Tuesday, March 15, 2011

ಎಚ್ಚರಿಕೆ, ಸಂಭೋಗ ಮಾಡುವುದಕ್ಕೆ ಮುನ್ನ ಕನ್ನಡಪ್ರಭವನ್ನೊಮ್ಮೆ ಓದಿಕೊಳ್ಳಿ...


ರಾತ್ರಿ ಮೊದಲನೇ ಯಾಮದಲ್ಲಿ ಅಂದರೆ ಸಂಜೆ ೬ರಿಂದ ೯ರವರೆಗೆ ಸಂಭೋಗ ನಡೆಸಿದರೆ, ಅದೃಷ್ಟಹೀನರು, ಅಲ್ಪಾಯುಷಿಗಳು, ದುಷ್ಟರು, ತಾಮಸ ಗುಣವುಳ್ಳವರು ಜನಿಸುವರು.


ಎರಡನೇ ಯಾಮದ ಸಂಭೋಗದಿಂದ ಅಂದರೆ ರಾತ್ರಿ ೯ರಿಂದ ೧೨ರವರೆಗಿನ ಸಂಭೋಗದಿಂದ ಮಧ್ಯಮ ಆಯುಷ್ಯವುಳ್ಳವರು, ದರಿದ್ರರು, ಅನಾರೋಗ್ಯದಿಂದ ನರಳುವವರು, ಮತಿಹೀನರು, ದುರದೃಷ್ಟವಂತರು ಜನಿಸುವರು.


ಮೂರನೇ ಯಾಮದ ಸಂಭೋಗದಿಂದ ಅಂದರೆ ರಾತ್ರಿ ೧೨ರಿಂದ ೩ ಗಂಟೆಯವರೆಗಿನ ಸಂಭೋಗದಿಂದ ಪೂರ್ಣ ಆಯುಷ್ಯವಂತರು, ಧರ್ಮನಿಷ್ಠರು, ಐಶ್ವರ್ಯವಂತರು, ವಿವೇಕಶಾಲಿಗಳು, ರೂಪವಂತರು, ರಜೋಗುಣ-ಸತ್ಯಗುಣಪ್ರಧಾನರು ಜನಿಸುವರು.


ನಾಲ್ಕನೇ ಯಾಮದ ಸಂಭೋಗದಿಂದ ಅಂದರೆ ರಾತ್ರಿ ೩ರಿಂದ ೬ ಗಂಟೆಯವರೆಗಿನ ಸಂಭೋಗದಿಂದ ವಿದ್ಯಾವಂತರು, ಶಾಂತಸ್ವಭಾವದವರು, ಧೈರ್ಯ ಸಾಮರ್ಥ್ಯವುಳ್ಳವರು, ಅದೃಷ್ಟಶಾಲಿಗಳು, ವೈದಿಕ ಜ್ಞಾನವುಳ್ಳವರು, ವೇದಪಾರಂಗತರು, ಐಶ್ವರ್ಯವಂತರು, ಸತ್ವಗುಣ ಪ್ರಧಾನರು ಜನಿಸುವರು.


ಒಳ್ಳೆ ಮಕ್ಕಳು ಹುಟ್ಟಬೇಕೆಂದರೆ ಸೋಮವಾರ, ಬುಧವಾರ, ಗುರುವಾರ, ಶುಕ್ರವಾರಗಳಂದೇ ಸಂಭೋಗ ನಡೆಸಬೇಕು.


ಸಂಜೆ ೬ ಗಂಟೆಯಿಂದ ರಾತ್ರಿ ೧೨ ಗಂಟೆಯವರೆಗೆ ದಂಪತಿಗಳು ಎಷ್ಟೇ ಮೂಡ್ ಬಂದರೂ ಸೇರಲೇಕೂಡದು. ಆಮೇಲೆ ನೋಡಿ, ಪ್ರಶಸ್ತ ಮುಹೂರ್ತ. ಭಾನುವಾರ, ಮಂಗಳವಾರ, ಶನಿವಾರಗಳು ಪೂರ್ಣ ರಜಾಕಾಲ.

ಇದೆಲ್ಲವನ್ನು ಹೇಳುತ್ತಾ ಇರುವುದು ಇವತ್ತಿನ ಕನ್ನಡಪ್ರಭ. ಆ ಪತ್ರಿಕೆಯ ಭವಿಷ್ಯ ಎಂಬ ಸಪ್ಲಿಮೆಂಟು ಇಂಥ ಬೋಧನೆಗಳನ್ನು ಉಣಬಡಿಸುತ್ತಿದೆ. ವೈದಿಕ ಸಂಸ್ಕೃತಿಯಲ್ಲಿ ದಾಂಪತ್ಯ ರಹಸ್ಯ ಎಂಬುದು ಲೇಖನದ ಶೀರ್ಷಿಕೆ. ಬರೆದವರು ಕೆ.ಎನ್.ಸಂಜೀವಮೂರ್ತಿ ಎಂಬ ಮಹಾನುಭಾವರು.

ಇದು ಎಷ್ಟು ಅಮೂಲ್ಯ ದಾಖಲೆಯೆಂದರೆ ಹೊಸದಾಗಿ ಮದುವೆಯಾದವರಿಗೆ ಸಾಕ್ಷಾತ್ ಧರ್ಮಗ್ರಂಥವಿದ್ದಂತೆ. ದಂಪತಿಗಳು ಇದನ್ನು ಕೋಷ್ಟಕ ರೂಪದಲ್ಲಿ ತಯಾರು ಮಾಡಿ ಮಲಗುವ ಕೋಣೆಯಲ್ಲಿ ಅಂಟಿಸಿಕೊಳ್ಳುವುದು ಒಳ್ಳೆಯದು. ಒಂದು ಸಾಫ್ಟ್‌ವೇರ್ ತಯಾರಿಸಿ ಕಂಪ್ಯೂಟರ್‌ನಲ್ಲಿ ಹೂಡಿ ಸುಮ್ನೆ ಟೈಮ್ ಎಂಟರ್ ಮಾಡಿದರೆ ಹುಟ್ಟು ಮಗು ಎಂಥದ್ದಾಗುತ್ತದೆ ಎಂಬುದನ್ನು ಕಂಡುಹಿಡಿಯುವಂತಾಗಬೇಕು. ನಂತರ ಸಂಭೋಗ ಮಾಡಬೇಕೋ ಬೇಡವೋ ಎಂದು ಡಿಸೈಡ್ ಮಾಡಿಕೊಳ್ಳಬಹುದು. ಮೊಬೈಲ್‌ಗೆ, ಐಪಾಡ್‌ಗೆ ಫೀಡ್ ಮಾಡಿ, ಪ್ರಶಸ್ತ ಸಮಯಕ್ಕೆ ಅವುಗಳೇ ಸರಿಯಾಗಿ ಅಲಾರಾಂ ಹೊಡೆಯುವಂತೆ ಮಾಡಿದರೂ ನಡೆಯುತ್ತದೆ. ಹೇಗೂ ಇದು ಎಲ್ಲರಿಗೂ ಅನ್ವಯಿಸುವುದರಿಂದ ಕೂಡುವುದಕ್ಕೆ ಪ್ರಶಸ್ತ ಸಮಯ ಬಂದಾಗ ಫೇಸ್‌ಬುಕ್‌ನ ಸ್ಟೇಟಸ್ ಮೇಲೆ ಅದನ್ನು ಅಪ್‌ಲೋಡ್ ಮಾಡಿದರೆ ಎಲ್ಲ ಗೆಳೆಯರಿಗೂ ಅನುಕೂಲವಾಗುತ್ತದೆ. ಬ್ಲಾಗು, ವೆಬ್‌ಸೈಟುಗಳಲ್ಲೂ ಕೂಡಬೇಕಾದ ಸಮಯದ ಒಂದು ಕ್ಯಾಲೆಂಡರ್ ತಯಾರಿಸಿ ಅಂಟಿಸಿಕೊಂಡರೆ ಓದುಗರಿಗೂ ಮಹದುಪಕಾರವಾಗುತ್ತದೆ.

ಯಾರಾದ್ರೂ ಅದೃಷ್ಟಹೀನರೆಂದು ತಮ್ಮನ್ನು ತಾವು ಹಳಿದುಕೊಳ್ಳುತ್ತಿದ್ದರೆ ಅದನ್ನು ನಿಲ್ಲಿಸಿ, ಬದಲಾಗಿ ನಿಮ್ಮ ಅಪ್ಪ-ಅಮ್ಮಂಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳಿ. ಸೇರಬಾರದ ಸಮಯಕ್ಕೆ ಸೇರಿದ್ದರಿಂದಲೇ ಅವರು ಅದೃಷ್ಟಹೀನರಾಗಿದ್ದು! ಅದೇ ರೀತಿ ನೀವು ಐಶ್ವರ್ಯವಂತರಾಗಿದ್ದರೆ ಅದಕ್ಕೆ ನೀವು ಕಾರಣರಲ್ಲ, ನಿಮ್ಮ ಅಪ್ಪ-ಅಮ್ಮ ಸೇರಿದ ಘಳಿಗೆ ಕಾರಣ. ಹೀಗಾಗಿ ಅಪ್ಪ-ಅಮ್ಮಂಗೆ ಒಂದು ಥ್ಯಾಂಕ್ಸ್ ಹೇಳಿ.

ಯಾಕೆ ಸಂಜೆಯಿಂದ ರಾತ್ರಿ ೧೨ರವರೆಗೆ ಕೂಡಲೇಬಾರದು. ಕೂಡಿದರೆ ಯಾಕೆ ಅದೃಷ್ಟಹೀನ, ದರಿದ್ರ, ಮತಿಹೀನ, ಅಲ್ಪಾಯುಷಿ, ದುಷ್ಟ, ತಾಮಸ ಗುಣದ ಮಕ್ಕಳು ಹುಟ್ಟುತ್ತಾರೆ? ಏನಾದರೂ ಈ ಲೇಖನದಲ್ಲಿ ವೈಜ್ಞಾನಿಕ ಸಮರ್ಥನೆಗಳು ಇವೆಯಾ?

ಖಂಡಿತಾ ಹಾಗೆಲ್ಲ ಪ್ರಶ್ನೆ ಕೇಳಕೂಡದು. ಇದೆಲ್ಲ ವೈದಿಕ ಸಂಸ್ಕೃತಿಯಲ್ಲಿ ಇದೆಯಂತೆ. ಹಾಗೆ ಇದ್ದ ಮೇಲೆ ಯಾರೂ ಅದನ್ನು ಪ್ರಶ್ನಿಸಕೂಡದು. ಋಷಿಮೂಲ, ನದಿಮೂಲ ಕೇಳಬಾರದು. ಪ್ರಶ್ನಿಸಿದವರ ತಲೆ ಸಾವಿರ ಹೋಳಾಗಿ ಹೋಗಲಿ.

ಇಷ್ಟೆಲ್ಲ ಹೇಳಿದ ಮೇಲೂ ಕೊನೆಗೂ ಉಳಿಯುವ ಪ್ರಶ್ನೆ:

ಪತ್ರಕರ್ತರು ಅಪ್‌ಡೇಟ್ ಆಗೋದು ಅಂದ್ರೆ ಹಿಂಗೇನಾ?

ನೋಡ್ತಾ ಇರಿ, ಏನೇನ್ ಮಾಡ್ತೀವಿ ಅಂತಿದ್ರಲ್ಲ, ಇದನ್ನೇ ಮಾಡೋದಕ್ಕೆ ಹೊರಟಿದ್ದಾ ನೀವು?

ಹೀಗೂ ಉಂಟೆ?

31 comments:

  1. Hope this is the effect of Complete freedom given to media in democratic country

    ReplyDelete
  2. (ಪ್ರಾಯಶಃ ) ಮೀಡಿಯಾಗಳಲ್ಲಿ ಸಾಮಾಜಿಕ ನ್ಯಾಯ ಎಂಬ ತಲೆಬರಹದ ನೂತನ ಆಯಾಮ !

    -ಪ.ರಾಮಚಂದ್ರ,
    ರಾಸ್ ಲಫ್ಫಾನ್, ಕತಾರ್

    ReplyDelete
  3. ROFL :D...

    cant stop laughing.. ha haaha..

    liked the sarcasm in last line
    --------------
    ನೋಡ್ತಾ ಇರಿ, ಏನೇನ್ ಮಾಡ್ತೀವಿ ಅಂತಿದ್ರಲ್ಲ, ಇದನ್ನೇ ಮಾಡೋದಕ್ಕೆ ಹೊರಟಿದ್ದಾ ನೀವು?

    ReplyDelete
  4. ಅವ್ರು ಹೀಗೆಲ್ಲ್ಲ ಮಾಡೋಕೆ ಹೊರಟರೆ ನೋಡೋದಾದ್ರೂ ಹೇಗೆ? ಅವ್ರು ಏನಾದರೂ ಮಾಡ್ಲಿ, ಹೀಗೆಲ್ಲ ಮಾಡೋದು ಬೇಡ ಅಲ್ವೇ? ಯಾಕೆ ಹೀಗಾಯ್ತು ಖಡಕ್ ಖಾದ್ರಿಯವರಿದ್ದ ಕನ್ನಡಪ್ರಭ? ಕನ್ನಡಪ್ರಭದಂಥ ಜವಾಬ್ದಾರಿಯುತ ಪತ್ರಿಕೆಗಳೇ ಹೀಗೆ ಮೂಡನಂಬಿಕಗಳನ್ನು ಬಿತ್ತಲಾರ0ಭಿಸಿದರೆ ಹೇಗೆ? ಟಿವಿ ಚಾನ್ನೆಲ್ ಗಳೂ ಇದೇ ತೆರನಾದ ಕಾರ್ಯಕ್ರಮಗಳನ್ನು ಹೆಚ್ಚಾಗಿ ಬಿತ್ತರಿಸುತ್ತಿರುವುದು ಶೋಚನೀಯ.

    ReplyDelete
  5. patrikegalanna kondu kollo pfravruttige oduva abyasakke virama hakode vasi anistide. e mattakke patrikaranga hoguttiruvudu nachikegedina sangathi.

    ReplyDelete
  6. kannada prabha's new team is doing the same thing wht they used to do in VK..
    copy paste or translate the blogs in newspaper without mentioning the blog name..


    http://kpcolumn.blogspot.com/2011/02/blog-post_24.html
    in today's news paper

    ReplyDelete
  7. ಇನ್ನು ಅವರು 'ಏನೇನು ಮಾಡ್ತಾರೆ' ಅನ್ನೋದರ ಕುರಿತು ಕುತೂಹಲದ ಅಗತ್ಯವಿಲ್ಲ. ಹೆಚ್ಚೆಂದರೆ ಪ್ರಸಾರ ಸಂಖ್ಯೆ ಹೆಚ್ಚಾಗಬಹುದು, ಕಮರ್ಶಿಯಲ್ಲಾಗಿ ಸಕ್ಸಸ್ ಆಗಬಹುದು ಅಷ್ಟೆ. ಅದರಿಂದ ಕನ್ನಡ ಪತ್ರಕೋದ್ಯಮಕ್ಕೆ-ನಾಡಿನ ಜನರಿಗೆ ಆಗುವುದಾದರು ಏನು? ಬರೀ ಸೊನ್ನೆ.

    ReplyDelete
  8. ನನ್ನ ಪ್ರಕಾರ ಭಟ್ಟರಿಗೆ ಸಪ್ಲಿಮೆಂಟ್ ಪೇಪರ್ ಮೇಲೆ ಇಂಟ್ರೆಸ್ಟ್ ಇಲ್ಲ , ಅದು ನೋಡೋದಕ್ಕೂ ಚೆನ್ನಾಗಿಲ್ಲ ಇಂಟ್ರೆಸ್ಟಿಂಗ್ ಆಗು ಇಲ್ಲ

    ಸ್ವಲ್ಪ ಕಾಲಾವಕಾಶ ಕೊಡೋಣ, ಅವರು ಇದರಲ್ಲೂ ಸಹ ಬದಲಾವಣೆ ತರಬಹುದು.

    Wait & see !!

    ReplyDelete
  9. ಹ್ಹ ಹ್ಹ Soo funny....

    ReplyDelete
  10. Such articles are just bullshit .. However we have a goood no.of gullible readers strictly following these nasty & nonsensical statements!Its time newspapers stopped airing such sort of outdated stuff .

    ReplyDelete
  11. ನೋಡ್ತಾ ಇರಿ, ಏನೇನ್ ಮಾಡ್ತೀವಿ ಅಂತಿದ್ರಲ್ಲ, ಇದನ್ನೇ ಮಾಡೋದಕ್ಕೆ ಹೊರಟಿದ್ದಾ ನೀವು? ಸೂಪರ್ ಲೈನ್. ಹ್ಹ ಹ್ಹ...ಹ್ಹ...

    ReplyDelete
  12. ಅಯ್ಯಪ್ಪಾ! ಇಂತಹ ಅತಾರ್ಕಿಕ ವಿಷಯಗಳನ್ನು ದಿನಪತ್ರಿಕೆಯೊಂದರಲ್ಲಿ ಪ್ರಕಟಿಸುವ ಧೈರ್ಯ ತೋರಿಸಿದ್ದಾರಲ್ಲಾ ಅವರಿಗೆ ಏನನ್ನೋಣ!
    ನಿಮ್ಮ ಲೇಖನದ ಕಡೆಯಲ್ಲಿ ಇರುವ ವ್ಯಂಗ್ಯೋಕ್ತಿ ಸದರಿ ಸಂಪಾದಕರಿಗೆ ಬೇಗ ತಲುಪಲಿ ಎಂದು ಹಾರೈಸುವೆ.

    ReplyDelete
  13. @Anonymous
    I'm Krishnaprasad, The person who wrote the column "Guru Brahma ....". I also own the Blog -http://kpcolumn.blogspot.com. For your information I had sent this write-up to News Editor of Kannadaprabha. They have not done copy paste act. They have published it on my request.

    ReplyDelete
  14. best example for Brahminical bullshit agendas... still how many years u all media wants to foool the common people....?

    ReplyDelete
  15. ಹೀಗೆ ಬಂದಿದ್ದಾರಲ್ಲಿ ಏನು ತಪ್ಪಿದೆ? ಇದು ಕನ್ನಡ ಪ್ರಭ ಹೊರಡಿಸಿರೋ ಫರ್ಮಾನೆನಲ್ಲ. ಇದು ಜ್ಯೋತಿಷದ ವಿಚಾರ. ಯಾರೋ ಮಹರ್ಷಿಗಳು ಬರೆದಿದ್ದನ್ನ ಮತ್ತೊಮ್ಮೆ ಅಚ್ಚಿಸಿದ್ದಾರೆ. ಅವರವರ ನಂಬಿಕೆಗೆ ಬಿಟ್ಟ ವಿಚಾರ. ವೈದಿಕ ಚಿಂತನೆಗಳನ್ನ ಯಾಕೆ ಬಿಡಬೇಕು? ಇವುಗಳನ್ನ ಧಿಕ್ಕರಿಸುವವರಿರೋ ಹಾಗೆ ಆಚರಿಸುವವರು ಇದಾರೆ. ಪತ್ರಿಕೆ ಯಾರೋ ಒಂದು ವರ್ಗಕ್ಕೆ ಮಾಡೋಕೆ ಆಗಲ್ಲ. ಹಾಗೆ ಪತ್ರಿಕೆ ಹಿಡ್ಕೊಂಡೆ ಯಾರೂ ಮಲಾಗೊ ಕೋಣೆಗೆ ಹೋಗಲ್ಲ. ಎಲ್ಲವೂ ವೈಜ್ಞಾನಿಕವಾಗಿ ಇದ್ದರಷ್ಟೇ ಸರಿಯೇ? ಅದು ಸಾರ್ವಕಾಲಿಕವೇ? ನಿಮಗೆ ಋಜುವಾತು ಬೇಕಾ? ಇತ್ತೀಚಿನ ವರೆಗೆ ವಿಜ್ಞಾನವೆ ಒಪ್ಪಿದ್ದ ಪ್ಲುಟೊ ಗ್ರಹದ ಅಸ್ತಿತ್ವ ಏನಾಯ್ತು? ಯಾವುದೇ ಧೋರಣೆಯ ಅತಿರೇಕ ಸರಿಯಲ್ಲ. ಹಿಂದೂ ಧರ್ಮದ ಪ್ರಕಾರ ಗರ್ಭಾದಾನಕ್ಕೂ ಮಹತ್ವದ ಸ್ಥಾನ ಇದೆ. ನಂಬುವವರ ನಂಬಿಕೆಗೆ ಬಿಟ್ಟದ್ದು. ಯಾರು ಉಪದೇಶಕಾರರು ಬೇಕಾಗಿಲ್ಲ. ಕನ್ನಡ ಪ್ರಭ ಲೇಖನ ಅನುಸರಿಸದವರನ್ನ ಖಂಡಿತ ಶಿಕ್ಷೆಗೆ ಗುರಿಪಡಿಸೋದಿಲ್ಲ. ನಾವೇನೂ ತಾಲೀಬಾನ್ ಆಡಳಿತದಲ್ಲಿಲ್ಲ. ಜಗತ್ತಿಗೆ ಕಾಮಸೂತ್ರ ಗ್ರಂಥ ನೀಡಿದ ದೇಶ ನಮ್ಮದು.

    ReplyDelete
  16. i think that article was coming before the joining of Vteam. You no need blame them, only thing is you can suggest them to stop that article.

    ReplyDelete
  17. People who know VB and is team (TR, RB and PS)and their brand of journalism will never be surprised that they thought it fit to publish....

    ReplyDelete
  18. Please do not blame the editor and his team for carrying this article. It was their parents' mistake after all!

    ReplyDelete
  19. ಹ್ಹಹ್ಹಹ್ಹ.... ಇನ್ನೂ ಏನ್ ಏನ್ ಮಾಡ್ತಾರೋ ನೋಡ್ತಾ ಇರೋಣ ಬಿಡಿ.

    ReplyDelete
  20. ಹೀಗೆ ಬಂದಿರುವದರಲ್ಲಿ ಏನು ಕೂಡ ತಪ್ಪಿಲ್ಲ... ಎಲ್ಲವನ್ನು "ತಾರ್ಕಿಕ"/"ಅತಾರ್ಕಿಕ", "ವೈಜ್ಞಾನಿಕ"/"ಅವೈಜ್ಞಾನಿಕ" ಎಂದು ವಿಂಗಡಿಸಿ ಪ್ರಕಟಿಸಲು ಸಾಧ್ಯವಿಲ್ಲ ಎಂದು ನನ್ನ ಅನಿಸಿಕೆ.... ಹಾಗೆ ಪತ್ರಿಕೆಯನ್ನು ಯಾವುದೊ ಒಂದು ವರ್ಗದ ಜನರಿಗೆ ಬೇಕಾಗುವ ಹಾಗೆ ಮುದ್ರಿಸುವುದು ಸರಿಯಲ್ಲ.... ಪತ್ರಿಕೆಯಲ್ಲಿ ಬಂದಂತ ವಿಚಾರವನ್ನು ಪರಿಗಣಿಸುವುದು ಅಥವಾ ಬಿಡುವದು ಓದುಗರಿಗೆ ಬಿಟ್ಟಿದ್ದು....

    ReplyDelete
  21. the writers mind is conditioned, he cannot enjoy each every moment of sex, it is bogus, battare nimma nutana entry ee reethi baribedi swamy

    ReplyDelete
  22. ಯಾಕೆ ಹೀಗಾಯಿತು?? ನಿರೀಕ್ಷೆಗಳೆಲ್ಲಾ ಹುಸಿಯಾಗುತ್ತಿವೆಯಾ?

    ReplyDelete
  23. ಛೆ! ಹೀಗೂ ಉ೦ಟೇ..............????????

    ReplyDelete
  24. ಇನ್ನು ಅವರು 'ಏನೇನು ಮಾಡ್ತಾರೆ' ಅನ್ನೋದರ ಕುರಿತು ಕುತೂಹಲದ ಅಗತ್ಯವಿಲ್ಲ. ಹೆಚ್ಚೆಂದರೆ ಪ್ರಸಾರ ಸಂಖ್ಯೆ ಹೆಚ್ಚಾಗಬಹುದು, ಕಮರ್ಶಿಯಲ್ಲಾಗಿ ಸಕ್ಸಸ್ ಆಗಬಹುದು ಅಷ್ಟೆ. ಅದರಿಂದ ಕನ್ನಡ ಪತ್ರಕೋದ್ಯಮಕ್ಕೆ-ನಾಡಿನ ಜನರಿಗೆ ಆಗುವುದಾದರು ಏನು? ಬರೀ ಸೊನ್ನೆ. 100% TRUE

    ReplyDelete
  25. ಒಳ್ಳೆ ತಮಾಷೆಯಾಗಿದೆ.

    ReplyDelete
  26. ಒಳ್ಳೆಯದು. ಇಂಥಾವನ್ನೆಲ್ಲ ಪ್ರಶ್ನಿಸಲೇಬೇಕು. ಹಾಗೆಯೇ "ಗೌರವರ್ಣದ ಚರ್ಮಕ್ಕಾಗಿ ಈ ಸೋಪು ಉಪಯೋಗಿಸಿ", "ನಿನ್ನೆ ರಾತ್ರಿ ನಡೆದ ಅವಗಢ ತಡೆಯಲು ಈ ಮಾತ್ರೆ ತಿಂದು ನಿಶ್ಚಿಂತೆಯಾಗಿರಿ", "ತಲೆನೋವಿಗೆ ಸುಲಭ ಪರಹಾರ ಈ ಮಾತ್ರೆ", "ನಿಮ್ಮ ಬಟ್ಟೆಯ ಕಠಿಣ ಕೊಳೆಯನ್ನು ತೆಗೆಯುತ್ತದೆ" ಮುಂತಾದ "ವೈಜ್ನಾನಿಕ" ಜಾಹೀರಾತುಗಳ ವಿರುಧ್ಧವೂ ನಿಮ್ಮ ಕತ್ತಿಯನ್ನು ಝುಳಪಿಸುತ್ತೀರೆಂದು ಆಶಿಸುತ್ತೇನೆ.

    ReplyDelete
  27. ಧನ ಸಂಪಾದನೆ ಮತ್ತು ಜನಪ್ರಿಯತೆಗಳಿಸಲು ಇಂತಹ ಲೇಖನಗಳನ್ನು ಪ್ರಕಟಿಸಲು ಹೊರಟ ಮಾಧ್ಯಮಗಳ ನೈತಿಕತೆಗೊಂದು ಸವಾಲು...

    ReplyDelete
  28. lekhaka ರಾತ್ರಿ ೯ರಿಂದ ೧೨ರವರೆಗಿನ madhyadalli huttirabeku...???

    ReplyDelete
  29. THIS TYPE OF BLIND BELIEFS ARE NECESSARY , IT INDICATING THAT TO IMAGINE OUR MEDIA FREEDOM.IS IT THE IMPROVING ITS PUBLICITY THROUGH THIS...?

    ReplyDelete
  30. whv great discovery

    ReplyDelete