Wednesday, March 2, 2011

ನೈಜ ಹಿಂದುತ್ವವಾದಿಗಳು... ಹುಸಿ ಹಿಂದುತ್ವವಾದಿಗಳು...




Dude you are making allegations against a person but not addressing the issues raised by him. What's wrong in being pro-hindu? Even the mahatma said "I am proud to be a Hindu." Now would you say that a Hindu can't be secular? Secularism doesn't mean that you should not practice any religion, it means having tolerance towards the other religions. Would you say that no forced religion conversion is going on in the country? You have all problems with saffron band but you are dumb about others. In a secular country(?) there's a political party called Muslim League. When ML is not wrong why or how the others are wrong? Recently you media people made a huge cry against hindu terrorists but at the same time you are dumb about Afzal Guru. A terrorist is a terrorist. You(media) mention about hindu terrorists but when the terrorist belongs to someother religion you say that terrorists do not have any religion. Why such double standards?

                                                                                              - Ravi Sondur


ರವಿ ಸೊಂಡೂರ್ ಎಂಬುವವರು ಸಂಪಾದಕೀಯದ ಪೋಸ್ಟ್ ಒಂದಕ್ಕೆ ಫೇಸ್‌ಬುಕ್‌ನಲ್ಲಿ ನೀಡಿರುವ ಪ್ರತಿಕ್ರಿಯೆ ಇದು. ಇಂಥ ವಿಷಯಗಳಿಗೆ ಸಂಬಂಧಿಸಿದ ಕೆಲವು ಪ್ರತಿಕ್ರಿಯೆಗಳು ಓದುವುದಕ್ಕೂ ಅಸಹ್ಯವೆನಿಸುತ್ತದೆ, ಹೀಗಾಗಿ ಅವುಗಳಿಗೆ ಪ್ರತಿಕ್ರಿಯೆ ನೀಡಬೇಕೆನಿಸುವುದಿಲ್ಲ. ಆದರೆ ರವಿ ಸೊಂಡೂರ್ ಸಹನೀಯವಾದ ಭಾಷೆಯನ್ನು ಬಳಸಿದ್ದಾರೆ. ಹೀಗಾಗಿ ಅವರಿಗೆ ಉತ್ತರಿಸಬೇಕು ಅನ್ನಿಸಿದೆ.

ಡಾ.ಎಂ.ಚಿದಾನಂದ ಮೂರ್ತಿಯವರು ಇತ್ತೀಚಿಗೆ ಬರೆದ ಒಂದು ಓದುಗರ ಪತ್ರ ಹಾಗು ಪತ್ರಿಕಾಗೋಷ್ಠಿಯೊಂದರಲ್ಲಿ ಬಳಸಿದ ಭಾಷೆಯ ಕುರಿತಾಗಿ ಎರಡು ಪ್ರತ್ಯೇಕ ಪೋಸ್ಟ್‌ಗಳನ್ನು ಪ್ರಕಟಿಸಿದ್ದೆವು. ಈ ಎರಡರ ಕುರಿತಾಗಿ ಹಲವರಿಗೆ ಆಕ್ಷೇಪಣೆಗಳಿವೆ. ಬಹುಮುಖ್ಯವಾದ ಆಕ್ಷೇಪವೆಂದರೆ ಚಿದಾನಂದಮೂರ್ತಿಯವರು ಎತ್ತಿದ ಮತಾಂತರದ ಮೂಲ ಪ್ರಶ್ನೆಯನ್ನೇಕೆ ನೀವು ಚರ್ಚೆಯ ವಿಷಯವಾಗಿಸಿಲ್ಲ ಎಂಬುದು. ರವಿಯವರ ಆಕ್ಷೇಪವೂ ಅಲ್ಲಿಂದಲೇ ಶುರುವಾಗುತ್ತದೆ.

ಒಂದನ್ನು ಸ್ಪಷ್ಟಪಡಿಸಲೇಬೇಕು. ಮತಾಂತರದ ಕುರಿತ ಚರ್ಚೆ ನಮ್ಮ ಉದ್ದೇಶವಾಗಿರಲಿಲ್ಲ. ಚಿದಾನಂದ ಮೂರ್ತಿಯವರು ತಮ್ಮ ಓದುಗರ ಪತ್ರದಲ್ಲಿ ಒಂದು ಸಮುದಾಯದ ಕುರಿತಾಗಿ ಬಳಸಿದ ವಾಕ್ಯಗಳು ಗಾಬರಿ ಹುಟ್ಟಿಸುವಂತಿತ್ತು. ಇಂಥ ಜನಾಂಗೀಯ ದ್ವೇಷದ ಮಾತುಗಳನ್ನು ಮಾನವೀಯತೆಯಲ್ಲಿ ವಿಶ್ವಾಸವಿಟ್ಟವರು ಯಾರೂ ಒಪ್ಪಲು ಸಾಧ್ಯವಿಲ್ಲ. ಇದಾದ ನಂತರ ಅವರು ಕ್ರಿಶ್ಚಿಯನ್ನರೇ ಕೋಮುವಾದಿಗಳು ಎಂದು ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದ ಮಾತನ್ನೂ ಸಹ ಯಾರೂ ಸಮರ್ಥಿಸಲು ಸಾಧ್ಯವಿಲ್ಲ.

ಮತಾಂತರ, ಗೋಹತ್ಯೆ ನಿಷೇಧದ ಕುರಿತು ಚಿದಾನಂದ ಮೂರ್ತಿಯವರಾಗಲಿ, ಈ ಕುರಿತು ಕಾಳಜಿ ಹೊಂದಿರುವ ಯಾವುದೇ ಸಂಘಟನೆ-ವ್ಯಕ್ತಿಗಳಾಗಲಿ ಪ್ರಜಾಸತ್ತಾತ್ಮಕವಾಗಿ ಪ್ರತಿಭಟಿಸಲು ಅವರು ಸ್ವತಂತ್ರರು. ಅದರಲ್ಲಿ ಎರಡು ಮಾತಿಲ್ಲ. ಪ್ರತಿಭಟನೆಗೆ ನಾನಾ ಬಗೆಯ ಮಾರ್ಗಗಳು ಇವೆ. ಆದರೆ ಇದೇ ನೆಪವನ್ನಿಟ್ಟುಕೊಂಡು ಮೂರನೇ ದರ್ಜೆಯ ಬಾಲಿಷ ಹೇಳಿಕೆಗಳನ್ನು ಚಿದಾನಂದಮೂರ್ತಿಯವರಂಥ ಹಿರಿಯರು ನೀಡಬಹುದೆ? ಕಸದ ಬುಟ್ಟಿಗೆ ಲಾಯಕ್ಕಾದ ಇಂಥ ಓದುಗರ ಪತ್ರಗಳನ್ನು ಪತ್ರಿಕೆಗಳು ಪ್ರಕಟಿಸಬೇಕೆ ಎಂಬುದಷ್ಟೆ ನಮ್ಮ ಪ್ರಶ್ನೆಯಾಗಿತ್ತು.

ಹಿಂದುತ್ವವಾದಿಯಾಗಿರುವುದರಲ್ಲಿ ಯಾವ ತಪ್ಪಿದೆ ಎಂದು ರವಿ ಸೊಂಡೂರ್ ಪ್ರಶ್ನಿಸುತ್ತಾರೆ. ಯಾವ ತಪ್ಪೂ ಇಲ್ಲ ಎಂಬುದು ನಮ್ಮ ಉತ್ತರ. ಹಿಂದುತ್ವವಾದಿಗಳು ಇಸ್ಲಾಂ, ಕ್ರಿಶ್ಚಿಯನ್ ದ್ವೇಷಿಗಳಾಗಿದ್ದರೆ ಆಗ ಸಮಸ್ಯೆ ಉದ್ಭವಿಸುತ್ತದೆ. ಅದೇ ರೀತಿ ಮುಸಲ್ಮಾನರು, ಕ್ರಿಶ್ಚಿಯನ್ನರು ಹಿಂದೂಗಳ ದ್ವೇಷಿಯಾದರೂ ಅದು ಸಮಸ್ಯೆಯೇ ಆಗಿರುತ್ತದೆ. ನಿಜವಾದ ಹಿಂದುತ್ವವಾದಿಗಳು ಈ ಬಗೆಯ ಪರಧರ್ಮ ವಿರೋಧಿ ನೆಲೆಯಿಂದಲೇ ಉದ್ಭವಿಸಬೇಕಾಗಿಲ್ಲ. ಎಲ್ಲ ಹಿಂದುತ್ವವಾದಿಗಳು ಈ ಬಗೆಯ ದ್ವೇಷವನ್ನು ಬೆಳೆಸಿಕೊಂಡಿದ್ದರೆ ಭಾರತ ದೇಶ ಇಷ್ಟು ಹೊತ್ತಿಗೆ ಒಡೆದು ಚೂರುಚೂರಾಗಬೇಕಿತ್ತು.

ಹಿಂದೂಗಳು ಸೆಕ್ಯುಲರ್ ಅಲ್ಲವೇ ಎಂಬುದು ರವಿ ಅವರ ಇನ್ನೊಂದು ಪ್ರಶ್ನೆ. ಹಿಂದೂಗಳಲ್ಲಿ ಒಂದು ಸಣ್ಣ ಪ್ರಮಾಣದ ಜನರನ್ನು ಹೊರತುಪಡಿಸಿ ಉಳಿದವರೆಲ್ಲ ಸೆಕ್ಯುಲರ್ ಆಗಿದ್ದಾರೆ. ಇವರೇ ನಿಜವಾದ ಹಿಂದೂಗಳು.

ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ್ದು ಯಾವ ಹಿಂದೂ ಧರ್ಮವನ್ನು ಎಂಬುದನ್ನು ನಾವು ಮೊದಲು ಅರಿತುಕೊಳ್ಳುವ ಪ್ರಯತ್ನ ಮಾಡಬೇಕು. ವಿವೇಕಾನಂದರನ್ನು ನಿಜವಾದ ಹಿಂದುತ್ವದ ಮುಖವಾಣಿಯನ್ನಾಗಿ ನಾವು ಗ್ರಹಿಸಬೇಕು. ವೇದಾಂತದ ಮೆದುಳು, ಇಸ್ಲಾಂನ ದೇಹ ಎರಡೂ ಒಂದಾದರೆ ಮಾತ್ರ ಈ ದೇಶದ ಉದ್ಧಾರ ಸಾಧ್ಯ ಎಂದು ಹೇಳಿದವರು ವಿವೇಕಾನಂದರು. ಮಾಂಸದಂಗಡಿಗಳನ್ನು, ಹಸಿರು ಧ್ವಜಗಳನ್ನು ನೋಡಿ ಖಿನ್ನತೆಗೆ ಒಳಗಾಗುವರಿಗೆ ಇದು ಅರ್ಥವಾಗುವುದು ಹೇಗೆ? ಇವತ್ತು ಸ್ವಾಮಿ ವಿವೇಕಾನಂದರೇ ಸೊ ಕಾಲ್ಡ್ ಹಿಂದುತ್ವವಾದಿಗಳಿಗೆ ಬೇಕಾಗಿಲ್ಲ, ಅದು ನಿಜವಾದ ಸಮಸ್ಯೆಗೆ ಕಾರಣ.

ನಾನು ಹಿಂದೂ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ ಎಂದು ಮಹಾತ್ಮಗಾಂಧಿಯವರೇ ಹೇಳಿದ್ದರು ಎಂದು ರವಿ ಹೇಳುತ್ತಾರೆ. ಇಂಥ ಹೆಮ್ಮೆಯ ಹಿಂದೂವನ್ನು ಕೊಂದವರೂ ಹಿಂದೂ ಮೂಲಭೂತವಾದಿಗಳು ಎಂಬುದನ್ನು ಮರೆಯುವಂತಿಲ್ಲ. ಗಾಂಧೀಜಿಯವರ ಹಿಂದೂ ಧರ್ಮವೇ ಬೇರೆ, ಅವರನ್ನು ಕೊಂದವರ ಹಿಂದೂ ಧರ್ಮವೇ ಬೇರೆ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳುವುದು ತೀರಾ ಅಗತ್ಯ. ಈ ಇಬ್ಬರ ನಡುವಿನ ವ್ಯತ್ಯಾಸವನ್ನು ಸರಿಯಾದ ಅರ್ಥದಲ್ಲಿ ಗೊತ್ತುಮಾಡಿಕೊಳ್ಳುವುದೂ ಸಹ ಅನಿವಾರ್ಯ.

ದೇಶದಲ್ಲಿ ಬಲವಂತದ ಮತಾಂತರ ನಡೆಯುತ್ತಿಲ್ಲವೇ ಎಂಬುದು ರವಿ ಅವರ ಇನ್ನೊಂದು ಪ್ರಶ್ನೆ. ಮತಾಂತರ-ಧರ್ಮಾಂತರಗಳು ಕಾಲಕಾಲಕ್ಕೆ ಸಮಾಜದಲ್ಲಿ ಸಂಭವಿಸಿಕೊಂಡು ಬರುವ ಸಹಜ ಪ್ರಕ್ರಿಯೆಗಳು. ಇಡೀ ಜಗತ್ತಿನಲ್ಲಿ ಎಲ್ಲೆಡೆ ಇಂಥವು ನಡೆದುಕೊಂಡೇ ಬಂದಿರುವುದನ್ನು ನಾವು ನೋಡಿದ್ದೇವೆ, ಭಾರತವೂ ಇದಕ್ಕೆ ಹೊರತೇನಲ್ಲ.

ಆದರೆ ಬಲವಂತದ ಮತಾಂತರ ಎಂಬುದು ವ್ಯಕ್ತಿ ಸ್ವಾತಂತ್ರ್ಯವನ್ನು ಕಸಿಯುತ್ತದೆ. ಆಮಿಷದಿಂದ ನಡೆಸುವ ಮತಾಂತರವೂ ಬಹಳ ಸ್ಪಷ್ಟವಾಗಿ ವಂಚನೆಯೇ ಆಗುತ್ತದೆ. ಬಲವಂತದ ಮತಾಂತರವನ್ನಾಗಲಿ, ಆಮಿಷದಿಂದ ನಡೆಯುವ ಮತಾಂತರವನ್ನಾಗಲಿ ಯಾರೂ ಸಮರ್ಥಿಸಿಕೊಳ್ಳುತ್ತಿಲ್ಲ, ಸಮರ್ಥಿಸಿಕೊಳ್ಳಲೂಬಾರದು. ಕ್ರಿಶ್ಚಿಯನ್ನರ ಕೆಲವು ಸಣ್ಣ ಪಂಥಗಳು ಇಂಥ ಕ್ರಿಯೆಗಳಲ್ಲಿ ತೊಡಗಿವೆ ಎಂಬ ಆರೋಪ ಇತ್ತೀಚಿನ ದಿನಗಳಲ್ಲಿ ಪದೇಪದೇ ಕೇಳಿಬರುತ್ತಿದೆ. ಇಂಥವು ನಡೆಯುತ್ತಿದ್ದರೆ, ಅದನ್ನು ತಡೆಯಲು ನಮ್ಮಲ್ಲಿ ಇರುವ ಲಭ್ಯ ಕಾನೂನುಗಳನ್ನು ಬಳಸಿಕೊಳ್ಳಬೇಕಾಗುತ್ತದೆ. ಅದಕ್ಕೆ ಹೊರತಾಗಿ ಚರ್ಚ್‌ಗಳ ಮೇಲೆ ದಾಳಿ ನಡೆಸುವುದು, ಏಸುಮೂರ್ತಿಯನ್ನು ಭಗ್ನಗೊಳಿಸುವುದು, ಕ್ರಿಶ್ಚಿಯನ್ನರ ಮೇಲೆ ಹಲ್ಲೆ ನಡೆಸುವುದರಿಂದ ಮತಾಂತರವನ್ನು ತಡೆಗಟ್ಟುತ್ತೇವೆ ಎನ್ನುವುದು ಮೂರ್ಖತನ. ಹಾಗೆ ಮಾಡುವವರು ನೈಜ ಹಿಂದುತ್ವವಾದಿಗಳಾಗಲು ಹೇಗೆ ಸಾಧ್ಯ? ಇಂಥ ಸಮಾಜಘಾತಕ ಶಕ್ತಿಗಳ ವಿರುದ್ಧ ಕ್ರಿಶ್ಚಿಯನ್ನರು ಪ್ರತಿಭಟಿಸಿದರೆ ಅದರಿಂದ ಚಿದಾನಂದಮೂರ್ತಿಯಂಥವರು ಯಾಕಷ್ಟು ಕಳವಳಕ್ಕೆ ಈಡಾಗುತ್ತಾರೆ? ಯಾಕೆ ಅವರ ಕಣ್ಣಿಗೆ ಹೀಗೆ ಪ್ರತಿಭಟಿಸಿದವರೆಲ್ಲ ಕೋಮುವಾದಿಗಳ ಹಾಗೆ ಕಾಣುತ್ತಾರೆ? ಇದು ನಮ್ಮ ಪ್ರಶ್ನೆ.

ಸೆಕ್ಯುಲರ್ ದೇಶದಲ್ಲಿ ಮುಸ್ಲಿಂ ಲೀಗ್‌ನಂಥ ಪಕ್ಷಗಳೂ ಇವೆ, ಅವುಗಳ ಕುರಿತು ಇಲ್ಲದ ಆಕ್ಷೇಪ ಇತರ ಪಕ್ಷಗಳ (ಬಹುಶಃ ಬಿಜೆಪಿ-ಶಿವಸೇನೆ ಇರಬಹುದು) ಮೇಲೆ ಏಕೆ ಎಂದು ರವಿ ಪ್ರಶ್ನಿಸುತ್ತಾರೆ. ಮುಸ್ಲಿಂ ಲೀಗ್ ಪಕ್ಷವನ್ನು ಈ ದೇಶದ ಮುಸ್ಲಿಮರೆಲ್ಲ ಒಪ್ಪಿಕೊಂಡಿಲ್ಲ. ಹಾಗೆ ಒಪ್ಪಿಕೊಂಡಿದ್ದರೆ ಅದು ಸಹ ಒಂದು ರಾಷ್ಟ್ರೀಯ ಪಕ್ಷವಾಗಿರುತ್ತಿತ್ತು, ಕೇರಳದ ಯಾವುದೋ ಮೂಲೆಗೆ ಸೀಮಿತವಾಗಬೇಕಿರಲಿಲ್ಲ. ಧರ್ಮದ ನೆಲೆಯಲ್ಲಿ ಸ್ಥಾಪನೆಯಾಗುವ ರಾಜಕೀಯ ಪಕ್ಷಗಳು ಅಪಾಯಕಾರಿ. ಅದಕ್ಕೆ ಮುಸ್ಲಿಂ ಲೀಗೂ ಹೊರತಲ್ಲ, ರವಿ ಅವರು ಸೂಚಿಸುವ ಇತರ ಪಕ್ಷಗಳೂ ಹೊರತಲ್ಲ.

ಇನ್ನು ಭಯೋತ್ಪಾದನೆಯ ಕುರಿತೂ ರವಿ ಹೇಳುತ್ತಾರೆ. ಅವರ ಪ್ರಶ್ನೆಯಲ್ಲೇ ಉತ್ತರವಿದೆ. ಭಯೋತ್ಪಾದನೆಗೆ ಧರ್ಮವಿಲ್ಲ ಎಂಬುದು ಸೆಕ್ಯುಲರಿಸ್ಟರ ನಂಬಿಕೆ. ಭಯೋತ್ಪಾದಕರೆಲ್ಲ ಮುಸ್ಲಿಮರು ಎಂದು ಈ ಹಿಂದೆ ಹೇಳಲಾಗುತ್ತಿತ್ತು. ಸ್ವಾಮಿ ಆಸೀಮಾನಂದರ ತಪ್ಪೊಪ್ಪಿಗೆಯ ನಂತರ ಈಗ ಭಯೋತ್ಪಾದನೆಗೆ ಧರ್ಮವಿಲ್ಲ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಿದ್ದಾರೆ. ಅಫ್ಜಲ್ ಗುರು, ಸಾಧ್ವಿ ಪ್ರಜ್ಞಾಸಿಂಗ್, ಕಸಬ್, ಆಸೀಮಾನಂದ ಎಲ್ಲರೂ ಒಂದೇ ತಳಿಯವರು. ಧರ್ಮದ ಆಫೀಮನ್ನು ಮೈಗೇರಿಸಿಕೊಂಡು ಅಮಾಯಕರ ಬಲಿ ತೆಗೆದುಕೊಂಡವರು. ದೇಶದ ಕಾನೂನು ಇವರಿಗೆ ಸೂಕ್ತ ಸಮಯದಲ್ಲಿ ಸೂಕ್ತ ಶಿಕ್ಷೆಯನ್ನು ಕೊಡಬೇಕು, ಕೊಡುತ್ತದೆ. ರವಿ ಅವರು ಹೇಳುವಂತೆ ಮೀಡಿಯಾಗಳು ಡಬಲ್ ಸ್ಟಾಂಡರ್ಡ್ ಇಟ್ಟುಕೊಳ್ಳುವುದು ಬೇಡ ಎಂದು ನಾವೂ ಹೇಳುತ್ತಿದ್ದೇವೆ. ಇಸ್ಲಾಂ ಭಯೋತ್ಪಾದನೆ ಎಂದು ನೀವು ಹೇಳುವುದಾದರೆ ಹಿಂದೂ ಭಯೋತ್ಪಾದನೆ ಎಂದೂ ಸಹ ಹೇಳಬೇಕಾಗುತ್ತದೆ. ಹೇಳುವುದಿದ್ದರೆ ಎರಡನ್ನೂ ಹೇಳಿ. ಇಲ್ಲದಿದ್ದರೆ ಭಯೋತ್ಪಾದನೆಗೆ ಧರ್ಮವಿಲ್ಲ ಎಂಬುದನ್ನು ಒಪ್ಪಿಕೊಂಡು ಭಯೋತ್ಪಾದಕರನ್ನು ಧರ್ಮದ ಹೆಸರಲ್ಲಿ ಗುರುತಿಸಬೇಡಿ ಎಂಬುದು ನಮ್ಮ ಸಲಹೆ. ರವಿ ಅವರ ಮಾತು ಕೂಡ ಇದನ್ನು ಸಮರ್ಥಿಸುತ್ತದೆ.
ರವಿ ಸೊಂಡೂರ್

ಎಲ್ಲ ಧರ್ಮಗಳೂ ಜಡವಾಗಿ ಹೋಗಿವೆ. ಕಾಲ ಬದಲಾದಂತೆ ಧರ್ಮಗಳೂ ಅಪ್‌ಡೇಟ್ ಆಗಬೇಕಿತ್ತು. ಆದರೆ ಧರ್ಮಗಳು ನಿಂತಿರುವುದು ಎಂದೋ ಯಾರೋ ಕಟ್ಟಿಕೊಟ್ಟ ಸೂತ್ರಗಳನ್ನು ಹಿಡಿದು. ನಾವು ಕುರುಡಾಗಿ ಅವುಗಳಿಗೆ ತಲೆಯೊಡ್ಡಿದ್ದೇವೆ. ಈ ಸೂತ್ರಗಳೇ ಇಂದು ನಮ್ಮ ಕೊರಳಿಗೆ ಉರುಳಾಗಿವೆ. ಹಿಂದೂ, ಇಸ್ಲಾಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲ ಧರ್ಮಗಳೂ ಇಂದು ಜಡವಾಗಿವೆ. ಚಲನಶೀಲತೆಯಿಲ್ಲದ ಧರ್ಮಗಳು ನಮ್ಮನ್ನು ಬೌದ್ಧಿಕವಾಗಿ, ಅಧ್ಯಾತ್ಮಿಕವಾಗಿ ಬೆಳೆಸಲಾರವು. ಇವತ್ತು ಕೋಮುವಾದ, ಭಯೋತ್ಪಾದನೆ, ಬಲವಂತದ ಮತಾಂತರ ಮತ್ತಿತರ ಸಮಸ್ಯೆಗಳಿಗೆ ಇದು ಮೂಲ. ಧರ್ಮದ ವ್ಯಾಖ್ಯೆಗಳನ್ನು ಪುನರ್ ನಿರ್ಮಿಸಿಕೊಳ್ಳದ ಹೊರತು, ಎಲ್ಲ ಧರ್ಮಗಳ ಒಳಗಿನ ಪುರೋಹಿತಶಾಹಿ ಯಥಾಸ್ಥಿತಿವಾದಿಗಳನ್ನು ಹೊರಗೆ ಎಸೆಯದ ಹೊರತು ಈ ಸಮಸ್ಯೆಗಳು ಪರಿಹಾರವಾಗದು.

ಅದನ್ನೇ ವಿವೇಕಾನಂದರು ಪ್ರತಿಪಾದಿಸಿದ್ದರು. ಈ ದೇಶದ ಅಮಾಯಕ ಜನರ ಪ್ರಾಣ ಹಿಂಡುತ್ತಿರುವ ಪುರೋಹಿತಶಾಹಿಗಳನ್ನು ಒದ್ದೋಡಿಸದ ಹೊರತು ದೇಶ ಉದ್ಧಾರವಾಗಲಾರದು ಎಂದು ಅವರು ಗುಡುಗಿದ್ದರು. ವಿವೇಕಾನಂದರು ಹೇಳಿದಂತೆ ಯಥಾಸ್ಥಿತಿವಾದಿ ಶಕ್ತಿಗಳನ್ನು ಮುಸ್ಲಿಮರು, ಕ್ರಿಶ್ಚಿಯನ್ನರು, ಹಿಂದೂಗಳು, ಬೌದ್ಧರು, ಜೈನರು ಮತ್ತು ಎಲ್ಲರೂ ತಮ್ಮ ತಮ್ಮ ಧರ್ಮಗಳಿಂದ ಉಚ್ಛಾಟಿಸಬೇಕಿದೆ.

ಎಲ್ಲರಿಗೂ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.

35 comments:

  1. kudos to Mr.Ravi Sondur. you have raised very good questions to the media. i think, all these questions were & are the questions of a common person ( if media wants to term that common person as Hindu, let it be, no issues with that)& Sampaadakeeya team has also done good work by trying to answer these questions.

    ReplyDelete
  2. Hello Sampadakiya. Being Hindu is different from being Hindutva vadi. you should have digested it. and what is your point? Do you think people, other than of Hindu religion are completely secular? what is your definition for the term "secular"?
    and what you have written here?- "ಹಿಂದೂಗಳು ಸೆಕ್ಯುಲರ್ ಅಲ್ಲವೇ ಎಂಬುದು ರವಿ ಅವರ ಇನ್ನೊಂದು ಪ್ರಶ್ನೆ. ಹಿಂದೂಗಳಲ್ಲಿ ಒಂದು ಸಣ್ಣ ಪ್ರಮಾಣದ ಜನರನ್ನು ಹೊರತುಪಡಿಸಿ ಉಳಿದವರೆಲ್ಲ ಸೆಕ್ಯುಲರ್ ಆಗಿದ್ದಾರೆ. ಇವರೇ ನಿಜವಾದ ಹಿಂದೂಗಳು." this definitely needs an explanation. do you think except a small amount of people, rest the Hindus are secular? what is secularism according to you?

    ReplyDelete
  3. ಯಾರೆಲ್ಲ ಸೆಕ್ಯುಲರ್ ಆಗಿದ್ದಾರೆಯೋ ಅವರೆಲ್ಲ ನಿಜವಾದ ಹಿಂದುಗಳು ಎಂಬ ನಿಮ್ಮ ವಾದದಂತೆ, ಮುಸ್ಲಿಮರಲ್ಲಿ ಮತ್ತು ಕ್ರಿಶ್ಚಿಯನ್ನರಲ್ಲಿ ಸೆಕ್ಯುಲರ್ ಆಗಿದ್ದವರನ್ನು ನಿಜವಾದ ಹಿಂದುಗಳು ಎಂದು ಕರೆಯಬಹುದೇ?

    ReplyDelete
  4. first of all there should be a change in the pseudo-secular media,by watching the way they are describing Hindus and muslims every Hindus came up with the stand taken by Ravi..there is nothing wrong with Ravi..

    ReplyDelete
  5. ನೈಜ ಹಿಂದುತ್ವವಾದಿಗಳು... ಹುಸಿ ಹಿಂದುತ್ವವಾದಿಗಳು...

    Title itself is bit confusing and wrong

    No where it is mentioned in any religious book as ನೈಜ ಹಿಂದುತ್ವವಾದಿಗಳು... ಹುಸಿ ಹಿಂದುತ್ವವಾದಿಗಳು...

    If any person is not following principles of hinduism, then we cannot call him as ಹುಸಿ ಹಿಂದುತ್ವವಾದಿಗಳು.

    There is no such term FAKE(ಹುಸಿ) in any religious book.

    Can we call ಹುಸಿ ಹಿಂದುತ್ವವಾದಿಗಳು as TERRORIST ?

    ReplyDelete
  6. I hate the topic ..hindus will never become terrorist...if hindu become angry means in his own land he/she is getting discrimination(imagine being majority hindus land hindus were burned alive !!!) if hindu become angry means it's reaction by hindu....

    sindhu kulkarni

    ReplyDelete
  7. ಶೀರ್ಷಿಕೆಯಲ್ಲಿ "ಹಿಂದುಗಳು-ಹಿಂದುತ್ವವ್ಯಾಧಿಗಳು" ಎಂದಿದ್ದರೂ ಸಾಕಿತ್ತು.

    ReplyDelete
  8. Ravi you raised good question I apperciate you..in india ..
    secularism means appeasement of minority..
    All rules and regulations are for Hindus..
    because we have to up held culture of multi linueastic..
    ( When court declared verdict for godhra incident culprits secularists not welcomed the court oder but instead they are demanding punishment for post godhra incident...!!!!)
    when hindu shows re action it is considred as hindu terrorisam
    if muslim does same then it is a iternational problem !!!!

    vithalrao kulkarni

    ReplyDelete
  9. sampadakaru ondu nijavannu arthamaadikollabeku. Naija hindu yaavattu komuvaadiyaagalaara. `Ekam sad vipraha badudha vadanti' `Aaakashath patitantoyam yathagachchati saagaram' Idu swami vivekanadaru vishwa dharma sammelanadalli hindugala udaarateyannu kuritu helida maatu. innu vivekanada vicharakke bandare `ativa vichaaravadigalada, modamodalu `devaranu' namabada vivekanadaru konege oppikondiddu `hindu' dharmavannu. appikondiddu `hindutva'vannu saaruva kavi vastra `sanyasi' dharmavannu embudannu gamanisabekada sangati. vicharagalli lavalesha matravu `dhosha' villada `hindu dharma' `Acharane'yalli alli illi lopadoshagalu nusulive. jagruta hindu samaaja adannu beru sameta tegedu hakidalli i hottigu vishwadalli `hindu dharma'vannu sarigattuva innodu `dharma'videye? `negadi' yaguttadendu `moogu' kuydukolluvudu estu samartha? , ide udaarate christanannu maata `devasuta' endu nambuva chistiannarige, `alla' obbane devaru endu nambuma musalmanarige helalu sadhyave?. innu saddillade `mataantara' maadi, jana sakhya niyatranavannu balasade tamma sakhyeyannu yadvatadva hechichisikolluttiruva musalamaanara bagge tammadu `jaana kurudu'. mataantarakkagai haagu jihadgagi avaru balasuttiruva sahithyavannu omme odi nodi. Aaga matra nima `husi jatyateetavaada'da kannina pore kalachuttade. Keralada `malappuram' jilleyallo illaa uttarada `nagaland'nalli mattu `jammu'vinalli taavu omme `hindu' endu koogi heli baduki banni. Aaga gottaguttade nimma ona 'secular' siddnta tirulu. sadhyakke bhadravagiruva `bengaloorinalli kulitu idannu helutiddiri ennuvudannu mareyabaradu.

    ReplyDelete
  10. The intolerance has its roots in the dogma that' My God is the only right God ...rest of them are humbugs & worth hating , condemning...the followers need be either made to believe in my The Best God or be annihilated... This is the very root cause of the cult of terrorism the worldover.

    ReplyDelete
  11. ತುಂಬಾ complicated ವಿಷಯ ಅಂದ್ರೆ ಧರ್ಮದ ಕುರಿತಾದ ಚರ್ಚೆ,ಅದು ಹಲವಾರು ಅನರ್ಥಗಳಿಗೆ ದಾರಿ ಮಾಡಿಕೊಡುತ್ತದೆ.ಕಾಂಪ್ಲಿಕೇಷನ್ ಧರ್ಮದ ಇನ್ನೊಂದು ಮುಖ.ಅಲ್ಲಿ ವ್ಯಕ್ತಿ ತಾನಂದುಕೊಂಡಷ್ಟೆ ಸತ್ಯ ಅಂದುಕೊಂಡಿರುತ್ತಾನೆ.ತನ್ನ ನಂಬಿಕೆಗೆ ವಿರುದ್ಧವಾದ ಯಾವುದನ್ನೂ ಒಪ್ಪಿಕೊಳ್ಳಲು ತಯಾರಿರುವುದಿಲ್ಲ.

    ReplyDelete
  12. ತುಂಬಾ ಸಂತೋಷವಾಗುತ್ತೆ ನಿಮ್ಮ Balanced View ಓದಿದರೆ. ಒಂದೆರಡು ಸಣ್ಣ ವಿಷಯ ಬಿಟ್ಟು ಎಲ್ಲವು ಸ್ಪಷ್ಟವಾಗಿದೆ.
    ಭಾರತ್

    ReplyDelete
  13. @ MR.SIDDANAGOUDA S BIRADAR
    ಯಾಕೆ ಅಷ್ಟೊಂದು ಕನ್ಫ್ಯೂಸ್ ಮಾಡಿಕೊಳ್ತೀರಿ ಸರ್, ನೈಜ ಹಿಂದುತ್ವವಾದ-ಹುಸಿ ಹಿಂದುತ್ವವಾದ ಎಂಬ ಶಬ್ದಗಳನ್ನು ಯಾವುದೋ ಧಾರ್ಮಿಕ ಪುಸ್ತಕದಿಂದ ಹುಡುಕಿ ಬರೆದಿದ್ದೇವೆ ಎಂದು ಸಂಪಾದಕೀಯದವರು ಬರೆದಿದ್ದಾರಾ? ನೀವು ಪುಸ್ತಕದಲ್ಲಿ ಇರುವುದನ್ನು ಮಾತ್ರ ಒಪ್ಪುತ್ತೀರೋ? ಈ ಶಬ್ದಗಳನ್ನು ಯಾಕೆ ಬಳಸಿದ್ದಾರೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಅದಕ್ಕಾಗಿ ಅವರು ವಿವೇಕಾನಂದರ ಪ್ರತಿಪಾದಿಸಿದ ಹಿಂದೂ ಧರ್ಮವನ್ನೂ ಕೋಟ್ ಮಾಡಿದ್ದಾರೆ. ಅರ್ಥವಾಗದಿದ್ದರೆ ವಿವೇಕಾನಂದರ ಕೃತಿಶ್ರೇಣಿಯನ್ನು ಒಮ್ಮೆ ಓದಿ. ಅವರು ಎಲ್ಲೂ ಅಸ್ಪೃಶ್ಯತೆಯನ್ನು ಪ್ರತಿಪಾದಿಸಿಲ್ಲ, ಎಲ್ಲೂ ಮೌಢ್ಯಗಳನ್ನು ಒಪ್ಪಿಕೊಂಡಿಲ್ಲ, ಎಲ್ಲೂ ವರ್ಣಾಶ್ರಮದಿಂದ ಬಂದ ಅಸಮಾನತೆಯನ್ನು ಸರಿ ಎಂದು ಹೇಳುವುದಿಲ್ಲ. ವಿವೇಕಾನಂದರ ಚಿಂತನೆಗಳಿಗೆ ಆಧಾರವಾಗಿರುವುದು ಉಪನಿಷತ್ತುಗಳು. ಒಂದು ವೇಳೆ ವಿವೇಕಾನಂದ ಆದರ್ಶಗಳು ಪಾಲನೆಯಾಗಿದ್ದರೆ ಹಿಂದೂ ಧರ್ಮ ವಿಶ್ವಧರ್ಮವಾಗುತ್ತಿತ್ತು. ಆದರೆ ಹುಸಿ ಹಿಂದುತ್ವವಾದಿಗಳು ಹಿಂದೂ ಧರ್ಮ ಸುಧಾರಣೆಯಾಗುವುದನ್ನು ಬಯಸಲಿಲ್ಲ. ಹೀಗಾಗಿಯೇ ಇವತ್ತು ಇಷ್ಟು ಸಮಸ್ಯೆಗಳಿವೆ.
    ಬಿರಾದರ್ ಸಾಹೇಬರೇ, ಕಮೆಂಟ್ ಮಾಡುವ ಮುನ್ನ ಒಂಚೂರು ಅಧ್ಯಯನ ಮಾಡಿ ಪ್ಲೀಸ್.
    -ಶಕುಂತಲ

    ReplyDelete
  14. ಮೇಲ್ನೋಟಕ್ಕೆ ಬ್ಯಾಲೆನ್ಸ್ ಆಗಿ ಕಂಡರೂ ಸೂಕ್ಷ್ಮವಾಗಿ ಗಮನಿಸಿದರೆ ಇಡೀ ಲೇಖನ ಪೂರ್ವಾಗ್ರಹದಿಂದ ಕೂಡಿದೆ. ಉದಾಹರಣೆಗೆ "ಮತಾಂತರ-ಧರ್ಮಾಂತರಗಳು ಕಾಲಕಾಲಕ್ಕೆ ಸಮಾಜದಲ್ಲಿ ಸಂಭವಿಸಿಕೊಂಡು ಬರುವ ಸಹಜ ಪ್ರಕ್ರಿಯೆಗಳು" ಎಂಬ ಮಾತು. ಹೀಗೆ ಮತಾಂತರ ಸಹಜ ಪ್ರಕ್ರಿಯೆ ಆಗಬಹುದಾದರೆ ಹಿಂದುತ್ವವೂ, ಹಿಂದೂ ಲೇಖಕರು ಬಹುವಾಗಿ ದ್ವೇಷಿಸುವ ಹಿಂದೂ ಅಸೆರ್ಟಿವ್ನೆಸ್ ಕೂಡ ಸಹಜ ಪ್ರಕ್ರಿಯೆ ಏಕಾಗಬಾರದು? ಏಕೆಂದರೆ ಮತಾಂತರ ಮಾಡುತ್ತಿರುವವರು ಕ್ರಿಶ್ಚಿಯನ್ನರು. ಅದಕ್ಕೆ ಅದು ಸಹಜ ಪ್ರಕ್ರಿಯೆ. ಅದೇ ಮತಾಂತರಕ್ಕೆ ವಿರೋಧ ಬಂದಾಗ ಅದು ಕೋಮುವಾದ, ಸಂಕುಚಿತ ಮನೋಭಾವನೆ ಇತ್ಯಾದಿ. ಯಾಕೆ ಹೇಳಿ, ಅದನ್ನು ಮಾಡುತ್ತಿರುವುದು ಹಿಂದುಗಳು. ಹೇಗಿದೆ ಸಂಪಾದಕೀಯದ ವಸ್ತುನಿಷ್ಠತೆ!

    ಇನ್ನು ಪದೇ ಪದೇ ವಿವೇಕಾನಂದರ ಬಗ್ಗೆ ಹೇಳುವ ಸಂಪಾದಕೀಯ ವಿವೇಕಾನಂದರು ಮತಾಂತರ ಬಗ್ಗೆ ಏನು ಹೇಳಿದ್ದಾರೆಂಬುದರ ಬಗ್ಗೆ ಸೊಲ್ಲೆತ್ತುತ್ತಿಲ್ಲ. ಯಾಕೆ ಹೇಳಿ? ಅದನ್ನು ಹೇಳಿದರೆ ತಮ್ಮ ಇಷ್ಟೂ ಲೇಖನಕ್ಕೆ ಕವಡೆ ಬೆಲೆ ಇರುವುದಿಲ್ಲ. ಹಾಗಾಗಿ ತಮಗೆ ಅನುಕೂಲ ಆಗುವಲ್ಲಿ ವಿವೇಕಾನಂದ, ಹಿಂದೂ ಸನ್ಯಾಸಿಗಳು ಬೇಕು, ಅನುಕೂಲ ಇಲ್ಲದಲ್ಲಿ ಅದೇ ಸನ್ಯಾಸಿಗಳು ಕೋಮುವಾದಿಗಳೂ ನಿಜವಾದ ಹಿಂದುವಲ್ಲದವರೂ ಆಗುತ್ತಾರೆ. ಇಬ್ಬಂದಿತನಕ್ಕೆ ಇನ್ನೊಂದು ಉದಾಹರಣೆ ಇದು.

    ReplyDelete
  15. Hindus only react, they dont know how to act, even in the matter of terrorism. So THERE IS NOTHING LIKE HINDU TERRORISM, ITS A REACTION FOR THE ACTION OF OVERALL TERRORISM.
    Unfortunately the conception of majority is such that, a person is called as secular if he is not favouring Hindu in any matter whether it is wrong or right, and he will be titled as KOMUVAADI, if he favours Hindu, whether right or wrong...
    Sicularism.....

    ReplyDelete
  16. Nice effort in trying BIASED conclusion, Boss dont try to fool the people. Its just your thought.

    And because of the people like you we are suffering. Can you try to dig into the information on Aseemananda statement, I am sure you had not done that do it first.

    What Christians did was just a reaction according to you and what HINDUS did was wrong. can you tell me who started that first. have you did your homework on MAX NEW LIFE book release which was backbone of all the riots.

    Dont try to fool the people by giving wrong and biased conclusion. we are not fools.

    ReplyDelete
  17. ಮಧು ಭಟ್March 3, 2011 at 10:02 AM

    ಮತಾಂತರ-ಧರ್ಮಾಂತರ ಅನ್ನುವುದು ಬಹಳ ಕಾಲದಿಂದಲೂ ನಡೆದು ಬಂದಿರುವ ವಿಚಾರವನ್ನು ನಾವು ಹೇಗೆ ಒಪ್ಪುತ್ತೆವೆಯೋ ಹಾಗೆ ತಮ್ಮ ಧರ್ಮದಿಂದ ಬೇರೆಯದಕ್ಕೆ ಹೋಗುವದನ್ನು ವಿರೋಧಿಸುವ ಪ್ರಕ್ರಿಯೆ ಕೂಡ ಬಹಳ ಕಾಲದಿಂದಲೂ ನಡೆದು ಬಂದಿರುವ ವಿಷಯವೇ ಮತ್ತು ಅದು ಸ್ವಾಭಾವಿಕವೇ.

    ಆದರೆ ಮತಾಂತರದಲ್ಲಿ ಇವತ್ತು ಅವತ್ತಿನ ಹಾಗೆ ಒಂದು ಧರ್ಮವನ್ನು ಅವಹೇಳನ ಮಾಡುವ, ಆ ಧರ್ಮದಲ್ಲಿ ತಪ್ಪು ಕಂಡು ಹಿಡಿಯುವ ಎಲ್ಲಾ ಕೆಲ್ಸಳೂ ನಡೆಯುತ್ತಲೇ ಬಂದಿವೆ, ಯಾವುದು ಹೊಸದಲ್ಲ ಮತ್ತು ದೇವರುಗಳು ಹೊಸಬರಲ್ಲ. ಆದರೆ ಇವತ್ತು ಅದು ದ್ವೇಷದ ರೂಪ ತಾಳಿರುವುದು ಮತ್ತು ಅದೇ ಧರ್ಮ ಸಂರಕ್ಷಣೆ, ಅವರೇ ನಿಜವಾದ ಹಿಂದೂಗಳು ಎಂದು ಸಾರುತ್ತಿರುವ ವಿಷ್ಯ ಮಾತ್ರ ಒಪ್ಪಲು ಸಾಧ್ಯವಿಲ್ಲ.

    ಇವತ್ತು ಪ್ರತಿರೋಧ ತೋರುತ್ತಿರುವ ಮತ್ತು ಕೈಲಾಗತನವನ್ನು ಪ್ರದರ್ಶಿಸುತ್ತಿರುವ ಒಂದು ವರ್ಗದ ಹಿಂದೂಗಳು, ಮತಾಂತರವನ್ನು ನಿಷೇದ ಮಾಡುವ ಕಾನೂನಿನ ಮೊರೆ ಹೋಗಿದ್ದಾರೆ. ಅದೇ ಆ ಕಡೆ ಜನರನ್ನು ಸೆಳೆಯುತ್ತ ಇರುವ ಕ್ರೈಸ್ತರು ರಕ್ಷಣೆಗೆ ಕಾನೂನಿನ ಮೊರೆ ಹೋಗಿದ್ದಾರೆ. ಅನೇಕ ದೇಶದಲ್ಲಿ ಇದೆ ಕ್ರೈಸ್ತರು ಇಲ್ಲಿ ಆಡುತ್ತ ಇರುವ ಹಿಂದೂಗಳ ಹಾಗೆ ಕೈಲಾಗದತವನ್ನು ಪ್ರದರ್ಶಿಸುತ್ತ ಇರಬಹುದು.
    ಈ ಹತಾಷೆ ಮತ್ತು ಧರ್ಮಂತರವನ್ನು ನಿಲ್ಲಿಸಬೇಕೆಂಬ ಬಯಕೆಯೇ ಕೋಮುವಾದ , ಭಯೋತ್ಪಾದನೆ ರೂಪ ಪಡೆದಿದೆ ಅಷ್ಟೆ.

    -ಮಧು ಭಟ್

    ReplyDelete
  18. M.P.Nirkajeyavara abhipraya anumodisutta Swamy vivekanandararu Amerikada Detroitna `Uniterian church'nalli maadida bhashanada saramsha. Odikolli. `naanu nimage nisturada matondannu heluttene. neevu nimma mishanarigalannu chennagi tarabeti needu, hana kottu kalisuttiri. Adare Etakke? namma deshakke bandu namma poorvajarannu, namma dharmavannu, namma ellavannu shapisuvudakkagi. avaru namma devalayada balige bandu `O, vigraharadhakare! neevu narakke hoguttiri' ennnuttare. Adare naavu namma makkala taleyalli `I prapanchavella sundara. Adare manushya matra papi' emba durbhavaneyannu tumbuvudilla. nimma dharma pracharakanobba nammannu byuvagalella idannu nenapittirali. Idi bharatave eddu nintu hindu mahasagarada taladalliruva kesarannella tegedukondu paschatya rastragala mela esedaroo kooda adu neevu namage maduttiruva anyayadalli saviradondu palu kooda illa. nimma dharmavannu neevu ittukolli. namma dharmavannu namage ittukollalu namage bidi'. [swami vevekanadara samagra jeevana charitre. Samputa 2 Page No.243-244]. Swamiji munduvariyutta `Hindu dharma'da bagge helida matu. `Jagattige sahishnuteyannu sarvadharma sweekara manobhavavanu bhodhisida dharmakke seridavanu nanemba hemme nannadu. naavu sarvamata sahishnuteyannu opputtevaste allde, sakala dharmagalu satyavendu nambutteve. yaava dharma pavitra bhashege `exclusion' emba padavannu anuvadisalu sadhyve illvo antana dharmakke seride hemme nannadu' [Page No.188] Swamijiyavarannu sariyaagi artha madikonda `New York Herald' patrike `intaha tiluvalikasta deshakke dharma pracharakarannu kalisuvudu entaha murkhatana' endu bareyitu.[Page No.206]. Idannu odida mele Dr.chidananda murthigala `hindu dhrma'da bagegina `kaalaji'yannu arthamaadikollade `jatyatitateya bannada kannadakadalli avarannu vimarshivuvarannu enannabeku?

    ReplyDelete
  19. ಹಿಂದೂಗಳಲ್ಲಿ ಒಂದು ಸಣ್ಣ ಪ್ರಮಾಣದ ಜನರನ್ನು ಹೊರತುಪಡಿಸಿ ಉಳಿದವರೆಲ್ಲ ಸೆಕ್ಯುಲರ್ ಆಗಿದ್ದಾರೆ. ಇವರೇ ನಿಜವಾದ ಹಿಂದೂಗಳು.

    ReplyDelete
  20. @ ಹೀಗೆ ಮತಾಂತರ ಸಹಜ ಪ್ರಕ್ರಿಯೆ ಆಗಬಹುದಾದರೆ ...
    Hinduism kooda conversionninda ageedu emba vaada ede..from Bhudism.?

    ReplyDelete
  21. @ ಶಕುಂತಲ madam

    Madam, i haven't confused myself. The article title itself is confusive. ನೈಜ ಹಿಂದುತ್ವವಾದ-ಹುಸಿ ಹಿಂದುತ್ವವಾದ are suprising terms for me. I am sure that these terms are not used in our holy religious book. I wonder why sampadakeeya used this terms as title and from where they got these terms.

    "ಯಾವುದೋ ಧಾರ್ಮಿಕ ಪುಸ್ತಕದಿಂದ ಹುಡುಕಿ ಬರೆದಿದ್ದೇವೆ" This is how the distortion of religious message starts with some people who translate the terms from holy religious book.

    ನೀವು ಪುಸ್ತಕದಲ್ಲಿ ಇರುವುದನ್ನು ಮಾತ್ರ ಒಪ್ಪುತ್ತೀರೋ?.. No, i don't beleive all Translated books, but at the same time i trust the holy religious books.

    Sorry for commenting in english. I am perfect in kannada but not perfect in kannada typing.
    ...

    Biradar.S.S
    PhD Scholar
    China

    ReplyDelete
  22. Humanity is my religion. I am neither hindu, nor muslim/christain/buddhist.

    ReplyDelete
  23. @MR.SIDDANAGOUDA S BIRADAR
    ನೀವು ಮಾನವತೆಯೇ ನಿಮ್ಮ ಧರ್ಮ ಎಂದು ಹೇಳುತ್ತೀರಿ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಬುದ್ದಿಸ್ಟ್ ಯಾವುದೂ ಅಲ್ಲ ಎನ್ನುತ್ತೀರಿ. ತುಂಬಾ ಸಂತೋಷ. ಆದರೆ ನಾನು ಒಬ್ಬ ಹಿಂದೂ ಎಂದು ಸಂತೋಷದಿಂದ ಹೇಳಿಕೊಳ್ಳುತ್ತೇನೆ. ಆದರೆ ನಾನು ಈಗ ಬಾಬರಿ ಮಸೀದಿ ಕೆಡವಿದವರ ಹಿಂದೂ ಧರ್ಮಕ್ಕೆ ಸೇರಿದವಳಲ್ಲ, ಕ್ರಿಶ್ಚಿಯನ್ ಪಾದ್ರಿಯನ್ನು ಸುಟ್ಟು ಹಾಕಿದವರ ಹಿಂದೂ ಧರ್ಮಕ್ಕೆ ಸೇರಿದವಳಲ್ಲ, ಗುಜರಾಥ್ ನಲ್ಲಿ ಸಾವಿರಾರು ಜನರನ್ನು ಕೊಂದು `ಪ್ರತಿಕ್ರಿಯೆ' ನೀಡಿದವರು ಪ್ರತಿಪಾದಿಸುವ ಹಿಂದೂ ಧರ್ಮಕ್ಕೆ ಸೇರಿದವಳಲ್ಲ.
    ನಾನು ವಿವೇಕಾನಂದರು ಪ್ರತಿಪಾದಿಸಿದ, ಗಾಂಧೀಜಿ ಅನುಸರಿಸಿದ ಹಿಂದೂ ಧರ್ಮಕ್ಕೆ ಸೇರಿದವಳು. ಈ ಹಿಂದುತ್ವ ಏನು ಎಂದು ದಯವಿಟ್ಟು ಮತ್ತೆ ಕೇಳಬೇಡಿ. ಅದನ್ನು ಹೇಳುವುದಕ್ಕೆ ತುಂಬ ಸ್ಪೇಸ್ ಬೇಕು. ಬದಲಾಗಿ ನೀವು ವಿವೇಕಾನಂದರ ಕೃತಿಶ್ರೇಣಿಗಳನ್ನು ಓದಿ ಎಂದಷ್ಟೇ ನಾನು ಸಲಹೆ ನೀಡಬಹುದು.
    I hope, ನಿಮಗೆ ಈಗಲಾದರೂ ನೈಜ ಹಿಂದುತ್ವ, ಹುಸಿ ಹಿಂದುತ್ವ ಎಂದರೆ ಏನೆಂಬುದು ಅರ್ಥವಾಗಿರಬಹುದು. ಈಗಲೂ ಅರ್ಥವಾಗಿಲ್ಲವೆಂದರೆ ನೀವು ಅದನ್ನು ಅರ್ಥ ಮಾಡಿಕೊಳ್ಳಲು ಬಯಸುತ್ತಿಲ್ಲ ಎಂದೇ ಭಾವಿಸಬೇಕಾಗುತ್ತದೆ.
    -ಶಕುಂತಲ

    ReplyDelete
  24. ಸಂಪಾದಕೀಯಕ್ಕೆ ಅಭಿನಂದನೆಗಳು. ನಾವು ಸೆಕ್ಯುಲರಿಸ್ಟರು ಎಂದು ಹೇಳಿಕೊಳ್ಳುವರು ಇದುವರೆಗೆ ಹಿಂದೂ ಧರ್ಮದ ಹೊರಗೆ ನಿಂತು ಮಾತನಾಡುತ್ತಿದ್ದರು. ಹೀಗೆ ಮಾತಾಡುವುದರಿಂದ ಅವರನ್ನು ಸುಲಭವಾಗಿ ಯಾರೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ನೀವು ಹಿಂದೂ ಧರ್ಮದ ಒಳಗೆ ನಿಂತು ಮಾತನಾಡುತ್ತಿದ್ದೀರಿ. ಇದು ಕೆಲವು ಮೂಲಭೂತವಾದಿಗಳಿಗೆ ಇನ್ನೂ ಅರಗಿಸಿಕೊಳ್ಳದ ವಿಷಯವಾಗಿದೆ. ಯಾರು ಹಿಂದುತ್ವದ ವಾರಸುದಾರರಂತೆ ವರ್ತಿಸುತ್ತಾರೋ, ಅವರು ಹಿಂದೂ ಧರ್ಮದ ಮೌಲ್ಯವನ್ನೇ ಹಾಳು ಮಾಡಿದ್ದಾರೆ. ನಿಮ್ಮ ಹಾಗೆ ಹಿಂದೂ ಧರ್ಮದ ಒಳಿತುಗಳನ್ನು ಮಾತನಾಡುತ್ತಲೇ, ಒಳಿತುಗಳನ್ನು ಮುಂದಿಟ್ಟುಕೊಂಡೇ ಕೆಡುಕುಗಳ ವಿರುದ್ಧ ಹೋರಾಡಬೇಕು.
    ಸ್ವಾಮಿ ವಿವೇಕಾನಂದರು ಸಹ ಹಿಂದೂ ಧರ್ಮ ಪರಿಷ್ಕಾರವಾಗಬೇಕು ಎಂದು ಬಯಸಿದ ಹಿನ್ನೆಲೆಯಲ್ಲೇ ಪುರೋಹಿತಶಾಹಿಗಳ ಕುತಂತ್ರಗಳ ವಿರುದ್ಧ ಗುಡುಗಿದ್ದರು. ಒಳಗಿನ ಶತ್ರುಗಳನ್ನು ನಿಗ್ರಹಿಸದ ಹೊರತು ಯಾವ ಧರ್ಮವೂ ಉದ್ಧಾರವಾಗದು. ಇದು ನನ್ನ ಪ್ರಾಮಾಣಿಕ ಅನಿಸಿಕೆ
    -ಈಶ್ವರ ಕುಮಾರ್

    ReplyDelete
  25. sampadakiya should read a lot and elaborate its\his\her knowledge. sampadakiya should study history also. if you write whatever comes to your mind, then it becomes,a story! and looses its strength.

    ReplyDelete
  26. @ ಇಂಗಿತ,
    ನೀವು ಹೇಳುವುದು ನಿಜ. ಇಲ್ಲಿ ಕಮೆಂಟ್ ಮಾಡಿರುವ ಕೆಲವು ಮನಸ್ಸುಗಳು ಪೂರ್ವನಿರ್ಧಾರಿತ ನಿಲುವುಗಳಿಗೆ ಅಂಟಿಕೊಂಡಿವೆ. ಅವು ಬದಲಾಗುವುದಿಲ್ಲ. ಮತ್ತು ಎಲ್ಲ ಕಾಂಪ್ಲಿಕೇಟ್ ಮಾಡುತ್ತವೆ.

    ReplyDelete
  27. Terrorism started after the demolition of Rama Mandir_babri Mazid in Ayodhya by HIndu fanatics led by Uma Bharathi & ADVAni.

    ReplyDelete
  28. ಟಿ.ಗುರುರಾಜ್March 3, 2011 at 2:48 PM

    ನಿಮ್ಮ ಕಾಳಜಿ ಅರ್ಥಪೂರ್ಣ.

    ಎಲ್ಲ ಧರ್ಮಗಳಿಗಿಂತ ಮಾನವೀಯತೆಯೇ ದೊಡ್ಡದೆಂಬುದು ನನ್ನ ನಂಬಿಕೆ.ಹುಂಬನೆಂದುಕೊಂಡರೂ ಸರಿ.ಇದೇ ವಿವೇಕ ನನ್ನಲ್ಲಿ ಸದಾ ಜಾಗೃತವಾಗಿರಲಿ.
    ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

    ReplyDelete
  29. @ Shakuntala...

    Your thoughts may be noble... but impracticable in current senario... as explained by you a 'nijavaada hindu' is suppose to tolerate any level & length of attack on him from other religions... he should not resist, protest or react... he should keep peace, quiet & at the most can approach court of law.. And for all these cowardly acts he will get a lable 'Nijavaada Hindu'. Tell me madam, why we are spending lakhs of crores on defence every year? Why over soldiers, police & all security people burning mid night oil & fighting for? Why cant we practice your version of hindutva? Do you think it will protect you practically? Do you think those religious fanatics who are ready to go any level to prove the suprimacy of their religion have all the ears for your explantion of 'nijavada hindutva'?

    Regards,
    Proud Hindu (only)

    ReplyDelete
  30. ಎಲ್ಲ ಧರ್ಮಗಳೂ ಜಡವಾಗಿ ಹೋಗಿವೆ. ಕಾಲ ಬದಲಾದಂತೆ ಧರ್ಮಗಳೂ ಅಪ್‌ಡೇಟ್ ಆಗಬೇಕಿತ್ತು. ಆದರೆ ಧರ್ಮಗಳು ನಿಂತಿರುವುದು ಎಂದೋ ಯಾರೋ ಕಟ್ಟಿಕೊಟ್ಟ ಸೂತ್ರಗಳನ್ನು ಹಿಡಿದು. ನಾವು ಕುರುಡಾಗಿ ಅವುಗಳಿಗೆ ತಲೆಯೊಡ್ಡಿದ್ದೇವೆ. ಈ ಸೂತ್ರಗಳೇ ಇಂದು ನಮ್ಮ ಕೊರಳಿಗೆ ಉರುಳಾಗಿವೆ. ಹಿಂದೂ, ಇಸ್ಲಾಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲ ಧರ್ಮಗಳೂ ಇಂದು ಜಡವಾಗಿವೆ. ಚಲನಶೀಲತೆಯಿಲ್ಲದ ಧರ್ಮಗಳು ನಮ್ಮನ್ನು ಬೌದ್ಧಿಕವಾಗಿ, ಅಧ್ಯಾತ್ಮಿಕವಾಗಿ ಬೆಳೆಸಲಾರವು. ಇವತ್ತು ಕೋಮುವಾದ, ಭಯೋತ್ಪಾದನೆ, ಬಲವಂತದ ಮತಾಂತರ ಮತ್ತಿತರ ಸಮಸ್ಯೆಗಳಿಗೆ ಇದು ಮೂಲ. ಧರ್ಮದ ವ್ಯಾಖ್ಯೆಗಳನ್ನು ಪುನರ್ ನಿರ್ಮಿಸಿಕೊಳ್ಳದ ಹೊರತು, ಎಲ್ಲ ಧರ್ಮಗಳ ಒಳಗಿನ ಪುರೋಹಿತಶಾಹಿ ಯಥಾಸ್ಥಿತಿವಾದಿಗಳನ್ನು ಹೊರಗೆ ಎಸೆಯದ ಹೊರತು ಈ ಸಮಸ್ಯೆಗಳು ಪರಿಹಾರವಾಗದು.

    ನಿಜ ನಿಮ್ಮ ಈ ಮಾತುಗಳು ಶೇಕಡ ನೂರರಷ್ಟು ಸತ್ಯ .. ಉತ್ತಮ ಲೇಖನ

    ReplyDelete
  31. HINDU galu secular ennuvadkke taza example andare sampadakiya nadesid survey dalli Hamid palya geddiruvadu..
    hindu is never communal..if so today there will be no parsi,no lain, no bhuddist are in india...
    it welcomed all...today's hindu terrorisam is reaction to the islamic Terrorisam...

    vithalrao kulkarni

    ReplyDelete
  32. ಹಿಂದುವಾಗಲಿ, ಮುಸ್ಲಿಮರಾಗಲಿ ಅಥವಾ ಕ್ರಿಶ್ಚಿಯನರಾಗಲಿ ಎಲ್ಲಾ ಅವರವರ ವೈಯಕ್ತಿಕ ನಂಬಿಕೆಗಳು. ಬಲವಂತವಾಗಿ, ಉದ್ದೇಶಪೂರ್ವಕವಾಗಿ ತಮ್ಮ ಅಭಿಪ್ರಾಯಗಳನ್ನು ಮತ್ತೊಬ್ಬರ ಮೇಲೆ ಬಲವಂತವಾಗಿ ಹೇರಲು ಹೊರಟರೆ ಅವರೆಲ್ಲರೂ ಕೋಮುವಾದಿಗಳೇ ಆಗುತ್ತಾರೆ. ಇದಕ್ಕೂ ಮೊದಲು ಒಬ್ಬ ಉತ್ತಮ ಹಿಂದುವಾಗಬೇಕು, ಒಬ್ಬ ಉತ್ತಮ ಮುಸ್ಲಿಮನಾಗಬೇಕು ಮತ್ತು ಉತ್ತಮ ಕ್ರಿಶ್ಚಿಯನನಾಗಬೇಕು. ಇವೆಲ್ಲಕ್ಕೂ ಮಿಗಿಲಾಗಿ ಎಲ್ಲರಲ್ಲಿ ಮಾನವ ಸಂಸ್ಕ್ರತಿ ಉತ್ತಮಗೊಳ್ಳಬೇಕು.
    ಎಂ.ಕುಮಾರ್
    ದಿನಾಂಕ, ೫-೩-೨೦೧೧

    ReplyDelete
  33. ಚಿಂತನೆಗೆ ಯೋಗ್ಯವಾದ ವಿಷಯಗಳು:
    ೧. ಎಡಪಂಥೀಯ ಚಿಂತಕರದ್ದೂ ಮುಸ್ಲಿಂ ರಾಷ್ಟ್ರವಾದಿಗಳದ್ದೂ ವಾದದ ಬಗೆ ಒಂದೇ ಆಗಿರಲು ಕಾರಣವೇನು? ಅಥವಾ ಹಾಗೆನಿಸುವುದೂ ಒಂದು ತೋಱಿಕೆ (ತೋರಿಕೆ) ಮಾತ್ರವೇ? ಹೌದಾದರೆ ಇಂತಹ ತೋಱಿಕೆಗಳಿಗೇನು ಕಾರಣ?

    ೨. ಎಡಪಂಥೀಯ ಚಿಂತನೆಗಳು ಮುಸ್ಲಿಂ ರಾಷ್ಟ್ರವಾದಿಗಳ ಚಿಂತನೆಗಳ ಮೇಲೆ ಯಾವುದಾದರೂ ಕಾಲಘಟ್ಟದಲ್ಲಿ ಪ್ರಭಾವ ಬೀರಿರಬಹುದೇ?
    ಹೌದಾದರೆ ಯಾಕೆ, ಯಾವಾಗ ಮತ್ತು ಮತ್ತು ಈ ಚಿಂತನ ವಿಧಾನ ಬೆಳೆದುಬರಲು ಏನು ಕಾರಣ?
    ಒಂದು ವೇಳೆ ಇಲ್ಲವೆಂದಾದರೆ ಮೌದೂದಿಯಂತಹ ಇಸ್ಲಾಂ ರಾಷ್ಟ್ರವಾದಿಗಳು ನಿಮ್ಮ ಪಟ್ಟಿಗಳಿಂದ ಯಾವತ್ತೂ ಹೊಱಗೆ ಉಳಿದಿರಲು ಏನು ಕಾರಣ?

    ReplyDelete
  34. I am confused about your statement. At one point you make a laudable statement that we have to follow religion by Swamy Vivekananda's standards, yes agreed, then you go on to say that the religions have become static, they are not updated e...tc. The latter statement of you regarding all the religions is blasphemous. One needs a deep study of all the religions to comment. Now my question is how many religious books have you studied. Terming all the religions as outdated(not updated) is not acceptable. For that matter life will be so simple and beautiful if we live by true standards of our respective religions, because no religion in the world preaches violence. It is only some troubled minds that make use of a religion's name to gain some political mileage and such other things.
    You also said that the Mahatma was killed by a hindu fundamentalist. Why use the religion? As I have already said no religion preaches violence and hinduism is no exception. If somebody does something that is not preached by the religion then why blame the religion? What about the assassins of Indira and the people who set fire to the train at Godhra? Would you call them Sikh and Muslim fundamentalists just because they were born in that religion?

    ReplyDelete