Tuesday, January 18, 2011

ಅಕ್ಷರ ಮತ್ತು ಜೋಗಿ: ಕೆಲವು ಪ್ರತಿಕ್ರಿಯೆಗಳು

Anonymous said...
ಅಕ್ಷರ ಮತ್ತು ಜೋಗಿ ಮಾತುಗಳನ್ನು ಒಪ್ಪುವುದಾದರೆ,
ಬೆತ್ತಲೆ ಸೇವೆಗೆ ಬಲಿಯಾಗುವ ಮಹಿಳೆಯರು ತಮಗೆ ಆಗುತ್ತಿರುವುದು ಅವಮಾನ ಎನ್ನುವುದನ್ನು ಅರಿತುಕೊಳ್ಳುವ ತನಕ ಅದು ಅವಮಾನವಲ್ಲ. ಅಲ್ಲದೆ, ಕಳೆದ ಐವತ್ತು ವರ್ಷಗಳ ಹಿಂದೆ ಬೆತ್ತಲೆ ಸೇವೆ ಮಾಡಿದವರು ಇಂದು ಬಾಲಿವುಡ್ ಸ್ಟಾರ್ ಗೆ ಜನ್ಮ ನೀಡಿದ್ದಾರೇನೋ ಎಂಬುದನ್ನು ಮೊದಲು ಸಂಶೋಧನೆ ಮಾಡಬೇಕು. ಶತ ಶತಮಾನಗಳಿಂದ ಗಂಡನನ್ನು ಕಳೆದುಕೊಂಡವರು ತಲೆ ಬೋಳಿಸಿಕೊಂಡು, ಕುಂಕುಮ, ಹೂ ಮುಡಿಯದೆ ಬದುಕಿದ್ದರೆ ಅದು ಈ ಸಮಾಜಕ್ಕೆ ಆದ ಅವಮಾನವಲ್ಲ. ಕಾರಣ ಆ ಮಹಿಳೆ ಅದನ್ನು ಒಪ್ಪಿಯೇ ಅನುಸರಿಸಿದ್ದು. ಕಳೆದ ಐವತ್ತು ವರ್ಷಗಳ ಹಿಂದೆ, ಹೀಗೆ ಬದುಕಿದ ವಿಧವೆಯರ ಸ್ಥಿತಿ ಏನು ಎಂಬುದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕು. ಅಂತಹ ಅಧ್ಯಯನದಲ್ಲಿ ವಿಧವೆಗೆ ವಿಧಿಸಿದ ನಿರ್ಬಂಧಗಳಿಂದ ತಲೆಗೆ ಹಚ್ಚುವ ಎಣ್ಣೆ, ಹೂ ಖರ್ಚು, ಕುಂಕುಮ ವೆಚ್ಚ ಎಲ್ಲವೂ ಉಳಿಯುತ್ತೆ ಎಂದು ಯಾವುದಾದರು ತಲೆಕೆಟ್ಟ ಎಕಾನಮಿಸ್ಟ್ ತೀರ್ಪು ಕೊಟ್ಟರೆ, ಅಂತಹ ಅನಿಷ್ಟ ಪದ್ಧತಿ ಈ ಸಮಾಜಕ್ಕೆ ಆದ ಅವಮಾನವಲ್ಲ - ನಮ್ಮ ಪೂರ್ವಿಕರು ಪಾಲಿಸಿಕೊಂಡು ಬಂದ ಆರ್ಥಿಕ ಮಿತವ್ಯಯ ಕ್ರಮ ಎಂದು ಜೋಗಿ ತರಹದವರು ಘೋಷಿಸುತ್ತಾರೆ!
ಅಕ್ಷರ, ಜೋಗಿ ಯಂತಹವರನ್ನು ಬುದ್ಧಿವಂತ ಬರಹಗಾರರು ಎಂದು ನಂಬಿಕೊಂಡು ಅವರನ್ನು ಓದುತ್ತಿರುವವರು ಇನ್ನಾದರೂ ಈ  ಸೋಗಲಾಡಿಗಳ ಆಲೋಚನಾ ಕ್ರಮಗಳನ್ನು ಅರ್ಥ ಮಾಡಿಕೊಳ್ಳಬೇಕು.


dinesh patwardhan said...
bettalada manassu !



Anonymous said...
ಅಕ್ಷರ ಅವರ ವಾದದ ಬಗ್ಗೆ ನಿಮಗನಿಸುವುದನ್ನು ಹೇಳಬಹುದು. ಆದರೆ ಪ್ರಜಾವಾಣಿ ಲೇಖನ ಪ್ರಕಟಿಸಿದ್ದೇ ತಪ್ಪು; ಹಾಗೆ ಮಾಡಿದ್ದರಿ೦ದ ಅದು ವಿಜಯಕರ್ನಾಟಕದ ತಮ್ಮ ಎ೦ಬಿತ್ಯಾದಿ ತೀರ್ಪುಗಳು ಕೇಸರಿ ಮನೊಭಾವದಷ್ಟೇ ಅಪಾಯಕಾರಿ

Anonymous said...
Akshara and Jogi need to understand the difference between a 'belief' and a 'blind belief'. If a person prefers to take blessings of his father by touching his feet before venturing into a journey in his life, it is his belief. If the father insists the son to take blessings of a priest or a brahmin in the neighborhood also, it is his 'blind belief'. A son never feels insulted to take blessings of his father. But he is insulted when he is asked to bend before a stranger in a priest.

It is disheratening to know that Akshara, son of a socialist K V Subbanna, who played a role in popularising Lohia in Karnataka, argues as a conformist. Karnataka has a great tradition of writers who pressed upon scientific outlook in creative writing. Interestingly, most of the commentators who stand by Akshara represent a particular sect in society responsible for continuing untouchability.


Anonymous said...
ಹೌದು ಮತ್ತೆ. ಅಕ್ಷರ ಹೇಳುವದು ನಿಜ. ಬ್ರಾಹ್ಮಣರೋ ಇನ್ನಾರೋ ಉಂಡ ಎಂಜಲೆಲೆಗಳ ಮೇಲೆ ಉರುಳಾಡುವ ಮುಖಾಂತರ ತನಗೆ ಅವಮಾನ ಆಗುತ್ತದೆ ಎಂದು ತೀರ್ಮಾನಿಸುವವನು ಕೊನೆಗೂ ಆ ಅವಮಾನಿತನೇ ಆಗಿರಬೇಕು. ನಗ್ನವಾಗಿ ಬೇವಿನುಡುಗೆ ಉಟ್ಟು ಹರಕೆ ತೀರಿಸುವದು ಅವಮಾನಕರ ಎಂದು ಸ್ವತ: ಬೇವಿನ ತೊಪ್ಪಲು ಮೆತ್ತಿಕೊಂಡು ಹೋಗುವಾಕೆಗೆ ಅನಿಸಬೇಕು.ಪಶ್ಚಿಮದ ಎನಲೈಟನ್ಮೆಂಟ್ ಪ್ರೇರಿತ ಮೌಲ್ಯಪ್ರಜ್ನೆಯಿಂದ ಯಾಕೆ ನಿಮ್ಮಂಥ ಪ್ರಗತಿಪರರು ಅದನ್ನು ಅವಮಾನಕರ, ಅನಾಗರಿಕ ಅಂತೆಲ್ಲಾ ಹೇಳಿ ಅಕ್ಷರರಂಥ ಪ್ರಕಾಂಡ ಪಂಡಿತರನ್ನು ಕೆರಳಿಸಿ ಇಂಥ ಅತಿಬೌದ್ಧಿಕ ಲೇಖನ ಬರೆಯಲು ಹಚ್ಚುತ್ತೀರಿ? ಅದಕ್ಕಿಂತ ಐಪಿಎಲ್ ಹರಾಜಿನಂಥ ಸಂಗತಿಗಳನ್ನು ಅತ್ಯಂತ ಘೋರ, ಅವಮಾನಕಾರಿ ಎಂಬುದಾಗಿ ಗೋಳಾಡಿ ಅಕ್ಷರರಂಥ ಕಾಲಶೇಷಗಳನ್ನು ಸಂಪ್ರೀತಗೊಳಿಸಬೇಕು......

Ashraf manzarabad said...
ಅಕ್ಷರ ಅವರ ಲೇಖನ ಅವರ ನೈಜ ಮನಸ್ಥಿಯನ್ನು ಹೊರಹಾಕುವಂತಿದೆ. ಆದರೆ ಅದನ್ನು ಸಂಪೂರ್ಣವಾಗಿ ಹೊರಗೆ ಹಾಕಲು ಸ್ವಲ್ಪ ಹಿಂಜರಿಕೆ ತೋರಿದ್ದಾರೆ. ಆದರೂ ಓದುಗರು ಅದನ್ನು ಅರ್ಥ ಮಾಡಿಕೊಳ್ಳದಷ್ಟು ದಡ್ಡರಲ್ಲ

Anonymous said...
ಬೆತ್ತಲೆ ಸೇವೆ ಮಾಡುವ ಹೆಣ್ಣುಮಕ್ಕಳಿಗೂ ತಾವು ಬೆತ್ತಲೆಯಾಗುವುದು ಅವಮಾನ ಅನ್ನಿಸುವುದಿಲ್ಲ.
ಅಕ್ಷರ ಅವರು ಬೆತ್ತಲೆ ಸೇವೆಯನ್ನೂ ಸಮರ್ಥಿಸುತ್ತಾರೆಯೇ?

1 comment: