Friday, May 27, 2011

ವಿಜಯ ಸಂಕೇಶ್ವರರ ಹೊಸ ಪತ್ರಿಕೆಗೆ ಸಾರಥಿ ಯಾರು?

ವಿಆರ್‌ಎಲ್ ಸಂಸ್ಥೆಯ ಮಾಲೀಕರಾದ ವಿಜಯ ಸಂಕೇಶ್ವರರು ಆರಂಭಿಸಲಿರುವ ಹೊಸ ದಿನಪತ್ರಿಕೆಗೆ ತಿಂಗಳುಗಣನೆ ಆರಂಭವಾಗಿದೆ.

ಮಾಧ್ಯಮ ಕ್ಷೇತ್ರದಲ್ಲಿ ವಿಜಯ ಸಂಕೇಶ್ವರರ ಎರಡನೇ ಇನ್ನಿಂಗ್ಸ್ ಇದು. ಮೊದಲ ಇನ್ನಿಂಗ್ಸ್‌ನಲ್ಲಿ ಅವರು ಗಳಿಸಿದ ಭರ್ಜರಿ ಯಶಸ್ಸು ಈಗ ಇತಿಹಾಸ. ವಿಜಯ ಕರ್ನಾಟಕದ ಮೂಲಕ ಸಂಕೇಶ್ವರರು ಎಬ್ಬಿಸಿದ ಬಿರುಗಾಳಿ ಕರ್ನಾಟಕದ ಪತ್ರಿಕಾಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿತ್ತು. ಸಂಕೇಶ್ವರರು ತಮ್ಮ ವ್ಯಾವಹಾರಿಕ ಜಾಣ್ಮೆಯನ್ನು ಪ್ರಯೋಗಿಸಿ ವಿಜಯ ಕರ್ನಾಟಕವನ್ನು ನಂ.೧ ಮಾಡುವಲ್ಲಿ ಯಶಸ್ವಿಯಾಗಿದ್ದರು. ವಿಶ್ವೇಶ್ವರ ಭಟ್ಟರಂಥ ಪ್ರಯೋಗಶೀಲ ಸಂಪಾದಕರು  ಲಭಿಸಿದ್ದೂ ಸಹ ಅವರಿಗೆ ಅನುಕೂಲಕರವಾಗಿತ್ತು. ಕನ್ನಡ ಪತ್ರಿಕಾರಂಗದಲ್ಲಿ ಹಿಂದೆಂದೂ ಕಾಣದಂಥ ಬೆಲೆಸಮರವನ್ನು ಆರಂಭಿಸಿ, ಇತರ ಎಲ್ಲ ಪತ್ರಿಕೆಗಳಿಗೆ ಹೊಡೆತ ಕೊಡುವಲ್ಲಿ ಸಂಕೇಶ್ವರರು ಯಶಸ್ವಿಯಾಗಿದ್ದರು. ಇವತ್ತಿನ ಪತ್ರಿಕೆಯನ್ನು ನಾಳೆ ಓದುವಂಥ ವ್ಯವಸ್ಥೆಯಿದ್ದ ರಾಜ್ಯದ ಮೂಲೆಮೂಲೆಯ ಹಳ್ಳಿಗಳಿಗೆ ಬೆಳಿಗ್ಗೆ ೬ ಗಂಟೆಗೆಲ್ಲ ತಮ್ಮ ವಿಶಾಲ ನೆಟ್‌ವರ್ಕ್‌ನ ಮೂಲಕ ತಲುಪಿಸಿದ್ದು ಸಂಕೇಶ್ವರರ ಮಹತ್ವಪೂರ್ಣ ಸಾಧನೆ. ಇತರ ಪತ್ರಿಕೆಗಳ ಓದುಗರನ್ನು ಕಿತ್ತುಕೊಳ್ಳುವುದರ ಜತೆಜತೆಗೆ ಹೊಸ ಓದುಗರನ್ನು ಸೃಷ್ಟಿಸಿದ್ದು ವಿಜಯ ಕರ್ನಾಟಕದ ಹೆಮ್ಮೆ. ಆದರೆ ವಿಜಯ ಕರ್ನಾಟಕ ತನ್ನ ಬೆಲೆ ಸಮರದ ಮೂಲಕ ಸಣ್ಣ ಪತ್ರಿಕೆಗಳ ಬೇರುಗಳನ್ನೇ ಅಲ್ಲಾಡಿಸಿಬಿಟ್ಟಿತು. ಹಲವಾರು ಪತ್ರಿಕೆಗಳು ಮುಚ್ಚಿಹೋಗುವಂಥ ಪರಿಸ್ಥಿತಿ ನಿರ್ಮಾಣವಾಯಿತು.

ಸಂಕೇಶ್ವರರು ತಮ್ಮ ವಿಜಯ ಕರ್ನಾಟಕವನ್ನು ಅದರ ಜತೆಗೆ ಉಷಾಕಿರಣ ಎಂಬ ತಮ್ಮದೇ ಪರ್ಯಾಯ ಪತ್ರಿಕೆಯನ್ನು, ವಿಜಯ ಟೈಮ್ಸ್ ಎಂಬ ಇಂಗ್ಲಿಷ್ ಪತ್ರಿಕೆಯನ್ನು ಟೈಮ್ಸ್ ದೊರೆಗಳಿಗೆ ಮಾರುವುದರ ಮೂಲಕ ತಮ್ಮ ಮೊದಲ ಇನ್ನಿಂಗ್ಸ್ ಮುಗಿಸಿದ್ದರು. ಹೀಗೆ ಪತ್ರಿಕೆಗಳನ್ನು ಮಾರುವಂತಾಗಲು ನಿರ್ಮಾಣಗೊಂಡ ಸನ್ನಿವೇಶಗಳಿಗೆ ಹಲವು ಆಯಾಮಗಳಿವೆ. ಕಾರಣಗಳು ಮಾತ್ರ ಇನ್ನೂ ನಿಗೂಢ.

ಈಗ ಮತ್ತೊಂದು ಇನ್ನಿಂಗ್ಸ್ ಆಡಲು ಸಂಕೇಶ್ವರರು ಪ್ಯಾಡು ಕಟ್ಟಿ ಇಳಿಯುತ್ತಿದ್ದಾರೆ. ಹೇಳಿಕೇಳಿ ಅವರು ಅಪ್ಪಟ ವ್ಯವಹಾರಸ್ಥರು. ರಾಜಕೀಯ ಜಾಣ್ಮೆಯಿಲ್ಲದೆ ಆ ಕ್ಷೇತ್ರದಲ್ಲಿ ಏಟು ತಿಂದಿದ್ದೇನೋ ನಿಜ. ಆದರೆ ವ್ಯವಹಾರದಲ್ಲಿ ಅವರು ನಿಸ್ಸೀಮರೆಂದು ಎಲ್ಲರಿಗೂ ಗೊತ್ತಿರುವುದರಿಂದಲೇ ಹೊಸ ಪತ್ರಿಕೆಯ ಸ್ವರೂಪ, ಉದ್ದೇಶ, ಗುರಿ ಇತ್ಯಾದಿಗಳ ಕುರಿತು ಮಾಧ್ಯಮ ಪಂಡಿತರಲ್ಲಿ ಸಾಕಷ್ಟು ಕುತೂಹಲವಿದೆ.

ಅದೆಲ್ಲ ಸರಿ, ಸಂಕೇಶ್ವರರ ಹೊಸ ಪತ್ರಿಕೆಗೆ ಸಾರಥಿಗಳು ಯಾರು? ನಮಗೆ ಗೊತ್ತಾಗಿರುವ ಮಾಹಿತಿ ಪ್ರಕಾರ ಹಿರಿಯ ಪತ್ರಕರ್ತರಾದ ಈಶ್ವರ ದೈತೋಟ ಹಾಗು ತಿಮ್ಮಪ್ಪ ಭಟ್ಟರ ಹೆಸರು ಮುಂಚೂಣಿಯಲ್ಲಿದೆ. ಇಬ್ಬರೂ ಸಜ್ಜನರು, ಸಂಭಾವಿತರು. ಇಬ್ಬರಿಗೂ ಹೊಸ ಪತ್ರಿಕೆಯನ್ನು ನಿರ್ವಹಿಸಲು ಬೇಕಾದ ಅನುಭವವಿದೆ. ಈ ಪೈಕಿ ಉದಯವಾಣಿ ಮಾಜಿ ಸಂಪಾದಕರಾದ ತಿಮ್ಮಪ್ಪ ಭಟ್ಟರು ಸಂಕೇಶ್ವರರ ಹೊಸ ಪತ್ರಿಕೆಯಲ್ಲಿ ಇದ್ದೇ ಇರುತ್ತಾರೆ ಎಂಬುದು ನಮಗೆ ಗೊತ್ತಾದ ಖಚಿತ ಮಾಹಿತಿ.

ಈಶ್ವರ ದೈತೋಟ ಅವರು ಹಿಂದೆ ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಟೈಮ್ಸ್ ಆಫ್ ಇಂಡಿಯಾ, ಉದಯವಾಣಿ.. ಹೀಗೆ ಒಂದಾದ ಮೇಲೊಂದರಂತೆ ಕನ್ನಡದ ಪ್ರಮುಖ ಪತ್ರಿಕೆಗಳ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದವರು. ಹಿರಿಯ ಪತ್ರಕರ್ತ ಮಹದೇವಪ್ಪ ಅವರೊಂದಿಗೆ ಸೇರಿ ಆರಂಭದ ದಿನಗಳಲ್ಲಿ ವಿಜಯ ಕರ್ನಾಟಕವನ್ನು ಯಶಸ್ವಿಯಾಗಿ ಮುನ್ನಡೆಸಿದ್ದವರು. ಸಂಕೇಶ್ವರರ ಹೊಸ ಪತ್ರಿಕೆಗೆ ಅವರು ಸಂಪಾದಕರಾಗುತ್ತಾರಾ? ಕಾದು ನೋಡಬೇಕು.

ಇನ್ನು ಈ ಹೊಸ ಪತ್ರಿಕೆಗೆ ಸಿಬ್ಬಂದಿಯನ್ನು ತೆಗೆದುಕೊಳ್ಳುವ ಸಲುವಾಗಿ ಪತ್ರಕರ್ತರನ್ನು ಗುರುತಿಸುವ ಕೆಲಸ ಸದ್ದುಗದ್ದಲವಿಲ್ಲದೆ ನಡೆಯುತ್ತಿದೆ. ಉದಯವಾಣಿ, ವಿಜಯ ಕರ್ನಾಟಕ ಹಾಗು ಕನ್ನಡಪ್ರಭ ಪತ್ರಿಕೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಆದ ಬದಲಾವಣೆಗಳಿಂದ ಇರಿಸುಮುರಿಸಿಗೆ ಒಳಗಾದ ಹಲವರು ಸಂಕೇಶ್ವರರ ಕಡೆ ವಾಲಬಹುದು.

ಸಂಕೇಶ್ವರರು ಏನನ್ನೇ ಮಾಡಿದರೂ ದೊಡ್ಡ ಮಟ್ಟದಲ್ಲಿ ಮಾಡುವವರು. ಪತ್ರಿಕೆ ಆರಂಭಿಸುವಾಗಲೇ ಹಲವು ಆವೃತ್ತಿಗಳೊಂದಿಗೇ ನುಗ್ಗುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಅವರಿಗೆ ಹೆಚ್ಚು ಸಿಬ್ಬಂದಿಯೂ ಬೇಕಾಗಬಹುದು. ಹೀಗಾಗಿ ಪತ್ರಕರ್ತರಿಗೆ ಮತ್ತೆ ಅವಕಾಶಗಳು ಒದಗಿ ಬಂದಂತಾಗಿದೆ.

ಕನ್ನಡದಲ್ಲಿ ಹೊಸ ದಿನಪತ್ರಿಕೆಯ ಪ್ರಯೋಗವನ್ನು ಮಾಡಲು ಎಲ್ಲರೂ ಅಂಜುತ್ತಾರೆ. ವಿಜಯ ಕರ್ನಾಟಕ ಹೊರತು ಪಡಿಸಿ ಹೊಸ ಪತ್ರಿಕೆಯ ಪ್ರಯೋಗ ಯಶಸ್ವಿಯಾದ ಉದಾಹರಣೆಗಳೂ ಸಹ ಇಲ್ಲ. ಹೀಗಿರುವಾಗ ಸಂಕೇಶ್ವರರ ಹೊಸ ಪತ್ರಿಕೆ ಹೇಗಿರುತ್ತದೆ? ಯಾವ ಮಟ್ಟದ ಪೈಪೋಟಿ ನೀಡುತ್ತದೆ? ಮತ್ತೊಂದು ಸುತ್ತಿನ ಬೆಲೆ ಸಮರ ಕನ್ನಡ ಪತ್ರಿಕಾರಂಗದಲ್ಲಿ ಶುರುವಾಗಬಹುದಾ?

ಕುತೂಹಲಗಳು ಸಾಕಷ್ಟಿವೆ. ನೋಡ್ತಾ ಇರೋಣ, ಏನೇನ್ ಆಗುತ್ತೆ ಅಂತ.

ಇದಿಷ್ಟು ಸಂಕೇಶ್ವರರ ಹೊಸ ಪತ್ರಿಕೆಯ ಕಥೆಯಾಯಿತು. ಸುವರ್ಣ ನ್ಯೂಸ್‌ನಿಂದ ತೆರೆಮರೆಗೆ ಸರಿದ ನಂತರ ಎಚ್.ಆರ್.ರಂಗನಾಥ್ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಹಲವರದ್ದು. ನಮಗೂ ಸಹ ಈ ಕುತೂಹಲ ಇದ್ದೇ ಇದೆ. ರಂಗನಾಥ್ ಅವರು ವಾಪಾಸು ಬರಲಿದ್ದಾರೆ, ಹೊಸ ಚಾನಲ್‌ನೊಂದಿಗೆ ಹಿಂದಿರುಗಲಿದ್ದಾರೆ. ಇದು ಸದ್ಯಕ್ಕೆ ನಮಗೆ ಗೊತ್ತಾಗಿರುವ ಅಪೂರ್ಣ ಮಾಹಿತಿ. ಹೇಗೆ, ಏನು ಎಂಬುದನ್ನು ಟ್ರಾಕ್ ಮಾಡುತ್ತಿರುತ್ತೇವೆ. ಗೊತ್ತಾದ ಕೂಡಲೇ ಹೇಳುತ್ತೇವೆ.

ಕೊನೆ ಕುಟುಕು: ಆದಿಕವಿ ಪಂಪ ಹೇಗೆ ಕವಿ ಮತ್ತು ಕಲಿ ಎರಡೂ ಆಗಿದ್ದನೋ ಹಾಗೆಯೇ ನಮ್ಮ ಡಿ.ಸಿ.ರಾಜಪ್ಪನವರು ಲಾಠಿ ಹಿಡಿದು ಸಮಾಜವನ್ನು ತಿದ್ದುತ್ತಾರೆ, ಲೇಖನಿ ಹಿಡಿದು ಸರಿ ದಾರಿಗೆ ತರುತ್ತಾರೆ.... ಹೀಗೆ ವಿಜಾಪುರ ರಕ್ಷಣಾಧಿಕಾರಿ ಡಿ.ಸಿ.ರಾಜಪ್ಪನವರನ್ನು ವಾಚಾಮಗೋಚರವಾಗಿ ಹೊಗಳಿದವರು ಹಿರಿಯ ಪತ್ರಕರ್ತ ಜಿ.ಎನ್.ಮೋಹನ್. ವಿಜಾಪುರ ವೈಭವ ಎಂಬ ಸ್ಮರಣ ಸಂಚಿಕೆಯ ಬೆನ್ನುಡಿಯಲ್ಲಿ ಅವರು ಹೀಗೆ ಬರೆದಿದ್ದಾರೆ. ಅಭಿನವ ಪಂಪನನ್ನು ಹುಡುಕಿದ್ದಾಯಿತು. ಇನ್ನು ಅಭಿನವ ರನ್ನ, ಪೊನ್ನ, ರಾಘವಾಂಕ, ಕುಮಾರವ್ಯಾಸ ಇತ್ಯಾದಿಗಳನ್ನು ಹುಡುಕಿಕೊಡುವ ಹೊಣೆಯೂ ಜಿ.ಎನ್.ಮೋಹನ್‌ರದ್ದು.

11 comments:

  1. ವಿಜಯ ಸಂಕೇಶ್ವರರವರು ಹೊಸ ಪತ್ರಿಕೆ ಬದಲು ನ್ಯೂಸ್ ಚಾನೆಲ್ ಶುರು ಮಾಡುವುದು ಉತ್ತಮ ಎಂದು ಅನಿಸುತ್ತದೆ .

    ReplyDelete
  2. ಇರುವ ಮಾದ್ಯಮಗಳೇ ನೆಟ್ಟಗಿಲ್ಲ. ಯಾವ ಹೊಸ ಮಾದ್ಯಮ ಬಂದರೂ ಅದೂ ಈಗಿರುವ ಮಾದ್ಯಮಗಳ ಸಾಲಿಗೆ ಬೇಗ ಸೇರುವುದರಲ್ಲಿ ಯಾವುದೇ ಅನುಮಾನಗಳಿಲ್ಲ.ಮತ್ತೊಂದು ಗಂಜಿಕೇಂದ್ರ ಬಂದರೆ ಸಂಪಾದಕೀಯಕ್ಕೆ ಮತ್ತಷ್ಟು ಆಹಾರ ಸಿಗಲಿದೆ.

    ReplyDelete
  3. i agree vt jaison's opinion- vaijanath gurumathkal hiremath yadgiri

    ReplyDelete
  4. ಕೊನೆ ಕುಟುಕಿಗೆ ಜಿ.ಎನ್.ಮೋಹನ್ ರವರ ಪ್ರತಿಕ್ರಿಯೆ:

    ತಮ್ಮ ರೂಢಿಗತ ಒಂದು ಕ್ಷೇತ್ರವಲ್ಲದೆ ಅದಕ್ಕಿಂತ ಭಿನ್ನವಾದ ಇನ್ನೊಂದು ಕ್ಷೇತ್ರವನ್ನೂ ಆಯ್ದುಕೊಂಡವರ ಬಗ್ಗೆ ನನ್ನ ಪ್ರಸ್ತಾಪವಿದೆಯೇ ಹೊರತು ರಾಜಪ್ಪ ಪಂಪ ಎಂದು ಖಂಡಿತಾ ಅಲ್ಲ. ಹೀಗೆ ಆಯ್ದುಕೊಂಡವರನ್ನು ಪಂಪನ ಸೈನ್ಯದಲ್ಲಿರುವವರು ಎಂದು ನಾನು ಮೊದಲಿನಿಂದಲೂ ಅಂದುಕೊಂಡಿದ್ದೇನೆ. ಇದನ್ನು ನಾನು ನನ್ನ 'ಪಂಪ ಬಿಕ್ಕುತಾನೆ..' ಕವನದಲ್ಲಿ ಸಮರ್ಪಕವಾಗಿ ಮಂಡಿಸಿದ್ದೇನೆ.

    ರಾಜಪ್ಪನವರನ್ನು ನಾನು ಸರಿಸುಮಾರು ೧೫ ವರ್ಷಗಳಿಂದ ಬಲ್ಲೆ. ಮಂಗಳೂರು ಗುಲ್ಬರ್ಗ ಬೆಂಗಳೂರಿನಲ್ಲಿ ನಾನೂ ಅವರೂ ಒಂದೇ ಅವಧಿಯಲ್ಲಿ ಕೆಲಸ ಮಾಡಿದ್ದೇವೆ. ಅವರ ಕಾವ್ಯ ಮಾತನಾಡುತ್ತಿರುವುದು ಏನು ಎಂದು ಓದಿ ಹಾಗೂ ಕವಿತೆಯನ್ನು ಅವರಿಂದಲೇ ಕೇಳಿ ಬಲ್ಲೆ. ಹಾಗೆಯೇ ಅವರ ಸಾಮಾಜಿಕ ಕಾಳಜಿಯ ಬಗ್ಗೆಯೂ ಹತ್ತಿರದಿಂದ ಬಲ್ಲೆ. ಸಮಾಜ ತಿದ್ದುವ ಇಬ್ಬರು ಡಾಕ್ಟರ್ ಗಳು ಎಂದು ನಾನು ಡಾ ರಾಜಪ್ಪ ಹಾಗೂ ಡಾ ಓಂಕಾರ ಕಾಕಡೆ ಅವರ ಬಗ್ಗೆ ಬರೆದಿರುವ ಬೆನ್ನುಡಿಯ ಪೂರ್ಣ ಪಾಠ ಓದಿದರೆ ಬಹುಷಃ ಈ ಗೊಂದಲವಾಗುವುದಿಲ್ಲ ಎಂದು ಭಾವಿಸುತ್ತೇನೆ.

    ನಮ್ಮ ಪ್ರತಿಕ್ರಿಯೆ:
    ಡಿ.ಸಿ.ರಾಜಪ್ಪನವರ ಸಾಂಸ್ಕೃತಿಕ ವ್ಯಕ್ತಿತ್ವದ ಕುರಿತು ನಮಗೂ ಗೌರವವಿದೆ. ನೀವು ಯಾವ ಅರ್ಥದಲ್ಲಿ ಅದನ್ನು ಹೇಳಿದ್ದೀರಿ ಅನ್ನುವುದೂ ಸಹ ಅರ್ಥವಾಗುತ್ತದೆ. ಆದರೆ ಹೇಳುವ ಭರದಲ್ಲಿ ಪಂಪನಿಗೆ ಹೋಲಿಸಬಾರದಿತ್ತು ಎಂಬುದಷ್ಟೇ ನಮ್ಮ ಇಂಗಿತ. ಅನ್ಯಥಾ ಭಾವಿಸಬೇಡಿ.

    ReplyDelete
  5. ಪ್ರಶಾಂತ ಸೊರಟೂರMay 27, 2011 at 8:20 PM

    ಒಳ್ಳೆಯ ಸುದ್ದಿ.
    Times of India, ವಿಜಯ ಕರ್ನಾಟಕ ಕೊಂಡುಕೊಂಡ ಮೇಲೆ, ಅದು ಕನ್ನಡ ಲಿಪಿಗಳಿರುವ ಇಂಗ್ಲೀಷ ಪತ್ರಿಕೆ ಆಗಿ ಹೋಗಿದೆ.
    ವಿಜಯ ಸಂಕೇಶ್ವರ ಅವರು ಮತ್ತೇ ಕನ್ನಡ ಪತ್ರಿಕೆ ರಂಗದಲ್ಲಿ ಹೊಸ ಹರಿವು ತರಲಿ.

    ReplyDelete
  6. ಏನೇ ಮಾಡಿದರೂ ಅದ್ದೂರಿಯಾಗಿ ಪ್ರವೇಶ ಮಾಡುವುದು ಸಂಕೇಶ್ವರರ ಜಾಯಮಾನ.ಅವರ ಪತ್ರಿಕೆಗೆ ಯಶಸ್ವಿಯಾಗಲೆಂದು ಕೋರುವ

    ReplyDelete
  7. ದಯವಿಟ್ಟು ರಂಗಣ್ಣ ರ ಸುದ್ದಿ ತಿಳಿದ ತಕ್ಷಣ ನಮಗೂ ತಿಳಿಸಿ....

    ReplyDelete
  8. ಸಂಕೇಶ್ವರರು ಮತ್ತೊಂದು ಪತ್ರಿಕೆ ಶುರು ಮಾಡಿದರೂ ಮಾಧ್ಯಮ ರಂಗದಲ್ಲಿರುವ ಮೌಲ್ಯಗಳ ಅಧಪತನದ ಸ್ಥಿತಿಯಲ್ಲಿ ಸುಧಾರಣೆ ಆದೀತು ಎಂದು ನಾನು ಭಾವಿಸುವುದಿಲ್ಲ. ಏಕೆಂದರೆ ಇಂದು ಬೇಕಾಗಿರುವುದು ಪ್ರಗತಿಶೀಲ ಧೋರಣೆಯ ಪತ್ರಿಕೋದ್ಯಮ. ಆದರೆ ಸಂಕೆಶ್ವರರಲ್ಲಿ ಅಂಥ ಧೋರಣೆ ಇದೆಯೆಂದು ನನಗನಿಸುವುದಿಲ್ಲ, ಏಕೆಂದರೆ ಅವರು ವಿಜಯ ಕರ್ನಾಟಕ ಆರಂಭಿಸಿದ ನಂತರ ಕರ್ನಾಟಕದ ಮಾಧ್ಯಮ ಲೋಕ ಮತ್ತಷ್ಟು ಪ್ರತಿಗಾಮಿಯಾಗಿ ಬದಲಾಗಿದೆ. ಇಂಥ ಪ್ರತಿಗಾಮಿ ಬದಲಾವಣೆಗೆ ಸಂಕೇಶ್ವರರ ಬಂಡವಾಳ ಬಳಕೆಯಾಗಿದೆ. ಆದ್ದರಿಂದ ಸಂಕೇಶ್ವರರ ಹೊಸ ಪತ್ರಿಕೆ ಬಂದರೂ ಕನ್ನಡಕ್ಕೆ ಮಹತ್ವಪೂರ್ಣ ಪ್ರಗತಿಶೀಲ ಚಲನೆ ಸಿಕ್ಕೀತು ಎಂಬ ಆಶಯವೇ ಉಳಿದಿಲ್ಲ. ಏಕೆಂದರೆ ಮೂಲತಃ ಸಂಕೇಶ್ವರರು ಪ್ರತಿಗಾಮಿ ಧೋರಣೆಯವರೇ ಆಗಿದ್ದಾರೆ.

    ReplyDelete
  9. Respected sir, On Feb 1, 2008, Karnataka lokayukta raided on one IPS officer by name D.C. Rajappa (D C Rajappa, Additional SP, Bellary. According to Lokayukta police, Rajappa who owns property worth more than Rs 1 crore has a palatial farm house in Harige on the outskirts of Shimoga city. Lokayukta police reportedly recovered 1.5 kg gold, 5 kg silver, 3.5 lakh cash and papers of five plots including one in Mysore, and two RCC houses in the name of his brothers from his residence at Shimoga. His official quarters in Bellary were also raided). Sir, according to best of my knowledge, the SP of Bijapur and this Rajappa are one and same.

    ReplyDelete
  10. huttakke haavu serikonda kate nimage gotide aadaru obba editor bagge kaalagi vahisiddiri...nivu kooda ketta sampaadakaraaga baaradu....yechharike erali yendu e patra...

    ReplyDelete