Wednesday, May 4, 2011

ಲಾಡೆನ್ ಹತ್ಯೆ: ಪರಶುರಾಮ್ ಕಲಾಲ್ ಅವರ ಪ್ರಶ್ನೆಗಳು...

ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಹತ್ಯೆ ಕುರಿತು ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಈ ಹತ್ಯೆಯ ಚರ್ಚೆಯ ನಡುವೆಯೇ ಮರೆತುಹೋಗಬಹುದಾದ ವಿಷಯಗಳ ಕುರಿತು ಪತ್ರಕರ್ತ ಪರಶುರಾಮ್ ಕಲಾಲ್ ಈ ಲೇಖನ ಬರೆದಿದ್ದಾರೆ. ಹೊಸಪೇಟೆಯವರಾದ ಕಲಾಲ್ ಸಾಮಾಜಿಕ ಅಸಮಾನತೆಗಳ ವಿರುದ್ಧ ನಿರಂತರ ಹೋರಾಡಿಕೊಂಡರು ಬಂದವರು.-ಸಂ

ಪರಶುರಾಮ್ ಕಲಾಲ್
ಬಿನ್ ಲಾಡೆನ್ ಹತ್ಯೆಯ ಸುದ್ದಿಯನ್ನು ಎಲ್ಲಾ ಪತ್ರಿಕೆಗಳು ತನಿಖಾ ವರದಿ ರೀತಿ ಲಂಬಿಸಿ ಬರೆದಿವೆ. ಟಿ.ವಿ. ಸುದ್ದಿ ಮಾಧ್ಯಮಗಳಂತೂ ಪತ್ತೆದಾರಿ ಕಥೆಯನ್ನಾಗಿ ಲಂಬಿಸಿ ಎಳೆದು ಹಾಕಿವೆ. ಭಯೋತ್ಪಾದಕನ ಅಂತ್ಯ ಹೇಗಾಯಿತು ಎನ್ನುವದರಿಂದ ಹಿಡಿದು ಪಾಕಿಸ್ತಾನದ ಪಾತ್ರದವರೆಗೆ, ಅಮೆರಿಕಾದ ಸಿಐಎ ಯೋಜಿತ ತನಿಖೆಯ ಕುರಿತು ಸಿಐಡಿ ಧಾರವಾಹಿಯನ್ನಾಗಿಸಿ ಬಿಟ್ಟಿವೆ. ಈ ಸಂದರ್ಭದಲ್ಲಿ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು ಮರೆಯಾಗಿವೆ ಅಥವಾ ಮಸುಕಾಗಿ ಬಿಟ್ಟಿವೆ.

ಯಾರು ಭಯೋತ್ಪಾದಕರು? ಅಮೆರಿಕಾ ಹೇಳಿದ ಮೇಲೆಯೇ ನಾವು ಅವರನ್ನು ಭಯೋತ್ಪಾದಕ ಅನ್ನಬೇಕಾ? ಅಸಲಿ ಈ ಬಿನ್ ಲಾಡೆನ್ ಒಬ್ಬ ಭಯೋತ್ಪಾದಕನಾಗಿ ರೂಪಗೊಂಡಿದ್ದು ಹೇಗೆ? ಹೀಗೆ ರೂಪಿಸಿದವರು ಯಾರು? ಇದನ್ನು ಒಂದಿಷ್ಟು ಪರಿಶೀಲನೆ ಮಾಡುವುದು ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮಾಧ್ಯಮಗಳ ಕರ್ತವ್ಯವಾಗಿತ್ತು. ಅದನ್ನು ಅವುಗಳು ಅಷ್ಟು ಸರಿಯಾಗಿ ಪಾಲಿಸಿಲ್ಲ ಎನ್ನುವುದೇ ಈ ಬರಹದ ಹಿಂದಿರುವ ವಿಷಾದವಾಗಿದೆ.

ಸೋವಿಯತ್ ಒಕ್ಕೂಟ ಅಖಂಡವಾಗಿದ್ದಾಗ ಅಲ್ಲಿಯ ಚೆಚೆನ್ಯ ಪ್ರಾಂತದಲ್ಲಿ ಭಯೋತ್ಪಾದನೆ ನಡೆಸಲು ಅಮೆರಿಕಾ ರೂಪಿಸಿದ ವ್ಯಕ್ತಿಯೇ ಈ ಬಿನ್ ಲಾಡೆನ್ ಆಗಿದ್ದ. ಅಪಘಾನಿಸ್ತಾನದಲ್ಲಿ ಸೊವಿಯತ್ ದೇಶದ ಸೈನ್ಯವನ್ನು ಹಿಂದಕ್ಕೆ ಕಳಿಸಲು ತಾಲಿಬಾನಿಗಳಿಗೆ ಆಪಾರ ಪ್ರಮಾಣದ ಶಸ್ತ್ರಾಗಳನ್ನು ಹಾಗೂ ಹಣವನ್ನು ಸಹಾಯ ಮಾಡಿದ ಅಮೆರಿಕಾ ಇದೇ ಬಿನ್‌ಲಾಡೆನ್ ಹಾಗೂ ತಾಲಿಬಾನಿಗಳನ್ನು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರು ಎಂದು ಕರೆದಿತ್ತು. ಬಹಿರಂಗವಾಗಿಯೇ ಇವರನ್ನು ಬೆಂಬಲಿಸಿತ್ತು. ಇರಾನ್-ಇರಾಕ್ ನಡುವಿನ ೧೩ ವರ್ಷಗಳ ಯುದ್ಧದಲ್ಲಿ ಸದ್ದಾಂ ಹುಸೇನ್ ಅವರನ್ನು ಸಹ ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳಿತ್ತು. ಯಾವಾಗ ಸದ್ದಾಂ ಹುಸೇನ್ ಅಮೆರಿಕಾದ ವಿರುದ್ಧ ಸೆಣೆಸುತ್ತಾ ಯುರೋ ಕರೆನ್ಸಿ ಮೂಲಕ ತೈಲ ಮಾರಾಟಕ್ಕೆ ಮನಸ್ಸು ಮಾಡಿದೊಡನೆ ಭಯೋತ್ಪಾದಕನಾಗಿ ಬಿಟ್ಟ. ಆತನ ರಾಷ್ಟ್ರದಲ್ಲಿ ಪರಮಾಣು ಬಾಂಬ್‌ಗಳಿವೆ ಎಂದು ಅಲ್ಲಿ ಯುದ್ಧ ನಡೆಸಿದ ಅಮೆರಿಕಕ್ಕೆ ಇರಾಕ್‌ನಲ್ಲಿ ಯಾವ ಬಾಂಬ್ ಕಾಣಿಸಲಿಲ್ಲ. ಅದರ ಬದಲು ತೈಲ ಗಣಿಗಳೆಲ್ಲಾ ಅಮೆರಿಕಾ ತೈಲ ಕಂಪನಿಗಳು ವಶ ಪಡೆಸಿಕೊಳ್ಳಲು ಸಾಧ್ಯವಾಯಿತು. ಇವತ್ತಿಗೂ ಇರಾಕ್ ಬಿಟ್ಟು ಅಮೆರಿಕಾ ಸೈನ್ಯ ಹೊರಗೆ ಹೋಗಿಲ್ಲ. ಈ ಯುದ್ಧದಲ್ಲಿ ೧೫ ಲಕ್ಷ ಜನರು ಹತರಾಗಿದ್ದಾರೆ. ಈ ಭಯೋತ್ಪಾದನೆಗೆ ಏನನ್ನಬೇಕು?

ಜಗತ್ತಿನ ಸಾರ್ವಭೌಮನೆಂದು ಭಾವಿಸಿಕೊಂಡಿರುವ ಅಮೆರಿಕಾದ ಮುಖ್ಯ ಗುರಿ ಲಾಭಬಡುಕತನ. ಯುದ್ಧ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವ ಕಂಪನಿಗಳು ಹಾಗೂ ತೈಲ ಕಂಪನಿಗಳ ಲಾಭಕೋರತನಕ್ಕೆ ಪೂರಕವಾಗಿಯೇ ಅಮೆರಿಕದ ನೀತಿಗಳು ರೂಪುಗೊಂಡಿವೆ. ಪಾಕಿಸ್ತಾನ ಹಾಗೂ ಭಾರತಗಳ ನಡುವೆ ವೈರತ್ವ ಕಡಿಮೆಯಾಗದಂತೆ ನೋಡಿಕೊಂಡ ದೇಶ ಅಮೆರಿಕ. ಅಮೇರಿಕಾದವರೇ ಆದ ನೋಮ್ ಚೋಮಸ್ಕಿ ಹೇಳುವ ಪ್ರಕಾರವೇ ಅಮೆರಿಕಾ ದೇಶವು ಜಗತ್ತಿನ ದೊಡ್ಡ ಭಯೋತ್ಪಾದಕ ರಾಷ್ಟ್ರ. ಭಯೋತ್ಪಾದನೆಯ ಬಗ್ಗೆ ಮಾತನಾಡುವಾಗ ಇದನ್ನು ನಾವು ಮರೆಯಬಾರದು. ದಕ್ಷಿಣ ಆಫ್ರಿಕಾದಲ್ಲಿ ಸ್ವಾತಂತ್ರ್ಯ ಹೋರಾಟ ನಡೆಸಿದ ನೆಲ್ಸನ್ ಮಾಂಡೆಲ್ ಅವರನ್ನು ಭಯೋತ್ಪಾದಕ ಎಂದು ಕರೆದಿದ್ದು ಇದೇ ಅಮೆರಿಕಾ. ನಂತರ ರಾಗ ಬದಲಿಸಿತು.

ಜಗತ್ತಿನ ೧೩೫ ರಾಷ್ಟ್ರಗಳಲ್ಲಿ ೧೭೫ಕ್ಕೂ ಅಧಿಕ ಸೈನಿಕ ನೆಲೆಗಳನ್ನು ಅಮೆರಿಕಾ ಹೊಂದಿದೆ. ಮಧ್ಯ ಏಷಿಯಾದಲ್ಲಿ ಚೀನಾ, ಭಾರತ, ಪಾಕಿಸ್ತಾನ, ಬರ್ಮಾ ಇತರೆ ರಾಷ್ಟ್ರಗಳನ್ನು ನಿಯಂತ್ರಣದಲ್ಲಿಡಲು ಈ ಭಾಗದಲ್ಲಿ ಸೈನಿಕ ನೆಲೆಯನ್ನು ಹೊಂದಲು ಅದು ನಡೆಸಿರುವ ಪ್ರಯತ್ನಕ್ಕೂ ದೊಡ್ಡ ಇತಿಹಾಸವೇ ಇದೆ. ಅದರ ಭಾಗವಾಗಿಯೇ ಇಂತಹ ಬೆಳವಣಿಗೆಗಳನ್ನು ಗಮನಿಸಬೇಕು. ಎಲ್ಲಾ ದೇಶಗಳ ಆಂತರಿಕ ವ್ಯವಸ್ಥೆಯಲ್ಲಿ ಕೈಯಾಡಿಸಿ, ತನ್ನ ಕೈ ಬೊಂಬೆ ಸರ್ಕಾರಗಳನ್ನು ಕುಳ್ಳ್ಳಿರಿಸುವ ಅದರ ಪ್ರಯತ್ನ, ಸಿಐಎ ಮೂಲಕ ನಡೆಸುವ ಕುತಂತ್ರ ಜಗಜ್ಜಾಹೀರವಾಗಿವೆ. ಭಾರತದಲ್ಲೂ ಬ್ರಹ್ಮಪುತ್ರ ಪ್ರಾಜೆಕ್ಟ್ ಅನ್ನು ಸಿಐಎ ರೂಪಿಸಿತ್ತು. ಈಶಾನ್ಯ ರಾಜ್ಯಗಳು ಸ್ವತಂತ್ರ್ಯ ರಾಷ್ಟ್ರಗಳೆಂದು ಘೋಷಿಸಿಕೊಳ್ಳಲು ಭಯೋತ್ಪಾದಕ ಚಟುವಟಿಕೆಗಳಿಗೆ ಹಣ, ಶಸ್ತ್ರಾಸ್ತ್ರಗಳನ್ನು ನೀಡಿತ್ತು. ಜಮ್ಮು ಕಾಶ್ಮೀರದಲ್ಲೂ ಇದೇ ಕೆಲಸ ಮಾಡಿತ್ತು ಈ ಬಗ್ಗೆ ಕೂಡಾ ನಾವು ಪರಿಶೀಲನೆ ನಡೆಸುವುದು ಇವತ್ತಿನ ಅಗತ್ಯವಾಗಿದೆ.

ಭಾರತ ದೇಶದಲ್ಲಿ ಏನೇ ಭೃಷ್ಟಾಚಾರ, ಸ್ವಜನಪಕ್ಷಪಾತ ನಡೆಯುತ್ತಿದ್ದರೂ ಇಲ್ಲಿ ಇನ್ನೂ ಪ್ರಜಾಪ್ರಭುತ್ವ ಉಸಿರಾಡುತ್ತಿದೆ. ಸ್ವಲ್ಪ ಉಬ್ಬಸರೋಗಕ್ಕೆ ತುತ್ತಾಗಿರಬಹುದು. ಆದರೆ ತನ್ನ ಕೈಗೊಂಬೆ ಸರ್ಕಾರಗಳನ್ನು ಸ್ಥಾಪಿಸಿಕೊಂಡು, ಪ್ರಜಾಪ್ರಭುತ್ವವನ್ನು ಸ್ಪಾನ್ಸರ್ ಮಾಡುತ್ತಿರುವ ಅಮೆರಿಕಾ ಭಯೋತ್ಪಾದನೆಯ ಬಗ್ಗೆ ದೊಡ್ಡ ಗಂಟಲಿನಿಂದ ಮಾತನಾಡದಿದ್ದರೆ ಅದರ ಬಾಯಿ ನಾವು ಆಗುವ ಅಪಾಯವಿದೆ.

ಅಮೆರಿಕಾದಲ್ಲಿ ಸ್ವಾತಂತ್ರ್ಯ ದೇವಿಯ ಪ್ರತಿಮೆ ಇದೆ. ಅದು ಕಲ್ಲಾಗಿದೆ. ಪ್ರತಿಮೆಯಾಗಿದೆ. ತೋರಿಸಲಷ್ಟೇ ಇದೆ. ಭಾರತದಲ್ಲೂ ಇಂಥ ಸ್ಥಿತಿ ಬರಬಾರದಲ್ಲವೆ?
- ಪರಶುರಾಮ ಕಲಾಲ್ 

26 comments:

  1. ದೊಡ್ಡಣ್ಣನ ಚೇಷ್ಟೆ - ಕುಚೇಷ್ಟೆಗಳನ್ನು ತೆರೆದಿಟ್ಟ ಪರಸುರಾಮ್ ಕಲಾಲರ ಬರಹ ತುಂಬಾ ಇಷ್ಟ ಆಯ್ತು

    ReplyDelete
  2. ಪರಶುರಾಮ್‌ ಅವರ ಅಭಿಪ್ರಾಯದಲ್ಲಿ ಎಳ್ಳಷ್ಟೂ ತಪ್ಪಿಲ್ಲ. ತನ್ನ ಬಲದ ಮೂಲಕ ಜಗತ್ತಿನ ಯೋಚನಾಧಾಟಿಯನ್ನೇ ಬದಲಾಯಿಸಬಲ್ಲ ಶ್ರೀಮಂತ ರಾಷ್ಟ್ರಗಳು ಇನ್ನುಳಿದ ಜಗತ್ತಿನ ಪಾಲಿಗೆ ಭಸ್ಮಾಸುರರಂತೆ ಬೆಳೆದು ನಿಂತಿವೆ. ತಮ್ಮಿಚ್ಛೆಯಂತೆ ನಡೆಯದಿದ್ದರೆ ವಾಸ್ತವದ ವ್ಯಾಕರಣವನ್ನೇ ಅದಲು ಬದಲು ಮಾಡುವ ಅವುಗಳಿಗೆ ಯಾರನ್ನು ಬೇಕಾದರೂ ಸುಲಭವಾಗಿ ಭಯತ್ಪಾದಕರನ್ನಾಗಿಸುವ ಶಕ್ತಿ ಇದೆ. ಮಾಧ್ಯಮಗಳನ್ನು ಸಶಕ್ತವಾಗಿ ಬಳಸಿಕೊಂಡು ತನ್ನೆಲ್ಲಾ ಅಜೆಂಡಾಗಳನ್ನು ಜಾಗತಿಕ ವಾಸ್ತವವನ್ನಾಗಿಸುವ, ತುರ್ತು ಸಂಗತಿಯನ್ನಾಗಿಸುವ ಚಾಣಾಕ್ಷತನವಿದೆ, ಎಂಥ ವಿಚಾರಧಾರೆಯನ್ನಾದರೂ, ಜೀವನಶೈಲಿಯನ್ನಾದರೂ ಕ್ಷಣಾರ್ಧದಲ್ಲಿ ’ಖಳ’ನನ್ನಾಗಿಸುವ ಚಾಕ್ಯಚಾಕ್ಯತೆಯೂ ಅಮೆರಿಕಕ್ಕೆ ಸಿದ್ಧಿಸಿದೆ. "ಲಾಡೆನ್‌" ಅನ್ನುವುದು ಅಂಥ ಒಂದು ದಮನಕಾರಿ ಯೋಚನಾಧಾಟಿ ಹಾಗೂ "ಮೆಕವಲಿ" ರಾಜಕೀಯ ತಂತ್ರಗಾರಿಕೆಗೆ ಎದುರಾದ ಒಂದು ಒಂದು ರಕ್ತ-ಸಿಕ್ತ ಪ್ರತಿರೋಧವಷ್ಟೇ. ಈಗಾಗಲೇ ದಾಸ್ಯದ ರುಚಿ ನೋಡಿರುವ ಭಾರತೀಯರಿಗೆ ಇವೆಲ್ಲವೂ ಬೇರೆ ರಾಷ್ಟ್ರಗಳಿಗಿಂತ ಹೆಚ್ಚು ಬೇಗ ಅರ್ಥವಾಗಬೇಕು. ದುರಂತವೆಂದರೆ, ಅಮೆರಿಕದ "Megalomaniac" ವ್ಯಕ್ತಿತ್ವವೇ ನಮ್ಮ ಬಹುತೇಕ ಮಂದಿಗೆ, ಅದರಲ್ಲೂ "ದೇಶಭಕ್ತ"ರಿಗೆ ಆಪ್ತ ಹಾಗೂ ಅನುಕರಣೀಯ.

    ಅರುಣ್‌ ಕಾಸರಗುಪ್ಪೆ

    ReplyDelete
  3. ಇದು ಲಾಡೆನ್ ಭಯೋತ್ಪಾದನೆಯ ಒಂದು ಮುಖ ಮಾತ್ರ. ಇನ್ನೊಂದು ಮುಖ ಮತಾಂಧತೆ. ಇದನ್ನು ಕೆಲ ಜಾಣರು ಮರೆಯಲು ಅಥವಾ ಮರೆಮಾಚಲು ಯತ್ನಿಸುತ್ತಾರೆ ಏಕೆ?

    ReplyDelete
  4. Why our people always die in cycnism ?
    If baba dies they project negative side of Sai baba same if a internatinal terrorist a anti human dies they blame U S of america .
    ha ha nice double standards .

    ReplyDelete
  5. Now instead of blaming U S A learn from U S A and israel . Yeah learn from them .
    Simply making peace statment blaming some one doesnt get us anywhere.

    Learn how to protect our citizenz , Try to assasin terrorists if u guys cant do it in enemy state atleast try to assasinate hafiz saeed , Dawood ibrahim in neutral states like U A E , Dubai else in some europe or africa .

    If u guys cannot think about it just search negative side in each and everything . god bless you .

    ReplyDelete
  6. ಪ್ರಿಯರೇ. ತರ್ಖ ಬದ್ಧವಾದ ಬರಹ. ಅಮೇರಿಕಾ ಹೇಳಿದಾಗ ರಾಕ್ಷಸ"ಸ೦ತ" ಆಗ್ತಾನೆ, ಮುಗ್ಧ "ಭಯೊತ್ಫಾದಕನಾಗುತ್ತಾನೆ!ಅಭಿವ್ರದ್ಧಿಯ ಭ್ರಮೆಯಲ್ಲಿರುವ ದೇಶಗಳು ಪಾಪ ಅಮೇರಿಕಾದ ಮೋಡಿ ಮಾತಿಗೊಳಗಾಗಿ ಅಸತ್ಯ-ಅನ್ಯಾಯ ಎ೦ದು ಗೊತ್ತಿದ್ದರೂ ನ೦ಬಿದ್ದೇವೆ, ಬೆ೦ಬಲಿಸುತ್ತಿದ್ದೇವೆ ಎ೦ದು ಜಗಜಾಹೀರು ಮಾಡಿ ಕೊ೦ಡು ಅ೦ಗಲಾಪಿನಿ೦ದ ಅಮೇರಿಕಾದಿ೦ದ ದೊರಕುವ ಲಾಭಕ್ಕಾಗಿ ಕಾಯುತ್ತಿರುತ್ತವೆ. ಪಾಕಿಸ್ಥಾನ-ಭಾರತ ಎರಡೂ ಇದಕ್ಕೆ ಹೊರತ್ತಲ್ಲ.

    ReplyDelete
  7. ಇಲ್ಲಿ ಇರೋದು ಲಾಡೇನ್ ವಿಷಯ, ಆದರೇ ಅಮೇರಿಕಾವನ್ನು ಟಾರ್ಗೆಟ್ ಮಾಡಿರೋದು ಏಕೆ? ಅಮೇರಿಕಾ ಸರಿಯಿಲ್ಲವೆನ್ನುವುದು ಸತ್ಯ, ಅವರು ದ್ರೋಹಿಗಳೆಂಬುದು ಜಗತ್ತಿಗೆ ತಿಳಿದಿರುವುದು! ಹಾಗಂತ ಲಾಡೆನ್ ಭಯೋತ್ಪಾದಕ ಅನ್ನೋದು ತಪ್ಪಾ?ಅವನನ್ನು ಯಾರೇ ಕೊಂದರು ಅದು ಒಳ್ಳೆಯ ಕೆಲಸವೇ ತಾನೇ?

    ReplyDelete
  8. ಅಮೆರಿಕಾದಲ್ಲಿ ಸ್ವಾತಂತ್ರ್ಯ ದೇವಿಯ ಪ್ರತಿಮೆ ಇದೆ. ಅದು ಕಲ್ಲಾಗಿದೆ. ಪ್ರತಿಮೆಯಾಗಿದೆ. ತೋರಿಸಲಷ್ಟೇ ಇದೆ. ಭಾರತದಲ್ಲೂ ಇಂಥ ಸ್ಥಿತಿ ಬರಬಾರದಲ್ಲವೆ?
    -------------------------------------------------
    Illi ambedkar , gandhi , nehru prathime ide hage antha namm mansu kallu agi idiya ? parsuram avre ?

    ReplyDelete
  9. @ Deepak, ಸಿನಿಕರಂತೆ ಯೋಚಿಸುತ್ತಿರುವುದು ನೀವು. ಲಾಡೆನ್ ಸಾಯಿಸಿದ್ದು ತಪ್ಪು ಎಂದು ಲೇಖಕರು ಎಲ್ಲೂ ಹೇಳೇ ಇಲ್ಲ, ಯಾಕೆ ನಿಮ್ಮ ಪಿತ್ಥ ಕೆರಳುತ್ತದೆ? ಅಮೆರಿಕ ಸಮರ್ಥಿಸಿಕೊಳ್ಳಲು ನಿಮ್ಮ ಬಳಿ ಏನಾದರೂ ಸರಕು ಇದ್ದರೆ ಬರೆಯಿರಿ. ಲಾಡೆನ್ ಆಗಲಿ, ಕಸಬ್ ಆಗಲಿ, ಸಾಧ್ವಿ ಪ್ರಗ್ಯಾಸಿಂಗ್, ಆಸೀಮಾನಂದ ಆಗಲಿ ಸತ್ತರೆ ಯಾರೂ ಮರುಕ ಪಡಬೇಕಾಗಿಲ್ಲ. ಎಲ್ಲರೂ ಅಮಾಯಕರನ್ನು ಬಲಿ ತೆಗೆದುಕೊಂಡವರು.
    ಡಬ್ಬಲ್ ಸ್ಟಾಂಡರ್ಡ್ ಯಾರದು ಎಂದು ನಿಮಗೆ ಈಗ ಬಿಡಿಸಿ ಹೇಳಬೇಕಾಗಿಲ್ಲ ಅಲ್ಲವೇ?
    @ ಮಹೇಶ್ ಪ್ರಸಾದ್ ನೀರ್ಕಜೆ, ಲಾಡೆನ್ ಭಯೋತ್ಪಾದನೆಯ ಮತ್ತೊಂದು ಮುಖವನ್ನು ನೀವೇ ಬರೆಯಿರಿ ಸ್ವಾಮಿ, ಯಾರು ಬೇಡ ಅಂದವರು. ಬರೆಯುವಾಗ ಇತರ ಧರ್ಮದ ಮತಾಂಧರ ಬಗ್ಗೆಯೂ ಬರೆಯಲು ಪ್ರಯತ್ನಿಸಿ.

    ReplyDelete
  10. @Ann....

    Here i m not supporting U S . i m just saying how our news , media houses always look at negative side of each and every issues . cant they look at postive side and what we can learn from this operations ?

    ಲಾಡೆನ್ ಆಗಲಿ, ಕಸಬ್ ಆಗಲಿ, ಸಾಧ್ವಿ ಪ್ರಗ್ಯಾಸಿಂಗ್, ಆಸೀಮಾನಂದ ಆಗಲಿ ಸತ್ತರೆ ಯಾರೂ ಮರುಕ ಪಡಬೇಕಾಗಿಲ್ಲ. ಎಲ್ಲರೂ ಅಮಾಯಕರನ್ನು ಬಲಿ ತೆಗೆದುಕೊಂಡವರು.
    ---------------------------------------------
    sadvi pragya singh sathre yaru altaro bidtaro adre congress nayaka digvijya singh mathu syed ali shah gilani athidu matra paper alli varadi agi ide .

    ReplyDelete
  11. @ ದೀಪಕ್,
    ನೀವು ಪಾಸಿಟಿವ್ ಸೈಡ್ ಗಳ ಬಗ್ಗೆ ಪ್ರತ್ಯೇಕ ಲೇಖನವನ್ನೇ ಬರೆಯಿರಿ, ಯಾರು ಬೇಡ ಎಂದವರು? ಇಲ್ಲಿ ಕಲಾಲ್ ಪ್ರಸ್ತಾಪಿಸಿರುವ ಅಮೆರಿಕಾದ ಕ್ರೌರ್ಯಗಳ ಬಗ್ಗೆ ನಿಮಗೆ ಏನಾದರೂ ಹೇಳುವುದಿದ್ದರೆ ಹೇಳಿ. ಅದನ್ನು ಬಿಟ್ಟು ನೀವು ಬಯಸುವುದನ್ನು ಬರೆಯಲಿಲ್ಲವೆಂಬ ಕಾರಣಕ್ಕೆ ಸಿನಿಕತನ, ಡಬ್ಬಲ್ ಸ್ಟಾಂಡರ್ಡ್ ಎಂದು ಹೀಗೆಳೆಯುವುದು ಎಷ್ಟು ಸರಿ?

    ReplyDelete
  12. ಒಸಾಮಾನನ್ನು ಅಮೆರಿಕ ಹುಟ್ಟು ಹಾಕಿದ್ದು ಎನ್ನುವುದನ್ನು ನಾನು ಅಲ್ಲಗಳೆಯುತ್ತಿಲ್ಲ. ಅದು ನಿಜವೇ ಹೌದು. ಒಸಾಮಾನನ್ನು ಹುಟ್ಟು ಹಾಕಿದ್ದಲ್ಲದೇ ಅಫ್ಘಾನಿಸ್ಥಾನದಲ್ಲಿ, ಈಜಿಪ್ಟ್ ಗಳಲ್ಲಿದ್ದ ಒಳ್ಳೆಯ ಸರಕಾರಗಳನ್ನು ಕಿತ್ತು ತಾಲಿಬಾನ್ ಅನ್ನು ಗದ್ದುಗೆಗೇರಿಸಲೂ ಕಾರಣ ಅಮೆರಿಕವೇ. ಆದರೆ ಅದು ಮಧ್ಯ ಏಷಿಯಾ ಸಮಸ್ಯೆಯೇ ಹೊರತು ಬೇರೆಡೆಯಲ್ಲಿ ಕಂಡುಬರುವ ಮತಾಂಧತೆಗೆ ಕಾರಣವಲ್ಲ. ಉದಾ ಕಾಶ್ಮೀರದಲ್ಲಿ ಕಂಡುಬರುವ ಮತಾಂಧತೆಗೂ ಅಮೆರಿಕ ಕಾರಣವಲ್ಲ. ಮಲೇಷಿಯಾದಲ್ಲಿಯೂ ಮತಾಂಧತೆ ಇದೆ, ಅದಕ್ಕೆ ಅಮೆರಿಕ ಕಾರಣವಲ್ಲ. ತುರ್ಕಿಯಲ್ಲೂ ಈಗ ಮೊದಲಿನಷ್ಟು ಸ್ವಾತಂತ್ರ್ಯ ಇಲ್ಲ. ಅಲ್ಲೂ ಮತಾಂಧತೆ ಬೆಳೆಯುತ್ತಿದೆ. ಅದಕ್ಕೂ ಅಮೆರಿಕ ಕಾರಣ ಅಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಪಾಕಿಸ್ಥಾನ ಮತ್ತು ಬಾಂಗ್ಲಾದೇಶದಲ್ಲಿ ಕಂಡುಬರುವ ಮತಾಂಧತೆಗೆ ಅಮೆರಿಕ ಕಾರಣ ಅಲ್ಲ. ಈ ಮತಾಂಧತೆಯಿಂದ ಪ್ರೇರಿತರಾಗಿ ಬೇರೆ ಮತಗಳಲ್ಲೂ ಮತಾಂಧತೆ ಹುಟ್ಟಿಕೊಳ್ಳುವುದು ನಿಜವೂ ಹೌದು. ಅದಕ್ಕೇ ಎಲ್ಲಾ ರೀತಿಯ ಮತಾಂಧತೆಗಳನ್ನು ತಿರಸ್ಕರಿಸುವ ಜರೂರತ್ತಿದೆ.

    ಮತಾಂಧತೆ ಮತ್ತು ಅಮೆರಿಕದ ಅಧಿಕಾರ ದಾಹ ಇವೆರಡನ್ನೂ ತಳುಕು ಹಾಕುವುದು ಬೇಡ. ಇವೆರಡೂ ಬೇರೆ ಬೇರೆ, ಆದರೂ ಇವೆರಡೂ ಸತ್ಯ. ಒಸಾಮಾ ಅನ್ನುವ ವ್ಯಕ್ತಿಚಿತ್ರಣದ ಹುಟ್ಟಿಗೆ ಇವೆರಡೂ ಕಾರಣಗಳೇ.

    ReplyDelete
  13. ಇದು ಲಾಡೆನ್ ಭಯೋತ್ಪಾದನೆಯ ಒಂದು ಮುಖ ಮಾತ್ರ. ಇನ್ನೊಂದು ಮುಖ ಮತಾಂಧತೆ. ಇದನ್ನು ಕೆಲ ಜಾಣರು ಮರೆಯಲು ಅಥವಾ ಮರೆಮಾಚಲು ಯತ್ನಿಸುತ್ತಾರೆ ಏಕೆ?

    ಮೇಲಿನದು ಮಹೇಶ್ ಪ್ರಸಾದ್ ನೀರ್ಕಜೆ ಎಂಬುವವರ ಮೊದಲನೇ ಕಾಮೆಂಟ್.
    ಎರಡನೇ ಕಾಮೆಂಟ್ ನೋಡಿ, ಹೇಗಿದೆ?

    ಮತಾಂಧತೆ ಮತ್ತು ಅಮೆರಿಕದ ಅಧಿಕಾರ ದಾಹ ಇವೆರಡನ್ನೂ ತಳುಕು ಹಾಕುವುದು ಬೇಡ. ಇವೆರಡೂ ಬೇರೆ ಬೇರೆ.

    ಎರಡನ್ನೂ ಥಳಕು ಹಾಕದೆ ಬರೆದ ಲೇಖನವನ್ನು ವಿರೋಧಿಸಲು ಇನ್ನೊಂದನ್ನು ಏಕೆ ಮರೆಮಾಚುತ್ತೀರಿ ಎಂದು ಬರೆಯುವ ಸನ್ಮಾನ್ಯರು, ನಂತರ ರಾಗ ಬದಲಿಸಿದ್ದು ಏಕೆ? ಶ್ರೀಯುತರು ಅತಿ ಉತ್ಸಾಹದಲ್ಲಿ ಏನನ್ನು ಹೇಳಲು ಬಯಸುತ್ತಿದ್ದಾರೋ ಅದನ್ನು ಸ್ಷಷ್ಟವಾಗಿ ಹೇಳಿದ್ದರೆ ಒಳ್ಳೆಯದಿತ್ತು. ಇಲ್ಲವಾದಲ್ಲಿ ಓದುಗರನ್ನು ದೇವರೇ ಕಾಪಾಡಬೇಕು.

    ReplyDelete
  14. @ ann...

    Thanks for your advice . Nange yenu beda mathu nange bekadduna neevu baryeodu beda .

    Just look back sampadakeeya articles .
    When sai baba was dead sampadakeeya tried to defame him by negative articles .
    But when worlds number 1 terrosists has been assasinated by brave soldiers you guys are blaming U S A . isnt it double standard mentality ?

    ReplyDelete
  15. And about a bin laden and U S relations .


    Yeah bin laden americada papada kusu . i agree .

    So is Bangladesh for our nation .
    Bharata bangla ge 1971 ra war alli thumbane sahaya madithu mathu adra vimochane aythu kuda .

    But see now they are also partially become terrorist land and in coming decades they may trouble us or wage a war against us at tht time india should keep quiet or figth back ?

    whats you answer Mr . Annoynomous ?

    Can you post this Mr. sampadakeeya ? :)
    i hope yu ll. lets see yu have answers or not .:D

    ReplyDelete
  16. @ Mahesh ನಿಮ್ಮ ಪ್ರಕಾರ ಮತಾಂಧತೆ ಎಂದರೆ ಏನು?

    ReplyDelete
  17. >> ಸೋವಿಯತ್ ಒಕ್ಕೂಟ ಅಖಂಡವಾಗಿದ್ದಾಗ ಅಲ್ಲಿಯ ಚೆಚೆನ್ಯ ಪ್ರಾಂತದಲ್ಲಿ ಭಯೋತ್ಪಾದನೆ ನಡೆಸಲು ಅಮೆರಿಕಾ ರೂಪಿಸಿದ ವ್ಯಕ್ತಿಯೇ ಈ ಬಿನ್ ಲಾಡೆನ್ ಆಗಿದ್ದ. <<

    ಇದಕ್ಕೆ ದಯವಿಟ್ಟು ಆಧಾರವನ್ನು ಒದಗಿಸುತ್ತೀರಾ?

    ReplyDelete
  18. {@ Mahesh ನಿಮ್ಮ ಪ್ರಕಾರ ಮತಾಂಧತೆ ಎಂದರೆ ಏನು?}
    ತಮ್ಮ ತಮ್ಮ ಧರ್ಮದ ಪುಸ್ತಕಗಳನ್ನು ಓದಿ ಕಣ್ಣು ಕುರುಡಾಗಿ ಎದುರಿಗಿರುವುದು ಕಾಣದೇ ಇದ್ದಾಗ (ಸ್ವಂತ ಯೋಚಿಸುವ ಬುಧ್ಧಿ ಮತ್ತು ಕಾಮನ್ ಸೆನ್ಸ್ ಕಡಿಮೆಯಾದಾಗ) ಅದನ್ನು ಮತಾಂಧತೆ ಎನ್ನುತ್ತಾರೆ.

    ReplyDelete
  19. What india has to learn from current situation of Pakistan

    I am in total acknledgement Sri Kalal.
    Thought to take it a little forward from here what india should Learn from the current situation of Pakistan
    Though i am writing on symapthetic note, considering the turmoil pakistan is in

    like - no proper leadership,a democracy at it verge of collapse, a wave of disbelief, distrust amond Diplomatic, military and external affaris corridors,


    We should futher support and elect strong leaders and pro active thinker with respect to external affairs.

    Any extremisam, which threathens - India's democratic and integral entities, should be curbed and addressed properly.
    Sever action should be taken to communicate the same to such miscreants...

    Providing, an outsider or any other country of taking advantage should be avoided by leaders.

    As every Indian - we must uphold our demorcratic and One united nation values priortised beyond Religion,culture, religious
    be it hindhu,Muslim,Christian,Jain..whom so ever...left , right, communist, marksits, mavo..which ever origin of thought...

    Our defect,inteligence,Diplomacy,and political powers should always be focused on the democratic values we are adheread.

    Thus that the prosperity, growth, harmony,glorym,pride of indians is contunied for centuries to come..

    ReplyDelete
  20. ಮತ್ತಷ್ಟು ಪ್ರಶ್ನೆಗಳು:

    >> ಅದರ ಬದಲು ತೈಲ ಗಣಿಗಳೆಲ್ಲಾ ಅಮೆರಿಕಾ ತೈಲ ಕಂಪನಿಗಳು ವಶ ಪಡೆಸಿಕೊಳ್ಳಲು ಸಾಧ್ಯವಾಯಿತು.<<
    ಇರಾಕಿನ ತೈಲ ಗಣಿಗಳೆಲ್ಲಾ ನಿಜಕ್ಕೂ ಅಮೆರಿಕದ ತೈಲ ಕಂಪೆನಿಗಳ ವಶದಲ್ಲಿವೆಯೇ? ಇದಕ್ಕೆ ಆಧಾರ ಒದಗಿಸಲು ಸಾಧ್ಯವೇ? ಕೆಲವೊಂದು ಪತ್ರಿಕಾ ವರದಿಗಳ ಪ್ರಕಾರ, ಇರಾಕ್ ತೈಲದ ಕಾಂಟ್ರಾಕ್ಟ್ ಈಗ ಬ್ರಿಟನ್, ಫ್ರಾನ್ಸ್, ರಷ್ಯಾ ಮತ್ತು ಚೈನಾದ ಕಂಪೆನಿಗಳಿಗೆ ಸಿಕ್ಕಿವೆ ಎಂಬುದು ನಿಜವಲ್ಲವೇ? (ಉದಾಹರಣೆ: http://www.reuters.com/article/2009/12/12/us-iraq-usa-oil-idUSTRE5BB18Q20091212 )

    >> ಈ ಯುದ್ಧದಲ್ಲಿ ೧೫ ಲಕ್ಷ ಜನರು ಹತರಾಗಿದ್ದಾರೆ. <<
    ಈ ಮಾಹಿತಿಗೆ ದಯವಿಟ್ಟು ಆಧಾರ ಒದಗಿಸಬಲ್ಲಿರಾ?

    >> ಪಾಕಿಸ್ತಾನ ಹಾಗೂ ಭಾರತಗಳ ನಡುವೆ ವೈರತ್ವ ಕಡಿಮೆಯಾಗದಂತೆ ನೋಡಿಕೊಂಡ ದೇಶ ಅಮೆರಿಕ. <<
    ಈ ವಿಷಯದ ಬಗೆಗೆ ಮತ್ತಷ್ಟು ಆಧಾರ ಸಹಿತ ಮಾಹಿತಿ ದಯವಿಟ್ಟು ಒದಗಿಸಬಲ್ಲಿರಾ? "ವೈರತ್ವ ಕಡಿಮೆಯಾಗದಂತೆ" ನೋಡಿಕೊಳ್ಳಲು, ಅಮೆರಿಕ ಎಂತಹ ಪ್ರಯತ್ನಗಳನ್ನು ಮಾಡಿತು? ಕಾಶ್ಮೀರ ವಿವಾದ ಮತ್ತು ಅಣು ಬಾಂಬ್ ವಿಚಾರದಲ್ಲಿ ಅಮೆರಿಕ, ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ತಿಕೆ ವಹಿಸುವ ಬಗೆಗೆ ಹಲವಾರು ಲೇಖನಗಳನ್ನು ಓದಿರುವೆನಾದರೂ, "ವೈರತ್ವ ಕಡಿಮೆಯಾಗದಂತೆ" ನೋಡಿಕೊಳ್ಳುವ ಕುರಿತು ಗಂಭೀರ ಲೇಖನಗಳನ್ನು ಎಲ್ಲೂ ಓದಿಲ್ಲ.

    << ಜಗತ್ತಿನ ೧೩೫ ರಾಷ್ಟ್ರಗಳಲ್ಲಿ ೧೭೫ಕ್ಕೂ ಅಧಿಕ ಸೈನಿಕ ನೆಲೆಗಳನ್ನು ಅಮೆರಿಕಾ ಹೊಂದಿದೆ. >>
    ಈ ಮಾಹಿತಿಗೆ ದಯವಿಟ್ಟು ಆಧಾರ ಒದಗಿಸುವಿರಾ?

    >> [ಸಿ.ಐ.ಎ./ ಅಮೆರಿಕ]ಈಶಾನ್ಯ ರಾಜ್ಯಗಳು ಸ್ವತಂತ್ರ್ಯ ರಾಷ್ಟ್ರಗಳೆಂದು ಘೋಷಿಸಿಕೊಳ್ಳಲು ಭಯೋತ್ಪಾದಕ ಚಟುವಟಿಕೆಗಳಿಗೆ ಹಣ, ಶಸ್ತ್ರಾಸ್ತ್ರಗಳನ್ನು ನೀಡಿತ್ತು. <<
    ಈ ಮಾಹಿತಿಗೆ ದಯವಿಟ್ಟು ಆಧಾರ ಒದಗಿಸುವಿರಾ?

    <>
    ಅಂದರೆ, ಅಮೆರಿಕದಲ್ಲಿ ಸ್ವಾತಂತ್ರ್ಯ ಇಲ್ಲವೆಂಬ ಅರ್ಥವೇ? ಅಥವಾ, ಇತರೆ ದೇಶಗಳ ಸ್ವಾತಂತ್ರ್ಯವನ್ನು ಅಮೆರಿಕ ಸಹಿಸುವುದಿಲ್ಲ ಎಂಬ ಅರ್ಥವೇ?

    ReplyDelete
  21. This comment has been removed by the author.

    ReplyDelete
  22. @ sanjay , good counter points . I hope author will clarify you doubts .

    ReplyDelete
  23. ಸಂಜಯ ಅವರ ಪ್ರಶ್ನೆಗಳಿಗೆ ನನ್ನ ಸಹಮತೊಯಿದೆ, ಇದರ ಜೊತೆಗೆ ಇನ್ನೊಂದಷ್ಟು ಮಾಹಿತಿ ಲಾದೇನ್ ಅಮೇರಿಕದ ಸೃಷ್ಟಿ ಹಾಗು ಅವನನ್ನು ಸೃಷ್ಟಿಸಿದ್ದು ಅಫಗಾನಿಸ್ತಾನ ಸಲುವಾಗಿ ಮಾತ್ರ, ಚೆಚೆನ್ಯಾ ಬಂಡುಕೋರರಿಗೆ ಅವನು ಸಹಾಯ ಮಾಡಲು ಪ್ರಾರಂಭಿಸಿದ್ದು ಮಸೂದ ಅನ್ನು ತಾಲಿಬಾನ ನವರು ಸಾಯಿಸಿದ ನಂತರ

    ReplyDelete
  24. I Salute the Guts of America going in to PAK and Killing Osama in Pak itself.
    This should teach India a lesson which is begging PAK to arrest the 26/11 perpetrators. Salute the American Gutz again....

    And I am least bother who is trying to find faults with US in killing Osama.

    ReplyDelete