲ. ಮನರಮ್ಜನೆಯೊಂದೇ ಮಾನದಂಡವಾದರೆ ಆಗುವ ಅವಾಂತರ ಇದೇ.

    ReplyDelete
  9. ಸಂಪಾದಕೀಯದಲ್ಲಿ ಬರುವ ಬರಹಗಳು ಎಲ್ಲವನ್ನು ಓದಿಸಿಕೊಂಡು ಹೋಗುತ್ತವೆ. ಎನ್ನುವುದರಲ್ಲಿ ಸಂಶಯವಿಲ್ಲ.

    ಮಾತುಗಾರ

    ReplyDelete
  10. ಇವೆಲ್ಲವುಕ್ಕಿ೦ತಲೂ ಮುಖ್ಯವಾಗಿ ನನ್ನ ಪ್ರಶ್ನೆ ಏನೆ೦ದರೆ ರಾಮಾಯಣ, ಮಹಾಭಾರತ, ವೇದಗಳು, ಸಮಾಜಿಕ ಸ೦ದೇಶಗಳು ಮು೦ತಾದ ನೆಲೆಯಲ್ಲಿ ಚಿತ್ರಗಳನ್ನು ನೈತಿಕತೆಯ ಬಗ್ಗೆ ಮಹಾ ಭಾಷ್ಯ್ವವನ್ನೇ ಬರೆದಿದ್ದ ಕನ್ನಡ ಚಿತ್ರರ೦ಗ ದೂರದರ್ಶನ ವಾಹಿನಿಗಳು, ಮಾಧ್ಯಮಗಳು ಇವರಿಗೆಲ್ಲಾ ಯಾವ ಗ್ರಹಣ ಹಿಡಿದಿದೆ? ಅಲ್ಲದೆ ಇ೦ದಿನ ಯುವ ಜನಾ೦ಗವೇ ಹೆಚ್ಚೆಚ್ಚು ವಿಕೃತತಎಯತ್ತ ವಾಲುತ್ತಿರುವುದು ಅತ್ಯ೦ತ ಕಳವಳದ ಸ೦ಗತಿಯಾಗಿದೆ.. ಇ೦ಥ ಕಾರ್ಯಕರಮಗಳಿ೦ದ ಮನೆ ಹಾಳಾಗುದೆ೦ಬ ಕಲ್ಪನೆ ಇವರಿಗ್ಯಾರಿಗೂ ಇಲ್ಲವೇ? ಇ೦ಥಹವುಕ್ಕೆಲ್ಲ ವ್ಯಾಪಕ ಹೋರಾಟವೆ೦ಬುದಾಗಲೀ ಪ್ರತಿಭಟನೆಗಳೆ೦ಬುದಾಗಲೀ ಕ೦ಡು ಬರದು! ಎಲ್ಲೋ ಕೆಲವರು ಹೂ೦ಕಾರ ಹುಟ್ತಿಸಿ ಸುಮ್ಮನಾಗುತ್ತಾರೆ.. ಇ೦ದಿನ ಯುವಜನಾ೦ಗ ಹಾಗೂ ಮಾಧ್ಯಮಗಳು ದಿಡೀರ್ ಹಣ ಮತ್ತು ಹೆಸರಿನ ಹ೦ಬಲದಿ೦ದ ಇ೦ತಹಹವುಕ್ಕೆಲ್ಲಾ ಅವಕಾಶ ಮಾಡಿಕೊಡುತ್ತಿದ್ದಾರೆ! ಸ೦ಪೂರ್ಣ ಪ್ರಜಾಸಮೂಹವೇ ದ೦ಗೆ ಏಳಬೇಕು! ನಮಗೇ ನಾವು ಮೊದಲು ಲಕ್ಷ್ಮಣ ರೇಖೆಯನ್ನು ಎಳೆದುಕೊಳ್ಳಬೇಕು.. ಮೊದಲು ಜನರ ಅಭಿರುಚಿ ಬದಲಾಗಬೇಕು.. ಅಲ್ಲಿಯವರೆವಿಗೂ ಈ ತರಹದ ಕಾರ್ಯಕರಮಗಳು ಒ೦ದಲ್ಲಾ ಒ೦ದು ರೀತಿಯಲ್ಲಿ ಹೋದೆಯಾ ಪಿಶಾಚಿ ಎ೦ದರೆ ಬ೦ದೆಯಾ ಗವಾಕ್ಷಿಯಲ್ಲಿ ಎ೦ಬ೦ತೆ ದಿನಕ್ಕೊ೦ದು ಹೊಸ ರೂಪದಲ್ಲಿ ಪ್ರಸಾರವಾಗುತ್ತಲೇ ಇರುತ್ತವೆ

    ReplyDelete
  11. ಇಂಥ ಕಾರ್ಯಕ್ರಮಗಳನ್ನು ಪ್ರಸಾರ ಮಾದುವ ಚಾನಲ್ ಗಳಿಗೆ ಕೇವಲ ಅವರಿಗೆ ಹಣ ಬೇಕು. ಯಾರು ಹೇಗಾದರೂ ಹಾಳಗಿ ಹೋಗಲಿ.

    ReplyDelete
  12. Sadly - Ppl in villages are shown in bad sense here in this show..,
    papa halli jana much more hospitable ppl than these ppl...
    Inta showgalinda Halli Janagala bagge tumba tappu kalpane jana galige barta ide..

    ReplyDelete
  13. ಕಾರ್ಯಕ್ರಮ ನಿರ್ಮಾಣ ಮಾಡುವವರಿಗೆ, ಭಾಗವಹಿಸುವವರಿಗೆ ಮೂವರಿಗೂ ಬುಧ್ಧಿ ಇಲ್ಲ. ನಾನಂತೂ ಇಂಥವನ್ನು ನೋಡುವುದೇ ಇಲ್ಲ. ಮನೆಯಲ್ಲೂ ನೋಡುವುದಿಲ್ಲ.

    ReplyDelete
  14. Alla, nanantu karyakrama madoranna doorodilla. Adakke hogtaralla buddhi illada so called educated hudigru, avarannu nadu rasthenalli badibeku. Yaru intha show galige hogdire show hege madtare heli nodona?

    ReplyDelete
  15. Please somebody take initiative and stop this nonsense shows..otherwise inform this to TV9 so that they can do something regarding this.

    ReplyDelete
  16. ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು...ಸುವರ್ಣ ಚಾನೆಲ್ನ ಅತ್ಯಂತ ದರಿದ್ರ ಕಾರ್ಯಕ್ರಮವಿದು. ತಲೆಕೆಟ್ಟವರಿಂದ ಮಾತ್ರ ಇಂಥ ಕಾರ್ಯಕ್ರಮಗಳು ಸಾಧ್ಯ. ೨೯ ಜನರಿರುವ ನಮ್ಮ ಕುಟುಂಬವೇ ಈ ಕಾರ್ಯಕ್ರಮವನ್ನು ನಿಷೇಧಿಸಿದೆ. ಅಕುಲ್, ಅರ್ ಯೂ ಮ್ಯಾಡ್ or psychopath ?, ಥೂ ಹೊಲಸು ಕಾರ್ಯಕ್ರಮ........
    ಸಂಪಾದಕೀಯ ಬಳಗಕ್ಕೆ ಅಭಿನಂದನೆಗಳು. ಅಕ್ಷತಾ , ನಿನಗೆ ನಮ್ಮ ಬೆಂಬಲವಿದೆ. ಅಕುಲ್ ವಿರುದ್ಧ ಕಾನೂನು ಸಮರ ಸಾರು
    ಉಮಾತನಯರಾಜ್,
    ಹಿರಿಯ ಪತ್ರಕರ್ತ, ಲೇಖಕ
    rajendrapatil65@gmail.com

    ReplyDelete
  17. seriously there is no meaning to watch this programs !!!!!

    ReplyDelete
  18. ವಿಕೃತ ಮನಸ್ಸಿನ, ಲಾಭಕೋರ ಬುದ್ಧಿಯ ನೀಚರ ಕೈಗೆ ಟಿ.ವಿ.ಯಂತ ಮಾಧ್ಯಮ ಸಿಕ್ಕಿದ್ರೆ ಇನ್ನೇನಾಗುತ್ತೆ? ಇದೂ ಒಂದು ಸಾಂಸ್ಕೃತಿಕ ಭಯೋತ್ಪಾದನೆಯಲ್ವೇ?

    ReplyDelete
  19. ನಾನು ಅಕ್ಷತಾಗೆ ಅನ್ಯಾಯ ಆಗಿರುವುದನ್ನ ನೋಡಿದ್ದೀನಿ. ಅದನ್ನ ಖಂಡಿಸ್ತೀನಿ. ಈ ಕಾರ್ಯಕ್ರಮದಲ್ಲಿ ಆಗಿರೋ ತಪ್ಪನ್ನ ಮುಚ್ಚುವ ಪ್ರಯತ್ನವನ್ನ ಸುವರ್ಣ ನ್ಯೂಸ್ ಛಾನೆಲ್ ನಲ್ಲಿ ಮಾಡಿದ್ದಾರೆ. ಅದನ್ನ ನೋಡಿದ್ದೀರಾ? ಮಾನ್ವಿ ಮತ್ತೆ ಇನ್ನೊಬ್ಬಳನ್ನ ಕರ್ಕೊಂಡು ಬಂದು ಅಕ್ಷತಂದೆ ತಪ್ಪು ಅನ್ನುವ ಥರ ಬಿಂಬಿಸಿದ್ರು. ಈ ಅಕುಲ್ ಕುಮುದನ್ನ ಸೇವ್ ಮಾಡುತ್ತಾನೇ ಬರುತ್ತಾ ಇದ್ದಾನೆ. ಬಹುಶಃ ಯಾಕೆ ಹೀಗೆ ಮಾಡುತ್ತಾ ಇದ್ದಾನೋ ಗೊತ್ತಿಲ್ಲ. ಪೂರ್ಣಿಮಗೆ ಇದು ಗೊತ್ತಾಗಿ ಅದನ್ನ ಖಂಡಿಸಿದ್ದಕ್ಕೆ ಅದನ್ನ ಯಾರೂ ಕೇಳಲೇ ಇಲ್ಲ. ಇದಕ್ಕೆ ನೀವೆಲ್ಲ ಏನಂತೀರಿ? ಹೇಳಿ.

    ReplyDelete
  20. ಟಿಆರ್ಪಿಗಾಗಿ ಹುಡುಗಿಯರನ್ನು ಈ ರೀತಿ ಬಳಸಿಕೊಳ್ಳುವುದು ಸರಿಯೇ ಎಂಬ ಪ್ರಶ್ನೆ. ಹಣಕ್ಕಾಗಿ ಹುಡುಗಿಯರು ಈ ರೀತಿಯ ಕ಻ಯ೵ಕ್ರಮಗಳಲ್ಲಿ ಭಾಗವಹಿಸುವುದು ಸಹ ತಪ್ಪಲ್ಲವೇ

    ReplyDelete