Tuesday, March 8, 2011

ಮೀಡಿಯಾಗಳಲ್ಲಿ ಮಹಿಳೆಯರ ಯುಗ ಆರಂಭವಾಗಿದೆ...


ಇವತ್ತು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಮೀಡಿಯಾಗಳ ವಿಷಯಕ್ಕೆ ಸೀಮಿತಗೊಳಿಸಿ ಹೇಳುವುದಾದರೆ ಹೆಣ್ಣುಮಕ್ಕಳು ಸಂತೋಷಪಡುವುದಕ್ಕೆ ಕಾರಣಗಳಿವೆ. ಇವತ್ತು ಕರ್ನಾಟಕದ ಮೀಡಿಯಾಗಳಲ್ಲಿ ದಿನೇದಿನೇ ಪ್ರವರ್ಧಮಾನಕ್ಕೆ ಬರುತ್ತಿರುವುದು ಬರಿಯ ಕಣ್ಣಿಗೆ ಕಾಣುತ್ತಿದೆ. ನಿಜ, ಪತ್ರಿಕೆಗಳ ಮಟ್ಟಿಗೆ ಹೇಳುವುದಾದರೆ, ಮಹಿಳೆಯರ ಪಾಲ್ಗೊಳ್ಳುವಿಕೆ ಇವತ್ತಿಗೂ ಹೇಳಿಕೊಳ್ಳುವಂತೇನಿಲ್ಲ. ಆದರೆ, ಟೀವಿಗಳಲ್ಲಿ ಹೆಣ್ಣುಮಕ್ಕಳು ಭರ್ಜರಿಯಾಗಿ ಕಾಲಿಟ್ಟಿದ್ದಾರೆ. ಅವರಿಗೆ ಅಭಿನಂದನೆಗಳು.

ಇವತ್ತು ನ್ಯೂಸ್ ಚಾನಲ್‌ಗಳಲ್ಲಿ ನಿರೂಪಕಿಯರು ಮಾತ್ರವಲ್ಲ, ವರದಿಗಾರರು ಹಾಗು ಇತರ ತಾಂತ್ರಿಕ ಆಯ್ಕೆಗಳಲ್ಲೂ ಮಹಿಳೆಯರು ಮುಂದಿದ್ದಾರೆ. ಈ ಟ್ರೆಂಡ್ ಹೀಗೆ ಮುಂದುವರೆಯುವ ಸಾಧ್ಯತೆಗಳು ನಿಚ್ಚಳವಾಗಿದೆ. ಅದು ಹಾಗೇ ಮುಂದುವರೆಯಲಿ ಎಂದು ಹಾರೈಸೋಣ.

ಹಾಗೆ ಸುಮ್ಮನೆ ಟಿವಿ ನಿರೂಪಕಿಯರ ಕುರಿತು ಒಂದು ಟಿಪ್ಪಣಿ ಇಲ್ಲಿ ಒದಗಿಸಿದ್ದೇವೆ. ಇವರ ಪೈಕಿ ಯಾರು ಹೆಚ್ಚು ಇಷ್ಟವಾಗುತ್ತಾರೆ, ದಯವಿಟ್ಟು ಹೇಳಿ. ನೀವು ಇಷ್ಟಪಡುವ ನಿರೂಪಕಿ ಈ ಪಟ್ಟಿಯಲ್ಲಿಲ್ಲದಿದ್ದರೂ ಪರವಾಗಿಲ್ಲ ಅವರ ವಿಶೇಷತೆ ಕುರಿತು ಬರೆದು ಹೇಳಿ.

ಟಿವಿ ೯
ಉಷಾ: ಸ್ಪಷ್ಟ ಭಾಷೆ, ಗಂಭೀರ ಮುಖಭಾವ, ಹೇಳುವುದನ್ನು ಅತ್ಯಂತ ನಿಚ್ಚಳವಾಗಿ ತಿಳಿಸುತ್ತಾರೆ. ತೊದಲುವ ಮಾತೇ ಇಲ್ಲ. ಅಗತ್ಯ ಇರುವ ಕಡೆ ನಗುವನ್ನು ಚೆಲ್ಲುತ್ತಾರೆ.
ಶೀತಲ್: ತುಂಟತನದ ಛಾಯೆ. ಖುಷಿ ಕೊಡುವ ಆತ್ಮವಿಶ್ವಾಸ. ಅಕಸ್ಮಾತ್ ತಪ್ಪು ಆದರೂ ತಿದ್ದಿಕೊಳ್ಳುವ ಸಮಯಸ್ಪೂರ್ತಿ. ಕಣ್ಣು ಮಿಟುಕಿಸಿ ಮಾತಾಡುವುದು ವಿಶೇಷತೆ.
ಸಮೀನ: ಶುದ್ಧ ಕನ್ನಡ, ಸ್ಪಷ್ಟ ಉಚ್ಛಾರ. ಯಾವ ಕಾರ್ಯಕ್ರಮ ಕೊಟ್ಟರೂ ನಿರರ್ಗಳವಾಗಿ ಮಾತಾಡುವ ಸ್ಥೈರ್ಯ.
ರಾಧಿಕ: ಗಂಭೀರತೆಯೇ ಪ್ಲಸ್ ಪಾಯಿಂಟ್. ಸುಂದರವಾಗಿ ನಕ್ಕು ಇಡೀ ಪರಿಸರವನ್ನು ಆಹ್ಲಾದಕರಗೊಳಿಸುವ ಕಲೆಗಾರಿಕೆ ಇದೆ. ಮಾತಿನ ಶೈಲಿ ಚಂದ. ವಿಷಯ ಮಂಡನೆಯು ಸಹ ಜನರನ್ನು-ಅತಿಥಿಗಳನ್ನು ಆಕರ್ಷಿಸುತ್ತದೆ.

ಸುವರ್ಣ ನ್ಯೂಸ್
ಸುಕನ್ಯ: ಮೃದುವಾದ ಭಾಷೆ, ಆಪ್ತವೆನ್ನಿಸುವ ಶೈಲಿ. ತಪ್ಪು ಹುಡುಕುವ ಪ್ರಯತ್ನ ಮಾಡಿದರೂ ಸಿಕ್ಕಲ್ಲ. ಎಲ್ಲಾ ವಿಷಯಗಳಿಗೂ ಫಿಟ್ ಅಂಡ್ ಪರ್ಫೆಕ್ಟ್
ಭಾವನ: ಮಾತು ಪರವಾಗಿಲ್ಲ. ಧ್ವನಿ  ಕೇಳಲು ಆರಾಮ. ಕೊಟ್ಟ ಕೆಲಸ ನೀಟಾಗಿ ಮಾಡುವ ಉತ್ಸಾಹ ಇದೆ. ಅತಿ ಅನ್ನಿಸದ ವರ್ತನೆ
ರಾಧ ಹಿರೇಗೌಡರ್: ಕ್ರೈಂ ಕಾರ್ಯಕ್ರಮಗಳಿಗೆ ಹೇಳಿ ಮಾಡಿಸಿದ ಶೈಲಿ . ಅದಕ್ಕೆ ಬೇಕಾದ ಖಡಕ್ ಶೈಲಿ ಆಕೆಯಲ್ಲಿದೆ. ಇದು ಹೆಚ್ಚಿನ ಸಂಖ್ಯೆಯ ವೀಕ್ಷಕರನ್ನು ಆಕರ್ಷಿಸುತ್ತದೆ. ಇತ್ತೀಚಿಗೆ ಕ್ರಿಕೆಟ್‌ಗೂ ಸೈ ಎನಿಸಿಕೊಂಡಿದ್ದಾರೆ.
ಶ್ವೇತ: ಚಂದದ ಭಾಷೆ. ಸ್ವಲ್ಪ ಮೂಗಿನಲ್ಲಿ ಮಾಡ್ತಾರೆ ಎಂದು ಅನ್ನಿಸಿದ್ರೂ ಭಾಷೆಯನ್ನೂ ಆರಾಮವಾಗಿ ಬಳಸಿಕೊಳ್ತಾರೆ. ಜನರನ್ನು ಆಕರ್ಷಿಸಲು ಅಗತ್ಯವಾದ ಆಂಗಿಕ ಶೈಲಿ ಇದೆ.

ಉದಯ
ಅನುಪಮ: ಮುದ್ದು ಮುದ್ದಾಗಿ ನಗ್ತಾ ಮಾತಾಡ್ತಾರೆ. ಆ ನಗು ಆಕೆಯ ಮೊದಲ ಪ್ಲಸ್ ಪಾಯಿಂಟ್. ಭಾಷೆಯ ಬಳಕೆಯಲ್ಲೂ ಪಳಗಿದ್ದಾರೆ. ಎಲ್ಲಿ  ಪಾಸ್ ಕೊಡಬೇಕು, ಕೊಡಬಾರದು ಎನ್ನುವ ಸಾಮಾನ್ಯ ಜ್ಞಾನ ಆಕೆಗಿದೆ. ಸಂದರ್ಶನದಲ್ಲಿ ಯಾವ ರೀತಿ ಅತಿಥಿಗಳ ಜೊತೆ ಹರಟಬೇಕು ಎಂದು ತಿಳಿದಿದೆ.
ಹೇಮಲತಾ: ಕೊಟ್ಟ  ಕಾರ್ಯಕ್ರಮ ಯಾವುದೇ ಆಗಿದ್ದರೂ ನಿಭಾಯಿಸುವ ಚಾಕಚಕ್ಯತೆ ಈಕೆಗಿದೆ. ಜನರನ್ನು ಯಾವ  ರೀತಿ ಆಕರ್ಷಿಸಬೇಕು ಎನ್ನುವ ಬಗ್ಗೆ ಚೆನ್ನಾಗಿ ತಿಳಿದಿದೆ. ಮಾತು ಬೋರ್ ಹೊಡಿಸಲ್ಲ. ಎಳೆಯುವ ಸ್ವಭಾವ ಇಲ್ಲ.

ಕಸ್ತೂರಿ
ಲಕ್ಷ್ಮಿ ಮನಮೋಹನ್:  ಒಬ್ಬ ನಿರೂಪಕಿಗೆ ಇರಬೇಕಾದ ಎಲ್ಲಾ ಪ್ಲಸ್ ಪಾಯಿಂಟ್‌ಗಳು ಈಕೆಗಿದೆ . ಭಾಷೆ, ಭಾವ, ನಗು, ಡ್ರಸ್ ಸೆನ್ಸ್, ಸಭ್ಯತೆ , ವೀಕ್ಷಕರನ್ನು ಆಕರ್ಷಿಸುವ  ರೀತಿ...

ಸಮಯ 
ಮಂಜುಳ: ಮಾತಿನ ಶೈಲಿ ಇಷ್ಟವಾಗುತ್ತದೆ. ಆಂಗಿಕ ವರ್ತನೆ ಬೋರ್ ಹೊಡಿಸಲ್ಲ. ನಸುನಗುತ್ತಾ  ಮಾತನಾಡುವ ರೀತಿ ಸಹ ಇಷ್ಟ  ಆಗುತ್ತೆ.

ಈಟೀವಿ  ಕನ್ನಡ 
ಅನು ಪ್ರಭಾಕರ್: ಅತಿಥಿಗಳು ಹೇಳುವುದನ್ನು ಕೇಳುವ ಸಹನೆ ಇದೆ. ಹೆಚ್ಚು ಸ್ಟೈಲಿಶ್. ಮಾತು ಹಾಗೂ ಉಡುಪು ಸಹ ಆಕರ್ಷಕ. ತನ್ನ ಮುಕ್ತ ನಗುವಿನಿಂದ ವೀಕ್ಷಕರನ್ನು ಹಿಡಿದಿಟ್ಟು ಕೊಳ್ಳುವ ಕಲೆ ಗೊತ್ತಿದೆ.

ಜೀ ಕನ್ನಡ 
ಮಾಳವಿಕ ಅವಿನಾಶ್: ಮಾತು ಸ್ಪಷ್ಟ. ಹೇಳುವುದನ್ನು ಅಚ್ಚುಕಟ್ಟಾಗಿ ತಿಳಿಸಿ ಬಿಡುವ ರೀತಿ. ಮಾತಿನ ಶೈಲಿ ಚಂದ

ಜನಶ್ರೀ 
ಸಾಹಿತ್ಯ: ಸುಂದರ ಮೋಹಕ ನಗೆ. ಮಾತು ಚಂದ. ವೀಕ್ಷಕರು ಆಕರ್ಷಿತರಾಗುವುದಕ್ಕೆ  ಅಗತ್ಯ ಇರುವ ಗಂಭೀರವಾದ ಮಾತಿನ ಶೈಲಿ ಗಮನ ಸೆಳೆಯುತ್ತದೆ. ಪ್ರತಿಭಾವಂತೆ.
ಸುಗುಣ: ವೀಕ್ಷಕರನ್ನು ಹಿಡಿಟ್ಟುಕೊಳ್ಳುವ  ಧ್ವನಿ. ವಾಯ್ಸ್ ಮಾಡ್ಯುಲೇಶನ್ ತುಂಬಾ ಚೆನ್ನಾಗಿ ಗೊತ್ತಿದೆ. ಮಾತು ಸ್ಪಷ್ಟ ಸುಂದರ. ಪರದೆಯ ಹಿಂದೆಯೂ ಮಾತಾಡುತ್ತಾರೆ, ಹಿಂದೆಯೂ ಮಾತಾಡುತ್ತಾರೆ. ಎರಡಕ್ಕೂ ಸೈ.

ಇವರುಗಳು ಹೆಚ್ಚು ಜನರ ಗಮನ ಸೆಳೆದವರು. ನೀವೇನಂತೀರಿ? ಈ ಬಾರಿ ಪೋಲ್ ಮಾಡುತ್ತಿಲ್ಲ. ಹಾಗೇ ಕಮೆಂಟ್ ಹಾಕಿ. ನಾವು ಉಲ್ಲೇಖಿಸದವರ ಕುರಿತೂ ದಯಮಾಡಿ ಗಮನಕ್ಕೆ ತನ್ನಿ.

24 comments:

  1. ರಾಧ ಹಿರೇಗೌಡರ್ cricket player nimage gottha ?

    _ramesh

    ReplyDelete
  2. Veena Poojary, Mamath Amin,Sangeetha hesaru yaaakillaa ...nebu kooda paparinara haage allava

    ReplyDelete
  3. chidanandamurthy matte eno heliddare... tamma amulya abhipraya enu hele illa?!!

    ReplyDelete
  4. ಇವರೆಲ್ಲರಿಗೂ ಕಳಸಪ್ರಾಯದಂತೆ ಇರುವ ಒಬ್ಬರನ್ನು ಮರೆತಿದ್ದೀರಿ.ಅವರು ದೂರದರ್ಶನದ ಅಪರ್ಣಾ.

    ReplyDelete
  5. ottinalli TV9 Nirupakiyaru 2011ne salina SAMPADAKEEYA Mahila award tegedu konididare. Antha helabawodu sir

    ReplyDelete
  6. @Anonymous said... ಇಲ್ಲಿ ಚರ್ಚೆ ನಡೀತಾ ಇರೋದು ಟಿ.ವಿ ನಿರೂಪಕಿ ಯರ್ ಬಗ್ಗೆ ಇಲ್ಲಿ ಮತ್ತೆ ಚಿಮು ಯಾಕೆ ?
    ವಿಠಲ್ ರಾವ್ ಕುಲಕರ್ಣಿ

    ReplyDelete
  7. ಸಂಪಾದಕರಿಗೆ, ಪ್ರತಿಕ್ರಿಯೆಗಳು ಸಹ ದಯವಿಟ್ಟು ಕನ್ನಡದಲ್ಲೇ ಇರಲಿ.

    ReplyDelete
  8. U forgotten to tell Those who have already left the anchoring by their milestones in media..
    ONE among the the best anchor than Member of Parliment is TEJASWINIRAMESH.........
    another one anchor actually she is in UDAYA TV, but she is no more with us.....she also did very good work in her tenure...

    ReplyDelete
  9. @ ವಿಠಲ್ ರಾವ್ ಕುಲಕರ್ಣಿ

    haudu idu nirupakiyara bagge charche nadeyuttiruvudu.... adara bagge eradu matilla

    chimu matte suddi madiruvudu sampadakeeya maretu hogide adanna sampadakeeyakke nenapu madide ashte...

    ReplyDelete
  10. Really.......what Mr.Indushekar said is 100% correct. APARNA IS ALWAYS MODEL FOR ALL UPCOMING ANCHORS. SHE IS ANCHORING IS VERY GOOD.
    IF YOU GO FOR POLL DEFINITELY APARANA GETTING MORE VOTES...........
    BY
    SARATHCHANDRA

    ReplyDelete
  11. Veena pujari, Aparna avarannu nivu mareyabaradittu. avru atyuttama nirupakiyaru.

    ReplyDelete
  12. nanna isthtada anchormajula masthikatte from samaya tv..adre nivu avara suffix bittu credit namege anyaya madidange aythalva? avara discussions superagiruthe..rmp super..
    -
    chandru paduvaralli
    mysore.

    ReplyDelete
  13. " ಇದು ಆಕಾಶವಾಣಿ, ಪ್ರದೇಶ ಸಮಾಚಾರ, ಓದುತ್ತಿರುವವರು ನಾಗಮಣಿ. ಯಸ್. ರಾವ್‌ " . ನೆನಪಿದೆಯೇ ?

    ReplyDelete
  14. ಕಾವ್ಯಶ್ರೀ ಉಡುಪಿMarch 11, 2011 at 4:34 PM

    ಉದಯ ಟಿವಿಯಲ್ಲಿ ನ್ಯೂಸ್ ಆರಂಭವಾದಾಗಿನಿಂದ 5 ವರ್ಷಗಳ ಕಾಲ ವಾರ್ತೆಗಳನ್ನು ಓದಿದ ಅಶೋಕ್ ಬಸವನಹಳ್ಳಿ ಅವರನ್ನು ಕನ್ನಡದ ಟಿವಿ ನ್ಯೂಸ್ ಜಗತ್ತು ಮರೆಯಲು ಸಾಧ್ಯವೇ ಇಲ್ಲ.ಈಗಲೂ ಅವರನ್ನು ಮೀರಿಸುವವರು ಬಂದಿಲ್ಲ ಎಂದೇ ನನ್ನ ಅಭಿಪ್ರಾಯ.

    ReplyDelete
  15. Radhika Rani is Ultimate and Only one for all seasons.

    ReplyDelete
  16. ಮಹಿಳೆಯರಲ್ಲಿ ಅತ್ಯುತ್ತಮವಾಗಿ, ಒಯ್ಯಾರವಾಗಿ ಟಿವಿ ಕಾರ್ಯಕ್ರಮ ನಿರೂಪಿಸುವವರು ದೀಪಕ್ ತಿಮ್ಮಯ್ಯ. ಅವರ ಹೆಸರು ಮರೆತಿರುದು ನನಗೆ ಬೇಜಾರಾಯಿತು. ಮಹಿಳೆಯರಿಗೆ ಮಾಡಿದ ಅನ್ಯಾಯ ಇದು.-ರಘು

    ReplyDelete
  17. Hy

    Udaya TV Jayashri, Vani Kaushik, Mamatha Udupa, Manjula Murthy hesaru yaakilla?

    avarginta base voice iruva anchors iddara?

    ReplyDelete
  18. manjula is best among all..sahitya is my second choice- raju, shimoga.

    ReplyDelete
  19. ನಿಜ ರಾಜು, ಮಂಜುಳ ಅಟ್ಲೀಸ್ಟ್ ತಲೆಯಲ್ಲಿ ಬುದ್ದಿ ಇರುವವರಂತೆ ನಿರೂಪಣೆ ಮಾಡುತ್ತಾರೆ. ಔಟ್ ಇದ್ದಾಕ್ಷಣ ಸುದ್ದಿವಾಚಕಿಯರಾಗೋದಿಲ್ಲ, ಕನಿಷ್ಟ ಸಾಮಾನ್ಯ ಜ್ಞಾನ ಇರಬೇಕು ಅಲ್ವಾ? ಸಾಹಿತ್ಯ ಕೂಡ ಅವರ ಗಂಬೀರ ಮುಖಭಾದಿಂದ ಗಮನ ಸೆಳೆಯುತ್ತಾರೆ..

    ಮಾರುತಿ
    ಉಪನ್ಯಾಸಕ
    ಚಿಕ್ಕಮಗಳೂರು.

    ReplyDelete
  20. Kavyasree, Udupi avaru heliruva haage, Ashok Basavanahalli Kannada TV NEWS na modala best Anchor. news presenetr aagi marravalla avru news roomali ella keasa maadida modliga anchor. adaralli yaava dout illa. adare illi nadeetirodu mahileyara bagge charche.

    ReplyDelete
  21. ‎"Yatra naryastu pujyante ramante tatra Devata, yatraitaastu na pujyante sarvaastatrafalaah kriyaah" Manusmriti 3.56 – which translated reads : "whenever women are given their due respect, even the deities like to reside there and where they are not respected, all action remains unfruitful."

    ReplyDelete
  22. tv9 sheetal is good, janashree sahitya is worth to watch, radha hiregowdar crime ge best..samaya chanell nalli olle anchor gale illa..

    ReplyDelete
  23. ಟಿ ವಿ 9 ವಾರ್ತಾ ವಾಚಕೀಯರು ಸುವರ್ಣ ವಾರ್ತಾ ವಾಚಕೀಯರು ನೆನ್ನೆ ಮೊನ್ನೆ ಬಂದ ಸಮಯ ವಾಚಕೀಯರು ಜನಶ್ರೀಯಲ್ಲಿರುವ ಹೊಸ ವಾಚಕೀಯರನ್ನ ನಾನು ನೋಡಿದ್ದೇನೆ.ನಾಲ್ಕುವರುಷ ಮಣ್ಣು ಹೊತ್ತಿದ್ರು ಮಾತಿನಲ್ಲಿ ಸ್ಪಷ್ಟತೆ ಕಂಡು ಬಂದ್ರು ಕೆಲವು ಬಾರಿ ತಬ್ಬಿಬ್ಬಾಗಿ ಹೋಗ್ತಾರೆ, ಟಿ ವಿ 9 ಸುವರ್ಣ ವಾರ್ತಾ ವಾಚಕೀಯರು.ನಾನು ಸಮಯ ವಾಹಿನಿಯಲ್ಲಿ ಕಾರ್ಯನಿರ್ವಹಿಸಿದ್ದು ಈಗ ಜನಶ್ರೀ ಸೇರಿದ್ದೇನೆ, ವಾಚಕೀಯರನ್ನಅತಿ ಸೂಕ್ಷ್ಮವಾಗಿ ಗಮನಿಸಿದ್ದೇನೆ.. ಹೊಸಬರಾದರು ದಿಡೀರ್ ಸುದ್ದಿ ಬಂದಾಗ ನಿರಾಳವಾಗಿ ಎದುರಿಸ್ತಾರೆ, ಇಲ್ಲಿ ಹೇಗೆ
    ಟಿ ವಿ 9 ನ ಹಾಡಿ ಹೊಗಳುತ್ತಾರೊ ಹಾಗೆ ಸಮಯ ನಮ್ಮ ಉತ್ತರ ಕನ್ನಡದಲ್ಲಿ
    ಪ್ರಾಮುಖ್ಯತೆಯನ್ನ ಪಡೆದುಕೊಂಡಿದೆ. ಇಲ್ಲಿರುವ ಮುದ್ದು ಮುಖದ ವಾರ್ತಾ ವಾಚಕೀಯರು ನಮ್ಮಲ್ಲಿನ ಜನರ ಮನಸ್ಸನ್ನ ಗೆದ್ದಿದ್ದಾರೆ .. ಕೆಲವೇ ತಿಂಗಳಲ್ಲಿ ಬಹಳಷ್ಟು ಕಲಿತ್ತಿದ್ದಾರೆ, ಹೀಗೆ ಸಾಗಿದರೆ ಇನ್ನು ಹೆಚ್ಚು ಬೆಳೆಯುತ್ತಾರೆಯೆನ್ನುವುದರಲ್ಲಿ
    ಸಂಶಯ ಇಲ್ಲ. ಸಂಪಾದಕೀಯ ಇದರ ಬಗ್ಗೆ ಕೂಲಂಕುಶವಾಗಿ ಪರಿಗಣಿಸಿ ಸಮಯ ಮತ್ತು ಜನಶ್ರೀ ವಾಹಿನಿಯ ಹೊಸ ಮಹಿಳಾ ವಾಚಕೀಯರಿಗೆ ಸಿಗಬೇಕಾದ ಉತ್ತೇಜನ ಕೊಡಬೇಕಾಗಿ ವಿನಂತಿಸುತ್ತೇನೆ. ಅದರಂತೆ
    ಸಮಯ ಮತ್ತು ಜನಶ್ರೀ ವಾಹಿನಿಯ ವಾಚಕೀಯರ ಹೊಸ ಹೆಸರುಗಳನ್ನ ಸರಿಪಡಿಸಿ ಇನ್ನುಳಿದವರ ಹೆಸರುಗಳನ್ನ ಸೇರಿಸಿ.

    ReplyDelete
  24. tv9 na radhika avara mathina dhati bahala chennagirutthade. kannadavannu spashtavagi helutthare.

    ReplyDelete