Friday, March 18, 2011

ವಿಜ್ಞಾನ ಲೇಖಕರ ಹೇಳಿಕೆಯೂ, ನಮ್ಮ ಪ್ರತಿಭಟನೆಯೂ...


ಪ್ರಳಯ, ಸುನಾಮಿ, ಭೂಕಂಪ, ಸೂಪರ್ ಮೂನ್ ಇತ್ಯಾದಿ ವಿಷಯಗಳ ಕುರಿತು ಅಧಿಕೃತವಾಗಿ ಮಾತನಾಡಬಲ್ಲವರು ಯಾರು? ವಿಜ್ಞಾನಿಗಳಲ್ಲವೇ? ನಿಜ, ನೈಸರ್ಗಿಕ ವಿಕೋಪಗಳು ಮನುಷ್ಯನ ಅಂಕೆಯನ್ನು ಮೀರಿದ್ದು. ವಿಜ್ಞಾನಿಗಳೂ ಸಹ ಇಂಥವನ್ನು ತಡೆಯುವಲ್ಲಿ ಬಹಳಷ್ಟು ಸಂದರ್ಭದಲ್ಲಿ ಅಸಹಾಯಕರು. ಆದರೆ ಯಾವ ವಿಕೋಪ ಯಾಕೆ ಸಂಭವಿಸಿತು ಎಂಬುದನ್ನು ಸ್ಪಷ್ಟವಾಗಿ ಆಧಾರಸಹಿತವಾಗಿ ಹೇಳಬಲ್ಲವರು ವಿಜ್ಞಾನಿಗಳು. ಜನರಲ್ಲಿ ಆಗಾಗ ಹುಟ್ಟಿಕೊಳ್ಳುವ ಭಯವನ್ನು ನಿವಾರಿಸಬೇಕಾದವರೂ ಸಹ ವಿಜ್ಞಾನಿಗಳೇ.

ಆದರೆ ಈಗ ನೋಡಿ, ನಮ್ಮ ಎಲೆಕ್ಟ್ರಾನಿಕ್ ಮೀಡಿಯಾಗಳು ಏನೇ ಆದರೂ ಜ್ಯೋತಿಷಿಗಳನ್ನು ಕರೆಸಿ ಮಾತಾಡಿಸುವುದನ್ನು ರೂಢಿ ಮಾಡಿಕೊಂಡಿವೆ. ದಿನಪತ್ರಿಕೆಗಳೂ ಸಹ ಇದಕ್ಕೆ ಹೊರತಾಗಿಲ್ಲ. ಎಲ್ಲ ಜ್ಯೋತಿಷಿಗಳು ವಂಚಕರೇನಲ್ಲ. ಕೆಲವರು ತಾವು ಶಾಸ್ತ್ರೀಯವಾಗಿ ಕಲಿತದ್ದರ ಆಧಾರದ ಮೇಲೆ ಹೇಳುತ್ತಾರೆ. ಅದನ್ನು ನಂಬುವುದು, ಬಿಡುವುದು ಕೇಳುವವರಿಗೆ ಬಿಟ್ಟಿದ್ದು. ಆದರೆ ಟಿಆರ್‌ಪಿ ಆಸೆಗಾಗಿ ಚಾನಲ್‌ಗಳು ಜನರನ್ನು ಹೆದರಿಸಲೆಂದೇ ಜ್ಯೋತಿಷಿಗಳನ್ನು ಬಳಸಿಕೊಳ್ಳುತ್ತಿವೆ. ಹೀಗೆ ಹೆದರಿಸುವ, ಹೊಲಸಾಗಿ ಬೈಯುವ ನರೇಂದ್ರ ಶರ್ಮ ಅಂಥವರಿಗೆ ವಿಪರೀತ ಡಿಮ್ಯಾಂಡು ಹುಟ್ಟಿಕೊಂಡಿದೆ.

ಕರ್ನಾಟಕದಲ್ಲಿ ಸಾಕಷ್ಟು ಮಂದಿ ವಿಜ್ಞಾನಸಂಬಂಧಿ ಲೇಖನಗಳನ್ನು ಬರೆಯುವವರಿದ್ದಾರೆ.  ಇವರಿಂದ ಲೇಖನಗಳನ್ನು ಹೆಚ್ಚು ಹೆಚ್ಚು ಬರೆಯಿಸುವ, ಚಾನಲ್‌ಗಳಲ್ಲಿ ಮಾತನಾಡಿಸುವ ಕೆಲಸ ನಮ್ಮ ಮೀಡಿಯಾಗಳಿಂದ ಆಗಬೇಕಿದೆ. ಹಾಗಾದಾಗ ಜನರಲ್ಲಿ ಇರುವ ಭಯವೂ ನಿವಾರಣೆಯಾಗುತ್ತದೆ. ಆದರೆ ಬೆದರಿಸುವುದರಿಂದಲೇ ಟಿಆರ್‌ಪಿ ಗಿಟ್ಟುವುದರಿಂದ, ಭಯ ನಿವಾರಿಸುವವರ ಮಾತುಗಳು ಚಾನಲ್‌ಗಳಿಗೆ ಬೇಕಾಗಿಲ್ಲದಂತಾಗಿದೆ.

ಇಲ್ಲಿ ವಿಜ್ಞಾನ ಲೇಖಕರುಗಳಾದ ನಾಗೇಶ್ ಹೆಗಡೆ, ಡಾ. ಬಿ.ಎಸ್.ಶೈಲಜಾ, ಟಿ.ಆರ್.ಅನಂತರಾಮು, ಡಾ.ಎಚ್.ಆರ್.ಕೃಷ್ಣಮೂರ್ತಿ, ಹಾಲ್ದೊಡ್ಡೇರಿ ಸುಧೀಂದ್ರ, ಕೊಳ್ಳೇಗಾಲ ಶರ್ಮ ಅವರುಗಳು ನೀಡಿರುವ ಪತ್ರಿಕಾ ಹೇಳಿಕೆಯೊಂದು ಇದೆ. ಇದು ಪತ್ರಿಕೆಗಳ ವಾಚಕರ ವಾಣಿಗೆ ಸೀಮಿತವಾಗುವುದು ಬೇಡ. ನಮ್ಮ ಪತ್ರಿಕೆಗಳು ನಾಳೆಯೇ ಜಾಹೀರಾತಿನ ಸ್ವರೂಪದಲ್ಲಿ ಮುಖಪುಟದಲ್ಲೇ ಇದನ್ನು ಪ್ರಕಟಿಸುವುದು ಸಾಮಾಜಿಕ ಕಾಳಜಿಯ ದೃಷ್ಟಿಯಲ್ಲಿ ಒಳ್ಳೆಯದು. ಕಡೆಯ ಪಕ್ಷ ನಾಳೆಯಾದರೂ ಜನರು ನೆಮ್ಮದಿಯಿಂದ ಇರುತ್ತಾರೆ.

ಹಾಗೆಯೇ ಎಲೆಕ್ಟ್ರಾನಿಕ್ ಮಾಧ್ಯಮಗಳು ಪೊಳ್ಳು ಜ್ಯೋತಿಷಿಗಳನ್ನು ಪ್ರದರ್ಶಿಸುವ ಬದಲು ವಿಜ್ಞಾನಿಗಳನ್ನು, ವಿಜ್ಞಾನ ಲೇಖಕರನ್ನು ಕರೆದು ಮಾತನಾಡಿಸಿ ಜನರಲ್ಲಿರುವ ಭೀತಿಯನ್ನು ನಿವಾರಿಸುವಂತಾಗಬೇಕು.

ಇಲ್ಲಿ ಪ್ರಕಟಗೊಂಡಿರುವ ವಿಜ್ಞಾನ ಲೇಖಕರ ಪತ್ರಿಕಾ ಪ್ರಕಟಣೆಯನ್ನು ಹಾಲ್ದೊಡ್ಡೇರಿ ಸುಧೀಂದ್ರ ಅವರು ಸಂಪಾದಕೀಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ಮೌಢ್ಯವನ್ನೇ ವೈಭವೀಕರಿಸುತ್ತಿರುವ ಮೀಡಿಯಾಗಳ ವಿರುದ್ಧ ನಮ್ಮ ಪ್ರತಿಭಟನೆ ಜಾರಿಯಲ್ಲಿರುತ್ತದೆ.

7 comments:

 1. ಸಂಪಾದಕೀಯದವರೆ..
  ಹಿಂಗೆ ನರೇಂದ್ರಸ್ವಾಮಿ ಬಗ್ಗೆ ಬರೀತಿರಿ
  ನೋಡ್ತಾ ಇರಿ ನರೇಂದ್ರಸ್ವಾಮಿ ಏನೇನ್ ಮಾಡ್ತಾನೆ ಅಂತ
  ಬುದ್ಧಿವಂತಿಕೆಯಿಂದ ಮಾಡದ ತಪ್ಪನ್ನು ತಿದ್ಕೋತಾನೆ ಬಿಡ್ರೀ....!

  ReplyDelete
 2. we also protest
  -naveen
  pavan shukla
  ramesh k r

  ReplyDelete
 3. ಮಾದ್ಯಮಗಳು ಕೆಲವೊಂದು ವಿಷಯವನ್ನು ಆ ವಿಷಯದಲ್ಲಿ ತಮ್ಮ ಅಭಿಪ್ರಾಯವೇ ಸಂಪೂರ್ಣ ಸತ್ಯ ಎಂಬ ಅರ್ಥದಲ್ಲಿ ಪದೇಪದೇ ಬಿಂಬಿಸುತ್ತವೆ.ಇದಕ್ಕೆ ಈ ವಾರದ ತರಂಗವೇ ಉದಾಹರಣೆ. ಒಂದಿಷ್ಟು ಜನ ಸೇರಿ-ಸಾದಾರಣ ಕಳ್ಳನನ್ನು ಶಾಶ್ವತವಾಗಿ ಜೈಲಿಗಟ್ಟಲು-ನಡೆಸಲು ಹೊರಟಿರುವುದು-(ದೊಡ್ಡದೊಡ್ಡ ಕಳ್ಳರು ಸುತ್ತಮುತ್ತ ಇದ್ದರೂ!!)-ಇದನ್ನು ನೋಡಲು-ಈ ವಾರದ ತರಂಗ ಹಾಗೂ (ಅದು ಪ್ರಕಟವಾಗುವುದಕ್ಕೆ ಒಂದು ವಾರದ ಮುಂಚೆ) ನಾನು ಬರೆದ ಬ್ಲಾಗ್ ಲೇಖನ ನೋಡಿ-http://machikoppa.blogspot.com/2011/03/blog-post.html

  ReplyDelete
 4. ಸಾಮನ್ಯ ಜನರ ಭಯವೇ ಅವರಿಗೆ ಶ್ರೀ ರಕ್ಷೆ .ಅವರಿಗೆ ಟಿ.ಆರ್.ಪಿ ಬೇಕು ಅಷ್ಟೆ

  ReplyDelete
 5. RT nagaradallobba bogale samsari swamiji iddaane... ivana appa Moolki bali... anta 420 jeevanta iddaane. Eee RT nagarada swami prachaara priya... mahaa daani..ivana bali consultationge barovavrella doddadodda kulagale... vasi ivana purananu tilisi swami.

  ReplyDelete
 6. NIJAVAGALU IDU ONDU OLLEYA ANKANA.
  INTHA ANKANA VANNU DAYAMADI NAMMA KANNADA NEWS CHANNEL GALIGE TORISI PUNYA KATTIKOLLI.

  PRATIDINAVU NASA PRATINDHIGALANTE IVARU NIDUVA HIMSEYANNU SASHISALU AGUTTILLA

  TRP EMBA MOUDYAKKE BALIYAGI JANAR BAYIGE MANNU TURUKALU HESADA E DHURTARIGE BUDDHI HELUVAVARARU??

  ReplyDelete
 7. its real gr8 one yh u very much evry one.

  ReplyDelete