Tuesday, May 3, 2011

ಕನ್ನಡಪ್ರಭ ಓದುಗರಿಗೆ ಈ ಹಳಸಲು ಅಡುಗೆ ಬೇಕಾಗಿತ್ತಾ?

ವಿಶ್ವೇಶ್ವರ ಭಟ್ಟರು ಕನ್ನಡಪ್ರಭಕ್ಕೆ ಬಂದಾಗಿನಿಂದ ಸ್ವಲ್ಪ ಸಮಯ ಕೊಡಿ, ಹೊಸ ವ್ಯವಸ್ಥೆಗೆ ನಾನು ಹೊಂದಿಕೊಳ್ಳಬೇಕು. ಆಮೇಲೆ ಒಂದಿಷ್ಟು ಪ್ರಯೋಗ ಮಾಡ್ತೀನಿ ಎನ್ನುತ್ತಿದ್ದರು. ನಿಧಾನವಾಗಿ ಅವರು ಈಗ ಫಾರ‍್ಮ್‌ಗೆ ಬಂದ ಹಾಗೆ ಕಾಣುತ್ತದೆ. ನೋಡ್ತಾ ಇರಿ, ಏನೇನು ಮಾಡ್ತೀವಿ ಎಂಬ ಘೋಷವಾಕ್ಯದಡಿ ಭಟ್ಟರು ಹೊಸ ಅಂಕಣಗಳನ್ನು ಶುರು ಮಾಡಿದರು. ಮೊದಲ ಬಾರಿ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅಂಕಣಕಾರರನ್ನಾಗಿಸಿದರು. ವಿಜಯ ಕರ್ನಾಟಕದಲ್ಲಿ ಬರೆಯುತ್ತಿದ್ದ ತಮ್ಮ ಅಂಕಣಗಳನ್ನೆಲ್ಲ ಇಲ್ಲೂ ಆರಂಭಿಸಿದರು. ತಪ್ಪಾಯ್ತು, ತಿದ್ಕೋತೀವಿ ಅಂಕಣದ ಮೂಲಕ ಓದುಗರ ಜತೆ ನಿತ್ಯ ಸಂವಾದ ಆರಂಭಿಸಿದರು. ಇನ್ನು ಅವರ ಬಳಗದ ಪಿ.ತ್ಯಾಗರಾಜ್, ರಾಧಾಕೃಷ್ಣ ಬಡ್ತಿ, ಪ್ರತಾಪ ಸಿಂಹ, ಕೆ.ವಿ.ಪ್ರಭಾಕರ್, ಚೈತನ್ಯ ಹೆಗಡೆ ಮತ್ತಿತರರ ಅಂಕಣಗಳೂ ಶುರುವಾದವು.

ಭಟ್ಟರು ಕ್ರಿಯಾಶೀಲ ಸಂಪಾದಕರು. ಹೊಸತನ್ನು ಕೊಡಬೇಕು ಎಂದು ಹವಣಿಸುವವರು. ಹೀಗಾಗಿ ಕನ್ನಡಪ್ರಭದಲ್ಲಿ ಭಟ್ಟರ ಛಾಪು ಕಾಣಿಸುತ್ತಿದೆ. ಆದರೆ ಇವತ್ತಿನ ಕನ್ನಡಪ್ರಭ ನೋಡಿದಾಗ ನಿಜಕ್ಕೂ ನಿರಾಶೆಯಾಯಿತು. ಹೊಸತನ್ನು ಕೊಡುವ ಶಕ್ತಿಯಿರುವ ಭಟ್ಟರು ಹಳಸಲನ್ನು ಬಡಿಸಲು ಹೊರಟಿರುವುದು ಆಶ್ಚರ್ಯ ತರಿಸಿತು.

ದೇಶದ ಮಹತ್ವದ ರಾಜಕಾರಣಿಯೊಬ್ಬರಿಂದ ಕಾಲಂ ಬರೆಸುತ್ತೇವೆ ಎಂದು ಭಟ್ಟರು ಕನ್ನಡಪ್ರಭದಲ್ಲಿ ಅನೌನ್ಸ್‌ಮೆಂಟ್ ಕೊಟ್ಟಿದ್ದರು. ಅದೇ ಪ್ರಕಾರ ಇಂದು ಎಲ್.ಕೆ.ಅಡ್ವಾಣಿಯವರ ಅಂಕಣ ೯ನೇ ಪುಟದಲ್ಲಿ ಪ್ರಕಟವಾಗಿದೆ. ನನ್ನ ದೇಶ, ನನ್ನ ಜನ ಎಂಬ ಶೀರ್ಷಿಕೆಯ ಅಂಕಣದಡಿಯಲ್ಲಿ ಇಂದು ಪ್ರಕಟವಾಗಿರುವ ಲೇಖನ: ಹಾಗಾದರೆ ರಾಜಕಾರಣಿಗಳೆಲ್ಲರೂ ಭ್ರಷ್ಟರೇ?

ಇದನ್ನು ಓದಿದ ತಕ್ಷಣವೇ ಔಟ್‌ಡೇಟೆಟ್ ಲೇಖನ ಎಂದು ನಿಮಗೆ ಅನ್ನಿಸಿರಬಹುದು, ಅನ್ನಿಸಲೇಬೇಕು. ಯಾಕೆಂದರೆ ಇದು ಅಡ್ವಾಣಿಯವರ ಹಳೆಯ ಲೇಖನ. ಅದನ್ನು ಬರೆದಿರುವುದು ಕನ್ನಡಪ್ರಭಕ್ಕಾಗಿಯೂ ಅಲ್ಲ. ಅಡ್ವಾಣಿಯವರ ಬ್ಲಾಗ್‌ನಲ್ಲಿ ಇದೇ ಲೇಖನ ಏಪ್ರಿಲ್ ೧೨ರಂದು ಪ್ರಕಟವಾಗಿದೆ. ಮೂರು ವಾರಗಳ ಹಿಂದೆಯೇ ಪ್ರಕಟಗೊಂಡಿದ್ದ ಲೇಖನದ ಯಥಾವತ್ತು ತರ್ಜುಮೆ ಇವತ್ತು ಕನ್ನಡಪ್ರಭದಲ್ಲಿ ಪ್ರಕಟವಾಗಿದೆ.

ಎರಡು ಸಿಂಪಲ್ ಆದ ಪ್ರಶ್ನೆಗಳು.
ಇಂಟರ್‌ನೆಟ್ ನೋಡುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಹೀಗಿರುವಾಗ ಅಡ್ವಾಣಿಯವರ ಬ್ಲಾಗ್‌ನಲ್ಲಿ ಎಂದೋ ಪ್ರಕಟಗೊಂಡ ಹಳಸಲು ಲೇಖನವನ್ನು ಹೊಸ ಅಂಕಣದ ರೂಪದಲ್ಲಿ ಕನ್ನಡ ಓದುಗರಿಗೆ ಪ್ರಸ್ತುತ ಪಡಿಸುವ ಅಗತ್ಯ ಇತ್ತೆ?

ಒಂದು ವೇಳೆ, ಅಡ್ವಾಣಿಯವರ ಬ್ಲಾಗ್‌ನಿಂದ ಅವರ ಅನುಮತಿ ಪಡೆದು ತರ್ಜುಮೆ ಮಾಡಿ, ಅಂಕಣ ರೂಪದಲ್ಲಿ ಪ್ರಕಟಿಸುವುದಾದರೆ ಅದನ್ನು ಓದುಗರಿಗೆ ಹೇಳಬಹುದಿತ್ತಲ್ಲವೇ?

ಇವರೆಡೂ ಪ್ರಶ್ನೆಗಳನ್ನು ಹೊರತುಪಡಿಸಿಯೂ ರಾಜಕಾರಣಿಗಳಿಂದ ಅಂಕಣಗಳನ್ನು ಬರೆಸುವ ಕುರಿತೇ ತಕರಾರುಗಳು ಇವೆ. ರಾಜಕಾರಣಿಗಳು ಸಹಜವಾಗಿಯೇ ತಮ್ಮ ಹಾಗು ತಮ್ಮ ಪಕ್ಷದ ಇಮೇಜುಗಳನ್ನು ಬೆಳೆಸಿಕೊಳ್ಳಲು ಅಂಕಣಗಳನ್ನು ಬಳಸಿಕೊಳ್ಳುವ ಸಾಧ್ಯತೆಗಳೇ ಹೆಚ್ಚು. ಇಂಥವು ಕನ್ನಡ ಓದುಗರಿಗೆ ಬೇಕೆ? ಪತ್ರಿಕೆಗಳು ಪಕ್ಷಾತೀತ ನಿಲುವುಗಳನ್ನು ಮಂಡಿಸಬೇಕು ಎಂಬ ನೈತಿಕ ಚೌಕಟ್ಟಿಗೆ ಇವು ಅಡಚಣೆಯಲ್ಲವೇ? ಒಂದು ವೇಳೆ ಅಡ್ವಾಣಿಯವರಿಂದ ಅಂಕಣ ಬರೆಸಲೇಬೇಕೆಂದಿದ್ದರೆ ಕನ್ನಡಪ್ರಭಕ್ಕಾಗಿ ಪ್ರತ್ಯೇಕ ಲೇಖನಗಳನ್ನು ಬರೆಸಬಹುದಿತ್ತಲ್ಲವೇ? ಕನ್ನಡ ಓದುಗರೇಕೆ ತಂಗಳು ಅಡುಗೆ ಸ್ವೀಕರಿಸಬೇಕು?

ತಪ್ಪಾಗಿದೆ, ತಿದ್ಕೋತಾರಾ? ಕಾದು ನೋಡೋಣ.

ಅಡ್ವಾಣಿಯವರ ಬ್ಲಾಗ್ ನಲ್ಲಿ ಏ.12ರಂದು ಪ್ರಕಟವಾಗಿರುವ ಮೂಲ ಲೇಖನದ ಲಿಂಕ್:
http://blog.lkadvani.in/blog-in-english/the-anna-hazare-episode
ಇವತ್ತಿನ (ಮೇ.3) ಕನ್ನಡಪ್ರಭದಲ್ಲಿ ಪ್ರಕಟವಾಗಿರುವ ತರ್ಜುಮೆಗೊಂಡ ಲೇಖನದ ಲಿಂಕ್:
http://www.kannadaprabha.com/NewsItems.asp?ID=KPH20110502210408&Title=Headlines&lTitle=%AE%DA%C3%A8%DB%AB%DA+%D1%DA%DF%A6%A7&Topic=0&ndate=5/3/2011&Dist=0

27 comments:

  1. I think it is worth to read some one like L.K.Advani who has got a tremendous experience in the field of politics. Just because the article is alrady available in Mr.Advani's blog it doesn't mean that all the Kannada Prabha readers have read the same in blog. Only for very few people who are tech savvy this may be a repetition but not for all.

    ReplyDelete
  2. ಇದು ಖಂಡಿತಾ ತಪ್ಪು....ಅಡ್ವಾಣಿಯವರ ಬದಲು ವಾಜಪೇಯಿ ಅಥವ ಕಲಾಂ ಅವರ ಹತ್ತಿರ ಅಂಕಣ ಬರೆಸಿದ್ದರೆ ಒಪ್ಪಬಹುದಿತ್ತು...ಆದರೆ ಸಕ್ರೀಯ ರಾಜಕಾರಣದಲ್ಲಿರುವವರ ಹತ್ತಿರ ಅಂಕಣ ಬರೆಸುವುದು ಶುದ್ದ ತಪ್ಪು...ಹೊಸ ಪ್ರಯೋಗ ಮಾಡಲಿ..ಇತ್ತೀಚಿಗೆ ಕನ್ನಡ ಪ್ರಭದಲ್ಲಿ ಕೇವಲ ಅಂಕಣ ಗಳು ಹೆಚ್ಚಾಗಿರುವುದು ಬೋರ್ ಹೊಡೆಸುತ್ತಿದೆ...ಎಲ್ಲೊ ಒಂದು ಕಡೆ ಹಳೆಯ ಕನ್ನಡ ಪ್ರಭ ವೇ better ಏನೋ ಎಂದು ಅನ್ನಿಸುತ್ತಿದೆ...ಕೇವಲ ಉಪ್ಪು ಜಾಸ್ತಿ ಆದ ಸಾಂಬಾರ್ ನಂತೆ ಆಗಿದೆ ಈಗಿನ ಕನ್ನಡ ಪ್ರಭ...ಇನ್ನಾದರೂ ಭಟ್ಟರು ಕನ್ನಡ ಪ್ರಭವನ್ನು perfect ಪ್ರಭ ಮಾಡುವರೇ....ಕಾದು ನೋಡಬೇಕಿದೆ

    ReplyDelete
  3. @Anonymous,
    Yes, u r right. L.K.Advani has got a tremendous experience in the field of politics.
    ಅಷ್ಟೇ ಅಲ್ಲ, ದೇಶವನ್ನು ಧರ್ಮದ ಹೆಸರಿನಲ್ಲಿ ಇಬ್ಭಾಗ ಮಾಡಿದ ತೊಂಭತ್ತರ ದಶಕದಿಂದೀಚೆಗಿನ ಬೆಳವಣಿಗೆಗಳಲ್ಲಿ ಅವರ ಕೊಡುವೆ ಅತ್ಯಮೂಲ್ಯ. ಅವರ ಅನುಭವಾಮೃತಗಳು ನಮಗೆ ಬೇಕೇ ಬೇಕು.

    ReplyDelete
  4. Haudu, halasalu adige vaachakarige Bhattaru badisuvudu beda... Aadare Swatcha Raajakaaranigalinda olleya vichaaragaliddare yake beda?
    Nammalli obba Suresh kumar iddare. Antaha mandi itara raajakeeya pakshgalali irabahudu. Avarannu gurutisi prativaaravoo hosa aduge maadisidare sarthakavadeeto eno?

    ReplyDelete
  5. ಸುಂದರ್May 3, 2011 at 2:35 PM

    ಶ್ರೀಯುತ ಬಿ ಎಸ್ ವೈ ರವರ 'ಒಳ್ಳೆ ಕಾರ್ಯಗಳ' ಬಗ್ಗೆ ಒಂದೇ ಒಂದು ಮಾತು ಆಡದ ಅಡ್ವಾನಿಜೀ ಒಬ್ಬರು ಧೀಮಂತ ಸಜ್ಜನ ರಾಜಕಾರಣಿಯೇ? ಪಕ್ಷ ಮುಖ್ಯ ಎನ್ನುವ ರಾಜಕಾರಣಿ ಸಜ್ಜನರಾಗಿರಲು ಹೇಗೆ ಸಾದ್ಯ? ಇವರ ಮನಸ್ಸಿಗೆ ಒಪ್ಪಿತು ಅಂತ ಕನ್ನಡಿಗರನ್ನು ಕೇಳದೆ ಅಂಕಣ ಬರೆಸಲು ಹೊರಟಿರುವುದು ಹಾಸ್ಯಾಸ್ಪದ....

    ReplyDelete
  6. ಅಭಿಮಾನಿMay 3, 2011 at 2:56 PM

    ಕನ್ನಡ ಪ್ರಭದಲ್ಲಿ ರಾರಾಜಿಸುತ್ತಿರುವ ಸರ್ಕಾರಿ add ಗಳು,ಈಗ ಅಡ್ವಾನಿ ಅಂಕಣ ಗಳು ಎಲ್ಲೊ ಒಂದು ಕಡೆ ಭಟ್ಟರು ಬಿಜೆಪಿ ಬಗ್ಗೆ soft corner ಹೊಂದಿದ್ದಾರೆಯೇ ಎನ್ನುವ ಪ್ರಶ್ನೆ ಮನಸ್ಸಿನಲ್ಲಿ ಕಾಡುತ್ತಿದೆ(ಭಟ್ಟರ ಅಭಿಮಾನಿಗಳಿಗೆ ನೋವಾಗಿದ್ದರೆ ಕ್ಷಮಿಸಿ)...ಕನ್ನಡಪ್ರಭದಲ್ಲಿ ರಾಜಕೀಯದ ಹೊರತಾದ 'ಹೊಸತನ್ನು' ನಾವು ಬಯುಸುತ್ತೇವೆ...

    ReplyDelete
  7. ಅಡ್ವಾಣಿಯವರ ಬರಹದಲ್ಲಿ ಏನಾದರು ಹುಳುಕು ಇದ್ದರೆ ವಿಮರ್ಶೆ ಮಾಡಿ. ಅದು ಬಿಟ್ಟು ಅದನ್ನು ಪ್ರಕಟಿಸಿದ ಮೂಲ ಹಿಡಿದು ಕೊಂಡು ಹೊರಟಿರು ನೀವು ಮೂರ್ಖರು..., ಅನ್ನುವುದರಲ್ಲಿ ಯಾವುದೇ ಸಂಶಯವಿಲ್ಲ...., ಇಂಟರ್ನೆಟ್ ನೋಡುವವರಿಗೆಲ್ಲಾ..., ಮಾಡಲು ಕೆಲಸ ಇರುವುದಿಲ್ಲವೇ, ನಾನು ದಿನಕ್ಕೆ ೧ ೧/೨ ಗಂಟೆಗಳಶ್ಟು ಕಾಲ ಇಂತರ್ನೆಟ್ ನೋಡುತ್ತೆನೆ.., ನನಗೆ ಇದುವರೆಗೂ ಎಲ್ಲಿಯೂ ಅಡ್ವಾಣಿ ಬ್ಲಾಗ್ ಕಾಣಿಸಿಲ್ಲಾ.., ಒಂದು ವೇಳೆ ಕಾಣಿಸಿದ್ದರೂ ಅದು ಕನ್ನಡಪ್ರಭದಲ್ಲಿ ಪ್ರಕತವಾಗುವುದು ತಪ್ಪಾಲ್ಲ್ಲ. ಟಿವಿ ನೋಡುವವರು ೨೪ ಗಂಟೆ ಎಲ್ಲಾ ಪ್ರಮುಕ ವಿಶ್ಯಗಳನ್ನು ನೋಡಿರುವುದಿಲ್ಲ. ನೀವು ತುಂಭಾ ಉತ್ಪ್ರೇಕ್ಷೆಯಿಂದ ಬರೆದಿದ್ದೀರ.., ಭಟ್ ಗೆ ಬೇಕಾದಶ್ತು ಹುಳುಕುಗಳಿವೆ ಅವನ್ನು ಮೊದಲು ಬಯಲು ಮಾಡಿ..., www.maruthivishnuvardhan.blogspot.com

    ReplyDelete
  8. ರಾಜಕಾರಣಿಗಳು ಆರ್ಟಿಕಲ್ ಬರೆದರೆ ತಪ್ಪೇನೂಲ್ಲ ಆದರೆ ತಮ್ಮ ಪತ್ರಿಕೆಗೆ ಅವರೇ ಬರೆದು ಕೊಟ್ರೂ ಅನ್ನೋದು ತಪ್ಪು!!

    ಇನ್ನೂ ಮ್. ಪೀ. ಪ್ರಕಾಶ್, Y.ಸ್. ದತ್ತ ಅವರು ಆರ್ಟಿಕಲ್ ಬರೆದಿದ್ರೂ ಅನ್ಣೊಂದು ನೆಣಿಸ್‌ಕೊಳ್ಳಬೇಕು

    ಅಡ್ವಾನೀ ಅವರ ಆರ್ಟಿಕಲ್ ನಲ್ಲಿ ಹೇಳೋ ಅಂತ ವಿಷಯ ಇಲ್ವೇ ಇಲ್ಲ
    ನಮಗೆ ಹೇಸಿಗೆ ತರೋದು ಇಂದಿನ ರಾಜಕಾರಣಿಗಲೇ ಹೊರೆತು ಅಂದಿನ ರಾಜಕಾರಣಿಗಲ್ಲ

    ReplyDelete
  9. @ಪ್ರಜೆ : ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ. ಮುಂಚಿನ ಕನ್ನಡ ಪ್ರಭವೆ ಸೊಗಸಾಗಿತ್ತು. ಈ ಭಟ್ಟ ಮತ್ತವರ ಭಟ್ಟಂಗಿಗಳಿಂದ ತನ್ನ ಸೊಗಡನ್ನು ಕಳೆದುಕೊಂಡಿದೆ

    ReplyDelete
  10. Sorry for this comment
    But please publish this comment
    Slowly I started to feel this blog is belong to some from Kannada Prabha and who is very close fnd/associate of Mr.Bhat
    Reason is simple.
    When V Bhat announced new column, every one guessed it correctly.
    But at the end of the day, what they are propagating through this?
    I am not against any in KP including V Bhat
    but his only achievement is allowing category benifits to start columns

    ReplyDelete
  11. Sorry for this comment
    But please publish this comment
    Slowly I started to feel this blog is belong to some from Kannada Prabha and who is very close fnd/associate of Mr.Bhat
    Reason is simple.
    When V Bhat announced new column, every one guessed it correctly.
    But at the end of the day, what they are propagating through this?
    I am not against any in KP including V Bhat
    but his only achievement is allowing category benifits to start columns

    ReplyDelete
  12. Oh.. Bhattaru kannda prabha seridaara... ? sari bidi..innu adrallu Kempu Kappu headlinsu.. Eneno.. Kanglish padagalu.. kulagedisikonda Kannda padagalu barrutve... Innu internetninda..content kadiyodu ella patrikegallalli jorage ide..specially in vijay karnataka.. soujanya ello ondu moole li yaavgalo omme internet krupe anta haakirtaare...

    ReplyDelete
  13. well, I started following sampadakeeya because of some good initiatives like, getting many people against some stupid programs like 'Brihat Bramhanda' and other bad tasted programs. I was expecting a article on the program getting telecasted in Zee kannada i.e 'Baduku Jataka Bandi'. Instead, I am seeing a article against another article which atleast has got some good messages and information and in case the readers of Kannada Prabha doesn't like this, they have all the right to write to the editor asking for the clarifications. More over Mr.Advani is elderly person and he knows how to differtiate party politics and personal beliefs amd commitment to the society. I can't see any wrong intention on the part of Mr.Bhat by publishing the article written by Mr.Advani.

    ReplyDelete
  14. ಇಂಟರ್‌ನೆಟ್ ನೋಡುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದ. ಖಂಡಿತ ನಿಮ್ಮ ಮಾತು ಒಪ್ಪುತ್ತೇನೆ. ಆದರೆ ದಿನವು ಎಷ್ಟು ಜನ ಅಡ್ವಾಣಿಯವರ ಬ್ಲಾಗ್ ಓದುತ್ತಾರೆ? KP selected articles ನ ಮಾತ್ರ ಓದುಗರಿಗೆ ಕೊಡಬಹುದು ಅಲ್ವಾ? ಒಂದೇ ದಿನಕ್ಕೆ ಅದನ್ನ ನಾವು ಏನು ಹೇಳೋಕೆ ಆಗಲ್ಲ. ಹಳೆ postಗಳನ್ನ ಓದುವುದು ಹಳಸಿದ್ದು ಹೇಗೆ ಆಗುತ್ತೆ ಸರ್?
    ಒಂದು ವೇಳೆ ನಾಳೆ KPದಲ್ಲಿ ಅಥವಾ ಯಾವದದ್ರು ಪತ್ರಿಕೆಯಲ್ಲಿ "ಸಂಪಾದಕೀಯ" ಆರಂಭಿಸಿದ "ಬ್ರಹಥ ಬ್ರಹ್ಮಾಂಡ" ದ ಬಗ್ಗೆ ಬರೆದ್ರೆ ಅದು ಹಳಸಿದ್ದಾಗುವುದಾ ?


    @ಸುಂದರ : ಯಾವದೇ ರಾಜಕಾರಣಿ ತೊಗೊಂಡ್ರು ಅವರಿಗೆ ಪಕ್ಷವೆ ಮುಖ್ಯ. ಅದರಲ್ಲಿ ತಪ್ಪೇನಿಲ್ಲ ಅಲ್ವಾ?

    ReplyDelete
  15. ಅಡ್ವಾಣಿಜೀಯವರ ಈ ಬರಹ ನನ್ನ ಮಿಂಚಿಗೆ ಏಪ್ರಿಲ್ ೧೨ರಂದೇ ಬಂದಿದೆ. ಇವತ್ತು ಕಪ್ರ ಓದಿದಾಗ, ಹಳಸಲು ಅಡಿಗೆ ಥರ ಅನಿಸಿತ್ತು. ಅಡ್ವಾಣಿಯವರ ಬ್ಲಾಗ್ ಹಿಂದಿ ಮತ್ತು ಇಂಗ್ಲಿಷ್ ಅಲ್ಲಿ ಮಾತ್ರ ಇರುವುದರಿಂದ ಕನ್ನಡದ ತರ್ಜುಮೆ ಪ್ರಕಟವಾದರೆ ಪರವಾಗಿಲ್ಲ, ಕನ್ನಡಿಗರಿಗೆ ಓದಲು ಅನುಕೂಲ. ಅವರು ಕಪ್ರ ಗೆಂದೇ ವಿಶೇಷವಾಗಿ ಬರೆಯಬೇಕೆಂತಲೂ ಇಲ್ಲ. ಅಡ್ವಾಣಿಯವರ ಬ್ಲಾಗ್ ನವೀಕರಣಗೊಂದೊಡನೆ ಕಪ್ರ ಕ್ಷಿಪ್ರವಾಗಿ ತರ್ಜುಮೆ ಮಾಡಿ ಪ್ರಕಟ ಮಾಡಲಿ. ಒಂದು ತಿಂಗಳು ಹಿಂದಿನ ವಿಷಯ ಓದಲು ಪತ್ರಿಕೆಗೆ ಪಾವತಿಸಲು ಬೇಜಾರು..

    ReplyDelete
  16. V.Bhat and his team are experts in misleading readers. They have taken us for granted. It is unbecoming of journalism. In this case it is clear that they want to take mileage by claiming that they are the first to have a column by Advani. The agenda of Bhat is to saffronise Kannada Prabha.
    Many commentators here have discussed credentials of politicians to write a column. In my view both Advani and Yeddyurappa are corrupt. While Yeddyurappa's role was limited to land, mining, Advani's canvas was quite big. He corrupted minds and he wanted to secure political positions for the party by evoking communal feelings among youths. Now Bhat and people like him are watering such corrupt minds further. I don't know how many Vivekananda's required to cleanse dirt created by Advani and his cronies.

    ReplyDelete
  17. NAMAGE ENNONDU VK BEDA....HOSATANA TUMBIDA KANNADA PRABHA BEKAGIDE....ADRE KANNADA PRABHA ONDU PAKSHADA KADEGE VAALUTIRUVUDU...BESARADA SANGATI

    ReplyDelete
  18. ಇದರಲ್ಲಿ ಸಂಪಾದಕೀಯ ಬ್ಲಾಗಿನ ಬಿ.ಜೆ.ಪಿ. ವಿರೋಧಿ ಧೋರಣೆ ಎದ್ದು ಕಾಣುತ್ತಿದೆ.

    ಕರ್ನಾಟಕದ ಅಥವಾ ಭಾರತದ ಜನಸಂಖ್ಯೆಯಲ್ಲಿ ಶೇಕಡಾ ೧ ರಷ್ಟು ಜನ ಕೂಡ ಇಂಟರ್ನೆಟ್ ನೋಡುವುದಿಲ್ಲ ಓದುವುದಿಲ್ಲ. ಆದರೆ ಪತ್ರಿಕೆಯನ್ನು ಓದುವವರ ಸಂಖ್ಯೆ ಇಂಟರ್ನೆಟ್ ಗಿಂತ ಎಷ್ಟೋ ಪಾಲು ಜಾಸ್ತಿ ಇದೆ. ಅಷ್ಟಕೂ ಕೇವಲ ಮೂರು ವಾರ ಹಿಂದೆ ಬರೆದಿದ್ದನ್ನು ಮೂರು ವರ್ಷ ಹಿಂದೆ ಬರೆದದ್ದು ಎಂಬಂತೆ ಹೇಳುತ್ತಿದ್ದೀರಿ.
    ಇಂಟರ್ನೆಟ್ ಓದುವವರೂ ಕೂಡ ಅದ್ವಾನಿ ಬ್ಲಾಗ್ ಓದಿರುವುದಿಲ್ಲ. ಅದ್ವಾನಿಯನ್ಥವರು ಯಾವುದೇ ಪತ್ರಿಕೆಗೆ ಬರೆಯುತ್ತ ಕೂರಲು ಆಗುವುದಿಲ್ಲ. ಆದರೆ ಅವರು ಬರೆದಾಗ ಅವರ ಅನುಮತಿ ಪಡೆದು ಆ ಬರಹ ತರ್ಜುಮೆ ಮಾಡಿ ಹಾಕಿದ್ದರಲ್ಲಿ ಯಾವ ತಪ್ಪೂ ಇಲ್ಲ.

    ಅದ್ವಾನಿಯವರ ಬರಹದಲ್ಲಿ ಏನಾದರೂ ವಿಚಾರ ವಿರೋಧ ಇದ್ದಾರೆ ಮಾಡಿ. ಅದು ಬಿಟ್ಟು, ಅಂಕಣ ಯಾರಿಂದ ಬರೆಸಬೇಕು, ಹೇಗೆ ಬರೆಸಬೇಕು , ಎಷ್ಟು ಬರೆಸಬೇಕು ಅನ್ನುವುದು ಸರಿಯಲ್ಲ.

    ReplyDelete
  19. ನೀವು ಒಬಾಮ ಭಾಷಣವನ್ನು ಪ್ರಕಟಿಸಿದ್ದು ಹಳಸಲು ಅಡುಗೆ ಅಲ್ಲವೇ?

    ಒಬಾಮ ಸಂಪಾದಕೀಯಕ್ಕೊಸ್ಕರ ಭಾಷಣ ಮಾಡಿದ್ರ??

    ReplyDelete
  20. ಎಷ್ಟು ಜನ ಅದ್ವಾನಿ ಬ್ಲಾಗ್ ಓದಿದ್ದಾರೆ. ಹೋದವರ್ಷ ಎಪ್ರಿಲ್ ನಲ್ಲಿ ಬರೆದ ಬ್ಲಾಗ್ ಒಂದು ವರ್ಷ ಬಿಟ್ಟು ನಿನ್ನೆ ಹಾಕಿದ್ದರೆ ಹಳಸಲು ಅನ್ನಬಹುದು. ಆದರೆ 'ಬ್ಲಾಗ್ ನ ಕನ್ನಡ ತರ್ಜಮೆ' ಅಂತ ಹಾಕಿ ಪ್ರಕಟಿಸಿದ್ದರೆ ಈ ಟೀಕೆ ಬರುತ್ತಿರಲಿಲ್ಲ.

    ReplyDelete
  21. ಇಂಟರ್ನೆಟ್ ಅನ್ನು ಜಾಸ್ತಿ ಜನ ಉಪಯೋಗ ಮಾಡ್ತಿರೋದು ನಿಜ, ಅದು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚುತ್ತೆ ಅನ್ನೋದು ನಿಜ. ಹಾಗಂತಾ ಯಾವುದೋ ಬ್ಲಾಗ್ ನಲ್ಲಿ ಬರೆದಿದ್ದನ್ನು ಪತ್ರಿಕೆಯಲ್ಲಿ ಪ್ರಕಟಿಸಬಾರದು ಅಂದ್ರೆ ಏನರ್ಥ? ಎಷ್ಟೋ ಜನ ಅದನ್ನು ಓದದವರೂ ಇರಬಹುದಲ್ವಾ? ಅದು ಹಳೇ ಪೋಸ್ಟು ಇದ್ರೆ ಏನಾಯ್ತು? ಕನ್ನಡದಲ್ಲಿ ಅದು ಹೊಸದೇ. ಮೊದಲು ವಿಜಯ ಕರ್ನಾಟಕದಲ್ಲಿ ರವಿ ಬೆಳಗೆರೆಯವರ ಬಾಟಮ್ ಐಟಮ್ ಬರ್ತಿತ್ತಲ್ಲ? ಅದರ ಬಗ್ಗೆ ಮರೆತುಹೋಯಿತೆ? ಅಡ್ವಾನಿಯವರು ಬಿ.ಜೆ.ಪಿಯ ಬಗ್ಗೆ ಅಥವಾ ಯಾವುದಾದರೂ ವಿಷಯದ ಬಗ್ಗೆ ತಪ್ಪು ಬರೆದರೆ ಅದನ್ನು ಖಂಡಿಸಿ. ಅದು ಬಿಟ್ಟು ಹಳಸಲು ಗಿಳಸಲು ಅಂತ ಸುಮ್ಮನೇ ಟೀಕೆ ಮಾಡಿದರೆ ನಿಮ್ಮ ಬ್ಲಾಗು ಟ್ಯಾಬ್ಲಾಯಿಡ್ ಮಟ್ಟಕ್ಕೆ ಇಳಿಯುತ್ತೆ. ಸುಮಾರು ೫೦ ವರ್ಷ ಹಳೆಯ ಬೇರೆ ಭಾಷೆಯ ಒಳ್ಳೆಯ ಪುಸ್ತಕವನ್ನು ಯಾರಾದರೂ ಈಗ ಕನ್ನಡಕ್ಕೆ ಅನುವಾದಿಸಿದರೆ ಅದು ಹಳಸಲು ಆಗುತ್ತ?

    ReplyDelete
  22. ಸುಹಾಸ್,ಮೈಸೂರ್May 4, 2011 at 12:11 AM

    ಹಿಂದಿನ ಕನ್ನಡ ಪ್ರಭದಲ್ಲಿ ಪ್ರಕೃತಿಯ ಬಗ್ಗೆ ಅತ್ಯುತ್ತಮ ಲೇಖನಗಳು,ಮಾಹಿತಿಗಳು ಪ್ರಕಟವಾಗುತ್ತಿದ್ದವು..ಆದರೆ ಅವೆಲ್ಲಾ ಈಗ ಮಾಯಾ...ಕ್ರಿಕೆಟ್ ಬಗ್ಗೆ ಎಲ್ಲೋ ಒಂದು ಮೂಲೆಯಲ್ಲಿ ಒಂದಷ್ಟು ಬರೆಯಬೇಕಲ್ಲಾ ಅಂತ ಬರೆದಿರುತ್ತಾರೆ...ಸಾಲು ಸಾಲು ಅಂಕಣಗಳು...ಯಾರ ಹಿತಕ್ಕಾಗಿ ಇಂತಹ ಅಂಕಣಗಳು..????ಭಟ್ಟರು ಕೇವಲ ಅಂಕಣಗಳಿಗೆ ಪ್ರಾಮುಖ್ಯತೆ ಕೊಡದೆ ಇತರ ವಿಷಯಗಳಲ್ಲೂ ಹೊಸತನ್ನು ತಂದರೆ ಸಂತೋಷ...

    ReplyDelete
  23. ನಾನು ವಿಜಯ ಕರ್ನಾಟಕ ಓದುತ್ತಿದ್ದೆ. ಅದರಲ್ಲಿ ಅಂಕಣಗಳ ಬರಾಟೆ ಹೆಚ್ಚಾದ ಮೇಲೆ ಕನ್ನಡ ಪ್ರಭ ಓದಲು ಶುರು ಮಾಡಿದೆ, ಅದರಲ್ಲಿ ಬರುತ್ತಿದ್ದ ಶಬ್ದ ಚಿತ್ರ, ದಿನಚರಿ ಪುಟಗಳು ಸೊಗಸಾಗಿದ್ದವು. ಈಗ ಕನ್ನಡ ಪ್ರಭದ ಪ್ರತಿ ಪುಟ ಪ್ರತಿ ಕಾಲಮ್ ವಿಜಯ ಕರ್ನಾಟಕವಾಗಿ ಬದಲಾಗಿದೆ. ನೀರಸ ಮತ್ತು ಸ್ವಪ್ರತಿಷ್ಠೆಯ ಅಂಕಣಗಳು. ಎರಡು ನಿಮಿಷ ಸಹ ಪತ್ರಿಕೆ ಓದಲಾಗುವುದಿಲ್ಲ

    ReplyDelete
  24. I had commented already in this blog.
    L.K. Advani, Tarun Vijay, Gurumurthy, Chandan mitra..... it is clear that Kannada prabha is inclining towards one party....

    I am reader of Kannada Prabha from last thirty years, right from my 8th age. I am just disoppointed that Mr. Bhat has tragically transfered kannada prabha into vijay karanata in just 3 months. so many years of legacy of Y.N.K., Khadri shammana, Sathya, every thing is lost in just 3 months.

    Jai Vijaya Kananada Prabha

    ReplyDelete
  25. Nanu khayam kannada prabha odugalu. Modalindalu nanage mechchikeyada dinapatrike kannadaprabha. Ittichege andre march thingalininda nanu patrike thagolodu nilsidini, karana nanna nechchina patrike badalaithu. Bhattaru enen madthivi nodthiri antha heli enenu upayogavillada ankanagalanna shuru madidru andre avru vijayakarnatakadalli yaryaranna poshistha idro avrannella kannadaprabhakku karkondu bandru. Bhattaralli nanna kalakaliya vinanthi enandre namage hale kannadaprabhane kotre saku.

    ReplyDelete
  26. kannada prabha kaaneyaagide... dooru yaarige kodtiri?

    ReplyDelete
  27. nivu bjp mattu v bhat virodina nimma blog teekege matra seemita vaguttide...

    ReplyDelete