Monday, May 16, 2011

ಕಪಟ ಜ್ಯೋತಿಷಿಗಳ ವಿರುದ್ಧ ಸುಧೀಂದ್ರ ಹಾಲ್ದೊಡ್ಡೇರಿಯವರು ಬರೆದದ್ದು...


ಜನರನ್ನು ಮೌಢ್ಯದ ಅಂಧಕಾರದಲ್ಲಿ ಮುಳುಗಿಸಲು ಯತ್ನಿಸುತ್ತಿರುವ ಕಪಟ ಜ್ಯೋತಿಷಿಗಳು ಹಾಗು ಅವರಿಗೆ ವೇದಿಕೆ ಒದಗಿಸುತ್ತಿರುವ ಟಿವಿ ಚಾನಲ್‌ಗಳಿಗೆ ವಿಜ್ಞಾನ ಅಂಕಣಕಾರ ಸುಧೀಂದ್ರ ಹಾಲ್ದೊಡ್ಡೇರಿ ಚಾಟಿ ಬೀಸಿದ್ದಾರೆ. ವಿಜಯ ಕರ್ನಾಟಕದಲ್ಲಿ ನೆಟ್ ನೋಟ ಅಂಕಣ ಬರೆಯುವ ಹಾಲ್ದೊಡ್ಡೇರಿಯವರು ಹೇಗೆ ಕಪಟ ಜ್ಯೋತಿಷಿಗಳು ನಮ್ಮ ಮೀಡಿಯಾಗಳಲ್ಲಿ ವಿಜೃಂಭಿಸುತ್ತಿದ್ದಾರೆ ಎಂಬುದನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಭೀತಿಯನ್ನೇ ಸರಕು ಮಾಡಿಕೊಂಡಿರುವ ಮಾಧ್ಯಮಗಳು ಪ್ರಳಯದ ಭಯವನ್ನು ಸೃಷ್ಟಿಸುತ್ತಿರುವ ಕುರಿತು ಅವರು ಈ ಲೇಖನದಲ್ಲಿ ತಮ್ಮ ಸಾತ್ವಿಕ ಸಿಟ್ಟನ್ನು ವ್ಯಕ್ತಪಡಿಸಿದ್ದಾರೆ.


ಸುಧೀಂದ್ರ ಹಾಲ್ದೊಡ್ಡೇರಿ
ಕಪಟ ಜ್ಯೋತಿಷಿಗಳ ವಿರುದ್ಧ ನಮ್ಮ ಮುಖ್ಯವಾಹಿನಿಯ ಪತ್ರಿಕೆಗಳಲ್ಲಿ ಇನ್ನಷ್ಟು ಲೇಖನಗಳು ಬರಬೇಕಿದೆ. ಹಿಂದೆ ಇದೇ ವಿಜಯ ಕರ್ನಾಟಕದಲ್ಲಿ ಲೋಕೇಶ್ ಕಾಯರ್ಗ ತಮ್ಮ ಸಕಾಲಿಕ ಅಂಕಣದಲ್ಲಿ ಬುರುಡೆ ಜ್ಯೋತಿಷಿಗಳ ಕುರಿತು ಬರೆದಿದ್ದರು. ಈಗ ಹಾಲ್ದೊಡ್ಡೇರಿಯವರು ಬರೆದಿದ್ದಾರೆ. ಅಗ್ಗದ ಪ್ರಚಾರಕ್ಕಾಗಿ, ಟಿಆರ್‌ಪಿ ಆಸೆಗಾಗಿ ಜ್ಯೋತಿಷ್ಯದ ಹೆಸರಲ್ಲಿ ದಂಧೆ ನಡೆಸುವವರ ವಿರುದ್ಧ ಇನ್ನಷ್ಟು ವ್ಯಾಪಕವಾಗಿ ಜನಾಭಿಪ್ರಾಯ ರೂಪುಗೊಳ್ಳಬೇಕಿದೆ.


ಹಾಲ್ದೊಡ್ಡೇರಿಯವರಿಗೆ ನಮ್ಮ ಥ್ಯಾಂಕ್ಸ್. ಹಾಗೆಯೇ ವಿಜಯ ಕರ್ನಾಟಕ ಪತ್ರಿಕೆಗೂ ಕೂಡ. ಈ ಕೆಳಗಿನ ಲಿಂಕ್ ಬಳಸಿ ನೀವು ಹಾಲ್ದೊಡ್ಡೇರಿಯವರ ಲೇಖನ ಓದಬಹುದು.
 http://www.vijaykarnatakaepaper.com/pdf/2011/05/16/20110516a_008101002.jpg 
ಅಥವಾ ಇಲ್ಲಿ ಒದಗಿಸಿರುವ ಪಿಡಿಎಫ್ ಚಿತ್ರದ ಮೇಲೂ ಕ್ಲಿಕ್ ಮಾಡಿ ಲೇಖನ ಓದಬಹುದು. 


ಅಂದ ಹಾಗೆ ಕಪಟ ಜ್ಯೋತಿಷಿಗಳ ವಿರುದ್ಧ ಕರ್ನಾಟಕ ಅಭಿಯಾನದ ಕುರಿತು ಹಾಲ್ದೊಡ್ಡೇರಿಯವರು ಫೇಸ್‌ಬುಕ್‌ನಲ್ಲಿ ಬರೆದದ್ದು ಹೀಗೆ: ಶ್ಲಾಘನೀಯ ಪ್ರಯತ್ನ, ನಿಮ್ಮೊಂದಿಗಿದ್ದೇನೆ. ಇಂದಿನ ವಿಜಯ ಕರ್ನಾಟಕ ಅಂಕಣ ಲೇಖನದ ಮೂಲಕ ನನ್ನದೊಂದು ಪುಟ್ಟ ಪ್ರಯತ್ನ ನಡೆದಿದೆ.
-ಸಂ

3 comments:

  1. ಸುಧೀಂದ್ರ ಅವರು ಕನ್ನಡದ ಅತ್ತ್ಯುತ್ತಮ ಬರಹಗಾರರು. ಅವರ ಲೇಖನಗಳು ಅನೇಕ ತರುಣರಲ್ಲಿ ವಿಜ್ಞಾನದಲ್ಲಿ ಆಸಕ್ತಿ ಉಂಟುಮಾಡಿವೆ. ಈ ಕಪಟ ಜ್ಯೋತಿಷಿಗಳ ವಿರೋದಿಸುವ ಲೇಖನಕ್ಕೆ ಮತ್ತು ನಾಡಿನ ಬಗ್ಗೆ ಅವರ ಕಾಳಜಿಗೆ ಬಹು ದೊಡ್ಡ ಥ್ಯಾಂಕ್ಸ್!

    ReplyDelete
  2. ಎಲ್ಲಾ ಫಲಜ್ಯೋತಿಷಿಗಳೂ ಕಪಟಿಗಳೇ!!! ಕಪಟ ಜ್ಯೋತಿಷಿ ಎಂಬ ಪದಪ್ರಯೋಗ ಯಾಕೇನೋ!!!

    ReplyDelete
  3. Hechchu Bali beeluththiruvudu Vidyaavantare alwaa swaami ??!!

    ReplyDelete