Wednesday, March 16, 2011

ಐಆರ್‌ಎಸ್ ಸರ್ವೆ: ವಿಜಯ ಕರ್ನಾಟಕವೇ ನಂ.೧


ಐಆರ್‌ಎಸ್ ನಾಲ್ಕನೇ ಹಾಗು ಕಡೆಯ ತ್ರೈಮಾಸಿಕ ಸರ್ವೆಯ ಫಲಿತಾಂಶವೂ ಹೊರಬಂದಿದೆ. ಎಂದಿನಂತೆ ವಿಜಯ ಕರ್ನಾಟಕವೇ ಪ್ರಥಮ ಸ್ಥಾನವನ್ನು ಕಾಯ್ದಿರಿಸಿಕೊಂಡಿದೆ. ಪ್ರಥಮ ಸ್ಥಾನದ ಜತೆಜತೆಗೆ ಅದು ಶೇ.೧.೫ರಷ್ಟು ಓದುಗರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಕಳೆದ ತ್ರೈಮಾಸಿಕದಲ್ಲಿ ವಿಜಯ ಕರ್ನಾಟಕದ ಓದುಗರ ಸಂಖ್ಯೆ ೩೪.೨೫ ಲಕ್ಷವಾಗಿದ್ದರೆ, ಅದು ಈಗ ೩೪.೭೫ ಲಕ್ಷಕ್ಕೆ ಏರಿದೆ. ಮೂರನೇ ತ್ರೈಮಾಸಿಕದಲ್ಲಿ ವಿಜಯ ಕರ್ನಾಟಕ ೧.೮೭ ಲಕ್ಷ ಓದುಗರನ್ನು ಹೊಸದಾಗಿ ಪಡೆದಿತ್ತು. ಅದಕ್ಕೂ ಹಿಂದಿನ ತ್ರೈಮಾಸಿಕದಲ್ಲಿ ೫೪,೦೦೦ ಓದುಗರನ್ನು ಕಳೆದುಕೊಂಡಿತ್ತು.

ಪ್ರಜಾವಾಣಿ ಎರಡನೇ ಸ್ಥಾನವನ್ನು ಉಳಿಸಿಕೊಂಡಿದ್ದು ಕಳೆದ ತ್ರೈಮಾಸಿಕದಲ್ಲಿ ಗಣನೀಯ ಪ್ರಗತಿಯನ್ನು ದಾಖಲಿಸಿದೆ. ಈ ಬಾರಿ ೨.೭ ಲಕ್ಷ ಹೊಸ ಓದುಗರನ್ನು ಅದು ಗಳಿಸಿಕೊಂಡಿದೆ. ಪ್ರಜಾವಾಣಿ ಓದುಗರ ಸಂಖ್ಯೆ ಈಗ ೩೧.೮೦ ಲಕ್ಷಕ್ಕೆ ಏರಿದೆ. ಮೂರನೇ ತ್ರೈಮಾಸಿಕದಲ್ಲೂ ಪ್ರಜಾವಾಣಿ ಭರ್ಜರಿ ಪ್ರಗತಿ ಕಂಡು ೩.೪೫ ಲಕ್ಷ ಓದುಗರನ್ನು ಪಡೆದುಕೊಂಡಿತ್ತು, ಎರಡನೇ ತ್ರೈಮಾಸಿಕದಲ್ಲೂ ೩.೨೪ ಲಕ್ಷ ಹೊಸ ಓದುಗರನ್ನು ಗಳಿಸಿಕೊಂಡಿತ್ತು. ಒಟ್ಟಾರೆಯಾಗಿ ಪ್ರಜಾವಾಣಿಗೆ ಈ ವರ್ಷ ಭರ್ಜರಿ ಪ್ರಗತಿಯ ವರ್ಷ. ಶೇ.೪೧.೯ರಷ್ಟು ಬೆಳವಣಿಗೆಯನ್ನು ಅದು ದಾಖಲಿಸಿದೆ. ಒಂಭತ್ತು ಲಕ್ಷಕ್ಕೂ ಹೆಚ್ಚು ಓದುಗರನ್ನು ಅದು ಸೇರ್ಪಡೆಗೊಳಿಸಿಕೊಂಡಿದೆ.

ಮೂರನೇ ಸ್ಥಾನದಲ್ಲಿದ್ದ ಸಂಯುಕ್ತ ಕರ್ನಾಟಕವನ್ನು ಕನ್ನಡಪ್ರಭ ಪತ್ರಿಕೆ ಹಿಂದೆ ಸರಿಸಿ, ತಾನು ಆ ಸ್ಥಾನಕ್ಕೇರಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ಕನ್ನಡಪ್ರಭ ಶೇ. ೧೦.೯ರಷ್ಟು ಭರ್ಜರಿ ಪ್ರಗತಿ ದಾಖಲಿಸಿದೆ. ಈ ತ್ರೈಮಾಸಿಕದಲ್ಲಿ ೧೨.೩೭ ಲಕ್ಷ ಹೊಸ ಓದುಗರನ್ನು ದಾಖಲಿಸಿಕೊಂಡಿರುವ ಕನ್ನಡಪ್ರಭ ಕಳೆದ ತ್ರೈಮಾಸಿಕದಲ್ಲೂ ೧೧.೧೫ ಲಕ್ಷ ಓದುಗರನ್ನು ಪಡೆಯುವ ಮೂಲಕ ಭರ್ಜರಿ ಪೈಪೋಟಿ ಆರಂಭಿಸಿತ್ತು. ಈ ವರ್ಷ ಕನ್ನಡಪ್ರಭ ಓದುಗರ ಸಂಖ್ಯೆ ಶೇ.೬೫.೨ರಷ್ಟು ಏರಿಕೆ ಕಂಡಿದೆ.

ಸಂಯುಕ್ತ ಕರ್ನಾಟಕ ಮೂರನೇ ಸ್ಥಾನವನ್ನು ಕಳೆದುಕೊಂಡಿದ್ದರೂ ಅದೂ ಸಹ ಶೇ.೫.೪ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಉದಯವಾಣಿ ಐದನೇ ಸ್ಥಾನವನ್ನು ಗಳಿಸಿದೆ. ಉದಯವಾಣಿ ಸಹ ೪೧,೦೦೦ ಹೊಸ ಓದುಗರನ್ನು ಈ ತ್ರೈಮಾಸಿಕದಲ್ಲಿ ಪಡೆದುಕೊಂಡಿದೆ.

ಇನ್ನು ಇಂಗ್ಲಿಷ್ ಪತ್ರಿಕೆಗಳ ಪೈಕಿ ಟೈಮ್ಸ್ ಆಫ್ ಇಂಡಿಯಾ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ಎರಡನೇ ಸ್ಥಾನದಲ್ಲಿರುವ ಡೆಕ್ಕನ್ ಹೆರಾಲ್ಡ್ ತನ್ನ ಸ್ಥಿತಿಯನ್ನು ಇನ್ನಷ್ಟು ಸುಧಾರಿಸಿಕೊಂಡಿದೆ.

2 comments:

 1. ಈ ಐಅರ್‍ಎಸ್ ಸರ್ವೆ: ಎನ್ನುವುದು ಏನು? ಅದು ಹೇಗೆ ನಡೆಯುತ್ತದೆ. ಎಲ್ಲಿ ನಡೆಯುತ್ತದೆ ಎನ್ನುವುದು ಯಾರಿಗಾದರೂ ಗೊತ್ತಾ? ನನಗೆ ತಿಳಿದಂತೆ ಒಂದೇ ಒಂದು ದಿನಕ್ಕಾದರೂ ನಮ್ಮ ಮನೆಯ ಬಾಗಿಲಿಗೆ ಆಥವ ನಮ್ಮ ದಿನಪತ್ರಿಕೆಯ ವಿತರಣೆಯ ಸ್ಥಳಕ್ಕೆ ಒಮ್ಮೆಯೂ ಬರದ ಈ ಸರ್ವೆಗಳು ಹೇಗೆ ಆ ಪತ್ರಿಕೆ ನಂ:೧, ಈ ಪತ್ರಿಕೆ ನಂ:೨ ಅಂಥ ದಾಖಲೆ ಮಾಡುತ್ತವೆ ಅನ್ನುವುದು ನನಗೆ ಒಂಥರ ನಗೆಪಾಟಲು ಅನ್ನಿಸುತ್ತದೆ. ಒಂದು ದಿನಪತ್ರಿಕೆಯ ಸರ್ಕುಲೇಶನ್ ಎಷ್ಟು ಇದೆ ಎನ್ನುವುದು ತಿಳಿಯುವುದು ಅದು ನಿತ್ಯ ಮುದ್ರಣವಾಗುವ ಪ್ರತಿಗಳ ಆಧಾರದ ಮೇಲೆ. ಒಂದು ಮನೆಯಲ್ಲಿ ಒಬ್ಬರಿರಬಹುದು, ಇನ್ನೊಂದು ಮನೆಯಲ್ಲಿ ಗಂಡ ಹೆಂಡತಿಯಿರಬಹುದು, ಮತ್ತೊಂದರಲ್ಲಿ ಮಕ್ಕಳಿರಬಹುದು ಅಥವ ಮಗದೊಂದು ಮನೆ ಅವಿಭಕ್ತಕುಟುಂಬವಿರಬಹುದು! ಈ ಮನೆಗಳವರು ತರಿಸುವ ಪತ್ರಿಕೆಯ ಆಧಾರದ ಮೇಲೆ ಇವರು ಸರ್ವೆ ಆಧಾರ ಮಾಡುವುದಾದರೆ ಈ ಮನೆಯಲ್ಲಿರುವವರೆಲ್ಲರೂ ಆ ಪತ್ರಿಕೆ ಓದುತ್ತಾರೆ ಅಂತ ಇವರೇ ತೀರ್ಮಾನಿಸಿಕೊಂಡು ಬಿಟ್ಟರೆ ಅದು ಸರಿಯಾದ ಸರ್ವೆಯಾದೀತೆ?: ಸುಮ್ಮನೆ ನಮಗೆ ೩೪-೩೧ ಲಕ್ಷ ಓದುಗರು ನಾವು ನಂ:೧-೨ ಇತ್ಯಾದಿಗಳನ್ನು ಬರೆದುಕೊಂಡು ಯಾರನ್ನು ಮೆಚ್ಚಿಸಬೇಕು.
  ಒಮ್ಮೆ ನಾನು ಟೈಮ್ಸ್ ಆಪ್ ಇಂಡಿಯದಲ್ಲಿ HR ಆಗಿ ಕೆಲಸ ಮಾಡುವ ಒಬ್ಬರು ನನ್ನಿಂದ ದಿನಪತ್ರಿಕೆ ತೆಗೆದುಕೊಳ್ಳುತ್ತಿದ್ದರು. ಅವರ ಬಳಿ ನಾನು ಹೋದಾಗ ಹೊಸ D.N.A ಇಂಗ್ಲೀಷ್ ದಿನಪತ್ರಿಕೆ ನಂ.೧ ಎಂದು ದೊಡ್ಡ ದೊಡ್ಡ ಹೋರ್ಡಿಂಗ್ಸ್ ಹಾಕಿದ್ದಾರೆ. ಅದಕ್ಕೆ ನಾವು ಏನಾದರೂ ಮಾಡಬೇಕು ಅಂದರು. ಅದಕ್ಕೆ ನಾನು ಹೀಗೆ ಹೋರ್ಡಿಂಗ್ಸ್ ಹಾಕಿಬಿಟ್ಟರೆ ಅದು ಹೇಗೆ ನಂ.೧ ಆಗಲು ಸಾಧ್ಯ ನನಗೆ ಇನ್ನೂರು ಟೈಮ್ಸ್ ಅಪ್ ಇಂಡಿಯ ಗ್ರಾಹಕರಿದ್ದರೆ, D.N.A ದಿನಪತ್ರಿಕೆ ಕೇವಲ ಗ್ರಾಹಕರಿದ್ದಾರೆ ಎಂದು ನಿಜವನ್ನು ಹೇಳಿದಾಗ ಅವರಿಗೆ ಅಚ್ಚರಿಯಾಯಿತು.

  ಇದೊಂದೇ ಉದಾಹರಣೆ ಸಾಕು! ಈ ಸರ್ವೆಗಳೆಲ್ಲಾ ಸುಳ್ಳು ಎನ್ನಲು. ನಿತ್ಯ ಎಷ್ಟು ದಿನಪತ್ರಿಕೆಗಳು ವಿತರಣೆಯಾಗುತ್ತವೆ ಎಷ್ಟು ಮನೆಗಳೆಗೆ ತಲುಪುತ್ತವೆ ಮತ್ತು ಸಣ್ಣ ಅಂಗಡಿಗಳಲ್ಲಿ ಎಷ್ಟು ಮಾರಾಟವಾಗುತ್ತವೆ ಈ ವಿಚಾರವನ್ನು ತಿಳಿದುಕೊಂಡರೆ ಆಗ ಯಾವುದು ನಂಬರ್ ಒನ್ ಅಥವ ೨ ಎನ್ನುವುದು ಗೊತ್ತಾಗುತ್ತದೆ. ಅದು ನಮಗೆ ಇಷ್ಟು ಓದುಗರು ಹೆಚ್ಚಾದರು! ಅಷ್ಟು ಗ್ರಾಹಕರು ಹೆಚ್ಚಾದರು ಎನ್ನುವ ಸುಳ್ಳುಪುರಾಣವನ್ನು ಯಾರಿಗೆ ಮೆಚ್ಚಿಸಲು ಈ ಪತ್ರಿಕೆಯವರು ಹಾಕುತ್ತಾರೆ! ಈ ವಿಚಾರವನ್ನು ಸಂಪಾದಕೀಯದಲ್ಲಿ ಬೇಸರವಾಯಿತು... ಮತ್ತೆ ಇಲ್ಲಿ ನಾನು ಯಾವ ಪತ್ರಿಕೆಯ ಪರವಾಗಿಯಾಗಲಿ, ಅಥವ ವಿರೋಧವಾಗಿಯಾಗಲಿ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿಲ್ಲ. ಈ ಸರ್ವೆಗಳೆಲ್ಲಾ ಎಷ್ಟು ಸರಿ ಮತ್ತು ಎಷ್ಟು ತಪ್ಪು ಎನ್ನುವುದನ್ನು ತೋರಿಸಲು ಪಯತ್ನಿಸುತ್ತಿದ್ದೇನೆ.
  ಇದಕ್ಕೆ ನಿಮ್ಮ ಅಭಿಪ್ರಾಯವೇನು?

  ReplyDelete
 2. IRS survey results are genaraly accepted by owenrs of all the news papers. results are genaraly fare and nearer to the facts. There is no surprise that Vk has retained its no one position. because Prajavani has not made effort to become no one. I will state an exshample of nuclear accident in japan. People wantedknow what is radiation, how it effects people, how long it will stay in the atmosphear? readers wanted to know the answers because nuclear reactors are situated very near to our place. we kiaga in our state and two more reactors situated tn Tn are very near. Prajavani did not bother to get answers from scintists and print it. See Vijaya karnataka .. they have made effort to explain the concerns of the people. surprisingly kannada prabha also fared better. editor should raise to the accatation. prajavani has not made any effort in this regard. getting award is easy, but scoring over other news papers is difficult thing. I am an ardent lover of prajavani since several decades. i feel bad to see prajavani in second place. by the by sl bhyrappa in his column in kannada prabha has reveled the other face of prajavani in its earliear days. Bhyrappa should give more details on that.
  -ananymous

  ReplyDelete