Thursday, January 6, 2011

ಆರ್‌ಎಸ್‌ಎಸ್ ಶಿಸ್ತು- ವಿರೋಧಿಗಳು ಸುಸ್ತು-ಪ್ರಜಾವಾಣಿ ಬೇಸ್ತು

ಇದೊಂದು ಸುದ್ದಿಯನ್ನು ಗಮನಿಸಿ ನೋಡಿ. ಇದನ್ನು ಬರೆದವರು ಈಗ ಪ್ರಜಾವಾಣಿಯ ಗುಲ್ಬರ್ಗ ಬ್ಯೂರೋ ಚೀಫ್ ಆಗಿರುವ ಉದಯ ಶಂಕರ ಭಟ್. ಇದನ್ನು ಬರೆದಾಗ ಸನ್ಮಾನ್ಯರು ಹುಬ್ಬಳ್ಳಿ ಬ್ಯೂರೋದಲ್ಲಿದ್ದರು. ತಲೆಬರೆಹ ಓದಿದರೇ ಸಾಕು ಈ ಸುದ್ದಿಯ ಮಹಾತ್ಮೆ ಏನೆಂಬುದು ಅರ್ಥವಾಗುತ್ತದೆ.

ಇದು ಕಾಸಿಗಾಗಿ ಬರೆದ ಸುದ್ದಿಯಲ್ಲ. ಪ್ರಜಾವಾಣಿ ಕಾಸಿಗಾಗಿ ಬರೆಯುವ ಪರಿಪಾಠವನ್ನು ಬೆಳೆಸಿಕೊಂಡಿಲ್ಲ. ಕಾಸಿಗಾಗಿ ಸುದ್ದಿಯನ್ನು ಕನ್ನಡ ಮಾಧ್ಯಮಗಳ ಪೈಕಿ ನೇರವಾಗಿ ವಿರೋಧಿಸಿದ್ದು ಪ್ರಜಾವಾಣಿ ಮಾತ್ರ. ಅದಕ್ಕಾಗಿ ಪ್ರಜಾವಾಣಿಯನ್ನು ಅಭಿನಂದಿಸಲೇಬೇಕು. ಹೀಗಾಗಿ ಇದನ್ನು ಅಡ್ವಟೋರಿಯಲ್ ಎಂದು ಭಾವಿಸುವಂತಿಲ್ಲ.

ಇದು ಪ್ರಜಾವಾಣಿಯ ಶೈಲಿಯೂ ಅಲ್ಲ. ಪ್ರಜಾವಾಣಿ ಎಂದಿಗೂ ಸಂಘಪರಿವಾರದ ಚಟುವಟಿಕೆಗಳನ್ನು ವೈಭವೀಕರಿಸಿ ಬರೆದದ್ದೂ ಇಲ್ಲ. ಬಹುಶಃ ಈ ಸುದ್ದಿ ಹೊಸದಿಗಂತಕ್ಕೋ, ಸಂಯುಕ್ತ ಕರ್ನಾಟಕಕ್ಕೋ ಅಥವಾ ಪಾಂಚಜನ್ಯ, ವಿಕ್ರಮ ತರಹದ ಪತ್ರಿಕೆಗಳಿಗೆ ಹೊಂದಬಹುದೇನೋ?

ಹಾಗಿದ್ದಾಗ್ಯೂ ಕಳೆದ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಈ ಸುದ್ದಿ ಉದಯ ಶಂಕರ ಭಟ್ಟರ ಶಿರೋನಾಮೆಯೊಂದಿಗೆ ಪ್ರಕಟವಾಗಿದ್ದು ಹೇಗೆ? ಪ್ರಕಟವಾದ ಮೇಲೂ ಅದನ್ನು ಅವರು ಜೀರ್ಣಿಸಿಕೊಂಡಿದ್ದು ಹೇಗೆ?

ಇದೇ ಪ್ರಜಾವಾಣಿಯಲ್ಲಿ ದಿನೇಶ್ ಅಮೀನ್ ಮಟ್ಟು ಅವರು ಪತ್ರಕರ್ತರು ಎಡವುತ್ತಿರುವುದು ಎಲ್ಲಿ ಎಂಬುದನ್ನು ಎಳೆಎಳೆಯಾಗಿ ಬರೆದು, ಅವರಿಗೆ ಸೃಷ್ಟಿಯಾಗಿರುವ ಅಭಿಮಾನಿಗಳಿಂದ ಭೇಷ್ ಅನ್ನಿಸಿಕೊಳ್ಳುತ್ತಾರೆ. ಪದ್ಮರಾಜ ದಂಡಾವತಿಯವರು ಪತ್ರಕರ್ತರು ಕಿತ್ತು ತಿನ್ನುವ ನಾಯಿಗಳಾಗಿದ್ದಾರೆ ಎಂಬ ಶರಣರ ಮಾತನ್ನು ಸಮರ್ಥಿಸಿ, ಪತ್ರಕರ್ತರ ಭ್ರಷ್ಟಾಚಾರದ ವಿರುದ್ಧ ಕತ್ತಿ ಝಳಪಿಸುತ್ತಾರೆ. ಭ್ರಷ್ಟಾಚಾರದ ವಿಷಯದಲ್ಲಿ ನಮ್ಮದು ಜೀರೋ ಟಾಲರೆನ್ಸ್ ಎಂದು ಪ್ರಜಾವಾಣಿಯ ಸಂಪಾದಕ ಶಾಂತಕುಮಾರ್ ತಮ್ಮ ಆಪ್ತರಲ್ಲಿ ಹೇಳಿಕೊಳ್ಳುವುದುಂಟು.

ಇಲ್ಲಿ ಪ್ರಕಟವಾಗಿರುವ ಸುದ್ದಿ ಒಂದು ಉದಾಹರಣೆ ಮಾತ್ರ. ಇಂಥವು ನೂರಾರು ಹುಬ್ಬಳ್ಳಿ, ಗುಲ್ಬರ್ಗ ಬ್ಯೂರೋಗಳಲ್ಲಿ ಪ್ರಕಟವಾಗಿವೆ. ಇವುಗಳನ್ನು ಸಂಪಾದಕ ಮಂಡಳಿ ಗಮನಿಸುವುದಿಲ್ಲವೆ? ಇಂಥ ಸುದ್ದಿಗಳಲ್ಲಿ ಭ್ರಷ್ಟಾಚಾರದ ವಾಸನೆ ಸಾಮಾನ್ಯ ಓದುಗನಿಗೇ ರಾಚುವಾಗ ಬೆಂಗಳೂರಿನ  ಎಂಜಿ ರಸ್ತೆಯಲ್ಲಿ ಕುಳಿತ ಮೇಧಾವಿಗಳಿಗೆ ಗೊತ್ತಾಗುವುದಿಲ್ಲವೆ?

ಅಷ್ಟಕ್ಕೂ ಪ್ರಜಾವಾಣಿಯ ಉತ್ತರ ಕರ್ನಾಟಕದ ಉಸ್ತುವಾರಿ ಹೊತ್ತಿರುವ ಗೋಪಾಲ ಕೃಷ್ಣ ಹೆಗಡೆ ಏನು ಮಾಡುತ್ತಿದ್ದಾರೆ? ಅವರೇಕೆ ತಮ್ಮ ಶಿಷ್ಯ ಉದಯ ಶಂಕರ ಭಟ್ಟರನ್ನು ರಕ್ಷಿಸಿಕೊಳ್ಳಲು ಯತ್ನಿಸುತ್ತಿದ್ದಾರೆ? ಇವರಿಬ್ಬರ ಮಾತಿಗೆ ಪದ್ಮರಾಜ ದಂಡಾವತಿಯವರೇಕೆ ಸೊಪ್ಪು ಹಾಕುತ್ತಾರೆ?

ಪ್ರಶ್ನೆಗಳೇನೋ ಇವೆ. ಉತ್ತರ ಸಿಕ್ಕೀತೆಂಬ ಭರವಸೆಗಳು ಕಾಣುತ್ತಿಲ್ಲ.

ಆದರೆ ಇವು ಕೇವಲ ಪ್ರಶ್ನೆಗಳಲ್ಲ, ವಿಶ್ವಾಸಾರ್ಹತೆಯ ಪ್ರಶ್ನೆಗಳು. ಹೀಗಾಗಿ ಉತ್ತರ ಸಿಗುವವರೆಗೂ ಕೇಳುತ್ತಲೇ ಇರುತ್ತೇವೆ.

11 comments:

 1. Newspapers like Prajavani also followed VK model.
  Decentralization of Editorial desk. There is no control over regional editions. The blogger should visit regional centers and find out this type of paid news/sponsored ARTICLE, FULL PAGE COVERAGE everyday.
  Editor,Associate Editor, Deputy Editors, News Editor, rural news coordinators are hardly their own newspapers..
  What happened VK Bangalore same thing is happening every regional editions of VK,PV,SK,KP etc
  Some body should alert IT department. Because, these Editors, owners & Journalists are highly INSENSITIVE(insensitive...
  Save our Society from these so called MEDIA

  ReplyDelete
 2. ಇದು ಪ್ರಜಾವಾಣಿಯಲ್ಲಿ ಪ್ರಕಟವಾದ ಸುದ್ದಿನಾ? ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ.

  ReplyDelete
 3. prajavani egaladaru echettukollali

  ReplyDelete
 4. ನಾನು ಕಳೆದ ೨೮ವರ್ಷಗಳಿಂದ ಪ್ರಜಾವಾಣಿಯ ಓದುಗ. ಪ್ರಜಾವಾಣಿಯಲ್ಲಿ ಈಗ್ಯೆ ಕೆಲ ವರ್ಷಗಳಿಂದ ಕೇಸರಿ ಗಾಳಿ ಬೀಸುತ್ತಿದೆ ಎಂಬ ಪುಕಾರಿತ್ತು ಅದು ನಿಜವೂ ಆಗುತ್ತಿದೆ, ಸದರಿ ವರದಿ ಗಮನಿಸಿದ್ದೇನೆ. ಪ್ರಜಾವಾಣಿಯ ಮುಖ್ಯಸ್ಥರಿಗೆ ಅದನ್ನು ಗಮನಿಸುವ ಪುರುಸೊತ್ತಿದೆಯೇ ಇಲ್ಲವೋ? ಬಹುಶ ಕೇಸರಿಗಳ ಹಾವಳಿ ಮತ್ತು ಪತ್ರಿಕಾ ಒಡೆಯರ ಕೈಕೆಳಗೆ ಹೊಣೆ ನಿರ್ವಹಿಸುವವರ ಅಹಂ ಪಕ್ಷಪಾತಿ ಧೋರಣೆ ಇದಕ್ಕೆ ಅವಕಾಶ ಮಾಡಿರಲಿಕ್ಕೆ ಸಾಕು.ಇದು ಪ್ರಜಾವಾಣಿ ಗೆ ಖಂಡಿತಾ ಒಳ್ಳೆಯದಲ್ಲ
  - ಅರಕಲಗೂಡು ಜಯಕುಮಾರ್

  ReplyDelete
 5. ಇದರಲ್ಲಿ ಆರ್ ಎಸ್ ಎಸ್ ವೈಭವೀಕರಣ ಏನಿದೆ? ಆರೆಸ್ಸೆಸ್ಸಿನಲ್ಲಿ ಪಳಗಿದವರ ಶಿಸ್ತೇ ಅವರ ತಾಕತ್ತು ಎಂಬುದನ್ನು ಹೇಳಲಾಗಿದೆ. ಆರೆಸ್ಸೆಸ್ಸು ಎಂತಹ ಶಿಸ್ತಿನ ಸಂಘಟನೆ ಎಂಬುದು ಅವರ ವಿರೋಧಿಗಳಿಗೂ ಗೊತ್ತಿರುವುದೇ ತಾನೆ. ಪ್ರಜಾವಾಣಿಯಲ್ಲಿ ಇಂತದ್ದೇ ಹೀಗೇ ಬರೆಯಬೇಕು ಅದೇ ಹಳೇ ಸಾಂಪ್ರದಾಯಿಕ ಮುಖವಾಡ ಹಾಕಿಕೊಂಡಿರಬೇಕು ಎಂದು ಬಯಸುವುದು ಎಷ್ಟು ಸರಿ. ನಿಮ್ಮ ಅನಿಸಿಕೆಗೆ ತಕ್ಕಂತೆ ಒಂದು ಪತ್ರಿಕೆ ತಯಾರಾಗುವುದು ಸಾಧ್ಯವಿಲ್ಲವಲ್ಲ.

  ReplyDelete
 6. @ ಉದಯ
  ಮಾನವೀಯವಾಗಿರುವುದು, ಪ್ರಜಾಪ್ರಭುತ್ವದ ಪರವಾಗಿರುವುದು, ಕೋಮುವಾದಿಗಳಿಗೆ ವಿರುದ್ಧವಾಗಿರುವುದು ಹಳೇ ಸಂಪ್ರದಾಯವೆನ್ನುವುದಾದರೆ ಆ ಹಳೇ ಸಂಪ್ರದಾಯವೇ ಲೇಸು. ಪ್ರಜಾವಾಣಿ ಹೊಸ ಮುಖವಾಡ ಹಾಕಿಕೊಳ್ಳುವುದು ಬೇಡ

  ReplyDelete
 7. @Anonymous, ಆರೆಸ್ಸೆಸ್ ಶಿಸ್ತು ಅನ್ನುವುದರಲ್ಲಿ ಅಮಾನವೀಯತೆ ಏನು ಕಾಣಿಸಿತು ನಿಮಗೆ?!

  ReplyDelete
 8. @ udaya
  uttara prajavaniya ivattina sanchikeyalle ide. omee odi nodi
  http://www.prajavani.net/Content/Jan102011/dinesh20110109221930.asp

  ReplyDelete
 9. You might heard the Question paper leakage in the school, colleges. it is quite common. But, you known one more intersting scam in the Prajavani. i.e. malpracticein the entrnace test. Prajavani coundt entrance tests to recruit the trainee staff every year. before 2 years back. literally question paper of the prajavani entrance test leakead before 2-3 days earliar. one boy (kulkarni) got this paper.This scam made lot of news in the prajavani corridors. Even Mr. Shantakumar knew this. but no use. no action taken on anybody. it is just because....once again culprits and beneficiry are sameold 'KULKARNIS AND BHATTS'
  THIS KIND OF SOCIAL JUSTCE IS PRACTICE IN SECULAR PAPER. WHAT A TRAGEDY. ISN'T IT?

  ReplyDelete
 10. first of all i would like to congratulate sampadakeeya.blogspot.com. for it's unbiased and true stories of Media world. As you wrote in the previous write up about bureau chief of Gulbarga Prajavani, Mr. Udayshankar Bhatt, which is 100% true. when he was in Hubli, he acted like RSS/ABVP/BJP CORRESPONDENT. He dip the secular paper like prajavani in the saffron colour. hatsoff to Mr. Gopalkrishna Hegde. he knows every thing about Mr. udayshankar Bhat

  ReplyDelete
 11. Is it Udaya Bhat is the only BJP/RSS person in Prajavani. Ask Ranjan Darga, who worked there for several years. What about former PV Asso Editor and Present CM's media adviser R>P>jagadish, present news head and Union leader, Govt Awardee, cinema write Gangadhar...list goes on. Whatever the criticism by some cinics Padmaraja Dandavathe is not at all communal and not harmful society & Media. we should support Dandavathe.He was held responsible for Some petty mistakes done by others.

  ReplyDelete