Friday, August 19, 2011

ಯಾರು ಈ ವಿ.ಭಟ್, ಆರ್‌ಬಿ, ಸಂಜಯ ಸರ್? ಏನಿದರ ಹಕೀಕತ್ತು?

ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್‌ಗಳು ಇವತ್ತು ಸ್ಫೋಟಿಸಿರುವ ಗಣಿಕಪ್ಪ ಕುರಿತ ಸುದ್ದಿಗಳು ಇಡೀ ಪತ್ರಿಕಾರಂಗದಲ್ಲಿ ದೊಡ್ಡ ಪ್ರಮಾಣದ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಎಲ್ಲೆಡೆ ಗುಸುಗುಸು ಚರ್ಚೆ. ಎಸ್‌ಎಂಎಸ್‌ಗಳ ವಿನಿಮಯ. ಪತ್ರಕರ್ತರು ಅಣ್ಣಾ ಹಜಾರೆ ಚಳವಳಿಯ ಬಗ್ಗೆ ಮಾತಾಡೋದನ್ನು ಬಿಟ್ಟು ಪ್ರಜಾವಾಣಿ ಸುದ್ದಿಯನ್ನೇ ಎಲೆಅಡಿಕೆ ಅಗಿದಂತೆ ಅಗಿದು ನುಂಗುತ್ತಿದ್ದಾರೆ.

ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿ ಬಹಿರಂಗ ಆದ ನಂತರ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ವರದಿಯಲ್ಲಿ ಇದುವರೆಗೆ ಬಹಿರಂಗವಾಗದೇ ಉಳಿದಿದ್ದ ಭಾಗಗಳು (ಯು.ವಿ ಸಿಂಗ್ ನೇತೃತ್ವದ ತಂಡದ ತನಿಖಾ ವರದಿ) ಈಗ ಹೊರಬಂದಿವೆ. ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿ ಪತ್ರಿಕೆಗಳು ಈ ಕುರಿತ ಸುದ್ದಿಗಳನ್ನು ಪ್ರಕಟಿಸುತ್ತಿವೆ.

ಎರಡು ದಿನಗಳಿಂದ ಅಕ್ರಮ ಗಣಿಗಾರಿಕೆಯ ಪಾಲುದಾರರಿಂದ ಯಾರು ಯಾರಿಗೆ ಹಣ ಹೋಗಿದೆ ಎಂಬ ಮಾಹಿತಿ ಈ ಪತ್ರಿಕೆಗಳ ವರದಿ ಮೂಲಕ ಗೊತ್ತಾಗಿದೆ. ಡೆಕ್ಕನ್ ಹೆರಾಲ್ಡ್ ಇದುವರೆಗೆ ೨೦೦ ಅಧಿಕಾರಿಗಳ ಪಟ್ಟಿ ಪ್ರಕಟಿಸಿದೆ. ಜನಾರ್ದನ ರೆಡ್ಡಿ ಮತ್ತವರ ಸಂಗಡಿಗರು ಬೇನಾಮಿ ಹೆಸರಿನಲ್ಲಿ ವ್ಯವಹಾರ ನಡೆಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕಾರದಪುಡಿ ಮಹೇಶ್ ಮತ್ತು ಮಧುಕುಮಾರ್ ವರ್ಮಾ ಲೋಕಾಯುಕ್ತ ವರದಿ ಪ್ರಕಾರ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರು. ಅವರ ಮೂಲಕ ಹಣ ಸಂದಾಯವಾದ ಬಗ್ಗೆ ಮಾಹಿತಿಯನ್ನು ಐಟಿ ಅಧಿಕಾರಿಗಳು ಸಂಗ್ರಹಿಸಿದ ದಾಖಲೆಗಳನ್ನು ಲೋಕಾಯುಕ್ತ ಅಧಿಕಾರಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಆ ಪರಿಣಾಮ ಈ ಹೆಸರುಗಳೆಲ್ಲಾ ಹೊರಬಂದಿದೆ. ದಿನಾಂಕ ಜುಲೈ ೩೧, ೨೦೧೦ ರಂದು ಆರ್.ಬಿ ಎನ್ನುವವರಿಗೆ ಮಧುಕುಮಾರ್ ವರ್ಮಾನಿಂದ ೧೦ ಲಕ್ಷ ರೂ ಸಂದಾಯವಾಗಿದೆ. ನಂತರ ವಿ.ಭಟ್ ಎನ್ನುವವರಿಗೆ ಆಗಸ್ಟ್ ೪ ರಂದು ೨೫ ಲಕ್ಷ ರೂ ಹಾಗೂ ಐದು ದಿನಗಳ ನಂತರ (ಆಗಸ್ಟ್ ೯) ರಂದು ಮತ್ತೆ ೫೦ ಲಕ್ಷ ರೂ ಸಂದಾಯವಾಗಿದೆ. ಆಗಸ್ಟ್ ೩೧ ರಂದು ಡೆಕ್ಕನ್ ಕ್ರಾನಿಕಲ್‌ಗೆ ೨೫ ಲಕ್ಷ ರೂ ಸಂದಾಯವಾಗಿದೆ. ಬೆಂಗಳೂರಿನ ಸ್ಥಳೀಯ ಪತ್ರಿಕೆಗಳಿಗೆ ಸಂಜಯ್ ಸರ್ ಎಂಬುವವರ ಮೂಲಕ ೧.೫೨ ಲಕ್ಷ ರೂ ಸಂದಾಯವಾಗಿದೆ. ಅದೇ ದಿನ ಪ್ರೆಸ್ ಕ್ಲಬ್‌ಗೆ ಐದು ಲಕ್ಷ ಕೊಡಲಾಗಿದೆ. ಪತ್ರಿಕೆಗಳಿಗೆ ಪಾವತಿಯಾಗಿದ್ದು ಜಾಹೀರಾತು ಹಣವಾ? ಅಥವಾ ಬೇರಿನ್ನೇನಾದರೂ ಇರಬಹುದೇ? ಡೆಕ್ಕನ್ ಕ್ರಾನಿಕಲ್‌ನವರು ಸೂಕ್ತ ಸ್ಪಷ್ಟನೆ ನೀಡುವರೆ? ಒಂದು ವೇಳೆ ಕ್ರಾನಿಕಲ್‌ನವರು ಹಣ ಪಡೆಯದಿದ್ದರೆ, ಅವರ ಹೆಸರಲ್ಲಿ ಹಣ ಪಡೆದವರು ಯಾರು?

ಯಾರ‍್ಯಾರಿಗೆ ಹಣ ಪಾವತಿಯಾಗಿದೆ ಎಂಬ ಪಟ್ಟಿಯ ವಿಶ್ವಾಸಾರ್ಹತೆಯ ಬಗ್ಗೆಯೂ ಪ್ರಶ್ನೆಗಳು ಏಳುವುದು ಸಹಜ. ಆದರೆ ಈ ಪೈಕಿ ಬೆಂಗಳೂರು ಪ್ರೆಸ್ ಕ್ಲಬ್ ಪಡೆದ ಐದು ಲಕ್ಷ ರೂ. ಹಣ ನಿಖರವಾಗಿ ಸಾಬೀತಾಗಿದೆ. ಪ್ರೆಸ್‌ಕ್ಲಬ್‌ಗೆ ೪೦ ವರ್ಷ ತುಂಬಿದ ಸಂದರ್ಭದಲ್ಲಿ ೬೦ ಮಂದಿ ಪತ್ರಕರ್ತರಿಗೆ ಸನ್ಮಾನಿಸಲಾಯಿತು. ಈ ಪತ್ರಕರ್ತರ ನೆನಪಿನ ಕಾಣಿಕೆ (ಬೆಳ್ಳಿ ತಟ್ಟೆ)ಗಾಗಿ ಈ ಹಣವನ್ನು ಬಳಸಿಕೊಳ್ಳಲಾಗಿತ್ತು. ಇದು ಅಧಿಕೃತವಾಗಿ ಕ್ಲಬ್‌ನ ಅಕೌಂಟುಗಳಲ್ಲಿ ದಾಖಲಾಗಿದೆ. ಪ್ರೆಸ್‌ಕ್ಲಬ್‌ನ ಕಳೆದ ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ಈ ವಿಷಯವನ್ನು ಅಜೆಂಡಾಗೆ ತಂದಿದ್ದ ಕೆಲ ಪತ್ರಕರ್ತರು ಕ್ಲಬ್ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಗಣಿ ದಂಧೆಕೋರರಿಂದ ಡೊನೇಷನ್ ಪಡೆದು ಕ್ಲಬ್ ನಡೆಸಬೇಕಾದ ಅನಿವಾರ್ಯತೆ ಏನು ಎಂದು ಪ್ರಶ್ನಿಸಿದ್ದರು. ಕೊಡುಗೆ ನೀಡಿದ ಜನಾರ್ದನ ರೆಡ್ಡಿ ಪತ್ರಕರ್ತರ ಸನ್ಮಾನ ಕಾರ್ಯಕ್ರಮದಲ್ಲೂ ಉಪಸ್ಥಿತರಿದ್ದರು. ಆದರೀಗ ಕ್ಲಬ್‌ಗೆ ದೇಣಿಗೆ ನೀಡಿದ್ದು ಮಧುಶ್ರೀ ಎಂಟರ್‌ಪ್ರೈಸಸ್ ಎಂಬುದು ಪತ್ರಿಕೆಗಳ ವರದಿ ಮೂಲಕ ಬಯಲಾಗಿದೆ.

ಈ ಆರ್.ಬಿ, ವಿ.ಭಟ್, ಸಂಜಯ್ ಸರ್ - ಇವರೆಲ್ಲ ಯಾರು ಎನ್ನುವುದು ಸಹಜವಾಗಿಯೇ ಕುತೂಹಲದ ಸಂಗತಿ. ಆ ಕುತೂಹಲ ನಮಗೂ ಇದೆ. ಒಂದು ವರ್ಷದ ಹಿಂದೆ ಇಷ್ಟು ದೊಡ್ಡ  ಮೊತ್ತ (ಕೆಲವರಿಗೆ ಇದು ಪೀನಟ್ಸ್ ಅನ್ನಿಸಬಹುದು.) ರವಾನೆಯಾಗಿದ್ದು ಯಾವ ಕಾರಣಕ್ಕೆ ಎನ್ನುವುದೂ ಸಹ ನಿಗೂಢ. ಈ ಬಗ್ಗೆ ಏನಾದರೂ ತನಿಖೆ ನಡೆಯುತ್ತಾ? ಗೊತ್ತಿಲ್ಲ.

ಇವತ್ತು ದೇಶಾದ್ಯಂತ ಭ್ರಷ್ಟಾಚಾರದ ವಿರುದ್ಧ ದೊಡ್ಡ ಮಟ್ಟದ ಆಂದೋಲನವೇ ನಡೆಯುತ್ತಿದೆ. ಇದನ್ನು ಇಡೀ ಮೀಡಿಯಾ ಜಗತ್ತು ಒಂದೇ ಧ್ವನಿಯಲ್ಲಿ ಬೆಂಬಲಿಸುತ್ತಿದೆ. ದುರದೃಷ್ಟವೆಂದರೆ ಪತ್ರಕರ್ತರು ಲೋಕಾಯುಕ್ತದ ವ್ಯಾಪ್ತಿಗೂ ಬರೋದಿಲ್ಲ, ಅಣ್ಣಾ ಹಜಾರೆಯವರ ಜನಲೋಕಪಾಲದ ವ್ಯಾಪ್ತಿಗೂ ಬರೋದಿಲ್ಲ. ಹೀಗಾಗಿ ಬದನೇಕಾಯಿ ತಿನ್ನುತ್ತಲೇ ಆಚಾರ ಹೇಳುವುದು ಪತ್ರಕರ್ತರಿಗೆ ಬಹಳ ಸುಲಭ. ಅಣ್ಣಾ ಹಜಾರೆ ಜಿಂದಾಬಾದ್!

ಕೊನೆಮಾತು: ಈಗ್ಗೆ ಕೆಲವು ದಿನಗಳ ಹಿಂದೆ ೨೪/೭ ಸುದ್ದಿ ವಾಹಿನಿಯೊಂದರಲ್ಲಿ ಯಡಿಯೂರಪ್ಪ ವಿರುದ್ಧ ಕೇಳಿಬಂದ ಭ್ರಷ್ಟಾಚಾರ ಆರೋಪಗಳ ಬಗ್ಗೆ ಚರ್ಚೆ ನಡೆದಿತ್ತು. ಚರ್ಚೆಯಲ್ಲಿ ಭಾಗವಹಿಸಿದ್ದ ಉತ್ಸಾಹಿ ಪತ್ರಕರ್ತರೊಬ್ಬರು ಬಿಜೆಪಿ ನಾಯಕ ಎಲ್. ಕೆ. ಅಡ್ವಾಣಿಯವರ ಬಗ್ಗೆ ಮಾತನಾಡುತ್ತ - ಹವಾಲಾ ಹಗರಣದಲ್ಲಿ ಡೈರಿಯೊಂದರಲ್ಲಿ ತಮ್ಮ ಹೆಸರನ್ನು ಸೂಚಿಸಬಹುದಾದ ಸಂಕೇತಗಳು ಸ್ಫುಟವಾಗಿ (only initials) ನಮೂದಾಗಿದ್ದ ಕಾರಣಕ್ಕೆ ಅಡ್ವಾಣಿ, ಆರೋಪದಿಂದ ಮುಕ್ತನಾಗುವ ತನಕ ಚುನಾವಣಾ ರಾಜಕಾರಣದಿಂದ ದೂರ ಉಳಿದರು. ಅಂತಹ ನೈತಿಕತೆ ಈಗಿನ ಯಡಿಯೂರಪ್ಪನಿಗೆಲ್ಲಿದೆ ಎಂದು ಟೀಕಿಸಿದ್ದರು. ಆ ಮಾತು ಇಂದು ಅದೇಕೋ ನೆನಪಾಯಿತು.

21 comments:

 1. Koneya maathu ishtavayitu :) .. R.B, V.B ge hone hotthu 'PRAKYATA' patrakartaru enadru maduvarendu expect madabahuda ! .. illa ansatthe ..

  ReplyDelete
 2. very true and interesting topic! today morning i also going through Prajavani paper there are more than 50 names who took a bribe... Lets wait and watch how govt. will take action on them....

  ReplyDelete
 3. ರೀ ಸಂಪಾದಕರೆ, ಭ್ರಷ್ಟಾಚಾರ ಆರೋಪಗಳ ಚರ್ಚೆ ಮಾಡಲು ಭ್ರಷ್ಟೇತರ ಜನರೇ ಆಗಬೆಕ? ಈಗ ನೋಡಿ ನಮ್ಮ ಯಡಿಯೂರಪ್ಪನವರೇ ಸ್ವತಹ ಅಣ್ಣಾ ಅವರ ಬೆಂಬಲಕ್ಕೆ ನಿಂತಿಲ್ಲವೇ? ತಪ್ಪೇನು? ಪಾಪ, ತಪ್ಪೇ ಇಲ್ಲದೆ ರಾಜೀನಾಮೆ ಕೊಟ್ಟಿದ್ದಾರೆ, ಇದನ್ನು ಮಾಡಬೇಡ ಅಂದ್ರೆ ಹೇಗೆ ಸ್ವಾಮಿ? ನಮ್ಮ ಮಾಜಿ ಮುಖ್ಯ ಮಂತ್ರಿಗಳೇ ಹೀಗಿರುವಾಗ ನೀವು ನೈತಿಕತೆ ಬಗ್ಗೆ ಯಾರನ್ನು ಪ್ರಶ್ನಿಸಲು ಹೊರಟಿದ್ದೀರಿ? ಇಲ್ಲಿ ಯಾರ ನೈತಿಕತೆಯನ್ನು ಯಾರು ಪ್ರಶ್ನಿಸುವ ಹಾಗಿಲ್ಲ.ವಾಕ್ ಸ್ವಾತಂತ್ರ ಇಲ್ವಾ? ರೈಟ್ ಟು ಪ್ರೊಟೆಸ್ಟ್ ಎಗೆನ್ಸ್ಟ್ corruption ಇಲ್ವಾ? ನೋಡಿ ನಮ್ಮ ಬುಡದಲ್ಲೇ ಏನೇ ಭ್ರಷ್ಟತನ ಅಡಗಿದ್ದರೂ ನಮಗೆ ಭ್ರಷ್ಟಾತೀತ ಭಾರತ ಬೇಕು, ನೀವು ಸುಮ್ಮನೆ ಜನರ ದಿಕ್ಕು ತಪ್ಪಿಸಬೇಡಿ, ನಮಗೆ ಬದಲಾವಣೆ ಬೇಕು ಈಗಿಂದೀಗಲೇ ಬೇಕು, ವೈಯಕ್ತಿಕ ಭ್ರಷ್ಟತೆ ನಿವಾರಣೆ ಆಗದೆ ನಮ್ಮ ಭಾರತ ಭೂಮಿಯನ್ನು ಅದ್ಹೇಗೆ ಭ್ರಷ್ಟ ರಹಿತ ರಾಷ್ಟ್ರವನ್ನಾಗಿ ಮಾಡಲು ಸಾಧ್ಯವೋ ದೇವನೇ ಬಲ್ಲ.

  ReplyDelete
 4. ಇಷ್ಟು ದಿವಸ ಪತ್ರಿಕೆಗಳಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನು ನೋಡುತ್ತಿದ್ದೆವು. ಈಗ ಈ ಪಟ್ಟಿ. ಚೆನ್ನಾಗಿದೆ! ಈ ಗಣಿ ಅಮೇಧ್ಯದ ವಾಸನೆ ಈಗ ಪತ್ರಿಕಾ ಕಚೇರಿಗಳ A.C ರೂಮುಗಳಿಂದಲೂ ಹೊರಬರುತ್ತಿದೆ. ಈಗ ಎಲ್ಲರಲ್ಲಿ ಮೂಡಿರುವ ಶಂಕೆ ನಿಜವಾದರೆ ಅದಕ್ಕಿಂತ ಹೇಸಿಗೆ ಮತ್ತೊಂದಿಲ್ಲ. ನ್ಯಾಯ, ಧರ್ಮ, ವ್ಯಕ್ತಿತ್ವ ವಿಕಸನ ಅಂತೆಲ್ಲಾ ಪಾದ್ರಿಗಳ ತರಹ ಧರ್ಮಬೋಧೆ ಮಾಡುವ, ಪುಸ್ತಕಗಳನ್ನು ಕುರಿ ಹಿಕ್ಕೆಗಳಂತೆ ಉದುರಿಸುವ ಮಂದಿ ಈಗ ’ಕೇಳಿ’ "ಕೇಳ್ರಪ್ಪೋ ಕೇಳಿ...!" ಎಂದು ಅದೆಷ್ಟೇ ಅವಲತ್ತುಕೊಂಡರೂ ಕೈಗೆ- ಮುಸುಡಿಗೆ ಅಂಟಿಕೊಂಡ ಹೇಸಿಗೆ ಹೋಗುವುದಿಲ್ಲ. - ಅರುಣ್‌ ಕಾಸರಗುಪ್ಪೆ

  ReplyDelete
 5. ಹೌದು ನಾನು ಓದಿದೆ.. ಈಗ ಆರ್.ಬಿ. ಮತ್ತು ವಿ.ಬಟ್ ನೈತಿಕ ಹೊಣೆ ಹೊತ್ತು ತಮ್ಮ ಹುದ್ದೆ(?) ಗಳಿಗೆ ರಾಜಿನಾಮೆ ಕೊಡುತ್ತಾರೆಯೇ? ನನ್ನ ಮಿತ್ರನೊಬ್ಬ ಈ ಮುಂಚೆಯೇ ಈ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದ. ಅದು ನಿಜವಾಯಿತು..

  ReplyDelete
 6. ಆ ವರದಿ ಮೂಲೆಗುಂಪಾಗಬಹುದು ಅನ್ನುವಾಗ ಸಂಪಾದಕೀಯ ಅದನ್ನು ಚರ್ಚೆಗೆ ತಂದಿದ್ದು ಸಂತೋಷದ ವಿಷಯ. ಪ್ರಜಾವಾಣಿ ಪ್ರಯತ್ನ ಉತ್ತಮವಾಗಿದೆ. ಆದರೆ ಇಡೀ ವರದಿಯನ್ನು ಯಾರಿಗೂ ಅರ್ಥವಾಗದ ಭಾಷೆಯಲ್ಲಿ ಪ್ರಜಾವಾಣಿ ಬರೆದಿರುವುದರ ಹಿಂದಿನ ಒಳಗುಟ್ಟು ಅರ್ಥವಾಗಲಿಲ್ಲ. ಪಟ್ಟಿ ನೋಡಿ ಪತ್ರಕರ್ತರ ಹಣೆ ಬರಹ ತಿಳಿಯಿತು. ಪ್ರಜಾವಾಣಿ ಕಡೆವರೆಗೂ ವರದಿ ಪ್ರಕಟಿಸೋ ಬೇಕೋ ಬೇಡವೋ ಅನ್ನುವ ಗೊಂದಲದಿತ್ತು ಅನ್ನಿಸಿತ್ತೆ. ಈ ವರದಿಯನ್ನು ಪ್ರಜಾವಾಣಿ ಫಾಲೋಅಪ್‌ ಮಾಡಬಹುದಾ? ಅಥವಾ ಅದರ ಬಾಯಿಯನ್ನು ಮುಚ್ಚಿಸುವ ಯತ್ನ ನಡೆಯಬಹುದಾ? ಕಡೇ ಪಕ್ಷ ಸಂಪಾದಕೀಯವಾದ್ರೂ ಈ ವರದಿ ಪಾಲೋ ಅಪ್‌ ಮಾಡುವ ಪ್ರಯತ್ನ ಮಾದುತ್ತಾ?

  ReplyDelete
 7. maadhyamagaleega maanaviya, samajika,naithika neleyinda horabandu kaasinddone bass emba dhoranege olagaagibittive.alliruvavarige janara samasyegalige spandisuvudakkinthalu adhikaarastharaannu koorisikondu harate hodeyode mukhyavagide. eegina cinemagalu bere channagillvaddarinda janaru anivaaryavagi ivara charchegalannu nodauththiddarenisuththde.inthahavarinda naithikathe nireekshisalau sadhyavilla.

  nidhanavaagiyadaru madhyamagalannu serikondu adara moola ashakke kolli iduththiruva kelavara mukhavada kalachuththruvudu samajada arogyada dhrustiyinda olleyadu.
  innadaru madhyamgalu badalagali.
  ideega thaane bidugadeyagiruva JOGAYYA cinemadalli kooda Madhyamagala mukakke mangalaarathi eththalagide.jogayya cinemadalli iruva sambhaashanegalannu maadhyamdavaru hege sweekarisuththaarembude kuthuhalakaari. biddaroo jatti meese mannagilla embanthe sittugolluththaavo, illa thappugalannu thiddikolluva manassu maduththavo nodabekide.
  madhyamagalalige hosadaagi kaaliduva prathibhaavantha,samajada bagge kalakaliyinda yochisuva yuva patrakartarannu madhyamada parisara daarithappisuththide embudu viparyasa. eegina maadyamagala dhorane kandu patrakodyamada hiriya jeevagalu ghaasigondilladilla.

  ReplyDelete
 8. ಅಣ್ಣಾ ಹಜಾರೆ ಹೋರಾಟ ಬೆಂಬಲಿಸಿ ಎಂದು ಮಾಧ್ಯಮಗಳು ಕರೆ ನೀಡುವುದಕ್ಕೆ ಮುಂಚಿತವಾಗಿ ಮಾಧ್ಯಮಗಳು ಭ್ರಷ್ಟಾಚಾರ ಮುಕ್ತವಾಗಬೇಕು. ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾದ ಪತ್ರಿಕಾ ರಂಗ ಭ್ರಷ್ಟಾಚಾರ ಮುಕ್ತವಾಗಿದ್ದಾಗ ಮಾತ್ರ ಜನರಿಗೆ ತಿಳುವಳಿಕೆ ಹೇಳಲು ಸಾಧ್ಯ. ಜನಸಾಮಾನ್ಯರು, ರಾಜಕಾರಣಿಗಳು ತಪ್ಪು ಮಾಡಿದಾಗ ಪೈಪೋಟಿಗಿಳಿದು ಬ್ರೇಕಿಂಗ್ ಮಾಡುವ ನ್ಯೂಸ್ ಚಾನೆಲ್, ಪುಟಗಟ್ಟಲೇ ಬರೆಯುವ ಪತ್ರಿಕೆಗಳು ಏಕೆ ಸುಮ್ಮನೇ ಕುಳಿತಿವೆ? ಇಂತಹ ಸುದ್ದಿ ವಿಶ್ವಾಸಾರ್ಹ ಪತ್ರಿಕೆಯೊಂದರಲ್ಲೇ ಬಂದರೆ ಸಾಕೇ??
  ಮಾಧ್ಯಮದವರು ತಪ್ಪು ಮಾಡಿದಾಗ ಮತ್ತೊಂದು ಮಾಧ್ಯಮದವರು ಅದನ್ನು ಮುಚ್ಚಿಹಾಕಲು ಪ್ರಯತ್ನಪಡಬಾರದು, ಪ್ರಾಮಾಣಿಕವಾಗಿ ಬಯಲು ಮಾಡಬೇಕು. ಆಗ ಮಾತ್ರ ಮಾಧ್ಯಮದಲ್ಲಿ ಭ್ರಷ್ಟಾಚಾರ ತೊಡೆದುಹಾಕಲು ಸಾಧ್ಯವಾದೀತು. ಇದೀಗ ಗಣಿ ಹೇಸಿಗೆ ತಿಂದವರು ನೈತಿಕ ಹೊಣೆಹೊತ್ತು ಹೊರ ಬರಬೇಕಿದೆ. ಇಲ್ಲವೇ ಅವರನ್ನು ಕುತ್ತಿಗೆ ಪಟ್ಟಿ ಹಿಡಿದು ಹೊರಕ್ಕೆ ದಬ್ಬಬೇಕಿದೆ. ಒಂದು ವೇಳೆ ಆರೋಪ ಸುಳ್ಳಾದರೆ ಆರೋಪ ಮುಕ್ತರಾಗಿ ಮತ್ತೆ ಅದೇ ಸ್ಥಾನದಲ್ಲಿ ಕುಳಿತು ಜನರಿಗೆ ಬುದ್ದಿ ಹೇಳಲಿ, ನಾವು ಕೇಳುತ್ತೇವೆ.
  ಕೇಂದ್ರ ಸರ್ಕಾರ , ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ, ರಾಜ್ಯ ಸರ್ಕಾರ ಹಾಗೂ ಲೋಕಾಯುಕ್ತ ಇದರ ಬಗ್ಗೆ ತನಿಖೆ ನಡೆಸಲು ಮುಂದಾಗಲಿ. ಪತ್ರಕರ್ತರ ಭ್ರಷ್ಟಾಚಾರದ ಬಗ್ಗೆ ಜನರು ಬೀದಿಗಿಳಿದು ಹೋರಾಟ ಮಾಡುವಂತಾಗಲಿ.
  ಜೈ ಅಣ್ಣಾ...!!

  ReplyDelete
 9. ಅಣ್ಣಾ ಹಜಾರೆ ಹೋರಾಟ ಬೆಂಬಲಿಸಿ ಎಂದು ಮಾಧ್ಯಮಗಳು ಕರೆ ನೀಡುವುದಕ್ಕೆ ಮುಂಚಿತವಾಗಿ ಮಾಧ್ಯಮಗಳು ಭ್ರಷ್ಟಾಚಾರ ಮುಕ್ತವಾಗಬೇಕು. ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾದ ಪತ್ರಿಕಾ ರಂಗ ಭ್ರಷ್ಟಾಚಾರ ಮುಕ್ತವಾಗಿದ್ದಾಗ ಮಾತ್ರ ಜನರಿಗೆ ತಿಳುವಳಿಕೆ ಹೇಳಲು ಸಾಧ್ಯ. ಜನಸಾಮಾನ್ಯರು, ರಾಜಕಾರಣಿಗಳು ತಪ್ಪು ಮಾಡಿದಾಗ ಪೈಪೋಟಿಗಿಳಿದು ಬ್ರೇಕಿಂಗ್ ಮಾಡುವ ನ್ಯೂಸ್ ಚಾನೆಲ್, ಪುಟಗಟ್ಟಲೇ ಬರೆಯುವ ಪತ್ರಿಕೆಗಳು ಏಕೆ ಸುಮ್ಮನೇ ಕುಳಿತಿವೆ? ಇಂತಹ ಸುದ್ದಿ ವಿಶ್ವಾಸಾರ್ಹ ಪತ್ರಿಕೆಯೊಂದರಲ್ಲೇ ಬಂದರೆ ಸಾಕೇ??
  ಮಾಧ್ಯಮದವರು ತಪ್ಪು ಮಾಡಿದಾಗ ಮತ್ತೊಂದು ಮಾಧ್ಯಮದವರು ಅದನ್ನು ಮುಚ್ಚಿಹಾಕಲು ಪ್ರಯತ್ನಪಡಬಾರದು, ಪ್ರಾಮಾಣಿಕವಾಗಿ ಬಯಲು ಮಾಡಬೇಕು. ಆಗ ಮಾತ್ರ ಮಾಧ್ಯಮದಲ್ಲಿ ಭ್ರಷ್ಟಾಚಾರ ತೊಡೆದುಹಾಕಲು ಸಾಧ್ಯವಾದೀತು. ಇದೀಗ ಗಣಿ ಹೇಸಿಗೆ ತಿಂದವರು ನೈತಿಕ ಹೊಣೆಹೊತ್ತು ಹೊರ ಬರಬೇಕಿದೆ. ಇಲ್ಲವೇ ಅವರನ್ನು ಕುತ್ತಿಗೆ ಪಟ್ಟಿ ಹಿಡಿದು ಹೊರಕ್ಕೆ ದಬ್ಬಬೇಕಿದೆ. ಒಂದು ವೇಳೆ ಆರೋಪ ಸುಳ್ಳಾದರೆ ಆರೋಪ ಮುಕ್ತರಾಗಿ ಮತ್ತೆ ಅದೇ ಸ್ಥಾನದಲ್ಲಿ ಕುಳಿತು ಜನರಿಗೆ ಬುದ್ದಿ ಹೇಳಲಿ, ನಾವು ಕೇಳುತ್ತೇವೆ.
  ಕೇಂದ್ರ ಸರ್ಕಾರ , ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ, ರಾಜ್ಯ ಸರ್ಕಾರ ಹಾಗೂ ಲೋಕಾಯುಕ್ತ ಇದರ ಬಗ್ಗೆ ತನಿಖೆ ನಡೆಸಲು ಮುಂದಾಗಲಿ. ಪತ್ರಕರ್ತರ ಭ್ರಷ್ಟಾಚಾರದ ಬಗ್ಗೆ ಜನರು ಬೀದಿಗಿಳಿದು ಹೋರಾಟ ಮಾಡುವಂತಾಗಲಿ.
  ಜೈ ಅಣ್ಣಾ...!!

  ReplyDelete
 10. ಹೇಳೋದು ಆಚಾರ, ತಿನ್ನೋದು ಬದನೇಕಾಯಿ ಅಂದ್ರೆ ಇದೇನಾ? ರಾಜಕಾರಣಿಗಳ, ತಪ್ಪಿತಸ್ಥರ ಬಗ್ಗೆ ಪುಟಗಟ್ಟಲೆ ಬರೆಯುವ, ಗಂಟೆಗಟ್ಟಲೆ ಮಾತನಾಡುವ ಪತ್ರಕರ್ತರೇ ಹೀಗೆ ಮಾಡಿದರೆ ಹೇಗೆ ಸ್ವಾಮಿ? ಬರೀ ಇವರಷ್ಟೇ ಅಲ್ಲಾ, ೭೫ ಪತ್ರಕರ್ತರು ಗಣಿ ಕಪ್ಪ ಪಡೆದಿದ್ದಾರೆ, ಇವರಲ್ಲಿ ಹಲವರು ವಿವಿಧ ಪತ್ರಿಕೆ, ನ್ಯೂಸ್ ಚಾನಲ್ ಗಳಲ್ಲಿ ಪ್ರಮುಖ ಹುದ್ದೆಯಲ್ಲಿರುವವರೇ ಇದ್ದಾರೆಂಬುದು ಬೇಸರದ ವಿಚಾರ. ಇವರ ಬಗ್ಗೆ ಬರೆಯುವವರಾದರೂ ಯಾರು? ಬರೆದರೂ ಪ್ರಕಟಿಸುತ್ತಾರಾ? ಕೋಟ್ಯಂತರ ರೂ ಮೌಲ್ಯದ ಅಕ್ರಮ ಆಸ್ತ್ತಿ ಗಳಿಸಿ ಐಶಾರಾಮಿ ಕಾರುಗಳಲ್ಲಿ ಓಡಾಡುವ ಇವರಿಗೆಲ್ಲ ಶಿಕ್ಷೆ ಆದ್ಗೋದು ಯಾವಾಗ? ಇಂಥ ಸುದ್ದಿ ಬಯಲಿಗೆಳೆದ ಯು.ವಿ. ಸಿಂಗ್, ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ ಗೆ ಜೈ ಎನ್ನಲೇಬೇಕು.

  ReplyDelete
 11. Thappaithu, thidkotheevi!!!
  Nodthairi, Innu yesthyesthu thinddidive!!!!

  ReplyDelete
 12. Please inform us who is RB, V. Bhat and G G Reddy sir, Sitting at Delhi I am curious to Know,

  ReplyDelete
 13. @ ಬಿಳಿಮಲೆ- ವಿ.ಬಿ., ಆರ್. ಬಿ. ಯಾರೆಂದು ತಿಳಿಯಲು ಇಂದಿನ (೨೦ ಆಗಸ್ಟ್) ಕರಾವಳಿ ಅಲೆ ಪತ್ರಿಕೆಯ ೮ನೆ ಪುಟ ನೋಡಬಹುದು. ಪತ್ರಿಕೆಯ ವೆಬ್ ವಿಳಾಸ karavaliale.net

  ReplyDelete
 14. ಹಸಿವಾಯ್ತು, ತಿಂದ್ಕೊಂಡಿದ್ವಿ....
  ನೋಡ್ತಾ ಇರಿ, ಏನೆಲ್ಲ ಕಕ್ತೀವಿ!!

  ಮೊದ್ಲೇ ಹೇಳಿರ್ಲಿಲ್ವೆ, ವಿಕದಲ್ಲಿ ಮಾಡಿದ್ದು ಶ್ರಾದ್ಧದ ಊಟ ಅಂತ?
  ಈಗ್ಲಾದ್ರೂ ಗೊತ್ತಾಯ್ತಲ್ಲ, ಇದೆಲ್ಲ ಗಣಿಹಣದ್ದೇ ಕಾಣಿಕೆ ಅಂತ?

  ReplyDelete
 15. ಅಪ್ರಕಟಿತ `ಕೇಳ್ರಪ್ಪೋ ಕೇಳಿ’: http://column9.wordpress.com/2011/08/20/kelrappo-keli/

  ReplyDelete
 16. I heard that this case is forwarded to Directorate of Revenue Intelligence(DRI).

  ReplyDelete
 17. ತಪ್ಪಾಗಿದೆ
  ತಿದ್ಕೊತಾರೆ ಬಿಡಿ

  ReplyDelete
 18. ಗಣಿಯ ಕಳ್ಳ ದುಡ್ಡು ಲಜ್ಜೆ ಬಿಟ್ಟು ಅಂಚಿಕೊಂಡ ಜರ್ನಲಿಸ್ಟು

  ReplyDelete
 19. In currect Edition of Hai Bnagalore Ravi Belagere has given Explanation for the above said subject. interested people can check up....

  ReplyDelete
 20. ಕಣ್ಣಿಗೆ ಗೋಚರಿಸ್ತೀರೋ ಕರೆಪ್ಟ್, ಕರೆಕ್ಟ್ ಎಡಿಸನ್ ನೋಡೋದ್ರಿಂದ ಬಗೆಹರಿಯುತ್ತಾ?

  ReplyDelete
 21. Is anything happening.
  When all are corrupt and unethical what we can expect ?!
  Let us see what COURTs will do !!!

  ReplyDelete