Wednesday, March 16, 2011

ರಿಯಾಲಿಟಿ ಶೋ ಹೆಸರಿನಲ್ಲಿ ಬಾಲಕನ ಮೇಲೆ ದೌರ್ಜನ್ಯ


ಪತ್ರಕರ್ತ ಮೌನೇಶ್ ವಿಶ್ವಕರ್ಮ, ಸುವರ್ಣ ಟಿವಿಯ ಪ್ಯಾಟಿ ಹುಡ್ಗೀರ್ ಹಳ್ಳಿ ಲೈಫ್ ಎಂಬ ರಿಯಾಲಿಟಿ ಶೋನಲ್ಲಿ ಬಾಲಕನೊಬ್ಬನನ್ನು ಅಮಾನವೀಯವಾಗಿ ಹಿಂಸಿಸುವ ಕಾರ್ಯಕ್ರಮ ಪ್ರಸಾರವಾಗಿರುವ ಕುರಿತು ಲೇಖನವೊಂದನ್ನು ಬರೆದು ಗಮನ ಸೆಳೆದಿದ್ದಾರೆ. ಇದು ಅವರ ಬ್ಲಾಗ್ ಮೌನವೇ ರಾಗದಲ್ಲೂ ಪ್ರಕಟಗೊಂಡಿದೆ.

ಮೌನೇಶ್ ಅವರ ಲೇಖನವನ್ನು ಗಮನಿಸಿದರೆ, ರಿಯಾಲಿಟಿ ಶೋ ಹೆಸರಿನಲ್ಲಿ ನಡೆಯುತ್ತಿರುವ ಕುಚೇಷ್ಟೆಗಳು ಯಾವ ಹಂತ ತಲುಪಿದೆ ಎಂಬುದು ಅರ್ಥವಾಗುತ್ತದೆ.

ಮೌನೇಶ್ ಗಮನಿಸಿರುವ ಈ ದೃಶ್ಯಗಳನ್ನು ಕಲ್ಪಿಸಿಕೊಳ್ಳಲೂ ಭಯವಾಗುತ್ತದೆ.

ಬಾಗಲಕೋಟೆಯ ಕೆರ್‌ಕಲ್ ಮಟ್ಟಿ ಎಂಬ ಹಳ್ಳಿಯ ಮನೆಯೊಂದರಲ್ಲಿ ಸುಮಾರು ೬ ವರ್ಷದ ಪುಟ್ಟ ಬಾಲಕನೊಬ್ಬನೊಂದಿಗೆ ವಾಗ್ವಾದಕ್ಕಿಳಿಯುವ ಪ್ಯಾಟಿ ಹುಡ್ಗಿಯರಿಬ್ಬರು, ಬಾಲಕನ ಅಂಗಿಯ ಬಟನ್‌ಗಳನ್ನು ತೆಗೆಯುತ್ತಾರೆ, ಇದಕ್ಕೆ ಬಾಲಕ ವಿರೋಧ ವ್ಯಕ್ತಪಡಿಸುತ್ತಿರುವಂತೆಯೇ ಇಬ್ಬರೂ ಸೇರಿ ಬಾಲಕ ಧರಿಸಿದ್ದ ಪ್ಯಾಂಟ್ ಅನ್ನು ಎಳೆದು ತೆಗೆಯುತ್ತಾರೆ. ಬಾಲಕ ಸಿಟ್ಟಿನಿಂದ ಹುಡ್ಗೀರ ವರ್ತನೆಗೆ ಪ್ರತಿರೋಧ ತೋರುತ್ತಾನಾದರೂ ಲೆಕ್ಕಿಸದ ಹುಡ್ಗೀರು ಬಾಲಕನ ಎರಡೂ ಕೈಗಳನ್ನು ಹಿಂದಕ್ಕೆ ಹಿಡಿದುಕೊಂಡು ಬಾಲಕ ಧರಿಸಿದ್ದ ಚಡ್ಡಿಯನ್ನೂ ಎಳೆಯುತ್ತಾರೆ, ತುದಿ ಕತ್ತರಿಸುತ್ತೇನೆ ಎಂದೆಲ್ಲಾ ಹೊಲಸು ಮಾತನಾಡುತ್ತಾರಲ್ಲದೆ, ಈ ದೃಶ್ಯದುದ್ದಕ್ಕೂ ಬಾಲಕನನ್ನು ಅವಾಚ್ಯವಾಗಿ ನಿಂದಿಸುವ ಮಾತುಗಳು ಕೇಳಿ ಬರುತ್ತದೆ.
ವಿವಸ್ತ್ರಗೊಂಡ ಬಾಲಕನನ್ನು ಇಬ್ಬರು ಯುವತಿಯರು ಜೋರಾಗಿ ನಕ್ಕು ಅವಮಾನಿಸುತ್ತಾರಲ್ಲದೆ, ಈಗೆಲ್ಲಿ ನಿನ್ನ ಪೊಗರು ಎಂಬೆಲ್ಲಾ ಅರ್ಥ ಬರುವಂತೆ ಮಾತನಾಡುವ ಸನ್ನಿವೇಶಗಳು ಮುಂದಿನ ದೃಶ್ಯಗಳಲ್ಲಿ ಅಡಕವಾಗಿದೆ. ಕೊನೆಯಲ್ಲಿ ಹುಡ್ಗೀರ ವರ್ತನೆಗೆ ಆಕ್ರೋಶಗೊಂಡ ಬಾಲಕ ಕತ್ತಿ ಹಿಡಿದು ಹುಡುಗಿಯರನ್ನು ಬೆದರಿಸಿ ಬೆನ್ನಟ್ಟುವ ದೃಶ್ಯಗಳನ್ನು ವಾಹಿನಿಯು ಹೊಡಿ ಮಗ.. ಹೊಡಿ ಮಗಾ ಹಿನ್ನೆಲೆ ಹಾಡಿನೊಂದಿಗೆ ಪ್ರಸಾರ ಮಾಡಿದೆ.
ಮೌನೇಶ್ ವಿಶ್ವಕರ್ಮ

ಇದು ಯಾವ ಸೀಮೆಯ ರಿಯಾಲಿಟಿ ಶೋ? ಇದು ಮಗುವಿನ ಮೇಲೆ ನಡೆಸಿದ ಅತ್ಯಾಚಾರವಲ್ಲವೆ? ಲೈಂಗಿಕ ಕಿರುಕುಳವಲ್ಲವೆ? ಕಾರ್ಯಕ್ರಮ ನಿರ್ಮಾಪಕರು, ಚಾಲನ್ ಮುಖ್ಯಸ್ಥರು ಹಾಗು ಮಗುವಿಗೆ ಹಿಂಸೆ ಕೊಟ್ಟ ಹುಡುಗಿಯರ ಮೇಲೆ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸಬೇಕಲ್ಲವೆ?

ಒಂದು ವೇಳೆ ಮಗುವನ್ನು ಅಭಿನಯಿಸುವಂತೆ ಹೇಳಿ ಈ ದೃಶ್ಯಗಳನ್ನು ಚಿತ್ರೀಕರಿಸಿದ್ದರೂ ಇದೆಂಥ ಕೀಳು ಬಗೆಯ ಅಭಿರುಚಿ? ಹಣಕ್ಕಾಗಿ ಟಿವಿ ವಾಹಿನಿಗಳು ಇಷ್ಟು ಪಾತಾಳಕ್ಕೆ ಇಳಿಯಬಹುದೆ?

ಇದನ್ನೆಲ್ಲ ದೂಸ್ರಾ ಮಾತನಾಡದೆ ಸಹಿಸಿಕೊಳ್ಳುತ್ತಿರುವ ನಮ್ಮ ಬಗೆಯೇ ನಮಗೆ ಅಸಹ್ಯ ಮೂಡುವಂತಾಗಿದೆ. ನಾವು ಇಷ್ಟೊಂದು ಇನ್‌ಸೆನ್ಸಿಟಿವ್ ಆಗಿ ಹೋಗಿದ್ದೇವೆಯೇ?

12 comments:

 1. ಮಧು ಭಟ್March 16, 2011 at 12:13 PM

  ಮಕ್ಕಳು ಹೀಗೆ ಮಾಡುತ್ತಾರೆ ಎಂದರೆ ಟಿಆರ್.ಪಿ ಹೆಚ್ಚಿಸುವ ಕೆಲಸಕ್ಕೆ ಮುಂದಾಗುತ್ತಾರೆ. ಅದೇ ತಾನೇ ನಮ್ಮ ನರ್ಸ ಸಚಿವರು ಮಾಡಿದ್ದು, ದಾವಣಗೆರೆಯಲ್ಲಿ ೫ ವರ್ಶದ ಹುಡುಗ ಕುಡಿಯಿತ್ತಾನೆ ಎಂದರೆ ಅವನ ಮನೆಗೆ ಹೋಗಿ, ಅವನ ಕೈಗೆ ಬಾಟಲ್ ಕೊಟ್ಟು ಕುಡಿದು ತೋರಿಸು ಎಂದು ಕೇಳಿದ್ದು. ನಮಗೆ ಇದೆಲ್ಲಾ ಮಜಾ ....

  ReplyDelete
 2. ಅಯ್ಯೋ ಆ ಕಾರ್ಯಕ್ರಮದ ಟಿ.ಆರ್.ಪಿ. ಕಂಡು ಬೇರೆ ಚಾನೆಲ್ಲುಗಳೆಲ್ಲಾ ತಲೆ ಕೆಡಿಸಿಕೊಂಡು ಹುಚ್ಚಾಗಿವೆ. ಟಿ.ಆರ್.ಪಿ.ಯೊಂದೇ ಎಲ್ಲಕ್ಕೂ ಮಾನದಂಡವಾಗಿರುವಾಗ, ವೀಕ್ಷಕರ ಅಭಿರುಚಿ ಕೆಟ್ಟು ಕೆರ ಹಿಡಿದಿರುವಾಗ ಇನ್ನೆಂಥಾ ಕಾರ್ಯಕ್ರಮ ನಿರೀಕ್ಷಿಸೋದಕ್ಕೆ ಸಾಧ್ಯ ಹೇಳಿ? ಮೌನೇಶ್ ಎತ್ತಿರುವ ಪ್ರಶ್ನೆಗಳು ಸರಿಯಾಗಿವೆ ಮತ್ತು ಸಕಾಲಿಕವಾಗಿವೆ. ಸುವರ್ಣಾ ಚಾನೆಲ್ ಮೇಲೆ ಕೇಸ್ ಹಾಕಬೇಕು. ಆ ಮೂಲಕವಾದ್ರೂ ಇನ್ನೊಂದ್ಸಾರಿ ಇಂತಹ ದೃಶ್ಯಗಳನ್ನ ತೋರಿಸೋಕೆ ಮುನ್ನ ಅವರು ಯೋಚ್ನೆ ಮಾಡ್ತಾರೆ. ಅಂದ ಹಾಗೆ ಟಿ.ವಿ. ಕಾರ್ಯಕ್ರಮಗಳನ್ನೂ ಸೆನ್ಸಾರ್ ಮಾಡಿಸುವ ಪ್ರಸ್ತಾಪ ಒಂದಿತ್ತಲ್ಲಾ ಅದೇನಾಯ್ತು?

  ReplyDelete
 3. Really disgusting attitude from so called, educated and civilized people of media !. T R P is just an excuse. Just a way of putting blame on audience. Just like saying : "We are exhibiting these kind of shows on your demand." Actually it is a exhibition of their dirty mind. They are bringing "A" gradable shows on television. also.

  ReplyDelete
 4. "ತಾಯಿಯೊಬ್ಬಳು ಸತ್ತಿದ್ದಳು. ಶವದ ಮುಂದೆ ಹಸಿದಿದ್ದ ಆಕೆ ಮಕ್ಕಳು ಭಿಕ್ಷೆ ಬೇಡಿ ತಿನ್ನುತ್ತಿದ್ದವು. ಬೆಳಗ್ಗೆ ಸ್ಥಳೀಯ ಪತ್ರಿಕೆಯಲ್ಲಿ ಈ ಬಗ್ಗೆ ವರದಿ ಇತ್ತು. ಬದುಕಿನ ವಿಸ್ಮಯ ಅಂದರೆ ಭಿಕ್ಷೆ ಬೇಡುತ್ತಿದ್ದ ಆ ಮಕ್ಕಳು ಇಂದು ಭಿಕ್ಷುಕರಾಗಿಲ್ಲ. ಪತ್ರಿಕೆಯಲ್ಲಿ ಬಂದ ಬರಹದಿಂದ ಪ್ರೇರಿತರಾದ ಗಾಂಧಿವಾದಿಗಳಾದ ತುಮಕೂರಿನ ಬಸವಯ್ಯ ಅವರು ಆ ಮಕ್ಕಳನ್ನು ತಮ್ಮ ಬಾಪು ವಿದ್ಯಾಮಂದಿರಕ್ಕೆ ಕರೆ ತಂದು ಅನ್ನ, ಬಟ್ಟೆ ನೀಡಿ ಓದಿಸುತ್ತಿದ್ದಾರೆ. ಸಣ್ಣ ಬರಹವೊಂದು ಮೂರಾಬಟ್ಟೆಯಾಗಬಹುದಾಗಿದ್ದ ಮಕ್ಕಳ ಬದುಕಿಗೆ ಆಸರೆಯಾಯಿತಲ್ಲಾ." ಎಂದು ಸ್ಥಳೀಯ ಪತ್ರಿಕೆಯ ಒಂದು ಪುಟ್ಟ ವರದಿಯ ಬಗ್ಗೆ ತುಮಕೂರಿನ ರಂಗಭೂಮಿ ಹವ್ಯಾಸಿ, ಕವಿ, ಸಾಹಿತಿ ಹಾಗೂ ಪತ್ರಕರ್ತ ಶ್ರೀ. ಉಗಮ ಶ್ರೀನಿವಾಸ್ ವ್ಯಕ್ತ ಪಡಿಸಿದ ಹಾಗೆ ಈ ಪುಟ್ಟ ವರದಿ ರಿಯಾಲಿಟಿ ಶೋ ಹೆಸರಿನಲ್ಲಿ ದೌರ್ಜನ್ಯ ನಡೆದ ಬಾಲಕನ ಬದುಕಿಗೆ ಆಸರೆ ಆಗಲಿ ಎಂಬ ಹಾರೈಕೆಗಳು.

  -ಪ.ರಾಮಚಂದ್ರ,
  ರಾಸ್ ಲಫ್ಫಾನ್, ಕತಾರ್

  ReplyDelete
 5. E Suvarna channel baruva karyakrma gala hanebarahave ishtu.. mukya vagi inta karyakrama galige license koduvavarige hididu baarisabeku.. TRP goskara enu bekadaru madalikke ready iruva karyakramagalu namge beke??

  ReplyDelete
 6. ಸಂಪಾದಕೀಯ,
  ಈ ಲೇಖನ ಓದಿ ಅಪಾರವಾದ ಆಘಾತವಾಗಿದೆ. ಬೇರೆಯದನ್ನೆಲ್ಲ ಹಾಗೆ ಕಣ್ರಿ ಹೀಗೆ ಕಣ್ರಿ ಅಂದು ವಿವರವಾಗಿ ವರ್ಣಿಸುವ ನಮ್ಮ ಸೋಕಾಲ್ಡ್ ಮೀಡಿಯಾ ವಾಚ್‍ಡಾಗ್‌ಗಳು, ನ್ಯೂಸ್‍ಚ್ಯಾನೆಲ್‌ಗಳು ನಿದ್ದೆ ಮಾಡುತ್ತಿವೆಯೆ? ಮೊದಲು ಆ ಎರಡು ಯುವತಿಯರಿಗೆ ಮತ್ತು ಇಂತಹ ಕಾರ್ಯಕ್ರಮದ ಪ್ರೊಡ್ಯೂಸರುಗಳಿಗೆ, ಆನಂತರ ಇಂತಹ ಹೇಯ ದೃಶ್ಯಾವಳಿಯ ಬಗ್ಗೆ ತಕ್ಕ ಕ್ರಮ ಕೈಗೊಳ್ಳದೆ ಪ್ರಸಾರ ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಅದು ನಮ್ಮ ಮನೆಯ ಮಗುವಾಗಿದ್ದಿದ್ದರೆ ನಾವು ಸಹಿಸುತ್ತಿದ್ದೆವೇನು?

  ReplyDelete
 7. ಇಂತಹ ಕಾರ್ಯಕ್ರಮಕ್ಕೆ, ಕಾರ್ಯಕ್ರಮದ ಪರಿಕಲ್ಪನೆ ಮಾಡಿದವರಿಗೆ, ಕಾರ್ಯಕ್ರಮ ತೋರಿಸಿದವರಿಗೆ, ಈ ಇಬ್ಬರು ಹುಡುಗಿಯರಿಗೆ ಧಿಕ್ಕಾರವಿದೆ.

  ReplyDelete
 8. ಇನ್ನು ಎಷ್ಟು ಕೆಳಮಟ್ಟಕ್ಕೆ ಇಳೀತಾರ್ರೀ ಇವರು :( ತಲೆಯಲ್ಲಿ ಏನು ತುಂಬಿದೆ ಅಂತ?

  ReplyDelete
 9. edu child right na ullanganeyagide sammanda patta elakheyavaru soktha krama kaigollali...

  ReplyDelete
 10. Shocking! Height of Sadism...This act of horror should not go unpunished.

  ReplyDelete
 11. idanna odoke sankata agta ide.. yaava mattakke ilidide ee media mathu yaava kelamattakke iliddare namma jana.. idarinda aa maguvina manasige sambavisida dushparinama nensikondre besaravagutte.. intaha karyakrama yaarige bekide.. idannu direct madidavrige, Suvarna TV yavarige shiksheyagale beku.. aa hudugiarigu kooda..

  --Kavitha..

  ReplyDelete
 12. ಚಿಕ್ಕವಯಸ್ಸಿನಲ್ಲಿ ಒಳ್ಳೆಯ ಭಾಷೆ ಸಂಸ್ಕೃತಿ ಕಳಿಸುವುದು ಈ ದೇಶದ ಎಲ್ಲ ನಾಗರಿಕರ ಕರ್ತವ್ಯ. ಈ ರೀತಿ ಅಸಭ್ಯ ವರ್ತನೆಗಳನ್ನೂ ಚಿಕ್ಕ ಹುಡುಗನ ಮೇಲೆ ಮಾಡಿದರೆ ಅವನ ಮನಸ್ಸಿಗೆ ಯಾಪ ಪರಿಣಾಮವನ್ನುಂಟು ಮಾಡುತದೆ ಅನ್ನುವ ನೈತಿಕ ಕಾಳಜಿಯಾದರು ಆ ಹುಡುಗಿಯರಿಗೆ ಎರಬೇದವೇ? ಈ ಥರದ ಕಾರ್ಯಕ್ರಮವನ್ನು ದೊಡ್ಡ ಸಾಧನೆ ಎನ್ನುವ ರೀತಿಯಲ್ಲಿ ತೋರಿಸುವ ಈ TV ಚಾನೆಲ್ ನವರಿಗೆ ಸ್ವಲ್ಪನಾದರು ನಾಚಿಕೆ ಎಲ್ಲವೀ? ಈ ಚಿಕ್ಕವಯಸ್ಸಿನಲ್ಲಿ ಈ ತರಹದ ದ್ವೇಷವನ್ನು ಹುಟ್ಟುಹಾಕುತ್ತಿರುವ ಈ TV ಚಾನೆಲ್ ನವರು ಈ ದೇಶಕ್ಕೆ ಕೊಡುತ್ತಿರುವ ಕೊಡುಗೆ ಎದೆಯೇನು?ಇದನ್ನು ಪ್ರಶ್ನಿಸುವರ್ಯಾರು?

  ReplyDelete