Thursday, August 18, 2011

ದಿಕ್ಕು ತಪ್ಪಿದ ಚಳವಳಿಯ ಬೆನ್ನು ಹತ್ತಿದ ಹುಚ್ಚು ಮೀಡಿಯಾ...


ನೂರೈವತ್ತು ಕೋಟಿ ಜನರು ಅಣ್ಣಾ ಹಜಾರೆಯ ಬೆಂಬಲಕ್ಕೆ ನಿಂತಿದ್ದಾರೆ ಎನ್ನುತ್ತದೆ  ಸಿಎನ್ಎನ್ ಐಬಿಎನ್ ಎಂಬ ಒಂದು ಟಿವಿ ಚಾನಲ್. ಯಾರು ಈ ನೂರೈವತ್ತು ಕೋಟಿ ಜನ? ಎಲ್ಲಿಂದ ಬಂದರು? ದೇಶದ ಜನಸಂಖ್ಯೆಯೇ ೧೧೦ ಕೋಟಿ ಇರಬಹುದು. ಇನ್ನೂ ಐವತ್ತು ವರ್ಷಗಳಲ್ಲಿ ಹುಟ್ಟುವವರನ್ನು ಸೇರಿಸಿಕೊಂಡಿಯೇ ಈ ಚಾನಲ್ ಬೆಂಬಲ ಘೋಷಿಸುತ್ತಿದೆಯೇ? ಈ ನೂರೈವತ್ತು ಕೋಟಿ ಜನರಲ್ಲಿ ದೇಶದ ಹಳ್ಳಿಹಳ್ಳಿಗಳಲ್ಲಿ ಇರುವ ರೈತ ಇದ್ದಾನೆಯೇ? ದಿನಕ್ಕೆ ಹತ್ತಿಪ್ಪತ್ತು ರೂಪಾಯಿಯಿಂದ ಎಂಭತ್ತು ರೂಪಾಯಿಗಳವರೆಗೆ ದುಡಿಯುವ ಕೂಲಿ ಕಾರ್ಮಿಕರಿದ್ದಾರೆಯೇ? ಬೀದಿ ಕಸ ಗುಡಿಸುವವರು, ಮಲ ಎತ್ತುವವರು, ಕಾಡುಗಳಲ್ಲಿ ಇರುವ ಬುಡಕಟ್ಟು ಜನರು, ಅಣ್ಣಾ ಹಜಾರೆ ಹೆಸರನ್ನೇ ಕೇಳದೇ ಇರಬಹುದಾದ ಅಮಾಯಕ, ಮುಗ್ಧ ಬಡಜನರು ಇದ್ದಾರೆಯೇ?

ಯಾಕೆ ನಮ್ಮ ಚಾನಲ್‌ಗಳು-ಪತ್ರಿಕೆಗಳು ಹೀಗೆ ಹುಚ್ಚುಹುಚ್ಚಾಗಿ ವರ್ತಿಸುತ್ತಿವೆ? ಸುಳ್ಳುಗಳನ್ನೇ ಹೇಳುತ್ತಿವೆ? ಅಣ್ಣಾ ಬೆನ್ನ ಹಿಂದೆ ಇಡೀ ದೇಶವೇ ಇದೆ ಎಂದು ಪದೇಪದೇ ಬೊಬ್ಬೆ ಹೊಡೆಯುತ್ತಿವೆ?

ನಿಜ, ಅಣ್ಣಾ ಹಜಾರೆ ಹೋರಾಟಕ್ಕೆ ಗಣನೀಯ ಪ್ರಮಾಣದ ಜನರು ಬೆಂಬಲ ನೀಡುತ್ತಿರುವುದಂತೂ ನಿಜ. ಇತ್ತೀಚಿನ ದಿನಗಳಲ್ಲಿ ದೇಶದ ಬಹುತೇಕ ನಗರಗಳಲ್ಲಿ ಅಣ್ಣಾ ಪರವಾಗಿ ಒಂದು ಪ್ರತಿಭಟನೆಯ ಅಲೆ ಎದ್ದಿರುವುದೂ ನಿಜ. ಆದರೆ ಇಡೀ ದೇಶವೇ ಬೆನ್ನಿಗಿದೆ ಎಂಬ ಉತ್ಪ್ರೇಕ್ಷೆ ಯಾಕೆ?

ಚಾನಲ್ ಗಳಲ್ಲಿ ಮಾತನಾಡುವವ ವರದಿಗಾರ-ವರದಿಗಾರ್ತಿಯರನ್ನು ಗಮನಿಸಿ. ಅವರು ಚಳವಳಿಯ ಕಾರ್ಯಕರ್ತರಿಗಿಂತ ಹೆಚ್ಚು ಭಾವಾವೇಶಕ್ಕೆ ಒಳಗಾಗಿದ್ದಾರೆ. ಇಡೀ ವಿವಾದದ ಒಂದು ಮುಖವಷ್ಟೇ ಅವರಿಗೆ ಬೇಕು, ಒಂದೇ ಕಡೆ ನಿಂತು ಅವರು ವಾದಿಸುತ್ತಿದ್ದಾರೆ, ತಾವೇ ಜಡ್ಜ್‌ಮೆಂಟ್ ಕೊಡುತ್ತಿದ್ದಾರೆ.

ಅಣ್ಣಾ ಹಜಾರೆ ಬಂಧನಕ್ಕೆ ಸಂಬಂಧಿಸಿದಂತೆಯೂ ಮಾಧ್ಯಮಗಳು ಸತ್ಯವನ್ನು ಹೇಳಲಿಲ್ಲ. ದೇಶದ ರಾಜಧಾನಿ ದೆಹಲಿಯಲ್ಲಿ ಯಾವುದೇ ಷರತ್ತುಗಳನ್ನು ವಿಧಿಸದೆ ಸಾವಿರಾರು ಜನರು ಸೇರುವ ಅಣ್ಣಾ ಚಳವಳಿಯನ್ನು ನಡೆಸಲು ಅನುಮತಿ ನೀಡಲು ಸಾಧ್ಯವೇ ಎಂಬ ಗಂಭೀರ ವಿಷಯವನ್ನು ಮರೆಮಾಚಲಾಯಿತು. ಇಂಥ ಚಳವಳಿಗಳ ಮೇಲಿನ ಕೆಲ ನಿಯಂತ್ರಣಗಳ ಕುರಿತು ಸುಪ್ರೀಂ ಕೊರ್ಟ್ ಮತ್ತು ದೆಹಲಿ ಹೈಕೋರ್ಟ್‌ಗಳು ನೀಡಿರುವ ನಿರ್ದೇಶನಗಳ ಕುರಿತು ಮಾಧ್ಯಮಗಳು ಮಾತನಾಡಲಿಲ್ಲ. ಒಂದು ವೇಳೆ ಲಕ್ಷಾಂತರ ಜನರು ನೆರೆದು ಯಾರೋ ಕಿಡಿಗೇಡಿಗಳಿಂದ ಅನಾಹುತವಾದರೆ ಅದಕ್ಕೆ ಯಾರು ಹೊಣೆ ಎಂಬ ಪ್ರಶ್ನೆಗಳನ್ನೂ ಇವು ಕೇಳಿಕೊಳ್ಳಲಿಲ್ಲ.

ಪ್ರತಿಬಂಧಕಾಜ್ಞೆಯನ್ನು ಉಲ್ಲಂಘಿಸಿ ಚಳವಳಿಗೆ ಮುಂದಾದ ಅಣ್ಣಾ ಹಜಾರೆಯನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಪೊಲೀಸರು ಅವರ ನ್ಯಾಯಾಂಗ ಬಂಧನವನ್ನು ಕೇಳಿಯೇ ಇರಲಿಲ್ಲ. ಪ್ರತಿಬಂಧಕಾಜ್ಞೆಯನ್ನು ಉಲ್ಲಂಘಿಸಲು ಹೊರಟಿರುವುದು ನಿಜ ಎಂದು ಅಣ್ಣಾ ಹೇಳಿದಾಗ, ನ್ಯಾಯಾಧೀಶರು ನಿಮ್ಮನ್ನು ಬಂಧಿಸಬೇಕಾಗುತ್ತದೆ ಎಂದು ಕೇಳಿದ್ದಾರೆ. ಅಣ್ಣಾ ಅದಕ್ಕೆ ಒಪ್ಪಿಗೆ ನೀಡಿದ ಮೇಲೆ ಒಂದು ವಾರದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಘಟನೆ ಪೂರ್ಣ ವಿವರವನ್ನು ಯಾವ ಮಾಧ್ಯಮವೂ ಸರಿಯಾಗಿ ಹೇಳಲೇ ಇಲ್ಲ.

ತಿಹಾರ್ ಜೈಲಿನಲ್ಲಿ ಕುಳಿತ ಅಣ್ಣಾ ಹಜಾರೆ ಬಿಡುಗಡೆ ಆದೇಶ ಬಂದ ಮೇಲೂ ಹೊರಗೆ ಬರಲಿಲ್ಲ. ಕಡೆಗೆ ಪೊಲೀಸರ ಜತೆ ಒಪ್ಪಂದ ಮಾಡಿಕೊಂಡು ೧೫ ದಿನಗಳ ಉಪವಾಸಕ್ಕೆ ಒಪ್ಪಿಕೊಂಡರು. ಇದನ್ನೂ ನಮ್ಮ ಮೀಡಿಯಾ ಅಣ್ಣಾ ಹಜಾರೆಗೆ ದೊರೆತ ಜಯ ಎಂದು ಹೇಳಿದವು. ಇದೆಂಥ ಜಯ? ಸರ್ಕಾರವೇನು ಜನ ಲೋಕಪಾಲವನ್ನು ಜಾರಿಗೊಳಿಸುತ್ತೇವೆಂದು ಹೇಳಿದೆಯೇ?

ಮಾಧ್ಯಮಗಳಿಗೆ ಸಂಸದೀಯ ಪ್ರಜಾಸತ್ತೆಯ ಕುರಿತು ಕನಿಷ್ಠ ಗೌರವವೂ ಇದ್ದಂತಿಲ್ಲ. ಸಂಸದೀಯ ಪ್ರಜಾಸತ್ತೆಯನ್ನು ದುರ್ಬಲಗೊಳಿಸಿದರೆ ದೇಶ ಅರಾಜಕ ಪರಿಸ್ಥಿತಿಗೆ ದೂಡಲ್ಪಡುತ್ತದೆ ಎಂಬುದೂ ಅವುಗಳಿಗೆ ಗೊತ್ತಿದ್ದಂತಿಲ್ಲ. ಜನರಿಂದ ಆಯ್ಕೆಯಾದವರೇ ಕಾನೂನು ರೂಪಿಸಬೇಕು ಎಂಬ ಸಂವಿಧಾನದ ಮೂಲ ಅಂಶವೂ ಅವುಗಳ ಗಮನದಲ್ಲಿಲ್ಲ. ಆಗಸ್ಟ್ ೧೫ರಂದು ಯಾವ ಮುಖ ಹೊತ್ತು ರಾಷ್ಟ್ರಧ್ವಜ ಹಾರಿಸುತ್ತೀರಿ ಎಂದು ಅಣ್ಣಾ ಹಜಾರೆಯವರು ಪ್ರಧಾನಿಗೊಂದು ಪತ್ರ ಬರೆದರೆ ಅದು ಅವರಿಗೆ ರೋಮಾಂಚನದ ಸುದ್ದಿಯಾಗುತ್ತದೆ; ತಲೆ ತಗ್ಗಿಸುವ, ಪ್ರಧಾನಿ ಹುದ್ದೆಯ ಘನತೆಯನ್ನು ಕುಗ್ಗಿಸುವ, ಸಾಂವಿಧಾನಿಕ ಸಂಸ್ಥೆ-ಧ್ವಜದ ಗೌರವವನ್ನು ಹಾಳುಗೆಡಹುವ ಹೇಳಿಕೆಯಂತೆ ಕಾಣಿಸುವುದಿಲ್ಲ.

ಅಣ್ಣಾ ಮತ್ತು ತಂಡ ಇಡೀ ಸಂಸತ್ತಿನ ಪರಮಾಧಿಕಾರವನ್ನೇ ಹೈಜಾಕ್ ಮಾಡುವ ಬದಲು ಸಂಸತ್ತನ್ನು ಅಧಿಕೃತ ಮಾರ್ಗದಲ್ಲಿ ಪ್ರವೇಶಿಸಲು ಅವರು ಯಾಕೆ ಪ್ರಯತ್ನಿಸಬಾರದು ಎಂಬ ಪ್ರಶ್ನೆಯನ್ನು ಯಾವ ಮೀಡಿಯಾ ಕೂಡ ಮುಂದೆ ಮಾಡುತ್ತಿಲ್ಲ. ಜನ ಲೋಕಪಾಲ ಎಂಬುದು ಒಂದು ಮಂತ್ರದಂಡದಂಥ ಕಾಯ್ದೆ. ಅದನ್ನು ವಾಮಮಾರ್ಗದಲ್ಲಾದರೂ ಸರಿ, ಬ್ಲಾಕ್‌ಮೇಲ್ ಮಾಡಿಯಾದರೂ ಸರಿ ಸಂಸತ್ತಿನಲ್ಲಿ ಪಾಸ್ ಮಾಡಿಸಬೇಕು ಎಂದು ಹೊರಟಿವೆ ಮಾಧ್ಯಮಗಳು. ಸಂಸತ್ ಸದಸ್ಯರೆಲ್ಲ ಕಳ್ಳರು ಎಂಬ ಧಾಟಿಯಲ್ಲಿ ಮಾತನಾಡುತ್ತಿರುವ ಅಣ್ಣಾ ಟೀಂ, ಚುನಾವಣಾ ವ್ಯವಸ್ಥೆ ಸುಧಾರಣೆಯ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? ಚುನಾವಣಾ ವ್ಯವಸ್ಥೆ ಸುಧಾರಣೆಯಾದರೆ ತನ್ನಿಂತಾನೇ ಪ್ರಾಮಾಣಿಕರು ಆರಿಸಿ ಬರುತ್ತಾರಲ್ಲವೇ? ತನ್ನಿಂತಾನೇ ಭ್ರಷ್ಟಾಚಾರದ ಪ್ರಮಾಣವೂ ಕುಸಿಯುತ್ತದಲ್ಲವೇ? ಹೀಗಂತ ಯಾರೂ ಕೇಳುತ್ತಲೇ ಇಲ್ಲ.

ಅಷ್ಟಕ್ಕೂ ಅಣ್ಣಾ ಹಜಾರೆ ಚಳವಳಿ ಒಂದು ರಾಜಕೀಯ ಹೋರಾಟವೇ ಅಲ್ಲವೇ? ಅದನ್ನು ಇಡಿಇಡಿಯಾಗಿ ಹ್ಯಾಂಡಲ್ ಮಾಡುತ್ತಿರುವುದು ಸಂಘ ಪರಿವಾರವೇ ಅಲ್ಲವೇ? ಭೂಷಣ್‌ಗಳು, ಕೇಜ್ರಿವಾಲ್‌ಗಳು, ಬೇಡಿಗಳು, ಅಗ್ನಿವೇಶ್‌ಗಳು, ರಾಮದೇವ್‌ಗಳ ಅತ್ಯಂತಿಕ ಉದ್ದೇಶವಾದರೂ ಏನು? ಜನ ಲೋಕಪಾಲಕ್ಕೆ ಹೊರತಾಗಿ ಅವರ ಬಳಿ ಇರುವ ಇತರ ಅಜೆಂಡಾಗಳು ಯಾವುವು? ಭ್ರಷ್ಟಾಚಾರದ ಹಾಗೆಯೇ ದೇಶವನ್ನು ಕಿತ್ತು ತಿನ್ನುತ್ತಿರುವ ಜಾತೀಯತೆ, ಧರ್ಮಾಂಧತೆ, ಅಸ್ಪೃಶ್ಯತೆ, ರೈತರ ಆತ್ಮಹತ್ಯೆ ಇತ್ಯಾದಿಗಳ ಬಗ್ಗೆ ಇವರ ನಿಲುವುಗಳು ಏನು? ಈ ಚಳವಳಿಗೆ ನಿಜಕ್ಕೂ ಒಂದು ಸೈದ್ಧಾಂತಿಕ ಹಿನ್ನೆಲೆ ಇದೆಯೇ? ದೂರದರ್ಶಿತ್ವ ಇದೆಯೇ? ದೂರಗಾಮಿ ಯೋಜನೆಗಳು ಇವೆಯೇ? ನಮ್ಮ ಮೀಡಿಯಾ ಇವತ್ತಿನವರೆಗೆ ಇವರನ್ನು ಪ್ರಶ್ನಿಸಿದ ಹಾಗೆ ಕಾಣುತ್ತಿಲ್ಲ.

ಗಣಿ ಹಗರಣದಲ್ಲಿ ಸಾವಿರಾರು ಕೋಟಿ ರೂ. ಲೂಟಿಯಾದಾಗ, ಮುಖ್ಯಮಂತ್ರಿಯೇ ಹತ್ತಾರು ಭೂ ಹಗರಣಗಳಲ್ಲಿ ಸಿಕ್ಕಿಬಿದ್ದಾಗ, ದಲಿತರು-ದುರ್ಬಲರ ಮೇಲೆ ದೌರ್ಜನ್ಯಗಳು ನಡೆದಾಗ, ರೈತರ ಮೇಲೆ ಗೋಲಿಬಾರ್-ಲಾಠಿಚಾರ್ಜ್‌ಗಳು ನಡೆದಾಗ ಇದೇ ಫ್ರೀಡಂ ಪಾರ್ಕಿನಲ್ಲಿ ಯಾರೂ ಕಾಣಿಸಿಕೊಳ್ಳಲಿಲ್ಲವಲ್ಲ, ಯಾಕೆ? ಈಗ ಇದ್ದಕ್ಕಿದ್ದಂತೆ ಎದ್ದುನಿಂತಿರುವ ಸಮೂಹಸನ್ನಿಯಿಂದ ಚೀರಾಡುತ್ತಿರುವ ಗುಂಪಾದರೂ ಯಾವುದು? ಅದರ ಉದ್ದೇಶವಾದರೂ ಏನು? ಈ ಪ್ರಮಾಣದ ದೇಶಭಕ್ತಿ, ಸಾಮಾಜಿಕ ಕಳಕಳಿ ಹೀಗೆ ಒಮ್ಮಿಂದೊಮ್ಮೆಗೆ ಸೃಷ್ಟಿಯಾಗಿದ್ದಾದರೂ ಹೇಗೆ?

ದೇಶದ ಜನರನ್ನು ಹುಚ್ಚು ಭ್ರಮೆಗೆ ತಳ್ಳಿ, ಸಂವಿಧಾನಕ್ಕೆ ಕಿಚ್ಚು ಇಡಲು ಹೊರಟಿರುವ ಮಾಧ್ಯಮಗಳಿಗೆ ತಿವಿದು ಬುದ್ಧಿ ಹೇಳುವವರು ಯಾರು? ಯಾಕೆ ಈ ಚಾನಲ್‌ಗಳು ತಮ್ಮ ಪ್ಯಾನಲ್ ಚರ್ಚೆಯನ್ನೇ ಸಂಸತ್ತಿನ ಚರ್ಚೆಯೆಂಬಂತೆ ಬಿಂಬಿಸಲು ಯತ್ನಿಸುತ್ತವೆ? ಟೈಮ್ಸ್ ನೌನ ಅರ್ನಾಬ್ ಗೋಸ್ವಾಮಿ ಪದೇಪದೇ ನೂರು ಕೋಟಿ ಜನರು ನೋಡ್ತಾ ಇದ್ದಾರೆ, ಉತ್ತರ ಕೊಡಿ ಎಂದು ರಾಜಕಾರಣಿಗಳನ್ನು ಯಾಕೆ  ದಬಾಯಿಸುತ್ತಾನೆ? ಮಾಧ್ಯಮಗಳು ಸಂವಿಧಾನವನ್ನೂ ಮೀರಿದ ಸಂಸ್ಥೆಗಳೇ? ಸಂಸತ್ತನ್ನು ಮೀರಿದ ಚರ್ಚಾ ಸ್ಥಳವೇ?

ಅಣ್ಣಾ ಹಜಾರೆ ನಿಜಕ್ಕೂ ಪ್ರಾಮಾಣಿಕರು, ಸಚ್ಚಾರಿತ್ರ್ಯವಂತರು. ರಾಣೇಗಣ್ ಸಿದ್ಧಿಯಲ್ಲಿ ಗ್ರಾಮಸ್ವರಾಜ್ಯದ ಪವಾಡವನ್ನೇ ಸಾಧಿಸಿದವರು. ಆದರೆ ಆ ಸಂದರ್ಭದಲ್ಲಿ ನಮ್ಮ ಮೀಡಿಯಾ ಓಬಿ ವ್ಯಾನ್‌ಗಳು ಯಾವತ್ತೂ ಆ ಊರಿನ ದರ್ಶನ ಮಾಡಿರಲಿಲ್ಲ. ಅಂಥ ಚಟುವಟಿಕೆಗಳು ನಮ್ಮ ಮೀಡಿಯಾಗೆ ಮುಖ್ಯವಾಗುವುದೂ ಇಲ್ಲ. ಈಗ ಅಣ್ಣ ಯಾರದೋ ಚದುರಂಗದ ಕಾಯಿಯಂತೆ ಕಾಣಿಸುತ್ತಿದ್ದಾರೆ.  ಮಾಧ್ಯಮಗಳು ಅಣ್ಣಾ ಭಾವಚಿತ್ರವನ್ನೇ ತಮ್ಮ ಲೋಗೋ ಮಾಡಿಕೊಂಡಿವೆ.

೭೪ವರ್ಷದ ಹಿರಿಯ ಜೀವ ಆಮರಣಾಂತ ಉಪವಾಸಕ್ಕೆ ಕುಳಿತಿದೆ. ನಡುವಯಸ್ಸಿನಲ್ಲಿರುವ ಕೇಜ್ರಿವಾಲ್‌ಗಳು, ಬೇಡಿಗಳೇಕೆ ಈ ಜವಾಬ್ದಾರಿ ಹೊರುವುದಿಲ್ಲ? ಯಾಕೆ ಆ ಹಿರಿಯ ಜೀವವನ್ನೇ ಪದೇಪದೇ ಉಪವಾಸಕ್ಕೆ ತಳ್ಳುತ್ತಾರೆ? ರಾಜ್‌ದೀಪ್ ಸರ್‌ದೇಸಾಯಿ, ಬರ್ಖಾ ದತ್, ಅರ್ನಾಬ್‌ರಂಥವರ ತಲೆಗೆ ಈ ಪ್ರಶ್ನೆ ಯಾಕೆ ಹೊಳೆಯುವುದೇ ಇಲ್ಲ.

ಅಣ್ಣಾ ಹಜಾರೆ ಮತ್ತೆ ಆಮರಣಾಂತ ಉಪವಾಸಕ್ಕೆ ಕುಳಿತಿದ್ದಾರೆ. ೭೪ರ ವಯಸ್ಸು ಇಂಥ ಸತ್ಯಾಗ್ರಹಗಳನ್ನು ಸೈರಿಸಿಕೊಳ್ಳಲಾರದು. ಆ ಹಿರಿಯ ಜೀವಕ್ಕೆ ಕಿಂಚಿತ್ತೂ ಘಾಸಿಯಾಗದಿರಲಿ.

ಕೊನೆಕುಟುಕು: ನಿನ್ನೆ ಲೋಕಸಭೆಯಲ್ಲಿ ಸಂಸದರೊಬ್ಬರು ಹೇಳಿದ ಒಂದು ಪ್ರಸಂಗ: ಹಳ್ಳಿಯೊಂದರ ಪಂಚಾಯಿತಿಯಲ್ಲಿ ಆರೋಪಿಯೊಬ್ಬನಿಗೆ ಶಿಕ್ಷೆ ಘೋಷಣೆಯಾಗುತ್ತದೆ. ಅವನಿಗೆ ಎರಡು ಆಯ್ಕೆ. ಒಂದೇ ನೂರು ಛಡಿ ಏಟು ತಿನ್ನಬೇಕು, ಅಥವಾ ನೂರು ಈರುಳ್ಳಿ ತಿನ್ನಬೇಕು. ಈರುಳ್ಳಿ ತಿನ್ನುವುದೇ ಸುಲಭ ಎನ್ನಿಸಿದ ಆತ ಎರಡು ಈರುಳ್ಳಿ ತಿನ್ನುವಷ್ಟರಲ್ಲಿ ಸುಸ್ತಾಗಿ ಛಡಿ ಏಟೇ ಕೊಡಿ ಎನ್ನುತ್ತಾನೆ. ನಾಲ್ಕು ಛಡಿ ಏಟು ತಿನ್ನುತ್ತಿದ್ದಂತೆ ಈರುಳ್ಳಿ ತಿನ್ನುವುದೇ ವಾಸಿ ಎಂದುಕೊಂಡು ಈರುಳ್ಳಿ ತಿನ್ನತೊಡಗುತ್ತದೆ. ಹೀಗೇ ಮುಂದುವರೆದು ಕಡೆಗೆ ಅವನು ನೂರು ಛಡಿಯನ್ನೂ ತಿನ್ನುತ್ತಾನೆ, ನೂರು ಈರುಳ್ಳಿಯನ್ನೂ ತಿನ್ನುತ್ತಾನೆ. ಅಣ್ಣಾ ಚಳವಳಿಯನ್ನು ಅತ್ಯಂತ ಕೆಟ್ಟದಾಗಿ ನಿರ್ವಹಿಸುತ್ತಿರುವ ಕಾಂಗ್ರೆಸ್ ಪಕ್ಷದ ನಾಯಕತ್ವವೂ ಹೀಗೇ ಆಗಿದೆ ಎಂದರು ಆ ಸಂಸದರು. ಕಾಂಗ್ರೆಸ್‌ನ ಮೂರ್ಖರು ಸಾಮಾನ್ಯ ಜ್ಞಾನವನ್ನೂ ಪ್ರದರ್ಶಿಸಲಾರದ ಸ್ಥಿತಿ ತಲುಪಿದ್ದೇಕೆ?

52 comments:

  1. I am sorry to say, First time I defer with Sampadakeeya Karnataka's view. I dislike this article. I support Anna Hazare and I am for Jan Lokpal Bill.

    ReplyDelete
  2. ಇಂಥ ಒಂದು ವಿಚಾರ ಧಾರೆಯ ಅವಶ್ಯಕತೆ ಇತ್ತು. ತುಂಬ ಸರಳ ಹಾಗೂ ನೇರ ಪ್ರಶ್ನೆಗಳನ್ನೇ ಕೇಳಿದ್ದಿರಿ, ಆದರೆ ನ್ಯಾಷನಲ್ ಮೀಡಿಯಾ ಮಾಡಿದ್ದನ್ನೇ ನಮ್ಮ ಲೋಕಲ್ ಮೀಡಿಯಾಗಳು ಮಾದಬೇಕೆಂದೆನಿಲ್ಲವಲ್ಲ, ನಮ್ಮ ಮೀಡಿಯಾ ಜನರೂ ಎಚ್ಹೆತ್ತು ಕೊಳ್ಳಬೇಕಿದೆ, ಅಣ್ಣಾ ಅವರ ಬಗ್ಗೆ ಭಾವಾವೇಶದಿಂದ ಮಾತನಾಡುವ ನಮ್ಮ ಮೀಡಿಯಾಗಳಿಗೆ ಕೇವಲ 24x7 ಪ್ರಸಾರ ಮಾಡಲಿಕ್ಕೆ ಸುದ್ದಿ ಬೇಕೇ ಹೊರತು ಅದರಿಂದಾಗುವ ಕಷ್ಟ- ನಷ್ಟಗಳ ಅರಿವಿಲ್ಲ. ಯಾವುದೇ ಸುದ್ದಿ ಬೆನ್ನಟ್ಟಿ ಹೊರಟರೂ ಕೇವಲ TRP ಮತ್ತು ಮೊದಲು ನ್ಯೂಸ್ ಬ್ರೇಕ್ ಮಾಡಿದ ಕೀರ್ತಿಗಾಗಿ ಹವಣಿಸುತ್ತಿರುವ ನ್ಯೂಸ್ ಚಾನೆಲ್ ಗಳನ್ನ ನೋಡುವುದೇ ಒಂದು ರೀತಿಯ ಕಿರಿ ಕಿರಿಯ ಅನುಭವ. ಅಪ್ರಭುದ್ಧ, ಅಸಂಭದ್ದ ಪ್ರಶ್ನೆ ಕೇಳುವ, ತಾವು ನಡೆಸುವ ಟಾಕ್ ಶೋ ಗಳು ಭಾರಿ ಜನಪ್ರಿಯ ಹೊಂದುತ್ತಿವೆಯಂದು ತಮ್ಮ ತಮ್ಮ ಕಲ್ಪನಾ ಲೋಕದೊಳಗೆ ವಿಹರಿಸುತ್ತೆರುವ ಎಲ್ಲ ಮೀಡಿಯಾ anchor ಗಳಿಗೆ ಬಿಸಿ ಮುಟ್ಟಿಸಿದ್ದಿರಿ.ನಮ್ಮ ದೇಶ ಮತ್ತು ರಾಜ್ಯದಲ್ಲಿ ನಿಜವಾದ ಕಾಳಜಿ ಇರುವ ನಿಷ್ಠ ಮತ್ತು ಹಿರಿಯ ವಿಮರ್ಶಕರೆಲ್ಲ ಎಲ್ಲಿ ಅಡಗಿ ಕುಳಿತಿದ್ದಾರೆ?

    ReplyDelete
  3. ನಿಜವಾಗಿಯೂ ಬ್ರಷ್ಟಾಚಾರದ ಬವಣೆ ಅನುಭವಿಸುತ್ತಿರುವ ರೈತರು, ಕಾರ್ಮಿಕರು, ಮಧ್ಯಮ ವರ್ಗದವರು ಈ ಚಳುವಳಿ ಬಗ್ಗೆ ನಿರ್ಲಿಪ್ತರಾಗಿದ್ದಾರೆ, ಯಾರು ಕಳ್ಳ ಮಾರ್ಗದಿಂದ ದುಡ್ಡು ಸಂಪಾದಿಸಿ ದೊಡ್ಡವರಾಗಿದ್ದಾರೋ, ಲಂಚ ಕೊಟ್ಟು ಸೀಟಿ ಗಿಟ್ಟಿಸಿದ್ದಾರೋ, ಅಪ್ಪ ವಾಮ ಮಾರ್ಗದಿಂದ ಸಂಪಾದಿಸಿದ ದುಡ್ಡಿನಲ್ಲಿ ಮಜಾ ಉಡಾಯಿಸುತ್ತಾರೋ ಅವರು ಮಾತ್ರ - ಅಂದರೆ ಶ್ರೀಮಂತರು, ಮೇಲ್ ಮಧ್ಯಮ ವರ್ಗದವರು ಈ ತುತ್ತೂರಿ ಊದುತ್ತಿದ್ದಾರೆ. ಬ್ರಷ್ಟರನ್ನು ಕರೆದು ಆಶೀರ್ವಾದ ಮಾಡುವ, ಅವರ ಕಾರಲ್ಲಿ ಕುಳಿತು ರೋಮಾಂಚನ ಪಡುವ ಸ್ವಾಮಿಗಳು ಜನ ಲೋಕಪಾಲ್ ಬಿಲ್ಲು ಬೇಕೆಂದು ಕೇಳುವುದು ಅಸಹ್ಯದ ಪರಮಾವಧಿ. ತಮ್ಮನ್ನು ಟಿ.ವಿ.ಕ್ಯಾಮರಾಗಳು ಗಮನಿಸುತ್ತವೆ ಎಂಬ ಕಾರಣಕ್ಕೆ ಹುಸಿ ಆವೇಶಗಾರರು, ತೋರಿಕೆ ಹೋರಾತಗಾರರು ಹೆಚ್ಚಿಕೊಳ್ಳುತ್ತಿದ್ದಾರೆ.

    ReplyDelete
  4. ಹೌದು ರೈತರು, ಕೂಲಿ ಕಾರ್ಮಿಕರು ಯಾರು ಎ ಚಳಿವಾಳಿಯಲ್ಲಿ ಪಾಲ್ಗೊಂಡಿಲ್ಲ ನಿಜ, ಸರಣಿ ಆತ್ಮ ಹತ್ಯೆ ಅಡ್ಡಾಗ್ಲೂ ಯಾವಾದೆ ರೈತರ ಗುಂಪು ಪಾಲ್ಗೊಳ್ಳಿಲ್ಲ
    ರೈತರು ಇದುವರೆದು ನಡೆದ ಯಾವುದೇ ಹೋರಾಟದಲ್ಲೂ ಪಾಲ್ಗೊಂಡಿಲ್ಲ

    ರೈತರು, ಕಾರ್ಮಿಕರು ಹೋರಾಟ ಮಾಡಿದ್ದು ಅಂದ್ರೆ ಅದು ಅವ್ರ ಜೀವನಕ್ಕೆ, ಅವರ ಹೊಟ್ಟೆಪಾಡಿಗೆ ಕೊಡಲಿ ಪೆಟ್ಟು ನೇರವಾಗಿ ಬಿದ್ದಾಗ ಮಾತ್ರ.
    ಇನ್ನೂ ಕೇವಲ ರಾಜಕೀಯ ಉದ್ದೇಶಗಳಿಗೆ ರಾಜಕೀಯ ಪಕ್ಷಗಳು ಬಳಸಿಕೊಂಡರು

    ಇದು ವಿಪರ್ಯಾಸ

    ಇನ್ನೂ ಸ್ವಲ್ಪ ದಿನ್ಗಳಲ್ಲಿ ಎಲ್ಲರೂ ಕಾರ್ಮಿಕರು, ರೈತರು ಪಾಲ್ಗೊಳ್ಳುವ ವಿಶ್ವಾಸ ನಂಗೆ ಇದೆ ನೋಡ್ತಾ ಇರಿ

    ReplyDelete
  5. ಬರೆಯಕ್ಕೆ ಬರುತ್ತೆ ಅನ್ತಾ ಏನೇನೋ ಬರೆಯೋದಾ..ಶೇಮ್!

    ReplyDelete
  6. your opinion is right if we see it from the other angle. but why you pulling the legs of other people when something is going to be good for the society in future???

    ReplyDelete
  7. your opinion is right when we see it from the publicity angle!! But why you are pulling the legs of other people if something is happening good for a society??

    ReplyDelete
  8. ತುಂಬಾ ಚೆನ್ನಾಗಿ ಬರೆದಿದ್ದೀರಿ ಒಳ್ಳೆ ವಿಚಾರ ಧಾರೆ. ಬೇಶ್

    ReplyDelete
  9. ಅಣ್ಣಾ ಹಜಾರೆಗಾಗಿ ಮೀಡಿಯಾಗಳು ಸಪೋಟ೯ ಮಾಡ್ತಿರೋದು ಖುಷಿಯ ವಿಚಾರಗಳು. ನಿಜವಾದ ವಿಮಶ೯ಕರ ಅವಶ್ಯಕತೆ ಈ ಸಂದಭ೯ದಲ್ಲಿ ಇದೆ ಭ್ರಷ್ಟಾಚಾರವನ್ನು ತೊಲಗಿಸುವ ಸಂಕಲ್ಪ ಮಾಡುತಿರುವ ಅಣ್ಣಾನಿಗೆ ದೇಶದ ಪ್ರತಿಯೊಬ್ಬರೂ ಕೈ ಜೋಡಿಸಬೇಕಾಗಿದೆ. ಅಷ್ಟೇ ಅವಶ್ಯಕತೆ ಕೂಡ ಇರುವುದನ್ನು ನಮ್ಮ ಯುವ ಜನಾಂಗ ಅರಿತುಕೊಳ್ಳಬೇಕು. ಅದಲ್ಲದೆ ಮಾಧ್ಯಮಗಳು ಯಾವತ್ತಿದ್ದರೂ ಸತ್ಯದ ಪರವಾಗಿ ಇರುತವೆಂಬುದು ಮನವರಿಕೆಯಾಗಿದೆ. ಇದೇ ಕಾಮಂಟ್ಸನಲ್ಲಿ ಅಶ್ವಿನಿ ದಾಸರೆ ಬರೆದ ಅಭಿಪ್ರಾಯ ಉತ್ತಮವಾಗಿದೆ. ಧನ್ಯವಾದಗಳು.

    ವೀರಣ್ಣ ಮಂಠಾಳಕರ್

    ReplyDelete
  10. ಅಣ್ಣಾ ಹಜಾರೆಯವರಿಗಾಗಿ ಮೀಡಿಯಾಗಳು ಸಪೋಟ್೯ ಮಾಡ್ತಿರೋದು ಖುಷಿಯ ವಿಚಾರಗಳು. ನಿಜವಾದ ವಿಮಶ೯ಕರ ಅವಶ್ಯಕತೆ ಈ ಸಂದಭ೯ದಲ್ಲಿ ಇದ್ದೇ ಇದೆ. ಭ್ರಷ್ಟಾಚಾರವನ್ನು ತೊಲಗಿಸುವ ಸಂಕಲ್ಪ ಮಾಡುತಿರುವ ಅಣ್ಣವ್ರರಿಗೆ ದೇಶದ ಪ್ರತಿಯೊಬ್ಬರೂ ಕೈ ಜೋಡಿಸಬೇಕಾಗಿದೆ. ಭ್ರಷ್ಟಾಚಾರ ತೊಲಗಿಸುವ ನಿಟ್ಟಿನಲ್ಲಿ ಹೋರಾಡುತಿರುವ ಹಜಾರೆಯವರಿಗೆ ಯುವಜನಾಂಗದ ಶಕ್ತಿ ಪ್ರದಶಿ೯ಸಬೇಕು. ಅವಶ್ಯಕತೆ ಇರುವುದನ್ನು ನಮ್ಮ ಯುವ ಜನಾಂಗ ಅರಿತುಕೊಳ್ಳಬೇಕು. ಅದಲ್ಲದೆ ಮಾಧ್ಯಮಗಳು ಯಾವತ್ತಿದ್ದರೂ ಸತ್ಯದ ಪರವಾಗಿ ಇರುತವೆಂಬುದು ಮನವರಿಕೆಯಾಗಿದೆ. ಇದೇ ಕಾಮೆಂಟ್ಸನಲ್ಲಿ ಅಶ್ವಿನಿ ದಾಸರೆ ಅವರು ಬರೆದ ಅಭಿಪ್ರಾಯ ಉತ್ತಮವಾಗಿದೆ. ಧನ್ಯವಾದಗಳು.

    ವೀರಣ್ಣ ಮಂಠಾಳಕರ್

    ReplyDelete
  11. bharstachara nill bekadare yaava chalavali, masude agtya villa. mane - mangalli Aa bhavane barabeku. bara chennagide,
    thanks

    ReplyDelete
  12. ಥೇಟ್ so called ಬುದ್ದಿ ಜೀವಿ ಗಳ ಹೇಳಿಕೆ ಯಿದ್ದ ಹಾಗಿದೆ ಯಿದು. :) :)

    ReplyDelete
  13. intha lekhanagalu samooha sannige olagadavarannu echcharisalu avashyaka. lekhana samyochitha haagu samarpakavaagide. naalku nittininda vishleshane maduvashtu purusoththu madyamadavarigillavo, athava haage yochisuvudu avarige bekillavo athava TRP gunginalle iruva avarige sadaka-badakkagalannu samanagi vishlesuvastu samadhaanavillavo anthu hesaruvasiyadavarannu karesi mathaadisi kalisuva kaaryadalle kaal thalluththive. ivathina madhyamagalannu noduththiddare dooradrustiya korathe ide ennisadiradu. ondu reethi rajakaranigalige sada suddiyalliralu andare janarige padepade kanisikolluva vedikegalanthe madyamagalu balekeyaguththiveyeno emba preshne charchegalannu nodidare mooduththade. bengalurina studiogalalli raajakarinigalannu koorisikondu maathaadisibittare raajyada samasyagalella bageharidanthe athava bagaeharisida keerthi namage emba bhraanthiyinda maadhyamagalu horabarabekide. chunavana veleyalli janarige hana henda ithyadi hanchuththiddaaremb,hanchalu kondoyyuvaga sikkihakikondarenmba suddiya hinde suththuvudannu bittu,janaru raajakarini koduva amishagalannu thiraskarisimathadaaranagi thanna karthya pooraisi,prathinidhiyannu mujugaravillade,mulajillade,mugdathe bittu thanna krthyavannu maduvanthe keluva mattakke janaralli jagruthi moodisabekide.adare indina TRP madyamagalu astaramattige pattubidade a kelasa maduththave swatantra sangramadalli aneka patrikegalu janarondigiddu ithihasadalli madariyagu kanuththve endu nireekshisuvudu swalpa kashtave.aneka chaluvaligalu nadidive nadyuthive adare bhartha badalagilla.yavudo ondu chaluvali yashaswiyada mathrakke idee desha badalayithu anthalla.badalaguththade baharath yavaagendare chunavane vele rajakarani koduva lunchakke hastha chachachuva samnya badaladaaga.aaga anna hajareyanthahavara shrama saarthaka haagu kadimeyaguththade.sulabhavagi janarannu thalupthiruva madyamagalu avara kashtagala, nireekshegala kannadiyaadare maatra. adare egaaguthiruvudenu belagge jyothishi, sanje rajakarini ivaribbara varathada naduve ellide samanyana dhwani.cinema herogalu namma cinema oduththila jana nammannu mareyuththiruva haagide endu halubuththidaare ade TV achorgalu STAR patta sikkavarnthe bhrameyalliddanthide.ivarella thamma charche haadiya bagge vimarshisikolluvahaadi thorisiddeeri.ivarella e haadi kade noduththara?

    ReplyDelete
  14. jana badaladare rajakarinigalu, adhikaarigalu badalaagthaare.jana preshnisuva gunavannu roodhisikolluvavaregu eshtu billgalu pass adaroo,eshtu chaluvaligalaadaru paristhithi badalagalla.

    ReplyDelete
  15. ನಮ್ಮದೇ ಮೀಡಿಯಾಗಳು ನಮ್ಮ ದೇಶದ ಮಾನ ಮರ್ರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕುತ್ತಿವೆ.ಜವಾಬ್ಧಾರಿಯುತ ಮಿಡಿಯಾಗಳಿಗೆ ಇದು ಗೊತ್ತಿದ್ದರೂ ಪ್ರಶ್ನಿಸುವ ಗಂಡೆದೆ ಇಲ್ಲ.ಅಂತಹುದರಲ್ಲಿ ಸಂಪಾದಕೀಯದ ತಾಕತ್ತನ್ನು ಮೆಚ್ಚಲೇ ಬೇಕು.
    ಇಂದು ಕೇಂದ್ರದ ಮೇಲೆ ಮುಗಿಬಿಳುತ್ತಿರುವ ಬಿಜೆಪಿ ಪಕ್ಷ ತಮ್ಮದೇ ರಾಜ್ಯಾಡಳಿತ ಪ್ರದೇಶವಾದ ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಿಂದ ಲೋಕಾಯುಕ್ತರು ಕೇಳಿದ ಹೆಚ್ಚಿನ ಅಧಿಕಾರವನ್ನು ಕರುಣಿಸಿದೆಯೇ???ಇದರಲ್ಲೇ ಇವರ ಹೋರಾಟದ ಉದ್ದೇಶ ಸ್ಪಷ್ಟವಾಗಿ ಗೋಚರಿಸುತ್ತದೆ.ಇನ್ನು ನೀವು ಹೇಳಿದಂತೆ ಅಣ್ಣ ಜೊತೆ ಉಪವಾಸ ಮಾಡುವ ಮಂದಿ ಎಷ್ಟು ಜನ ಇದ್ದಾರೆ ತೋರಿಸಲಿ.ಇಂದು ಫ್ರೀಡಂ ಪಾರ್ಕ್ನಲ್ಲಿ ಸೇರಿರುವ ಸಹಸ್ರಾರು ಮಂದಿಗೆ ಇಷ್ಟು ದಿನ ಎಲ್ಲಿ ಹೋಗಿತ್ತು ಬುದ್ದಿ???
    ಯಡ್ಡಿ ಈ ಚಳುವಳಿಗೆ ದುಮಿಕಿದಂತೆ ಇನೆಷ್ಟು ಭ್ರಷ್ಟರು ತಾವು ಸಚಾ ಎಂದು ತೋರಿಸಿಕೊಳ್ಳಲು ಇದರಲ್ಲಿ ಭಾಗವಹಿಸಿದ್ದರೂ ಆ ದೇವರೇ ಬಲ್ಲ....
    ಒಟ್ಟಿನಲ್ಲಿ ಅಣ್ಣ ಅವರನ್ನು ಹರಕೆಯ ಕುರಿ ಮಾಡಲು ಹೊರಟಿರುವ ಕೆಲವರ ಬುದ್ದಿಗೆಡಿತನ ನಿಜಕ್ಕೂ ದುರಾದೃಷ್ಟಕರ....

    ReplyDelete
  16. If your govt was so sane why don't they come up with a sensible proposal that people would agree. Govt is keeping mum and showing their muscle power once in a while. this is not acceptable. Govt should ideally come up with their action plan, announce it in all websites, broadcast in tv programs and win the hearts of people by right action. But they are lacking the political will to take any right initiative. That's why people are rallying behind Anna Hazare because they believe him. Your media always plays a bad role. All they want is some hype and sensationalization. Why do you blame the movement itself and exhibit your own corrupt nature?

    ReplyDelete
  17. urban phenomena ನ ಇಂದು ಮಾಧ್ಯಮಗಳು ಇಡಿ ಭಾರತದ ಮಿಡಿತ ಎಂದು ಬಿಂಬಿಸಲಾಗುತ್ತಿದೆ. ಉಪಾವಾಸ ಮಾಡುವರೆಲ್ಲಾ ಗಾಂಧಿಗಳು, ಇದು ಸ್ವಾತಂತ್ರ ಸಂಗ್ರಾಮದ ಮುಂದುವರೆದ ಭಾಗ ಎನ್ನುವ ಬಾಲಿಶ ಹೇಳಿಕೆಗಳು ನಿಜಕ್ಕೂ ಅಂದಿನ ಮಾಧ್ಯಮಗಳಿಲ್ಲದ ದಿನಗಳ ಆ ಜನರು ಪಟ್ಟ ಕಷ್ಟವನ್ನು ಕನಿಷ್ಟ ಮಾಡುತ್ತಿದೆ.

    ReplyDelete
  18. ಅಬ್ಬಾ, ಕಡೆಗೂ ಒಂದು ಧ್ವನಿ ಸಿಕ್ಕ ಹಾಗಾಯ್ತು. ಇಷ್ಟು ದಿನ ಸಮೂಹಸನ್ನಿಯಲ್ಲಿ ಮುಳುಗಿರುವ ಜನರು ಹುಚ್ಚರಾ ಅಥವಾ ನಾನೇ ಹುಚ್ಚನಾ ಅಂತ ಗೊಂದಲದಲ್ಲಿದ್ದೆ. ಎಲ್ಲರೂ ಒಂದೆಡೆ ಭ್ರಮೆಯಲ್ಲಿ ಮುಳುಗಿರುವಾಗ ನೀವಾದರೂ ಸರಿಯಾದ್ದು ಏನು ಎಂಬುದನ್ನು ಗೊಂದಲವಿಲ್ಲದೆ ಹೇಳಿದ್ದೀರಿ. ತುಂಬ ತುಂಬ ಧನ್ಯವಾದಗಳು.
    -ಮಹೇಶ್ ಕುಮಾರ್

    ReplyDelete
  19. ree swamy sadyavadre chaluvaliyalli baghavahisi illa sumne iri. Adu bittu rss, hindutwa antella yake kalelitira...

    ReplyDelete
  20. bjp 2 gante protest amele palav hanchike.nam jana palav tinno hatra nu idare.anna protest hatra nu idare.inu nam jan purti echra aagilla ri.

    ReplyDelete
  21. This article is definitely written by a cynic, sadist fellow.

    ReplyDelete
  22. Rightly written.. chennagi bardideera... vimarshe maaDi noDo manasssu saamanyavaagi samuha athava gumpinalli maayavaagutte! adanne taane samuha sanni annodu! idanna bahaLa chennagi upyogisikoLLodu gottide kelavarige haagu upyogiskoLtaa irodu chennagi kaaNistide! nimage dhanyavaada ee lekhanakke!

    ReplyDelete
  23. ನೀವು ಈ ಮಟ್ಟಕ್ಕೆ ಇಳಿತಿರ ಅಂದುಕೊಂಡಿರಲಿಲ್ಲ... ಇಂತ ಒಬ್ಬ ಪುಣ್ಯಾತ್ಮನ ಮೂಲಕನಾದ್ರು ಜಾತಿ ಭಾಷೆ ಎಲ್ಲ ಬಿಟ್ಟು ಇಡಿ ದೇಶವೇ ಒಂದಾಗಿರುವಾಗ, ಬರೆಯೋದಕ್ಕೆ ಬರತ್ತೆ ಅಂತ ಏನೇನೋ ಬರಿತಿರಲ್ರಿ.. ಅವ್ರು ಬೇಡ ನೀವೇ ಮುಂದೆ ನಿಲ್ಲಿ ಸ್ವಾಮಿ, ಸಪೋರ್ಟ್ ಕೊಡ್ತೀವಿ.. ಮೊಸರಲ್ಲಿ ಕಲ್ಲು ಹೊಡ್ಕೋದು ಅಂದ್ರೆ ಇದೆ...
    ಸ್ವಯಂಗೋಷಿತ ಬುದ್ದಿಜೀವಿ ಅಂದುಕೊಂಡಿರೋ ನಿಮ್ಮ ನೀತಿಗೆ ದಿಕ್ಕಾರ...

    ReplyDelete
  24. ಪ್ರಶಾಂತAugust 19, 2011 at 7:18 AM

    ನೀವು ಕೈಯಿಂದ ಚೆನ್ನಾಗೆ ವಂತಿಗೆ ಪಡೆದಿರುವಂತಿದೆ. ಸಂಪಾದಕಿಯಕ್ಕೆ ಧಿಕ್ಕಾರ!

    ReplyDelete
  25. ಕಾ೦ಗ್ರೆಸ್ ಚಮಚಾಗಳಿಗೆ ಸ೦ವಿಧಾನ ನೆನಪಾಗುವುದು ತಮ್ಮ ಕಚ್ಚೆಗೆ ಬೆ೦ಕಿಬಿದ್ದಾಗಲೇ! ಕಾ೦ಗ್ರೆಸ್ ಪಕ್ಷದವರು ಹೇಳಿದ್ದೆಲ್ಲವನ್ನೂ ಇಲ್ಲಿ ಕನ್ನಡಕ್ಕೆ ಅನುವಾದಿಸಿದ೦ತಿದೆ, ಈ ಹೆಸರಿಲ್ಲದವರ ಬರಹದಲ್ಲಿ. ಇದು ಸೊ೦ಪಾದಕೀಯ!

    ReplyDelete
  26. perfectly written...liked your perception in this regard.

    ReplyDelete
  27. ನೆಗೆಟಿವ ಅಂಶಗಳನ್ನೇ ಸಮಾಜದ ಮೇಲೆ ಹೇರುವ ಕೆಟ್ಟ ಲೇಖನ!

    ReplyDelete
  28. Ninne Freedom Parkige Bandu SL Byrappa Enu helidaru anta kela bekkiittu.. too goo speech and comprehensive Analysis of situation !!... Aadrenu maadodu..no TV channel covered it live.. none of them, jansri,suvarana,tv9 .. none of - ellaru Much better chitrad baggene torsta iddru TV .. :( adu newsu channel galaagi !! -Kiran

    ReplyDelete
  29. ಗಣಿ ಹಗರಣದಲ್ಲಿ ಸಾವಿರಾರು ಕೋಟಿ ರೂ. ಲೂಟಿಯಾದಾಗ, ಮುಖ್ಯಮಂತ್ರಿಯೇ ಹತ್ತಾರು ಭೂ ಹಗರಣಗಳಲ್ಲಿ ಸಿಕ್ಕಿಬಿದ್ದಾಗ, ದಲಿತರು-ದುರ್ಬಲರ ಮೇಲೆ ದೌರ್ಜನ್ಯಗಳು ನಡೆದಾಗ, ರೈತರ ಮೇಲೆ ಗೋಲಿಬಾರ್-ಲಾಠಿಚಾರ್ಜ್‌ಗಳು ನಡೆದಾಗ ಇದೇ ಫ್ರೀಡಂ ಪಾರ್ಕಿನಲ್ಲಿ ಯಾರೂ ಕಾಣಿಸಿಕೊಳ್ಳಲಿಲ್ಲವಲ್ಲ, ಯಾಕೆ? ಈಗ ಇದ್ದಕ್ಕಿದ್ದಂತೆ ಎದ್ದುನಿಂತಿರುವ ಸಮೂಹಸನ್ನಿಯಿಂದ ಚೀರಾಡುತ್ತಿರುವ ಗುಂಪಾದರೂ ಯಾವುದು? ಅದರ ಉದ್ದೇಶವಾದರೂ ಏನು? ಈ ಪ್ರಮಾಣದ ದೇಶಭಕ್ತಿ, ಸಾಮಾಜಿಕ ಕಳಕಳಿ ಹೀಗೆ ಒಮ್ಮಿಂದೊಮ್ಮೆಗೆ ಸೃಷ್ಟಿಯಾಗಿದ್ದಾದರೂ ಹೇಗೆ?

    Idu Vitandavaada, Ati buddivantikeno athva adhika prasangada maatugalu annisutillve nimage.. Its been more than month now that ppl are knowing this in every media.. and you are telling idu sudden aagi create aagiro samuha sanni.. - Cmon.. adu yaava aaanandaswamiya pooje naditilla swami.. alli.. saaviraru jana tamma vichaar mandane maadta iddaare.. Hogi palgolli gottagbahudeno..

    ReplyDelete
  30. Most expected article from SAMPADAKEEYA... no wonder... day by day SAMPADAKEEYA making it's political stand very clear!!

    Thank you very much!! :):)

    ReplyDelete
  31. I am Very Sorry...

    When it comes to Corruption, you want to root out, but when Anna mobilize this type of Dharna, you dont want it. I am sorry Iandians Neevu Uddara Aagalla. Nimmantha third class Indians irovargoo Kanditha Bharatha Uddara Agalla...

    Enu Sampadakeeyadalli ella vicharagalannu nimma moogina nerakke vichara maadi bere avra mele hero Prayathna na? We are sorry, We know Who is Anna, What is his intention is...!!!

    Please Neevu Kapil Sibal, Digvijay Singh Agent ranthe varthisodu Namge Ista agalla... :(

    ReplyDelete
  32. ಸಂಸತ್ತು ಸರಿಯಾಗಿ ಕೆಲಸ ಮಾಡಿದ್ದರೆ ಅಣ್ಣಾ ಹಜಾರೆ ಇಂಥ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತಿರಲಿಲ್ಲ. ಹೀಗಿರುವಾಗ ಸಂಸದೀಯ ಪ್ರಜಾಸತ್ತೆಯ ಮೇಲೆ ಒತ್ತಡ ಹೇರುವ ಕೆಲಸ ಸಂವಿಧಾನ ವಿರೋಧಿ ಎಂದು ಹೇಳಲಾಗದು. ಸಂಸದರು ಸರಿಯಾಗಿ ಕೆಲಸ ಮಾಡದಿದ್ದರೆ ಅವರನ್ನು ವಿಚಾರಿಸುವ, ಅವರ ಮೇಲೆ ಒತ್ತಡ ಹೇರುವ ಅಧಿಕಾರ ಜನರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆ. ಆ ಅಧಿಕಾರವನ್ನೇ ಅಣ್ಣಾ ಹಜಾರೆ ಮಾಡುತ್ತಿದ್ದಾರೆ. ಇದನ್ನು ತಪ್ಪೆಂದು ಹೇಗೆ ಹೇಳುವುದು? ಸಂಸದರು ಕೆಲಸ ಮಾಡದಿದ್ದರೂ ನಾವು ಅವರನ್ನು ಐದು ವರುಷ ತೆಪ್ಪಗೆ ಸಹಿಸಿಕೊಂಡಿರಬೇಕೆನ್ದೇನೂ ಇಲ್ಲ. ಅವರ ಮೇಲೆ ಕೆಲಸ ಮಾಡುವಂತೆ ಒತ್ತಡ ಹಾಕುವುದು ಅನಿವಾರ್ಯ. ಇದು ಸಂವಿಧಾನ ವಿರೋಧಿಯಾಗಲಿ, ಸಂಸದೀಯ ಪ್ರಜಾಸತ್ತೆಯ ವಿರೋಧಿಯಾಗಲಿ ಆಗಲಾರದು. ಅಣ್ಣಾ ಅವರು ಮಾಡುತ್ತಿರುವುದು ಇದನ್ನೇ ಅಲ್ಲವೇ? ಸಂಸತ್ತಿನ ಮೂಲಭೂತ ಕೆಲಸ ಏನು? ಜನರಿಗೆ ಅನುಕೂಲವಾದ ಕಾನೂನುಗಳನ್ನು ತರುವುದು ಅವರ ಕೆಲಸ. ಅದಕ್ಕಾಗಿ ಅವರನ್ನು ಆರಿಸಿ ಕಳುಹಿಸಿರುವುದಲ್ಲವೇ? ಅವರು ಆ ಕೆಲಸವನ್ನು ಮಾಡದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಗೂ, ಸರ್ವಾಧಿಕಾರಿ ವ್ಯವಸ್ಥೆಗೂ ಏನಾದರೂ ವ್ಯತ್ಯಾಸ ಇದೆಯೆ? ನಮ್ಮ ಜಿಲ್ಲೆಯಲ್ಲಿ ಒಂದು ರಸ್ತೆ, ಸೇತುವೆ ಕೆಟ್ಟು ಹೋಗಿದ್ದರೆ ಅದನ್ನು ಸರಿಪಡಿಸುವ ಕುರಿತು ಸಂಬಧಪಟ್ಟವರು ಕ್ರಮ ಕೈಗೊಳ್ಳದಿದ್ದರೆ ನಾವು ಅವರನ್ನು ಪ್ರಶ್ನಿಸುವುದು, ಕೆಲಸ ಮಾಡಿಸುವಂತೆ ಒತ್ತಡ ಹಾಕುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಪ್ಪಾಗುತ್ತದೆಯೆ? ಇದು ತಪ್ಪಾಗದಿದ್ದರೆ ಸಂಸತ್ತಿನಲ್ಲಿ ಸೂಕ್ತ ಕಾನೂನು ರೂಪಿಸುವಂತೆ ಒತ್ತಾಯಿಸುವುದು ತಪ್ಪಾಗುವುದಿಲ್ಲ.
    ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವು ಎಡವುತ್ತಿರುವುದು ಸ್ಪಷ್ಟವಾಗಿದೆ. ಇದರ ಪ್ರಯೋಜನವನ್ನು ಕಾಂಗ್ರೆಸ್ಸಗಿಂತ ಹೆಚ್ಚು ಸರ್ವಾಧಿಕಾರಿ ಧೋರಣೆಯ ಪಕ್ಷಗಳು ಪಡೆಯುವ ಸಾಧ್ಯತೆ ಇದೆ. ಹೀಗಾದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಇನ್ನಸ್ಟು ಅಪಾಯಕಾರಿ- ಆನಂದ ಪ್ರಸಾದ್

    ReplyDelete
  33. neevu yako congress party inda sariyagi sambhavane padedanthe kanutte :-)

    ReplyDelete
  34. dabba article, mostly manmohan singh athava sonia ghandi chamacha anisutte baredirodu, annanige vishwada ella kade inda support ide, adakke 150 koti support ide andiddu, ashtu logical thinking illade irovanige annana bagge ee thara kalape lekhana bareyo hakku illa.

    ReplyDelete
  35. hw can u say dat there is link between sangh parivar and anna hazare? dis is ridiculous....if you want pubicity there are other methods to get it rather than being a hindrance to the society.Anna developed a drought riden village and made it the richest village in whole of india and he is developing 70-80 villages in same fashion.U think sangh parivar has its hands in dis also if it has thn hw is it benefited by dis.N you need to reply to the comments of the readers,if u dont thn whts da use of letting the people comment?

    ReplyDelete
  36. hw can u say dat there is link between sangh parivar and anna hazare? dis is ridiculous....if you want pubicity there are other methods to get it rather than being a hindrance to the society.Anna developed a drought riden village and made it the richest village in whole of india and he is developing 70-80 villages in same fashion.U think sangh parivar has its hands in dis also if it has thn hw is it benefited by dis.N you need to reply to the comments of the readers,if u dont thn whts da use of letting the people comment?

    ReplyDelete
  37. ಒಂದು ಸಿನಿಮಾದ ಕ್ಯಾಸೆತ್ತ್ ಒಂದೇ ಗಂಟೆಯಲ್ಲಿ ಸೋಲ್ಡ್ ಔಟ್ ಆಯಿತು ಅಂದಾಗ, ಯಾವ್ದೋ ಮುಕಂಡರ ಬೆಂಬಲಕ್ಕೆ ಕೋಟಿ ಜನರು ಸೇರಿದ್ದಾರೆ ಅನ್ನೋವಾಗ ಇಲ್ಲದ ಈ ಕಳಕಳಿ ನಿಮಗೆ ಈಗ್ಯಾಕೆ ಬಂತೋ ಗೊತ್ತಿಲ್ಲ. ಯಾವ್ದೋ ಡಬ್ಬ ಸಿನಿಮಾದ ಬಗ್ಗೆ ಇಲ್ಲದ ಹಯ್ಪ್ ಕೊಡೋದಕ್ಕಿಂತ ಇದು ಎಸ್ಟೋ ಉತ್ತಮ ಕೆಲಸ. "ಭ್ರಷ್ಟಾಚಾರದ ಹಾಗೆಯೇ ದೇಶವನ್ನು ಕಿತ್ತು ತಿನ್ನುತ್ತಿರುವ ಜಾತೀಯತೆ, ಧರ್ಮಾಂಧತೆ, ಅಸ್ಪೃಶ್ಯತೆ, ರೈತರ ಆತ್ಮಹತ್ಯೆ ಇತ್ಯಾದಿಗಳ ಬಗ್ಗೆ ಇವರ ನಿಲುವುಗಳು ಏನು?" ಅಂತಿರಲ್ಲ ಎಲ್ಲ ಸಮಸ್ಯೆಗೂ ಒಂದೇ ಸಾರಿ ಉತ್ತರ ಕೊಡೋದಕ್ಕೆ ಆಗೋಲ್ಲ. ಜನರನ್ನ ದಿಕ್ಕು ತಪ್ಪಿಸುತ್ತಿರುವವರು ನೀವು.

    ReplyDelete
  38. ಈ ಲೇಖನ ಮತ್ತು ಇದರ ಹಿಂದಿನ ಲೇಖನಕ್ಕೆ ಬಂದಿರುವ ಕೆಲವು ಪ್ರತಿಕ್ರಿಯೆಗಳನ್ನು ಗಮನಿಸಿದರೆ, ಅಣ್ಣಾ ಅವರ ಹೋರಾಟಕ್ಕೆ ಬೆಂಬಲಿಸುತ್ತಿರುವವರ ಒಂದು ವರ್ಗದ ಜನರ ಮನಸ್ಥಿತಿ ಏನೆಂಬುದು ಅರ್ಥವಾಗುತ್ತದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಭಿನ್ನಧ್ವನಿಗಳನ್ನು ಗೌರವಿಸುವುದು, ಮತ್ತೊಬ್ಬರು ಏನನ್ನು ಹೇಳುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಸದಾಚಾರ. ಕೆಲವರಿಗೆ ನಾವು ಕಾಂಗ್ರೆಸ್ ಸಮರ್ಥಕರ ಹಾಗೆ ಕಾಣಿಸುತ್ತಿದೆ. ಹಿಂದೆ ಶೋಭಾ ಕರಂದ್ಲಾಜೆಯವರನ್ನು ಕೀಳಾಗಿ ಅಪಮಾನಿಸುವುದನ್ನು ಖಂಡಿಸಿ ಬರೆದಾಗ, ಸುರೇಶ್ ಕುಮಾರ್ ಅವರ ಸ್ಪಂದನೆಯನ್ನು ಮೆಚ್ಚಿ ಬರೆದಾಗ, ಜಗದೀಶ್ ಶೆಟ್ಟರ್ ಅವರ ಜ್ಯೋತಿಷ್ಯ ವಿರೋಧಿ ನಿಲುವನ್ನು ಹೊಗಳಿ ಬರೆದಾಗ ಯಾರೂ ನಮ್ಮನ್ನು ಬಿಜೆಪಿ ಸಮರ್ಥಕರೆಂದು ಕರೆಯಲಿಲ್ಲ, ನಮ್ಮ ಪುಣ್ಯ.
    ಇಂಥ ದಿಕ್ಕುದೆಸೆಯಿಲ್ಲದ ಚಳವಳಿಯ ಸಮರ್ಥಕರೆಂದು ಹೇಳಿಕೊಳ್ಳುವವರು ಎಷ್ಟು ಅಪ್ರಜಾಸತ್ತಾತ್ಮಕವಾಗಿ ವರ್ತಿಸುತ್ತಾರೆ, ಹೇಗೆ ಭಿನ್ನ ಧ್ವನಿಗಳನ್ನು ಹತ್ತಿಕ್ಕಲು ಯತ್ನಿಸುತ್ತಾರೆ ಎಂಬುದು ಮೇಲಿನ ಕೆಲವು ಕಮೆಂಟ್ ಗಳು ಸಾಬೀತುಪಡಿಸುತ್ತವೆ. ಹೀಗಾಗಿ ಕೆಲವು ಅಸಭ್ಯ, ಅಯೋಗ್ಯ ಕಮೆಂಟ್ ಗಳನ್ನೂ ಮಾಡರೇಟ್ ಮಾಡಬೇಕಾಯಿತು.

    ReplyDelete
  39. ಈ ಹೊರಾಟಾನ ಖಂಡಿಸೋದಿಕ್ಕೆ ಯಾವ ಕಾರಣ ಬೇಕು? ಇದು ಕಾಂಗ್ರೆಸ್ ಪರ ನಿಂತಿರೋರು ಕೇಳಿಕೊಳ್ಳೋ ಪ್ರಶ್ನೆ.ಹೀಗಾಗಿ ಅವರು ಅನಾವಶ್ಯಕವಾಗಿ ಅಣ್ಣಾವರ ಚಾರಿತ್ಯ ವಧೆ ಪ್ರಾರಂಭ ಮಾಡಿದ್ರು. ರಾಜಕೀಯ ಪ್ರೇರಿತ ಆಂದೋಲನ ಎಂಬ ಮೂರ್ಖ ಹೇಳಿಕೆ ಕೊಡ್ತಿದ್ದಾರೆ. ಸಂಪಾದಕೀಯವೂ ಈ ವಿಷಯದಲ್ಲಿ ಧನಾತ್ಮಕವಾಗಿ ಬರಿಯದೆ ಇರೋದು ಅನುಮಾನ ಪಡುವಂತಾಗಿದೆ. ಅಣ್ಣ ಹಜಾರೆಯವರು ಕಳಂಕ ರಹಿತರು ಹೌದೋ ಅಲ್ವೋ, ಯಡಿಯೂರಪ್ಪನವರು ಈ ಅಂದೋಲನದಲ್ಲಿ ಭಾಗಿಯಾಗ್ಬೇಕೋ ಬೇಡವೋ , ಯಾವ ಗುಂಪಿನವರು ಯಾವ ಪಾಪ ತೊಳ್ಕೋಳೋದಿಕ್ಕೇ ಬಂದಿದಾರೋ ಎನ್ನುವುದು ಇದು ಮುಖ್ಯ ಅಲ್ಲ. ಒಳ್ಳೆ ಕಾರ್ಯಕ್ಕೆ ಯಾರೇ ಕೈ ಹಾಕಿದ್ರೂ ಅದು ಸ್ವಾಗತಾರ್ಹ. ಇಲ್ಲಿ ಅಣ್ಣಾ ಅವರ ಜನಲೋಕ್ಪಾಲ್ ಕಾಯಿದೆ ಎಷ್ಟು ಸಮಂಜಸ ಹಾಗು ಕಾಂಗ್ರೆಸ್ಸ್ ಯಾಕೆ ಇದನ್ನು ತರ್ತಾ ಇಲ್ಲ ಅನ್ನೋ ಮುಖ್ಯವಾದ ವಿಚಾರ ಬಿಟ್ಟು ವಿಷಯವನ್ನು ಬೇರೆ ಕಡೆಗೆ divert ಮಾಡ್ತಾ ಇದ್ದಾರೆ. ಮೊದ್ಲು ಸರ್ಕಾರ ಯಾಕೆ ಈ ಕಾಯಿದೆಯನ್ನು ತರ್ತಾ ಇಲ್ಲ ಅಂತ ಸ್ಪಷ್ಟಪಡಿಸ್ಲಿ. ಇದು ನಮ್ಮ ಆಶಯ.
    @ಸಂಪಾದಕೀಯ, ಹಾಗೆ ನೀವು ಈಗ ಅಲವತ್ತುಕೊಂಡಿರುವದು ಕೇಸರಿ ಬಾವುಟ ಅದನ್ನು ಹಿಡಿದುಕೊಳ್ಳುವ ಅಣ್ಣಾರ ಸತ್ಯಾಗ್ರಹಕ್ಕೆ ಸೇರುತ್ತಿದ್ದಿದ್ದರ ಬಗ್ಗೆ. ಮೊದಲಿನಿಂದಲೂ ನಿಮ್ಮಲ್ಲಿನ ಈ ಋಣಾತ್ಮಕ ಗುಣವನ್ನು ಗಮನಿಸುತ್ತ ಬಂದಿದ್ದೇನೆ. ನಮ್ಮ ದೇಶದ ಬಹಳ ಜನರಿಗೆ ಈ ರೋಗ ಇದೆ.

    ReplyDelete
  40. ನಾವು ಸಮಷ್ಟಿ ದೃಷ್ಟಿಕೋನದಿಂದ ಇಡೀ ಸಂದರ್ಭವನ್ನು ಪರಾಮರ್ಶಿಸಬೇಕಾದ ಅಗತ್ಯತೆ ಇದೆ. ಈ ಲೇಖನ ಯಾವುದನ್ನೂ ವಿರೋಧಿಸುತ್ತಲು ಇಲ್ಲ ಅಥವಾ ಪ್ರತಿನಿಧಿಸುತ್ತಲೂ ಇಲ್ಲ , ಇರಬಹುದಾದ ಸಂಗತಿಗಳನ್ನು ತಿಳಿಸಿದೆಯಷ್ಟೇ!! ನಾವು ಗಂಭೀರವಾಗಿ ಆಲೋಚಿಸಬೇಕಿದೆ.... ಸಂಪಾದಕೀಯಕ್ಕೆ ಶುಭಹಾರೈಕೆಗಳು ... :) :)

    ReplyDelete
  41. sookshma samvedhaneya korathe athiyadare athava adu illave illa endaaga heege neevu a pakshada para,e pakshada para endu palayanavadigala chadapadikegalu kandubaruvudu sahajave. horata horata endu bhari badalavaneya bhrameyalliruvavaru janabembala bandaakshana adannu kurudaagi oppibidabeku,preshnisabaaradu emba dhorane hondiruvanthide. ishtondu jana bhrastaachar virodhigaliddaroo kooda bhrastachaaravembudu adheege istu bruhaththaagi beleyithu...? anna hazaareyavareno dhrudavaagi bhrastaachaara nirmulanege mundaagiddare adare aavara shrama saarthakavagodu jana saamaanya luncha keluva adhikaarige lancha yaake kodabeku ninna karthvya nirvahisu endu mukakke hodednathe preshnisi pattubidade lancha needade thanna kelasa madisikondaagale horathu kevala horaatakke bembalisida mathrakke alla. maththe yaake anna hazaareyanthaha hiriya jeevagalu deha dandisuvudannu e desha kaanabekideyo nanaganthu arthavaguththilla ? egalaadaru horaatakke bembalisida hummassinidale naavu badalaguththevendu pana thodi aaga hazaareyavara shrama saarthakavaguththade. eegaagale aneka kaanoonugaliruvudu nimagoo goththu.haagiddaru kanoo ullanghaneya kruthyagalu nadeyuthththiruvudoo goththillave... ? horaatada bagge anumanagalannu horahaakuvavarannu yavudo party ya paravaadavarendu thappaagi arthaisikolluvudaralliya nimma dhrushtikona negative agide endu arthavaguththade. BYDORA BAAGILALLI IDDAROO SARIYE NAGUVAVARA NEREYALLIRABAARADU emba gade maathondide teekegalannu samadhanadinda sweekarisi yochisivudu charcheyannu sakaathmakavagisuththade. ashte horathu idannu barediroru yaaro CYNIC baredirodu endu nirdharisibidodu eshtu sari? haage nirdharisuvudu kooda CYNicathana ansalva? bhrashtaacharavannu aarambhadalliye alisi haakalu e daeshada prathiyobba vyakthiyindaanu sadhya. adare adannariyade horaatakke bembala soochisuvudastarindale samasye parihaarakke thanna neravu kotte endu biguvavaru a samasyeya nivaraneyannu thaave kaaryaropakke tharabekadavaru adakke parihaara nanna jaagruthiyallide emba echacharavannu managaanabekide. e deshada samanya janrinda deshada vyavasthe badalaaguvude horathu yavude raajakaariniyindalla, adhikaariyindalla, embudannu ariyabekide. haagantha avarella bedavendanthalla,beku,adare avarannella jana samaanyaru nirantharavaagi preshnisuththirabeku haagu yavude kaaranakku avara amishagalige aasegannu bidabaradu,darpagalige digilugollabaaradu haagadare e deshadalli janaru beedigilidu horaata madabekaada anivaaryathe baralaradu.

    ReplyDelete
  42. samsaththu sariyagi kelasa maadiddare anna hazare intha horaata hammikollabekiralilla endiddaare yaro obbaru.adu sariye, adare janaru sariyaagiddiddare samsaththu kooda sariyagiye kelasa maduththiththu alve.samasyegala moolavu janaralliruvanthe parihaaravu avara baliye ide.

    ReplyDelete
  43. what wrong here..? its the systematic strategy of some congress media managers' attempt to destabilise the protest that is getting momentum and spreading like wild fire. there are more serious issues that requires more time to discuss n debate. the one sided pro govt. view brings the hypocrite mindset of the person who wrote this.

    ReplyDelete
  44. ಜನರಿ೦ದ ಆಯ್ಕೆಯಾದವರೇ ಕಾನೂನು ಮಾಡಬೇಕು ಎನ್ನುವುದು ಸಹಜ ಮತ್ತು ನಿಯಮ. ಆದರೆ ಎಷ್ಟು ಜನರಿ೦ದ ಆಯ್ಕೆಯಾದವರು ಎನ್ನುವ ಜವಾಬ್ದಾರಿಯುತ ಪ್ರಶ್ನೆ ನಮ್ಮನ್ನು ನಾವೇ ಕೇಳಿಕೊಳ್ಳಬೇಕು. ಆಯ್ಕೆಯಾದವರಲ್ಲಿ ಎಷ್ಟು ಜನರಿಗೆ ಇ೦ಥಹದ್ದೊ೦ದು ಕಾನೂನನ್ನು ಮಾಡಬೇಕೆನ್ನುವ ಇಚ್ಚಾಶಕ್ತಿಯಿದೆ? ಅಷ್ಟಕ್ಕೂ ಜನರಿಗಿರುವ Limited Alternatives ಗಳಲ್ಲಿ ಹಜಾರೆಯ೦ತವರು ಬ೦ದರೆ ಖುಶಿಪಡಬೇಕೆ ಹೊರತು ಕೊ೦ಕು ಹುಡುಕುವದರಲ್ಲಿ ಅರ್ಥ ಇರಲಿ. When end can justify the means let it be.

    ReplyDelete
  45. ಸಂಪಾದಕೀಯದ ನಿಲುವನ್ನು ಕಾಂಗ್ರೆಸ್ ಪರ ಎನ್ನುತ್ತಿರುವವರಿಗೆ ಒಂದು ಪ್ರಶ್ನೆ.
    ಲೋಕಪಾಲ ಮಸೂದೆಯನ್ನು ರಚಿಸಿ 40 ವರ್ಷಗಳಾಗಿವೆ. ಈ ನಡುವೆ ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರವೂ ಆಡಳಿತಕ್ಕೆ ಬಂದಿದೆ. ಆಗ ಇದನ್ನು ಯಾಕೆ ಜಾರಿ ಮಾಡಲಿಲ್ಲ? ಮೊತ್ತೊಂದು ಪ್ರಶ್ನೆ. ಈಗ ಕಾಂಗ್ರೆಸ್ ಜನಲೋಕಪಾಲವನ್ನು ಒಪ್ಪಿಕೊಂಡು ಸಂಸತ್ತಿನಲ್ಲಿ ಮಂಡಿಸಿದರೆ ಬಿಜೆಪಿ ಇದನ್ನು ಒಪ್ಪಿಕೊಳ್ಳುತ್ತದೆಯಾ? ಈಗಾಗಲೇ ಬಿಜೆಪಿ ಹೇಳಿದೆ. ತಾನು ಜನಲೋಕಪಾಲವನ್ನು ಒಪ್ಪಿಕೊಳ್ಳುವುದಿಲ್ಲ ಎಂದು. ಮತ್ತೆ ಯಾಕೆ ಈ ನಾಟಕ? ೀ ಹೋರಾಟದಲ್ಲಿ ಭಾಗವಹಿಸಲು ಬಿಜೆಪಿಗೆ ಯಾವ ನೈತಿಕ ಹಕ್ಕು ಇದೆ ತಿಳಿಸಬೇಕು ಮಾನ್ಯ ಕಮೆಂಟು ವೀರರು.-
    ಶಿವಪುತ್ರ

    ReplyDelete
  46. ಇದುವರೆಗೂ ಬ್ರಷ್ಟಾಚಾರದ ವಿರುದ್ದ ಅನೇಕರು ಹೋರಾಟ ಮಾಡುತ್ತಲೇ ಬಂದಿದ್ದಾರೆ. ಆದರೆ ಅನೇಕರನ್ನ ಹೆಸರಿಲ್ಲದೆ ನೆಲ ಸಮಾಧಿ ಮಾಡಿದ್ದರೆ ನಮ್ಮ ದೇಶದ ರಾಜಕಾರಣಿಗಳು.
    ಇಂಥ ಸಮಯದಲ್ಲಿ ಎಲ್ಲಕದಇಂದ ಅಣ್ಣ ಹಜಾರೆಯ ಹೋರಾಟಕ್ಕೆ ಬೆಂಬಲ ದೊರೆಕಿರುವುದು ಅತ್ಯಂತ ಸಂತೋಷದ ವಿಚಾರ. ದಯವಿಟ್ಟು ಕ್ಷಮಿಸಿ ನಿಮ್ಮ ಲೇಖನ ವೈಚಾರಿಕ ಪ್ರತಿಷ್ಠೆ ಅಥವಾ ವಯಕ್ತಿಕ ರಾಜಕೀಯ ಮನಸ್ಥಿತಿಯನ್ನ ಬಿಂಬಿಸುತ್ತಿದೆ .

    ReplyDelete
  47. ತಮ್ಮ ಈ ಲೇಖನವನ್ನೂ ಖಂಡಿತಾ ಸ್ವಾಗತಿಸಲೇಬೇಕು.ಇಂದು ಜನಲೋಕಪಾಲ ಮಸೂದೆಯ ಜಾರಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ಸಿಗುತ್ತಿರುವ ಬೆಂಬಲ ಹಾಗು ಅದರ ಹಿಂದೆ ಬಿದ್ದಿರುವ ಮಾಧ್ಯಮಗಳ ಪೈಪೋಟಿ ನೋಡಿದಾಗ ಈ ಹೋರಾಟದ ಮೂಲ ಉದ್ದೇಶದ ಬಗ್ಗೆಯೇ ಸಂಶಯ ಮೂಡುವುದು ಸಹಜ.ಜನಲೋಕಪಾಲ್ ಮಸೂದೆಯ ಶೀಘ್ರ ಜಾರಿಯಾಗಬೇಕಾದರೆ ಬರೀ ಚಳುವಲಿಯೊಂದೆ ಮಾರ್ಗ ಎಂಬುದು ಸತ್ಯ. ಆದರೆ ಈ ಚಳುವಳಿ ಸಾಗುತ್ತಿರುವ ರೀತಿ ಹಾಗು ಇದನ್ನು ಬೆಂಬಲಿಸುತ್ತಿರುವ ಕೆಲವು ನಾಯಕರುಗಳು ತಾವೆಸ್ತು ಸಾಚಾಗಳು ಎನ್ನುವುದನ್ನ ಪರಾಮರ್ಶಿಸುವುದು ಸೂಕ್ತ. ಕೋಟಿಗಟ್ಟಲೆ ಆಸ್ತಿಗಳ ಒಡೆಯರಾದ ರಾಮದೇವ್ , ರವಿಶಂಕರ್ ಗುರೂಜಿ ಮುಂತಾದವರ ಬೆಂಬಲವೇ ಇದರ ದಿಕ್ಕನ್ನ ಬದಲಾಯಿಸಿದೆ.ಲೋಕಪಾಲ್ ಚಳುವಳಿಯು ಬರಿ ಕೇನ್ದ್ರ ಸರಕಾರವನ್ನು ಅಸ್ತಿರಗೊಲಿಸುವ ಪ್ರಯತ್ನದಂತೆ ಕಂಡರೂ ಆಚರಿಯಿಲ್ಲ. ಲೋಕಪಾಲ್ ಬಿಲ್ ಜಾರಿಮಾದಬೇಕಾದ ಸಂಸತ್ ಸದಸ್ಯರನ್ನು ಮನವೊಲಿಸಿ ಒತ್ತಡ ತಂದಿದ್ದರೆ ಇದು ಅರ್ಥ ಪೂರ್ಣವಾಗಿರುತಿತ್ತು.

    ReplyDelete
  48. Manya sampadakare..... Anna enu E deshada pradhani patta athva president pattana keltidara.... Bhrastacharada virudha Dani ettiddare.. Rajakaranigalu Deshavannu kolle hodeyuttiddare.... Ex: A. Raja, Kanimozi aste alla rajyadalli Ex CM's Yaddi and kumaraswamy and others.... bhandanada bhitiyallidare... idu salade annage support madalu... Ullavaru Chennagi madkotidare... adre... illadavara Padu?
    ...................
    Deshadalli estara mattig

    ReplyDelete
  49. ನೀವು ಮಾಧ್ಯಮ ದವರು ಎಂದು ಹೇಳಿಕೊಳ್ಳುತ್ತೀರ, ಬಹುಶಃ ನೀವು ಕೆಲ್ಸ ಮಾಡುವ ಆ ಮಾಧ್ಯಮ ಎಕ್ಕುಟ್ಟಿ ಹೋಗಿರುವುದರಲ್ಲಿ ನಿಮಗೇನಾದ್ರೂ ಸಂಶಯ ಇದೆಯ? ಒಂದ್ ಅಂಶ ಮೆಚ್ಚಬೇಕು ನಿಮ್ಮ ದೃಷ್ಟಿ ಅದೆಷ್ಟು ದೋಷಪೂರಿತವಾಗಿದ್ರೂ ನೀವ್ ನೋಡೋದೆ ಸರಿ ಅನ್ನುವ ನಿಲುವು

    ReplyDelete