Friday, September 2, 2011

ಬಳ್ಳಾರಿ ಪತ್ರಕರ್ತರೇಕೆ ಗಣಿಗಾರಿಕೆ ಆರಂಭಕ್ಕೆ ಒತ್ತಾಯಿಸುತ್ತಿದ್ದಾರೆ?


ಬಳ್ಳಾರಿ ಪತ್ರಕರ್ತರು ದಿಢೀರನೆ ಆಕ್ಟಿವಿಸಮ್‌ಗೆ ಇಳಿದಿದ್ದಾರೆ. ಗಣಿಗಾರಿಕೆ ಪರಿಣಾಮಗಳ ಅಧ್ಯಯನಕ್ಕೆಂದು ಸುಪ್ರೀಂ ಕೋರ್ಟ್ ನೇಮಿಸಿರುವ ಸಮಿತಿಗೊಂದು ಮನವಿ ಪತ್ರ ಸಲ್ಲಿಸಿದ್ದಾರೆ. ಬಳ್ಳಾರಿಯಲ್ಲಿ ಮತ್ತೆ ಗಣಿಗಾರಿಕೆ ಶುರುವಾಗಬೇಕು ಎಂಬುದು ಪತ್ರಕರ್ತರ ಬೇಡಿಕೆ. ಈ ಬೇಡಿಕೆಗೆ ಪೂರಕವಾದ ಮಾಹಿತಿಗಳನ್ನು ನಾಲ್ಕು ಪುಟಗಳ ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.

ಎಲ್ಲ ಸರಿ, ಬಳ್ಳಾರಿ ಜರ್ನಲಿಸ್ಟ್ ಗಿಲ್ಡ್ ಎಂಬ ಸಂಸ್ಥೆಗೆ ಈ ಉಸಾಬರಿ ಯಾಕೆ ಬೇಕಿತ್ತು? ಗಣಿ ಉದ್ದಿಮೆಯನ್ನು ನಂಬಿಕೊಂಡ ಬಡವರ ಪರ ಇವರ ಕಾಳಜಿ ಇರುವುದೇ ಆದರೆ ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ಈ ಕುರಿತು ವರದಿ ಮಾಡಿ ಸಮಸ್ಯೆಯ ಆಳ-ಅಗಲವನ್ನು ಬಿಚ್ಚಿಡಬಹುದಿತ್ತಲ್ಲವೇ?

ಪತ್ರಕರ್ತ ಸಂಘಟನೆಗಳು ಹೆಚ್ಚಾಗಿ ಬಾಯಿ ಬಿಡುವುದು ಪತ್ರಕರ್ತರ ಮೇಲೆ ಹಲ್ಲೆ ನಡೆದ ಸಂದರ್ಭದಲ್ಲಿ, ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ಉದ್ಭವವಾದಾಗ ಮಾತ್ರ. ಇದೇ ಸರಿ ಎಂಬುದು ನಮ್ಮ ನಿಲುವೇನೂ ಅಲ್ಲ. ಆದರೆ ಬಳ್ಳಾರಿ ಪತ್ರಕರ್ತರು ಹಠಾತ್ತನೆ ಗಣಿ ನಿಷೇಧದ ವಿಷಯವನ್ನು ಇಷ್ಟೊಂದು ಗಂಭೀರವಾಗಿ ಪರಿಗಣಿಸಿದ್ದೇಕೆ ಎನ್ನುವುದು ಪ್ರಶ್ನೆ.

ಬಳ್ಳಾರಿಯಲ್ಲಿ ಗಣಿ ಕಂಪೆನಿಗಳು ಭೂಮಿಯನ್ನೇ ಅಗೆದು ನುಂಗಿದಾಗ, ಇಡೀ ಪರಿಸರವೇ ನಾಶದ ಅಂಚಿಗೆ ಸಾಗಿದಾಗ, ಕರ್ನಾಟಕದ ಗಡಿರೇಖೆಯನ್ನೇ ಅಳಿಸಿ ಅಕ್ರಮ ದಂಧೆ ನಡೆಸಿದಾಗ, ಗಣಿಗಾರಿಕೆಯಿಂದಾಗಿ ನಾನಾ ಖಾಯಿಲೆಗಳಿಗೆ ಜನರು ತುತ್ತಾದಾಗ, ಗಣಿದಂಧೆಯ ನೆರಳಲ್ಲಿ ನೂರಾರು ಮಂದಿ ಹತ್ಯೆಗೀಡಾದಾಗ... ಇಂಥದೇ ಭೀಕರ ಸನ್ನಿವೇಶಗಳು ಎದುರಾದಾಗ ಬಳ್ಳಾರಿ ಜರ್ನಲಿಸ್ಟ್ ಗಿಲ್ಡ್ ಇಂಥ ಆಕ್ಟಿವಿಸಂ ತೋರಿತ್ತೇ? ಬಳ್ಳಾರಿ ಗೆಳೆಯರೇ ಹೇಳಬೇಕು.

ಗಣಿದಂಧೆಕೋರರು ರಾಜಾರೋಷವಾಗಿ ಕೆಲ ಪತ್ರಕರ್ತರ ಮೇಲೇ ಹಲ್ಲೆ ನಡೆಸಿದರು. ವಿನಾಕಾರಣ ಏಟು ತಿಂದ ಪತ್ರಕರ್ತರಿಗೆ ಕಡೆಗೂ ನ್ಯಾಯ ದೊರೆಯಲಿಲ್ಲ. ಆರೋಪಿಗಳಿಗೆ ಶಿಕ್ಷೆಯೂ ಆಗಲಿಲ್ಲ. ಈ ಪ್ರಕರಣಗಳನ್ನಾದರೂ ಬಳ್ಳಾರಿ ಜರ್ನಲಿಸ್ಟ್ ಗಿಲ್ಡ್ ತಾರ್ಕಿಕ ಹಂತಕ್ಕೆ ಕೊಂಡೊಯ್ದು ಗಣಿಕಳ್ಳರ ದಾದಾಗಿರಿಯ ವಿರುದ್ಧ ನಿಲ್ಲುವ ಕೆಲಸವನ್ನೂ ಮಾಡಿರಲಿಲ್ಲ.

ಇದೇ ಮನವಿಯನ್ನು ಲಾರಿ ಮಾಲೀಕರೋ, ಗಣಿ ಕೂಲಿ ಕಾರ್ಮಿಕರೋ ಅಥವಾ ಈ ದಂಧೆಗೆ ಸಂಬಂಧಿಸಿದ ಇನ್ಯಾವುದೇ ಗುಂಪು ಕೊಟ್ಟಿದ್ದರೆ ಅದಕ್ಕೊಂದು ಅರ್ಥ, ಸಮರ್ಥನೆ ಇರುತ್ತಿತ್ತು. ಪತ್ರಕರ್ತರ ಸಂಘಕ್ಕೆ ಯಾಕೆ ಈ ಕಾಳಜಿ ಉದ್ಭವಿಸಿತು? ಪತ್ರಕರ್ತರ ವೃತ್ತಿಗೂ ಗಣಿಗಾರಿಕೆಗೂ ಏನು ಸಂಬಂಧ?

ಈಗ ಗಣಿಗಾರಿಕೆ ಆರಂಭವಾಗಬೇಕು ಎಂದು ಸಂಘಟನೆ ಯಾಕೆ ಹೇಳುತ್ತಿದೆ? ಬಳ್ಳಾರಿ ಪತ್ರಕರ್ತ ಗೆಳೆಯರು ಉತ್ತರಿಸುವರೆ?





22 comments:

  1. ಎನ್ ಸಂಪಾದಕರೇ ಎಲ್ಲಾ ಗೊತ್ತಿದ್ದೂ ಈ ರೀತಿ ಪ್ರಶ್ನೆ ಕೇಳ್ತೀರಲ್ಲಾ? ಡೆಕ್ಕನ್ ಹೆರಾಲ್ಡನಲ್ಲಿ ಹೀಗಂತ ಬರೆದಿದ್ದಾರೆ, ಪ್ರಜಾವಾಣಿನಲ್ಲಿ ಹಾಗಂತ ಬರೆದಿದ್ದಾರೆ ಅಂತ ಹೇಳಿ ಈಗ ಮತ್ತೆ ಪ್ರಶ್ನೆ ಕೇಳ್ತಾ ಇದ್ದೀರಲ್ಲಾ?

    ReplyDelete
  2. Gani udyamigalinda hotte tumba tindirabeku.

    ReplyDelete
  3. ಎಲ್ಲಾ ಗೊತ್ತಿದ್ದೂ ಒಮ್ಮೊಮ್ಮೆ ಬೆಂಕಿಗೆ ತುಪ್ಪ ಸುರಿಯೋ ತರ ಆಡ್ತೀರಪ್ಪ ನೀವೂ, ಇನ್ನೇನ್ ಮಾಡ್ಬೇಕು ಹೇಳಿ ಇರೋದಕ್ಕೆ ಮನೆ, ಹೋಡಾಡಲಿಕ್ಕೆ ಸ್ಕೋಡಾ, ವರ್ಕಿಂಗ್ ಕ್ಯಾಪಿಟಲ್, ಮಂತ್ಲಿ ಎಕ್ಸ್ಪೆಂಡಿಚರ್ ವಗೈರೆ ವಗೈರೆನೆಲ್ಲಾ ನೋಡ್ಕೊಳ್ಳು ಇಂತಹವರ ಬಗೆ ಇಷ್ಟು ಕಾಳಜಿ ತೋರಿಸಲಿಲ್ಲ ಅಂದ್ರೆ ಆ ಭಗವಂತ ಮೆಚ್ಚತಾನ ನೀವೇ ಹೇಳಿ,

    ReplyDelete
  4. hai
    and in addition to it. please try to get a copy of Lokayukth's report on Journalist who made illegal money in karnataka. this report is with Lokayuktha and its not been made public since last one and half year. please try to get it and publish it...
    this will be great help to kannada news papers readers and journalists..

    ReplyDelete
  5. ಮತ್ತಿನ್ಯಾಕೆ ಇರುತ್ತೆ ತಿಂಗಳಿಗೆ ಬಾರೋ ಮಾಮೂಲು ನಿಂತೊಯ್ತಲ್ಲ ಅದಕ್ಕೆ ಇರಬೇಕು. ನೀವು ಹೇಳಿದ ಹಾಗೆ ಈ ಮನವಿಯನ್ನು ಕಾರ್ಮಿಕ ವರ್ಗ ಮಾಡಿದ್ದರೆ ಅದಕ್ಕೊಂದು ಅರ್ಥ ಇರುತಿತ್ತು . ಪತ್ರಕರ್ತರಿಗೂ ಗಣಿಗೂ ಎಲ್ಲಿಂದೆಲ್ಲಿಯ ಸಂಭಂದ!!!.

    ReplyDelete
  6. ಪಾಪ ಬಳ್ಳಾರಿಯ ಜರ್ನಲಿಸ್ಟ್ ಗಿಲ್ಡ್ ಬೇರೆ ಏನು ಮಾಡಲು ಸಾಧ್ಯ. ಗಣಿಯ ಗುಣಾಕಾರ ಚೆನ್ನಾಗಿ ಆಗಿರಬೇಕು. ತಿಂದು ತೇಗಿದವರು ಕಕ್ಕಬೇಕಲ್ಲವೇ? ಅದಕ್ಕೆ ಹಾಗೆ ಮಾಡಿದ್ದಾರೆ ಅಷ್ಟೆ. ನಿತ್ಯವೂ ಓಡಾಡಲು ಕಾರು ಬೇಕು. ಪೆಟ್ರೋಲ್ ಬೇಕು. ಇವರನ್ನು ಪರಿಸರ ಪ್ರಿಯರು ಅನ್ನಬೇಕು.ಕೂಲಿ ಕಾರ್ಮಿಕರ ಪರವಾಗಿ ಕೆಲಸ ಮಾಡಿದ್ದಾರೆ. ಏನೋ ತಿಳಿಯದೆ ತಪ್ಪು ಮಾಡಿದ್ದಾರೆ ಬಿಡಿ
    ಸಿದ್ದಾರ್ಥ

    ReplyDelete
  7. ivaru gani dhani galigala paravagi iro gani patrakartaru.

    ReplyDelete
  8. Hannakaki intha janagalu, sangagalu hesige tinno kelasa adaru madutaro... Janara kasta ella kade irutadhe, adhu gani naditidru kasta ididhe, kayile ididhe.. gani nintru kasta tappidalla janagalige.. mukyavagi eh Gani Malikarige tumbha kasta, yakandre avarige estu duddu bandru innu beku beku antirutare.. tayi edhe bagedhu tinnuvantha janagalu avaru.. kelsa idhu aldhe innodhu sigutadhe adare namma prakruthi, namma nela, jala, kadu, shudha gali, prani pakshi iruvudhe..??? inadaru namma jana tilkobeku, eh anyayada virudha dani yetha beku, illavadare yaro swarthakke ellaru baliyaga beku.. konege kudiyalu neru, usiradallu olle gali kuda sigolla..:(:(:(.. intha ketta journalist galna bahiskarisa beku.. duddu kodatare antha yenbekadru mado janagalu ivru...

    ReplyDelete
  9. gani dhanigalinda seve padeda namma bengalurina mahan patrakartaru saha ivara bembalakke nintiddarante?

    -Vinayaka

    ReplyDelete
  10. ದೊಡ್ಡವರು ಏನು ಮಾಡಿದರು ತಪ್ಪಲ್ಲ. ಎಕೆಂದರ ಅವರೆಲ್ಲ ದೊಡ್ಡವರು. ಕಿರಿಯರಿಗೆ ಮಾರ್ಗದರ್ಶಕರು. ಆರ್ಬಿ, ವಿಭಟ್ ಇಂಥವರೆಲ್ಲ ಜಗತ್ತಿಗೆ ಬುದ್ದಿ ಹೇಳುತ್ತಾರೆ. ತಾವು ಮಾತ್ರ ಒರಳಲ್ಲಿ ಊಸುತ್ತಾರೆ. ಏಕೆಂದರೆ ಅವರು ಬುದ್ದಿವಂತರು. ದೊಡ್ಡವರು -ಮರಿಯಣ್ಣ

    ReplyDelete
  11. ಇದನ್ನ ಬಹಿರಂಗವಾಗಿ ವಿರೋಧಿಸಿ ಮೊದಲು ನನ್ನ ಫೇಸ್ ಬುಕ್ ನಲ್ಲಿ ಬರೆದದ್ದು, ನಾನು. ಇದಕ್ಕಾಗಿ ಅನೇಕ ಪತ್ರಕತಱರ ಜೊತೆಗೆ ಚಚೆಱ ಕೂಡ ಮಾಡಿದ್ದೇ. ಅವರು ಯಾರ ಬಳಿ ದುಡ್ಡು ಹೊಡೆದಿದ್ದಾರೆ ಎಂದು ಆರೋಪ ಮಾಡುವ ಬದಲು ಪತ್ತೆ ಮಾಡಿ ದಾಖಲೆ ಸಮೇತ ಮಾತನಾಡಿ ಎಂದು ಸಲಹೆ ಮಾಡಿದ್ದರು. ಯಾರು ಯಾವಾಗ ಯಾರ ಬಳಿ ದುಡ್ಡು ಹೊಡೆದಿದ್ದಾರೆ ಎಂಬುದು ಕಾಲಕ್ರಮೇಣ ಗೋತ್ತಾಗಲಿದೆ ಎಂದು ಅನೇಕರು ಸುಮ್ಮನಾಗಿದ್ದಾರೆ. ಹೊರತು ಕೆಲವರು ಮಾಡಿದ ತಪ್ಪಿಗೆ ಇಡೀ ಬಳ್ಳಾರಿಯ ಪತ್ರಕತಱರನ್ನು ದೋಷಿಸುವುದು ಸರಿಯಲ್ಲ

    ReplyDelete
  12. ಪ್ರಿತಿಯ ಸಂಪಾದಕಿಯವರೆ ನಿವು ಕಳಿದ್ದು ಒಂದು ರಿತಿ ನಗು ಬರುತ್ತದೆ... ನಿವೆ ಹೇಳಿ "ಉಪ್ಪು ತಂದ ಮನೆಗೆ ದ್ರೊಹ ಮಾಡಕ್ಕಾಗುತ್ತಾ" ಬಳ್ಳಾರಿ ಪತ್ರಕತರು ಗಣಿ ಮಾಲಿಕರ ಉಪ್ಪನ್ನು ತಿಂದಿದ್ದಾರೆ ಅವರ ರುನವನ್ನು ತಿರಿಸುವ ವೇಳೆ ಬಂದಿದೆ ರುನಾ ತಿರಿಸಲಿ ಬಿಡಿ ಸರ್... ಈಗ ರುನ ತಿರಿಸೊಕೆ ಬರಲಿಲ್ಲಾ ಅಂದರೆ ಮುಂದೆ ಇವರ ಕೈ ಹಿಡುಯುವವರು ಯಾರು,,,,,

    ReplyDelete
  13. ಬಳ್ಳಾರಿಯ ಪತ್ರಕರ್ತರ ಮೈಗೆಲ್ಲ ಗಣಿಯ ಧೂಳು ತುಂಬಿ ಕೆಂಪಗಾಗಿಬಿಟ್ಟಿದೆ. ಇನ್ನು ನಾವಷ್ಟೇ ಬೆಳ್ಳಗೆ ಕಾಣ್ಲಿಕ್ಕಾಗಲ್ಲ ಅಂತ ನಾವು ಗಣಿಯವರು, ಗಣಿಗಾರಿಕೆಗೆ ಅವಕಾಶ ಮಾಡಿಕೊಡೀ ಅಂತ ಕೇಳಿರಬೇಕು ಬಿಡಿ. ಕೈ ಬಾಯಿಗೆಲ್ಲ ಗಣಿಯ ಧೂಳು ಅಂಟಿದಾಗ ಏನ ಮಾಡ್ಲಿಕಾಗತ್ತೆ? ಅನಿವಾರ್ಯವಾಗಿ ಗಣಿಧಣಿಗಳಿಗೆ ಬೆಂಬಲ ಕೊಡಲೇಬೇಕಾಗುತದೆ. ಅಯ್ಯೋ ಪತ್ರಕರ್ತರ ಪರಿಸ್ಥಿತಿಯೇ!

    ReplyDelete
  14. where should journalism will go. it is the best example

    ReplyDelete
  15. ಸ್ವಾಮಿ ನಾಗರಾಜ್ ಕಿರಣಗಿಯವರೆ, ಪತ್ರಕರ್ತರು ನಿಮ್ಮೆದುರಿಗೆ ಬೂಸಿ ಬಿಟ್ಟಿದ್ದಾರಷ್ಟೆ. ರಾಜಕಾರಣಿಗಳ ರೀತಿಯಲ್ಲಿಯೇ ನಾನು ಹಣ ತಿಂದಿದ್ದರೆ ದಾಖಲೆ ತೋರಿಸಿ ಎಂದು ಮಾಧ್ಯಮಗಳ ಮುಂದೆ ಅಬ್ಬರಿಸುತ್ತಾರಲ್ಲ ಹಾಗಾಯ್ತು ಕತೆ. ರಾಜಕಾರಣಿಗಳಿಗಾದರೋ ಲೋಕಾಯುಕ್ತವಿದೆ, ಮಾಹಿತಿ ಹಕ್ಕು ಕಾಯ್ದೆಯಿದೆ. ಪತ್ರಕರ್ತರನ್ನು ಜಾಲಾಡುವ ಯಾವ ಮೀಡಿಯಾ ಇದೆ ಹೇಳಿ ಸ್ವಾಮಿ. ಪತ್ರಕರ್ತರ ಹೆಗಲ ಮೇಲೆ ಕೈಯಿಕ್ಕಲೇ ಎಲ್ಲರೂ ಹೆದರುತ್ತಾರೆ, ಅಂದಾಗ ಹಣ ತಿಂದವರು ಅಬ್ಬರಿಸುವುದು ಸಹಜವೇ. ಪತ್ರಕರ್ತರ ಆಸ್ತಿಪಾಸ್ತಿಗಳನ್ನು ಲೆಕ್ಕ ಹಾಕಿ ಪರಿಶೀಲನೆ ನಡೆಸುವ ಕಾಯ್ದೆ ಬರಲಿ ಆಗ ನೋಡಿ ನಿಜ ಬಣ್ಣ ಬಯಲಾಗುತ್ತದೆ.

    ReplyDelete
  16. ಸಂಪಾದಕರೇ ನೇರವಾಗೇ ಬರಿಬಹುದಿತ್ತು. ಜಾಣ ಪ್ರಶ್ನೆ ಯಾಕೆ ಬೇಕಿತ್ತು ಹೇಳಿ. ಹಾಗಂತ ಬಳ್ಳಾರಿಯಲ್ಲಿರೋ ಎಲ್ಲಾ ಪತ್ರಕರ್ತರೂ 'ಹಂಗೇ' ಅಂತೇನೂ ಇಲ್ಲ. ಆದ್ರೂ ಬೆಂಗಳೂರಿನ ಇನ್ಷಿಯಲ್ ಐಡೆಂಟಿಟಿ ಯ ದೊಡ್ಡ ಮನುಷ್ಯರೇ ಗಣಿ ಮಣ್ಣು ತಿಂದುಡಿರುವಾಗ ಪಾಪ! ದಿನ ಬೆಳಗಾದ್ರೆ ಗಣಿ ಧಣಿಗಳ ಮುಖ ನೋಡೋ ಬಡ ಪತ್ರಕರ್ತರನ್ನ ಧಣಿಗಳು ಖಾಲಿ ಪೀಲಿಯಾಗಿ ತಿರುಗಲು ಬಿಟ್ಟಿದ್ದಾರಾ? ಇನ್ನು ಮನುಷ್ಯನಿಗೆ ಕೃತಜ್ಞತೆ ಇರಬೇಕಲ್ವಾ? ಬಹುಶ: ಪತ್ರಕರ್ತರ ಗಿಲ್ಡ್ ಗೆ ಗಿಲ್ಟ್ ಕಾಡಿರಬೇಕು ಅದಕ್ಕೇ ಪ್ರತ್ಯುಪಕಾರಕ್ಕೆ ಈ ಹಾದಿ ಕಂಡು ಕೊಂಡಿರಬಹುದೇನೋಪ್ಪಾ.. ಯಾರಿಗೊತ್ತು.

    ReplyDelete
  17. Please read those letters carefully. there are various points on which we must look into. Dont rush to the conclusion.

    Some of the newspapers are on wrong side. So can we impose blanket ban of all kind of journalistic activities?

    There are so much iron and steel industries came up. Now what these industries should do? Remember an Iron and steel plant will give thousands of jobs locally while blindly exporting iron ore to china will result in giving those jobs to chinese. So till now we gave jobs to chinese and now can we kill these home grown companies also so that all labourers come to street? And what work these labourers will do once they are out of jobs? They have to live and eat food to live?

    And note the last point. More than 800 crores are collected by forest dept for afforestation. And how much they used it in Bellary district? Why it did not used full amount collected in Bellary district for this area only?Isnt this like taxing only hindu temples by mujarayi dept and distributing the maximum amounts to darghas and churches?

    Dont be cynic and guess and your nose level. Try to think out of box.

    And finally dont call me preacher, and i dont belong to any gani dhani. I am just a bpo worker in Pune.

    Thanks,
    Naveen

    ReplyDelete
  18. patrakartarally bahupalu mandi brastaragiddare.doddavare gani hana vybhicharada hana thindu patrike t v galally adarsha koreyuttare patrike t v galannu nambuvv kala hogide.kamunista patrakartaru castro abhimanigalu ondu saladendu eradu sambanda ittukondiddare

    ReplyDelete
  19. ನಿಮ್ಮ ಪ್ರಶ್ನೆ ಹಾಗೂ ಈ ವಿಚಾರವನ್ನು ಮಂಡಿಸಿರುವ ರೀತಿ ನಿಜಕ್ಕೂ ತೀರಾ Mild ಆಯ್ತು ಅನ್ಸುತ್ತೆ..ಅವರ‍್ಯಾಕೆ ಗಣಿಗಾರಿಕೆಯನ್ನು ಮರುಪ್ರಾರಂಭಿಸುವಂತೆ ಮನವಿ ಸಲ್ಲಿಸಿದ್ದಾರೆ ಎಂಬುದು ನಿಮಗೂ ಗೊತ್ತು, ಇದನ್ನು ಓದುವವರಿಗೂ ಗೊತ್ತು. ಅವರಿಗೆ ಅದೆಷ್ಟು ಮುಖ್ಯವೆಂದರೆ, ಈ ಮನವಿಗೆ ಸ್ಪಂದಿಸದಿದ್ದರೆ ಬೀದಿಗಿಳಿದು ಹೋರಾಡಿದರೆ, ಅಮರಣ ಉಪವಾಸ ಕೂತರೆ ಯಾರಿಗೂ ಆಶ್ಚರ್ಯವಾಗುವುದಿಲ್ಲ. ನೀವು ಅಪದ್ಧ ಪ್ರಶ್ನೆ ಕೇಳುತ್ತಾ ಕುಳಿತಿದ್ದೀರಿ. ..!! ಏನು ಹೇಳಬೇಕು ನಿಮ್ಮ ಈ ಮೂಢತನಕ್ಕೆ? ಅರುಣ್‌ ಕಾಸರಗುಪ್ಪೆ

    ReplyDelete
  20. ಗಣಿಧಣಿಗಳ ಸಾಮ್ರಾಜ್ಯ, ಸೌಧ ಎಲ್ಲವೂ ಕುಸಿಯುತ್ತಿದೆ. ಪಾಪ ಬಳ್ಳಾರಿಯ ಪತ್ರಕರ್ತರು ಇನ್ನು ಅನಾಥರೇ. ಹೇಗಿದ್ದವರು ಹೇಗಾದರು ಈ ಪತ್ರಕರ್ತರು. ಗಣಿಧಣಿಗಳ ಬಗ್ಗೆ ಏನನ್ನೂ ಬರೆಯದ ಪ್ರಾಮಾಣಿಕತೆಯನ್ನು ಪತ್ರಕರ್ತರು ಇಟ್ಟುಕೊಂಡಿದ್ದರು. ಪರಿಸರ ಮಾಲಿನ್ಯ, ಗಣಿಧೂಳು, ಕಾಯಿಲೆಪೀಡಿತ ಜನತೆಯ ಬಗ್ಗೆ ಚಕಾರವನ್ನೂ ಎತ್ತದ ನಿಷ್ಠೆಯನ್ನು ಮೆರೆದವರು ಇವರು. ಇನ್ನಾರ ಮುಂದೆ ತಮ್ಮ ದು:ಖ ತೋಡಿಕೊಳ್ಳುವರೋ!

    ReplyDelete
  21. Its High time - I hope some news paper will publish an open letter to Govt of Karnataka on this Mining scam - which looted everything out of karnataka :(

    ReplyDelete
  22. ಸ್ವಾಮಿ ಸಂಪಾದಕರೆ
    (http://sampadakeeya.blogspot.ಕಂ)(ನೀವು ಕೂಡ ಈಲ್ಲಿ ಸತ್ಯ ಹೇಳಲಿಲವಲ್ಲ. ಆರ್.ಬಿ ಎನ್ನುವವರು ಯಾರು ವಿ.ಭಟ್ ಎನ್ನುವವರು ಯಾರು .ಅಂತ ಹೇಳಿ ಓದುಗರಿಗೆ ದಯಮಾಡಿ ಸತ್ಯ ಗೊತಗಲಿ .ಈಲ್ಲ ಅಂದರೆ ನಿಮಗೂ ಗೊತಿಲವ .ಈದು ನನ್ನತಹ ಕನ್ನಡ ಓದುಗರಿಗೆ ಒಂದು ಸಮ್ಸಯ ದೊರವಗುತೆ
    ಇಂತಿ ನಿಮ್ಮ ಓದುಗ

    ReplyDelete