Saturday, January 8, 2011

ನಿತ್ಯಾನಂದನಿಗೆ ಗಂಟುಬಿದ್ದ ಪತ್ರಕರ್ತರು ಆ ಹುಡುಗಿಯನ್ನೇಕೆ ಮರೆತರು?

ಇದನ್ನು ನಿರೀಕ್ಷಿಸಿದ್ದೆವು. ನಿನ್ನೆಯಿಂದ ಒಂದು ರಾಶಿ ಇ-ಮೇಲ್‌ಗಳು. ಎಲ್ಲವೂ ಒಂದೇ ಮಾದರಿಯವು. ನಿನ್ನೆ ಪ್ರಕಟಿಸಿದ ಪೋಸ್ಟ್ ಅಷ್ಟೊಂದು ಪ್ರಭಾವಶಾಲಿಯಾಗಿತ್ತಾ ಎಂಬ ಅಚ್ಚರಿ ನಮ್ಮದು. ಈ ದ್ವೇಷದ ಇ-ಮೇಲ್‌ಗಳನ್ನು ಪ್ರಕಟಿಸುವುದೂ ಸಾಧ್ಯವಿಲ್ಲ, ಹೀಗಾಗಿ ಪ್ರಕಟಿಸುವ ಗೋಜಿಗೆ ಹೋಗಿಲ್ಲ. ಎಲ್ಲ ಅಭಿಮಾನಿ ಬಂಧುಗಳಿಗೂ ಕೃತಜ್ಞತೆಗಳು.

ಆದರೆ ಪ್ರಶ್ನೆಗಳು ಹಾಗೇ ಉಳಿದಿವೆ.

ನಿತ್ಯಾನಂದ ಸ್ವಾಮೀಜಿಯ ಲೈಂಗಿಕ ಹಗರಣದ ವಿಷಯಕ್ಕೆ ಬನ್ನಿ. ನಿತ್ಯಾನಂದ ಮತ್ತು ರಂಜಿತಾರ ನಡುವಿನ ಸಂಬಂಧವನ್ನು ಬಯಲು ಮಾಡುವ ಟೇಪ್ ನೋಡಿದ ಎಲ್ಲರಿಗೂ ಅರ್ಥವಾಗುವುದೇನೆಂದರೆ ಅದು ಇಬ್ಬರಿಗೂ ಒಪ್ಪಿತ ಸಂಬಂಧ. ನಿತ್ಯಾನಂದನಾಗಲಿ, ರಂಜಿತಾ ಆಗಲಿ ಒಬ್ಬರನ್ನೊಬ್ಬರು ಬಲವಂತದಿಂದ ಕಾಮಕ್ರಿಯೆಗೆ ತೊಡಗಿಸಿದಂತೆ ಕಾಣುವುದಿಲ್ಲ. ಮೇಲಾಗಿ ರಂಜಿತಾ ಈ ಕುರಿತು ಯಾವ ಪೊಲೀಸ್ ಠಾಣೆಯಲ್ಲೂ ದೂರು ಸಲ್ಲಿಸಲಿಲ್ಲ. ನಿಜ, ಇದರಲ್ಲಿ ನೈತಿಕತೆಯ ಪ್ರಶ್ನೆಗಳಿದ್ದವು. ಹೀಗಾಗಿ ನಿತ್ಯಾನಂದ ಜನಸಾಮಾನ್ಯರ ದೃಷ್ಟಿಯಲ್ಲಿ ಪಾತಾಳಕ್ಕೆ ಕುಸಿದುಬಿದ್ದಿದ್ದ.

ಆದರೆ ಟೇಪ್ ಬಯಲಿಗೆ ಬಂದ ನಂತರ ಅದನ್ನು ನಮ್ಮ ಟಿವಿ ವಾಹಿನಿಗಳು ಅದೆಷ್ಟು ಬಾರಿ ತೋರಿಸಿದವು? ಯಾವ ಚಾನೆಲ್ ಹಾಕಿದರೂ ಇದೇ ವಿಡಿಯೋ. ನಮ್ಮ ಟೀವಿಗಳಲ್ಲಿ ಗಂಟೆಗಟ್ಟಲೆ ಆ ಕುರಿತೇ ಸರಣಿಯೋಪಾದಿಯಲ್ಲಿ ಕಾರ್ಯಕ್ರಮಗಳು ಪ್ರಸಾರವಾದವು. ಪತ್ರಿಕೆಗಳಲ್ಲಿ ಪುಟಗಟ್ಟಲೆ ಇದೇ ಪುರಾಣ. ಮಣಗಟ್ಟಲೆ ಬರೆದೂ ಬರೆದೂ ನಮ್ಮ ಪತ್ರಕರ್ತರು ಸುಸ್ತಾಗಿ ಹೋದರು. ಹೇಳಿದ್ದನ್ನೇ ಹೇಳಿ ಟೀವಿ ವರದಿಗಾರರು, ನಿರೂಪಕರು ತಲೆಚಿಟ್ಟು ಹಿಡಿಸಿದರು.

ನಿತ್ಯಾನಂದ ಶರಣಾಗಿದ್ದು ಸುದ್ದಿ, ಕೋರ್ಟಿಗೆ ಕರೆದೊಯ್ಯಲಾಗಿದ್ದು ಸುದ್ದಿ, ಸಿಓಡಿಯವರು ತನಿಖೆ ಮಾಡಿದ್ದು ಸುದ್ದಿ, ಜೈಲು ಸೇರಿದ್ದೂ ಸುದ್ದಿ, ನಿತ್ಯಾನಂದ ಬಿಡುಗಡೆಯಾಗಿದ್ದೂ ಸುದ್ದಿ, ಬಿಡದಿ ಆಶ್ರಮದಲ್ಲಿ ಪೂಜೆ ಮಾಡಿದ್ದೂ ಸುದ್ದಿ... ನಮ್ಮ ಮಾಧ್ಯಮಗಳೆಲ್ಲವೂ ನಿತ್ಯಾನಂದಮಯ.

ಆದರೆ ಇಲ್ಲಿ ಸಾಗರವೆಂಬ ಪುಟ್ಟ ಊರಿನಲ್ಲಿ ಪಾನಿಪುರಿ ಮಾರುವ ಬಡ ಬ್ರಾಹ್ಮಣ ದಂಪತಿಗಳ ಪುಟ್ಟ ಮಗಳು ಮಠವೊಂದರ ಗುರುಕುಲದಲ್ಲಿ ಗುರುವಿನ ಕಾಮತೃಷೆಗೆ ಬಲಿಯಾಗುವುದು ಸುದ್ದಿಯಾಗೋದೇ ಇಲ್ಲ. ಆಕೆ ಕೊಟ್ಟ ಕಂಪ್ಲೇಂಟು ಏನು ಎಂಬುದನ್ನು ಯಾವ ಪತ್ರಿಕೆಗಳು ಬರೆಯುವುದಿಲ್ಲ. ಪೊಲೀಸಿನವರು ತನಿಖೆ ನಡೆಸಿದರಾ ಇಲ್ಲವಾ? ಆರೋಪಿಯನ್ನು ಬಂಧಿಸಲಾಯಿತಾ? ಜೈಲಿಗೆ ಕಳಿಸಲಾಯಿತಾ? ಆರೋಪಿ ಈಗೇನು ಮಾಡುತ್ತಿದ್ದಾನೆ? ಹುಡುಗಿಯ ಪೋಷಕರು ಮಾನವ ಹಕ್ಕು ಆಯೋಗಕ್ಕೆ, ಮಹಿಳಾ ಆಯೋಗಗಳಿಗೆ ಕೊಟ್ಟ ದೂರುಗಳ ಫಾಲೋ ಅಪ್ ಏನು? ಮಠವನ್ನು ಎದುರು ಹಾಕಿಕೊಂಡ ಬಡ ದಂಪತಿಗಳ ಕಥೆ ಏನಾಯಿತು? ಅವರಿಗೆ ರಕ್ಷಣೆ ಕೊಡುವವರು ಯಾರು?

ಯಾಕೆ ಈ ಯಾವುದನ್ನೂ ನಮ್ಮ ಮಾಧ್ಯಮಗಳು ಟ್ರಾಕ್ ಮಾಡುವುದಿಲ್ಲ? ಯಾಕೆ ಇದೆಲ್ಲ ಸುದ್ದಿಗಳು ಶಿವಮೊಗ್ಗದ ಕೆಲವು ಸ್ಥಳೀಯ ಪತ್ರಿಕೆಗಳು ಮತ್ತು ಬೆಂಗಳೂರಿನಿಂದ ಪ್ರಕಟಗೊಳ್ಳುವ ಕೆಲವು ವಾರಪತ್ರಿಕೆಗಳಲ್ಲಿ ಮಾತ್ರ ಅಷ್ಟೋ ಇಷ್ಟೋ ಪ್ರಕಟಗೊಂಡವು? ಉಳಿದ ಪತ್ರಿಕೆಗಳು, ಚಾನೆಲ್‌ಗಳ ಪಾಲಿಗೆ ಇದು ಯಾಕೆ ಮಹತ್ವದ ಸುದ್ದಿಯಾಗಲಿಲ್ಲ?

ಎಲ್ಲೋ ನಡೆದ ಅರುಷಿ, ಜಸ್ಸಿಕಾ ಲಾಲ್ ಪ್ರಕರಣಗಳ ಕುರಿತು ನಮ್ಮ ಕನ್ನಡ ಮಾಧ್ಯಮಗಳು ಖರ್ಚು ಮಾಡಿದ ನ್ಯೂಸ್ ಪ್ರಿಂಟ್‌ನ ಪೈಕಿ ಕನಿಷ್ಟ ಐದು ಪರ್ಸೆಂಟಾದರೂ ನಮ್ಮ ರಾಜ್ಯದಲ್ಲೇ ಇರುವ ಸಾಗರದ ಅಮಾಯಕ ಹುಡುಗಿಗೂ ಖರ್ಚು ಮಾಡಬಹುದಿತ್ತಲ್ಲವೆ?

ಯಾವ ವಿಧಾನದಲ್ಲಿ ಯೋಚಿಸಿದರೂ ನಿತ್ಯಾನಂದನ ಪ್ರಕರಣಕ್ಕಿಂತ ಸಾಗರದ ಹುಡುಗಿ ಮೇಲೆ ನಡೆದ ಅತ್ಯಾಚಾರ ಯತ್ನದ ಪ್ರಕರಣವೇ ಹೆಚ್ಚು ಗಂಭೀರವಾದ, ಹೆಚ್ಚು ಚರ್ಚೆಗೆ ಗುರಿಯಾಗಬೇಕಾದ ವಿಷಯ. ಹೀಗಿದ್ದಾಗ್ಯೂ ನಮ್ಮ ಮಾಧ್ಯಮಗಳು ಸುಮ್ಮನಿದ್ದುದೇಕೆ? ಸುಮ್ಮನಿರುವುದೇಕೆ?

ಪತ್ರಕರ್ತರು, ಮಾಧ್ಯಮ ಸಂಸ್ಥೆಗಳ ಮಾಲೀಕರು ಈಚೀಚಿನ ದಿನಗಳಲ್ಲಿ ಸುದ್ದಿಯನ್ನು ಮಾರುವುದನ್ನು ಕಲಿತಿದ್ದಾರೆ. ಅಂದರೆ ಬೇಗ ಸೇಲ್ ಆಗುವ ಸುದ್ದಿಗಳು ಅವರಿಗೆ ಬೇಕು. ನಿತ್ಯಾನಂದನ ಸುದ್ದಿ ಬೇಗ ಬೇಗ ಸೇಲ್ ಆಗುವ ಸುದ್ದಿ. ಹೀಗಾಗಿ ಅದಕ್ಕವರು ಗಂಟುಬಿದ್ದು ಕುಳಿತಿದ್ದಾರೆ.

ಸುದ್ದಿಯನ್ನು ಸೇಲ್ ಮಾಡುವುದನ್ನು ಹೊರತುಪಡಿಸಿ ಮತ್ತೊಂದು ಮಾರ್ಗವೂ ಇದೆ. ತಾವೇ ಸೇಲ್ ಆಗಿ ಬಿಡೋದು. ಸಾಗರದ ಹುಡುಗಿಯ ವಿಷಯದಲ್ಲೇ ಇದೇ ಆಗಿ ಹೋಯ್ತಾ?

ಪಾನಿಪುರಿ ಮಾರುವಾತನ ಮಗುವಿಗೆ ನ್ಯಾಯ ಪಡೆಯುವ ಹಕ್ಕಿಲ್ಲವಾ?

ಪೂರಕ ಓದಿಗಾಗಿ:

ರಾಘವೇಶ್ವರರ ತೆಕ್ಕೆಯಲ್ಲಿ ಬಿದ್ದ ಸಂಪಾದಕರ ವಿರುದ್ಧ ದೂರು..

7 comments:

  1. Got a little confused. in the post yesterday, you said the girl was sexually harassed by someone called Jagadish. Today's post says it was the guru himself who did it. And the picture is also that of the so called guru and not his relative accused in the case.
    I am not subtly trying to question you for writing about the mutt or the so called swamiji. I hate their tribe but for rare exceptions. But if this discrepancy in the posts is not inadvertent I should conclude that you are biased.

    ReplyDelete
  2. @ Anonymous
    ಗೊಂದಲ ಮಾಡಿಕೊಳ್ಳಬೇಡಿ. ಮಠವೊಂದರ ಗುರುಕುಲದ ಗುರು ಎಂದು ಬರೆದಿದ್ದೇವೆ. ಮಠಾಧೀಶರೆಂದಲ್ಲ.

    ReplyDelete
  3. ??????ಯಾಕೆ ಈ ಯಾವುದನ್ನೂ ನಮ್ಮ ಮಾಧ್ಯಮಗಳು ಟ್ರಾಕ್ ಮಾಡುವುದಿಲ್ಲ? ಯಾಕೆ ಇದೆಲ್ಲ ಸುದ್ದಿಗಳು ಶಿವಮೊಗ್ಗದ ಕೆಲವು ಸ್ಥಳೀಯ ಪತ್ರಿಕೆಗಳು ಮತ್ತು ಬೆಂಗಳೂರಿನಿಂದ ಪ್ರಕಟಗೊಳ್ಳುವ ಕೆಲವು ವಾರಪತ್ರಿಕೆಗಳಲ್ಲಿ ಮಾತ್ರ ಅಷ್ಟೋ ಇಷ್ಟೋ ಪ್ರಕಟಗೊಂಡವು? ಉಳಿದ ಪತ್ರಿಕೆಗಳು, ಚಾನೆಲ್‌ಗಳ ಪಾಲಿಗೆ ಇದು ಯಾಕೆ ಮಹತ್ವದ ಸುದ್ದಿಯಾಗಲಿಲ್ಲ??????

    ಏಕೆಂದರೆ ಇದರಲ್ಲಿ ಸತ್ವವಿಲ್ಲ ಎಂಬುದು ಜನರಿಗೆ ಗೊತ್ತಿದೆ. ಈ ಬಗ್ಗೆ ಒಮ್ಮೆ ಹೋಗಿ ಸಾಗರದ ಜನರಲ್ಲಿ ವಿಚಾರಿಸಿದರೆ ಸತ್ಯ ತಿಳಿಯಬಹುದು. ಕನ್ನಡ ಪತ್ರಿಕೆಗಳು ಈ ತರಹ ಅನಗತ್ಯ ಸುದ್ದಿಗಳನ್ನು ವೈಭವೀಕರಿಸುವುದಿಲ್ಲ ಎಂಬುದೇ ಸಮಾಧಾನ.

    ReplyDelete
  4. ಉದಯ
    ಉದಯ ಅವರಿಗೆ ಪ್ರಕರಣದಲ್ಲಿ ಸತ್ಯವಿಲ್ಲ ಎಂದು ಯಾರು ಹೇಳಿದರೋ? ಸ್ವತಃ ಜಡ್ಜ್‌ಮೆಂಟ್ ಕೊಡಲು ಅವರು ಯಾರು? ಸಾಗರದಲ್ಲಿ ವಿಚಾರಿಸಿದರೆ ಗೊತ್ತಾಗುತ್ತದೆ ಎಂದಿದ್ದಾರೆ. ಸಾಗರದವರೇ ಕಂಪ್ಲೇಂಟು ಕೊಟ್ಟಿರುವುದಲ್ಲವೆ? ಸಮರ್ಥನೆಗೂ ಒಂದು ರೀತಿನೀತಿ ಬೇಡವೇ?
    -ಸುಗುಣ

    ReplyDelete
  5. ಸುಗುಣ,
    ಸತ್ಯ ಅಲ್ಲ ಸತ್ವ. ದೂರು ಕೊಟ್ಟಿರುವುದು 'ಸಾಗರದ ಜನ' ಅಲ್ಲ. ಅದು ಸಾರ್ವಜನಿಕ ಹಿತಾಸಕ್ತಿಯ ದೂರಲ್ಲ. ಅದು ವೈಯಕ್ತಿಕ ದೂರು. ಧನ್ಯವಾದಗಳು.

    ReplyDelete
  6. @ Anonymous
    idu bekende maadikonda confusion. bere enu sigade idda kaaranakke heege barediddeeri. sariyagi kannu bittu odidare ella artha agutte.
    -ramesh

    ReplyDelete
  7. @Ramesh

    Nimmanthavarigoo, a swaaamigaligoo, avara baalabadukarigoo enenoo vatyaasavilla. Neevellaaa bere bere reetiya extremist gale. Olle paalegaree shailiyalli barediddeeri...nimage shubhavaagali

    ReplyDelete