Friday, March 18, 2011

ಮುಂಡೇವು ಹಾವು ತಿನ್ನುತ್ತಾವೆ ಕಣ್ರೀ, ಅದಕ್ಕೆ ಸುನಾಮಿ ಬಂತು...


ಜಪಾನ್‌ನಲ್ಲಿ ಭೂಕಂಪ, ಸುನಾಮಿ ಇತ್ಯಾದಿಗಳೆಲ್ಲ ಯಾಕಾಯ್ತು ಗೊತ್ತಾ? ಮುಂಡೇವು ಹಾವು ತಿನ್ನುತ್ತಾರೆ ಕಣ್ರೀ. ಹಾವು ಅಂದ್ರೆ ದೇವರು. ಇವರು ಹಾವು ತಿನ್ನೋದರಿಂದನೇ ಸುನಾಮಿ ಆಗಿದ್ದು...

ಇದನ್ನು ಹೇಳಿದವರು ಯಾರು ಅಂತ ತುಂಬ ಕಷ್ಟದಿಂದ ಊಹೆ ಮಾಡಬೇಕಾಗಿಲ್ಲ. ಹೀಗೆಲ್ಲ ಮಾತನಾಡಬಲ್ಲವ ಕರ್ನಾಟಕದಲ್ಲಿ ಈಗ ವರ್ಲ್ಡ್ ಫೇಮಸ್ಸು. ಆತ ಬ್ರಹ್ಮಾಂಡವನ್ನೇ ಅಗೆದು, ಅರೆದು ಕುಡಿದಾತ. ಟಿವಿಗಳಲ್ಲಿ ಆತ ಮಾತನಾಡಲು ಕುಳಿತನೆಂದರೆ ಕುರ್ಚಿಯೇ ಬೆಚ್ಚುತ್ತದೆ. ಸ್ಟುಡಿಯೋದ ಹೈವೋಲ್ಟೇಜ್ ಲೈಟುಗಳೇ ಮಂಕಾಗಿಬಿಡುತ್ತವೆ. ಕೆನ್ನೆಗೆ, ಇಡೀ ಮುಖಕ್ಕೆ, ಕೈಗೆ ಅರಿಶಿನ ಮೆತ್ತಿಕೊಂಡ ಪರಿಣಾಮ ಇಡೀ ದೇಹವೇ ಹಳದಿಯಾಗಿ ಸುತ್ತಲೂ ಒಂದು ಪ್ರಭಾವಲಯ ನಿರ್ಮಾಣವಾದಂತೆ ತೋರುತ್ತದೆ. ಕಣ್ಣುಗಳು ವಿಕ್ಷಿಪ್ತ, ಬಾಯಿ ಬಿಟ್ಟರೆ ಬೆಳಕಿನ ವೇಗದಲ್ಲಿ ನಾಲಗೆ ಹೊರಳುತ್ತದೆ. ಎದೆಯ ಮೇಲೆ ಎರಡೂ ಕೈಗಳನ್ನು ಇಟ್ಟುಕೊಳ್ಳುತ್ತಾನೆ. ಒಂದರಲ್ಲಿ ತ್ರಿಶೂಲದ ಹಾಗೆ ಇರುವ ಒಂದು ಐಟಮ್ ಇರುತ್ತೆ. ಜಗತ್ತು ಪ್ರಳಯಕ್ಕೆ ಸಿಕ್ಕಿ ಭಸ್ಮವಾದರೂ ಈತನನ್ನು ಆ ಐಟಮ್ ಕಾಪಾಡಬಹುದೇನೋ?

ನೋಡ್ತಾ ಇರಿ, ಜಗನ್ಮಾತೆ ಭೂಲೋಕಕ್ಕೆ ಕಾಲಿಡುತ್ತಾ ಇದ್ದಾಳೆ. ಹಾಗಂತ ನನಗೆ ಅಪ್ಪಣೆಯಾಗಿದೆ. ಏನೂ ಆಗದೇ ಇರಲಿ ಅಂತ ಶ್ರೀಲಂಕಾಗೆ ನಾನು ಮತ್ತು ನನ್ನಂತಹ ಕೆಲವು ಸಾಧುಸಂತರು ಹೋಗಿ ದೀಪ ಹಚ್ಚಿ, ಪೂಜೆ ಸಲ್ಲಿಸಿ ಬಂದಿದ್ದೇವೆ. ಅವಳು ಕಾಲಿಡುವಾಗ ಏನೂ ಆಗಬಾರದು. ಅದಕ್ಕಾಗಿ ಯಾಗ ಮಾಡ್ತಾ ಇದ್ದೇನೆ. ನೀವು ಸಹ ಈ ಯಾಗದಲ್ಲಿ ಪಾಲ್ಗೊಳ್ಳಬಹುದು. ಫೀಜು ಇಷ್ಟೇನೆ. ಈ ನಂಬರ್‌ಗೆ ಫೋನ್ ಮಾಡಿ... ಅನ್ನುತ್ತೆ ಬ್ರಹ್ಮಾಂಡ ಸ್ವಾಮಿ. ಎಷ್ಟು ಜನ ಫೋನ್ ಮಾಡಿದ್ರು. ಎಷ್ಟು ದುಡ್ಡು ವಸೂಲಿಯಾಯ್ತು ಅಂತ ಚಾನಲ್‌ನವರನ್ನು ಕೇಳಿ ನೋಡಿ. ಆಕಾಶದ ಮೂಲೆಯಲ್ಲೆಲ್ಲೋ ಇರುವ ಗ್ರಹವೊಂದನ್ನು ತೋರಿಸುವಂತೆ ಕೈ ಎತ್ತರಿಸುತ್ತಾರೆ.

ಪ್ರಳಯ ಆಗೋದು ಗ್ಯಾರೆಂಟಿ. ಒಂದೊಂದಾಗಿ ಎಲ್ಲ ದೇಶಗಳು ಮುಳುಗಿ ಹೋಗುತ್ತವೆ. ಎಲ್ಲ ಮುಳುಗಿದ ಮೇಲೆ ಉಳಿಯೋದು ಬೆಳಗಾವಿಯ ಒಂದು ಹಳ್ಳಿ ಮಾತ್ರ. ಮೊದಲು ಇಡೀ ಪ್ರಪಂಚದಲ್ಲಿ ವಿದ್ಯುತ್ ಹೊರಟು ಹೋಗುತ್ತೆ. ಆಗ ಮುಂಡೇವಕ್ಕೆ ಒಲೆ-ಸೌದೆಯೇ ಗತಿ ಎಂದು ಹೆದರಿಸುತ್ತೆ ಸ್ವಾಮಿ. ಕರೆಕ್ಟಾಗಿ ಎಷ್ಟನೇ ತಾರೀಕು ಪ್ರಳಯ ಆಗುತ್ತೆ ಹೇಳಿ ಎಂದರೆ, ಯಾವುದೋ ಒಂದು ಡೇಟು ಹೇಳಿ ಅವತ್ತಿನಿಂದ ಶುರುವಾಗುತ್ತೆ ನೋಡ್ತಾ ಇರಿ ಅನ್ನುತ್ತೆ.

ಅವತ್ತು ಪ್ರಳಯ ತಪ್ಪಿಸೋದಕ್ಕೆ ಐದು ಎಣ್ಣೆಯ ದೀಪ ಹಚ್ಚಿ ಅಂತ ಹೇಳಿದೆ. ಎಲ್ಲ ಕಡೇನೂ ದೀಪ ಹಚ್ಚಿದ್ರಿ. ಆದರೆ ಎಷ್ಟು ಜನ ನಿಜವಾದ ಭಕ್ತಿಯಿಂದ ದೀಪ ಹಚ್ಚಿದ್ರಿ ಹೇಳಿ. ಬಹಳಷ್ಟು ಜನ ಕಾಟಾಚಾರಕ್ಕೆ ಮಾಡಿದ್ರಿ. ಇದೊಂದು ಮಾಡಬೇಕು, ಅದಕ್ಕೆ ಮಾಡೋಣ ಅಂತ ಮಾಡಿದ್ರಿ ಎಂದು ತನ್ನ ಮಾತು ಕೇಳಿದ ಭಕ್ತಗಣವನ್ನೂ ವಿಚಿತ್ರ ಮ್ಯಾನರಿಸಂನಿಂದ ನಿಂದಿಸುತ್ತೆ ಸ್ವಾಮಿ.

ಸ್ವಾಮಿ ಈಗ ಜನತಾ ದರ್ಶನ ಮಾಡಲು ಹೊರಟಿದೆಯಂತೆ. ಅದು ಬೆಂಗಳೂರಿನಿಂದಲೇ ಶುರು. ಪ್ರಳಯ ಕುರಿತು ಯಾರ‍್ಯಾರ ಮನಸ್ಸಿನಲ್ಲಿ ಏನೇನು ಪ್ರಶ್ನೆಗಳಿವೆಯೋ ಅದಕ್ಕೆಲ್ಲ ಸ್ವಾಮಿ ಉತ್ತರಕೊಡುತ್ತೆ. ಕಾರ್ಯಕ್ರಮದ ಜಾಹೀರಾತು ಜೋರಾಗೇ ನಡೀತಾ ಇದೆ. ಹೀಗಾಗಿ ಜನರ ನೂಕುನುಗ್ಗಲಾಗಿ ಲಾಠಿ ಚಾರ್ಜ್ ನಡೆದು, ಅಲ್ಲೇ ಒಂದು ಮಿನಿ ಪ್ರಳಯ ಆದರೂ ಆಶ್ಚರ್ಯ ಇಲ್ಲ.

ಸ್ವಾಮಿ ದೇವ-ದೇವತೆಯರನ್ನೆಲ್ಲ ತನ್ನ ಕ್ಲಾಸ್‌ಮೇಟ್‌ಗಳೋ, ಜಿಗ್ರಿ ದೋಸ್ತ್‌ಗಳೋ ಎಂಬಂತೆ ಮಾತನಾಡುತ್ತದೆ. ಅವರ ಜತೆ ಮಾತಾಡಿ ಎಲ್ಲ ಸಾಲ್ವ್ ಮಾಡ್ತೀನಿ ಅಂತ ಭಕ್ತರನ್ನು ಹೆದರಿಸುತ್ತೆ. ಒಂದೊಂದು ಸರ್ತಿ ಇದು ಸೈಂಟಿಸ್ಟ್ ಥರ ಮಾತಾಡೋಕ್ಕೆ ಶುರು ಮಾಡುತ್ತೆ. ನಾಗೇಶ್ ಹೆಗಡೆ, ಸುಧೀಂದ್ರ ಹಾಲ್ದೊಡ್ಡೇರಿ ಥರದವರು ಇವನ ಖಗೋಳಶಾಸ್ತ್ರದ ವರ್ಣನೆಯನ್ನು ನೋಡಿದರೆ ಮೂರ್ಛೆ ಹೋಗಿಬಿಡುವ ಸಾಧ್ಯತೆಗಳಿರುವುದರಿಂದ ಅವರು ನೋಡದೆ ಇರುವುದು ವಾಸಿ.

ಗ್ರಹಗತಿ ಬದಲಾದಂತೆ ಚಾನಲ್‌ನಿಂದ ಚಾನಲ್‌ಗೆ ಹಾರುತ್ತ ಇದ್ದ ಸ್ವಾಮಿ ಈಗ ಸಮಯ ನ್ಯೂಸ್ ಚಾನಲ್‌ಗೂ ವಕ್ಕರಿಸಿಕೊಂಡ ಹಾಗೆ ಕಾಣುತ್ತಿದೆ. ಪ್ರಳಯ, ಸುನಾಮಿ, ಭೂಕಂಪ ಇತ್ಯಾದಿ ಎಲ್ಲ ನೈಸರ್ಗಿಕ ಆಪತ್ತಿನ ವಿಷಯ ಬಂದಾಗಲೆಲ್ಲ ಸಮಯದವರಿಗೆ ಈ ಸ್ವಾಮಿಯ ಎಕ್ಸ್‌ಪರ್ಟ್ ಗೆಸ್ಟು. ಟಿಆರ್‌ಪಿಯ ಆಸೆಗಾಗಿ ಅವರಿಗೆ ಈ ಸ್ವಾಮಿಯೇ ಬೇಕು.

ಎರಡು ಇನ್ನೋಸೆಂಟ್ ಪ್ರಶ್ನೆಗಳು: ಸೂಪರ್ ಮೂನ್ ಬ್ರಹ್ಮಾಂಡ ಸ್ವಾಮಿಗಿಂತ ದೊಡ್ಡದಾಗಿ ಕಾಣುತ್ತಾ? ಸೂಪರ್ ಮೂನ್ ಈ ಸ್ವಾಮಿಗಿಂತ ಡೇಂಜರ್ರಾ?

27 comments:

  1. ಇದುನ್ನೆ ಸುನಾಮಿ ಆಗೋದಕ್ಕಿಂತ ಮುಂಚೆ ಆ ಮುಂಡೇದು ಬೊಗಳ್ಬಾರದಿತ್ತಾ....?

    ReplyDelete
    Replies
    1. ಸುನಾಮಿ ಯಾಕೆ ಆಗುತ್ತೆ ಅಂತ ಆ ದರಿದ್ರ ಮಂಡೇದಕೆ ಗೊತ್ತೇ ಇಲ್ಲ ಮತ್ತೆ ಹೇಗೆ ಹೇಳುತ್ತದೆ

      Delete
  2. ಇ೦ತಹ ದರಿದ್ರವನ್ನು ಪ್ರಸಾರ ಮಾಡುವ ಸುದ್ದಿ ಮಾದ್ಯಮಗಳಿಗೆ, ಕನಿಷ್ಟ common sense ಬೇಡ್ವಾ!!? ಇದನ್ನು ನೋಡಿ trp ಹೆಚ್ಚಿಸೊ ಜನಗಳ ತಲೇಲಿ ಅ ದೇವ್ರು, ಬುದ್ದಿ ತು೦ಬಿದಾನೊ, ಲದ್ದಿ ತು೦ಬಿದಾನೊ ಅನ್ನೊದನ್ನ ಅ ಸ್ವಾಮಿನೇ ಹೇಳ್ಬೇಕು!!! ಇ೦ತವರಿ೦ದಾನೆ, ಹಿ೦ದುತ್ವ ಅ೦ದ್ರೆ, ಬರಿ ಗೊಡ್ಡು ಶಾಸ್ತ್ರ ಸ೦ಪ್ರದಾಯ ಅನ್ನೊ ಭಾವನೆ ಗಟ್ಟಿಯಾಗಿ ಬೇರುಬಿಟ್ಟಿರೊದು!!! ಥು!!

    ReplyDelete
  3. ROFL.....

    superrrrrrrrrrr

    ReplyDelete
  4. y no channel has invited both swameeji and Narendra Nayak or any scientists together for a discussion..................

    ReplyDelete
  5. Avana Hesaru Narendra Sharma. Upendrana film lli Side roll Madidda. Yava muttala nan maga avanige swamy anta heli karedukondu bandu tv ge Bitno?
    Shuruvaaytu nodi PRANAYA allalla PRALAYA...
    Girish

    ReplyDelete
  6. ನಮಗೆ ಇಂಥಾ ಧೂರ್ತರಿಂದ ಬಿಡುಗಡೆಯ ಅಗತ್ಯ ತುರ್ತಾಗಿ ಇದೆ.

    ReplyDelete
  7. ಜನ ಮರುಳೋ...ಜಾತ್ರೆ ಮರುಳೋ...

    ReplyDelete
  8. The last line is too good, & My suggestion is why don't any media guys do some sting operation on this "Mamsa parvatha" and bring out his true colour using the same media.

    ReplyDelete
  9. ಈ ಸ್ವಾಮಿಯ show ಒಳ್ಳೆ ಕಾಮಿಡಿ show ತರಹ ಇತ್ತು... ಮುಖದ ತುಂಬ ಅರಿಶಿನ ಮೆತ್ತಿಕೊಂಡು ವಿಚಿತ್ರವಾಗಿ ಕಾಣುತ್ತ ಇದ್ದ....
    ಈ ಶೋನಲ್ಲಿ ಮುಂದೆ ಬೆಂಗಳೂರು ಮೆಟ್ರೊನಲ್ಲಿ ಹೋಗುವವರಿಗೂ ಸ್ವಾಮೀಜಿ ಎಚ್ಚರಿಕೆ ಕೊಟ್ಟಿದ್ದಾನೆ... ಮೆಟ್ರೋ ಹೋಗುತ್ತಿರುವದರಿಂದ ಏನೋ MG ರೋಡ್ ಗೆ ಶನಿ ಪ್ರವೇಶ ಆಗಿದೆಯಂತೆ.... ಅದಕ್ಕೆ ಇನ್ನು ಸ್ವಲ್ಪವೇ ದಿನದಲ್ಲಿ ದೊಡ್ಡ ಅನಾಹುತ ಆಗುತ್ತೆಯಂತೆ.... ಭೂಮಿಯ ಒಳಗೆ ನೀರು ತುಂಬಿಕೊಂಡು, ಮುಖ್ಯವಾಗಿ Utility ಬಿಲ್ಡಿಂಗ್ ಗೆ ಏನೋ ತೊಂದರೆಯಂತೆ....

    ReplyDelete
  10. Shame on the Kannada Electronic Media for all this. You people are as bad as any 'communal' terrorists... Every media house is gone to dogs. You people known nothing but TRP these days. Media is creating more problems for common man in Karnataka than any one else. Media is the root cause of all the filth that is around us. No one can clean KANNADA MEDIA industry and no one can save US from their dirty filth they have created amongst us. The fact is, few of the media men in Karnataka are worth to be hanged in public. Absolute criminals. As a Kannadiga, I feel ashamed to even read one Kannada paper or watch a Kannada TV channel. But it does not mean I don't love my mother tongue or my mother land. Am proud to be a Kannadiga. But these filthy media basta*ds joining hands with politicians have made our land a criminal state.

    ReplyDelete
  11. ಎಲ್ಲ ನ್ಯೂಸ್ ಚ್ಯಾನೆಲ್ಸ್ ಕಥೇನು ಇಷ್ಟೇ...ಮಾಹಿತಿ ಕಮ್ಮಿ ಮನರಂಜನೆ ಹೆಚ್ಚು. ಅವನೊಬ್ಬ ಬೊಗಳೆದಾಸ ಅಂತ ಎಲ್ಲರಿಗೂ ಆಗಲೇ ಗೊತ್ತಾಗಿದೆ. ನಿಮ್ಮ ಮನೇಲಿ ಇವತ್ತು ತಿಂಡಿಗೆ ಉಪ್ಪಿಟ್ಟು ಅಂತ ಹೇಳಿದ್ರು ಅದಕ್ಕೊಂದು ಕಥೆ ಹೇಳ್ತಾನೇ, ದೋಸೆ ಅಂದ್ರೂ ಅದಕ್ಕೊಂದು ಕಥೆ ಹೇಳ್ತಾನೇ(ಉದಾಹರೆಣೆಗೆ : ಇವತ್ತು ಶುಕ್ರವಾರ, ಶುಕ್ರವಾರ ಅಂದ್ರೆ ಅನ್ನಪೂರ್ಣೆಶ್ವರಿ ದಿವಸ, ಅನ್ನ ಅಂದ್ರೆ ಅಕ್ಕಿ, ಈ ಅಕ್ಕಿಯನ್ನ ನುಚ್ಚು ಮಾಡಿ ಉಪ್ಪಿಟ್ಟು ಅಥವಾ ರುಬ್ಬಿ ದೋಸೆ ಮಾಡಿ ತಿಂದಿದ್ದೀರಿ, ಅದರಿಂದ ಅನ್ನಪೂರ್ಣೆಶ್ವರಿ ಕೃಪೆ ನಿಮ್ಮ ಮೇಲೆ ಸದಾ ಇರುತ್ತೆ). ಇದು ಅವನ ಹೊಟ್ಟೆ ಪಾಡು ಕಣ್ರೀ.

    ReplyDelete
  12. ee mundevukke mai bagsi duddiyo yogyatte illa, bellagge tv haakadre saaku channel change maadthiddhangu obbobba lineaag koothirthane, inttvaranna question kellokke hugirna koorsbittirthaare" swamiji innobbru line nallidaare antha helloke" adakke kannada channels na bittu bere channels na nododu janru.....

    ReplyDelete
  13. I think its Good to post here personal phone numbers of these kind of people , So we can take care of them. Please if any one have phone numbers of these kind of Nuisance persons please do post here.
    Manu

    ReplyDelete
  14. ಎಂಥ ಅಸಹ್ಯ ವಕ್ಕರಿಸಿಕೊಂಡು ಬಿಡ್ತು ನಮ್ಮ ಕನ್ನಡ ಚಾನಲ್‌ಗಳಿಗೆ. ಯಾರನ್ನು ನಿಂದಿಸಬೇಕು? ತನ್ನ ಹರಕು ಬಾಯಿಯಿಂದ ಅಸಹ್ಯವನ್ನೇ ಕಾರುತ್ತಿರುವ ಆ ಸ್ವಾಮಿಯನ್ನೋ? ಅವನಿಗೆ ಎಸಿ ರೂಮಿನಲ್ಲಿ ಚೇರು ಹಾಕಿ ಕೂರಿಸುವ ನಮ್ಮ ಚಾನಲ್‌ನವರನ್ನೋ? ಅಥವಾ, ಆತನ ಮಾತನ್ನು ಪ್ರಸಾದದಂತೆ ಸ್ವೀಕರಿಸುವ ಔಟ್‌ಡೇಟೆಡ್‌ ಮೈಂಡ್‌ಗಳನ್ನೋ? ಸಂಘಟನೆಗಳ ಕಣ್ಣಿಗೆ ಈ ದೈತ್ಯ ಮೂರ್ತಿ ಕಾಣುವುದೇ ಇಲ್ಲವೇ? ಈ ಅಪಸವ್ಯಗಳನ್ನು ಭರಿಸುವ ಕರ್ಮ ಕನ್ನಡಿಗರಿಗೇಕೆ? ದಯವಿಟ್ಟು ಇದಕ್ಕೊಂದು ಮುಕ್ತಿ ಕಾಣಿಸಿ... ಅರುಣ್‌ ಕಾಸರಗುಪ್ಪೆ

    ReplyDelete
  15. ಸದ್ಯ, ನಮ್ಮ ಪ್ರಪಂಚವನ್ನು ಅಥರ್ಾತ್ ಕನ್ನಡಿಗರ ಭಾವನಾ ಪ್ರಪಂಚವನ್ನು ಕಾಡುತ್ತಿರುವ ಪಿಡುಗುಗಳು ಎರಡೇ. ಒಂದು ಈ ಬ್ರಹ್ಮಾಂಡ ಸ್ವಾಮಿ ಮತ್ತು ಅವನನ್ನು ಬೆಳೆಸುತ್ತಿರುವ ತಲೆಯಲ್ಲಿ ಮೌಢ್ಯತೆಯ ಲದ್ದಿ ತುಂಬಿಕೊಂಡಿರುವ ಉಸ್ತುವಾರಿಯಲ್ಲಿ ನಡೆಯುತ್ತಿರುವ ಚಾನೆಲ್ಗಳು

    ReplyDelete
  16. Do you know what he said recently on some tv show?
    " In the coming year temperature of north karnataka districts will definitely shoot up to 65° c - 75° c and..maximum will be 90°c-95°c"
    does it looks like statement made by a sensible man? Why the hell these medias entertaining such Hypocrites?
    and above all he is very much obsessed with food it seems. He always gives examples in terms of food only! uppittu, tuppa da oggarane, kadubu, obbattu, dose...etc so many. It looks so cheap.
    In my observation scholars or really dedicated astrologers never think of food in between their speech or work.

    ReplyDelete
  17. What he talks is only nonsense. He says earth will suddenly start rotating in reverse order! and with full speed just like BUGURI ! What to say this?!
    he says west coast of America will completely ruin just within next few months!

    His show is just an another comedy show that s all!

    ReplyDelete
  18. Media should have social responsibility.. But it became business... it seems the movie on foolish media-'Peepli live' is not sufficient for these people.. There should be certain strong guidelines regulating the media..

    ReplyDelete
  19. i agree , media people arnt doin responsible journalism, being a journalist myself ... i got to bear with all dese nonsense wid nowhere to go

    ReplyDelete
  20. Its no surprise if World destruction happens bcoz I believe that it will happen only to kill this crap person! LOL

    ReplyDelete
  21. i am really surprised to viewers of brahamanda. no logic in that. and actually media should give positive thoughts to public rather than publishing rubbish. and i am very sad people are exploiting in the name of god. GOD IS WITHIN US.

    ReplyDelete
  22. eradu kai seridarene chappaale. nam jana ee ritiya karyakramagalanna hecchagi nodtare ade problem. janaru eccharagolbeku intaha sense ilde iro kaaryakramagalannu nodaloga baradu. haage media'davarige svalpavaadaru budhi iddare chenna ee reeti kelasakke baarada kaaryakramagalannu prasaara madabaaradendu.
    thank god!!we dont hv t.v in our to see such stupid things

    ReplyDelete
  23. Haagiddare Latoornalli bhopokampa hegaytu Bogale mahashayare?Such wretched speaking self professing astrologers are dime a dozen.. I donot blame them but our channels are equally liable for encouraging them & making the viwers believe in sheer nonsense.

    ReplyDelete
  24. Please write your feedback to here http://www.zeekannadatv.com/feedback.aspx

    ReplyDelete
  25. E body bramhanda, munchhe thumbha films li side actings maddidane ,thumbha kanthree parts maddidane,..1d old film li e daddiya na papa 1d mukkha pranni katte melle kurisi chappali hara hakki mervanage maddidare,..ega noddidrre swamy agbittidane

    ReplyDelete
  26. ಮೊದಲು ಇಂಥ ಬೊಗಳೆಬಾಯಿಗಳನ್ನು ಬ್ಯಾನ್ ಮಾಡಬೇಕು. ನಮ್ಮ ಜನರೂ ಪೆಕರುಗಳಂತೆ ಅವನು - ಸಾರಿ - ಅದು ಹೇಳೋದನ್ನೆಲ್ಲ ಕೇಳೋದಲ್ದೆ ಮನೆಮನೆಗಳಲ್ಲಿ ಫಾಲೋ ಮಾಡ್ತಾರಲ್ಲ!! ಜನರ ಧಾರ್ಮಿಕ, ಸಾಮಾಜಿಕ ನಂಬಿಕೆಗಳನ್ನ ಎಷ್ಟು ಸುಲಭವಾಗಿ ಹಾದಿ ತಪ್ಪಿಸಬೋದು ಅನ್ನೋದಕ್ಕೆ ಈ ಪ್ರಾಣಿಯೇ ದೊಡ್ಡ ಸಾಕ್ಷಿ!!

    ReplyDelete