Sunday, May 29, 2011

ಜೀ ಟಿವಿಯಿಂದ ನರೇಂದ್ರ ಶರ್ಮ ಹೊರಗೆ: ಜಗನ್ಮಾತೆಗೆ ಕೋಟಿ ವಂದನೆ


ಮತ್ತೊಂದು ಸಂತಸದ ವಿಷಯ. ಜೀ ಟಿವಿಯ ಬೃಹತ್ ಬ್ರಹ್ಮಾಂಡ ಕಾರ್ಯಕ್ರಮದಿಂದ ನರೇಂದ್ರ ಶರ್ಮ ಅವರನ್ನು ತೊಲಗಿಸಲಾಗಿದೆ. ಇದು ನಮಗೆ ಗೊತ್ತಾಗಿರುವ ಮಾಹಿತಿ. ಜೀ ಟಿವಿಗೆ ಒಂದು ಥ್ಯಾಂಕ್ಸ್ ಹಾಗು ಜಗನ್ಮಾತೆಗೆ ಕೋಟಿ ವಂದನೆ. ಬಾಯಿಬಡುಕ ನರೇಂದ್ರ ಶರ್ಮನನ್ನು ತೊಲಗಿಸಿ ಎಂದು ನಾವೆಲ್ಲರೂ ಆರಂಭಿಸಿದ ಕಪಟ ಜ್ಯೋತಿಷಿಗಳ ವಿರುದ್ಧ ಕರ್ನಾಟಕ ಅಭಿಯಾನ ಕಡೆಗೂ ಯಶಸ್ವಿಯಾಗಿದೆ. ಜೀ ಟಿವಿ ಮುಖ್ಯಸ್ಥರಿಗೆ ಸಾವಿರಾರು ಪತ್ರಗಳನ್ನು ಬರೆದು ಈ ಕೊಳಕು ಕಾರ್ಯಕ್ರಮವನ್ನು ನಿಲ್ಲಿಸುವಂತೆ ಕೋರಿದ ಎಲ್ಲರ ಶ್ರಮವೂ ಸಾರ್ಥಕಗೊಂಡಿದೆ. ಎಲ್ಲರಿಗೂ ಅಭಿನಂದನೆಗಳು.

ನರೇಂದ್ರ ಶರ್ಮ ಅನಾಮತ್ತಾಗಿ ಮೂರು ಚಾನಲ್‌ಗಳನ್ನು ಸುತ್ತಾಡಿ ಮುಗಿಸಿಯಾಗಿದೆ. ಕಸ್ತೂರಿ, ಸುವರ್ಣ ಹಾಗು ಜೀ ಟಿವಿಗಳ ಪ್ರಯಾಣ ಮುಗಿದಾಗಿದೆ. ಮುಂದೆ ಆತ ಇನ್ನ್ಯಾವ ಚಾನಲ್ ಹಿಡಿಯುತ್ತಾರೋ ಕಾದು ನೋಡಬೇಕು. ಆದರೆ ಈತನ ವಿರುದ್ಧ ಎದ್ದಿರುವ ಆಕ್ರೋಶವನ್ನು ಗಮನಿಸಿರುವ ಇತರ ಚಾನಲ್‌ಗಳು ಈ ಸೆರಗಿನ ಕೆಂಡವನ್ನು ಕಟ್ಟಿಕೊಂಡರೆ ಎದುರಿಸುವ ಅಪಾಯಗಳನ್ನು ಈಗಾಗಲೇ ಊಹಿಸಿರಬಹುದು. ಇನ್ನುಳಿದದ್ದು ಅವರಿಗೆ ಸೇರಿದ್ದು.

ನರೇಂದ್ರ ಶರ್ಮ ಕಸ್ತೂರಿ ಮತ್ತು ಸುವರ್ಣಗಳಲ್ಲಿ ಕಾರ್ಯಕ್ರಮ ನಡೆಸುವಾಗಲೇ ತಮ್ಮ ಬಾಯಿಬಡುಕತನವನ್ನು ತೋರಿಸಿ ಅಪಹಾಸ್ಯಕ್ಕೆ ಈಡಾಗಿದ್ದರು. ಜನರನ್ನು ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳನ್ನು ಹೆದರಿಸುತ್ತಲೇ ಬಂದ ಶರ್ಮ, ಇಡೀ ಜಗತ್ತೇ ತನ್ನ ಆಣತಿಯ ಮೇರೆಗೆ ನಡೆಯುತ್ತದೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದರು. ನಾನು ಹೇಳುವ ಡೇಟಿಗೆ ಸರಿಯಾಗಿ ಪ್ರಳಯ ಆಗುತ್ತದೆ. ಒಂದೊಮ್ಮೆ ಆಗುವ ಸಂದರ್ಭ ಇಲ್ಲದಿದ್ದರೂ ನಾನು ಹೇಳಿದ್ದೇನೆಂಬ ಕಾರಣಕ್ಕೆ, ನನ್ನ ಮಾತು ಉಳಿಸುವ ಸಲುವಾಗಿ ಜಗನ್ಮಾತೆ ಪ್ರಳಯ ನಡೆಸುತ್ತಾಳೆ ಎಂದು ಶರ್ಮ ಹೇಳಿಕೊಂಡಿದ್ದರು. ಪ್ರಳಯ ಜೀ ಟಿವಿಯ ಕಚೇರಿಯಲ್ಲೇ ಆಗಿದೆ. ನರೇಂದ್ರ ಶರ್ಮ ಕೈಯಲ್ಲಿ ಹಿಡಿದ ತ್ರಿಶೂಲದ ತರಹದ ಐಟಮ್ ಸಮೇತ ಹೊಟ್ಟೆ ನೀವಿಕೊಂಡು ಹೊರಗೆ ಬಿದ್ದಿದ್ದಾರೆ.

ನರೇಂದ್ರ ಶರ್ಮ ಉಪಟಳಗಳು ಹೆಚ್ಚಾಗುತ್ತಿದ್ದಂತೆ ಈತನ ಕುರಿತು ಸಂಪಾದಕೀಯದಲ್ಲಿ ಬರೆದೆವು. ಹಲವಾರು ಬ್ಲಾಗ್, ವೆಬ್‌ಸೈಟ್‌ಗಳಲ್ಲಿ ಈತನ ವಿರುದ್ಧ ಆಕ್ರೋಶ ವ್ಯಕ್ತವಾಯಿತು. ಚೂಡಿದಾರ್, ಜೀನ್ಸ್ ಪ್ಯಾಂಟು ಹಾಕುವ ಹೆಣ್ಣುಮಕ್ಕಳಿಗೆ ಗರ್ಭಕೋಶದ ಕ್ಯಾನ್ಸರ್ ಬರುತ್ತದೆ ಎಂದು ಹೇಳಿ ನರೇಂದ್ರ ಶರ್ಮ  ತನ್ನ ತಿಕ್ಕಲುತನದ ಪರಮಾವಧಿ ತಲುಪಿದ್ದ. ಜಗನ್ಮಾತೆ ಬರುತ್ತಾಳೆ, ಇಳಿಯುತ್ತಾಳೆ ಎಂದು ನರೇಂದ್ರ ಶರ್ಮ ಕೊಟ್ಟ ಡೇಟುಗಳೆಲ್ಲ ಪೂರೈಸಿದವು. ಕಡೆಗೆ ಪ್ರಳಯ ಶುರುವಾಗುತ್ತ ನೋಡಿ ಎಂದು ಹೇಳಿದ್ದ ಮೇ ೨೧ ಸಹ ಕಳೆದುಹೋಯಿತು. ಅಲ್ಲಿಗೆ ನರೇಂದ್ರ ಶರ್ಮ ಅವರ ಆಟಗಳೆಲ್ಲವೂ ಮುಗಿದಿದ್ದವು.

ಈತನನ್ನು ಇನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ ಎಂದನಿಸಿದ ನಂತರ ಒಂದು ಅಭಿಯಾನವನ್ನೇ ನಾವೆಲ್ಲರೂ ಆರಂಭಿಸಬೇಕಾಯಿತು. ಇದಕ್ಕಾಗಿ ಕಪಟ ಜ್ಯೋತಿಷಿಗಳ ವಿರುದ್ಧ ಕರ್ನಾಟಕ ಎಂಬ ಗುಂಪನ್ನು ಫೇಸ್‌ಬುಕ್‌ನಲ್ಲಿ ಸೃಷ್ಟಿಸಿದೆವು. ನರೇಂದ್ರ ಶರ್ಮ ಅವರ ಪ್ರವಚನಗಳ ವಿಕೃತಿಗಳ ಕುರಿತು ಜೀ ಟಿವಿ ಮುಖ್ಯಸ್ಥರಿಗೊಂದು ಬಹಿರಂಗ ಪತ್ರವನ್ನೂ ಬರೆದೆವು. ಈ ಪತ್ರವನ್ನು ಕನ್ನಡದ ಹಲವು ಬ್ಲಾಗರ್‌ಗಳು ತಮ್ಮ ಬ್ಲಾಗ್‌ಗಳಲ್ಲಿ ಮರು ಪ್ರಕಟಿಸಿದರು. ಈ ಪತ್ರವನ್ನು ಜೀ ಟಿವಿಯ ಇಮೇಲ್ ವಿಳಾಸಕ್ಕೆ ಕಳುಹಿಸಲು ವಿನಂತಿಸಿದ್ದೆವು. ನಮ್ಮ ವಿನಂತಿಯನ್ನು ಪುರಸ್ಕರಿಸಿ ಸಾವಿರಾರು ಮಂದಿ ಜೀ ಟಿವಿಗೆ ಪತ್ರ ಬರೆದರು.

ಜೀ ಟಿವಿಯವರು ಸಕಾರಾತ್ಮಕವಾಗಿ ಸ್ಪಂದಿಸಲೇಬೇಕಿತ್ತು. ಹೀಗಾಗಿ ಅವರು ಸಂಪಾದಕೀಯ ಎತ್ತಿದ ಪ್ರಶ್ನೆಗಳನ್ನಿಟ್ಟುಕೊಂಡು ಬದುಕು ಜಟಕಾ ಬಂಡಿಯ ಕಾರ್ಯಕ್ರಮದಲ್ಲಿ ನರೇಂದ್ರ ಶರ್ಮ ಅವರನ್ನು ಮಾಳವಿಕಾ ಮೂಲಕ ನಿಕಷಕ್ಕೆ ಒಡ್ಡಿತು. ನರೇಂದ್ರ ಶರ್ಮ ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡುವುದಿರಲಿ, ಹೊಸ ಹೊಸ ಭೀಕರ ಡೈಲಾಗುಗಳನ್ನು ಹೊಡೆದು ಇನ್ನಷ್ಟು ಸಮಸ್ಯೆಗೆ ಸಿಕ್ಕಿಬಿದ್ದರು. ತನ್ನನ್ನು ಧರ್ಮದರ್ಶಿ ಎಂದು ಕರೆದುಕೊಂಡ ನರೇಂದ್ರ ಶರ್ಮ ತನ್ನನ್ನು ತಾನು ಬದಲಾಯಿಸಿಕೊಳ್ಳುವುದಿಲ್ಲ, ಹೆಣ್ಣು ಮಕ್ಕಳನ್ನು ಮುಂಡೇವಾ ಎನ್ನುವುದರಲ್ಲಿ ತಪ್ಪಿಲ್ಲ, ಜೀನ್ಸು, ಚೂಡಿ ಧರಿಸುವವರಿಗೆ ಕ್ಯಾನ್ಸರ್ ಬರುವುದು ಖಡಾಖಂಡಿತ ಇತ್ಯಾದಿಯಾಗಿ ಹೇಳಿಕೊಂಡುಬಿಟ್ಟರು.

ಕಾರ್ಯಕ್ರಮ ಮುಂದುವರೆದರೆ ಇನ್ನೊಂದು ಹಂತದ ಹೋರಾಟ ನಡೆಸಲು ತಯಾರಿಗಳು ನಡೆದಿದ್ದವು. ಈ ಕುರಿತು ನಾವು ಹಲವು ಜನಪರ ಸಂಘಟನೆಗಳನ್ನೂ ಸಂಪರ್ಕಿಸಿದ್ದೆವು. ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದು, ಧರಣಿ ನಡೆಸುವುದು ಇತ್ಯಾದಿ ಹೋರಾಟಗಳ ಯೋಜನೆ ಸಿದ್ಧವಾಗಿತ್ತು. ಆದರೆ ಯಕಶ್ಚಿತ್ ಇಂಥ ಕೆಟ್ಟ ಕಾರ್ಯಕ್ರಮ ನಿಲ್ಲಿಸಲು ಇಷ್ಟೆಲ್ಲ ನಡೆಸಬೇಕಾ? ಸೆನ್ಸಿಬಲಿಟಿ ಇರುವ ಜೀ ಟಿವಿಯ ಬಳಗದವರು ಇದನ್ನು ಅರ್ಥ ಮಾಡಿಕೊಂಡು ಕಾರ್ಯಕ್ರಮ ನಿಲ್ಲಿಸಲಾರರೆ ಎಂಬ ನಂಬಿಕೆಯೂ ಇತ್ತು. ಬಹುಶಃ ಆ ನಂಬಿಕೆಯೇ ಫಲ ಕೊಟ್ಟಿದೆ.

ನರೇಂದ್ರ ಶರ್ಮ ಅವರನ್ನು ಬೃಹತ್ ಬ್ರಹ್ಮಾಂಡದ ಕುರ್ಚಿಯಿಂದ ಎದ್ದು ಹೋಗಲು ಸೂಚಿಸಲಾಗಿದೆ. ಆ ಜಾಗಕ್ಕೆ ಆನಂದ್ ಗುರೂಜಿ ಎಂಬುವವರು ಬಂದಿದ್ದಾರಂತೆ.

ಎಲ್ಲರಿಗೂ ಅಭಿನಂದನೆಗಳು.

ಹಾಗಂತ ನಮ್ಮ ಕಪಟ ಜ್ಯೋತಿಷಿಗಳ ವಿರುದ್ಧ ಕರ್ನಾಟಕ ಅಭಿಯಾನ ಇಲ್ಲಿಗೆ ಮುಗಿಯುವುದಿಲ್ಲ. ನರೇಂದ್ರ ಶರ್ಮ ಅಂಥವರ ವಿರುದ್ಧ ನಮ್ಮ ಹೋರಾಟ ಮುಂದುವರೆಸೋಣ.

50 comments:

  1. ವಾಹ್! ಇದು ನಿಜಕ್ಕೂ ಶುಭ ಸುದ್ಧಿ. ನಾನು ಮೇ ೨೨ ರಂದು ಪ್ರಳಯವಾಗೋಯ್ತು..ಎನ್ನುವ ಲೇಖನವನ್ನು ಬರೆದು ಈ ಬಾಡಿ ಬ್ರಹ್ಮಾಂಡನನ್ನು ಲೇವಡಿಮಾಡಿದ್ದೆ. ಕೊನೆಗೂ ಈ ಬಾಡಿ ಜೀ ಟಿವಿಯ ಕುರ್ಚಿಯಿಂದ ತೊಲಗಿದ್ದು ಒಳ್ಳೆಯದಾಯಿತು. ನಿಮ್ಮ ಹೋರಾಟಕ್ಕೆ ನಮ್ಮ ಸಹಕಾರ ಇದ್ದೇ ಇರುತ್ತೆ. ಜನಪರ ಹಿತಕ್ಕಾಗಿ ನಾವು ಸದಾ ನಿಮ್ಮ ಹಿಂದೆ ಇದ್ದೇವೆ.

    ReplyDelete
  2. ಕೊನೆಗೂ ಪೀಡೆ ತೊಲಗಿತು....

    ReplyDelete
  3. ಬೃಹತ್ ಬ್ರಹಾಂಡದ ಪತನ ....

    ನಿಮ್ಮ ಹೋರಾಟಕ್ಕೆ ಅಭಿನಂದನೆಗಳು.

    ReplyDelete
  4. Jyotishyada bagge sakath burude biduva intaha bhanda jyotishigala virudda nadesida horatakke jaya sikkiruvudu santasada sangati. Khurchi mele taane ondu brahmandadante aaseenragi bogale bidutidda ivarannu anekaru mechikondaga asahya annisutittu.

    ReplyDelete
  5. "ನರೇಂದ್ರಶರ್ಮಾ ಉಚ್ಛಾಟನೆಯಾಗಬೇಕು" ಎಂಬ ಚಳುವಳಿಗೆ ಇನ್ನೂ ಹೆಚ್ಚು ಪ್ರಚಾರ ಸಿಗಬೇಕಿತ್ತು, ಈಗ ಉಚ್ಛಾಟನೆಯಾಗಿರುವ ಸಮಾಚಾರವಾದರೂ ಹೆಚ್ಚುಹೆಚ್ಚು ಜನರನ್ನು ತಲುಪಬೇಕು. ಅಂದರೆ, "ನರೇಂದ್ರಶರ್ಮಾನಂಥವರ ಆಟ ಹೆಚ್ಚುಕಾಲ ನಡೆಯೋದಿಲ್ಲ, ಅದಕ್ಕೆ ಅರ್ಥಪೂರ್ಣ ಪ್ರತಿಭಟನೆಗಳು ನಡೆಯುತ್ತವೆ, ಆ ಪ್ರತಿಭಟನೆಗಳು ಯಶಸ್ವಿಯಾಗುತ್ತವೆ..." ಎಂಬ ಸತ್ಯವು ಜನಸಾಮಾನ್ಯರಿಗೆ ಮನದಟ್ಟಾಗಬೇಕು. ಆಗ ನರೇಂದ್ರಶರ್ಮ (ಅಥವಾ ಅವನಂಥವರು) ಫೀನಿಕ್ಸ್ ಪಕ್ಷಿಯಂತೆ ಮತ್ತೆಮತ್ತೆ ಉದ್ಭವಿಸಿ ಬರುವ ಅಪಾಯವನ್ನು ಕಡಿಮೆಮಾಡಬಹುದು.

    ReplyDelete
  6. Really its agood news. Thanks for Sampadakeeya for taking up this issue very seriously.

    Warm regards,
    Renuka nidagundi

    ReplyDelete
  7. Really good step taken from Zee Kannada channel and more over as you told its not the end for our struggle, as any other bramhanda may come and starts some other programme as same , once again thanks to all who were succeeded to stop this nonsense programme...

    ReplyDelete
  8. ಝೀ ಕನ್ನಡದಲ್ಲಿ ಈ ವ್ಯಕ್ತಿಯ ಅಸಂಬದ್ಧ ವಟವಟ ಕೇಳಿದಾಗ ಕರ್ನಾಟಕದ ಒಟ್ಟಾರೆ ಅಂತಸ್ಸತ್ವಕ್ಕೆ ಹೊರತಾದವನಂತಿರುವ ಈ ಭಂಡನ ಕಾರ್ಯಕ್ರಮವನ್ನು ಮುಂದುವರಿಸುವ ಯಾವ ದರ್ದು ಆ ಚಾನೆಲ್ ಗೆ ಇದೆ ಎಂಬುದೇ ನನಗೆ ಅರ್ಥವಾಗುತ್ತಿರಲಿಲ್ಲ.ಅವನ ತಳಬುಡವಿಲ್ಲದ ಬಡಬಡಿಕೆಯನ್ನು ಝೀ ಟಿವಿ ಕೊನೆಗಾಣಿಸಿದೆ ಎಂದರೆ ಅಷ್ಟರ ಮಟ್ಟಿಗೆ ಅದು ಕರ್ನಾಟಕದ ಪ್ರಬುದ್ಧ ಜನರ ಕಳಕಳಿಯನ್ನು ಗೌರವಿಸಿದೆ ಎನ್ನಬೇಕು.

    ReplyDelete
  9. ಬ್ರಹ್ಮಾಂಡವನ್ನೇ ಕಾರ್ಗತ್ತಲಲ್ಲಿ ಮುಳುಗಿಸಿಬಿಟ್ಟಿರಿ. ಮುಂದಿನ ಅಭಿಯಾನಕ್ಕೂ ಜಗನ್ಮಾತೆ ದಾರಿ ದೀಪ ತೋರುವಂತಾಗಲಿ

    ReplyDelete
  10. ಈ ವಾರದ ಸುಧಾ ವಾರಪತ್ರಿಕೆಯ ೪೮ನೆ ಪುಟದ ಜಾಣರ ಪೆಟ್ಟಿಗೆಯಲ್ಲಿ ಇದನ್ನು ಕಾಣಬಹುದು.
    http://sudhaezine.com/svww_zoomart.php?Artname=20110602a_048101001&ileft=-3&itop=3&zoomRatio=130&AN=20110602a_048101001

    ReplyDelete
  11. ಪೀಡೆ ತೊಲಗಿತು....

    ReplyDelete
  12. Yes as you said at the end.. This fight should not stop to Narendra Sharma.. As there are N numbers of frauds are around us cheating innocent people... this fight should continue forever…. Like Anna hazare’s fight against corruption.. and we should also create awareness in the mind of public…

    ReplyDelete
  13. Good news..Congrats to Sampadakeeya

    ReplyDelete
  14. ಸಂಪಾದಕೀಯಕ್ಕೆ ಮತ್ತು ಈ ವಿಷಯದ ವಿರುದ್ದ ದನಿ ಎತ್ತಿದ ಎಲ್ಲರಿಗೂ ಅಭಿನಂದನೆಗಳು.
    ಈ ನರೇಂದ್ರ ಶರ್ಮನ ಕಾರ್ಯಕ್ರಮ ನಿಂತಿದ್ದು ಬಹಳ ಒಳ್ಳೆಯ ಸುದ್ದಿ ಆದರೆ ಮತ್ತೆ ಬೇರೆ ಚಾನೆಲ್ನಲ್ಲಿ ಬೇರೆ ವೇಷ ಧರಿಸಿ ಬರಬಹುದು. ಇವನಲ್ಲದಿದ್ದರು ಇನ್ನೊಬ್ಬನಾರೋ ಬಂಧು ಮೌಡ್ಯ ಮೆರೆಸಬಹುದು, ಏಕೆಂದರೆ ಇಂಥವರು ರಕ್ತಭೀಜನ ವಂಶದವರು. ಇವರ ವಿರುದ್ದ ನಾವು ಯಾವಾಗಲು ಸಜ್ಜಾಗಿಯೇ ಇರಬೇಕೇನೋ

    ReplyDelete
  15. ಎಲ್ಲದಕ್ಕೂ "ಅಯ್ಯೋ ಇದೂ ಹೀಗೇ, ಇವರು ಇಷ್ಟೇ," ಅಂತ ನಕಾರಾತ್ಮಕವಾಗಿ ಒಂದು ಪ್ರತಿಕ್ರಿಯೆ ಎಸೆದು ನಾವೆಲ್ಲರೂ ಸುಮ್ಮನಾಗಿಬಿಡುತ್ತಿರುವ ಇವತ್ತಿನ ಜಟಿಲ ಸಂದರ್ಭದಲ್ಲಿ "ಇದು ಏಕೆ ಹೀಗೆ?, ಇವರು ಇಷ್ಟೇ ಅಲ್ಲ.. ಎಂದು ಬುಡಮಟ್ಟದ ಪ್ರಶ್ನೆಗಳಿಗೆ ಕೈಯಿಡುತ್ತಿರುವ ಸಂಪಾದಕೀಯದ ಗೆಳೆಯರ ಸಣ್ಣ ಸಣ್ಣ ಸಾಹಸಗಳು ಒಂದೊಂದಾಗಿ ತಾರ್ಕಿಕವಾಗಿ ಯಶಸ್ವಿಗೊಂಡು ಯುವಸಮೂಹದೊಳಗೆ ಹೊಸ ಆಶಯದ ಹೊಳಹುಗಳನ್ನು ಮೂಡಿಸುತ್ತಿವೆ. ಹೌದು. "ಪ್ರತಿಕ್ರಿಯೆ"ಗೆ ಇದು ಕಾಲವಲ್ಲ. ನರೇಂದ್ರ ಶರ್ಮನೊಟ್ಟಿಗೆಯೇ ಇವತ್ತಿನ ಪ್ರಭುತ್ವ ನಿರ್ಮಿತ ಸಂಕೀರ್ಣ ಸಂಕಷ್ಟಗಳಿಗೆ "ಕ್ರಿಯೆ"ಗಳಿಂದಲೇ ಉತ್ತರಿಸಬೇಕಾದ ಜರೂರು ನಮ್ಮೆದುರಿಗಿದೆ. ಅದನ್ನು ಸಮರ್ಥವಾಗಿಯೇ ನಿರ್ವಹಿಸಲು ನಿಂತ ಸಂಪಾದಕೀಯದ ಗೆಳೆಯರೊಟ್ಟಿಗೆ ನಾವೆಲ್ಲರೂ ಇದ್ದೇವೆ. ವಿಮರ್ಶೆಯ ಒಟ್ಟೊಟ್ಟಿಗೆ ಈ ಬಗೆಯ "ಕ್ರಿಯೆ"ಗಳೂ ಹೆಚ್ಚು ಹೆಚ್ಚು ಆದ್ಯತೆ ಪಡೆದುಕೊಳ್ಳಲಿ ಗೆಳೆಯರೇ. ಅಭಿನಂದನೆಗಳು. ಟಿ.ಕೆ. ದಯಾನಂದ

    ReplyDelete
  16. Good News, for this morning !! Congratulations to one and All !!

    ReplyDelete
  17. ಎಲ್ಲಾ ಜ್ಯೋತಿಷಿಗಳನು ಓಡಿಸಬೇಕು ಇಂಥ ಕಾರ್ಯಕ್ರಮಗಳನು ನಿಲಿಸಬೇಕು

    ReplyDelete
  18. ತುಂಬಾ ಖುಷಿಯ ವಿಷಯ. ಅಭಿನಂದನೆಗಳು.

    ReplyDelete
  19. ನರೇಂದ್ರ ಶರ್ಮರ ಹೊಲಸು ಕಾರ್ಯಕ್ರಮವನ್ನು ಕೊನೆಗೂ ಜೀ ಟಿವಿಯವರು ನಿಲ್ಲಿಸಲು ಮನಸು ಮಾಡಿರುವುದು ಅಭಿನಂದನೀಯ. ಇದಕ್ಕಾಗಿ ಶ್ರಮಿಸಿದ ಸಂಪಾದಕೀಯಕ್ಕೆ ವಂದನೆಗಳು. ವಿಜ್ಞಾನದ ಆವಿಷ್ಕಾರವಾದ ಟಿವಿ ಮಾಧ್ಯಮವನ್ನು ಜ್ಯೋತಿಷಿಗಳು ದುರುಪಯೋಗಪಡಿಸಲು ಟಿವಿ ಮಾಧ್ಯಮಗಳನ್ನು ನಡೆಸುವವರು ಅವಕಾಶ ಕೊಡಬಾರದು. ವಿಜ್ಞಾನಿಗಳು ಶ್ರಮ ವಹಿಸಿ ಇಂಥ ಆವಿಷ್ಕಾರಗಳನ್ನು ನಡೆಸಿರುವುದು ಜ್ಯೋತಿಷ್ಯದಂಥ ಅವೈಜ್ಞಾನಿಕ ಅಂತೆ ಕಂತೆಗಳನ್ನು ಪ್ರಸಾರ ಮಾಡಲೆಂದು ಅಲ್ಲ. ಇದನ್ನು ದೇಶದ ಹಾಗು ಸರ್ವ ಜನರ ಒಳಿತಿಗಾಗಿ ಬಳಸಬೇಕೇ ಹೊರತು ಮೂಢನಂಬಿಕೆಗಳನ್ನು ಇನ್ನಷ್ಟು ಬಲಪಡಿಸಲು ಅಲ್ಲ. ಹೀಗಾಗಿ ಎಲ್ಲ ಪ್ರಜ್ಞಾವಂತರು ಈ ಬಗ್ಗೆ ಪ್ರಬಲವಾಗಿ ಧ್ವನಿ ಎತ್ತುತ್ತಾ ಇರಬೇಕು.

    ReplyDelete
  20. ನರೇಂದ್ರ ಶರ್ಮ ಮತ್ಯಾವುದೇ ವಾಹಿನಿಯಲ್ಲಿ ಮುಖತೋರಿಸದಿರುವಂತೆ ಆ ಜಗನ್ಮಾತೆ ಅನುಗ್ರಹಿಸಲಿ. ಮುಂಡೇದು ಜೀ ಟಿವಿಯಿಂದ ತೊಲಗಿದ್ದು ಸಮಾದಾನವಾಗಿದೆ. ಮತ್ಯಾವ ಟಿವಿಗೂ ವಕ್ಕರಿಸದಿರಲಿ. ಇದೊಂದು ಸಂಪಾದಕೀಯಕ್ಕೆ ಸಿಕ್ಕ ಸಾರ್ಥಕತೆ. ಓಳ್ಳೇದಕ್ಕೆ ಯಶಸ್ಸು ಸ್ವಲ್ಪ ನಿಧಾನ ಅಲ್ವೇ..?

    ReplyDelete
  21. Thats a good news.....Congrats to all the people and Sampadakeeya for your efforts..This Idiot deserve to be jailed...it's very important to start questioning...no matter if the issue is small or big..we all can see, it's time to take actions to find solutions and not only words. we have all sort of issues, from Auto rickshaw driver refusing to respond even in emergencies (considered to be Small issue) to 2G Spectrum Scam which has pushed our country's name at the top of CORRUPTED NATIONS list (so far discovered VERY BIG in our country)..we all have to join hands to make our next generations to feel PROUD about our RICH country and LIVE for it...and THE TIME IS NOW...

    ReplyDelete
  22. ಛೆ! ಏನ್ ಜನ ರೀ ನೀವು. ಒಳ್ಳೇ reality ಕಾಮಿಡಿ ಶೋ ನ ತೆಗೆದು ಹಾಕಿದ್ರಲ್ಲ!

    ReplyDelete
  23. ಆದ್ರೆ ಬ್ರಹ್ಮಾಂಡ ಶನಿ ಇವತ್ತು ಜೀ ಟೀವಿಯಲ್ಲಿ ವಕ್ಕರಿಸಿತ್ತಲ್ಲಾ ಸಂ....!

    ReplyDelete
  24. @ ಕವಿಸ್ವರ,
    ಇವತ್ತು ಪ್ರಸಾರವಾಗಿದ್ದು ಹಳೆಯ ಎಪಿಸೋಡ್. ಹೊಸ ಜ್ಯೋತಿಷಿ ಸಿದ್ಧವಾಗ್ತಿರಬಹುದು. ಪ್ರೊಮೋ ಬರ್ತಾ ಇವೆ.

    ReplyDelete
  25. ಥ್ಯಾಂಕ್ಸ್ ಹೇಳಬೇಕಾಗಿರುವುದು ಸಂಪಾದಕೀಯಕ್ಕೆ ಹಾಗೂ ಅದರ ಮಾಧ್ಯಮ ಕಾಳಜಿಗೆ... ಥ್ಯಾಂಕ್ಯು ಸಂಪಾದಕೀಯ...

    ReplyDelete
  26. ಇದು ರಾಜಕೀಯ ಬದಲಾವಣೆಯಂತೆ. ಒಂದು ಪೀಡೆ ತೊಲಗಿ, ಇನ್ನೊಂದು ಪೀಡೆಯ ಆಗಮನ. ನಮ್ಮ ಹೋರಾಟ ಜ್ಯೋತಿಷ್ಯ ಎಂಬ ಮಹಾ ಪೀಡೆಯ ಬಗ್ಗೆ. ಸಾಮಾನ್ಯ ಅಥವಾ ಬುದ್ಧಿವಂತ, ಅನಕ್ಷರಸ್ಥ ಅಥವಾ ಅಕ್ಷರಸ್ಥ ಎಂಬ ಭೇದವಿಲ್ಲದೆ ಎಲ್ಲರೂ ಬಲಿಯಾಗುವ ಜ್ಯೋತಿಷ್ಯ ಎಂಬ ಮಹಾಪೀಡೆಯನ್ನು ತೊಲಗಿಸಲು ನಾವು ಕಾರ್ಯಕ್ರಮವನ್ನು ರೂಪಿಸಬೇಕಾಗಿದೆ.

    ReplyDelete
  27. If one goes another is waiting, nothing to worry. It is India. Be crying here, by that time you will be old man. Better enjoy in bar.

    ReplyDelete
  28. Iddella, gandasara bootatike,

    ReplyDelete
  29. ಕಡೆಗೂ ಬ್ರಹ್ಮಾಂಡದ ನರೇಂದ್ರ ಶರ್ಮನ ಬಾಯಿಗೊಂದು ಬ್ರೇಕು ಬಿದ್ದಿದೆ. ಮತ್ತಾವ ಛಾನಲ್ ಈತನ ಛಾತಿಗೆ ಮರುಳಾಗಿ ಮಣೆ ಹಾಕುತ್ತದೋ ಗೊತ್ತಿಲ್ಲ. ಆದ್ದರಿಂದ ಈ ಬಂಡಾಯದ ಕೂಗು ನಿರಂತರವಾಗಿರಬೇಕಿದೆ. ಜೊತೆಗೇ ರಿಯಾಲಿಟಿ ಶೋಗಳ ಹೆಸರಿನಲ್ಲಿ ಕೆಲವು ಛಾನಲ್ ಗಳು ತೋರಿಸುತ್ತಿರುವ ಅಸಂಬದ್ಧ ಕಾರ್ಯಕ್ರಮಗಳನ್ನೂ ವಿರೋಧಿಸಬೇಕಿದೆ.

    ReplyDelete
  30. abba peede kaleethu....

    ReplyDelete
  31. really a good news sir...
    But i saw him in the show today.. morning......

    ReplyDelete
  32. great news...but i saw his show today morning....only difference is that they are not showing it as LIVE. We want complete end, never ever wants to see his face on television.

    ReplyDelete
  33. he claimed some time back that a prominenet politician and a union minister of high repute ( he indicated S M Krishna) will die in the month of march 2011, even after 3 -4 months ,no such thing has happenned.He even claimed that he would be there to witness that.he made this claim in the 1st week of Jan 2011.
    I saw few of the episodes and it made me only to laugh at him, however, I would admit that our family memebers were staunch supporters. Any ways, one peede tholagithu.

    ReplyDelete
  34. sampadakeeya balagada geleyare, konegu samanya patrakarthanige iruva AHAM anna toorisibittu, navenu KHALIPOLI patrakartharige kadimeyilla antha thorisiddeeri. nijavada patrakartha yavattoo thanna bennu thaane thattikolluvudilla. neevu maadida olle kelasa, inthaha bennu chapparisikolluvudaralli ARTHA kaledukondide antha nanage annisutte. Plz… thappu thiliyabedi…

    ReplyDelete
  35. So Now Who is Ananda Guruji.?

    hope Sampadakiya will work on it.

    ReplyDelete
  36. Remove all Jyothishya programs from TV channels. If they want keep there own madras kind of thing.

    ReplyDelete
  37. konegu mundedu tolgtu, z tv ge tumba vandanegalu

    ReplyDelete
  38. ಈಗಾಗಲೇ ಸಾಕಷ್ಟು ದುಡ್ಡು ಮಾಡಿಕೊಂಡಿದ್ದಾನೆ ನರೇಂದ್ರ. ಈಗಲಾದರು ಜನ ಎಚ್ಚೆತ್ತು ಇಂಥವರಿಗೆ ಪ್ರೋತ್ಸಾಹಿಸದೆ ಸ್ವಲ್ಪ ವಿವೇಚನೆಯಿಂದ ನಡೆದುಕೊಳ್ಳೋದು ಒಳ್ಳೇದು ನಮ್ಮ ಮುಂದಿನ ಜನಾಂಗಕ್ಕೆ.

    ReplyDelete
  39. Intha third class jyothishigalinda namma other astrologers are suffering, he is a fake astrologer misleading all the housewives by telling different stories, let us stop his nonsense in all media, we will support you. Thanks for your effort.

    ReplyDelete
  40. ಯಾರು ಹೇಳಿದ್ದು ಜೀ ಟಿವಿಯ ಬೃಹತ್ ಬ್ರಹ್ಮಾಂಡ ನಿಂತು ಹೋಗಿದೆ ಎಂದು?? ಇವತ್ತು ಬೆಳಿಗ್ಗೆ ಈ ಕಾರ್ಯಕ್ರಮ ಇತ್ತು... ಇಂದು ಪುನಹಾ ಜಗನ್ಮಾತೆ, ಪ್ರಳಯ, ದೀಪ ಉರಿಸೋದ್ರ ಬಗ್ಗೆ ಮಾತಾಡ್ತಿದ್ದ.. ಸಾಲದು ಅಂತ ಕರ್ನಾಟಕದಲ್ಲಿ power ಇರೋ ದೇವ್ರು ಇಲ್ಲ.. ಇರೋದೆನ್ದ್ರು ತಮಿಳುನಾಡಿನಲ್ಲಿ ಅಂತ ಹೇಳ್ತಾ ಇದ್ದ...

    ReplyDelete
  41. narendra sharma nantaha "MUNDEV" nannu odisida ZEE TV ge thanks. kalla sanyasigala viruddada horatakke chalane needi munnadesida SAMPAADAKEEYA kke JAI HO....

    ReplyDelete
  42. NONSENSE!! Hindus are against Hinduism! what a pathetic state we are in!. We all agree that Bramhanda Guruji was a bit dramatic, but he is a TRUE HUMAN, who spoke and criticised the evils against our culture. He is a DARING MAN and We have thousands of his fans who are eagerly waiting for his come back, We are here waiting for you Guruji. YOU ARE GREAT AND A WISE MAN. We need people like you!!!

    ReplyDelete
  43. Come back Guruji come back! We are waiting for you, We all know that he is a bit funny and rude, but we need to understand that no one is perfect. Main points to be noted are,
    1) He did not make any black money, We read that he has collected around 2 crores that some yaaga, but money is peanuts in front of 2G scam, mining scams etc. He has collected money for a good cause and he may eat a little in that.
    2) He is not into any scandals like other swamijis
    3) Agreed that he speaks funny and little out of context, but he speaks about our tradition which our youth is not aware of.
    Considering the above points we thousands of his fans are waiting for his comeback with more power and energy.

    ReplyDelete
  44. ಮೊನ್ನೆ ಕಸ್ತೂರಿ ವಾಹಿನಿಯಲ್ಲಿ ಬ್ರಹ್ಮಾಂಡದ ಜಾಹಿರಾತನ್ನು ನೋಡಿದ ಹಾಗಿತ್ತು ? ಅದು ನನ್ನ ಭ್ರಮೆ ನಾ ?

    ReplyDelete